Tag: actor Darshan

  • ನಟ ದರ್ಶನ್ ಪಾಲಿಗೆ ಬೆಳಕಿಲ್ಲದ ದೀಪಾವಳಿ – ಇತ್ತ ಬೆನ್ನು ನೋವಿಗೆ ಫಿಸಿಯೋಥೆರಪಿ ಚಿಕಿತ್ಸೆಗೆ ಮನವಿ

    ನಟ ದರ್ಶನ್ ಪಾಲಿಗೆ ಬೆಳಕಿಲ್ಲದ ದೀಪಾವಳಿ – ಇತ್ತ ಬೆನ್ನು ನೋವಿಗೆ ಫಿಸಿಯೋಥೆರಪಿ ಚಿಕಿತ್ಸೆಗೆ ಮನವಿ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸಲ್ಲಿ ಜೈಲು ಪಾಲಾಗಿರೊ ನಟ ದರ್ಶನ್‌ಗೆ ಈ ಬಾರಿ ಬೆಳಕಿಲ್ಲದ ದೀಪಾವಳಿಯಾಗಿದೆ. ಇತ್ತ ಬೆನ್ನು ನೋವು ಹಿನ್ನೆಲೆ ಫಿಸಿಯೋಥೆರಪಿ ನೀಡಲು ಜೈಲಿನ ವೈದ್ಯರು ಪತ್ರ ಬರೆದಿದ್ದಾರೆ.

    ಪ್ರತೀ ಭಾರೀ ಕುಟುಂಬದ ಜೊತೆ ದೀಪಾವಳಿ ಆಚರಣೆ ಮಾಡ್ತಿದ್ದ ನಟನಿಗೆ ಜೈಲಿನ ಕತ್ತಲು ಬೆಳಕನ್ನ ಕಸಿದಿದೆ. ರೇಣುಕಾಸ್ವಾಮಿ ಕೊಲೆಗೂ ಮುನ್ನ ದರ್ಶನ್ ಅದ್ದೂರಿ ದೀಪಾವಳಿ ಆಚರಿಸ್ತಿದ್ರು. ಈ ಬಾರಿ ದರ್ಶನ್ ಬದುಕಿನಲ್ಲಿ ಬೆಳಕಿರದ ಕತ್ತಲೆಯ ದೀಪಾವಳಿಯಾಗಿದೆ. ಕಳೆದ ಬಾರಿ ದೀಪಾವಳಿ ಟೈಂಗೆ ಬಳ್ಳಾರಿ ಜೈಲಿಂದ ರಿಲೀಸ್ ಆಗಿ ಮನೆಯಲ್ಲೇ ರೆಸ್ಟ್ ಮಾಡುವಂತಾಗಿತ್ತು. ಆದ್ರೀಗ ಮತ್ತೆ ಸೆಂಟ್ರಲ್ ಜೈಲಿನಲ್ಲಿರೋ ದರ್ಶನ್‌ಗೆ ದೀಪಾವಳಿ ಬೆಳಕನ್ನ ಕಸಿದುಕೊಂಡಿದ್ದು, ದರ್ಶನ್ ಈಗ ಸೆಲ್‌ನಲ್ಲಿ ಬೆಳಕು ನೋಡುವಂತಾಗಿದೆ. ಹಾಸಿಗೆ ದಿಂಬಿಲ್ಲ, ಕ್ವಾರಂಟೈನ್ ಸೆಲ್‌ನಲ್ಲೇ ಇರುವ ಅನಿವಾರ್ಯ ಸ್ಥಿತಿಯಲ್ಲಿದ್ದು, ಕನಿಷ್ಟ ಸೌಲಭ್ಯದ ವ್ಯವಸ್ಥೆ ಸರಿಯಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ಕೊಟ್ಟಿರೋ ವರದಿಯಿಂದ ಬೇಸರಗೊಂಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಐಎನ್‌ಎಸ್‌ ವಿಕ್ರಾಂತ್‌ ಪಾಕ್‌ಗೆ ನಿದ್ರೆಯಿಲ್ಲದಂತೆ ಮಾಡಿತು, ಬ್ರಹ್ಮೋಸ್‌ ತನ್ನ ಸಾಮರ್ಥ್ಯ ತೋರಿತು – ನರೇಂದ್ರ ಮೋದಿ

    ಇನ್ನೂ ಜೈಲಿನಲ್ಲಿ ದರ್ಶನ್‌ಗೆ ಈಗಾಗ್ಲೇ ಬೆನ್ನು ನೋವಿಗೆ ಹೀಟಿಂಗ್ ಬೆಲ್ಟ್ ಹಾಗೂ ಚೇರ್ ನೀಡಲಾಗಿದೆ. ಈ ನಡುವೆ ಕೇಂದ್ರ ಕಾರಾಗೃಹ ಆಸ್ಪತ್ರೆ ಮುಖ್ಯ ವೈದ್ಯರು, ಸಿ.ವಿ ರಾಮನ್ ನಗರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ. ಇತ್ತೀಚಿಗೆ ಜೈಲಿನಲ್ಲಿ ಬೆನ್ನುನೋವಿಗೆ ಒಳಗಾಗಿದ್ದ ನಟ ದರ್ಶನ್‌ಗೆ ಮೊದಲು ಜೈಲಿನ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ಬಳಿಕ ಸಿ.ವಿ ರಾಮನ್ ಆಸ್ಪತ್ರೆ ಫಿಸಿಯೋಥೆರಪಿ ತಂಡದಿಂದ ಚಿಕಿತ್ಸೆ ನೀಡಲಾಗಿತ್ತು. ಇದೀಗ ಚಿಕಿತ್ಸೆ ಅಗತ್ಯ ಇರುವವರೆಗೂ ಕಾರಾಗೃಹಕ್ಕೆ ವೈದ್ಯರ ತಂಡ ನಿಯೋಜಿಸಲು ಹಾಗೂ ಹೀಟಿಂಗ್ ಬೆಲ್ಟ್ ನೀಡಲು ಮನವಿ ಮಾಡಲಾಗಿದೆ. ಕಾನೂನು ಸೇವಾ ಪ್ರಾಧಿಕಾರದ ವರದಿಯಲ್ಲಿ ಬೆನ್ನು ನೋವಿನ ಬಗ್ಗೆಯೂ ಉಲ್ಲೇಖವಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.

