Tag: ACP

  • ಎಣ್ಣೆ ಸೀಜ್ ಮಾಡಿದ್ದಕ್ಕೆ ಎಸಿಪಿಯೇ ಅಮಾನತು

    ಎಣ್ಣೆ ಸೀಜ್ ಮಾಡಿದ್ದಕ್ಕೆ ಎಸಿಪಿಯೇ ಅಮಾನತು

    ಬೆಂಗಳೂರು: ಸರ್ಕಾರಿ ವಾಹನದಲ್ಲಿ ಸಾಗಿಸುತ್ತಿದ್ದ ಮದ್ಯವನ್ನು ಸೀಜ್ ಮಾಡಿದ್ದ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಎಸಿಪಿಯನ್ನೇ ಅಮಾನತು ಮಾಡಲಾಗಿದೆ.

    ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಎಸಿಪಿ ವಾಸು ಅವರನ್ನು ಅಡಿಷನಲ್ ಕಮಿಷನರ್ ಮುರುಗನ್ ಅಮಾನತುಗೊಳಿಸಿದ್ದಾರೆ. ತನ್ನ ಮಾತಿಗೆ ಬೆಲೆ ಕೊಟ್ಟಿಲ್ಲವೆಂದು ನನ್ನನ್ನು ಅಡಿಷನಲ್ ಕಮಿಷನರ್ ಮುರುಗನ್ ಸಸ್ಪೆಂಡ್ ಮಾಡಿದ್ದಾರೆ ಎಂದು ಎಸಿಪಿ ವಾಸು ಆರೋಪಿಸಿದ್ದಾರೆ.

    ಅಡಿಷನಲ್ ಕಮಿಷನರ್ ಮುರುಗನ್

    ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ತಡೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಕೊರೊನಾ ಸೋಂಕಿನಿಂದ ಜನರನ್ನು ಪಾರು ಮಾಡುವಲ್ಲಿ ವೈದ್ಯರು, ಪೊಲೀಸರು ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪೊಲೀಸರು ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದಕ್ಕೆ ಅವರಿಗೆ ಸಿಕ್ಕ ಬಹುಮಾನ ಅಮಾನತು ಎಂಬ ಆರೋಪ ಕೇಳಿ ಬಂದಿದೆ.

    ಏಪ್ರಿಲ್ 11ರಂದು ಜಾಗೃತಿ ದಳದ ವಾಹನದಲ್ಲಿದ್ದ 100ಕ್ಕೂ ಹೆಚ್ಚು ದುಬಾರಿ ಬೆಲೆಯ ಮದ್ಯ ಬಾಟಲಿಗಳನ್ನು ಬೆಟ್ಟದದಾಸನಪುರದ ಬಳಿ ಸೀಜ್ ಮಾಡಲಾಗಿತ್ತು. ಆ ಮದ್ಯವನ್ನು ಚಾಲಕ ಗೋಪಿ ಎಂಬವರು ಅಡಿಷನಲ್ ಕಮಿಷನರ್ ಮುರುಗನ್ ಅವರಿಗೇ ಸರಬರಾಜು ಮಾಡುತ್ತಿದ್ದರಂತೆ. ಚಾಲಕ ಗೋಪಿ ವಿರುದ್ಧ ಎಫ್‍ಐಆರ್ ದಾಖಲಾಗಿದ್ದರು. ಮುರುಗನ್ ಅವರು ಜಾಮೀನು ಕೊಟ್ಟು ಬಿಡುಗೊಡೆಗೊಳಿಸಿದ್ದಾರೆ. ನಂತರ ಕೇಸನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ ನನಗೆ ಸಸ್ಪೆಂಡ್ ಶಿಕ್ಷೆ ಅಂತ ಎಸಿಪಿ ವಾಸು ಆರೋಪಿಸಿದ್ದಾರೆ.

  • ಮೈಸೂರು ಎಸಿಪಿ ಸಹೋದರಿ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ನಾಲ್ವರ ಬಂಧನ

    ಮೈಸೂರು ಎಸಿಪಿ ಸಹೋದರಿ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ನಾಲ್ವರ ಬಂಧನ

    – ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ
    – ಕೊಲೆಗೆ ಸುಪಾರಿ ಪಡೆದಿದ್ದ ಗ್ಯಾಂಗ್

    ರಾಮನಗರ: ಚನ್ನಪಟ್ಟಣದಲ್ಲಿ ಹಾಡಹಗಲೇ ನಡೆದಿದ್ದ ಮೈಸೂರು ಎಸಿಪಿ ಸಹೋದರಿ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

