Tag: acharya

  • ಸೌಂದರ್ಯವಿದ್ದರೂ ಅವಕಾಶವಿಲ್ಲ ಎಂದ ಹನಿ ರೋಸ್ ಫ್ಯಾನ್ಸ್

    ಸೌಂದರ್ಯವಿದ್ದರೂ ಅವಕಾಶವಿಲ್ಲ ಎಂದ ಹನಿ ರೋಸ್ ಫ್ಯಾನ್ಸ್

    ನ್ನ ಬ್ಯೂಟಿಯಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಹನಿ ರೋಸ್ (Honey Rose) ಗೆ ಅವಕಾಶಗಳೇ ಇಲ್ಲವಂತೆ. ಸಖತ್ ಬೋಲ್ಡ್ ಆಗಿರುವಂತಹ ಪಾತ್ರಗಳನ್ನು ಮಾಡಿದರೂ ಅವರಿಗೆ ಅವಕಾಶ ಯಾಕೆ ಹುಡುಕಿಕೊಂಡು ಬರುತ್ತಿಲ್ಲ ಎನ್ನುವುದು ಅವರ ಅಭಿಮಾನಿಗಳ ಚಿಂತೆಯಾಗಿದೆ.

    ಸದಾ ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಾಕುತ್ತಾ, ಅಭಿಮಾನಿಗಳ ಕಾಮೆಂಟ್ ಗಳನ್ನು ಎಂಜಾಯ್ ಮಾಡುವ  ಹನಿ ರೋಸ್, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.  ಬಾಲಕೃಷ್ಣ (Balakrishna) ಜೊತೆ ನಟಿಸಿದ್ದ ವೀರ ಸಿಂಹ ರೆಡ್ಡಿ ಚಿತ್ರ ಭಾರೀ ಗೆಲುವು ಕಂಡಿದೆ. ಆದರೂ, ಹನಿಗೆ ಅವಕಾಶವಿಲ್ಲವಂತೆ.

    ಸೌಂದರ್ಯದ ಜೊತೆಗೆ ಪ್ರತಿಭೆಯೂ ಇದೆ. ಆದರೂ, ಸಿನಿಮಾ ರಂಗ ನಿಮ್ಮನ್ನು ಗುರುತಿಸುತ್ತಿಲ್ಲವಲ್ಲ ಯಾಕೆ ಎಂದು ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದ್ದಾನೆ. ನಿಮ್ಮನ್ನು ಕೇವಲ ಐಟಂ ಸಾಂಗ್ ಗೆ ಮಾತ್ರ ಸೀಮಿತ ಮಾಡಿದ್ದಾರಾ ಎನ್ನುವ ಪ್ರಶ್ನೆಯನ್ನೂ ಹಾಕಿದ್ದಾರೆ. ಇದನ್ನೂ ಓದಿ: ಕ್ರಿಕೆಟರ್ ಆಗುವ ಕನಸು ಕಂಡ ಬಡ ಹುಡುಗಿಗೆ ನಟ ಅರ್ಜುನ್ ಕಪೂರ್ ಸಾಥ್

    ಹನಿ ರೋಸ್ ಅವಕಾಶಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳೇ ನಟಿಗೆ ಎದುರಾಗಿವೆ. ನಿರ್ದೇಶಕರ ಜೊತೆ ಕಿರಿಕ್ ಏನಾದರೂ ಮಾಡಿಕೊಂಡಿದ್ದೀರಾ? ಅದಕ್ಕಾಗಿ ಅವಕಾಶಗಳು ನಿಮ್ಮಿಂದ ದೂರವಾಗುತ್ತಿದ್ದಾವಾ ಎನ್ನುವ ಅನುಮಾನವನ್ನೂ ಕೆಲವರು ವ್ಯಕ್ತ ಪಡಿಸಿದ್ದಾರೆ.

    ಸೌಂದರ್ಯದ ಗಣಿಯೇ ಆಗಿರುವ ಹನಿಗೆ ತೂಕ ಇಳಿಸಿಕೊಳ್ಳುವಂತೆ ಕೆಲವರು ಸಲಹೆ ನೀಡಿದ್ದಾರೆ. ತೂಕ ಇಳಿಸಿಕೊಂಡರೆ ನಿರ್ದೇಶಕರು ನಿಮ್ಮನ್ನು ಕರೆಯಬಹುದು ಅನಿಸತ್ತೆ. ಅದೊಂದು ಸಲ ಟ್ರೈ ಮಾಡಿ ಎಂದು ಕೆಲವರು ಬಿಟ್ಟಿ ಸಲಹೆ ನೀಡಿದ್ದಾರೆ.

  • ಮೆಗಾ ಸ್ಟಾರ್ ಚಿರಂಜೀವಿ ಮನೆಯ ಮುಂದೆ ಮೆಗಾ ಡ್ರಾಮಾ : 20 ಕೋಟಿ ವಾಪಸ್ಸು

    ಮೆಗಾ ಸ್ಟಾರ್ ಚಿರಂಜೀವಿ ಮನೆಯ ಮುಂದೆ ಮೆಗಾ ಡ್ರಾಮಾ : 20 ಕೋಟಿ ವಾಪಸ್ಸು

    ತೆಲುಗಿನ ಖ್ಯಾತ ನಟ ಚಿರಂಜೀವಿ ಮನೆಯ ಮುಂದೆ ಆಚಾರ್ಯ ಸಿನಿಮಾದ ವಿತರಕರು ಇಂದು ಧರಣಿ ಮಾಡುವುದಾಗಿ ತಿಳಿಸಿದ್ದರು. ಅವರು ಹೇಳಿದಂತೆ ಧರಣಿಯನ್ನೂ ಆರಂಭಿಸಿದ್ದರು. ವಿತರಕರ ಒತ್ತಡಕ್ಕೆ ಕೊನೆಗೂ ಮೆಗಾಸ್ಟಾರ್ ಕುಟುಂಬ ಮಣಿದಿದೆ ಎಂದು ಹೇಳಲಾಗುತ್ತಿದೆ. ವಿತರಕ ಬೇಡಿಕೆಯನ್ನು ಅವರು ಈಡೇರಿಸಿದ್ದಾರೆ ಎನ್ನುವ ಮಾಹಿತಿ ಬರುತ್ತಿದೆ.

