Tag: acharya film

  • `ಆಚಾರ್ಯ’ ಚಿತ್ರಕ್ಕಾಗಿ ನಿರ್ಮಿಸಿದ್ದ 20 ಕೋಟಿ ವೆಚ್ಚದ ಸೆಟ್ ಬೆಂಕಿಗಾಹುತಿ

    `ಆಚಾರ್ಯ’ ಚಿತ್ರಕ್ಕಾಗಿ ನಿರ್ಮಿಸಿದ್ದ 20 ಕೋಟಿ ವೆಚ್ಚದ ಸೆಟ್ ಬೆಂಕಿಗಾಹುತಿ

    ಮೆಗಾಸ್ಟಾರ್ ಚಿರಂಜೀವಿ- ರಾಮ್ ಚರಣ್ (Ramcharan) ನಟನೆಯ `ಆಚಾರ್ಯ’ (Acharya Film) ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಮಾಡೋದರಲ್ಲಿ ಸೋತಿತ್ತು. ಆದರೆ ಸಿನಿಮಾಗಾಗಿ 20 ಕೋಟಿ ವೆಚ್ಚದ ಸೆಟ್‌ನ್ನ ನಿರ್ಮಾಣ ಮಾಡಲಾಗಿತ್ತು. ಇದೀಗ ಈ ಸೆಟ್ ಬೆಂಕಿಗಾಹುತಿ ಆಗಿದೆ.

    ಕೊರಟಾಲ ಶಿವ ನಿರ್ದೇಶನದ `ಆಚಾರ್ಯ’ ಚಿತ್ರದಲ್ಲಿ ಚಿರಂಜೀವಿ- ರಾಮ್ ಚರಣ್ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದರು. ಚಿರಂಜೀವಿ (Megastar Chiranjeevi) ಅವರ ಖಾಸಗಿ ಜಾಗದಲ್ಲಿ 20 ಕೋಟಿ ರೂಪಾಯಿ ವೆಚ್ಚದ ದೇವಸ್ಥಾನದ ಪಟ್ಟಣದ (Temple Set) ಅದ್ದೂರಿ ಸೆಟ್ ಕೂಡ ನಿರ್ಮಾಣ ಮಾಡಲಾಗಿತ್ತು. 20 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿತ್ತು. ಇದೀಗ ಈ ಸೆಟ್‌ಗೆ ಬೆಂಕಿ (Fire) ಬಿದ್ದಿದೆ.

    ಮುಂದೆ ತಮ್ಮ ಸಿನಿಮಾ ನಂತರ ಬೇರೆ ಚಿತ್ರದ ಶೂಟಿಂಗ್‌ಗೂ ಕೊಡಬಹುದು ಎಂಬ ಕಾರಣಕ್ಕೆ ಈ ಸೆಟ್‌ನ್ನ ಹಾಗೆಯೇ ಇರಿಸಲಾಗಿತ್ತು. ಇನ್ನೂ ಸೋಮವಾರ (ಫೆ.27)ರಂದು ಸಂಜೆ ಕೆಲವರು ಈ ಜಾಗದಲ್ಲಿ ಸಿಗರೇಟ್ ಸೇದಿದ್ದಾರೆ. ಅವರು ಎದ್ದು ಹೋದ ಮೇಲೆ ಸೆಟ್‌ಗೆ ಬೆಂಕಿ ತಗುಲಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದ್ದರು ಕೂಡ ಅವರು ಬರುವ ವೇಳೆಗೆ ಇಡೀ ಸೆಟ್ ಬೆಂಕಿಗಾಹುತಿ ಆಗಿದೆ.  ಇದನ್ನೂ ಓದಿ: ಪೂಜಾ ಗಾಂಧಿ ಕನ್ನಡ ಪ್ರೀತಿಗೆ ಭೇಷ್ ಎಂದ ಕನ್ನಡಿಗರು

    ಇನ್ನೂ ಈ ಬೆಂಕಿ ದುರಂತದ ವೇಳೆ ಯಾರು ಸ್ಥಳದಲ್ಲಿ ಇಲ್ಲದ ಕಾರಣ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 100 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿದ್ದ ಈ ಚಿತ್ರದ ಸೋಲಿನಿಂದ ಚಿರಂಜೀವಿ ತತ್ತರಿಸಿದ್ದರು. ಈಗ ಸಿನಿಮಾ ಸೆಟ್‌ಗೆ ಅಗ್ನಿ ಅವಘಡ ಸಂಭವಿಸಿರೋದು ಅಭಿಮಾನಿಗಳಲ್ಲಿ ಬೇಸರ ಮೂಡಿದೆ.

