Tag: accused

  • ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ಆರೋಪಿ ಮೇಲೆ ಫೈರಿಂಗ್

    ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ಆರೋಪಿ ಮೇಲೆ ಫೈರಿಂಗ್

    ಕಲಬುರಗಿ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಕಲಬುರಗಿ ಹೊರವಲಯದ ಭೋಸ್ಗಾ ಕೆರೆ ಬಳಿ ನಡೆದಿದೆ.

    ಘಟನೆಯಿಂದ ಆರೋಪಿ ವಿಕ್ರಂ ಮೂಲಿಮನಿ(24) ಕಾಲಿಗೆ ಗಂಭೀರ ಗಾಯಗಳಾಗಿವೆ. ಕಲಬುರಗಿ ನಗರದಲ್ಲಿ ಇತ್ತೀಚೆಗೆ ಶ್ರೀಕಾಂತ ರೆಡ್ಡಿ ಹಲ್ಲೆ ಸಂಬಂಧ ಮಾರ್ಕೆಟ್ ಸತೀಶನ ಸಹಚರ ರೌಡಿ ವಿಕ್ರಂ ಮೂಲಿಮನಿಯನ್ನು ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರ ಜಪ್ತಿಗಾಗಿ ಇಂದು ಕರೆದುಕೊಂಡು ಹೋಗಿದ್ದರು. ಈ ಸಂಧರ್ಭದಲ್ಲಿ ರೌಡಿ ವಿಕ್ರಂ, ಪೇದೆ ಅಂಬಾದಾಸ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ. ಆಗ ಆತ್ಮ ರಕ್ಷಣೆಗಾಗಿ ಪೊಲೀಸರು ರೌಡಿಯ ಬಲಗಾಲಿಗೆ ಗುಂಡು ಹೊಡೆದಿದ್ದಾರೆ.

    ಸದ್ಯ ಗಾಯಾಳು ವಿಕ್ರಂನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ತನ್ನ ಜೀಪಿಗೆ ದಾರಿ ಬಿಡದವನ ಮೇಲೆ ಕುಡಚಿ ಪಿಎಸ್‍ಐ ಗೂಂಡಾಗಿರಿ

    ತನ್ನ ಜೀಪಿಗೆ ದಾರಿ ಬಿಡದವನ ಮೇಲೆ ಕುಡಚಿ ಪಿಎಸ್‍ಐ ಗೂಂಡಾಗಿರಿ

    ಬೆಳಗಾವಿ: ರಾಯಭಾಗ್ ತಾಲೂಕಿನ ಕುಡಚಿ ಠಾಣೆ ಪಿಎಸ್‍ಐ ಶಿವಶಂಕರ ಅವರ ಗೂಂಡಾಗಿರಿಯ ಪ್ರಕರಣಗಳು ತಡವಾಗಿ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಚಿಕ್ಕೋಡಿ ತಾಲೂಕಿನ ಗಳತಗಾ ಜಾತ್ರೆಯಲ್ಲಿ ತಮ್ಮ ಜೀಪಿಗೆ ದಾರಿ ಬಿಟ್ಟಿಲ್ಲ ಎಂಬ ಕಾರಣಕ್ಕೆ ಯುವಕನೋರ್ವನ ಮೇಲೆ ಹಲ್ಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಸುಮಾರು 5 ರಿಂದ 6 ತಿಂಗಳ ಹಿಂದೆ ಸದಲಗ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಶಿವಶಂಕರ ಕಾರ್ಯನಿರ್ವಹಿಸುತ್ತಿದ್ದರು. ಗಳತಗಾ ಜಾತ್ರೆಯಲ್ಲಿ ಶಿವಶಂಕರ ಯುವಕನ ಮೇಲೆ ತಮ್ಮ ಅಧಿಕಾರ ದರ್ಪವನ್ನು ತೋರಿಸಿದ್ದಾರೆ. ಯುವಕನ ಮೇಲೆ ಹಲ್ಲೆ ಮಡುತ್ತಿರುವ ವೇಳೆ ಯುವಕ ಚರಂಡಿಯಲ್ಲಿ ಬಿದ್ರೂ, ಬಿಡದ ಶಿವಶಂಕರ ಯುವಕನನ್ನು ಮೇಲಕ್ಕೆ ಎತ್ತಿ ಥಳಿಸಿದ್ದಾರೆ.