    ಚಿರಂಜೀವಿ ಮತ್ತು ಪುತ್ರ ರಾಮ್ ಚರಣ್ ಕಾಂಬಿನೇಷನ್ ನ ಆಚಾರ್ಯ ಸಿನಿಮಾವನ್ನು ವಿತರಕರು ಭಾರೀ ಮೊತ್ತ ಕೊಟ್ಟು ಖರೀದಿಸಿದ್ದರು. ಈ ಸಿನಿಮಾದಿಂದ ಸಾಕಷ್ಟು ಹಣ ಹರಿದು ಬರುತ್ತದೆ ಎಂದು ಹೇಳಲಾಗಿತ್ತು. ಆದರೆ, ಆಚಾರ್ಯ ಸಿನಿಮಾ ತಂಡವನ್ನು ಕೈ ಹಿಡಿಯಲಿಲ್ಲ. ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿತ್ತು. ಹಾಗಾಗಿ ಹಣ ವಾಪಸ್ಸು ಮಾಡಬೇಕು ಎಂದು ವಿತರಕರು ಪಟ್ಟು ಹಿಡಿದಿದ್ದರು. ಅದಕ್ಕೆ ಮೆಗಾಸ್ಟಾರ್ ಕುಟುಂಬ ಕೂಡ ಒಪ್ಪಿದೆ ಎನ್ನಲಾಗುತ್ತದೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್

    ಕೆಲ ದಿನಗಳ ಹಿಂದೆಯಷ್ಟೇ ಚಿರಂಜೀವಿ ಮತ್ತು ಈ ಸಿನಿಮಾದ ನಿರ್ದೇಶಕರು ಒಟ್ಟಾಗಿ ಕೂತು ಚರ್ಚಿಸಿ, ವಾಪಸ್ಸು ಹಣ ಕೊಡುವ ಕುರಿತು ಮಾತನಾಡಿದ್ದರಂತೆ. ಆದರೆ, ಅದು ಜಾರಿಯಾಗಿರಲಿಲ್ಲವಂತೆ. ಚಿರಂಜೀವಿ ಅವರ ಮನೆ ಮುಂದೆ ಧರಣಿ ಕೂರುವುದಾಗಿ ವಿತರಕರು ಹೇಳುತ್ತಿದ್ದಂತೆಯೇ ಅವರನ್ನು ಕರೆದು ಬರೋಬ್ಬರಿ 20 ಕೋಟಿ ರೂಪಾಯಿಯನ್ನು ವಾಪಸ್ಸು ಮಾಡಿದ್ದಾರೆ ಎನ್ನುವ ಸುದ್ದಿಯಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

    ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

    ನ್ನಡತಿ, ದಕ್ಷಿಣದ ಖ್ಯಾತ ಸ್ಟಾರ್ ನಟಿ ಪೂಜಾ ಹೆಗಡೆ ಸಾಲು ಸಾಲು ಸಿನಿಮಾಗಳ ಸೋಲಿನಿಂದಾಗಿ ಕಂಗೆಟ್ಟಿದ್ದಾರೆ. ಬಹುತೇಕ ಸಿನಿಮಾಗಳಲ್ಲಿ ಅವರು ಸ್ಟಾರ್ ನಟರ ಜತೆಯೇ ತೆರೆ ಹಂಚಿಕೊಂಡಿದ್ದರೂ, ಚಿತ್ರಗಳ ಸೋಲಿನಿಂದಾಗಿಯೇ ಪೂಜಾ ನೊಂದುಕೊಂಡಿದ್ದಾರೆ. ಆದರೂ, ತಮಗೆ ಸಿಗುತ್ತಿರುವ ಅವಕಾಶಗಳಿಗೇನೂ ಕಡಿಮೆ ಇಲ್ಲ ಎಂದೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

    ಪ್ರಭಾಸ್ ಜೊತೆ ನಟಿಸಿದ್ದ ‘ರಾಧೆ ಶ್ಯಾಮ್’ ಸಿನಿಮಾ ಅಂದುಕೊಂಡಷ್ಟು ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಮಾಡಲಿಲ್ಲ. ಚಿತ್ರಕ್ಕೆ ಒಂದೊಳ್ಳೆ ವಿಮರ್ಶೆ ಕೂಡ ಬರಲಿಲ್ಲ. ಪ್ರಭಾಸ್ ಮತ್ತು ಪೂಜಾ ಹಿಟ್ ಜೋಡಿ ಆಗುವ ಕನಸನ್ನು ನುಚ್ಚು ನೂರು ಮಾಡಿತು ರಾಧೆ ಶ್ಯಾಮ್ ಸಿನಿಮಾ. ನಂತರ ಬಂದ ವಿಜಯ್ ಜತೆಗಿನ ಬಿಸ್ಟ್ ಕೂಡ ಪೂಜಾರನ್ನು ಕೈ ಹಿಡಿಯಲಿಲ್ಲ. ಓಪನಿಂಗ್ ಚೆನ್ನಾಗಿಯೇ ತಗೆದುಕೊಂಡರೂ, ನಂತರ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಸೋಲುಂಡಿತು. ಮೊನ್ನೆಯಷ್ಟೇ ರಿಲೀಸ್ ಆಗಿರುವ ಆಚಾರ್ಯ ಸಿನಿಮಾ ಕೂಡ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

    ಇದೇ ವರ್ಷದಲ್ಲೇ ತೆರೆಕಂಡ ಈ ಮೂರು ಸಿನಿಮಾಗಳು ಭಾರೀ ಬಜೆಟ್ ಚಿತ್ರಗಳಾಗಿದ್ದವು. ಇದ್ದವರೆಲ್ಲ ಸೂಪರ್ ಸ್ಟಾರ್ ಗಳು. ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಚಿತ್ರಗಳನ್ನು ರಿಲೀಸ್ ಮಾಡಲಾಗಿತ್ತು. ಆದರೂ, ಪೂಜಾ ಅವರ ಅದೃಷ್ಟವನ್ನು ಈ ಸಿನಿಮಾಗಳು ಬದಲಿಸಲಿಲ್ಲ. ಹೀಗೆಲ್ಲ ಆದರೂ, ಅವರಿಗೆ ಅವಕಾಶಗಳಿಗೇನೂ ಕೊರತೆ ಆಗಿಲ್ಲವಂತೆ. ಬಾಲಿವುಡ್ ನಿಂದಲೂ ಆಫರ್ ಬರುತ್ತಿದ್ದು, ಪಾತ್ರಗಳಿಗೆ ಗಟ್ಟಿತನವಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ ಪೂಜಾ.