    ಮತ್ತೊಂದೆಡೆ ದರ್ಶನ್ ಕಾನೂನಿನ ಹೋರಾಟಕ್ಕೆ ಪತ್ನಿ ವಿಜಯಲಕ್ಷ್ಮಿ ಬಿಟ್ಟು ಯಾರಿಂದಲೂ ಸಹಾಯದ ಮಾತಿಲ್ಲವಂತೆ. ಇದರಿಂದ ಬೇಸರಗೊಂಡು ಮೌನಕ್ಕೆ ಶರಣಾಗಿದ್ದು, ಬ್ಯಾರಕ್‌ನಲ್ಲಿ ಶಿಷ್ಯಂದಿರ ಬಳಿ ಆಗ್ಗಾಗ್ಗೆ ಬೇಸರ ವ್ಯಕ್ತಪಡಿಸುವ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತಿವೆ.ಇದನ್ನೂ ಓದಿ: ಪತ್ನಿಯನ್ನು ಕೊಂದು ಬೋರ್‌ವೆಲ್‌ಗೆ ಹಾಕಿದ್ದ ಪತಿ – 12 ಅಡಿ ಆಳದಲ್ಲಿ ಮೃತದೇಹ ಪತ್ತೆ

  • ದೇಶದಲ್ಲೇ ಪ್ರಮುಖ ಪ್ರಕರಣಗಳ ಪಟ್ಟಿಯಲ್ಲಿ ರೇಣುಕಾಸ್ವಾಮಿ ಕೇಸ್‌ಗೆ 2ನೇ ಸ್ಥಾನ

    ದೇಶದಲ್ಲೇ ಪ್ರಮುಖ ಪ್ರಕರಣಗಳ ಪಟ್ಟಿಯಲ್ಲಿ ರೇಣುಕಾಸ್ವಾಮಿ ಕೇಸ್‌ಗೆ 2ನೇ ಸ್ಥಾನ

    ನವದೆಹಲಿ: 2024-25ರ ಅವಧಿಯಲ್ಲಿ ನಡೆದ ಪ್ರಕರಣಗಳ ಪೈಕಿ ದೇಶದಲ್ಲೇ ಪ್ರಮುಖ ಪ್ರಕರಣಗಳ ಪಟ್ಟಿಯಲ್ಲಿ ರೇಣುಕಾಸ್ವಾಮಿ ಕೇಸ್ (Renukaswamy Case) ಎರಡನೇ ಸ್ಥಾನ ಪಡೆದುಕೊಂಡಿದೆ.

    ಭಾರತದಲ್ಲಿ ನಡೆದ ಪ್ರಕರಣಗಳ ಪೈಕಿ ಕೋಲ್ಕತ್ತಾದ (Kolkatta) ಟ್ರೈನಿ ವೈದ್ಯೆಯ ಅತ್ಯಾಚಾರ ಪ್ರಕರಣ ಮೊದಲ ಸ್ಥಾನ ಪಡೆದುಕೊಂಡಿದೆ. ಸಂಜಯ್ ರಾವತ್ ಎಂಬಾತ ಈ ಕೃತ್ಯವನ್ನು ಎಸಗಿದ್ದ. ಈಗಾಗಲೇ ಕೋರ್ಟ್ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನೂ ನಟ ದರ್ಶನ್ (Actor darshan) ಕೊಲೆ ಆರೋಪಿಯಾಗಿರುವ ರೇಣುಕಾಸ್ವಾಮಿ ಕೇಸ್ (Renukaswamy) ಎರಡನೇ ಸ್ಥಾನದಲ್ಲಿದೆ. ಈಗಾಗಲೇ ಈ ಪ್ರಕರಣ ಸಂಬಂಧ ಐದು ಆರೋಪಿಗಳು ಜೈಲಿನಲ್ಲಿದ್ದಾರೆ.ಇದನ್ನೂ ಓದಿ: ಜೈಲಲ್ಲಿ ದರ್ಶನ್‌ ಸ್ಥಿತಿ ಕಂಡು ಪತ್ನಿ ವಿಜಯಲಕ್ಷ್ಮಿ ಕಣ್ಣೀರು

    ಒಂದು ವರ್ಷದ ಅವಧಿಯಲ್ಲಿ ಘಟನೆಯ ತೀವ್ರತೆ ಹಾಗೂ ಸೆನ್ಷೇಷನಲ್ ಎನಿಸಿಕೊಂಡ ಪ್ರಕರಣಗಳ ಆಧಾರದ ಮೇಲೆ ಇವುಗಳನ್ನು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ದೇಶದ ಟಾಪ್ 6ರಲ್ಲಿ ರೇಣುಕಾಸ್ವಾಮಿ ಪ್ರಕರಣ ಎರಡನೇ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಉಳಿದಂತೆ ಪುಣೇ ಪೋರ್ಷೆ ಕೇಸ್, ಹೈದರಾಬಾದ್ ಟೆಕ್ ಸ್ಕ್ಯಾಮ್, ಗಾಯಕ ಜುಬೀನ್ ಗಾರ್ಗ್ ಶಂಕ್ಯಾಸ್ಪದ ಸಾವು ಪ್ರಮುಖ ಪ್ರಕರಣ ಎನಿಸಿಕೊಂಡಿದೆ.ಇದನ್ನೂ ಓದಿ: ದರ್ಶನ್ ಜೊತೆ ಥಾಯ್ಲೆಂಡ್ ಪ್ರವಾಸದ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ

     

  • ಜೈಲಲ್ಲಿ ದರ್ಶನ್‌ ಸ್ಥಿತಿ ಕಂಡು ಪತ್ನಿ ವಿಜಯಲಕ್ಷ್ಮಿ ಕಣ್ಣೀರು

    ಜೈಲಲ್ಲಿ ದರ್ಶನ್‌ ಸ್ಥಿತಿ ಕಂಡು ಪತ್ನಿ ವಿಜಯಲಕ್ಷ್ಮಿ ಕಣ್ಣೀರು

    – ಪತ್ನಿ ವಿಜಯಲಕ್ಷ್ಮಿ ಮುಂದೆ ದಾಸನ ಗೋಳಾಟ
    -ಹಣೆಬರಹದಲ್ಲಿ ಇದ್ದಂಗೆ ಆಗುತ್ತೆ, ಜೈಲಿಗೆ ಬರಬೇಡ ಎಂದು ಪತ್ನಿಗೆ ಹೇಳಿದ ದರ್ಶನ್‌

    ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ಲ್ಲಿ (Renukaswamy Case) ಎರಡನೇ ಬಾರೀ ಜೈಲು ಸೇರಿರುವ ನಟ ದರ್ಶನ್‌ಗೆ ಒಂದರ ಮೇಲೊಂದರಂತೆ ಸಂಕಷ್ಟ ಎದುರಾಗುತ್ತಿದೆ. ಸೌಲಭ್ಯದಿಂದ ವಂಚಿತರಾಗಿ ಪರಿತಪಿಸುತ್ತಿರುವ ಪತಿಯ ಕಂಡು ಪತ್ನಿ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ.

