Tag: Actor Darshan Arrested

  • ದರ್ಶನ್ ಕೆಟ್ಟವನಲ್ಲ, ತಪ್ಪು ತಿದ್ದಿಕೊಳ್ಳುತ್ತಿದ್ದಾರೆ: ನಿರ್ದೇಶಕ ಸಾಯಿ ಪ್ರಕಾಶ್

    ದರ್ಶನ್ ಕೆಟ್ಟವನಲ್ಲ, ತಪ್ಪು ತಿದ್ದಿಕೊಳ್ಳುತ್ತಿದ್ದಾರೆ: ನಿರ್ದೇಶಕ ಸಾಯಿ ಪ್ರಕಾಶ್

    ಸ್ಯಾಂಡಲ್‌ವುಡ್ ನಿರ್ದೇಶಕ ಕಮ್ ನಿರ್ಮಾಪಕ ಸಾಯಿ ಪ್ರಕಾಶ್ (Sai Prakash) ಅವರು ದರ್ಶನ್ (Darshan) ಪ್ರಕರಣದ ಕುರಿತು ಮಾತನಾಡಿದ್ದಾರೆ. ದರ್ಶನ್ ಕೋಪ ಬಿಡಬೇಕು. ದರ್ಶನ್ ಕೆಟ್ಟವನಲ್ಲ, ತಪ್ಪು ತಿದ್ದಿಕೊಳ್ಳುತ್ತಿದ್ದಾರೆ ಎಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಸಾಯಿ ಪ್ರಕಾಶ್ ಮಾತನಾಡಿದ್ದಾರೆ.‌ ಇದನ್ನೂ ಓದಿ:ಮರು ಮದುವೆಯಾದ ಬಾಲಿವುಡ್ ನಟಿ ಸನ್ನಿ ಲಿಯೋನ್

    ಬೇಕಂತ ಅವರು ತಪ್ಪು ಮಾಡಿಲ್ಲ. ಕೋಪ ಇರುವಾಗ ಏನು ಮಾಡ್ತೀವಿ ಅಂತ ಗೊತ್ತಾಗಲ್ಲ. ಮಾಡಿದ ಮೇಲೆ ಗೊತ್ತಾಗುತ್ತದೆ ತಪ್ಪು ಅಂತ. ದರ್ಶನ್‌ಗೆ ಕೋಪ, ಎಮೋಷನ್ ಜಾಸ್ತಿ. ಅದೊಂದು ಕಂಟ್ರೋಲ್ ಮಾಡಿಕೊಂಡರೆ ಸಾಕು ತುಂಬಾ ಒಳ್ಳೆಯ ನಟ. ತುಂಬಾ ಸಮಾಜ ಸೇವೆ ಮಾಡಿದ್ದಾರೆ. ಜನಸೇವೆ ಮಾಡೋದ್ದಕ್ಕೆ ಇನ್ನೂ ಅವಕಾಶವಿದೆ. ಭಗವಂತ ಅವನಿಗೆ ನಿರೀಕ್ಷೆ ಮಾಡಿದಷ್ಟು ಕೊಟ್ಟಿದ್ದಾನೆ. ದರ್ಶನ್‌ಗೆ ತುಂಬಾ ಒಳ್ಳೆತನವಿದೆ. ಇದು ಗೊತ್ತಿಲ್ಲದೇ ಮಾಡಿದ ತಪ್ಪು ಅಂದುಕೊಂಡಿದ್ದೇನೆ ಎಂದಿದ್ದಾರೆ.

