Tag: actor Akshay Kumar

  • ಮಹಾ ಕುಂಭಮೇಳ: ತ್ರಿವೇಣಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪುಣ್ಯಸ್ನಾನ

    ಮಹಾ ಕುಂಭಮೇಳ: ತ್ರಿವೇಣಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪುಣ್ಯಸ್ನಾನ

    ಪ್ರಯಾಗ್‌ರಾಜ್: 144 ವರ್ಷಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ (Maha Kumbh Mela) ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ತೆರಳಿ, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.

    ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾ ಕುಂಭಮೇಳದಲ್ಲಿ ಒಳ್ಳೆಯ ವ್ಯವಸ್ಥೆ ಮಾಡಲಾಗಿದೆ. ಅದ್ಭುತ ವ್ಯವಸ್ಥೆ ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಹೇಳುತ್ತೇನೆ. 2019ರಲ್ಲಿ ನಡೆದ ಕುಂಭ ಮೇಳದಲ್ಲಿ ಜನರು ಸಂಕಷ್ಟ ಅನುಭವಿಸಿದ್ದು ನನಗೆ ನೆನಪಿದೆ. ಈ ಬಾರಿ ಅನೇಕ ಗಣ್ಯರು ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ. ಅಂಬಾನಿ, ಅದಾನಿ ಕುಟುಂಬದವರು ಹಾಗೂ ಅನೇಕ ದೊಡ್ಡ ದೊಡ್ಡ ನಟರು ಭೇಟಿ ನೀಡಿದ್ದಾರೆ. ಪೊಲೀಸರು ಹಾಗೂ ಸೇವಕರಿಗೆ ಕೈಮಗಿದು ಧನ್ಯವಾದ ಹೇಳುತ್ತಿದ್ದೇನೆ ಎಂದರು. ಇದನ್ನೂ ಓದಿ: ಬೊಜ್ಜು ವಿರುದ್ಧ ಅಭಿಯಾನ – ಒಮರ್ ಅಬ್ದುಲ್ಲಾ, ಆನಂದ್ ಮಹೀಂದ್ರಾ ಸೇರಿ 10 ಗಣ್ಯರ ನಾಮ ನಿರ್ದೇಶನ ಮಾಡಿದ ಮೋದಿ

    ಈ ಮೊದಲು ಮಹಾ ಕುಂಭಮೇಳಕ್ಕೆ ಬಾಲಿವುಡ್‌ನ ಸೊನಾಲಿ ಬೆಂದ್ರೆ, ವಿಕ್ಕಿ ಕೌಶಲ್, ತಮನ್ನ ಭಾಟಿಯಾ, ರಾಜ್‌ಕುಮಾರ್ ರಾವ್, ಹೇಮ ಮಾಲಿನಿ ಹಾಗೂ ಇನ್ನಿತರ ಸ್ಟಾರ್ ನಟರು ಭೇಟಿ ನೀಡಿ, ಪುಣ್ಯಸ್ನಾನ ಮಾಡಿದ್ದರು. ಮಹಾಶಿವರಾತ್ರಿಯಂದು ಮುಕ್ತಾಯಗೊಳ್ಳಲಿರುವ ಮಹಾ ಕುಂಭಮೇಳಕ್ಕೆ ಕೆಲವೇ ದಿನ ಬಾಕಿಯಿರುವಾಗ ನಟ ಅಕ್ಷಯ್ ಕುಮಾರ್ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ವೇಳೆ ವಿದೇಶಿಯರ ಅಪಹರಣಕ್ಕೆ ಇಸ್ಲಾಮಿಕ್ ಸ್ಟೇಟ್ ಸಂಚು – ಪಾಕ್ ಗುಪ್ತಚರ ಸಂಸ್ಥೆ ಎಚ್ಚರಿಕೆ

  • ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ಹನಿಮೂನ್ ಪ್ಲ್ಯಾನ್ ಕ್ಯಾನ್ಸಲ್ ಆಗಿದ್ದೇಕೆ?

    ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ಹನಿಮೂನ್ ಪ್ಲ್ಯಾನ್ ಕ್ಯಾನ್ಸಲ್ ಆಗಿದ್ದೇಕೆ?

