Tag: acid attack

  • ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ಆ್ಯಸಿಡ್ ಎರಚಿ ತಾನೂ ಬೆಂಕಿ ಹಚ್ಚಿಕೊಂಡ ಸೋದರ ಮಾವ

    ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ಆ್ಯಸಿಡ್ ಎರಚಿ ತಾನೂ ಬೆಂಕಿ ಹಚ್ಚಿಕೊಂಡ ಸೋದರ ಮಾವ

    ಚಿಕ್ಕಬಳ್ಳಾಪುರ: ಮದುವೆಗೆ ನಿರಾಕರಿಸಿದ ಹಿನ್ನೆಲೆ ಯುವತಿಗೆ ಟಾಯ್ಲೆಟ್ ಕ್ಲೀನರ್ ಆ್ಯಸಿಡ್ ಎರಚಿ (Acid Attack) ಸೋದರ ಮಾವ ತಾನೂ ಬೆಂಕಿ ಹಚ್ಚಿಕೊಂಡ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಮಂಚನಬಲೆ (Manchanabale) ಗ್ರಾಮದಲ್ಲಿ ನಡೆದಿದೆ.

    ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ನಿವಾಸಿ ಸೋದರ ಮಾವ ಆನಂದ್ ಕುಮಾರ್ ಈ ಕೃತ್ಯವೆಸಗಿದ್ದಾನೆ. ಅದೃಷ್ಟವಶಾತ್ ಅನಾಹುತದಿಂದ ಯುವತಿ ಪಾರಾಗಿದ್ದಾಳೆ. ಯುವತಿಗೆ ಆ್ಯಸಿಡ್ ಎರಚಿದ ಬಳಿಕ ಆನಂದ್ ಆಕೆಯ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡಿದ್ದಾನೆ. ಘಟನೆಯಲ್ಲಿ ಮಾವ ಆನಂದ್ ಕುಮಾರ್‌ಗೆ ತೀವ್ರ ಸುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಹರಿಯಾಣದ ರೈಲಿನಲ್ಲಿ ಗ್ಯಾಂಗ್‌ ರೇಪ್ -‌ ಅತ್ಯಾಚಾರ ಬಳಿಕ ರೈಲ್ವೆ ಹಳಿಗಳ ಮೇಲೆ ಮಹಿಳೆ ಎಸೆದ ಪಾಪಿಗಳು

    ಗಾಯಾಳು ಯುವತಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಗಾಯಾಳು ಆನಂದ್‌ಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಒಡವೆ ಮಾಡಿಕೊಡೋದಾಗಿ ಹೇಳಿ 8 ಕೆಜಿ ಗಟ್ಟಿ ಚಿನ್ನ ಕದ್ದ ಅಕ್ಕಸಾಲಿಗ ಅರೆಸ್ಟ್

  • ಬೆಂಗಳೂರು| ಉತ್ತರ ಭಾರತ ಮೂಲದ ಯುವಕನ ಮೇಲೆ ಆ್ಯಸಿಡ್ ದಾಳಿ

    ಬೆಂಗಳೂರು| ಉತ್ತರ ಭಾರತ ಮೂಲದ ಯುವಕನ ಮೇಲೆ ಆ್ಯಸಿಡ್ ದಾಳಿ

    ಬೆಂಗಳೂರು: ಹಾಡಹಗಲೇ ಯುವಕನ ಮೇಲೆ ಆ್ಯಸಿಡ್ ದಾಳಿ (Acid Attack) ನಡೆಸಿ ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ (Bengaluru) ಕಾಮಾಕ್ಷಿಪಾಳ್ಯ (Kamakshipalya) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಭಾನುವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಉತ್ತರ ಭಾರತ ಮೂಲದ ಯುವಕನ ಮೇಲೆ ದುಷ್ಕರ್ಮಿಗಳು ಆ್ಯಸಿಡ್ ಅಟ್ಯಾಕ್ ಮಾಡಿದ್ದಾರೆ. ಘಟನೆಯಲ್ಲಿ ಯುವಕ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಬಾಲಾಜಿ ವೈನ್ ಸ್ಟೋರ್ ಬಳಿ ಘಟನೆ ನಡೆದಿದೆ. ಇದನ್ನೂ ಓದಿ: ಮಿಸ್ ಯೂನಿವರ್ಸ್ ಇಂಡಿಯಾ-2024 ಕಿರೀಟ ಗೆದ್ದ ಗುಜರಾತಿ ಸುಂದರಿ

    ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತಿರುಪತಿ ಪ್ರಸಾದದಲ್ಲಿ ಅಪವಿತ್ರ – ಶೃಂಗೇರಿ ಮಹಾಸ್ವಾಮಿಗಳಿಂದ ಉಪವಾಸ, ಮೌನ ವ್ರತ

    ಈ ಹಿಂದೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 24 ವರ್ಷದ ಯವತಿ ಮೇಲೆ ಆ್ಯಸಿಡ್ ಅಟ್ಯಾಕ್ ನಡೆದಿತ್ತು. ಪ್ರೀತಿ ನಿರಾಕರಿಸಿದ್ದಕ್ಕೆ ಭಗ್ನಪ್ರೇಮಿಯೇ ಈ ರೀತಿಯ ಪಾಪದ ಕೃತ್ಯ ಎಸಗಿದ್ದ. ಸುಂಕದ ಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ನಾಗೇಶ್ ಎಂಬಾತ ಆ್ಯಸಿಡ್ ಎರಚಿದ್ದ. ಇದನ್ನೂ ಓದಿ: ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ

    ಯುವತಿ ನಾಗೇಶ್‌ನ ಪ್ರೀತಿ ನಿರಾಕರಿಸಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಯುವತಿ ಹಾಗೂ ನಾಗೇಶ್ ನಡುವೆ ಗಲಾಟೆ ನಡೆದಿತ್ತು. ಅದೇ ದ್ವೇಷದಿಂದ ಆಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಬಂದು ಆ್ಯಸಿಡ್ ಎರಚಿ, ಎಸ್ಕೇಪ್ ಆಗಿದ್ದ. ಈ ಬಗ್ಗೆ ದೂರು ದಾಖಲಿಸಿಕೊಂಡ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪ್ಯಾಲೆಸ್ತೀನ್‌ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಿ ಮೋದಿ – ಗಾಜಾ ಪರಿಸ್ಥಿತಿ ಬಗ್ಗೆ ಭಾರತ ಕಳವಳ

  • ಪ್ರೀತಿಸಿ ಎಲ್ಲಾ ಮುಗಿದ್ಮೇಲೆ ಕೈಕೊಟ್ಟ ಪ್ರಿಯಕರ – ಮದುವೆ ದಿನವೇ ಆಸಿಡ್‌ ದಾಳಿಗೆ ಮುಂದಾದ ವಿಧವೆ ಪ್ರೇಯಸಿ!

    ಪ್ರೀತಿಸಿ ಎಲ್ಲಾ ಮುಗಿದ್ಮೇಲೆ ಕೈಕೊಟ್ಟ ಪ್ರಿಯಕರ – ಮದುವೆ ದಿನವೇ ಆಸಿಡ್‌ ದಾಳಿಗೆ ಮುಂದಾದ ವಿಧವೆ ಪ್ರೇಯಸಿ!

    ಅಮರಾವತಿ: ಪ್ರೀತಿಯೊಂದು (Love) ಸುಂದರ ಅನುಭವ. ಅದನ್ನ ಅನುಭವಿಸಬೇಕೇ ಹೊರತು ಹೇಳಿಕೊಳ್ಳಲಾಗಲ್ಲ. ಅದಕ್ಕಾಗಿ ಕೆಲವರು ಪ್ರೀತಿಯೆಂಬುದೇ ಮಾಯೆ ಎನ್ನುತ್ತಾರೆ. ಕೆಲವರಿಗೆ ಹೇಳಿಕೊಳ್ಳಲು ಸಂಕೋಚ, ಹೇಳಿಕೊಂಡರೇ ಇದ್ದ ಸಂಬಂಧವೂ ಬಿಟ್ಟುಹೋಗುತ್ತದೆ ಅನ್ನೋ ಆತಂಕ. ಆದ್ರೆ ಆನ್‌ಲೈನ್‌ ಯುಗದಲ್ಲಿ ಪ್ರೀತಿ – ಪ್ರೇಮ ಎಂಬುದು ಕ್ಷಣಿಕ ಸುಃಖವಾಗಿದೆ. ಬೆಳಗ್ಗೆ ಪ್ರಪೋಸ್‌ ಮಾಡಿ, ಸಂಜೆ ಹೊತ್ತಿಗೆ ಶೇಕ್‌ ಹ್ಯಾಂಡ್‌ ಮಾಡಿ ಬ್ರೇಕಪ್‌ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಆದ್ರೆ ಇಲ್ಲೊಬ್ಬಳು ವಿಧವೆ ತನ್ನ ಪ್ರಿಯಕರ (Lover) ಕೈಕೊಟ್ಟಿದ್ದಕ್ಕಾಗಿ ಅವನ ಮೇಲೆ ಆಸಿಡ್‌ ದಾಳಿಗೆ ಮುಂದಾಗಿದ್ದಾಳೆ.

    44 ವರ್ಷದ ವಿಧವೆಯೊಬ್ಬಳು ತನ್ನ ಮಾಜಿ ಪ್ರಿಯಕರನ ಮದುವೆ (Marriage) ದಿನವೇ ಆತನ ಮೇಲೆ ಆಸಿಡ್‌ ದಾಳಿಗೆ ಯತ್ನಿಸಿದ್ದು, ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಆಂಧ್ರಪ್ರದೇಶದ (Andhra Pradesh) ನಂಡಲೂರಿನಲ್ಲಿ ನಡೆದಿದೆ. ಘಟನೆ ನಂತರ ಯುವಕನ ವಿವಾಹ ಕಾರ್ಯಕ್ರಮ ರದ್ದಾಗಿದೆ. ಆಸಿಡ್‌ ದಾಳಿ (Acid Attack) ನಡೆಸಿದ ಆರೋಪಿ ಮಹಿಳೆ ಸಾಫ್ಟ್‌ವೇರ್‌ ಎಂಜಿನಿಯರ್‌ ಜಯಾ. ಈಕೆಗೆ 22 ವರ್ಷದ ಮಗನಿದ್ದಾನೆ. ಇನ್ನೂ ಆಸಿಡ್‌ ದಾಳಿಗೆ ಒಳಗಾದ ಮಾಜಿ ಪ್ರಿಯಕರ ಶೇಖ್ ಸೈಯದ್ (32), ಮದುವೆಯಾಗಲು ತಯಾರಾಗಿದ್ದ. ತನ್ನೊಂದಿಗೆ ಎಲ್ಲಾ ಮುಗಿದ ಮೇಲೆ ಕೈಕೊಟ್ಟನೆಂದು ಆಸಿಡ್‌ ದಾಳಿಗೆ ಮುಂದಾಗಿದ್ದಾಳೆ. ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರಿಂದ ಹೋರಾಟ – ಸರ್ಕಾರಿ ಶಾಲೆಗಳಲ್ಲಿ ತರಗತಿ ವ್ಯತ್ಯಯ?