  • `ಆಚಾರ್ಯ’ ಚಿತ್ರದ ಸೋಲಿನಿಂದ ಮೆಗಾಸ್ಟಾರ್ ಚಿರಂಜೀವಿಗೆ ಸಂಕಷ್ಟ

    `ಆಚಾರ್ಯ’ ಚಿತ್ರದ ಸೋಲಿನಿಂದ ಮೆಗಾಸ್ಟಾರ್ ಚಿರಂಜೀವಿಗೆ ಸಂಕಷ್ಟ

    ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್‌ಚರಣ್ ನಟನೆಯ `ಆಚಾರ್ಯ’ ಸಿನಿಮಾ ಗಲ್ಲಾಪೆಟ್ಟಿಗೆ ಸೌಂಡ್ ಮಾಡೋದ್ರಲ್ಲಿ ಸೋತಿತ್ತು. ಈಗ `ಆಚಾರ್ಯ’ ಚಿತ್ರದಿಂದ ನಿರ್ದೇಶಕ ಕೊರಟಾಲ ಶಿವ ಮತ್ತು ಚಿರಂಜೀವಿ ಸಂಕಷ್ಟವೊಂದನ್ನ ಎದುರಿಸುತ್ತಿದ್ದಾರೆ. `ಆಚಾರ್ಯ’ ಚಿತ್ರದ ನಷ್ಟದಿಂದ 25 ಪ್ರದರ್ಶಕರು ಕಛೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

    ಚಿರಂಜೀವಿ ಮತ್ತು ರಾಮ್‌ಚರಣ್ ನಟಿಸಿರುವ `ಆಚಾರ್ಯ’ ಸಿನಿಮಾ ಹೀನಾಯ ಸೋಲನ್ನೇ ಕಂಡಿದೆ. ಚಿತ್ರಕಥೆಗೆ ಸಪ್ಪೆ ಪ್ರತಿಕ್ರಿಯೆ ಸಿಕ್ಕಿತು. ಈ ಚಿತ್ರದಿಂದ ಲಾಭಕ್ಕಿಂತ ನಷ್ಟವೇ ಆಗಿರೋದು ಜಾಸ್ತಿ. ಹಾಗಾಗಿ ಈ ಚಿತ್ರದ ಪ್ರದರ್ಶಕರು ನಿನ್ನೆ ರಾತ್ರಿಯಿಂದ ಕಛೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸದಿದ್ದರೆ ನಟ ಚಿರಂಜೀವಿ ಮನೆ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

    ಕೊನಿಡೆಲಾ ಪ್ರೊಡಕ್ಷನ್ ಮತ್ತು ಮ್ಯಾಟಿನಿ ಎಂಟರ್‌ಟೈನ್‌ಮೆಂಟ್ ಸಾರಥ್ಯದಲ್ಲಿ `ಆಚಾರ್ಯ’ ಚಿತ್ರವನ್ನ 140 ಕೋಟಿಯ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿರೋದು 76 ಕೋಟಿ ಮಾತ್ರ. ಈ ಚಿತ್ರದ ಸೋಲಿನಿಂದ 20ಕ್ಕೂ ಹೆಚ್ಚು ಪ್ರದರ್ಶಕರಿಗೆ ತೊಂದರೆಯಾಗಿದೆ. ಹಾಗಾಗಿ ಚಿತ್ರತಂಡದ ವಿರುದ್ಧವಾಗಿ ಪ್ರದರ್ಶಕರು ನಿಂತಿದ್ದಾರೆ. ಇದನ್ನೂ ಓದಿ:ಕನ್ನಡ, ಕನ್ನಡಿಗರನ್ನೇ ಮರೆತು ಬಿಟ್ಟರಾ ‘ಕೆಜಿಎಫ್ 2’ ನಿರ್ದೇಶಕ ಪ್ರಶಾಂತ್ ನೀಲ್ : ಏನಿದು ಹೊಸ ಆರೋಪ?