  • ಬಾಕ್ಸಾಫೀಸ್‍ನಲ್ಲಿ ಮಕಾಡೆ ಮಲಗಿದ ಆಚಾರ್ಯರು: ಮೆಗಾ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ

    ಬಾಕ್ಸಾಫೀಸ್‍ನಲ್ಲಿ ಮಕಾಡೆ ಮಲಗಿದ ಆಚಾರ್ಯರು: ಮೆಗಾ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ

    ಮೆಗಾಸ್ಟಾರ್ ಚಿರಂಜೀವಿ ಹಾಗೂ ಮೆಗಾ ಪವರ್ ಸ್ಟಾರ್ ರಾಮ್‍ಚರಣ್ ಅಭಿನಯಿಸಿರುವ ಆಚಾರ್ಯ ಚಿತ್ರ ಏಪ್ರಿಲ್ 29 ರಂದು ಜಗತ್ತಿನಾದ್ಯಂತ ತೆರೆ ಕಂಡಿತ್ತು. ಚಿತ್ರವು ಬಾಕ್ಸಾಫೀಸ್‍ನಲ್ಲಿ ಅಷ್ಟೇನು ಹೇಳಿಕೊಳ್ಳುವಷ್ಟು ಕಮಾಲು ಮಾಡದೆ ನೀರಸ ಪ್ರದರ್ಶನ ತೋರಿದೆ.

    ಚಿತ್ರದಲ್ಲಿ ಇಬ್ಬರು ಮಹಾನ್ ಕಲಾವಿದರಿದ್ದರು. ಸಿನಿಮಾದ ಮೇಕಿಂಗ್ ಸರಿ ಇಲ್ಲ ಎನ್ನುವ ಕಾರಣಕ್ಕೇ ಪ್ರೇಕ್ಷಕರು ದೂರ ಸರಿಯಿತ್ತಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಈಗ ಈ ಚಿತ್ರ ಜಗತ್ತಿನಾದ್ಯಂತ ಹಣ ಗಳಿಸಲು ಹೆಣಗಾಡುತ್ತಿದೆ. ಇದನ್ನೂ ಓದಿ: ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ 18ನೇ ದಿನವೂ ರಾಕಿಭಾಯ್ ಅಬ್ಬರ: 400 ಕೋಟಿಯತ್ತ `ಕೆಜಿಎಫ್ 2′

    ಮೂರು ದಿನಗಳಲ್ಲಿ ಆಚಾರ್ಯ ವಿಶ್ವಾದ್ಯಂತ 73.1 ಕೋಟಿ ಕಲೆಕ್ಷನ್ ಮಾಡಿದ್ದು, ಥಿಯೇಟರ್‌ಗಳಲ್ಲಿ ಇನ್ನೇನೂ ಬಹಳ ದಿನ ರನ್ ಆಗುವ ಹಂತದಲ್ಲಿಲ್ಲ. ವರದಿಯ ಪ್ರಕಾರ ಚಿತ್ರದ ಥಿಯೇಟ್ರಿಕಲ್ ರೈಟ್ಸ್ 140 ಕೋಟಿ ರೂ. ಸಂಗ್ರಹವನ್ನು ನೋಡಿದರೆ ಆಚಾರ್ಯರು ಗಲ್ಲಾ ಪೆಟ್ಟಿಗೆಯಲ್ಲಿ ಮಕಾಡೆ ಮಲಗುವುದಂತು ಗ್ಯಾರಂಟಿ. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?

    ಮೊದಲವಾರಂತ್ಯದಲ್ಲಿ ಚಿತ್ರವೂ ಕೇವಲ ರೂ. 73 ಕೋಟಿ ಕಲೆಕ್ಷನ್ ಮಾಡಿದ್ದು, ಆರ್‍ಆರ್‍ಆರ್ ಮತ್ತು ಕೆಜಿಎಫ್-ಚಾಪ್ಟರ್ 2 ಚಿತ್ರದ ಅಬ್ಬರದಿಂದಾಗಿ ಚಿತ್ರ ತಂಡಕ್ಕೆ ದೊಡ್ಡ ನಿರಾಸೆಯಾಗಿದೆ. ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದು, ನಾಯಕಿಯಾಗಿ ಕನ್ನಡತಿ ಪೂಜಾ ಹೆಗ್ಡೆ ನಟಿಸಿದ್ದಾರೆ.

  • ಮೆಗಾಸ್ಟಾರ್ ರೋಮ್ಯಾನ್ಸ್‌ಗೆ ನಾಚಿನೀರಾದ ಪೂಜಾ ಹೆಗ್ಡೆ: ವೀಡಿಯೋ ವೈರಲ್

    ಮೆಗಾಸ್ಟಾರ್ ರೋಮ್ಯಾನ್ಸ್‌ಗೆ ನಾಚಿನೀರಾದ ಪೂಜಾ ಹೆಗ್ಡೆ: ವೀಡಿಯೋ ವೈರಲ್

    ಟಾಲಿವುಡ್ ಸ್ಟಾರ್ ಚಿರಂಜೀವಿ ಮತ್ತು ರಾಮ್‌ಚರಣ್ ನಟನೆಯ `ಆಚಾರ್ಯ’ ಇದೇ ಏಪ್ರಿಲ್ 29ಕ್ಕೆ ತೆರೆಗೆ ಬರಲಿದೆ. ಬಿಡುಗಡೆಗೂ ಮುನ್ನವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿ ಪೂಜಾ ಹೆಗ್ಡೆ ಫೋಟೋ ಕಿಕ್ಲಿಸಿಕೊಳ್ಳುವಾಗ ರೊಮ್ಯಾನ್ಸ್ ಮಾಡ್ತಿರೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    `ಆಚಾರ್ಯ’ ಚಿತ್ರ ತೆರೆಗೆ ಅಪ್ಪಳಿಸಲು ದಿನಗಣನೆ ಶುರುವಾಗಿದೆ. ಜೊತೆಗೆ ಚಿತ್ರತಂಡದ ಭರ್ಜರಿ ಪ್ರಮೋಷನ್ ಕೂಡ ಜೋರಗಿದೆ. ಇತ್ತೀಚೆಗೆ ನಡೆದ `ಆಚಾರ್ಯ’ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಮಾಧ್ಯಮದ ಕ್ಯಾಮೆರಾ ಕಣ್ಣಿಗೆ ರಾಮ್‌ಚರಣ್, ಚಿರಂಜೀವಿ, ಪೂಜಾ ಹೆಗ್ಡೆ ಫೋಟೋ ಕ್ಲೀಕ್ ಮಾಡಿಸಿಕೊಳ್ತಿದ್ದರು. ನಂತರ ವೇದಿಕೆಯಿಂದ ಹೋಗುವಾಗ ಚಿರಂಜೀವಿ ಅವರು ಗಾಳಿಪಟದ ದಾರದ ರೀತಿಯಲ್ಲಿ ಸೀರೆ ಎಳೆಯುವಂತೆ ಕಾಣಿಸಿದೆ.  ನಟಿ ಪೂಜಾ ಮತ್ತೆ ನಗು ನಗುತ್ತಾ ಬರುವಾಗ ಮಗ ರಾಮ್‌ಚರಣ್‌ಗೆ ಹೋಗು ಅಂತಾ ಹೇಳಿರೋ ರೀತಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಹೀಗೆ ಸಹನಟಿ ಜೊತೆ ಮೆಗಾಸ್ಟಾರ್‌ ಚಿರಂಜೀವಿ ಮಾಡ್ತಿರೋ ವಿಡಿಯೋ ಬಾರೀ ವೈರಲ್ ಆಗಿದೆ.