    ಏನಿದು ಪ್ರೇಮಕಥೆ?
    ಸಯ್ಯದ್‌ ಮತ್ತು ಜಯಾ 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಕಳೆದ 3 ವರ್ಷಗಳಲ್ಲಿ ಸೈಯ್ಯದ್‌ ಡ್ರೈವರ್‌ ಕೆಲಸಕ್ಕಾಗಿ ಕುವೈತ್‌ಗೆ ತೆರಳಿದ್ದ. ಭಾರತಕ್ಕೆ ಮರಳಿದ ನಂತರ ಜಯಾಳ ಸಂಪರ್ಕವನ್ನು ಬಿಟ್ಟು, ಇದೇ ಆಗಸ್ಟ್‌ 11ರಂದು ಬೇರೊಬ್ಬ ಮಹಿಳೆಯೊಂದಿಗೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದ. ಮದುವೆ ನಿಲ್ಲಿಸುವ ಸಲುವಾಗಿ ಜಯಾ ಕೂಡ ಅಲ್ಲಿಗೆ ಬಂದಿದ್ದಳು. ಆದ್ರೆ ಸಯ್ಯದ್‌ ಆಕೆಯೊಂದಿಗೆ ಇರಲ್ಲ ಎಂದು ಹೇಳಿದ. ಇದರಿಂದ ಕೋಪಗೊಂಡ ಮಹಿಳೆ ಬಾತ್‌ರೂಮ್‌ ಕ್ಲೀನರ್‌ ಆಸಿಡ್‌ ತಂಡು ಅವನ ಮೇಲೆ ಎರಚಿದ್ದಾಳೆ. ಆದ್ರೆ ಅವನು ತಪ್ಪಿಸಿಕೊಂಡಿದ್ದರಿಂದ ಸಯ್ಯದ್‌ ಚಿಕ್ಕಮ್ಮನಿಗೆ ಆಸಿಡ್‌ ತಾಗಿದೆ. ಇದೇ ಕೋಪದಿಂದ ಅಲ್ಲೇ ಇದ್ದ ಚಾಕು ತೆಗೆದುಕೊಂಡು ಸಯ್ಯದ್‌ ಜಯಾಳಿಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತುಂಗಭದ್ರಾ ಡ್ಯಾಂ ವಾರ್ಷಿಕ ನಿರ್ವಹಣಾ ಗುತ್ತಿಗೆಗೆ ಎಷ್ಟು ಕೋಟಿ ಹಣ ಸಂದಾಯವಾಗಿದೆ? – ಜನಾರ್ದನ ರೆಡ್ಡಿ ಪ್ರಶ್ನೆ 

    ಬಾತ್ ರೂಂ ಕ್ಲೀನಿಂಗ್ ಆಸಿಡ್ ಆಗಿದ್ದರಿಂದ ಸೈಯದ್ ಚಿಕ್ಕಮ್ಮನಿಗೆ ಗಂಭೀರ ಗಾಯಗಳಾಗಿಲ್ಲ. ಇಯ್ಯ ಜಯಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರು ಇಬ್ಬರ ವಿರುದ್ಧವೂ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಿಸಿಕೊಂಡು ಬಂಧಿಸಿದ್ದಾರೆ. ಇದನ್ನೂ ಓದಿ: Tungabhadra Dam | 5 ದಿನಗಳಲ್ಲಿ ಗೇಟ್‌ ರಿಪೇರಿ – ಸರ್ಕಾರಕ್ಕೆ ಅಧಿಕಾರಿಗಳ ಭರವಸೆ 

  • ಕಡಬ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ – ಪ್ರೇಮ ನಿವೇದನೆ ಒಪ್ಪದ್ದಕ್ಕೆ ಕೃತ್ಯ

    ಕಡಬ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ – ಪ್ರೇಮ ನಿವೇದನೆ ಒಪ್ಪದ್ದಕ್ಕೆ ಕೃತ್ಯ

    ಮಂಗಳೂರು: ಕಡಬದಲ್ಲಿ (Kadaba) ಮೂವರು ವಿದ್ಯಾರ್ಥಿನಿಯರ (Students) ಮೇಲೆ ಆ್ಯಸಿಡ್ ದಾಳಿ (Acid Attack) ಪ್ರಕರಣಕ್ಕೆ ಕಾರಣ ಸಿಕ್ಕಿದ್ದು ಆರೋಪಿ ಪ್ರೇಮ ವೈಫಲ್ಯದದಿಂದ (Love Failure) ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