    ಹಾಸನದ ರಮೇಶ್ ಅಲಿಯಾಸ್ ಜಾಕಿ, ಬೆಂಗಳೂರಿನ ಕೂಡ್ಲುಗೇಟ್‍ಯ ನೆಲ್ಸನ್, ಪ್ರಜ್ವಲ್ ಹಾಗೂ ಮಧು ಬಂಧಿತ ಆರೋಪಿಗಳು. ಚನ್ನಪಟ್ಟಣದ ಕೆ.ಎಚ್.ಬಿ. ಕಾಲೋನಿಯ ಉತ್ತೇಶ್ ಎಂಬವರ ಮನೆಗೆ ಮಾರ್ಚ್ 8ರಂದು ನುಗ್ಗಿದ್ದ ಆರೋಪಿಗಳು ಉತ್ತೇಶ್ ಅವರ ಪತ್ನಿ, ಮೈಸೂರು ಎಸಿಪಿ ಗೋಪಾಲ್ ಸೋದರಿ ಸುವರ್ಣ ಹಾಗೂ ಮಗಳನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇದನ್ನೂ ಓದಿ: ತಾಯಿ-ಮಗಳ ಕುತ್ತಿಗೆ ಲಾಂಗ್ ಇಟ್ಟು ದರೋಡೆ, ಎಸಿಪಿ ಫೋಟೋ ನೋಡಿ ಪರಾರಿ

    ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಒಂದು ಮಾರುತಿ ಸ್ವಿಫ್ಟ್ ಡಿಸೈರ್ ಕಾರು, ಮಾರಕಾಸ್ತ್ರಗಳು, 4.10 ಲಕ್ಷ ರೂ. ಮೌಲ್ಯದ 120 ಗ್ರಾಂ ಚಿನ್ನಾಭರಣ ಹಾಗೂ 10 ಸಾವಿರ ರೂ.ವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳ ವಿಚಾರಣೆ ವೇಳೆ ಚನ್ನಪಟ್ಟಣದ ಎರಡು, ಬೆಂಗಳೂರಿನ ಪರಪ್ಪನ ಅಗ್ರಹಾರದ ಒಂದು ಪ್ರಕರಣ ಬೆಳಕಿಗೆ ಬಂದಿವೆ.

    ಆರೋಪಿಗಳು ದರೋಡೆ ಮಾಡುವುದಕ್ಕೆ ಬಂದವರೇ ಅಲ್ಲ. ಬದಲಿಗೆ ಸುಪಾರಿ ಪಡೆದು ಬೆಂಗಳೂರಿನಲ್ಲಿ ನಡೆದ ರೌಡಿ ಶೀಟರ್ ಲಕ್ಷ್ಮಣನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಬಂದಿದ್ದರು. ಇವರ ಟಾರ್ಗೆಟ್ ಸಿಗದಿದ್ದ ಹಿನ್ನೆಲೆಯಲ್ಲಿ ಅಮಾಯಕರ ಮನೆಗೆ ನುಗ್ಗಿದ್ದರು.

    ರೌಡಿ ಲಕ್ಷ್ಮಣನ ಮರ್ಡರ್ ವೇಳೆ ಆರೋಪಿ ಕ್ಯಾಟ್‍ಗೆ ಚನ್ನಪಟ್ಟಣದ ರೌಡಿ ಶೀಟರ್ ಧ್ರುವ ಫೈನಾನ್ಸ್ ಮಾಡಿದ್ದ. ಇದು ಲಕ್ಷ್ಮಣನ ಕೊಲೆಯ ಬಳಿಕ ವಿಚಾರ ಬೆಳಕಿಗೆ ಬಂದಿತ್ತು. ಈ ವಿಚಾರವಾಗಿ ಪರಪ್ಪನ ಅಗ್ರಹಾರದಿಂದಲೇ ಆರೋಪಿಗಳಿಗೆ ಲಕ್ಷ್ಮಣನ ಶಿಷ್ಯ ಸುಪಾರಿ ನೀಡಿದ್ದ ಎಂಬುದು ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

    ಪ್ರಕರಣದ ಪ್ರಮುಖ ಆರೋಪಿ ರಮೇಶ್ ಅಲಿಯಾಸ್ ಜಾಕಿ ಅಲಿಯಾಸ್ ಬ್ಲಾಕಿನನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಚಿಕ್ಕಮಳೂರು ಸಮೀಪ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆಗ ಆತ್ಮ ರಕ್ಷಣೆಗಾಗಿ ಚನ್ನಪಟ್ಟಣ ಗ್ರಾಮಾಂತರ ವೃತ್ತ ನಿರೀಕ್ಷಕ ವಸಂತ್ ಕಾಲಿಗೆ ಗುಂಡಿ ಹಾರಿಸಿದ್ದರು. ಸದ್ಯಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಮೇಶ್ ಚಿಕಿತ್ಸೆ ಪಡೆಯುತ್ತಿದ್ದಾನೆ.

  • ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಎಸಿಪಿ ಟಿಕ್‍ಟಾಕ್ ವಿಡಿಯೋ ವೈರಲ್

    ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಎಸಿಪಿ ಟಿಕ್‍ಟಾಕ್ ವಿಡಿಯೋ ವೈರಲ್

    ಗಾಂಧಿನಗರ: ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಗುಜರಾತ್ ಎಸಿಪಿ ಈಗ ಖುದ್ದು ಟಿಕ್‍ಟಾಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ಬಗ್ಗೆ ಎಸಿಪಿ ಮಂಜಿತ ವಂಜಾರ ಸ್ಪಷ್ಟನೆ ನೀಡಿದ್ದಾರೆ.

    ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳಾ ಪೇದೆ ಟಿಕ್‍ಟಾಕ್ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದು ವಿವಾದ ಆಗುತ್ತಿದ್ದಂತೆ ಎಸಿಪಿ ಮಂಜಿತ ವಂಜಾರ ಅವರನ್ನು ಸಸ್ಪೆಂಡ್ ಮಾಡಿದ್ದರು. ಈಗ ಎಸಿಪಿ ಮಂಜಿತ ವಂಜಾರ ಅವರ ಟಿಕ್‍ಟಾಕ್ ವಿಡಿಯೋ ವೈರಲ್ ಆಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಡಿಯೋ ನನ್ನ ಸ್ನೇಹಿತರ ಖಾತೆಯಿಂದ ಒಂದು ವರ್ಷದ ಹಿಂದೆ ಅಪ್ಲೋಡ್ ಆಗಿದೆ. ಇಬ್ಬರು ಮಹಿಳಾ ಪೇದೆ ಪೊಲೀಸ್ ಠಾಣೆಯೊಳಗೆ ಟಿಕ್‍ಟಾಕ್ ವಿಡಿಯೋ ಮಾಡಿದ್ದರು. ಅಲ್ಲದೆ ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರನ್ನು ಅಮಾನತುಗೊಳಿಸಿಲ್ಲ. ಬದಲಾಗಿ ಕೆಲಸದ ಸಮಯದಲ್ಲಿ ಅವರು ಯೂನಿಫಾರಂ ಧರಿಸದ್ದಕ್ಕೆ ಅವರನ್ನು ಸಸ್ಪೆಂಡ್ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ವಿಡಿಯೋ ವೈರಲ್ ಆಗಿದ್ದಕ್ಕೆ ಎಸಿಪಿ ಮಂಜಿತ ವಂಜಾರ ಅವರು, ನಾನು ಒಬ್ಬ ಯುವ ಮಹಿಳಾ ಪೊಲೀಸ್ ಅಧಿಕಾರಿಯಾಗಿ ನನಗೆ ಸಾಮಾಜಿಕ ಜಾಲತಾಣ ಉಪಯೋಗಿಸಲು ನನಗೆ ಹಕ್ಕಿದೆ. ಅಲ್ಲದೆ ನಾನು ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಂ, ಸ್ನ್ಯಾಪ್‍ಚಾಟ್ ಹಾಗೂ ಟಿಕ್‍ಟಾಕ್ ಬಳಸುತ್ತೇನೆ. ಸಾಮಾಜಿಕ ಜಾಲತಾಣದಿಂದ ನನಗೆ ಅಪರಾಧಗಳನ್ನು ಕಂಡು ಹಿಡಿಯಲು ಸಹಾಯವಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

  • ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ದೌರ್ಜನ್ಯ

    ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ದೌರ್ಜನ್ಯ

    ಚಿಕ್ಕಬಳ್ಳಾಪುರ: ಪುರಸಭೆ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಎಸಿಪಿ ದರ್ಪ ತೋರಿದ್ದಾರೆ.

    ದೇವನಹಳ್ಳಿ ಎಸಿಪಿ ಮುರುಳಿಧರ್ ದರ್ಪ ತೋರಿದವರಾಗಿದ್ದು, ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಮುರುಳಿಧರ್ ಅವರು ದೇವನಹಳ್ಳಿ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ.

    ಮಾಧ್ಯಮ ಮಾಹಿತಿ ಕೇಂದ್ರದಲ್ಲಿ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದ ವರದಿಗಾರರನ್ನು ತಳ್ಳಿ ಎಸಿಪಿ ದರ್ಪ ಮೆರೆದಿದ್ದಾರೆ. ವರದಿ ಮಾಡಲು ಬಂದಿದ್ದ ಮಾಧ್ಯಮ ವರದಿಗಾರರನ್ನು ಬಂಧಿಸಿ ಜೈಲುಗಟ್ಟಿಸುತ್ತೇನೆ ಎಂದು ಅವಾಜ್ ಹಾಕಿದ್ದಾರೆ.