    ಇದನ್ನೂ ಓದಿ: ಮಾಮೂಲಿ ಕೊಡದಕ್ಕೆ ಬಾರ್ ಸಿಬ್ಬಂದಿಯನ್ನ ಮನಬಂದಂತೆ ಥಳಿಸಿದ ಪಿಎಸ್‍ಐ!

    ನಿನ್ನೆ (ಭಾನುವಾರ) ಪಬ್ಲಿಕ್ ಟಿವಿ ಇದೇ ಪಿಎಸ್‍ಐ ಶಿವಶಂಕರ ತಮ್ಮ ಸಿಬ್ಬಂದಿಯೊಂದಿಗೆ ಕುಡಚಿಯ ಬಾರ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಬಿತ್ತರಿಸಿತ್ತು. ಇನ್ನು ಶಿವಶಂಕರ ತಾವು ಕಾರ್ಯ ನಿರ್ವಹಿಸಿದ ಪ್ರತಿಯೊಂದು ಊರಿನಲ್ಲಿ ತಮ್ಮ ಅಧಿಕಾರ ದರ್ಪವನ್ನು ತೋರಿಸಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಪಿಎಸ್‍ಐ ಮೇಲೆ ಇದೂವರೆಗೂ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಜರುಗಿಸುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ.

    ಹೋಳಿ ಹಬ್ಬದ ದಿನದಂದು ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣದ ತನಿಖಾಧಿಕಾರಿ ನಾಗರಾಜ್ ಅವರಿಗೆ ಆದೇಶ ಪತ್ರ ದೊರಕಿಲ್ಲ. ಪಿಎಸ್‍ಐ ಶಿವಶಂಕರ ಪ್ರಭಾವಿ ವ್ಯಕ್ತಿಯ ಬೆಂಬಲವಿದೆ ಎಂದು ಕೇಳಿ ಬಂದಿದೆ. ಶಿವಶಂಕರ ಅವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅವರ ಕ್ರಮ ಜರುಗಿಸಲಾಗುತ್ತದೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರ ಸೆಕ್ಸೆನಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    https://www.youtube.com/watch?v=V83ANKNDdaQ

  • ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣ- ಸ್ಪಾಟ್ ನಾಗ ಸೇರಿ 9 ಆರೋಪಿಗಳ ಬಂಧನ

    ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣ- ಸ್ಪಾಟ್ ನಾಗ ಸೇರಿ 9 ಆರೋಪಿಗಳ ಬಂಧನ

    – ಆಂಧ್ರದಲ್ಲಿ ಸೆರೆಸಿಕ್ಕ ಆರೋಪಿಗಳು

    ಬೆಂಗಳೂರು: ಬಸವೇಶ್ವರ ನಗರದಲ್ಲಿ ನಡೆದ ರೌಡಿ ಶೀಟರ್ ಸುನಿಲ್ ಕೊಲೆ ಪ್ರಕರಣ ಸಂಬಂಧ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕೊಲೆ ಪ್ರಕರಣ ಸಂಬಂಧ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಆಂಧ್ರ ಮತ್ತು ಧರ್ಮಸ್ಥಳಕ್ಕೆ ಪೊಲೀಸರ ತಂಡ ತೆರಳಿತ್ತು. ಇನ್ನೆರಡು ತಂಡ ಬೆಂಗಳೂರಿನಲ್ಲಿಯೇ ಹುಡುಕಾಟ ಆರಂಭಿಸಿತ್ತು. ಆಂಧ್ರದಲ್ಲಿ ಗುರುವಾರ ರಾತ್ರಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಗರಾಜ ಅಲಿಯಾಸ್ ಸ್ಪಾಟ್ ನಾಗ ಸೇರಿ 9 ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ನಡೆದಿದ್ದೇನು?: ಕಳೆದ ಬುಧವಾರ ಬಸವೇಶ್ವರ ನಗರದಲ್ಲಿರೋ ಸುನಿಲ್ ಮನೆಗೆ ನುಗ್ಗಿದ ನಾಲ್ವರ ತಂಡ ಆತನನ್ನು ಮನೆಯಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೈದಿತ್ತು. ಬಳಿಕ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿತ್ತು. ಈ ವೇಳೆ ಸುನಿಲ್ ಪೋಷಕರಿಗೂ ಗಾಯಗಳಾಗಿತ್ತು.