    ಆ ತಪ್ಪಿಗೆ ಎಷ್ಟು ನೋವು ಅನುಭವಿಸುತ್ತಿದ್ದಾರೆ. ಆ ಬೆನ್ನು ನೋವು ಬಂತು, ಜೀವನದಲ್ಲಿ ಸಂತೋಷ ಇಲ್ಲ. ಒಬ್ಬರೇ ಒಂದು ಕಡೆ ಕೂರಬೇಕು. ಅವರಿಗೂ ಈಗೆಲ್ಲಾ ಅರ್ಥವಾಗಿರುತ್ತದೆ. ದರ್ಶನ್ ನೋಡಿ ನಾವೆಲ್ಲಾ ಕಲಿಯಬೇಕು ಎನಿಸುತ್ತಿದೆ. ಅವರು ಮಾಡಿದ ಸಣ್ಣ ತಪ್ಪಿನಿಂದ ಏನು ಅನುಭವಿಸುತ್ತಿದ್ದಾರೋ, ಅದನ್ನು ಯಾರು ಮಾಡಬಾರದು ಅನ್ನೋದು ತೋರಿಸಿ ಕೊಟ್ಟಿದೆ. ಅವರಿಗೆ ಒಳ್ಳೆಯದಾಗಲಿ ಅಂತ ಬಾಬಾಗೆ ಪ್ರಾರ್ಥನೆ ಮಾಡುತ್ತೇನೆ. ಇನ್ಮುಂದೆ ದೇವರು ಅವರಿಗೆ ಯಾವುದೇ ಕಷ್ಟ ಕೊಡದೇ ಇರಲಿ. ಈಗ ಅವರಿಗೆ ಮಧ್ಯಂತರ ಬೇಲ್ ಸಿಕ್ಕಿದೆ. ಅವರ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಲಿ. ಅವರ ಸಿನಿಮಾ ಮೇಲೆ ಕೆಲ ನಿರ್ಮಾಪಕರು ಹಣ ಹೂಡಿದ್ದಾರೆ. ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ ಅವರಿಗೆ ಒಳ್ಳೆಯದಾಗಬೇಕು ಎಂದಿದ್ದಾರೆ.

    ದರ್ಶನ್ ಕೆಟ್ಟವನಲ್ಲ, ಒಳ್ಳೆಯವರೇ ತಪ್ಪು ಮಾಡಿದ್ದಾರೆ. ಈಗ ಅವರು ತಿದ್ದಿಕೊಳ್ಳುತ್ತಿದ್ದಾರೆ. ಅವರಿಗೆ ಮಧ್ಯಂತರ ಬೇಲ್ ಸಿಕ್ಕಿದೆ, ಮುಂದೆ ರೆಗ್ಯೂಲರ್ ಬೇಲ್ ಆಗುತ್ತದೆ ಅಂದುಕೊಂಡಿದ್ದೇನೆ. ಬೇಕಂತ ತಪ್ಪು ಮಾಡಿದ್ರೆ ಕ್ರೈಮ್ ಆಗುತ್ತದೆ. ಬೈ ಮಿಸ್ಟೇಕ್ ಆಗಿ ಮಾಡಿದ್ದು, ಅದಕ್ಕೆ ಕ್ಷಮೆ ಇದೆ ಅಂದುಕೊಂಡಿದ್ದೇನೆ. ದರ್ಶನ್ ಮೇಲೆ ತೂಗುದೀಪ ಅವರ ಹಾರೈಕೆಯಿದೆ. ತೂಗುದೀಪ ಅವರು ರಾಜ್‌ಕುಮಾರ್ ಜೊತೆ ಅದೆಷ್ಟೋ ಸಿನಿಮಾಗಳನ್ನು ಮಾಡಿದ್ದಾರೆ. ಅವರು ತುಂಬಾ ಒಳ್ಳೆಯವರು ದರ್ಶನ್‌ಗೂ ಒಳ್ಳೆಯದಾಗುತ್ತದೆ ಎಂದಿದ್ದಾರೆ.

  • ದರ್ಶನ್ ಕುಳಿತರೆ ಜುಟ್ಟು, ನಿಂತರೆ ಕಾಲು- ಗುಮ್ಮಿದ ಉಮಾಪತಿ

    ದರ್ಶನ್ ಕುಳಿತರೆ ಜುಟ್ಟು, ನಿಂತರೆ ಕಾಲು- ಗುಮ್ಮಿದ ಉಮಾಪತಿ

    ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ (Renukaswamy Murder Case) ವಿಚಾರವಾಗಿ ಖ್ಯಾತ ನಟ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ರೇಣುಕಾಸ್ವಾಮಿ ಬರ್ಬರ ಹತ್ಯೆ ಬಗ್ಗೆ ನಿರ್ಮಾಪಕ ಉಮಾಪತಿ ಖಂಡಿಸಿದ್ದಾರೆ. ದರ್ಶನ್ ಕುಂತ್ರೆ ಜುಟ್ಟು, ನಿಂತ್ರೆ ಕಾಲು ಎಂದು ಹೇಳುವ ಮೂಲಕ ದರ್ಶನ್‌ಗೆ ಉಮಾಪತಿ ಟಾಂಗ್ ಕೊಟ್ಟಿದ್ದಾರೆ.