    ಅಲ್ಲದೆ ಚುನಾವಣಾಧಿಕಾರಿಗಳೇ ಮಾಧ್ಯಮ ಮಾಹಿತಿ ಕೇಂದ್ರ ತೆರೆದಿದ್ದರೂ ಎಣಿಕೆ ಕೇಂದ್ರದಿಂದ ಹೊರಹೋಗಿ ಎಂದು ದೌರ್ಜನ್ಯ ನಡೆಸಿದ್ದಾರೆ. ಜನ ಪ್ರತಿನಿಧಿಗಳು ಮತ್ತು ಮುಖಂಡರನ್ನು ತಡೆಯಲಾಗದೆ ಎಸಿಪಿ ಮಾಧ್ಯಮಗಳ ಮೇಲೆ ದರ್ಪ ತೋರಿದ್ದಾರೆ.

  • ಲೈಂಗಿಕ ದೌರ್ಜನ್ಯವಾದ ಯುವತಿ ಜೊತೆ ಎಸಿಪಿ ಅನುಚಿತ ವರ್ತನೆ- ಎಲ್ಲಿ ಮುಟ್ಟಿದ, ಏನು ಮಾಡಿದ? ಎಂದೆಲ್ಲಾ ಪ್ರಶ್ನೆ

    ಲೈಂಗಿಕ ದೌರ್ಜನ್ಯವಾದ ಯುವತಿ ಜೊತೆ ಎಸಿಪಿ ಅನುಚಿತ ವರ್ತನೆ- ಎಲ್ಲಿ ಮುಟ್ಟಿದ, ಏನು ಮಾಡಿದ? ಎಂದೆಲ್ಲಾ ಪ್ರಶ್ನೆ

    ಬೆಂಗಳೂರು: ಲೈಂಗಿಕ ದೌರ್ಜನ್ಯವಾದ ಯುವತಿಯ ಜೊತೆ ಎಸಿಪಿ ಅನುಚಿತವಾಗಿ ವರ್ತನೆ ಮಾಡಿದ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.

    ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಯುವತಿ ದೂರು ನೀಡಲು ಹೋದಾಗ ಎಸಿಪಿ, ಎಲ್ಲಿ ಮುಟ್ಟಿದ? ಏನು ಮಾಡಿದ? ಎಂದೆಲ್ಲಾ ಪ್ರಶ್ನೆ ಕೇಳಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದೂರು ದಾಖಲಿಸಿಕೊಳ್ಳಬೇಕು ಎಂದರೆ ಅದನ್ನೆಲ್ಲಾ ಹೇಳಬೇಕು ಎಂದ ಎಸಿಪಿ ರವಿಪ್ರಸಾದ್ ಯುವತಿಗೆ ಹೇಳಿದ್ದಾರೆ ಎನ್ನಲಾಗಿದೆ.

    ಯಶವಂತಪುರ ಸಬ್ ಡಿವಿಷನ್ ಎಸಿಪಿ ರವಿಪ್ರಸಾದ್ ಅನುಚಿತ ವರ್ತನೆ ನಡೆಸಿದ್ದು, ರವಿಪ್ರಸಾದ್‍ಗೆ ಸೋಲದೇವನಹಳ್ಳಿ ಇನ್ಸ್ ಪೆಕ್ಟರ್ ವೆಂಕಟೇಶ್ ಗೌಡ ಸಾಥ್ ನೀಡಿದ್ದಾರೆ ಎಂದು ಹೇಳಲಾಗಿದೆ.

    ಈ ಬಗ್ಗೆ ಸಂತ್ರಸ್ತ ಯುವತಿ ರವಿಪ್ರಸಾದ್ ಮತ್ತು ವೆಂಕಟೇಶ್ ಗೌಡ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

     

  • ಎಸಿಪಿ ಹಲ್ಲೆ ಪ್ರಕರಣ- ಹೋಟೆಲ್ ಮಾಲೀಕನಿಗೆ ಭೂಗತಪಾತಕಿ ಬೆದರಿಕೆ

    ಎಸಿಪಿ ಹಲ್ಲೆ ಪ್ರಕರಣ- ಹೋಟೆಲ್ ಮಾಲೀಕನಿಗೆ ಭೂಗತಪಾತಕಿ ಬೆದರಿಕೆ

    ಬೆಂಗಳೂರು: ಹೋಟೆಲ್ ಮಾಲೀಕನ ಮೇಲೆ ಎಸಿಪಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ.