    ಪರಪ್ಪನ ಅಗ್ರಹಾರ ಜೈಲು ಸೇರಿದಾಗಿನಿಂದಲೂ ನಟ ದರ್ಶನ್‌ಗೆ ಒಂದಿಲ್ಲೊಂದು ಸಮಸ್ಯೆ ಕಾಡುತ್ತಲೇ ಇದೆ. ಹಾಸಿಗೆ, ದಿಂಬು ಇಲ್ಲದೇ ಪರದಾಡುವಂತಾಗಿದ್ದು, ಜೈಲಧಿಕಾರಿಗಳ ಮುಂದೆ ಅಂಗಲಾಚಿದರೂ ಕೂಡ ಏನು ಲಾಭವಿಲ್ಲ. ಇನ್ನೂ ಕೂರಲು ಖುರ್ಚಿಯೂ ಇಲ್ಲದೇ ಒದ್ದಾಡುವಂತಾಗಿದೆ. ಜೊತೆಗೆ ದೇಹಕ್ಕೆ ಆಕ್ಟಿವಿಟಿಯಿಲ್ಲದೆ ಕಷ್ಟವಾಗುತ್ತಿದೆ ಎಂದು ವಿಜಯಲಕ್ಷ್ಮಿ ಮುಂದೆ ಸಂಕಷ್ಟ ತೋಡಿಕೊಂಡಿದ್ದಾರೆ.ಇದನ್ನೂ ಓದಿ: ಪ್ರಿಯಕರ ಸ್ನೇಹಿತೆಯೊಟ್ಟಿಗೆ ಓಯೋ ರೂಂನಲ್ಲಿ ಇದ್ದಿದ್ದನ್ನ ಕಂಡು ಮನನೊಂದು ಮಹಿಳೆ ಆತ್ಮಹತ್ಯೆ

    ಇತ್ತ ಪತ್ನಿ ವಿಜಯಲಕ್ಷ್ಮಿ ಜೈಲಿಗೆ ಬರಲು ಕಷ್ಟ ಎದುರಿಸುವಂತಾಗಿದೆ. ಜೈಲಿಗೆ ಬಂದು ಗಂಟೆಗಟ್ಟಲೇ ಕಾದು ಬಳಿಕ ದರ್ಶನ್ ಭೇಟಿಯಾಗಬೇಕು. ಹೀಗಾಗಿ ನಟ ದರ್ಶನ್ ನಮ್ಮ ಹಣೆಬರಹ ಇರೋಹಂಗೆ ಆಗುತ್ತೆ. ನೀನು ಇನ್ಮುಂದೆ ಜೈಲಿಗೆ ಬರಬೇಡ ಎಂದು ಹೇಳಿಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಜೈಲಲ್ಲಿ ದರ್ಶನ್ ಕೂಡ ಕಷ್ಟ ಅನುಭವಿಸುತ್ತಿದ್ದು, ಇದನ್ನು ಕಂಡು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

    ಇನ್ನೂ ಪ್ರಕರಣದ ಸಹ ಆರೋಪಿಗಳು ಕೂಡ ದರ್ಶನ್ ವಿರುದ್ಧ ಮುನಿಸಿಕೊಂಡಿದ್ದಾರೆ. ದರ್ಶನ್ ಮಾತು, ಸ್ನೇಹ ಅಷ್ಟಕಷ್ಟೇ ಎನ್ನುತ್ತಿದ್ದಾರೆ.

    ಸುಪ್ರೀಂಕೋರ್ಟ್ ಆದೇಶದ ಬಳಿಕ ಮತ್ತೆ ಜೈಲುಪಾಲಾಗಿರುವ ಡಿ-ಗ್ಯಾಂಗ್‌ನ ಆರೋಪಿಗಳು ಪರದಾಡುವಂತಾಗಿದೆ. ಯಾವುದೇ ರಾಜಾತಿಥ್ಯ ನೀಡುವಂತಿಲ್ಲ. ಸಾಮಾನ್ಯ ಖೈದಿಗಳಂತೆ ಸೌಲಭ್ಯ ನೀಡಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿತ್ತು.ಇದನ್ನೂ ಓದಿ: Belagavi | ಉರುಸ್ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆ – ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ

     

     

  • ಕೊಲೆ ಆರೋಪಿ ದರ್ಶನ್‌ಗೆ ಹಾಸಿಗೆ, ದಿಂಬು ಅರ್ಜಿ – ಅ.9ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ಕೊಲೆ ಆರೋಪಿ ದರ್ಶನ್‌ಗೆ ಹಾಸಿಗೆ, ದಿಂಬು ಅರ್ಜಿ – ಅ.9ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್‌ಗೆ ಹಾಸಿಗೆ, ದಿಂಬು ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯ ಆದೇಶವನ್ನು 64ನೇ ಸಿಸಿಹೆಚ್ ನ್ಯಾಯಾಲಯ ಅ.9ಕ್ಕೆ ಕಾಯ್ದಿರಿಸಿದೆ.

    ಕನಿಷ್ಟ ಸವಲತ್ತುಗಳನ್ನು ಒದಗಿಸಲು ಕೋರ್ಟ್ ಆದೇಶವಿದ್ದರೂ ಕೂಡ ಪರಪ್ಪನ ಅಗ್ರಹಾರ ಜೈಲಧಿಕಾರಿಗಳು ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ನಟ ದರ್ಶನ್ ಪರ ವಕೀಲರು ಜೈಲಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಇಂದು (ಸೆ.30) ವಿಚಾರಣೆ ನಡೆಯಿತು.ಇದನ್ನೂ ಓದಿ: ಮಹಿಳೆಯ ಖಾಸಗಿ ವೀಡಿಯೋ ಇಟ್ಕೊಂಡು ಬ್ಲಾಕ್‌ಮೇಲ್‌ ಆರೋಪ – ಪುಡಿ ರೌಡಿ ವಿರುದ್ಧ ಎಫ್‌ಐಆರ್‌ ದಾಖಲು

    ವಿಚಾರಣೆ ಸಂದರ್ಭದಲ್ಲಿ ಜೈಲ್ ಸೂಪರಿಂಟೆಂಡೆಂಟ್ ಸುರೇಶ್ ಕೂಡ ಹಾಜರಾಗಿದ್ದರು. ಈ ವೇಳೆ ಎಸ್ಪಿಪಿ ಪ್ರಸನ್ನಕುಮಾರ್ ಹಾಗೂ ದರ್ಶನ್ ಪರ ವಕೀಲ ಸುನೀಲ್ ಅವರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅ.9ಕ್ಕೆಆದೇಶವನ್ನು ಕಾಯ್ದಿರಿಸಿದೆ.

