Tag: Activits

  • ಮಾಸ್ಕ್, ಸಾಮಾಜಿಕ ಅಂತರ ಮರೆತು ಧಾರವಾಡದಲ್ಲಿ ಡಿಕೆಶಿಗೆ ಭರ್ಜರಿ ಸ್ವಾಗತ

    ಮಾಸ್ಕ್, ಸಾಮಾಜಿಕ ಅಂತರ ಮರೆತು ಧಾರವಾಡದಲ್ಲಿ ಡಿಕೆಶಿಗೆ ಭರ್ಜರಿ ಸ್ವಾಗತ

    ಧಾರವಾಡ: ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನೇ ಮರೆತು ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭರ್ಜರಿಯಾಗಿ ಸ್ವಾಗತಿಸಲಾಗಿದೆ.

    ಕೆಪಿಸಿಸಿ ಅಧ್ಯಕ್ಷನಾದ ಬಳಿಕ ಮೊದಲ ಬಾರಿಗೆ ಡಿಕೆ ಶಿವಕುಮಾರ್ ಧಾರವಾಡಕ್ಕೆ ಇಂದು ಭೇಟಿ ನೀಡಿದ್ದರು. ತಮ್ಮ ನೆಚ್ಚಿನ ನಾಯಕನನ್ನು ಸ್ವಾಗತಿಸಲು ಧಾರವಾಡದ ನರೇಂದ್ರ ಬೈಪಾಸ್ ಬಳಿ ಕಾರ್ಯಕರ್ತರು ಕಿಕ್ಕಿರಿದು ಸೇರಿದ್ದರು. ಅಲ್ಲದೆ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನೇ ಮರೆತು ಅಭೂತಪೂರ್ವವಾಗಿ ಸ್ವಾಗತ ಕೋರಿದ್ದಾರೆ.

    ಧಾರವಾಡ ಕೃಷಿ ವಿವಿ ಎದುರು ನಡೆದ ಸ್ವಾಗತದ ವೇಳೆ ಡಿಕೆಶಿ ಮುಂದೆ ಕೈ ಕಾರ್ಯಕರ್ತರು ತಮ್ಮ ಅಳಲು ತೋಡಿಕೊಂಡಿದ್ದರೆ. ಯೋಗೀಶ್ ಗೌಡ ಹತ್ಯೆ ಸಿಬಿಐ ತನಿಖೆ ವಿಚಾರ ಹಾಗೂ ತನಿಖೆಯಲ್ಲಿ ನಡೆದಿರುವ ಅನೇಕ ಕೈ ಮುಖಡರು, ಕಾರ್ಯಕರ್ತರ ವಿಚಾರಣೆ ಕುರಿತು ಸಿಬಿಐ ತೊಂದರೆ ನಿವಾರಿಸುವಂತೆ ಕಾರ್ಯಕರ್ತರು ಡಿಕೆಶಿ ಮುಂದೆ ಅಳಲುತೋಡಿಕೊಂಡರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಉಪಚುನಾವಣೆ ಮತ್ತು ಎಂಎಲ್‍ಸಿ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಉಪಚುನಾವಣೆ ಅಭ್ಯರ್ಥಿಗಳು ಫೈನಲ್ ಆಗಬೇಕಿದೆ. ಪದವೀಧರ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿ ಫೈನಲ್ ಆಗಿದೆ. ನೀವೆಲ್ಲ ಮಾಧ್ಯಮಗಳು ಯಾವ ರೀತಿ ಮಾಡು ಅಂತಿರೀ ಹಾಗೆಯೇ ಚುನಾವಣೆ ಮಾಡ್ತೀವಿ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅವರು ಚುನಾವಣೆ ಜೋರಾಗಿ ಮಾಡುತ್ತಾರೆ. ನಾವು ವಿರೋಧ ಪಕ್ಷದಲ್ಲಿದ್ದೇವೆ. ನಮ್ಮ ಡ್ಯುಟಿ ನಾವು ಮಾಡುತ್ತೇವೆ ಎಂದರು.