    ಕೇರಳ ಮೂಲದ ಎಬಿನ್ (24) ಎಂಬಿಎ ವಿದ್ಯಾರ್ಥಿಯಾಗಿದ್ದು, ಅಲೀನಾ ಎಂಬ ವಿದ್ಯಾರ್ಥಿನಿಯನ್ನು ಟಾರ್ಗೆಟ್ ಮಾಡಿ ಆ್ಯಸಿಡ್ ದಾಳಿ ನಡೆಸಿದ್ದಾನೆ. ಎಬಿನ್ ಹಾಗೂ ಅಲೀನಾ ಒಂದೇ ಕೋಮಿಗೆ ಸೇರಿದವರಾಗಿದ್ದು ಇವರಿಬ್ಬರಿಗೂ ಪರಿಚಯವಿತ್ತು. ಇದನ್ನೂ ಓದಿ: ಕಡಬದಲ್ಲಿ ಮೂವರು ಪಿಯು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ

    ಈತನ ಪ್ರೇಮ ನಿವೇದನೆಯನ್ನು ಒಪ್ಪದ್ದಕ್ಕೆ ಅಲೀನಾಳ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯಿಂದ ಅಲೀನಾ ಗಂಭೀರವಾಗಿ ಗಾಯಗೊಂಡಿದ್ದು, ಪಕ್ಕದಲ್ಲೇ ಇದ್ದ ಉಳಿದಿಬ್ಬರು ವಿದ್ಯಾರ್ಥಿನಿಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಕಾಲುವೆಗೆ ಉರುಳಿದ ಕಾರು – ಮೂವರು ಸಾವು, ಮೂವರು ನಾಪತ್ತೆ

    ಎಬಿನ್ ಕೇರಳ ಮಲಪ್ಪುರಂ ಜಿಲ್ಲೆಯ ನೆಲಂಬೂರು ನಿವಾಸಿಯಾಗಿದ್ದು, ಅಲೀನಾಳನ್ನು ಟಾರ್ಗೆಟ್ ಮಾಡಿ ಬಂದಿದ್ದ. ಆರೋಪಿ ಶಾಲಾ ಯೂನಿಫಾರ್ಮ್‌ನಲ್ಲಿ ಬಂದಿದ್ದು, ರಬ್ಬರ್ ಹಾಲು ಶೇಖರಣೆಗೆ ಬಳಸುವ ಆ್ಯಸಿಡ್‌ನ್ನು ವಿದ್ಯಾರ್ಥಿನಿಯ ಮೇಲೆ ಎರಚಿದ್ದಾನೆ. ಹೀಗಾಗಿ ಹೆಚ್ಚಿನ ಪ್ರಮಾಣದ ಅಪಾಯ ತಪ್ಪಿದೆ. ಇದನ್ನೂ ಓದಿ: ಸೋಶಿಯಲ್ ‌ಮೀಡಿಯಾದಲ್ಲಿ ಬರೆದು ದೇಶದ ಮಾನ ಕಳೀಬೇಡಿ – ಮಹಿಳಾ ಆಯೋಗದ ಮುಖ್ಯಸ್ಥೆ ತೀವ್ರ ಆಕ್ಷೇಪ

    ಈ ವೇಳೆ ಈಕೆ ಜೊತೆ ಕುಳಿತು ಓದುತ್ತಿದ್ದ ಇತರ ಇಬ್ಬರು ವಿದ್ಯಾರ್ಥಿನಿಯರ ಮೇಲೂ ಆ್ಯಸಿಡ್ ಬಿದ್ದಿದೆ. ಗಾಯಗೊಂಡವರು ದ್ವಿತೀಯ ಪಿಯುಸಿಯ ವಿಜ್ಞಾನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ರಿಷ್ಯಂತ್, ಪುತ್ತೂರು ಎಸಿ, ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಸೀದಿ ಬಳಿಯಿರುವ ಭಗವಾಧ್ವಜ ತೆರವುಗೊಳಿಸಲು ಪ್ಲ್ಯಾನ್ ಆರೋಪ; ಮಾಜಿ ಶಾಸಕನ ವಿರುದ್ಧ ಕೇಸ್

    ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿದ್ದ ಧ್ವಜಸ್ತಂಭದ ಕಟ್ಟೆಯಲ್ಲಿ ಕುಳಿತು ಪರೀಕ್ಷಾ ತಯಾರಿ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ. ಘಟನೆ ನಡೆದ ಬಳಿಕ ಆರೋಪಿ ಎಬಿನ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಎಬಿನ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್‌ನಲ್ಲಿ ವಿಶೇಷ ಟೀಂನಿಂದ 1,000 ಕ್ಕೂ ಅಧಿಕ ಸಿಸಿಟಿವಿ ಪರಿಶೀಲನೆ

  • ಕಡಬದಲ್ಲಿ ಮೂವರು ಪಿಯು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ

    ಕಡಬದಲ್ಲಿ ಮೂವರು ಪಿಯು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ

    – ಕೇರಳ ಮೂಲದ ಆರೋಪಿ ಬಂಧನ

    ಮಂಗಳೂರು: ಕಿರಾತಕನೋರ್ವ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ (Acid Attack) ನಡೆಸಿದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬದಲ್ಲಿ (Kadaba) ನಡೆದಿದೆ.