    ಈ ಮೊದಲು ದರ್ಶನ್ ಪರ ವಕೀಲರು, ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳನ್ನಾದರೂ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು. ಅದರಂತೆ ನ್ಯಾಯಾಲಯವೂ ಕೂಡ ಕನಿಷ್ಠ ಸೌಲಭ್ಯಗಳನ್ನು ನೀಡುವಂತೆ ಆದೇಶಿಸಿತ್ತು. ಆದರೆ ಜೈಲಧಿಕಾರಿಗಳು ಕೋರ್ಟ್ ಆದೇಶವನ್ನು ಪಾಲಿಸದೇ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದರು.ಇದನ್ನೂ ಓದಿ: ಮಹೇಶ್‌ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

  • ದರ್ಶನ್‌ ಸರ್‌ನ ಈ ರೀತಿ ನೋಡೋಕೆ ಕಷ್ಟ ಆಗ್ತಿದೆ: ಅಳಿಯ ಮನೋಜ್ ಭಾವುಕ

    ದರ್ಶನ್‌ ಸರ್‌ನ ಈ ರೀತಿ ನೋಡೋಕೆ ಕಷ್ಟ ಆಗ್ತಿದೆ: ಅಳಿಯ ಮನೋಜ್ ಭಾವುಕ

    ರ್ಶನ್ (Darshan) ಸೋದರಳಿಯ ಮನೋಜ್ (Manoj) ‘ಟಕ್ಕರ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಟಕ್ಕರ್ ಬಳಿಕ ಧರಣಿ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಮನೋಜ್ ಅಭಿನಯದ ಗಾರ್ಡನ್ ಸಿನಿಮಾದ ಮುಹೂರ್ತ ನೆರವೇರಿದೆ.

    ಸಿನಿಮಾದ ಮೊದಲ ದೃಶ್ಯಕ್ಕೆ ನಟ ದರ್ಶನ್ ಸಹೋದರ ದಿನಕರ್ ತೂಗುದೀಪ ಕ್ಲ್ಯಾಪ್ ಮಾಡಿದ್ದಾರೆ. ಆರ್ಯ ಮಹೇಶ್ ನಿರ್ದೇಶನದ ಸಿನಿಮಾದಲ್ಲಿ ಮನೋಜ್ ನಾಯಕರಾಗಿ ನಟಿಸುತ್ತಿದ್ದಾರೆ. ಈ ವೇಳೆ ನಟ ದರ್ಶನ್ ಪ್ರಕರಣದ ಬಗ್ಗೆ ಮನೋಜ್ ಮಾತಾಡಿದ್ದಾರೆ. ವಿಷಕೊಡಿ ಅಂತಾ ದರ್ಶನ್, ನ್ಯಾಯಾಧೀಶರ ಮುಂದೆ ಕೇಳಿರೋ ವಿಚಾರದ ಬಗ್ಗೆ ಮನೋಜ್ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಟ ದರ್ಶನ್ & ಗ್ಯಾಂಗ್‌ ಇಂದು ಕೋರ್ಟ್‌ಗೆ – ದೋಷಾರೋಪ ಹೊರಿಸಲಿರುವ ಕೋರ್ಟ್‌

    ವಿಷಕೊಡಿ ಎನ್ನುವ ವಿಚಾರ ತುಂಬಾ ಬೇಜಾರಾಯ್ತು. ಸಿಚುವೇಷನ್ ಏನಾಗ್ತಿದೆ ಅಂತಾ ಗೊತ್ತಾಗ್ತಿಲ್ಲ. ಅಲ್ಲಿ ಏನು ನಡೀತಿದೆ ಅಂತಾ ಗೊತ್ತಿಲ್ಲ. ಆ ಸಿಚುವೇಷನ್ ಎಸುರಿಸ್ತಿರೋದು ದರ್ಶನ್ ಸರ್. ಎಲ್ಲಾ ಒಳ್ಳೆದಾಗಲಿ ಅಂತಾ ಕೇಳಿಕೊಳ್ತೀನಿ. ಅದೆಲ್ಲ ನೆನೆಸಿಕೊಂಡ್ರೆ ಎಮೋಷನಲ್ ಆಗ್ತೀನಿ. ಅವರ ಹೆಸರು ನೆನಸಿಕೊಂಡು ಮಾತಾಡೋಕೆ ಆಗೊಲ್ಲ, ಭಾವುಕರಾಗಿ ಬಿಡ್ತೀವಿ. ಪ್ರತಿ ಸಲ ಮನೆಗೆ ಹೋದಾಗ ಬರೀ ಸಿನಿಮಾಗಳ ಬಗ್ಗೆ ಮಾತಾಡ್ತಿದ್ವಿ. ನಮಗೆಲ್ಲ ಇಂಡಸ್ಟ್ರಿಗೆ ಬರೋವಾಗ ತುಂಬಾ ಮಾರ್ಗದರ್ಶನ ನೀಡಿದ್ದಾರೆ ದರ್ಶನ್ ಸರ್. ಈಗ ಈಥರ ನೋಡೋಕೆ ಕಷ್ಟ ಆಗ್ತಿದೆ ಎಂದಿದ್ದಾರೆ.

    ನಾಯಕ ನಟರಾಗಿ ಗುರ್ತಿಸಿಕೊಳ್ಳುವ ಮುಂಚೆ ನಟ ದರ್ಶನ್ ಅವರ ಜೊತೆಗೆ ಸಿನಿಮಾ ಮಾಡಿರುವ ಮನೋಜ್ ತಮ್ಮ ಮೂರನೇ ಸಿನಿಮಾ ಗಾರ್ಡನ್ ಮುಹೂರ್ತ ಕಂಡಿದೆ. ಈ ವೇಳೆ ದರ್ಶನ್ ಜೊತೆಗಿನ ಒಡನಾಟ ನೆನೆದಿದ್ದಾರೆ. ಇಂಡಸ್ಟ್ರಿಗೆ ಬರುವ ಮುಂಚೆ ನಟ ದರ್ಶನ್ ಕೊಟ್ಟ ಮಾರ್ಗದರ್ಶನದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಈ ಪ್ರಕರಣ ಆದ್ಮೇಲೆ ಭೇಟಿ ಆಗೋಕೆ ಟೈಂ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

  • ನಟ ದರ್ಶನ್‌ಗೆ ಹಾಸಿಗೆ, ದಿಂಬು – ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ನಟ ದರ್ಶನ್‌ಗೆ ಹಾಸಿಗೆ, ದಿಂಬು – ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ಬೆಂಗಳೂರು: ಕೋರ್ಟ್ ಆದೇಶದ ಬಳಿಕವೂ ಕೊಲೆ ಆರೋಪಿ ದರ್ಶನ್‌ಗೆ ಹಾಸಿಗೆ, ದಿಂಬು ನೀಡಿಲ್ಲ ಎಂದು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಕೋರ್ಟ್ ಸೆ.19ಕ್ಕೆ ಕಾಯ್ದಿರಿಸಿದೆ.