    ಇದೇ ವೇಳೆ ಡಿ.ಕೆ. ರವಿ ಪತ್ನಿಗೆ ಟಿಕೆಟ್ ವಿಚಾರ ಸಂಬಂಧ ಆರ್.ಆರ್ ನಗರದ ಜವಾಬ್ದಾರಿಯನ್ನು ರಾಮಲಿಂಗಾರೆಡ್ಡಿಯವರಿಗೆ ವಹಿಸಿದ್ದೇವೆ. ಅವರೇ ನೋಡಿ ತೀರ್ಮಾನಿಸಿ ನಮಗೆ ಹೇಳುತ್ತಾರೆ. ಸರ್ಕಾರಕ್ಕೆ ಕಣ್ಣು, ಕವಿ, ಹೃದಯವೂ ಇಲ್ಲ. ಹೀಗೆ ನಾ ಹಿಂದೆಯೇ ಹೇಳಿದ್ದೆ. ಕಳೆದ ಪ್ರವಾಹದ ಸಂತ್ರಸ್ತರಿಗೆ ಇನ್ನೂ ಸರಿಯಾಗಿ ಪರಿಹಾರ ಆಗಿಲ್ಲ. ಅವರ ನೋವು ಯಡಿಯೂರಪ್ಪ ಬಂದು ಭೇಟಿ ಮಾಡಿ ನೋಡಬೇಕು. ಸುಮ್ಮನೆ ಅಲ್ಲೆಲ್ಲೋ ಕುಳಿತು ಮಾತನಾಡಿದ್ರೆ ಆಗುತ್ತಾ ಎಂದು ಪ್ರಶ್ನಿಸಿದರು.

  • ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ- ಸೂರಜ್ ರೇವಣ್ಣ ಎ1 ಆರೋಪಿಯಾದ್ರೂ ಬಂಧನವಿಲ್ಲ

    ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ- ಸೂರಜ್ ರೇವಣ್ಣ ಎ1 ಆರೋಪಿಯಾದ್ರೂ ಬಂಧನವಿಲ್ಲ

    ಹಾಸನ: ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ಎ1 ಆರೋಪಿಯಾದರು ಬಂಧಿಸಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆರೋಪ ಮಾಡಿದ್ದಾರೆ.

    ಮಂಗಳವಾರ ರಾತ್ರಿ ಉಪಚುನಾವಣೆಗೆ ಹಣ ಹಂಚಲು ಬಂದಿದ್ದಾರೆ ಎಂದು ಹಾಸನದ ಚನ್ನರಾಯಪಟ್ಟಣ ತಾ. ಕೆ.ಆರ್ ಪೇಟೆ ಗಡಿಭಾಗದ ನಂಬಿಹಳ್ಳಿ ಗ್ರಾಮದಲ್ಲಿ ಸೂರಜ್ ರೇವಣ್ಣ ಮತ್ತು ಅವರ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು.

    ಈ ವಿಚಾರವಾಗಿ ಸೂರಜ್ ರೇವಣ್ಣ ಸೇರಿದಂತೆ ಏಳು ಜನರ ಮೇಲೆ ಬಿಜೆಪಿ ಕಾರ್ಯಕರ್ತರು ಚನ್ನರಾಯಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ. ಆದರೆ ದೂರು ನೀಡಿ 24 ಗಂಟೆ ಕಳೆದರೂ ಎ1 ಆರೋಪಿ ಬಂಧನವಾಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಈ ಹಲ್ಲೆಗೆ ಸಂಬಂಧಿಸಿದ ವಿಡಿಯೋ ಈಗ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ನಾನು ಕಳೆದ 20-30 ವರ್ಷಗಳಿಂದ ಜೆಡಿಎಸ್ ಕಾರ್ಯಕರ್ತನಾಗಿ ದುಡಿದ್ದೇನೆ. ಈಗ ಅವರು ಮಾತು ಕೇಳಲಿಲ್ಲ ಎಂದು ನನ್ನ ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಇವರು ಜನಪ್ರತಿನಿಧಿಗಳ ಅಥವಾ ರೌಡಿಗಳಾ..?. ನಮ್ಮ ಮೇಲೆ ಹಲ್ಲೆ ಮಾಡಿ ರೌಡಿಸಂ ನಡೆಸುತ್ತಿದ್ದಾರೆ. ಪ್ರಾಣ ತೆಗೆಯುವುದಾದರೆ ಎದುರಿಗೆ ಬಂದು ಪ್ರಾಣ ತೆಗೆಯಬೇಕೆಂದು ಎಂದು ವಿಡಿಯೋದಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಏನಿದು ಘಟನೆ?
    ಮಂಗಳವಾರ ಬೆಂಗಳೂರಿನ ವಿಜಯನಗರ ಮೂಲದ ರವೀಂದ್ರ ಎಂಬವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಂಬಿಹಳ್ಳಿ ಗ್ರಾಮದ ಸ್ನೇಹಿತನ ಮನೆಗೆ ತನ್ನ ಸಹಪಾಠಿಗಳೊಂದಿಗೆ ಬಂದಿದ್ದರು. ರವೀಂದ್ರ ಬಂದಿರುವ ವಿಚಾರವನ್ನ ಜೆಡಿಎಸ್ ಕಾರ್ಯಕರ್ತರು ಸೂರಜ್ ರೇವಣ್ಣನವರಿಗೆ ದೂರವಾಣಿ ಮುಖಾಂತರ ತಿಳಿಸಿದ್ದು, ರವೀಂದ್ರ ಕೆಆರ್ ಪೇಟೆಯ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಪರವಾಗಿ ಹಣ ಹಂಚಲು ಬಂದಿದ್ದಾರೆಂಬ ಅನುಮಾನದ ಮೇಲೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿಯ ಕೆಲವು ಕಾರ್ಯಕರ್ತರಿಗೆ ಮತ್ತು ಹೊರಬಂದಿದ್ದ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದರು.

