Tag: accused

  • ಆಸ್ಪತ್ರೆಗೆ ಬರುತ್ತಿದ್ದ ಯುವತಿಯರ ಅರೆನಗ್ನ ಫೋಟೋ ಕ್ಲಿಕ್ಕಿಸುತ್ತಿದ್ದ ಕಾಮುಕ ಅಟೆಂಡರ್ ಸಿಕ್ಕಿಬಿದ್ದ

    ಆಸ್ಪತ್ರೆಗೆ ಬರುತ್ತಿದ್ದ ಯುವತಿಯರ ಅರೆನಗ್ನ ಫೋಟೋ ಕ್ಲಿಕ್ಕಿಸುತ್ತಿದ್ದ ಕಾಮುಕ ಅಟೆಂಡರ್ ಸಿಕ್ಕಿಬಿದ್ದ

    ಬೆಂಗಳೂರು: ಆಸ್ಪತ್ರೆಯಲ್ಲಿ ಇಸಿಜಿ ಚಿಕಿತ್ಸೆ ಪಡೆಯಲು ಬಂದ ಮಹಿಳಾ ರೋಗಿಗಳ ಅರೆ ನಗ್ನ ಫೋಟೋ ತೆಗೆಯುತ್ತಿದ್ದ ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆಯಲ್ಲಿ ನೌಕರ ಈಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

    ರಘು ಬಂಧಿತ ಆರೋಪಿಯಾಗಿದ್ದು, ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ. ಈತ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ ಅಲ್ಲದೆ, ಅವರ ಅರೆ ನಗ್ನ ಫೋಟೋ ತೆಗೆಯುತ್ತಿದ್ದ.

    ಶುಕ್ರವಾರ ಆಸ್ಪತ್ರೆಗೆ ಬಂದ ಯುವತಿ ಇಸಿಜಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅನುಮಾನಗೊಂಡು ಆರೋಪಿಯನ್ನು ಹಿಡಿದು ಮೊಬೈಲ್ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

    ಆರೋಪಿಯ ರಘು ಹಲವು ದಿನಗಳಿಂದ ಇಂತಹ ನೀಚ ಕೃತ್ಯದಲ್ಲಿ ತೊಡಗಿದ್ದು, ಆತನ ಮೊಬೈಲ್ ಫೋನ್ ನಲ್ಲಿ ಹಲವು ಮಹಿಳೆಯರ ಆರೆ ನಗ್ನ ಫೋಟೋಗಳು ಪತ್ತೆಯಾಗಿದೆ. ಘಟನೆ ಕುರಿತು ಆಸ್ಪತ್ರೆಯ ಮೇಲಾಧಿಕಾರಿಗಳಿಗೆ ರಘು ವಿರುದ್ಧ ದೂರು ನೀಡಿದ ಯುವತಿ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆಯ ಟಿ.ಹೆಚ್.ಒ ಡಾ. ಚಂದ್ರಶೇಖರ್ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

  • ವೈದ್ಯರಿಗೆ ಬ್ಲ್ಯಾಕ್ ಮೇಲ್: ಯುವತಿ ಸೇರಿ ಐವರ ಬಂಧನ

    ವೈದ್ಯರಿಗೆ ಬ್ಲ್ಯಾಕ್ ಮೇಲ್: ಯುವತಿ ಸೇರಿ ಐವರ ಬಂಧನ

    ಬೀದರ್: ನಾವು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ(ಎಮ್‍ಸಿಐ) ಇಂಟೆಲಿಜೆನ್ಸ್ ಆಫೀಸರ್ಸ್ ಎಂದು ಹೇಳಿ ವೈದ್ಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಸುನೀಲ್ (31), ಜೀನಿತ್ (25), ಪುನೀತ್ (25), ವೆಂಕಟೇಶ್ವರ ಪ್ರಿಯದರ್ಶಿನಿ (40), ಮಂಜುಳಾ (26) ಎಂದು ಗುರುತಿಸಲಾಗಿದೆ.