    ಇಂದು (ಸೆ.17) 57ನೇ ಸಿಸಿಹೆಚ್ ಕೋರ್ಟ್ ಕೊಲೆ ಆರೋಪಿ ದರ್ಶನ್ ಪರ ವಕೀಲರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದರು. ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ದರ್ಶನ್‌ಗೆ ನೀಡಿರುವ ಸೌಲಭ್ಯಗಳ ಕುರಿತ ವರದಿಯನ್ನು ಸರ್ಕಾರದ ಪರ ವಕೀಲ ಸಚಿನ್ ಸಲ್ಲಿಕೆ ಮಾಡಿದರು. ಈ ವೇಳೆ ದರ್ಶನ್ ಪರ ವಕೀಲ ಸುನೀಲ್ ವಾದ ಆರಂಭಿಸಿ, ಕೋರ್ಟ್ ಆದೇಶ ಮಾಡಿದರೂ ಕೂಡ ಲಘುವಾಗಿ ಪರಿಗಣಿಸಿದೆ. ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ವಿಡಿಯೋ ಕಾಲ್‌ಗೆ ಅವಕಾಶ ನೀಡಲಾಗಿದೆ. ಫೋನ್ ಮಾಡಲು ಕೂಡ ಅವಕಾಶ ನೀಡಲಾಗಿದೆ. ಕಂಬಳಿ, ಚಾಪೆ, ನೀಡಿದ್ದಾರೆ ಅಂತ ಉಲ್ಲೇಖ ಮಾಡಿದ್ದಾರೆ. ಆದರೆ, ನಾವು ಕೇಳಿದ್ದನ್ನು ಕೊಡುತ್ತಿಲ್ಲ. ಕ್ವಾರಂಟೈನ್ ಸೆಲ್ ಅಲ್ಲಿ ಒಂದು ತಿಂಗಳಿಂದ ಇರಿಸಿದ್ದಾರೆ. ಪಾಕಿಸ್ತಾನದ ಆರೋಪಿಗಳಿಗೂ ಕೇರಂ ಗೇಮ್ ಆಡೋಕೆ ಬಿಟ್ಟಿದ್ದಾರೆ. ನಮ್ಮ ಆರೋಪಿಗೆ ಅದನ್ನ ಕೊಡದೆ ಹಿಂಸೆ ನೀಡುತ್ತಿದ್ದಾರೆ ಎಂದರು.ಇದನ್ನೂ ಓದಿ: ಟ್ರೋಲ್‌ ಮಾಡಿದ ಕಿಡಿಗೇಡಿಗಳಿಗೆ ಮಾರ್ಮಿಕ ಉತ್ತರ ನೀಡಿದ ವಿಜಯಲಕ್ಷ್ಮಿ

    ಸರ್ಕಾರದ ಪರ ವಕೀಲ ಸಚಿನ್ ಪ್ರತಿವಾದ ಮಾಡಿ, ಜೈಲ್ ಮ್ಯಾನುಯಲ್ ಹೊರತುಪಡಿಸಿ ಹೆಚ್ಚಿನ ಸೌಲಭ್ಯ ಕೊಟ್ಟಿಲ್ಲ. ಕಂಬಳಿ, ಬ್ಲಾಂಕೇಟ್, ಲೋಟ, ತಟ್ಟೆ ನೀಡಲಾಗಿದೆ. ಬೆಳಗ್ಗೆ 1 ಗಂಟೆ ಹಾಗೂ ಸಂಜೆ 1 ಗಂಟೆ ವಾಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಮ್ಯಾನ್ಯುಯಲ್ ಪ್ರಕಾರವೇ ಎಲ್ಲವನ್ನೂ ನೀಡಲಾಗ್ತಿದೆ. ಅದನ್ನು ಹೊರತುಪಡಿಸಿ ಹೆಚ್ಚಿನ ಸೌಲಭ್ಯ ಕೊಟ್ಟಿಲ್ಲ. ಕ್ವಾರಂಟೈನ್ ಅನ್ನೋದು ಇಲ್ಲ ಈಗ ಎಂದು ಹೇಳಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಸೆ.19ಕ್ಕೆ ಆದೇಶವನ್ನು ಕಾಯ್ದಿರಿಸಿದೆ.

  • ಎ1 ಆರೋಪಿ ಪವಿತ್ರಾ ಗೌಡಗೆ ಮತ್ತೆ ಶಾಕ್ – ಜಾಮೀನು ಅರ್ಜಿ ವಜಾ

    ಎ1 ಆರೋಪಿ ಪವಿತ್ರಾ ಗೌಡಗೆ ಮತ್ತೆ ಶಾಕ್ – ಜಾಮೀನು ಅರ್ಜಿ ವಜಾ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಮತ್ತೆ ಜೈಲುಪಾಲಾಗಿರುವ ಎ1 ಆರೋಪಿ ಪವಿತ್ರಾ ಗೌಡ (Pavitra Gowda) ಜಾಮೀನು ಅರ್ಜಿಯನ್ನು 57ನೇ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.

    ಪವಿತ್ರಾ ಗೌಡ ಪರ ವಕೀಲರು ತಾಂತ್ರಿಕ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಕುರಿತು ಆ.30ರಂದು ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿತ್ತು. ಈ ವೇಳೆ ಪವಿತ್ರಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿ, ಪವಿತ್ರಗೌಡ ವಿರುದ್ಧ ಆರೋಪಪಟ್ಟಿಯನ್ನು ಬಿಎನ್‌ಎಸ್ (BNS) ಬದಲು ಸಿಆರ್‌ಪಿಸಿ (CRPC) ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿರುವುದರಿಂದ ಕಡ್ಡಾಯ ಜಾಮೀನಿಗೆ ನಮ್ಮ ಕಕ್ಷಿದಾರರು ಅರ್ಹರು, ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಕೋರಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಾಲಯ ಸೆ.2ಕ್ಕೆ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.ಇದನ್ನೂ ಓದಿ: ಗಂಗೆ, ತುಂಗೆಯ ಜೊತೆ ಧರ್ಮಸ್ಥಳ ಯಾತ್ರೆ ಹೊರಟ ಈಶ್ವರಪ್ಪ

    ಇನ್ನೂ ನಟ ದರ್ಶನ್ ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ, ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡುವಂತೆ ಹಾಗೂ ಪವಿತ್ರಾ ಗೌಡ ಮತ್ತು ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯುವಂತೆ ಸಲ್ಲಿಸಿರುವ ಅರ್ಜಿ ಹಾಗೂ ನಟ ದರ್ಶನ್‌ಗೆ ದಿಂಬು, ಬೆಡ್‌ಶೀಟ್ ಕೋರಿರುವ ಅರ್ಜಿಯ ಆದೇಶ ಇಂದು (ಸೆ.2) ಹೊರಬೀಳಲಿದೆ.