    ಹಲ್ಲೆಗೊಳಗಾದ ಮತ್ತು ಗಂಭೀರವಾಗಿ ಗಾಯಗೊಂಡ ಮಾಜಿ ಬಿಬಿಎಂಪಿ ಕಾರ್ಪೊರೇಟರ್ ಸಹಪಾಠಿಗಳಾದ ಆನಂದ್ ಮತ್ತು ಸಂತೋಷ್ ಅವರನ್ನು ಬೆಂಗಳೂರಿನ ಕೊಲಂಬಿಯಾ ಏಪ್ಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ. ಪರಿಸ್ಥಿತಿ ಉಲ್ಬಣಗೊಂಡ ಹಿನ್ನೆಲೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಿವಾಸ್ ಸೆಪಟ್ ಖುದ್ದು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಸಫಲತೆ ಕಂಡಿದ್ದರೂ, ಕೈಮೀರಿ ಹೋಗಿದ್ದರಿಂದ ಡಿಎಆರ್ ತುಕಡಿಯನ್ನು ನಿಯೋಜಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿದ್ದ ಮಾಜಿ ಸಚಿವ ಹೆಚ್ ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣನೇ ಕಾರಣ ಎಂಬುದು ಬಿಜೆಪಿ ಕಾರ್ಯಕರ್ತರ ಆರೋಪವಾಗಿದೆ. ಪರಿಸ್ಥಿತಿ ನಿಯಂತ್ರಣಗೊಳ್ಳುವ ತನಕ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿರೋ ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

  • ಪತ್ನಿ ಗೆಲುವು ಸಾಧಿಸಿದಕ್ಕೆ ಪತಿಗೆ 2 ಬಿಂದಿಗೆ ಹಾಲು ಸುರಿದು ಅಭಿಷೇಕ: ವಿಡಿಯೋ

    ಪತ್ನಿ ಗೆಲುವು ಸಾಧಿಸಿದಕ್ಕೆ ಪತಿಗೆ 2 ಬಿಂದಿಗೆ ಹಾಲು ಸುರಿದು ಅಭಿಷೇಕ: ವಿಡಿಯೋ

    ಮೈಸೂರು: ಸಾಂಸ್ಕೃತಿಕ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಅಂದಾಭಿಮಾನ ಪ್ರದರ್ಶಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ನಿ ಗೆಲುವು ಸಾಧಿಸಿದ ಕಾರಣ ಪತಿಗೆ ಕಾರ್ಯಕರ್ತರು 2 ಬಿಂದಿಗೆ ಹಾಲು ಸುರಿದು ಅಭಿಷೇಕ ಮಾಡಿದ್ದಾರೆ.

    ಮಹಾನಗರ ಪಾಲಿಕೆ 36ನೇ ವಾರ್ಡ್ ಸದಸ್ಯೆಯಾಗಿ ರುಕ್ಮಿಣಿ ಆಯ್ಕೆಯಾಗಿದ್ದಾರೆ. ರುಕ್ಷ್ಮಿಣಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಪತಿ ಮಾದೇಗೌಡರಿಗೆ ಅಭಿಮಾನಿಗಳು 2 ಬಿಂದಿಗೆ ಹಾಲಿನಲ್ಲಿ ಅಭಿಷೇಕ ಮಾಡಿದ್ದಾರೆ. ಮಾದೇಗೌಡ ಕೂಡ ಶ್ರೀರಾಂಪುರ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದಾರೆ. ಯರಗನಹಳ್ಳಿ ವಾರ್ಡ್‍ನ ಕೃಷ್ಣ ದೇವಸ್ಥಾನದ ಬಳಿ ಹಾಲಿನ ಅಭಿಷೇಕ ಮಾಡಿದ್ದಾರೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ನೋಡಿ ಎಲ್ಲರೂ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಜನ ಕುಡಿಯುವ ಹಾಲನ್ನು ಅಭಿಷೇಕ ಮಾಡಿಕೊಂಡಿರುವುದು ನಾಚಿಕೆಗೇಡಿನ ವಿಷಯ. ಅಧಿಕಾರ ಸಿಕ್ಕ ತಕ್ಷಣ ಈ ರೀತಿ ಮಾಡುವುದು ಸರಿಯಲ್ಲ. ಅಭಿಮಾನಿಗಳು ಈ ರೀತಿ ಮಾಡುವುದನ್ನು ಅವರು ತಡೆಯಬಹುದು. ಆದರೆ ಅವರು ತಮ್ಮ ಕಾರ್ಯಕರ್ತರಿಗೆ ಬುದ್ಧಿ ಮಾತನ್ನು ಹೇಳಲಿಲ್ಲ ಎಂದು ಜನರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=bZRpM8QJCOo