    ಬಾಲಿವುಡ್ ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಸೆ.24ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ನವಜೋಡಿ ಹನಿಮೂನ್ ಎಲ್ಲಿಗೆ ಹೋಗುತ್ತಾರೆ ಎಂದು ಕುತೂಹಲದಿಂದ ಕಾಯುತ್ತಿದ್ದವರಿಗೆ ಅಚ್ಚರಿ ಮೂಡಿಸಿದೆ. ಮದುವೆಯಾಗಿ 6 ದಿನಕ್ಕೆ ಪರಿಣಿತಿ ದಂಪತಿ ಹನಿಮೂನ್ ಕ್ಯಾನ್ಸಲ್‌ ಆಗಿದ್ದೇಕೆ? ಮುಂದೂಡಿಕೆಗೆ ಹಿಂದಿನ ಕಾರಣವೇನು? ಇಲ್ಲಿದೆ ಮಾಹಿತಿ.

    ನಟಿ ಪರಿಣಿತಿ- ರಾಘವ್ ಹಲವು ವರ್ಷಗಳು ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ ಸೆ.24ರಂದು ರಾಜಸ್ಥಾನದಲ್ಲಿ ಮದುವೆಯಾದರು. ನವಜೋಡಿಯ ಹನಿಮೂನ್ ಕ್ಯಾನ್ಸಲ್‌ ಆಗಿದ್ಯಾಕೆ? ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಸದ್ಯ ನವಜೋಡಿ ದೆಹಲಿಯಲ್ಲಿದ್ದಾರೆ. ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.

    ನವದಂಪತಿಗೆ ಇಬ್ಬರ ಕುಟುಂಬದ ಜೊತೆ ಬಾಂದವ್ಯ ಬೆಸೆಯುವ ಸಲುವಾಗಿ ತಮ್ಮ ಸಮಯ ಮೀಸಲಿಡುತ್ತಿದ್ದಾರೆ. ಫ್ಯಾಮಿಲಿ ಜೊತೆ ಪರಿಣಿತಿ ದಂಪತಿ ಟೈಂ ಪಾಸ್ ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ.

    ಅಕ್ಟೋಬರ್ 6ರಂದು ಅಕ್ಷಯ್ ಕುಮಾರ್ (Akshay Kumar) ಜೊತೆಗಿನ ‘ಮಿಷನ್ ರಾಣಿಗಂಜ್’ ಸಿನಿಮಾ ರಿಲೀಸ್‌ಗೆ ರೆಡಿಯಿದ್ದು, ಅದರ ಪ್ರಚಾರ ಕಾರ್ಯ ಸದ್ಯದಲ್ಲೇ ಶುರುವಾಗಲಿದೆ. ಪರಿಣಿತಿ ಚೋಪ್ರಾ (Parineeti Chopra) ಅವರು ಈ ಚಿತ್ರಕ್ಕೆ ಸಮಯ ನೀಡಬೇಕಿದೆ. ಇದನ್ನೂ ಓದಿ:‘ಹ್ಯಾರಿ ಪಾಟರ್’ ಖ್ಯಾತಿಯ ಮೈಕೆಲ್ ಗ್ಯಾಂಬೊನ್ ನಿಧನ

    ಇತ್ತ ರಾಘವ್ ಚಡ್ಡಾ ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್, ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಪರಿಣಿತಿ-ರಾಘವ್ ಇಬ್ಬರು ಸಿನಿಮಾ, ರಾಜಕೀಯ (Politics) ಕೆಲಸದಲ್ಲಿ ಬ್ಯುಸಿಯಿರುವ ಕಾರಣ ಹನಿಮೂನ್ ಪ್ಲ್ಯಾನ್ ಮುಂದೂಡಲಾಗಿದೆ. ಸದ್ಯ ತಮ್ಮ ಸಮಯವನ್ನ ಕುಟುಂಬದ ಜೊತೆ ಕಳೆಯುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾಲೆ ನಿರ್ಮಾಣಕ್ಕೆ 1 ಕೋಟಿ ರೂ. ದೇಣಿಗೆ ಕೊಟ್ಟ ನಟ ಅಕ್ಷಯ್ ಕುಮಾರ್

    ಶಾಲೆ ನಿರ್ಮಾಣಕ್ಕೆ 1 ಕೋಟಿ ರೂ. ದೇಣಿಗೆ ಕೊಟ್ಟ ನಟ ಅಕ್ಷಯ್ ಕುಮಾರ್

    ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೈನಿಕರ ಜೊತೆಗೆ ಹಾಡಿ ಕುಣಿದು, ಶಾಲೆ ನಿರ್ಮಾಣಕ್ಕೆ ಒಂದು ಕೋಟಿ ರೂ. ದೇಣಿಗೆಯನ್ನು ನೀಡಿದ್ದಾರೆ.