    ಆ.14ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ (Karnataka Highcourt) ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ (Supreme Court)  ವಜಾಗೊಳಿಸಿತ್ತು.ಇದನ್ನೂ ಓದಿ: ಭೋವಿ ನಿಗಮದ ಅಕ್ರಮ; ಕಾಂಗ್ರೆಸ್ ಸರ್ಕಾರದ 60% ಕಮಿಷನ್‌ಗೆ ಸಾಕ್ಷಿ – ಜೆಡಿಎಸ್ ಕಿಡಿ

  • `ತಿಪ್ಪರ್‌ಲಾಗ ಹೊಡೆದ್ರೂ ನೀನು ಬೇಡ ನಿನ್ನ ಕುದುರೆ ಸಹವಾಸನೂ ಬೇಡʼ – ದರ್ಶನ್‌ಗೆ ಸುದೀಪ್‌ ಹೀಗಂದಿದ್ಯಾಕೆ?

    `ತಿಪ್ಪರ್‌ಲಾಗ ಹೊಡೆದ್ರೂ ನೀನು ಬೇಡ ನಿನ್ನ ಕುದುರೆ ಸಹವಾಸನೂ ಬೇಡʼ – ದರ್ಶನ್‌ಗೆ ಸುದೀಪ್‌ ಹೀಗಂದಿದ್ಯಾಕೆ?

    ಅಭಿನಯ ಚಕ್ರವರ್ತಿ ಎಂದೇ ಫೇಮಸ್ ಆದವರು ಕಿಚ್ಚ ಸುದೀಪ್. ಯಾವುದೇ ಪಾತ್ರ ಕೊಟ್ಟರೂ ಜೀವ ತುಂಬುವ ಕಲಾವಿದ ಇವರು. ಆದರೆ ಕಿಚ್ಚ ಸುದೀಪ್ ಪೌರಾಣಿಕ ಪಾತ್ರಗಳಲ್ಲಿ ಕಾಣಿಸ್ಕೊಳ್ಳುವುದಿಲ್ಲ. ಯಾಕೆ ಅನ್ನೋ ಪ್ರಶ್ನೆಗೆ ಅಸಲಿ ಕಾರಣ ಇದೀಗ ಬಿಚ್ಚಿಟ್ಟಿದ್ದಾರೆ ಸುದೀಪ್. ಹುಟ್ಟುಹಬ್ಬದ ಪ್ರಯುಕ್ತ ನಡೆದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ (Kichcha Sudeep) ಮನಬಿಚ್ಚಿ ಮಾತನಾಡಿದ್ದಾರೆ.

    ಪೌರಾಣಿಕ ಪಾತ್ರಗಳಲ್ಲಿ ಸುದೀಪ್ ಯಾಕೆ ಅಭಿನಯಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕುದುರೆ ಸವಾರಿ ಮಾಡಬೇಕಾದ ಕಾರಣಕ್ಕೆ ನನಗೆ ಪೌರಾಣಿಕ ಪಾತ್ರವೇ ಇಷ್ಟವಿಲ್ಲ. ಒಂದು ಬಾರಿ ಆದ ಅನುಭವದಿಂದ ನನಗೆ ಕುದುರೆ ಸವಾರಿ ಇಷ್ಟವಿಲ್ಲ ಎಂದಿದ್ದಾರೆ. ದರ್ಶನ್ ಫಾರ್ಮ್ಹೌಸ್‌ನಲ್ಲಿ ಓಡಿಸಿದ್ದೇ ಕೊನೆ ಮತ್ಯಾವತ್ತೂ ಕುದುರೆ ಸವಾರಿ ಮಾಡಿಯೇ ಇಲ್ಲ ಎಂದಿದ್ದಾರೆ ಸುದೀಪ್.ಇದನ್ನೂ ಓದಿ: ಡಿಕೆಶಿ ನಟ್ಟು ಬೋಲ್ಟು ಹೇಳಿಕೆ ಸಾಧು ಕೋಕಿಲ ಕಿತಾಪತಿ – ಕಿಚ್ಚ ಸುದೀಪ್‌

    ದರ್ಶನ್ ಒತ್ತಾಯ ಮಾಡಿದ್ದಕ್ಕೆ ಕುದುರೆ ಹತ್ತಿದ್ದರಂತೆ ಸುದೀಪ್ !

    ನಾವು ಒಮ್ಮೆ ದರ್ಶನ್ ತೋಟಕ್ಕೆ ಹೋಗಿದ್ವಿ, ಅಲ್ಲಿ ದರ್ಶನ್ ಕುದುರೆ ಹತ್ತು ಹತ್ತು ಅಂತ ತುಂಬಾ ಫೋರ್ಸ್ ಮಾಡ್ದ , ನೀನ್ ತಿಪ್ಪರಲಾಗ ಹೊಡೆದ್ರೂ ನೀನು ಬೇಡ ನಿನ್ನ ಕುದುರೆ ಸಹವಾಸನೂ ಬೇಡ ಅಂತ ಹೇಳ್ದೆ. ಆದ್ರೂ ಕುದುರೆ ಹತ್ತಿಸಿದ್ರು. ಸರಿ ಅಂತ ನಾನು ಮೆತ್ತಗೆ ಇದನ್ನ ಯಾರಾದ್ರೂ ಹಿಡ್ಕೊಳ್ರಪ್ಪ ನೀವೇ ಅಂತ ಹೇಳಿ ಹೋಗ್ತಾ ಇದ್ದೆ. ಕುದುರೆ ಹೋಗ್ತಾ ಇತ್ತು. ಮುಂದೆ ದರ್ಶನ್ ಕುದುರೆ ಟಕ್‌ ಟಕ್‌ ಹೋಗ್ತಾ ಇತ್ತು. ಹೋಗ್ತಾ ಹೋಗ್ತಾ ಆ ಕುದುರೆ ಲಾಡಿ ಬಿಚ್ಕೊಂಡ್ಬಿಡ್ತು. ಆಗ ದರ್ಶನ್ ಕೆಳಗೆ ಬಿದ್ದ. ಅದನ್ನ ನೋಡಿದ್ ತಕ್ಷಣನೇ ನಿಲ್ಸಪ್ಪ ಫಸ್ಟು ಅಂದೆ. ಆವತ್ತು ಇಳಿದವನು ಇವತ್ತಿನವರೆಗೂ ಕುದುರೆ ಹತ್ತಿಲ್ಲ.