  • ಮೌಲ್ವಿಯೊಬ್ಬರ ಮೇಲೆ ಸಂಘಟನೆ ಕಾರ್ಯಕರ್ತರಿಂದ ಹಲ್ಲೆ

    ಮೌಲ್ವಿಯೊಬ್ಬರ ಮೇಲೆ ಸಂಘಟನೆ ಕಾರ್ಯಕರ್ತರಿಂದ ಹಲ್ಲೆ

    ಶಿವಮೊಗ್ಗ: ಇಲ್ಲಿನ ಟಿಪ್ಪು ನಗರದಲ್ಲಿ ಮೌಲ್ವಿಯೊಬ್ಬರ ಮೇಲೆ ಸಂಘಟನೆಯೊಂದರ ಕಾರ್ಯಕರ್ತರು ಮಂಗಳವಾರ ರಾತ್ರಿ ದಾಳಿ ಮಾಡಿದ್ದಾರೆ. ಟಿಪ್ಪು ನಗರದಲ್ಲಿನ ಖುಬಾ ಮಸೀದಿ ಮೌಲ್ವಿ ಮಹ್ಮದ್ ತೌಖೀರ್ ರಝಾ ಹಲ್ಲೆಗೆ ಒಳಗಾದ ಮೌಲ್ವಿ.

    ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ದೂರು ನೀಡಲು ಹೋದಾಗ ಜಿಯಾವುಲ್ಲಾ ಎಂಬವರ ಮೇಲೂ ಈ ಗುಂಪು ಹಲ್ಲೆ ಮಾಡಿದೆ. ಹೊರಗಡೆ ಬನ್ನಿ ಎಂದು ಮಸೀದಿಯಿಂದ ಕರೆಸಿಕೊಂಡು ನಡು ರಸ್ತೆಯಲ್ಲೇ ಓಡಾಡಿಸಿಕೊಂಡು ರಾಡು, ದೊಣ್ಣೆ ಇತರೆ ಆಯುಧಗಳಿಂದ ಹಲ್ಲೆ ಮಾಡಲಾಗಿದೆ. ಗಾಯಾಳು ಮೌಲ್ವಿ ಹಾಗೂ ಜಿಯಾವುಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಶಿವಮೊಗ್ಗ ಎಂಎಲ್‍ಎ ಪ್ರಸನ್ನ ಕುಮಾರ್ ಅವರ ಬೆಂಬಲದಿಂದ ಎಸ್ ಕೆಪಿ ಎಂಬ ಸಂಸ್ಥೆಯ ಅನ್ವರ್ ಎಂಬಾತ ಈ ಕೃತ್ಯ ಮಾಡಿಸಿದ್ದಾನೆ ಎನ್ನಲಾಗಿದೆ. ಶಿವಮೊಗ್ಗದಲ್ಲಿ ಇರುವ ಮದರಸಾಗಳು ಹಾಗೂ ಮಸೀದಿಗಳ ಮೇಲೆ ಹಿಡಿತ ಸಾಧಿಸಲು ಅನ್ವರ್ ಇಂಥ ಕೃತ್ಯಕ್ಕೆ ಕೈ ಹಾಕಿದ್ದಾನೆ. ಕುರಾನ್, ಷರಿಯತ್ ಗೆ ಮಾತ್ರ ಅನುಸರಿಸುವ ಸುನ್ನಿ ಪಂಗಡದಲ್ಲಿ ಬಾಬಾಗಳ ಬಗ್ಗೆಯೂ ಹೇಳುವಂತೆ ಒತ್ತಡ ಹೇರಿದ್ದರು. ಈ ಒತ್ತಡಕ್ಕೆ ಮಣಿದಿರಲಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಇಂದು ಮೌಲ್ವಿ ಮಹ್ಮದ್ ತೌಖೀರ್ ಅವರ ಮೇಲೆ ಹಲ್ಲೆ ನಡೆದಿದೆ ಎಂಬುದಾಗಿ ತಿಳಿದಬಂದಿದೆ.

    ಈ ಹಲ್ಲೆ ಖಂಡಿಸಿ ಇಂದು ಸಂಘಟನೆಗಳು ಪ್ರತಿಭಟನೆ ನಡೆಸಲು ನಿರ್ಧರಿಸಿವೆ.