    ಬರ್ಬರವಾಗಿ ಕೊಲೆ ಮಾಡಿರೋದು ನಿಜವಾಗಿವೇ ಆಗಿದ್ದಲ್ಲಿ ಖಂಡಿತವಾಗಿಯೂ ಅವರನ್ನು ಗಲ್ಲಿಗೆ ಏರಿಸಬೇಕು ಎಂದು ಉಮಾಪತಿ (Umapathy Srinivas) ಗುಡುಗಿದ್ದಾರೆ. ತಪ್ಪು ಎಲ್ಲರೂ ಮಾಡ್ತಾರೆ. ತೀರಾ ಹೀನಾಯ ಕೃತ್ಯ ಮಾಡಿದ್ದಾರೆ ಅಂದರೆ ಅವರ ಉದ್ದೇಶ ಏನು ಎಂಬುದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಯಾರಿಗೋ ತೊಂದರೆ ಕೊಟ್ಟು, ಅವರನ್ನು ಹೀಯಾಳಿಸಿ ಮಣ್ಣಿಗೆ ಹಾಕಿ ನಾವು ನೆಮ್ಮದಿಯಾಗಿ ಬದುಕುತ್ತೇವೆ ಎಂಬುದೆಲ್ಲಾ ಸುಳ್ಳು ಎಂದಿದ್ದಾರೆ.

    ಯಾವಾಗಲೂ ಆ ಪಾಪ ಪ್ರಜ್ಞೆ ಕಾಡುತ್ತಲೇ ಇರುತ್ತದೆ. ಕೊನೆಗೆ ರೇಣುಕಾಸ್ವಾಮಿಗೆ ಏನು ಆಗಿದೆಯೋ ಅದೇ ಗತಿ ಅವರಿಗೂ ಬರುತ್ತದೆ. ಎಲ್ಲರಿಗೂ ಬದುಕು ಹಕ್ಕಿದೆ. ಆ ಹಕ್ಕನ್ನು ಯಾರು ಕಿತ್ತುಕೊಳ್ಳಲಾಗದು ಎಂದು ದರ್ಶನ್‌ಗೆ ಉಮಾಪತಿ ಗುಮ್ಮಿದ್ದಾರೆ. ಇದನ್ನೂ ಓದಿ:ಲ್ಯಾಂಬೋರ್ಗಿನಿ ತಗೋಳೋಕೆ ದರ್ಶನ್‌ಗೆ ಅಡ್ವಾನ್ಸ್ ಕೊಟ್ಟಿದ್ದೇ ನಾನು: ಉಮಾಪತಿ

    ಈ ಪ್ರಕರಣದಲ್ಲಿ ಲಿಂಕ್ ಇರೋದು ಕೆಲವರಿಗೆ ಮಾತ್ರ. ಇನ್ನೂ ಉಳಿದವರು ಅಮಾಯಕರು ದರ್ಶನ್ ಮೇಲಿನ ಪ್ರೀತಿಗೆ ಬಂದಿದ್ದಾರೆ ಅಷ್ಟೇ. ಇವಾಗ ಅವರು ಜೈಲಿಗೆ ಹೋಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿಯನ್ನು ಪ್ರೀತಿಸಿ ಬೇಡ ಹೇಳೋದಿಲ್ಲ. ಆದರೆ ನಿಮ್ಮ ಕುಟುಂಬನ ಬೀದಿಗೆ ಬಿಟ್ಟು ಪೋಷಕರನ್ನು ಬಲಿ ಕೊಟ್ಟು ಪ್ರೀತಿಸಲು ಹೋಗಬೇಡಿ ಎಂದು ಅಭಿಮಾನಿಗಳಿಗೆ ಉಮಾಪತಿ ಕಿವಿ ಹಿಂಡಿದ್ದಾರೆ.