    ಹಲ್ಲೆಗೆ ಒಳಗಾಗಿದ್ದ ಹೋಟೆಲ್ ಮಾಲೀಕ ರಾಜೀವ್ ಶೆಟ್ಟಿಗೆ ಭೂಗತ ಪಾತಕಿಯ ಹೆಸರಲ್ಲಿ ಧಮ್ಕಿ ಬಂದಿದೆ. ಅಂಡರ್‍ವಲ್ರ್ಡ್ ಡಾನ್ ರವಿ ಪೂಜಾರಿ ಹೆಸರಲ್ಲಿ ಶೆಟ್ಟಿ ಲಂಚ್ ಹೋಮ್ ಮಾಲೀಕನಿಗೆ ಬೆದರಿಕೆ ಕರೆ ಬಂದಿದೆ.

    ನಾನು ಆಸ್ಟ್ರೇಲಿಯಾದಿಂದ ರವಿ ಪೂಜಾರಿ ಮಾತನಾಡ್ತಾ ಇದ್ದೀನಿ. ಇನ್ನು ಅರ್ಧ ಗಂಟೆಯಲ್ಲಿ ಹೋಟೆಲ್ ಬಾಗಿಲು ಬಂದ್ ಮಾಡ್ಬೇಕು. ಇಲ್ದೇ ಇದ್ರೆ ನೀನು ಕೊಲೆಯಾಗಿ ಹೋಗ್ತೀಯಾ. ನಾನ್ಯಾರು ಅಂತ ಗೊತ್ತು ಅಲ್ವಾ. ಗೋಲಿ ಹೊಡಿಬೇಕಾ ನಿಂಗೆ ಎಂದು ಕರೆ ಮಾಡಿ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ.

    ಹಲ್ಲೆ ನಡೆಸಿದ ಎಸಿಪಿ ಮಂಜುನಾಥ್ ಬಾಬು ವಿರುದ್ಧ ದೂರು ನೀಡಿದ ಬೆನ್ನಲ್ಲೇ ರವಿ ಪೂಜಾರಿಯಿಂದ ಬೆದರಿಕೆ ಬಂದಿದೆ. ಎಸಿಪಿ ಮಂಜುನಾಥ್ ಬಾಬುಗೂ ರವಿ ಪೂಜಾರಿಗೂ ಲಿಂಕ್ ಏನಾದ್ರು ಇದ್ಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

    ಏನಿದು ಪ್ರಕರಣ?: ಇದೇ ತಿಂಗಳ 9ರಂದು ಆರ್.ಟಿ.ನಗರ ಪೊಲೀಸ್ ಠಾಣೆಯ ಎಸಿಪಿ ಮಂಜುನಾಥ ಬಾಬು, ಆರ್.ಟಿ.ನಗರದ ದಿಣ್ಣೂರ ರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಂಗೆ ನುಗ್ಗಿ ಮಾಲೀಕ ರಾಜೀವ್ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದರು. ಶೆಟ್ಟಿ ಲಂಚ್ ಹೋಂ ತಡರಾತ್ರಿವರೆಗೆ (ರಾತ್ರಿ 11-55ರವರೆಗೆ) ತರೆದಿದ್ದ ಮಾಲೀಕ ರಾಜೀವ್ ಶೆಟ್ಟಿ ಮೇಲೆ ಎಸಿಪಿ ಮಂಜುನಾಥ್ ಲಾಟಿಯಿಂದ ಮನಬಂದತೆ ಥಳಿಸಿದ್ದರು. ಪೊಲೀಸರ ದೌಜನ್ಯ ಕಂಡು ಲಂಚ್ ಹೋಂನಲ್ಲಿದ್ದ ಗ್ರಾಹಕರು ಭಯಭೀತಗೊಂಡು ಓಡಿ ಹೋಗಿದ್ದರು. ಆದರೂ ಬಿಡದೆ ಪೊಲೀಸರು ಲೈಟ್ ಆಫ್ ಮಾಡಿ ಹಿಗ್ಗಾ-ಮುಗ್ಗಾ ಥಳಿಸಿದರೆಂದು ಲಂಚ್ ಹೋಂ ಮಾಲೀಕ ರಾಜೀವ ಶೆಟ್ಟಿ ಆರೋಪಿಸಿದ್ದರು. ಎಸಿಪಿ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ಮೊದಲು ಸುದ್ದಿ ಪ್ರಸಾರ ಮಾಡಿತ್ತು. ವರದಿ ಬಳಿಕ ಎಸಿಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಪೊಲೀಸ್ ಆಯುಕ್ತರಿಗೆ ಶಿಫಾರಸ್ಸು ಮಾಡಿದ್ದಾರೆ.