    ಅಕ್ಷಯ್ ಕುಮಾರ್ ಇತ್ತೀಚೆಗೆ ಜಮ್ಮು ಕಾಶ್ಮೀರ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಜನರೊಂದಿಗೆ ಕೆಲ ಕಾಲ ಬೆರೆತರು. ನಂತರ ಸೈನಿಕರ ಜೊತೆ ಸಂವಾದ ನಡೆಸಿದರು. ಅವರಿಗೆ ಉತ್ಸಾಹ ತುಂಬಲು ಹಾಡಿ, ಕುಣಿದರು. ಬಿಎಸ್‍ಎಫ್ ಸೈನಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು. ಬಾಲಿವುಡ್ ನಟನನ್ನು ನೋಡಲು ಸುತ್ತಮುತ್ತಲಿನ ಹಳ್ಳಿಯ ಜನರು ಮುಗಿಬಿದ್ದಿದ್ದರು. ಈ ವೇಳೆ ಅಲ್ಲಿನ ನೀರೂ ಗ್ರಾಮದಲ್ಲಿ ಶಾಲೆ ನಿರ್ಮಾಣಕ್ಕಾಗಿ 1 ಕೋಟಿ ರೂ. ದೇಣಿಗೆ ನೀಡುವ ಮೂಲಕವಾಗಿ ಅಕ್ಷಯ್ ಕುಮಾರ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ:  ಸೋಯಾ ಬೀಜ ಸಿಗದಿದ್ದಕ್ಕೆ ಕೃಷಿ ಅಧಿಕಾರಿಯನ್ನು ಗೇಟಿಗೆ ಕಟ್ಟಿ ಹಾಕಿದ ರೈತರು

    ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ಬ್ಯುಸಿ ಆಗಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಅವರು ನಟಿಸಿರುವ ಸೂರ್ಯವಂಶಿ ಚಿತ್ರದ ಬಿಡುಗಡೆಯು ಲಾಕ್‍ಡೌನ್ ಕಾರಣದಿಂದ ತಡವಾಗಿದೆ. ಬಹುನಿರೀಕ್ಷಿತ ಬೆಲ್ ಬಾಟಂ ಸಿನಿಮಾ ಜುಲೈ 27ರಂದು ಚಿತ್ರಮಂದಿರದಲ್ಲಿಯೇ ರಿಲೀಸ್ ಆಗಲಿದೆ ಎಂದು ಅವರು ಇತ್ತೀಚೆಗೆ ಸುದ್ದಿ ನೀಡಿದ್ದಾರೆ. ಇದಲ್ಲದೆ ಅತರಂಗಿರೇ, ಬಚ್ಚನ್ ಪಾಂಡೆ, ರಾಮ್ ಸೇತು ಮುಂತಾದ ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ತೊಡಗಿಕೊಂಡಿದ್ದಾರೆ. ಇದನ್ನೂ ಓದಿ:  ವಿಶ್ವನಾಥ್ ಬಗ್ಗೆ ಮಾತನಾಡಲ್ಲ, ಶಿಸ್ತು ಕ್ರಮ ತೆಗೆದುಕೊಳ್ಳಬೇಕು – ಹೈಕಮಾಂಡ್‍ಗೆ ಸಿಎಂ ಮನವಿ

    ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂದಿರುತ್ತಾರೆ. ಕಳೆದ ವರ್ಷ ಲಾಕ್‍ಡೌನ್ ಆರಂಭ ಆದಾಗ ಬರೋಬ್ಬರಿ 25 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಅಕ್ಷಯ್ ಕುಮಾರ್ ಎಲ್ಲರಿಗೂ ಮಾದರಿ ಆಗಿದ್ದರು. ಈಗ ಶಾಲೆ ನಿರ್ಮಾಣಕ್ಕಾಗಿ ಒಂದು ಕೋಟಿ ರೂ. ದೇಣಿಗೆ ನೀಡಿದ್ದಾರೆ.