    ಮೆಗ್ಗಾರ್ ಎಲ್ಲಾ ತರಿಸುವ ಅವಶ್ಯಕತೆ ಇತ್ತಾ? ರೇಣುಕಾಸ್ವಾಮಿ ಟೆರೆರಿಸ್ಟ್ ಆಗಿದ್ರಾ ಎಂದು ಉಮಾಪತಿ ಪ್ರಶ್ನಿಸಿದ್ದಾರೆ. ದರ್ಶನ್ ಕುಂತ್ರೆ ಜುಟ್ಟು, ನಿಂತರೆ ಕಾಲು ಇದು ನನ್ನ ಅನುಭವ ಎಂದಿದ್ದಾರೆ. ಇನ್ನಾದರೂ ಅವರು ಸುಧಾರಿಸಿಕೊಳ್ಳಬೇಕು. ಅದೆಷ್ಟೋ ದರ್ಶನ್ ವಿರುದ್ಧ ಧರಣಿ ಮಾಡುತ್ತಿದ್ದಾರೆ ಎಂದು ಖಡಕ್ ಆಗಿ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

  • ರೇಣುಕಾಸ್ವಾಮಿ ಹತ್ಯೆ ಪ್ರಕರಣ – ನಟ ದರ್ಶನ್ ಸೇರಿ 13 ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ

    ರೇಣುಕಾಸ್ವಾಮಿ ಹತ್ಯೆ ಪ್ರಕರಣ – ನಟ ದರ್ಶನ್ ಸೇರಿ 13 ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ

    ಬೆಂಗಳೂರು: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ (Renuka Swamy) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದರ್ಶನ್ (Darshan) ಹಾಗೂ ಪವಿತ್ರಾ ಗೌಡ (Pavithra Gowda) ಸೇರಿದಂತೆ ಎಲ್ಲಾ  13 ಆರೊಪಿಗಳನ್ನು ಕೋರಮಂಗಲದ 24ನೇ ಎಸಿಎಂಎಂ ಕೋರ್ಟ್‌ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

    ವಿಚಾರಣೆ ವೇಳೆ ಪೊಲೀಸರು 14 ದಿನಗಳ ಕಾಲ ಕಸ್ಟಡಿಗೆ ಕೇಳಿದ್ದರು. ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ವಿಚಾರಣೆ ವೇಳೆ ನ್ಯಾಯಾಲಯ (Court) ದರ್ಶನ್‍ಗೆ ಯಾವುದಾದರೂ ತೊಂದರೆ ಆಗಿದೆಯೆ ಎಂದು ಕೇಳಿದ ಪ್ರಶ್ನೆಗೆ, ಇಲ್ಲ ಎಂದು ದರ್ಶನ್ ಪ್ರತಿಕ್ರಿಯಿಸಿದರು. ವಕೀಲರ ನೇಮಕ ಮಾಡಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ, ಹೌದು ಎಂದರು. ಬಳಿಕ ಮನೆಯವರಿಗೆ ಬಂಧನದ ಮಾಹಿತಿ ನೀಡಿದ್ದೇನೆ ಎಂದು ನ್ಯಾಯಾಲಯಕ್ಕೆ ದರ್ಶನ್ ತಿಳಿಸಿದ್ದಾರೆ. ಇದನ್ನೂ ಓದಿ: ದರ್ಶನ್‌ ಟೀಂ ರೌದ್ರವತಾರಕ್ಕೆ ನರಳಿ ನರಳಿ ಪ್ರಾಣಬಿಟ್ಟ ರೇಣುಕಾಸ್ವಾಮಿ!

    ಈ ವೇಳೆ ದರ್ಶನ್ ಪರ ವಕೀಲ ನಾರಾಯಣಸ್ವಾಮಿ, ದರ್ಶನ್ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ರೇಣುಕಾಸ್ವಾಮಿ ಶವ ಕೂಡ ಪತ್ತೆಯಾಗಿದೆ. ಇಷ್ಟೇ ಅಲ್ಲದೇ ದರ್ಶನ್ ವಿರುದ್ಧ ಯಾವುದೇ ಆರೋಪಗಳಿಲ್ಲ. ಅವರು ಎಲ್ಲೂ ತಪ್ಪಿಸಿಕೊಂಡಿಲ್ಲ. ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ಹೀಗಾಗಿ ಪೊಲೀಸ್ ಕಸ್ಟಡಿ ಅಗತ್ಯವಿಲ್ಲ ಎಂದು ವಾದಿಸಿದರು.