    ಕುದುರೆ ಸವಾರಿಯ ಕೆಟ್ಟ ಅನುಭವ ಬಿಚ್ಚಿಟ್ಟ ಸುದೀಪ್ ?

    ನನಗೆ ಕುದುರೆ ಓಡ್ಸೋದು ಒಂದ ಆಗಲ್ಲ, ಯಾಕಂದ್ರೆ ಒಂದ್ ಅನುಭವ ಆಗಿದೆ, ನನಗೇನೇ ಪೌರಾಣಿಕ ಪಾತ್ರ ಬಂದಿತ್ತು ಆ ಟೈಮಲ್ಲಿ. ಅವರು ಹೇಳಿದ್ರು ಅಂತ ತುಂಬಾ ಪ್ರಾಕ್ಟೀಸ್ ಮಾಡಿದ್ದೆ. ನಾನ್ ಸೀರಿಯಸ್ ಆಗಿ ಒಂದಷ್ಟು ದಿನ ಹೋಗಿ ಕುದುರೆ ಓಡಿಸುವುದನ್ನು ಕಲಿತೆ. ಒಂದು ದಿನ ಸುಮ್ನೆ ನಿಂತಿದ್ದ ಕುದುರೆ ಯಾಕೆ ಎಗರ್ತು ಅಂತ ಗೊತ್ತಾಗ್ಲಿಲ್ಲ. 20 ಮೀಟರ್ ದೂರ ಎಳಕೊಂಡು ಹೋಗ್ಬಿಟ್ಟಿತ್ತು. ಆವಾಗ ಆಗಿರೋ ಭಯ ಇದ್ಯಲ್ಲ ಪ್ರಪಂಚನೆ ನೋಡಿಬಿಟ್ಟೆ ನಾನು. ಅದಾದ್ಮೇಲೆ ಅರ್ಥ ಆಯ್ತು ಒಂದು ವಿಚಾರ. ಯಾವುದರ ಮೇಲೆ ಹತ್ತಿದ್ರೂ ಅದರ ಬ್ರೇಕ್, ಹ್ಯಾಂಡಲ್ ಎಲ್ಲಿದೆ ಅಂತ ಗೊತ್ತಿರಬೇಕು. ಕುದುರೆಯಲ್ಲಿ ಎಲ್ಲಿದೆ ಅಂತ ನನಗೆ ಗೊತ್ತಿಲ್ಲ.ಇದನ್ನೂ ಓದಿ: ಡಿಸೆಂಬರ್‌ಗೆ ಕಿಚ್ಚನ ಡಿಚ್ಚಿ: ಕೆ-47 ರಿಲೀಸ್ ಡೇಟ್ ಫಿಕ್ಸ್

  • ನಾವೇನು ಚಿಕ್ಕ ಹುಡುಗರಾ? ಯಾಕೆ ದೂರಾದ್ವಿ ಅನ್ನೋದು ನಮಗೆ ಗೊತ್ತಿದೆ – ದರ್ಶನ್‌ ಬಗ್ಗೆ ಕಿಚ್ಚನ ಮಾತು

    ನಾವೇನು ಚಿಕ್ಕ ಹುಡುಗರಾ? ಯಾಕೆ ದೂರಾದ್ವಿ ಅನ್ನೋದು ನಮಗೆ ಗೊತ್ತಿದೆ – ದರ್ಶನ್‌ ಬಗ್ಗೆ ಕಿಚ್ಚನ ಮಾತು

    – ಸೂರ್ಯ – ಚಂದ್ರ ಅದರ ಜಾಗದಲ್ಲಿ ಎರಡು ಚೆನ್ನಾಗಿರುತ್ತೆ ಎಂದ ಸುದೀಪ್‌

    ನಾವೇನು ಚಿಕ್ಕವರಲ್ಲ, ನಾವು ದೂರಾಗಿದ್ದು ಯಾಕೆ ಅನ್ನೋದು ನಮಗೆ ಗೊತ್ತಿದೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರು ನಟ ದರ್ಶನ್ (Actor Darshan) ಬಗ್ಗೆ ಹೇಳಿದರು.

    ಸೆ.2ರಂದು ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಟ ದರ್ಶನ್ ಹಾಗೂ ತಮ್ಮ ಸ್ನೇಹದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅವರ ಸಿನಿಮಾಗೆ ಒಳ್ಳೇದಾಗಲಿ. ಅವರಿಗೆ ಅವರದ್ದೇ ಆದ ನೋವು ಇರುತ್ತೆ. ಅದರ ಹಿಂದೆ ಅವರ ಅಭಿಮಾನಿಗಳು ಇರುತ್ತಾರೆ. ಅಭಿಮಾನಿಗಳಿಗೂ ಒಂದು ನಂಬಿಕೆ ಇರುತ್ತದೆ. ನಾವು ಮಾತಾಡೋದು ತಪ್ಪಾಗುತ್ತೆ. ಸರ್ಕಾರ, ಕಾನೂನು ಅಂತ ಬಂದಾಗ ಅವರೇನು ಮಾಡಬೇಕು ಅದನ್ನ ಮಾಡ್ತಾ ಇರ್ತಾರೆ. ಅದಕ್ಕೂ ನಾವು ಅಡ್ಡ ಬರಬಾರದು. ಯಾರೂ ಕೈಕಟ್ಕೊಂಡು ಸುಮ್ಮನೇ ಕುಳಿತಿರಲ್ಲ. ಆದರೆ ಕೆಲವೊಂದಕ್ಕೆ ನಾನು ತಲೆಹಾಕೋಕೆ ಹೋಗಲ್ಲ. ಯಾಕಂದ್ರೆ ನಂಗೆ ವೈಯಕ್ತಿಕವಾಗಿ ಇಂಟ್ರೆಸ್ಟ್ ಇಲ್ಲ. ಮಾತಾಡಿದ್ರೆ ಅದು ಎಲ್ಲವನ್ನೂ ಹಾಳಮಾಡುತ್ತೆ. ಜೊತೆಗೆ ಅದು ಕೆಲವೊಮ್ಮೆ ಅಂತರ ಸೃಷ್ಟಿ ಮಾಡುತ್ತೆ ಎಂದು ಹೇಳಿದರು.ಇದನ್ನೂ ಓದಿ: ಪರಮ ಸುಂದರಿಯಾದ ರಮ್ಯಾ!