  • ‘ಭಾರತ್ ಕೇ ವೀರ್’ ಗೀತೆ ಲೋಕಾರ್ಪಣೆ -ಒಂದೇ ದಿನದಲ್ಲಿ 12.93 ಕೋಟಿ ರೂ. ಸಂಗ್ರಹ

    ‘ಭಾರತ್ ಕೇ ವೀರ್’ ಗೀತೆ ಲೋಕಾರ್ಪಣೆ -ಒಂದೇ ದಿನದಲ್ಲಿ 12.93 ಕೋಟಿ ರೂ. ಸಂಗ್ರಹ

    ನವದೆಹಲಿ: ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಆರಂಭವಾಗಿರುವ ‘ಭಾರತ್ ಕೇ ವೀರ್’ ಅಭಿಯಾನದ ಅಧಿಕೃತ ಗೀತೆಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆ ಮಾಡಿದ್ದಾರೆ.

    ‘ಭಾರತ್ ಕೇ ವೀರ್’ ಅಭಿಯಾನದ ಗೀತೆಯನ್ನು ಬಾಲಿವುಡ್ ಗಾಯಕ ಕೈಲಾಶ್ ಖೇರ್ ಸಂಗೀತ ಸಂಯೋಜಿಸಿ, ಹಾಡಿದ್ದಾರೆ. ಗೀತೆ ಬಿಡುಗಡೆ ಸಮಾರಂಭದಲ್ಲಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಗೃಹ ಇಲಾಖೆಯ ರಾಜ್ಯ ಸಚಿವರಾದ ಕಿರಣ್ ರಿಜಿಜು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾಗವಹಿಸಿದ್ದರು. ಅಲ್ಲದೇ ಕಾರ್ಯಕ್ರಮದಲ್ಲಿ ಕೇಂದ್ರ ಸಶಸ್ತ್ರ ಪಡೆಯ ಮುಖ್ಯಸ್ಥರು ಹಾಜರಿದ್ದರು. ಗೀತೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಗಣ್ಯರಿಂದ ಒಂದೇ ದಿನದಲ್ಲಿ 12.93 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್, ದೇಶದಲ್ಲಿ ಶಾಂತಿಯನ್ನು ಕಾಪಾಡಲು ಸೈನಿಕರು ತಮ್ಮ ಜೀವವನ್ನು ಮುಡಿಪಾಗಿಟ್ಟಿದ್ದಾರೆ, ಆದರೆ ಅವರ ಕುಟುಂಬಗಳಿಗೆ ನಾವು ಸಾಕಷ್ಟು ಸಹಾಯವನ್ನು ಮಾಡಲು ಸಾಧ್ಯವಾಗಿಲ್ಲ. ಇದು ಸತ್ಯ. ಎಲ್ಲಾ ಹುತಾತ್ಮ ಯೋಧರ ಕುಟುಂಬಗಳು ಕನಿಷ್ಠ ಒಂದು ಕೋಟಿ ರೂ. ಪಡೆಯಬೇಕು ಎಂದು ಹೇಳಿದರು.

    ಈ ಅಭಿಯಾನದಲ್ಲಿ ಸಂಗ್ರಹವಾದ ಹಣವನ್ನು ಹುತಾತ್ಮರ ಕುಟುಂಬಕ್ಕೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಮೀಸಲಿಡಲಾಗುತ್ತದೆ. ಅಲ್ಲದೇ `ಭಾರತ್ ಕೇ ವೀರ್’ ಗೀತೆಯನ್ನು ಡೌನ್‍ಲೋಡ್ ಮಾಡಿಕೊಂಡಾಗ ಬರುವ ಹಣವೂ ಸೈನಿಕರ ಕುಟಂಬದ ಕ್ಷೇಮಾಭಿವೃದ್ಧಿಗಾಗಿ ಬಳಸಲಾಗುತ್ತದೆ. ಮೃತ ಸೈನಿಕರ ಕುಟುಂಬಕ್ಕೆ ಕನಿಷ್ಠ 1 ಕೋಟಿ ರೂ. ನೆರವು ನೀಡುವುದಂತೆ ಮಾಡುವುದೇ ಈ ಅಭಿಯಾನದ ಉದ್ದೇಶವಾಗಿದೆ.