    ಕೇರಳ (Kerala) ಮೂಲದ ಅಬೀನ್ ಎಂಬಾತ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಅಲೀನಾ ಸಿ.ಬಿ, ಅರ್ಚನಾ ಹಾಗೂ ಅಮೃತ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ಕಡಬ ಸರ್ಕಾರಿ ಶಾಲೆಯಲ್ಲಿ ಘಟನೆ ನಡದಿದ್ದು, ಆರೋಪಿ ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಹ್ಯಾಟ್ ಹಾಕಿಕೊಂಡು ಬಂದು ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಆರೋಪಿ ಕೇರಳ ಮೂಲದವನು ಎಂಬುದಾಗಿ ಪ್ರಾಥಮಿಕ ಮಾಹಿತಿ ಲಭಿಸಿದೆ.

    ಆ್ಯಸಿಡ್ ದಾಳಿಗೊಳಗಾದ ಮೂವರು ವಿದ್ಯಾರ್ಥಿನಿಯರಿಗೆ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲು ಸಿದ್ಧತೆ ನಡೆಸಲಾಗಿದೆ. ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಪರೀಕ್ಷಾ ತಯಾರಿ ನಡೆಸುತ್ತಿದ್ದ ವೇಳೆ ಆ್ಯಸಿಡ್ ದಾಳಿ ನಡೆಸಿದ್ದು, ಮೂವರು ವಿದ್ಯಾರ್ಥಿನಿಯರ ಮುಖಕ್ಕೆ ಗಂಭೀರ ಗಾಯಗಳಾಗಿವೆ.

    ದಾಳಿ ನಡೆಸಿದ ಅಬೀನ್ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಅಲ್ಲಿದ್ದ ವಿದ್ಯಾರ್ಥಿಗಳು ಆತನನ್ನು ಹಿಡಿದಿದ್ದಾರೆ. ವಿಷಯ ತಿಳಿದು ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದ್ದು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

  • ಸ್ತ್ರೀಯರ ಮೇಲೆ ಆ್ಯಸಿಡ್ ದಾಳಿ – ದೇಶದಲ್ಲೇ ಬೆಂಗಳೂರು ನಂಬರ್ 1

    ಸ್ತ್ರೀಯರ ಮೇಲೆ ಆ್ಯಸಿಡ್ ದಾಳಿ – ದೇಶದಲ್ಲೇ ಬೆಂಗಳೂರು ನಂಬರ್ 1

    ನವದೆಹಲಿ: ಸ್ತ್ರೀಯರ ಮೇಲೆ ಆ್ಯಸಿಡ್ ದಾಳಿಯಲ್ಲಿ (Acid Attack) ಮಹಾನಗರಗಳ ಪೈಕಿ ಬೆಂಗಳೂರು (Bengaluru) ಮೊದಲನೇ ಸ್ಥಾನವನ್ನು ಪಡೆದಿದೆ ಎಂಬ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

    ಈ ಪೈಕಿ ನವದೆಹಲಿ (New Delhi) ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಅಹಮದಾಬಾದ್ (Ahmedabad) ಮೂರನೇ ಸ್ಥಾನವನ್ನು ಪಡೆದಿದೆ. 2022ರಲ್ಲಿ ಬೆಂಗಳೂರಿನಲ್ಲಿ ಒಟ್ಟು 8 ಆ್ಯಸಿಡ್ ದಾಳಿ ನಡೆದಿತ್ತು. ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೋ (NCRB) ವರದಿಯಲ್ಲಿ ಆತಂಕಕಾರಿ ವಿಚಾರ ಬಯಲಾಗಿದೆ. ಇದನ್ನೂ ಓದಿ: ಟಿಕೆಟ್ ಪಡೆದ ಸ್ಟಾಪ್‌ಗೂ ಮುನ್ನ ಇಳಿಯಲು ಮುಂದಾದ ಯುವತಿ – ಯುವತಿ, ಕಂಡಕ್ಟರ್ ನಡುವೆ ಗಲಾಟೆ

    ಎನ್‌ಸಿಆರ್‌ಬಿ ಬಿಡುಗಡೆ ಮಾಡಿದ ವರದಿ ಅನ್ವಯ ದೇಶದ 19 ಮಹಾನಗರಗಳ ಪೈಕಿ 2022ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ 8 ಆ್ಯಸಿಡ್ ದಾಳಿ ಪ್ರಕರಣಗಳು ದಾಖಲಾಗಿದ್ದು, ಇದು ಆ ವರ್ಷದಲ್ಲಿ ದೇಶದಲ್ಲೇ ಅತಿ ಹೆಚ್ಚು ಪ್ರಕರಣವಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ ಅಕ್ರಮ ಪ್ರಶ್ನಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ: ವಿಜಯೇಂದ್ರ ಕಿಡಿ

    7 ಆ್ಯಸಿಡ್ ದಾಳಿ ಪ್ರಕರಣಗಳನ್ನು ದಾಖಲಿಸಿರುವ ದೆಹಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 5 ಪ್ರಕರಣಗಳೊಂದಿಗೆ ಗುಜರಾತ್‌ನ ಅಹಮದಾಬಾದ್ 3ನೇ ಸ್ಥಾನದಲ್ಲಿದೆ. ಹೈದರಾಬಾದ್‌ನಲ್ಲಿ 2 ಆ್ಯಸಿಡ್ ದಾಳಿ ಯತ್ನ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷ ಬೆಂಗಳೂರಿನಲ್ಲಿ ಯುವತಿಯ ಮೇಲಿನ ಆ್ಯಸಿಡ್ ದಾಳಿ ಭಾರೀ ಸುದ್ದಿಯಾಗಿತ್ತು. ಇದನ್ನೂ ಓದಿ: ಕ್ಯಾಂಡಲ್‌ ಬೆಳಕಲ್ಲಿ ಬೈಕಿಗೆ ಪೆಟ್ರೋಲ್ ಹಾಕುತ್ತಿದ್ದ ಬಾಲಕಿ ಬೆಂಕಿಗೆ ಬಲಿ