    ಈ ವಿಡಿಯೋಸ್ ರೀ-ಟ್ವೀಟ್ ಮಾಡಿ, ಸ್ವೀಟೇಷ್ಟ್ ಎವರ್ ಜೋಯಿವರ್ ಅಂತಾ ಟ್ವಿಟ್ ಮಾಡಿದ್ದಾರೆ. ಬೊಟ್ಟಬೊಮ್ಮ ಮತ್ತು ಮೆಗಾಸ್ಟಾರ್ ಆಫ್‌ಸ್ಕ್ರೀನ್‌ಗೆ ಪ್ರೇಂಡ್‌ಶಿಪ್ ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಮೇ ತಿಂಗಳಿಂದ ಸಲಾರ್ ಶೂಟಿಂಗ್ ಶುರು: ರೆಡಿಯಾಗ್ತಿದ್ದಾರೆ ಪ್ರಶಾಂತ್ ನೀಲ್

    ಇನ್ನು ಚಿತ್ರದ ಪೋಸ್ಟರ್ ಲುಕ್ ಮತ್ತು ಟ್ರೇಲರ್‌ನಿಂದ ಸಖತ್ ಸೌಂಡ್ ಮಾಡಿರೋ `ಆಚಾರ್ಯ’ ಸಿನಿಮಾ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರಕ್ಕಾಗಿ ಕಾಯ್ತಿದ್ದಾರೆ.

  • ʼಆಚಾರ್ಯ’ ಸಿನಿಮಾದಲ್ಲಿ ಕಾಜಲ್ ಇಲ್ಲ: ಶಾಕಿಂಗ್ ನ್ಯೂಸ್ ಕೊಟ್ಟ ನಿರ್ದೇಶಕ ಕೊರಟಾಲ ಶಿವ

    ʼಆಚಾರ್ಯ’ ಸಿನಿಮಾದಲ್ಲಿ ಕಾಜಲ್ ಇಲ್ಲ: ಶಾಕಿಂಗ್ ನ್ಯೂಸ್ ಕೊಟ್ಟ ನಿರ್ದೇಶಕ ಕೊರಟಾಲ ಶಿವ

    ಟಾಲಿವುಡ್ ಬ್ಯೂಟಿ ಕಾಜಲ್ ಅಗರ್ವಾಲ್ ಅವರು ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ ‘ಆಚಾರ್ಯ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ಈ ಕುರಿತು ಕಾಜಲ್ ಅಪ್ಡೇಟ್‌ಗಳು ಮಾತ್ರ ಬರುತ್ತಿರಲಿಲ್ಲ. ಅಭಿಮಾನಿಗಳಲ್ಲಿ ಕಾಜಲ್ ಈ ಸಿನಿಮಾದಲ್ಲಿ ಇರುವ ಬಗ್ಗೆ ಅನುಮಾನ ಮೂಡಿತ್ತು. ಆದರೆ ‘ಆಚಾರ್ಯ’ ಸಿನಿಮಾ ನಿರ್ದೇಶಕ ಕೊರಟಾಲ ಶಿವ ಈ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ.

    ‘ಆಚಾರ್ಯ’ ಸಿನಿಮಾದಲ್ಲಿ ಚಿರಂಜೀವಿಗೆ ನಾಯಕಿಯಾಗಿ ಕಾಜಲ್ ನಟಿಸುತ್ತಾರೆ ಎಂಬ ಚಿತ್ರತಂಡವೇ ಅಧಿಕೃತವಾಗಿ ಫೋಷಿಸಿತ್ತು. ಆದರೆ ಕಾಜಲ್ ಗರ್ಭಿಣಿಯಾದ ಬಳಿಕ ಸಿನಿಮಾ ಶೂಟಿಂಗ್ ಬಂದಿಲ್ಲ. ಈ ಹಿನ್ನೆಲೆ ಚಿತ್ರತಂಡ ಕಾಜಲ್ ಅವರು ಶೂಟ್ ಮಾಡಿದ್ದ ಕೆಲವು ದೃಶ್ಯಗಳನ್ನು ಸಿನಿಮಾದಿಂದ ಎಡಿಟ್ ಮಾಡಲಾಗಿದೆ ಎಂದು ಕೊರಟಾಲ ಶಿವ ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಪ್ರೆಗ್ನೆನ್ಸಿಯಲ್ಲೂ ಫಿಟ್‍ನೆಸ್ ಇರಬೇಕು ಎಂದು ವೀಡಿಯೋ ಮಾಡಿದ ನಟಿ ಪ್ರಣಿತಾ

    Acharya' First Look: Chiranjeevi looks intense as the messiah for Dharmasthali | Telugu Movie News - Times of India

    ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಜಲ್ ಮೊದಲ ಶೆಡ್ಯೂಲ್ ಮುಗಿದ ನಂತರ, ಅವರು ಮತ್ತೆ ಶೂಟಿಂಗ್ ಬರುವುದು ಕಷ್ಟವಾಗುತ್ತಿತ್ತು. ಈ ಕುರಿತು ನಾನು ಮೆಗಾಸ್ಟಾರ್ ಅವರ ಜೊತೆ ಈ ಕುರಿತು ಚರ್ಚೆ ಮಾಡಿದ್ದೆ. ಆಗ ಅವರು ನೀವು ಏನು ಬೇಕಾದರೂ ನಿರ್ಧಾರ ತೆಗೆದುಕೊಳ್ಳಿ ಎಂದರು. ನಂತರ ನಾನು ಕಾಜಲ್ ಅವರಿಗೆ ಈ ಕುರಿತು ವಿವರಿಸಿದೆ. ಇದಕ್ಕೆ ಅವರು ನಗುತ್ತಲೇ ಪ್ರತಿಕ್ರಿಯಿಸಿದರು. ನಿಮ್ಮ ಪಾತ್ರವನ್ನು ಎಡಿಟ್ ಮಾಡಿರುವ ಕುರಿತು ನಾನು ವಿವರಿಸಿದೆ ಅದಕ್ಕೆ ಅವರು ಸಂಪೂರ್ಣವಾಗಿ ಸಮ್ಮತಿ ಸೂಚಿಸಿದರು ಎಂದು ವಿವರಿಸಿದ್ದಾರೆ.

    ‘ಆಚಾರ್ಯ’ ಸಿನಿಮಾದಲ್ಲಿ ಕಾಜಲ್‌ನ ಪಾತ್ರವನ್ನು ಸಂಪೂರ್ಣವಾಗಿ ಕತ್ತರಿಸಲಾಗಿದೆ. ಪೂಜಾ ಹೆಗ್ಡೆ ಅವರು ನೀಲಾಂಬರಿಯಾಗಿ ನಟಿಸಿದ್ದಾರೆ, ರಾಮ್ ಚರಣ್ ಅವರ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಚಾರ್ಯ ಸಿನಿಮಾದಲ್ಲಿ ಚಿರಂಜೀವಿ ಅವರಿಗೆ ನಾಯಕಿ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಈ ಸಿನಿಮಾದ ಟ್ರೇಲರ್ ಸಹ ರಿಲೀಸ್ ಆಗಿದ್ದು, ಇದರಲ್ಲಿಯೂ ಕಾಜಲ್ ಇಲ್ಲದೇ ಇರುವುದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿತ್ತು. ಟ್ರೇಲರ್ ಬಿಡುಗಡೆಯ ವೇಳೆಯೂ ಸಹ ಕಾಜಲ್ ಬಗ್ಗೆ ಯಾರು ಪ್ರಸ್ತಾಪಿಸಲಿಲ್ಲ. ‘ಆಚಾರ್ಯ’ ಸಿನಿಮಾ ಟ್ರೇಲರ್ ಏಪ್ರಿಲ್ 12 ರಂದು ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಚಿರಂಜೀವಿ ಮತ್ತು ರಾಮ್ ಚರಣ್ ಅವರು ದೇವಾಲಯದ ನಿಧಿಗಳು ಮತ್ತು ದೇಣಿಗೆಗಳ ದುರುಪಯೋಗ ಮಾಡಿಕೊಳ್ಳುವ ದತ್ತಿ ಇಲಾಖೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ವಿಜಯ್ ಸೇತುಪತಿ ಒಲಿಯುವುದು ನಯನತಾರಾಗಾ ಅಥವಾ ಸಮಂತಗಾ?: ಹೆಚ್ಚಿದ ಕುತೂಹಲ

    ಕಾಜಲ್ ಅಗರ್ವಾಲ್ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ ಕಾರಣ ತಾಯ್ತನವನ್ನು ಆನಂದಿಸುತ್ತಿದ್ದಾರೆ. ಈ ನಟಿ ತನ್ನ ಪತಿ ಗೌತಮ್ ಕಿಚ್ಲು ಜೊತೆಗೆ ಮಗುವಿನೊಂದಿಗೆ ಆನಂದವಾಗಿ ಇದ್ದಾರೆ.

  • ಅಪ್ಪ-ಮಗನ್ನ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳ ಕಾತರ : ‘ಆಚಾರ್ಯ’ದಲ್ಲಿ ಒಂದಾದ ಮಗಧೀರ ಜೋಡಿ

    ಅಪ್ಪ-ಮಗನ್ನ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳ ಕಾತರ : ‘ಆಚಾರ್ಯ’ದಲ್ಲಿ ಒಂದಾದ ಮಗಧೀರ ಜೋಡಿ

    ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಈ ಹಿಂದೆ ‘ಮಗಧೀರ’ ಸಿನಿಮಾದಲ್ಲಿ ಒಂದಾಗಿತ್ತು. ಇದೀಗ ಮತ್ತೆ ‘ಆಚಾರ್ಯ’ ಸಿನಿಮಾದಲ್ಲಿ ಅಪ್ಪ-ಮಗ ಒಂದೇ ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಆಚಾರ್ಯ’ ಸಹ ಒಂದು. ಈ ಸಿನಿಮಾ ಅಭಿಮಾನಿಗಳಿಗೆ ಫುಲ್ ಟ್ರೀಟ್ ಸಿಗಲಿಗೆ ಎಂದು ಟಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದೆ.

    ‘ಆಚಾರ್ಯ’ ಸಿನಿಮಾಗೆ ಕೊರಟಾಲ ಶಿವ ಆಕ್ಷನ್ ಕಟ್ ಹೇಳಿದ್ದು, ಬಹುತಾರಾಗಣವನ್ನು ಈ ಸಿನಿಮಾ ಹೊಂದಿದೆ. ಈ ಚಿತ್ರದಲ್ಲಿ ಕೇಂದ್ರಬಿಂದುಗಳೇ ಅಪ್ಪ-ಮಗ. ಇದು ಆಕ್ಷನ್-ಡ್ರಾಮಾ ಸಿನಿಮಾ ಆಗಿದ್ದು, ಏಪ್ರಿಲ್ 29 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಮತ್ತು ಕಾಜಲ್ ಅಗರ್ವಾಲ್ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಈ ಕುರಿತು ಸಂದರ್ಶವೊಂದರಲ್ಲಿ ಮಾತನಾಡಿದ ನಿರ್ಮಾಪಕ ಅನ್ವೇಶ್ ರೆಡ್ಡಿ, ‘ಆಚಾರ್ಯ’ ಸಿನಿಮಾದಲ್ಲಿ ಚಿರಂಜೀವಿ ಮತ್ತು ರಾಮ್ ಚರಣ್ ಸ್ಕ್ರೀನ್ ಟೈಮ್ ಬಗ್ಗೆ ಎಕ್ಸೈಟಿಂಗ್ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ‘ಆಚಾರ್ಯ’ ಚಿತ್ರದಲ್ಲಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವುದೇ ಹಬ್ಬದ ರೀತಿ ಇರುತ್ತೆ ಎಂದು ವಿವರಿಸಿದ್ದಾರೆ.

