Tag: Accuses

  • ಆರೋಪಿಗಳಿಗೂ ಸೋಂಕು- ಸಿಲಿಕಾನ್ ಸಿಟಿ ಪೊಲೀಸರಿಗೆ ಕೊರೊನಾ ಭಯ

    ಆರೋಪಿಗಳಿಗೂ ಸೋಂಕು- ಸಿಲಿಕಾನ್ ಸಿಟಿ ಪೊಲೀಸರಿಗೆ ಕೊರೊನಾ ಭಯ

    – ಒಂದು ವಾರದಲ್ಲಿ ಐವರು ಪೊಲೀಸರಿಗೆ ಸೋಂಕು
    – ಆರೋಪಿಗಳನ್ನೂ ಕಾಡುತ್ತಿದೆ ಮಹಾಮಾರಿ

    ಬೆಂಗಳೂರು: ಕೊರೊನಾ ಮಾಹಾಮಾರಿ ಈದೀಗ ವಾರಿಯರ್ ಗಳನ್ನು ಕಾಡುತ್ತಿದ್ದು, ಬೆಂಗಳೂರು ಪೊಲೀಸರು ಆತಂಕಕ್ಕೀಡಾಗಿದ್ದಾರೆ.

    ನಗರದಲ್ಲಿ ಕಳೆದ ಒಂದು ವಾರದಿಂದ ಐವರು ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಇದರ ಬೆನ್ನಲ್ಲೆ ಶುಕ್ರವಾರ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿನ ಅರೋಪಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿಂದೆ ಕೂಡ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬರಿಗೆ ಪಾಸಿಟಿವ್ ಬಂದಿತ್ತು. ಇದೀಗ ಮತ್ತೊಬ್ಬ ಆರೋಪಿಗೆ ಸೋಂಕು ತಗುಲಿದೆ.

    ಒಂದು ಕಡೆ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಕೆಲಸ ಮಾಡುವ ಪೊಲೀಸರಿಗೆ ಕೊರೊನಾ ಭಯ ಶುರುವಾಗಿದ್ದರೆ, ಮತ್ತೊಂದು ಕಡೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೂ ಪಾಸಿಟಿವ್ ಬರುತ್ತಿದೆ. ಇದರಿಂದಾಗಿ ಪೊಲೀಸರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ರಾಜ್ಯದಲ್ಲಿ ದಾಖಲೆಯ ಮಟ್ಟದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶುಕ್ರವಾರ ಒಂದೇ ದಿನ 515 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಪೊಲೀಸರಿಗೆ ಮತ್ತಷ್ಟು ಭಯವನ್ನುಂಟು ಮಾಡಿದೆ.

  • ವಿನಯ್ ಗುರೂಜಿಗೆ ಬೆದರಿಕೆ ಹಾಕ್ತಿದ್ದ ಗ್ಯಾಂಗ್ ಅರೆಸ್ಟ್

    ವಿನಯ್ ಗುರೂಜಿಗೆ ಬೆದರಿಕೆ ಹಾಕ್ತಿದ್ದ ಗ್ಯಾಂಗ್ ಅರೆಸ್ಟ್

    – 30 ಲಕ್ಷ ಬೇಡಿಕೆ ಕೂಡ ಇಟ್ಟಿದ್ದರು

    ಬೆಂಗಳೂರು: ಹಳೆ ವಿಡಿಯೋ ಇಟ್ಟುಕೊಂಡು ವಿನಯ್ ಗುರೂಜಿಗೆ ಬೆದರಿಕೆ ಹಾಕುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

    ರವಿಕುಮಾರ್, ಮುನಿರಾಜು, ಮನೋಜ್, ಮುರಳಿ, ಸಂತೋಷ್ ಬಂಧಿತರು. ಈ ಐವರು ವಿನಯ್ ಗುರೂಜಿಯ ಹಳೆ ವಿಡಿಯೋ ಇಟ್ಟುಕೊಂಡು, ಯೂಟ್ಯೂಬ್ ನಲ್ಲಿ ಅಪ್‍ಲೋಡ್ ಮಾಡಿ ಬೆದರಿಕೆ ಹಾಕುತ್ತಿದ್ದರು. ಇದೀಗ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಇವರು ವಿಡಿಯೋ ಎಡಿಟ್ ಮಾಡಿ, ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡಿದ್ದರು. ನಂತರ 30 ಲಕ್ಷ ರೂ. ನೀಡುವಂತೆ ವಿನಯ್ ಗುರೂಜಿ ಬಳಿ ಬೇಡಿಕೆ ಇಟ್ಟಿದ್ದರು. ಅಲ್ಲದೆ ಬೆದರಿಕೆ ಒಡ್ಡಿದ್ದರು. ಹೀಗಾಗಿ ಈ ಕುರಿತು ವಿನಯ್ ಗುರೂಜಿ ಆಪ್ತ ಪ್ರಶಾಂತ್ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.