  • ಬೇಲ್‌ನಲ್ಲಿ ಹೊರಬಂದ ಅತ್ಯಾಚಾರ ಆರೋಪಿ ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ – ಬಳಿಕ ಆತ್ಮಹತ್ಯೆ

    ಬೇಲ್‌ನಲ್ಲಿ ಹೊರಬಂದ ಅತ್ಯಾಚಾರ ಆರೋಪಿ ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ – ಬಳಿಕ ಆತ್ಮಹತ್ಯೆ

    ನವದೆಹಲಿ: ಅತ್ಯಾಚಾರ ಆರೋಪಿಯೊಬ್ಬ (Rape Accused) ಜಾಮೀನಿನ (Bail) ಮೇಲೆ ಜೈಲಿನಿಂದ ಹೊರಬಂದು ತನ್ನ ಮೇಲೆ ಆರೋಪ ಹೊರಿಸಿದ್ದ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ಆ್ಯಸಿಡ್ ದಾಳಿ (Acid Attack) ನಡೆಸಿ ನಂತರ ತಾನು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದೆ.

    ಆಘಾತಕಾರಿ ಘಟನೆ ಮಧ್ಯ ದೆಹಲಿಯಲ್ಲಿ ನಡೆದಿದೆ. ಅತ್ಯಾಚಾರ ಆರೋಪಿ ಪ್ರೇಮ್ ಸಿಂಗ್‌ಗೆ ಕುಟುಂಬದವರ ವಿವಾಹದಲ್ಲಿ ಪಾಲ್ಗೊಳ್ಳಲು ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿತ್ತು. ಗುರುವಾರ ಸಂಜೆ ತನ್ನ ಮೇಲೆ ಆರೋಪ ಹೊರಿಸಿದ್ದ ಮಹಿಳೆಯ ಬಳಿಗೆ ತೆರಳಿ ದೂರನ್ನು ಹಿಂಪಡೆಯುವಂತೆ ಕೇಳಿದ್ದಾನೆ. ಅದನ್ನು ನಿರಾಕರಿಸಿದ್ದಕ್ಕೆ ಆತ ಮಹಿಳೆಯ 17 ವರ್ಷದ ಮಗಳ ಮೇಲೆ ಆ್ಯಸಿಡ್ ಎರಚಿದ್ದಾನೆ. ಬಳಿಕ ತಾನೂ ಕುಡಿದಿದ್ದಾನೆ.

    ಪ್ರೇಮ್ ಸಿಂಗ್ ಹಾಗೂ ಮಹಿಳೆ ದೆಹಲಿಯ ಆನಂದ್ ಪರ್ಬತ್ ಪ್ರದೇಶದಲ್ಲಿ ನೆರೆಹೊರೆಯವರು. ವ್ಯಕ್ತಿ ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಾಗ ಪ್ರಕರಣವನ್ನು ಹಿಂಪಡೆಯುವಂತೆ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಆಕೆ ನಿರಾಕರಿಸಿದಾಗ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೋಂ ವರ್ಕ್ ಮಾಡಿಲ್ಲವೆಂದು ಕೈಗೆ ರಾಡ್‍ನಿಂದ ಹೊಡೆದ್ರಾ ಶಿಕ್ಷಕಿ?

    ಆ್ಯಸಿಡ್ ದಾಳಿ ಮಾಡಿ ತಾನೂ ಆ್ಯಸಿಡ್ ಅನ್ನು ಕುಡಿದಿದ್ದಾನೆ. ತಕ್ಷಣ ಅಲ್ಲೇ ನೆರೆದಿದ್ದವರು ಆರೋಪಿ ಹಾಗೂ ಅಪ್ರಾಪ್ತೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ವೇಳೆ ಪ್ರೇಮ್ ಸಿಂಗ್ ಮೃತಪಟ್ಟರೆ, ಚಿಕಿತ್ಸೆ ನೀಡಿದ ಬಳಿಕ ಸಂತ್ರಸ್ತೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇದನ್ನೂ ಓದಿ: ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹೆತ್ತ ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣು

  • ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ!

    ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ!

    ಚಿಕ್ಕಮಗಳೂರು: ನಾಯಿ (Dog) ಬೊಗಳಿದ್ದಕ್ಕೆ ಮನೆ ಮಾಲೀಕನ ಮೇಲೆ ಆಸಿಡ್ ದಾಳಿ (Acid Attack) ನಡೆಸಿರುವ ಘಟನೆ ಜಿಲ್ಲೆಯ ಎನ್‌ಆರ್ ಪುರ (NR Pura) ತಾಲೂಕಿನ ಹಾಳ್ ಕರಗುಂದ ಗ್ರಾಮದಲ್ಲಿ ನಡೆದಿದೆ.