    ಚಿರಂಜೀವಿ ಮತ್ತು ರಾಮ್ ಚರಣ್ ಇಬ್ಬರು ಈ ಹಿಂದೆ ಒಂದೇ ಸಿನಿಮಾದಲ್ಲಿ ಸ್ವಲ್ಪ ಸಮಯ ಮಾತ್ರ ಕಾಣಿಸಿಕೊಂಡಿದ್ದರು. ಆದರೆ ‘ಆಚಾರ್ಯ’ ಸಿನಿಮಾದಲ್ಲಿ 20 ರಿಂದ 25 ನಿಮಿಷ ಅಪ್ಪ-ಮಗ ಸ್ಕ್ರಿನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ನೋಡಿದ ಅಭಿಮಾನಿಗಳಿಗೆ ಪಕ್ಕಾ ಟ್ರೀಟ್ ಸಿಗುತ್ತೆ. ಆದ್ದರಿಂದ ಅಭಿಮಾನಿಗಳು ಈ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅದೃಷ್ಟದ ಗಾಯಕ: 150ಕ್ಕೂ ಹೆಚ್ಚು ಹುಡುಗಿರ ಪ್ರಪೋಸಲ್ ರಿಜೆಕ್ಟ್ ಮಾಡಿದ ಖ್ಯಾತ ಗಾಯಕ

    ಪೂಜಾ ಸಹ ತಮ್ಮ ಪಾತ್ರದ ಬಗ್ಗೆ ಸ್ವಲ್ಪ ಹಿಂಟ್ ಕೊಟ್ಟಿದ್ದು, ‘ಆಚಾರ್ಯ’ ಸಿನಿಮಾದಲ್ಲಿ ಎರಡು ಜಡೆ ಹಾಕಿಕೊಂಡು ಅರ್ಧ ಸೀರೆಯುಟ್ಟಿಕೊಂಡು ಪಕ್ಕಾ ತೆಲುಗು ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಹಿಂದೆ ‘ರಂಗಸ್ಥಳಂ’ ಸಿನಿಮಾದಲ್ಲಿ ರಾಮ್ ಚರಣ್ ಜೊತೆ ವಿಶೇಷ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದೆ. ಆದರೆ ಇದೇ ಮೊದಲ ಬಾರಿಗೆ ನಾವಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದೇವೆ. ಈ ಸಿನಿಮಾದಲ್ಲಿ ನನ್ನದು ಮತ್ತು ರಾಮ್ ಅವರದ್ದು ಚಿಕ್ಕ ಪಾತ್ರ. ಇದು ಚಿರಂಜೀವಿ ಅವರ ಸಿನಿಮಾ ಎಂದು ಹೇಳಿದ್ದಾರೆ.

  • ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ

    ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ

    ರಡೂವರೆ ವರ್ಷಗಳಿಂದ ಕೊರೋನಾ ಹಾವಳಿಗೆ ತತ್ತರಿಸಿರುವ ಭಾರತೀಯ ಸಿನಿಮಾ ರಂಗ, ಚೇತರಿಸಿಕೊಳ್ಳಲು ಇನ್ನೂ ಹರಸಾಹಸ ಪಡುತ್ತಿದೆ. ಅಷ್ಟರಲ್ಲಿ ಚಿತ್ರರಂಗಕ್ಕೆ ಕ್ರಿಕೆಟ್ ಎಂಬ ಗುಮ್ಮ ಎದುರಾಗಿದೆ. ಇದನ್ನೂ ಓದಿ : ವಿಕ್ರಾಂತ್ ರೋಣ 2 ಮುನ್ಸೂಚನೆ ಕೊಟ್ಟರಾ ಸುದೀಪ್?

    ಕೋವಿಡ್  ಕಾರಣದಿಂದಾಗಿ ಬಿಗ್ ಬಜೆಟ್ ನ ಸಾಕಷ್ಟು ಚಿತ್ರಗಳು ಮಾರ್ಚ್ ನಲ್ಲಿ ರಿಲೀಸ್ ಆಗಲು ಪ್ಲ್ಯಾನ್ ಆಗಿದ್ದವು. ಅದರಲ್ಲೂ ಮಾರ್ಚ್ ಎರಡನೇ ವಾರದ ನಂತರ ಕನ್ನಡದ ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ನಿಂದ ಶುರುವಾಗುತ್ತಿದ್ದ ಈ ಬಿಡುಗಡೆಯ ಜೈತ್ರ ಯಾತ್ರೆ ಕೆಜಿಎಫ್ 2, ತೆಲುಗಿನ ಆರ್.ಆರ್.ಆರ್, ರಾಧೆ ಶ್ಯಾಮ್, ದಳಪತಿ ವಿಜಯ್ ಅವರ ‘ಬೀಸ್ಟ್’, ಮೆಗಾ ಸ್ಟಾರ್ ಚಿರಂಜೀವಿ ಅವರ ‘ಆಚಾರ್ಯ’ ಸೇರಿದಂತೆ ಸಾಕಷ್ಟು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು. ಈಗ ಸರಿಯಾಗಿ ಥಿಯೇಟರ್ ಗೆ ಪೆಟ್ಟುಕೊಡುವಂತೆ ಮಾರ್ಚ್ 27 ರಿಂದ ಮೇ 28 ರವರೆಗೆ. ಬರೋಬ್ಬರು ಒಂದು ತಿಂಗಳ ಕಾಲ ಭಾರತದ ಹೆಸರಾಂತ ಐಪಿಎಲ್ ಪಂದ್ಯಾವಳಿ ಆರಂಭವಾಗಲಿವೆ. ಇದನ್ನೂ ಓದಿ : ಏನಾಯ್ತು ಅಮಿತಾಭ್ ಬಚ್ಚನ್ ಗೆ? ಆತಂಕದಲ್ಲಿ ಅಭಿಮಾನಿಗಳು