    ಹಿಂದಿನ ದಾಳಿಗೆ ಸೇಡು: ಸ್ಪಾಟ್ ನಾಗನ ಮೇಲೆ ರೌಡಿ ಸುನಿಲ್ ಗ್ಯಾಂಗ್ 2016ರ ಮಾರ್ಚ್ ನಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಘಟನೆಯಿಂದ ಹೆಂಡತಿ ಮತ್ತು ಮಕ್ಕಳು ನಾಗನನ್ನು ತೊರೆದಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಸುನಿಲ್ 10 ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಬಿಡುಗಡೆಯಾದ ಬಳಿಕವೂ ನಾಗನನ್ನು ಕುಂಟ ಎಂದು ಲೇವಡಿ ಮಾಡುತ್ತಿದ್ದ. ಹಲ್ಲೆ ಮತ್ತು ಲೇವಡಿಯಿಂದ ಮನನೊಂದಿದ್ದ ನಾಗ ಒಂದು ವರ್ಷದ ಹಿಂದಿನ ದಾಳಿಗೆ ಸುನಿಲ್‍ನನ್ನು ಬುಧವಾರದಂದು ಕೊಲೆ ಮಾಡಿದ್ದ.

    https://www.youtube.com/watch?v=a3vmsD9DKZw

  • ರಾಜಾರೋಷವಾಗಿ ಓಡಾಡುತ್ತಿರುವ ವ್ಯಕ್ತಿ ಬೆಂಗಳೂರು ಪೊಲೀಸರಿಗೆ ನಾಪತ್ತೆಯಾಗಿರುವ ಆರೋಪಿ!

    ರಾಜಾರೋಷವಾಗಿ ಓಡಾಡುತ್ತಿರುವ ವ್ಯಕ್ತಿ ಬೆಂಗಳೂರು ಪೊಲೀಸರಿಗೆ ನಾಪತ್ತೆಯಾಗಿರುವ ಆರೋಪಿ!

    ಬೆಂಗಳೂರು: ಆರಂಭದಲ್ಲಿ ದೂರು ಸ್ವೀಕರಿಸಲು ಹಿಂದೇಟು. ಬಳಿಕ ಸಾಕಷ್ಟು ಹೋರಾಟ ಬಳಿಕ ದೂರು ದಾಖಲು. ವ್ಯಕ್ತಿ ರಾಜರೋಷವಾಗಿ ಓಡಾಡುತ್ತಿದ್ದರೂ ಅಂತಿಮವಾಗಿ ಚಾರ್ಜ್ ಶೀಟ್ ಸಲ್ಲಿಕೆಯ ವೇಳೆ ಆರೋಪಿ ನಾಪತ್ತೆ ಎಂದು ಉಲ್ಲೇಖ. ಇದು ಬೆಂಗಳೂರು ಜನತೆ ರಕ್ಷಣೆ ನೀಡುತ್ತಿರುವ ಪೊಲೀಸರ ಕಾರ್ಯವೈಖರಿ.

    ದಿನಬೆಳಗಾದ್ರೇ ಮೌರ್ಯ ಸರ್ಕಲ್‍ನಲ್ಲಿ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿ ರಾಜಕೀಯದ ಮೈನ್‍ಸ್ಟ್ರೀಮ್‍ಗೆ ಬಂದ ಮನೋಹರ್ ಸದ್ಯ ವಿದ್ಯುತ್ ಕಾರ್ಖಾನೆ ನಿಗಮ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ವಿಚಿತ್ರ ಅಂದ್ರೆ ಇವರ ಮೇಲೆ ಎಫ್‍ಐಆರ್ ಆಗಿದ್ರೂ ನಿಗಮಮಂಡಳಿ ಅಧ್ಯಕ್ಷರಾಗಿದ್ದಾರೆ. ಅಷ್ಟೇ ಅಲ್ಲ ರಾಜಾರೋಷವಾಗಿ ಸಾರ್ವಜನಿಕ ಜೀವನದಲ್ಲಿ ಓಡಾಡುತ್ತಿದ್ದಾರೆ. ಆದರೆ ಈ ವ್ಯಕ್ತಿ ನಮ್ಮ ಬೆಂಗಳೂರು ಪೊಲೀಸರ ಪಾಲಿಗೆ ನಾಪತ್ತೆಯಾಗಿರುವ ಆರೋಪಿ.