  • ಹೋಟೆಲ್ ಮಾಲೀಕನ ಮೇಲೆ ಎಸಿಪಿ ಹಲ್ಲೆ ತಪ್ಪು- ಕ್ರಮ ಕೈಗೊಳ್ಳುವಂತೆ ಡಿಸಿಪಿ ಶಿಫಾರಸ್ಸು

    ಹೋಟೆಲ್ ಮಾಲೀಕನ ಮೇಲೆ ಎಸಿಪಿ ಹಲ್ಲೆ ತಪ್ಪು- ಕ್ರಮ ಕೈಗೊಳ್ಳುವಂತೆ ಡಿಸಿಪಿ ಶಿಫಾರಸ್ಸು

    ಬೆಂಗಳೂರು: ಇದು ಪಬ್ಲಿಕ್ ಟಿವಿಯ ಬಿಗ್ ಇಂಪ್ಯಾಕ್ಟ್ ಸುದ್ದಿ. ಹೋಟೆಲ್‍ಗೆ ನುಗ್ಗಿ ಮಾಲೀಕನ ಮೇಲೆ ಎಸಿಪಿ ಮಂಜುನಾಥ್ ಬಾಬು ಹಲ್ಲೆ ಮಾಡಿರೋದು ತಪ್ಪು ಅಂತಾ ಡಿಸಿಪಿ ವರದಿ ನೀಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆಯೂ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಪೊಲೀಸ್ ಆಯುಕ್ತರಿಗೆ ಶಿಫಾರಸ್ಸು ಮಾಡಿದ್ದಾರೆ. ಈ ತಿಂಗಳ 9ರಂದು ಆರ್.ಟಿ.ನಗರ ಪೊಲೀಸ್ ಠಾಣೆಯ ಎಸಿಪಿ ಮಂಜುನಾಥ ಬಾಬು, ಆರ್.ಟಿ.ನಗರದ ದಿಣ್ಣೂರ ರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಂಗೆ ನುಗ್ಗಿ ಮಾಲೀಕ ರಾಜೀವ್ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದರು.

    ಶೆಟ್ಟಿ ಲಂಚ್ ಹೋಂ ತಡರಾತ್ರಿವರೆಗೆ (ರಾತ್ರಿ 11-55ರವರೆಗೆ) ತರೆದಿದ್ದ ಮಾಲೀಕ ರಾಜೀವ್ ಶೆಟ್ಟಿ ಮೇಲೆ ಎಸಿಪಿ ಮಂಜುನಾಥ್ ಲಾಟಿಯಿಂದ ಮನಬಂದತೆ ಥಳಿಸಿದ್ದರು. ಪೊಲೀಸರ ದೌಜನ್ಯ ಕಂಡು ಲಂಚ್ ಹೋಂನಲ್ಲಿದ್ದ ಗ್ರಾಹಕರು ಭಯಭೀತಗೊಂಡು ಓಡಿ ಹೋಗಿದ್ದರು.

    ಆದರೂ ಬಿಡದೆ ಪೊಲೀಸರು ಲೈಟ್ ಆಫ್ ಮಾಡಿ ಹಿಗ್ಗಾ-ಮುಗ್ಗಾ ಥಳಿಸಿದರೆಂದು ಲಂಚ್ ಹೋಂ ಮಾಲೀಕ ರಾಜೀವ ಶೆಟ್ಟಿ ಆರೋಪಿಸಿದ್ದರು. ಎಸಿಪಿ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ಮೊದಲು ಸುದ್ದಿ ಪ್ರಸಾರ ಮಾಡಿತ್ತು.

    ಎರಡು ಬಾರಿ ಹೋಟೆಲ್ ವಿರುದ್ಧ ಕೇಸ್ ದಾಖಲಾಗಿ ಅದಕ್ಕೆ ಮಾಲೀಕರು ದಂಡ ಕಟ್ಟಿದ್ದಾರೆ. ಮತ್ತೆ ದೂರು ದಾಖಲು ಮಾಡದೇ ಹಲ್ಲೆ ಮಾಡಿದ್ರಿಂದ ಎಸಿಪಿ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.

  • ಲೈಟ್ ಆಫ್ ಮಾಡಿ ಹೋಟೆಲ್ ಮಾಲೀಕನಿಗೆ ಮನಬಂದಂತೆ ಥಳಿಸಿದ ಎಸಿಪಿ

    ಲೈಟ್ ಆಫ್ ಮಾಡಿ ಹೋಟೆಲ್ ಮಾಲೀಕನಿಗೆ ಮನಬಂದಂತೆ ಥಳಿಸಿದ ಎಸಿಪಿ

    ಬೆಂಗಳೂರು: ಕಾನೂನು ಸುವವ್ಯಸ್ಥೆ ಕಾಪಾಡುವ ಭರದಲ್ಲಿ ಬೆಂಗಳೂರಿನ ಪೋಲಿಸರು ಅಮಾನವೀಯತೆ ಮರೆದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

    ಈ ತಿಂಗಳ 9ರಂದು ಆರ್.ಟಿ.ನಗರ ಪೊಲೀಸ್ ಠಾಣೆಯ ಎಸಿಪಿ ಮಂಜುನಾಥ ಬಾಬು, ಹೋಟೆಲ್ ಮಾಲೀಕರೊಬ್ಬರ ಮೇಲೆ ಮನಬಂದಂತೆ ಥಳಿಸಿದ್ದಾರೆ. ಆರ್.ಟಿ.ನಗರದ ದಿಣ್ಣೂರ ರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಂನಲ್ಲಿ ಈ ಘಟನೆ ನಡೆದಿದೆ.

