Tag: actor Ambarish

  • ಕುಸಿದು ಬಿದ್ದ ರೆಬೆಲ್ ಸ್ಟಾರ್ ಅಂಬರೀಶ್

    ಕುಸಿದು ಬಿದ್ದ ರೆಬೆಲ್ ಸ್ಟಾರ್ ಅಂಬರೀಶ್

    ಬೆಂಗಳೂರು: ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಸಿದು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮನೆಗೆ ಕರೆಕೊಂಡು ಹೋಗಲಾಗಿದೆ.

    ಇಂದು ಬೆಳಗ್ಗೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಕ್ರಿಕೆಟ್ ಕಪ್ (ಕೆಸಿಸಿ) ಆರಂಭಕ್ಕಾಗಿ ಸಿದ್ಧತೆ ನಡೆಸಲಾಗಿತ್ತು. ಇದಕ್ಕಾಗಿ ನಟ ಅಂಬರೀಶ್ ಸೇರಿದಂತೆ ಹಲವು ಸ್ಟಾರ್ ಗಳು, ನಿರ್ಮಾಪಕರು, ಕಲಾವಿದರು ಕ್ರೀಡಾಂಗಣದಲ್ಲಿ ನೆರೆದಿದ್ದರು. ನಟ ಅಂಬರೀಶ್ ಕೂಡ ಬೆಳಗ್ಗೆಯಿಂದ ಕ್ರೀಡಾಂಗಣದಲ್ಲೇ ಇದ್ದರು, ಆದರೆ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಸುಸ್ತಾಗಿದ್ದ ಅವರು ಕುಸಿದು ಬಿದ್ದಿದ್ದಾರೆ. ಈ ವೇಳೆ ನಟ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರೊಂದಿಗೆ ಅಂಬರೀಶ್ ರನ್ನು ಆಸ್ಪತೆಗೆ ಕರೆದ್ಯೊಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಅಂಬರೀಶ್ ಮನೆಗೆ ತೆರಳಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ರಾಕ್‍ಲೈನ್ ವೆಂಕಟೇಶ್, ಅಂಬರೀಶ್ ಅವರು ಆರೋಗ್ಯವಾಗಿದ್ದಾರೆ. ಆದರೆ ಬೆಳಗ್ಗೆಯಿಂದ ಬಿಸಿಲಿನಲ್ಲಿ ಕುಳಿತ್ತಿದ್ದ ಕಾರಣ ಸ್ವಲ್ಪ ಆಯಾಸಗೊಂಡಿದ್ದರು. ಅದ್ದರಿಂದ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಬಿಡಲಾಯಿತು. ಅವರೇ ನಡೆದುಕೊಂಡು ನಮ್ಮ ಜೊತೆ ಬಂದರು. ಅದ್ದರಿಂದ ಅಭಿಮಾನಿಗಳು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಕ್ರೀಡಾಂಗಣದಲ್ಲಿ ನೆರೆದಿದ್ದ ಸ್ಟಾರ್ ಗಳ ಜೊತೆ ಬೆಳಗ್ಗೆಯಿಂದಲೂ ಅಂಬರೀಶ್ ಅವರು ಉತ್ಸಾಹದಿಂದಲೇ ಮಾತನಾಡುತ್ತಾ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಕೊಡಗು ಸಂತ್ರಸ್ತರಿಗೆ ನೆರವಾಗಲು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಸಿಸಿಯನ್ನು ಆರಂಭಿಸಲು ತಯಾರಿ ನಡೆಸಲಾಗಿದೆ. ಇದಕ್ಕಾಗಿ ನಟರು ಕೂಡ ನಿರಂತರ ಅಭ್ಯಾಸ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಆರ್‌ಎಸ್‌  ಅಣೆಕಟ್ಟು ರುದ್ರರಮಣೀಯ ದೃಶ್ಯ ಕಣ್ತುಂಬಿಕೊಂಡ ಅಂಬರೀಶ್, ಯದುವೀರ್ ದಂಪತಿ

    ಕೆಆರ್‌ಎಸ್‌ ಅಣೆಕಟ್ಟು ರುದ್ರರಮಣೀಯ ದೃಶ್ಯ ಕಣ್ತುಂಬಿಕೊಂಡ ಅಂಬರೀಶ್, ಯದುವೀರ್ ದಂಪತಿ

    ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆಗೆ ಮೈಸೂರು ರಾಜ ಯದುವೀರ್ ದಂಪತಿ ಹಾಗೂ ನಟ, ಮಾಜಿ ಸಚಿವ ಅಂಬರೀಶ್ ಭೇಟಿ ನೀಡಿ ಅಣೆಕಟ್ಟೆಯ ರುದ್ರರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ.

    ಕೆಆರ್‌ಎಸ್‌ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯಿಂದ ಒಂದು ಲಕ್ಷದ 20 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಹೀಗಾಗಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು ಆ ದೃಶ್ಯವನ್ನು ಕಣ್ತುಂಬಿಕೊಳ್ಳಲು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ರಿಷಿಕಾರೊಂದಿಗೆ ಕೆಆರ್‌ಎಸ್‌ ಅಣೆಕಟ್ಟೆಗೆ ಆಗಮಿಸಿದ್ದರು. ಜೊತೆಗೆ ಅಣೆಕಟ್ಟೆ ಮೈದುಂಬಿ ಹರಿಯುತ್ತಿರುವ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲೂ ಸೆರೆಹಿಡಿದರು.

    ನಟ, ಮಾಜಿ ಸಚಿವ ಅಂಬರೀಶ್ ಕೂಡ ಕೆಆರ್‌ಎಸ್‌ ಗೆ ಭೇಟಿ ನೀಡಿದ್ದು, ಧುಮ್ಮಿಕ್ಕಿ ಹರಿಯುತ್ತಿರುವ ಕಾವೇರಿ ನದಿ ವೀಕ್ಷಿಸಿದರು. ಅಂಬರೀಶ್ ಅವರೊಂದಿಗೆ ಅಧಿಕಾರಿಗಳು ಸಹ ಸಾಥ್ ನೀಡಿದ್ದು, ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv