Tag: Acting School

  • ತಮ್ಮ ನೆಚ್ಚಿನ ಆ್ಯಕ್ಟಿಂಗ್ ಸ್ಕೂಲ್ ಅಡ್ರೆಸ್ ಹೇಳಿದ ಕಾಮಿಡಿ ಕಿಲಾಡಿ ನಯನಾ

    ತಮ್ಮ ನೆಚ್ಚಿನ ಆ್ಯಕ್ಟಿಂಗ್ ಸ್ಕೂಲ್ ಅಡ್ರೆಸ್ ಹೇಳಿದ ಕಾಮಿಡಿ ಕಿಲಾಡಿ ನಯನಾ

    ಬೆಂಗಳೂರು: ಕಾಮಿಡಿ ಕಿಲಾಡಿ ಖ್ಯಾತಿಯ ಹಾಸ್ಯ ನಟಿ ನಯನಾ ತಮ್ಮ ನೆಚ್ಚಿನ ಆ್ಯಕ್ಟಿಂಗ್ ಸ್ಕೂಲ್ ವಿಳಾಸವನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಶನಿವಾರ ಪಬ್ಲಿಕ್ ಟಿವಿ ಫೇಸ್‍ಬುಕ್ ಪೇಜ್‍ನಲ್ಲಿ ಲೈವ್ ಬಂದಿದ್ದ ನಯನಾ ಅಭಿಮಾನಿಗಳ ಜೊತೆ ಹಲವು ವಿಷಯಗಳನ್ನು ಹಂಚಿಕೊಂಡರು. ಅದೇ ರೀತಿ ಅಭಿಮಾನಿಗಳಿಗೆ ಪ್ರಶ್ನೆಗಳಿಗೆ ಉತ್ತರಿಸುತ್ತಾ ಕೊರೊನಾ ರಜೆಯನ್ನು ಹೇಗೆ ಕಳೆಯುತ್ತಿದ್ದೇವೆ ಎಂಬುದನ್ನು ರಿವೀಲ್ ಮಾಡಿದ್ರು. ಇದೇ ವೇಳೆ ಓರ್ವ ಅಭಿಮಾನಿ, ಮೇಡಂ ನಮಗೆ ಯಾವುದಾರರೂ ಒಳ್ಳೆಯ ಆ್ಯಕ್ಟಿಂಗ್ ಸ್ಕೂಲ್ ಅಡ್ರೆಸ್ ಹೇಳಿ ಅಂತ ಪ್ರಶ್ನಿಸಿದರು.

    https://www.facebook.com/publictv/videos/544647466230264/

    ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ನಯನಾ, ನಮ್ಮ ಮನೆಯೇ ನಮಗೆ ಒಳ್ಳೆಯ ಆ್ಯಕ್ಟಿಂಗ್ ಸ್ಕೂಲ್. ಮನೆಯಲ್ಲಿ ನೀವು ಎಲ್ಲ ರೀತಿ ಭಾವನೆಗಳು ನೋಡಬಹುದು. ಸಂತೋಷ, ನಗು, ದುಃಖ ಎಲ್ಲವೂ ನೀವು ಚೆನ್ನಾಗಿ ಗಮನಿಸಿದ್ರೆ ಮನೆಯೇ ನಮಗೆ ನಟನಾ ಶಾಲೆ ಆಗುತ್ತೆ. ಇದು ನನ್ನ ವೈಯಕ್ತಿಯ ಅಭಿಪ್ರಾಯ. ಕಾರಣ ನಾನು ಸಹ ಎಲ್ಲಿಯೂ ತರಬೇತಿ ಪಡೆಯದೇ ಬಂದವಳು. ಹಾಗಾಗಿ ಇದು ನನ್ನ ಅನುಭವದ ಮಾತು ಎಂದು ಸ್ಪಷ್ಟಪಡಿಸಿದರು.

    https://www.facebook.com/publictv/videos/958115481310815/

    ಇನ್ನು ಕೆಲ ಅಭಿಮಾನಿಗಳು ನಿಮ್ಮನ್ನು ಹೆಚ್ಚು ಬೆಳ್ಳಿ ಪರದೆ ನೋಡಲು ಇಷ್ಟಪಡುತ್ತೇವೆ. ಕೆಲವರು ಒಡೆಯ, ಸೀತಾರಾಮಕಲ್ಯಾಣ ಚಿತ್ರದಲ್ಲಿಯ ನಟನೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ರು. ಬಹುತೇಕ ನಯಾನರನ್ನು ಜೂನಿಯರ್ ಉಮಾಶ್ರೀ ಎಂದೇ ಕರೆದರು. ಇದೇ ವೇಳೆ ಕೆಲ ಕಾಮಿಡಿ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳನ್ನು ನಯನಾ ರಂಜಿಸಿದ್ರು.