    ಶೆಟ್ಟಿ ಲಂಚ್ ಹೋಂ ತಡರಾತ್ರಿವರೆಗೆ (ರಾತ್ರಿ 11-55ರವರೆಗೆ) ತರೆದಿದ್ದ ಮಾಲೀಕ ರಾಜೀವ್ ಶೆಟ್ಟಿ ಮೇಲೆ ಎಸಿಪಿ ಮಂಜುನಾಥ್ ಲಾಟಿಯಿಂದ ಮನಬಂದತೆ ಥಳಿಸಿದ್ದಾರೆ. ಪೊಲೀಸರ ದೌಜನ್ಯ ಕಂಡು ಲಂಚ್ ಹೋಂನಲ್ಲಿದ್ದ ಗ್ರಾಹಕರು ಭಯಭೀತಗೊಂಡು ಓಡಿ ಹೋಗಿದ್ದಾರೆ.

    ಆದರೂ ಬಿಡದೆ ಪೊಲೀಸರು ಲೈಟ್ ಆಫ್ ಮಾಡಿ ಹಿಗ್ಗಾ-ಮುಗ್ಗಾ ಥಳಿಸಿದರೆಂದು ಲಂಚ್ ಹೋಂ ಮಾಲೀಕ ರಾಜೀವ ಶೆಟ್ಟಿ ಆರೋಪಿಸಿದ್ದಾರೆ.

  • ಇಂದು ಮಲ್ಲೇಶ್ವರಂ ಎಸಿಪಿ ಮುಂದೆ ವಿಚಾರಣೆಗೆ ಹಾಜರಾಗ್ತಾರಾ ಬಿಎಸ್‍ವೈ

    ಇಂದು ಮಲ್ಲೇಶ್ವರಂ ಎಸಿಪಿ ಮುಂದೆ ವಿಚಾರಣೆಗೆ ಹಾಜರಾಗ್ತಾರಾ ಬಿಎಸ್‍ವೈ

    ಬೆಂಗಳೂರು: ಈಶ್ವರಪ್ಪ ಪಿಎ ವಿನಯ್ ಕಿಡ್ನ್ಯಾಪ್ ಯತ್ನ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದು ಮಲ್ಲೇಶ್ವರಂ ಎಸಿಪಿ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.

    ಜುಲೈ 15ರಂದು ಸಂತೋಷ್‍ಗಾಗಿ ತಮ್ಮ ಮನೆಯ ಶೋಧ ನಡೆಸಲಾಗಿದೆ. ಆದ್ರೆ ಸಂತೋಷ್ ನಿರಪರಾಧಿ. ಆತನನ್ನ ವಿನಾಕಾರಣ ಸಿಲುಕಿಸುವ ಪ್ರಯತ್ನ ನಡೆದಿದೆ ಎಂದು ನಗರ ಕಮಿಷನರ್‍ಗೆ ಬಿಎಸ್‍ವೈ ಜುಲೈ 17ರಂದು ಪತ್ರ ಬರೆದಿದ್ರು. ಈ ಹಿನ್ನೆಲೆಯಲ್ಲಿ ಬಿಎಸ್‍ವೈಗೆ ಶುಕ್ರವಾರ ನೊಟೀಸ್ ಜಾರಿ ಮಾಡಲಾಗಿತ್ತು.

    ಆದ್ರೆ ಬಿಎಸ್‍ವೈಗೆ ಇವತ್ತು ಉತ್ತರ ಕರ್ನಾಟಕ ಪ್ರವಾಸ ಫಿಕ್ಸ್ ಆಗಿದ್ದು ವಿಚಾರಣೆಗೆ ಹಾಜರಾಗೋದು ಅನುಮಾನ ಎನ್ನಲಾಗ್ತಿದೆ. ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ವಿನಯ್‍ರನ್ನ ಸಹ ವಿಚಾರಣೆಗೆ ಎಸಿಪಿ ಕರೆದಿದ್ದಾರೆ. ಈ ನಡುವೆ ಇದೇ ಪ್ರಕರಣ ಸಂಬಂಧ ಎಫ್‍ಐಆರ್ ರದ್ದತಿ ಕೋರಿ ಸಂತೋಷ್ ಸಲ್ಲಿಸಿದ್ದ ಅರ್ಜಿ ಸಂಬಂಧ ಇಂದೇ ಹೈಕೋರ್ಟ್ ಆದೇಶ ನೀಡುವ ನಿರೀಕ್ಷೆಯಿದೆ.

  • ಹೆಂಡ್ತಿಯಿಂದ ಬೇಸತ್ತು ಜೈಲಿಗೆ ಹೋಗಲು ಎಸಿಪಿ ಮುಖಕ್ಕೆ ಪಂಚ್ ಕೊಟ್ಟ

    ಹೆಂಡ್ತಿಯಿಂದ ಬೇಸತ್ತು ಜೈಲಿಗೆ ಹೋಗಲು ಎಸಿಪಿ ಮುಖಕ್ಕೆ ಪಂಚ್ ಕೊಟ್ಟ

    ಜೈಪುರ: ಪತ್ನಿಯ ಕಾಟದಿಂದ ತಪ್ಪಿಸಿಕೊಳ್ಳಲು ಪತಿಯೊಬ್ಬ ಎಸಿಪಿ ಒಬ್ಬರಿಗೆ ಮುಖಕ್ಕೆ ಪಂಚ್ ಕೊಟ್ಟು ಜೈಲು ಸೇರಿರುವ ವಿಚಿತ್ರ ಘಟನೆ ಶಿಪ್ರಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    30 ವರ್ಷದ ಯೋಗೇಶ್ ಗೋಯಲ್ ಎಂಬ ವ್ಯಕ್ತಿ ಗುರುವಾರ ಶಿಪ್ರಾ ಪೊಲೀಸ್ ಠಾಣೆಗೆ ಬಂದಿದ್ದಾನೆ. ಠಾಣೆಗೆ ಬಂದವನು ನೇರವಾಗಿ ಪೊಲೀಸರಿಗೆ ನನ್ನನ್ನು ಬಂಧಿಸಿ, ನಾನು ನನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದೇನೆ ಎಂದು ಹೇಳಿದ್ದಾನೆ. ಅಷ್ಟರಲ್ಲೇ ಠಾಣೆಗೆ ಬಂದ ಯೋಗೇಶ್ ಪತ್ನಿಯೂ ಸಹ ಪತಿಯ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

    ಈ ವೇಳೆ ಠಾಣೆಯಲ್ಲಿದ್ದ ಎಸಿಪಿ ದೇಶ್‍ರಾಜ್ ಯಾದವ್ ಇಬ್ಬರನ್ನೂ ಕೂರಿಸಿ ರಾಜಿ ಪಂಚಾಯ್ತಿ ಮಾಡಲು ಮುಂದಾಗಿದ್ದಾರೆ. ದೂರು ದಾಖಲಿಸುವದಕ್ಕಿಂತ ಇಬ್ಬರನ್ನೂ ಸಮಾಧಾನಪಡಿಸಲು ಎಸಿಪಿ ದೇಶ್‍ರಾಜ್ ಪ್ರಯತ್ನಿಸಿದ್ದಾರೆ.

    ಎಸಿಪಿ ಇಬ್ಬರ ಜಗಳವನ್ನು ಇತ್ಯರ್ಥಿಸುವಾಗಿ ಯೋಗೇಶ್ ನೇರವಾಗಿ ಎಸಿಪಿ ಮುಖಕ್ಕೆ ಹೊಡೆದಿದ್ದಾನೆ. ಇದರ ತೀವ್ರತೆಗೆ ಎಸಿಪಿಯವರ ಮೂಗು ಮತ್ತು ತುಟಿಯಿಂದ ರಕ್ತ ಬರಲಾರಂಭಿಸಿತು ಎಂದು ಸ್ಟೇಶನ್ ಆಫೀಸರ್ ಮುಖೇಶ್ ಚೌಧರಿ ತಿಳಿಸಿದ್ದಾರೆ.

    ಯೋಗೇಶ್ ವಾಲ್ಲೇಡ್ ನಗರದಲ್ಲಿ ಸ್ವಂತ ಅಂಗಡಿಯೊಂದನ್ನು ಹೊಂದಿದ್ದು, ಪತಿ-ಪತ್ನಿ ನಡುವೆ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಇಬ್ಬರೂ ಒಬ್ಬರ ವಿರುದ್ಧ ಒಬ್ಬರು ದೂರು ದಾಖಲಿಸಲು ಠಾಣೆಗೆ ಬಂದಿದ್ದರು. ಈ ವೇಳೆ ಎಸಿಪಿ ಅವರ ಮೇಲೆ ಹಲ್ಲೆ ನಡೆಸಿ ಪತಿರಾಯ ಕೊನೆಗೂ ಜೈಲು ಸೇರಿದ್ದಾನೆ.

    ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಆರೋಪಿ ಯೋಗೇಶ್ ವಿರುದ್ಧ ದೂರು ದಾಖಲಾಗಿದೆ.