    ಇನ್ನೂ ನಾವಿಬ್ಬರು ಯಾಕೆ ಮಾತಾಡಲ್ಲ ಅಂದ್ರೆ ಅದಕ್ಕೆ ಕೆಲವು ಕಾರಣಗಳಿವೆ. ಯಾರೂ ಆ ಕಾರಣಗಳ ಬಗ್ಗೆ ಕೇಳಲ್ಲ. ಆದ್ರೆ ನಮಗೆ ಗೊತ್ತಿರುತ್ತೆ. ಇನ್ನೂ ಯಾರದ್ದೋ ಮಾತು ಕೇಳಿಕೊಂಡು ಹೀಗೆ ಮಾಡುವಷ್ಟು ನಾವು ಚಿಕ್ಕವರಲ್ಲ, ನಮಗೆ ಕೆಲವು ವಿಷಯಗಳು ಅರ್ಥ ಆಗುತ್ತವೆ. ನಾವ್ಯಾಕೆ ಹೀಗೀದಿವಿ ಅಂತ ನಮ್ಮ ಸತ್ಯ ನಮಗೆ ಗೊತ್ತಿರುತ್ತೆ. ಸೂರ್ಯ ಹಾಗೂ ಚಂದ್ರ ಅದರ ಜಾಗದಲ್ಲಿ ಎರಡು ಚೆನ್ನಾಗಿರುತ್ತೆ ಎಂದರು.

    ಕಿಚ್ಚ ಸುದೀಪ್ ಸೋಮವಾರ (ಸೆ.1) ರಾತ್ರಿ 9 ರಿಂದ 12 ಗಂಟೆವರೆಗೆ ಅಭಿಮಾನಿಗಳ ಜೊತೆ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ. ಇದನ್ನೂ ಓದಿ: ಹೃದಯಾಘಾತ – ಸಿನಿಮಾ ರೈಟರ್ ಎಸ್.ಎಸ್ ಡೇವಿಡ್ ನಿಧನ

  • ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ವಿಚಾರ – ಸೆ.2ಕ್ಕೆ ವಿಚಾರಣೆ ಮುಂದೂಡಿಕೆ

    ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ವಿಚಾರ – ಸೆ.2ಕ್ಕೆ ವಿಚಾರಣೆ ಮುಂದೂಡಿಕೆ

    -ಅಂದೇ ಎ-1 ಆರೋಪಿ ಪವಿತ್ರಾ ಬೇಲ್‌ ಭವಿಷ್ಯ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪಿಗಳಾದ ದರ್ಶನ್ (Actor Darshan) ಸೇರಿದಂತೆ ಐವರು ಆರೋಪಿಗಳ ಜೈಲು ಸ್ಥಳಾಂತರ ಕೋರಿರುವ ಅರ್ಜಿ ವಿಚಾರಣೆಯನ್ನು ಸಿಸಿಎಚ್ 57ನೇ ಕೋರ್ಟ್ ಸೆ.2ಕ್ಕೆ ಮುಂದೂಡಿದೆ.

    ನಟ ದರ್ಶನ್ ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ, ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡುವಂತೆ ಹಾಗೂ ಪವಿತ್ರಾ ಗೌಡ ಮತ್ತು ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈ ವಿಚಾರವಾಗಿ ದರ್ಶನ್, ಲಕ್ಷಣ್, ನಾಗರಾಜ್ ಹಾಗೂ ಪ್ರದೂಷ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ಧರ್ಮಸ್ಥಳ ಕೇಸ್‌ಲ್ಲಿ SIT ತನಿಖೆಗೆ ಸಮಯ ನಿಗದಿ ಮಾಡಿಲ್ಲ: ಪರಮೇಶ್ವರ್

    ನಟ ದರ್ಶನ್ ಪರ ವಕೀಲರು, ಪ್ರಕರಣದ ಟ್ರಯಲ್ ಅತೀ ಶೀಘ್ರದಲ್ಲಿ ಪ್ರಾರಂಭವಾಗುತ್ತಿದೆ. ಅಲ್ಲದೇ ಬಳ್ಳಾರಿಗೆ ಶಿಫ್ಟ್ ಮಾಡಿದ್ರೆ ವಕೀಲರ ಭೇಟಿ ಅಸಾಧ್ಯ. ಪ್ರತಿ ಬಾರಿ ವಿಚಾರಣೆಗೆ ಹಾಜರುಪಡಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ದರ್ಶನ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬಳ್ಳಾರಿ ಜೈಲಿಗೆ ಹೋಗಿ ಮಗನನ್ನು ನೋಡಲು ಅವರಿಗೆ ಕಷ್ಟವಾಗುತ್ತದೆ ಎಂದಿದ್ದಾರೆ. ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಮ್ಯಾನ್ಯುಯಲ್ ಪ್ರಕಾರ ಯಾವುದೇ ಅವಕಾಶ ನೀಡುತ್ತಿಲ್ಲ, ಚಳಿಗಾಲವಿದೆ ಹೀಗಾಗಿ ದಿಂಬು, ಬ್ಲ್ಯಾಂಕೇಟ್‌ ನೀಡಲು ಅವಕಾಶ ಕೊಡಿ. ಜೊತೆಗೆ ಹೆಚ್ಚುವರಿ ಬಟ್ಟೆ, ನೈಟ್ ಡ್ರೆಸ್ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಸದ್ಯ ಸಿಸಿಎಚ್ 57ನೇ ಕೋರ್ಟ್‌ನಲ್ಲಿ ನಟ ದರ್ಶನ್ ಸೇರಿ ಇತರರನ್ನು ಬೇರೆ ಜೈಲಿಗೆ ಸ್ಥಳಾಂತರ ಅರ್ಜಿ ಹಾಗೂ ದಿಂಬು, ಬೆಡ್‌ಶೀಟ್ ಕೋರಿರುವ ಅರ್ಜಿಯನ್ನು ಸೆ.2ಕ್ಕೆ ಮುಂದೂಡಿದ್ದಾರೆ.

    ಇನ್ನೂ ಸಿಸಿಎಚ್ 64ನೇ ಕೋರ್ಟ್‌ನಲ್ಲಿ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಪವಿತ್ರಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿ, ಪವಿತ್ರಗೌಡ ವಿರುದ್ಧ ಆರೋಪಪಟ್ಟಿಯನ್ನು ಬಿಎನ್‌ಎಸ್ ಬದಲು ಸಿಆರ್‌ಪಿಸಿ ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿರುವುದರಿಂದ ಕಡ್ಡಾಯ ಜಾಮೀನಿಗೆ ನಮ್ಮ ಕಕ್ಷಿದಾರರು ಅರ್ಹರು, ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಕೋರಿದ್ದಾರೆ.

    ಸದ್ಯ ನ್ಯಾಯಾಲಯ ಪವಿತ್ರಗೌಡ ಜಾಮೀನು ಅರ್ಜಿ ತೀರ್ಪನ್ನು ಸೆ.2ಕ್ಕೆ ಪ್ರಕಟಿಸಲಿದೆ.ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ; ಒಂದೇ ಕುಟುಂಬದ 7 ಮಂದಿ ಸೇರಿ 11 ಜನ ದುರ್ಮರಣ