    ಒಂದು ತಿಂಗಳ ಕಾಲ ನಿರಂತರವಾಗಿ, ಅದರಲ್ಲೂ ವೀಕೆಂಡ್ ನಲ್ಲೂ ಈ ಕ್ರಿಕೆಟ್ ಹಾವಳಿ ಇರುವುದರಿಂದ, ಜನರು ಚಿತ್ರಮಂದಿರಗಳತ್ತ ಬರುವುದು ಅನುಮಾನ. ಈ ಹಿಂದೆಯೂ ಐಪಿಎಲ್ ಮತ್ತು ಸಾಕಷ್ಟು ಕ್ರಿಕೆಟ್ ಪಂದ್ಯಾವಳಿಗಳು ಸಿನಿಮಾಗಳ ಬಾಕ್ಸ್ ಆಫೀಸಿಗೆ ಭಾರೀ ಹೊಡೆತ ಕೊಟ್ಟಿವೆ. ಹಾಗಾಗಿ ಭಾರೀ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕರು, ಐಪಿಎಲ್ ಗೆ ಹಿಡಿಶಾಪ ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ : ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ

    ಕೇವಲ ಸಿನಿಮಾಗಳಿಗೆ ಮಾತ್ರವಲ್ಲ, ಮನರಂಜನಾ ಮಾಧ್ಯಮಕ್ಕೂ ಐಪಿಎಲ್ ಸಾಕಷ್ಟು ತೊಂದರೆ ಮಾಡಿದೆ. ಹಾಗಾಗಿ ಈ ವೇಳೆಯಲ್ಲಿ ಹೊಸ ಧಾರಾವಾಹಿಗಳಾಗಲಿ, ಹೊಸ ಹೊಸ ಶೋಗಳಾಗಲಿ ಪ್ರಾರಂಭವಾಗುತ್ತಿಲ್ಲ. ಐಪಿಎಲ್ ನಂತರವೇ ಹೊಸ ಹೊಸ ಕಾರ್ಯಕ್ರಮಗಳಿಗೆ ಪ್ಲ್ಯಾನ್ ಮಾಡಲಿವೆಯಂತೆ ಮನರಂಜನಾ ವಾಹಿನಿಗಳು.

    ಅದ್ಧೂರಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಚಿತ್ರಗಳ ನಿರ್ಮಾಪಕರು ಐಪಿಎಲ್ ಎದುರು ಹಾಕಿಕೊಂಡು ಸಿನಿಮಾ ಬಿಡುಗಡೆ ಮಾಡಬಹುದಾ? ಅಥವಾ ಐಪಿಎಲ್ ನಂತರ ರಿಲೀಸ್ ಮಾಡಬೇಕಾ ಎನ್ನುವ ಗೊಂದಲದಲ್ಲಿದ್ದಾರೆ. ಒಂದು ವೇಳೆ ಸಿನಿಮಾಗಳನ್ನು ಮುಂದು ಹಾಕಿದರೆ, ಅದರಿಂದ ಬೇರೆ ಬೇರೆ ರೀತಿಯಲ್ಲಿ ನಿರ್ಮಾಪಕರಿಗೆ ತೊಂದರೆ ಆಗಲಿದೆ. ಹಾಗಾಗಿ ಬಹುತೇಕ ಭಾರತೀಯ ಸಿನಿಮಾ ರಂಗಕ್ಕೆ ಆಘಾತಕ್ಕೆ ಒಳಗಾಗಿದೆ.

  • ಮೆಗಾಸ್ಟಾರ್ ಚಿರು ಆಚಾರ್ಯ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರಾ ಸುದೀಪ್?

    ಮೆಗಾಸ್ಟಾರ್ ಚಿರು ಆಚಾರ್ಯ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರಾ ಸುದೀಪ್?

    ಹೈದರಾಬಾದ್: ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷಿತ ಆಚಾರ್ಯ ಸಿನಿಮಾದಲ್ಲಿ ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದೀಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಇತ್ತೀಚಿಗಷ್ಟೇ ಆಚಾರ್ಯ ಸಿನಿಮಾದ 1 ನಿಮಿಷ 7 ಸೆಕೆಂಡ್ ಕಿರು ಟೀಸರ್ ರಿಲೀಸ್ ಆಗಿದ್ದು, ಹಿಂದೆಂದೂ ನೋಡಿರದ ಹೊಸ ಆಕ್ಷನ್ ಅವತಾರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅಭಿನಯಿಸಿದ್ದಾರೆ. ಅಪ್ಪ ಚಿರು ಆಚಾರ್ಯ ಚಿತ್ರದ ಟೀಸರ್ ವೀಕ್ಷಿಸಿದ ಮಗ ರಾಮ್ ಚರಣ್ ತೇಜ ಸಂಭ್ರಮದಲ್ಲಿದ್ದಾರೆ. ಟೀಸರ್ ಬಿಡಗಡೆ ನಂತರ ಪ್ರೇಕ್ಷಕರಿಂದ ಅದ್ಬುತ ರೆಸ್ಪಾನ್ಸ್ ಪಡೆದ ಆಚಾರ್ಯ ಸಿನಿಮಾ ಇದೀಗ ಎಲ್ಲೆಡೆ ಪ್ರಮುಖ ಸುದ್ದಿಯಾಗಿ ಹೊರಹೊಮ್ಮಿದೆ.

    ವಿಶೇಷವೆನೆಂದರೆ ಕನ್ನಡದ ಸೂಪರ್ ಸ್ಟಾರ್ ನಟ ಕಿಚ್ಚ ಸುದೀಪ್ ಆಚಾರ್ಯ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲಡೆ ಹರಿದಾಡುತ್ತಿದೆ. ಈ ಕುರಿತಂತೆ ಆಚಾರ್ಯ ಚಿತ್ರತಂಡ ಈಗಾಗಲೇ ಕಿಚ್ಚ ಸುದೀಪ್ ಜೊತೆ ಮಾತುಕತೆ ನಡೆಸಿದ್ದು, ಕಿಚ್ಚನ ಗ್ರೀನ್ ಸಿಗ್ನಲ್‍ಗಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಆಚಾರ್ಯ ಚಿತ್ರದಲ್ಲಿ ಬಾಲಿವುಡ್ ನಟ ಸೋನು ಸೂದ್ ಖಳನಾಯಕನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಮೆಗಾ ಸ್ಟಾರ್ ಚಿರಂಜೀವಿಯವರ ಹಿಂದಿನ ಸೈರಾ ನರಸಿಂಹ ರೆಡ್ಡಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕೂಡ ಕಿಚ್ಚ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಯಾರೆಲ್ಲ ಅಭಿನಯಿಸಲಿದ್ದಾರೆ ಎಂಬ ವಿಚಾರ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.

    ಇತ್ತೀಚಿಗಷ್ಟೇ ಕಿಚ್ಚ ಸುದೀಪ್ ಚಿತ್ರರಂಗ ಪ್ರವೇಶಿಸಿ 25 ವರ್ಷ ಕಳೆದ ಸಂಭ್ರಮವನ್ನು ದುಬೈನಲ್ಲಿ ಆಚರಿಸಿಕೊಂಡಿದ್ದರು.

  • ಚಿರು ಒತ್ತಾಯಕ್ಕೆ ರಶ್ಮಿಕಾ ಓಕೆ ಅಂದ್ರಾ?

    ಚಿರು ಒತ್ತಾಯಕ್ಕೆ ರಶ್ಮಿಕಾ ಓಕೆ ಅಂದ್ರಾ?

    ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿಯವರ ಒತ್ತಾಯದ ಮೇರೆಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ರಾಮ್ ಚರಣ್ ಅವರ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ.

    ಚಿರಂಜೀವಿ ಅಭಿನಯಿಸುತ್ತಿರುವ ಅವರ ಮುಂದಿನ ಚಿತ್ರ ‘ಆಚಾರ್ಯ’ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೇ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ಕೃಷ್ಣ ಸುಂದರಿ ತ್ರಿಶಾ ಸಿನಿಮಾದಿಂದ ಹೊರಬಂದಿದ್ದರು. ಈಗ ಚಿತ್ರಕ್ಕೆ ನಾಯಕಿ ಹುಡುಕಾಟದಲ್ಲಿರುವ ಚಿತ್ರತಂಡದಿಂದ ರಶ್ಮಿಕಾ ಅವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

    ಆಚಾರ್ಯ ಚಿತ್ರದಲ್ಲಿ ಚಿರಂಜೀವಿ ಜೊತೆ ಅವರ ಪುತ್ರ ರಾಮ್ ಚರಣ್ ಕೂಡ ಅಭಿನಯಿಸುತ್ತಿದ್ದಾರೆ. ಈ ವೇಳೆ ರಾಮ್ ಚರಣ್‍ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಟಾಲಿವುಡ್‍ನಲ್ಲಿ ಹಿಟ್ ಸಿನಿಮಾ ಮಾಡಿ ಗುರುತಿಸಿಕೊಂಡಿರುವ ರಶ್ಮಿಕಾ ಆ್ಯಕ್ಟಿಂಗ್ ನೋಡಿ ಮೆಗಾಸ್ಟಾರ್ ಚಿರು ಫಿದಾ ಆಗಿದ್ದಾರಂತೆ. ಅದಕ್ಕಾಗಿಯೇ ಈ ಪಾತ್ರಕ್ಕೆ ರಶ್ಮಿಕಾ ಅವರೇ ಸೂಕ್ತ ಎಂದು ಚಿರು ಚಿತ್ರದ ನಿರ್ದೇಶಕರಿಗೆ ಹೇಳಿದ್ದಾರೆ.

    ಸಿನಿಮಾದ ಮೊದಲು ರಾಮ್ ಚರಣ್ ಜೊತೆ ಅವರು ಆತ್ಮೀಯ ಗೆಳತಿ ಕಿಯಾರಾ ಅದ್ವಾಣಿಯವರು ಅಭಿನಯಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚೆಗೆ ಚಿರಂಜೀವಿ ಅವರು ಈ ಪಾತ್ರವನ್ನು ರಶ್ಮಿಕಾ ಅವರೇ ಮಾಡಬೇಕು ಎಂದು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಒತ್ತಾಯ ಮಾಡಿದ್ದರಂತೆ. ಆದ್ದರಿಂದ ಚಿರಂಜೀವಿ ಒತ್ತಾಯದ ಮೇರೆಗೆ ರಶ್ಮಿಕಾ ರಾಮ್ ಚರಣ್ ಜೊತೆ ಆಚಾರ್ಯ ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗಿದೆ.

    ಆಚಾರ್ಯ ಚಿತ್ರದಲ್ಲಿ ರಾಮ್ ಚರಣ್ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಇತ್ತೀಚೆಗೆ ತ್ರಿಶಾ ಅವರು ಈ ಚಿತ್ರದಿಂದ ಹೊರಬಂದಿದ್ದು, ಇವರ ಜಾಗಕ್ಕೆ ಕಾಜಲ್ ಅಗರವಾಲ್ ಅವರು ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಚಿತ್ರದ ನಿರ್ದೇಶಕರು ಮೊತ್ತೋರ್ವ ಕನ್ನಡತಿ ಅನುಷ್ಕಾ ಶೆಟ್ಟಿಯವರನ್ನು ಚಿತ್ರದ ನಾಯಕಿಯಾಗಿ ಮಾಡಲು ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಚಿತ್ರದಿಂದ ಹೊರ ಬಂದು ಈ ವಿಚಾರವಾಗಿ ಟ್ವೀಟ್ ಮಾಡಿದ್ದ ತ್ರಿಶಾ, ಕೆಲವೊಂದು ವಿಚಾರಗಳು ನಾವು ಮೊದಲೇ ಚರ್ಚಿಸಿದಂತೆ ಆಗಲ್ಲ. ಸಣ್ಣ ಭಿನ್ನಾಭಿಪ್ರಾಯಗಳಿಂದ ಚಿರಂಜೀವಿ ಸರ್ ಸಿನಿಮಾದಿಂದ ಹೊರಬರಲು ನಿರ್ಧರಿಸಿದ್ದೇನೆ. ಆದರೆ ಆದಷ್ಟು ಬೇಗ ನೂತನ ಪ್ರಾಜೆಕ್ಟ್ ನೊಂದಿಗೆ ಮತ್ತೆ ನಿಮ್ಮ ಮುಂದೆ ಬರುವುದಾಗಿ ತಿಳಿಸಿದ್ದರು. ಅಲ್ಲದೆ ಚಿತ್ರ ತಂಡಕ್ಕೆ ಶುಭಾಶಯ ಕೋರಿದ್ದರು.