    ವಿಚಾರಣೆ ಬಳಿಕ 6ನೇ ಎಸಿಎಂಎಂ ನ್ಯಾಯಾಧೀಶ ವಿಶ್ವನಾಥ್ ಗೌಡರ್, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ವಿಚಾರಣೆ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ನಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದಾರೆ.

    ಏನಿದು ಪ್ರಕರಣ?: ನಟ ದರ್ಶನ್ ಹಾಗೂ ಆರೋಪಿಗಳು ಮೆಡಿಕಲ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿಯನ್ನು ಶನಿವಾರ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆ ತಂದು 24 ಗಂಟೆ ನಿರಂತರ ಚಿತ್ರ ಹಿಂಸೆ ನೀಡಿದ್ದಾರೆ. ತನ್ನ ಸ್ನೇಹಿತ ಉದ್ಯಮಿ, ವಿನಯ್‍ಗೆ ಸೇರಿದ ಆರ್‍ಆರ್ ನಗರದದ ಪಟ್ಟಣಗೆರೆ ಗೋಡೌನ್‍ಗೆ ರೇಣುಕಾಸ್ವಾಮಿಯನ್ನು ಕರೆ ತಂದು ಅಲ್ಲಿ ಮಾರಾಣಾಂತಿಕ ಹಲ್ಲೆ ನಡೆಸಿದ್ದರು.

    ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಜೊತೆ ಸಂಪರ್ಕ ಸಾಧಿಸಲು ಹುಡುಗಿ ಹೆಸರಿನಲ್ಲಿ ಫೇಕ್ ಖಾತೆಯನ್ನು ದರ್ಶನ್ ತಂಡ ತೆರೆದಿತ್ತು. ಈ ಖಾತೆಯ ಮೂಲಕ ರೇಣುಕಾಸ್ವಾಮಿಯ ಜೊತೆ ಸಂವಹನ ಮಾಡಲಾಗುತ್ತಿತ್ತು.

    ಶನಿವಾರ ಮಾತನಾಡಲು ಮನೆಯಿಂದ ಹೊರಗಡೆ ಬಾ ಎಂದು ಖಾತೆಯಿಂದ ಮಸೇಜ್ ಕಳುಹಿಸಲಾಗಿತ್ತು. ಈ ಮಸೇಜ್‍ಗೆ ಒಪ್ಪಿ ಆತನ ಮನೆಯಿಂದ ಹೊರಗೆ ಬಂದಿದ್ದ. ಚಿತ್ರದುರ್ಗದಲ್ಲಿರುವ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಸೇನಾ ಅಧ್ಯಕ್ಷ ರಘು ದರ್ಶನ್ ನೇತೃತ್ವದಲ್ಲಿ ಅಪಹರಣ ಮಾಡಿ ಬೆಂಗಳೂರಿಗೆ ಕರೆ ತರಲಾಗಿತ್ತು.

    ಹಲ್ಲೆ ನಡೆಸುವ ಸಂದರ್ಭದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸ್ಥಳದಲ್ಲಿ ಇದ್ದರು. ದರ್ಶನ್ ಹೊಡೆದ ಬಳಿಕ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ ಎಂದು ಉಳಿದ ಆರೋಪಿಗಳು ತಪ್ಪೊಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಈಗ ಮೈಸೂರಿನಲ್ಲಿದ್ದ ದರ್ಶನ್ ಅವರನ್ನು ಬಂಧಿಸಿ ಕರೆ ತಂದಿದ್ದರು. ಇದನ್ನೂ ಓದಿ: ಮೂಗು, ಬಾಯಿ, ದವಡೆ ಕತ್ತರಿಸಿ ವಿಕೃತಿ ಮೆರೆದು ಶವವನ್ನು ಮೋರಿಗೆ ಎಸೆದಿದ್ದ ದರ್ಶನ್‌ ಟೀಂ