    ಸದ್ಯ ನಟ ಚಿರಂಜೀವಿ `ಗಾಡ್‌ಫಾದರ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ `ಆಚಾರ್ಯ’ ಚಿತ್ರದಿಂದ ನಷ್ಟ ಅನುಭವಿಸುತ್ತಿರುವವರಿಗೆ ಚಿತ್ರತಂಡ ಸಾಥ್‌ ನೀಡುತ್ತಾ ಅಂತಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ಆಚಾರ್ಯ’ ಸಿನಿಮಾಗೆ ಮಹೇಶ್ ಬಾಬು ಧ್ವನಿ

    `ಆಚಾರ್ಯ’ ಸಿನಿಮಾಗೆ ಮಹೇಶ್ ಬಾಬು ಧ್ವನಿ

    ಟಾಲಿವುಡ್‌ನಲ್ಲಿ ಸದ್ಯ ಹೈಪ್ ಕ್ರಿಯೇಟ್ ಮಾಡಿರೋ ಚಿತ್ರ ಮೆಗಾಸ್ಟಾರ್ ಚಿರಂಜೀವಿ ನಟನೆಯ `ಆಚಾರ್ಯ’ ಸಿನಿಮಾಗೆ ಪ್ರಿನ್ಸ್ ಮಹೇಶ್ ಬಾಬು ಸಾಥ್ ನೀಡಿದ್ದಾರೆ. `ಆಚಾರ್ಯ’ ಚಿತ್ರಕ್ಕೆ ಸ್ಟಾರ್ ನಟ ಮಹೇಶ್ ಬಾಬು ಧ್ವನಿ ನೀಡಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಆಚಾರ್ಯ ಚಿತ್ರಕ್ಕೆ ಮಹೇಶ್ ಬಾಬು ವಾಯ್ಸ್ ನೀಡಿದ್ದಾರೆ. ಚಿತ್ರದ ಭಾಗವಾಗಿರೋ `ಪದಘಟ್ಟಂ’ಗೆ ತಮ್ಮ ಧ್ವನಿ ನೀಡುವುದರ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಮಹೇಶ್ ಬಾಬು ಪವರ್‌ಫುಲ್ ವಾಯ್ಸ್ಗೆ ಮತ್ತು ಚಿತ್ರತಂಡಕ್ಕೆ ಜೊತೆಯಾಗಿರೋದಕ್ಕೆ ಚಿರಂಜೀವಿ ಮತ್ತು ರಾಮ್ ಚರಣ್ ಖುಷಿಪಟ್ಟಿದ್ದಾರೆ.

    `ಆಚಾರ್ಯ’ ತಂಡ ಸೇರಿ ಈ ಚಿತ್ರ ಮತ್ತಷ್ಟು ವಿಶೇಷವನ್ನಾಗಿ ಮಾಡಿದ್ದೀರಾ ಎಂದು ಈ ಕುರಿತು ಟ್ವಿಟರ್ ಮೂಲಕ `ಸರ್ಕಾರಿ ವಾರಿ ಪಾಟ’ ಸ್ಟಾರ್‌ಗೆ ಚಿರಂಜೀವಿ ಮತ್ತು ರಾಮ್ ಚರಣ್ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರದ ಮೊದಲ ಸಾಂಗ್ ಇಂದು ರಿಲೀಸ್

    ಚಿತ್ರದ ಟ್ರೇಲರ್ ಮತ್ತು ಹಾಡುಗಳಿಂದ ಮೋಡಿ ಮಾಡಿರೋ `ಆಚಾರ್ಯ’ ಚಿತ್ರ ಇದೇ ಏಪ್ರಿಲ್ 29ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಚಿರಂಜೀವಿ ಮತ್ತು ರಾಮ್ ಚರಣ್ ಜತೆಗೆ ಕಾಜಲ್ ಮತ್ತು ಪೂಜಾ ಹೆಗ್ಡೆ ಕೂಡ ನಟಿಸಿದ್ದಾರೆ.