    ಏನಿದು ಪ್ರಕರಣ: 2014 ರಲ್ಲಿ ನಿಗಮ ಮಂಡಳಿ ಸ್ಥಾನ ಗಿಟ್ಟಿಸಲು ಓಡಾಡಿಕೊಂಡಿದ್ದ, ಆಗಿನ್ನೂ ಯೂತ್ ಕಾಂಗ್ರೆಸ್ ಮುಖಂಡರಾಗಿದ್ದ ಮನೋಹರ್ ಸಿದ್ದು ಸರ್ಕಾರಕ್ಕೆ ಕಪ್ಪ ಕೊಡಬೇಕು, 1 ಕೋಟಿ ರೂ. ಸಾಲ ಕೊಡಿ ಅಂತಾ ಸ್ನೇಹಿತ ಜ್ಞಾನೇಶ್ ಹಾಗೂ ಆತನ ತಾಯಿಯ ಬೆನ್ನುಬಿದ್ದಿದ್ರು. ಇದಕ್ಕೆ ಜ್ಞಾನೇಶ್ ತಮ್ಮಂದಿರಾದ ಪ್ರಮೋದ್ ಶಂಕರ್ ಹಾಗೂ ಪ್ರದೀಪ್, ಮನೋಹರ್‍ಗೆ ಕುಮ್ಮುಕ್ಕು ಕೊಡ್ತಾ ಇದ್ರು. ಸಾಲ ಕೊಡೋದಕ್ಕೆ ಆಗಲ್ಲ ಅಂತಾ ಹೇಳಿದಾಗ ಮನೋಹರ್ ಅಸಲಿ ಮುಖ ತೋರಿಸಿ ಜ್ಞಾನೇಶ್ ಮನೆಗೆ ನುಗ್ಗಿ ತಾಯಿಯ ಮೇಲೆ ಹಲ್ಲೆ ಮಾಡಿದ್ದರು.

    ಮನೋಹರ್ ಕಾಟಕ್ಕೆ ಬೇಸತ್ತು ಜ್ಞಾನೇಶ್ ಹಾಗೂ ಅವರ ತಾಯಿ ಡೆತ್‍ನೋಟ್ ಬರೆದು ಆತ್ಮಹತ್ಯಗೆ ಶರಣಾಗೋದಕ್ಕೆ ಪ್ರಯತ್ನಿಸಿದ್ರು. ಜ್ಞಾನೇಶ್‍ನನ್ನು ಸಂಬಂಧಿಕರು ಆಸ್ಪತ್ರೆಗೆ ಸೇರಿಸಿ ಬದುಕಿಸಿದ್ರೂ ಅವರ ತಾಯಿಯನ್ನು ಬದುಕಿಸೋದಕ್ಕೆ ಸಾಧ್ಯವಾಗಲಿಲ್ಲ. ಈಗ ತಾಯಿ ಸಾವಿನ ನ್ಯಾಯಕ್ಕಾಗಿ ಜ್ಞಾನೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದ್ರೆ ದೂರು ದಾಖಲಿಸಿಕೊಳ್ಳಲು ಪೊಲೀಸರು ಸಾಕಷ್ಟು ಕಸರತ್ತು ಮಾಡಿದ್ದಾರೆ. ಕೊನೆಗೆ ಜನವರಿ 16ರಂದು ಜಾರ್ಜ್‍ಶೀಟ್ ಸಲ್ಲಿಕೆ ಮಾಡಿರುವ ಕೆಪಿ ಅಗ್ರಹಾರ ಪೊಲೀಸರು ಆರೋಪಿ ಮನೋಹರ್ ನಾಪತ್ತೆಯಾಗಿದ್ದಾರೆ ಅಂತಾ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿ ಎಡವಟ್ಟು ಮಾಡಿದ್ದಾರೆ.

    ಆರೋಪಿ ಸ್ಥಾನದಲ್ಲಿರುವವರನ್ನು ನಿಗಮಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದೇ ತಪ್ಪು. ಹೀಗಿರುವಾಗ ಚಾರ್ಜ್‍ಶೀಟ್‍ನಲ್ಲಿ ಪೊಲೀಸರು ನಾಪತ್ತೆ ಅಂತಾ ಉಲ್ಲೇಖ ಮಾಡಿದ್ದು ಆರೋಪಿಯ ರಕ್ಷಣೆಗೆ ನಿಂತಿದ್ದಾರೆ. ನನ್ನ ತಾಯಿಯ ಹತ್ಯೆಗೈದವರನ್ನು ಸಿದ್ದರಾಮಯ್ಯ ಸರ್ಕಾರ ರಕ್ಷಿಸುತ್ತಿದೆ ಅಂತಾ ಜ್ಞಾನೇಶ್ ಅಳಲು ತೋಡಿಕೊಂಡಿದ್ದಾರೆ.