    ಜೇಮ್ಸ್ ಆಸಿಡ್ ದಾಳಿ ಮಾಡಿದ ಆರೋಪಿಯಾದರೆ, ಸುಂದರ್ ರಾಜ್ ಆಸಿಡ್ ದಾಳಿಗೊಳಗಾದ ವ್ಯಕ್ತಿ. ಜೇಮ್ಸ್ ಹಾಗೂ ಸುಂದರ್ ರಾಜ್ ಅಕ್ಕಪಕ್ಕದ ಮನೆಯವರು. ಹಲವು ದಿನಗಳಿಂದ ಇಬ್ಬರ ನಡುವೆ ಗಲಾಟೆಯಾಗಿ, ಮನಸ್ಥಾಪವಿತ್ತು.

    dog

    ನಿನ್ನೆ ಸುಂದರ್ ರಾಜ್ ಮನೆಯ ಸಾಕು ನಾಯಿ ಬೊಗಳುತ್ತಿತ್ತು. ಈ ವೇಳೆ ಮನೆ ಮಾಲೀಕ ಸುಂದರ್ ರಾಜ್ ನಾಯಿಗೆ ಬೈದಿದ್ದಾರೆ. ಆಗ ಜೇಮ್ಸ್ ನಾಯಿಗೆ ಬೈದಂತೆ ನನಗೆ ಬೈಯುತ್ತಿದ್ದಾನೆ ಎಂದು ಜಗಳವಾಡಿದ್ದಾನೆ. ಇಬ್ಬರು ಜಗಳವಾಡುವಾಗ ಜೇಮ್ಸ್ ಏಕಾಏಕಿ ಸುಂದರ್ ರಾಜ್ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಇದನ್ನೂ ಓದಿ: ನಡೆದು ಹೋಯ್ತಾ ಮಹಾ ಪ್ರಮಾದ – ಗುರಿ ತಪ್ಪಿ ಬಿದ್ದ ಗುಂಡೇಟಿನಿಂದ ಅರ್ಜುನ ಸಾವು?

    ಆಸಿಡ್ ದಾಳಿಗೆ ಸುಂದರ್ ರಾಜ್ ಮುಖ ಬಹುತೇಕ ಸುಟ್ಟಿದ್ದು ಎಡಗಣ್ಣಿಗೆ ಗಂಭೀರ ಗಾಯವಾಗಿದೆ. ಅರ್ಧ ಮುಖ ಸಂಪೂರ್ಣ ಸುಟ್ಟುಹೋಗಿದೆ. ಕೂಡಲೇ ಅವರನ್ನು ಎನ್‌ಆರ್ ಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶಿವಮೊಗ್ಗದಲ್ಲಿ ವೈದ್ಯರು ಸುಂದರ್ ರಾಜ್ ಅವರ ಎಡಗಣ್ಣಿನ ಪದರ ಸಂಪೂರ್ಣ ಡ್ಯಾಮೇಜ್ ಆಗಿದೆ, ಕಣ್ಣಿನ ಪದರವನ್ನು ಬದಲಾಯಿಸಬೇಕೆಂದು ತಿಳಿಸಿದ್ದಾರೆ. ಕೂಲಿ ಮಾಡಿಕೊಂಡು ಬದುಕುತ್ತಿದ್ದ ಸುಂದರ್ ರಾಜ್ ಕುಟುಂಬ ಇದೀಗ ಚಿಕಿತ್ಸೆಯ ಹಣಕ್ಕಾಗಿ ಕಂಗಾಲಾಗಿದ್ದಾರೆ. ಆಸಿಡ್ ದಾಳಿ ಬಳಿಕ ಜೇಮ್ಸ್ ದಂಪತಿ ನಾಪತ್ತೆಯಾಗಿದ್ದಾರೆ. ಎನ್‌ಆರ್ ಪುರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Rain Alert: ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲೂ ಭಾರೀ ಮಳೆ ಸಾಧ್ಯತೆ

  • ಆ್ಯಸಿಡ್ ದಾಳಿಗೆ ಒಳಗಾಗಿದ್ದ ಸ್ನಾತಕೋತ್ತರ ಪದವೀಧರೆಗೆ ಕೆಲಸ ನೀಡಿದ ಸಿಎಂ ಸಿದ್ದರಾಮಯ್ಯ

    ಆ್ಯಸಿಡ್ ದಾಳಿಗೆ ಒಳಗಾಗಿದ್ದ ಸ್ನಾತಕೋತ್ತರ ಪದವೀಧರೆಗೆ ಕೆಲಸ ನೀಡಿದ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಆ್ಯಸಿಡ್ ದಾಳಿಗೆ (Acid Attack) ಒಳಗಾಗಿ ಸಂಕಷ್ಟಕ್ಕೆ ತುತ್ತಾಗಿದ್ದ ಸಂತ್ರಸ್ತೆ ಸ್ನಾತಕೋತ್ತರ ಪದವೀಧರೆಗೆ ತಮ್ಮ ಸಚಿವಾಲಯದಲ್ಲಿ ಉದ್ಯೋಗ ನೀಡಲು ಸಿಎಂ ಸಿದ್ದರಾಮಯ್ಯ (Siddaramaiah) ಸೂಚಿಸಿದ್ದಾರೆ.

    ತಮ್ಮ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ಸಿಎಂ ಸಂತ್ರಸ್ತೆಯ ಅಹವಾಲನ್ನು ಕೇಳಿ ಸ್ಥಳದಲ್ಲೇ ಉದ್ಯೋಗದ ಭರವಸೆ ನೀಡಿದರು. 2022ರ ಏಪ್ರಿಲ್ 28 ರಂದು ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ತೆ ಎಂ.ಕಾಂ (M.Com) ಪದವೀಧರೆ ಆಗಿದ್ದಾರೆ. ತಂದೆ ಮತ್ತು ತಾಯಿಯ ಜೊತೆ ಜನತಾ ದರ್ಶನಕ್ಕೆ ಬಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.

    ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ (Basavaraj Bommai) ಅವರಲ್ಲೂ ಉದ್ಯೋಗದ ಮನವಿ ಮಾಡಿದ್ದೆವು. ಅವರು ಭರವಸೆ ನೀಡಿದ್ದರು. ಆದರೆ ಉದ್ಯೋಗ ಕೊಡಲಿಲ್ಲ ಎಂದು ಅಳಲು ತೋಡಿಕೊಂಡರು. ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿಗಳು ತಮ್ಮ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ದೆಹಲಿ ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಸಾಮಾನ್ಯನಂತೆ ಮೆಟ್ರೋದಲ್ಲಿ ಬಂದ ಪ್ರಧಾನಿ ಮೋದಿ

    ಪ್ರಕರಣ ಏನು?: ಆ್ಯಸಿಡ್ ದಾಳಿ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ (Kamakshipaly Police Station) ಪ್ರಕರಣ ದಾಖಲಾಗಿತ್ತು. ತನಿಖೆಗೆ ಇಳಿದ ಪೊಲೀಸರು, ಆರೋಪಿ ಸ್ವಾಮಿ ವೇಷದಲ್ಲಿ ತಿರುವಣ್ಣಾಮಲೈ ಆಶ್ರಮದಲ್ಲಿ ತಲೆ ಮರೆಸಿಕೊಂಡಿರುವುದನ್ನು ಪತ್ತೆ ಹಚ್ಚಿದರು. ಬಳಿಕ ಭಕ್ತರ ವೇಷದಲ್ಲಿ ಹೋಗಿ ಆರೋಪಿಯನ್ನು ಬಂಧಿಸಿದ್ದರು.

    ಸದ್ಯ ಆರೋಪಿ ಬೆಂಗಳೂರು ಜೈಲಿನಲ್ಲಿದ್ದಾನೆ. ಸಂತ್ರಸ್ತೆ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಿದ್ದಾರೆ. ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ನೀಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳೆ, ಮಕ್ಕಳು ಸೇರಿ ನಾಲ್ವರ ಮೇಲೆ ಆ್ಯಸಿಡ್ ದಾಳಿ

    ಮಹಿಳೆ, ಮಕ್ಕಳು ಸೇರಿ ನಾಲ್ವರ ಮೇಲೆ ಆ್ಯಸಿಡ್ ದಾಳಿ

    ಭುವನೇಶ್ವರ: ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರು (Women) ಹಾಗೂ ಇಬ್ಬರು ಮಕ್ಕಳ (Children) ಮೇಲೆ ಆ್ಯಸಿಡ್ ದಾಳಿ (Acid Attack) ನಡೆಸಿದ ಘಟನೆ ಓಡಿಶಾದ (Odisha) ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.

    ಚಂದನ್ ರಾಣಾ ಆರೋಪಿ. ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಂಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ರಾಣಾ ತನ್ನ 2ನೇ ಪತ್ನಿಯನ್ನು ನೀಲಗಿರಿ ಪ್ರದೇಶದ ಸಂತರಗಡಿಯಾದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಲು ಮಾವನ ಮನೆಗೆ ಬಂದಿದ್ದ.

    ಆದರೆ ಮಹಿಳೆಯು ಆತನೊಂದಿಗೆ ಹೋಗಲು ನಿರಾಕರಿಸಿದ್ದರಿಂದ ರಾಣಾ ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ. ಈ ವೇಳೆ ಮಹಿಳೆಯ ರಕ್ಷಣೆಗೆ ಬಂದ ಆಕೆಯ ಅಕ್ಕನಿಗೂ ಆ್ಯಸಿಡ್ ಎರಚಿದ್ದಾನೆ. ದಾಳಿ ವೇಳೆ ಅಕ್ಕನ ಮಗ ಹಾಗೂ ಮಗಳು ಗಾಯಗೊಂಡಿದ್ದಾರೆ.

    ಘಟನೆಯ ನಂತರ ಗಾಯಗೊಂಡ ನಾಲ್ವರನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮಕ್ಕಳು ಹಾಗೂ ಮಹಿಳೆಯ ಸ್ಥಿತಿ ಸ್ಥಿರವಾಗಿದ್ದು, ಆರೋಪಿಯ 2ನೇ ಪತ್ನಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: 10 ವರ್ಷದ ಫೀಸ್ ಕಟ್ಟೋಕೆ ಶಾಲೆಗಳಿಂದ ಆಫರ್ – ನಯಾ ಪ್ಲ್ಯಾನ್‍ಗೆ ಪೋಷಕರು ಕಂಗಾಲು

    ಘಟನೆಯ ನಂತರ ಆರೋಪಿ ರಾಣಾ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೂಜೆ ವಿಷಯಕ್ಕೆ ಗಲಾಟೆ – ದೇವಾಲಯದಲ್ಲೇ ಗ್ರಾಮಸ್ಥರಿಂದ ಅರ್ಚಕನಿಗೆ ಹಿಗ್ಗಾಮುಗ್ಗಾ ಥಳಿತ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k