    ಬೆಂಗಳೂರಿನಿಂದ ಬಂದ ಐದು ಜನ ತಂಡ ಬೀದರ್‍ನ ಬಾವಗಿ ಆಸ್ಪತ್ರೆ ಹಾಗೂ ನವ ಜೀವನ ಆಸ್ಪತ್ರೆಯ ವೈದ್ಯರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದೇ ಸಹಕಾರ ಮಾಡದೆ ಇದ್ರೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಗೆ ನಿಮ್ಮ ವರದಿ ನೀಡುತ್ತೆವೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದರು.

    ಕೆಲವು ದಿನಗಳಿಂದ ಬೀದರ್ ನಲ್ಲೆ ಉಳಿದು, ವೈದ್ಯರ ಬಗ್ಗೆ ಗಮನಿಸಿ ಈ ತಂಡ ಕೃತ್ಯ ಎಸಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬೀದರ್ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ನಕಲಿ ತಂಡ ಖೆಡ್ಡಾಗೆ ಬಿದ್ದಿದೆ.

  • 45 ಸಾವಿರ ರೂ. ಮೌಲ್ಯದ 9 ಸಾವಿರ ಮೊಟ್ಟೆಗಳನ್ನು ಕದ್ದು ಪರಾರಿಯಾಗುತ್ತಿದ್ದವರ ಬಂಧನ!

    45 ಸಾವಿರ ರೂ. ಮೌಲ್ಯದ 9 ಸಾವಿರ ಮೊಟ್ಟೆಗಳನ್ನು ಕದ್ದು ಪರಾರಿಯಾಗುತ್ತಿದ್ದವರ ಬಂಧನ!

    ಧಾರವಾಡ: ಫಾರಂ ನಿಂದ ಮೊಟ್ಟೆಗಳನ್ನು ಕದ್ದು ಪರಾರಿಯಾಗುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ಕಳವುಗೈದವರನ್ನು ಬೆಳಿಗಟ್ಟಿ ಗ್ರಾಮದ ಮೈಲಾರಪ್ಪ ಕಲ್ಲೂರ(28), ಕಲಘಟಗಿ ತಾಲೂಕಿನ ಶಂಕರ ಜಾಧವ(30) ಹಾಗೂ ಕಲ್ಲಪ್ಪ ಗುಡಿಹಾಳ ಎಂದು ಗುರುತಿಸಲಾಗಿದೆ.

    ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ಕುಲಕರ್ಣಿ ಎಂಬವರ ಫಾರಂನಲ್ಲಿ ಈ ಘಟನೆ ನಡೆದಿದ್ದು, ಫಾರಂನಲ್ಲಿದ್ದ ಸುಮಾರು 45 ಸಾವಿರ ಮೌಲ್ಯದ 9 ಸಾವಿರ ಮೊಟ್ಟೆಗಳನ್ನು ಕಳ್ಳರು ಕದ್ದೊಯ್ದಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

  • ಮಹಿಳಾ ಭಕ್ತರಿಗೆ ಅಂಜನಾದ್ರಿ ಪರ್ವತದ ಪ್ರಧಾನ ಅರ್ಚಕರಿಂದ ಲೈಂಗಿಕ ಕಿರುಕುಳ?

    ಮಹಿಳಾ ಭಕ್ತರಿಗೆ ಅಂಜನಾದ್ರಿ ಪರ್ವತದ ಪ್ರಧಾನ ಅರ್ಚಕರಿಂದ ಲೈಂಗಿಕ ಕಿರುಕುಳ?

    ಕೊಪ್ಪಳ: ವಿಶ್ವ ಪ್ರಸಿದ್ಧ ಅಂಜನಾದ್ರಿ ಪರ್ವತದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.

    ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಾಬಾರನ್ನು ಈಗ ಅರ್ಚಕ ಸ್ಥಾನದಿಂದ ಕೆಳಗಿಳಿಸಲು ಟ್ರಸ್ಟ್ ನಿರ್ಣಯ ಕೈಗೊಂಡಿದೆ.

    ಕೊಪ್ಪಳದ ಗಂಗಾವತಿ ಅಂಜನಾದ್ರಿ ಪರ್ವತಕ್ಕೆ ಇತ್ತೀಚೆಗೆ ದೇಶ ವಿದೇಶದಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಿದ್ದು, ದೇವಾಲಯಕ್ಕೆ ಆಗಮಿಸುವ ಮಹಿಳಾ ಭಕ್ತರ ಜೊತೆ ವಿದ್ಯಾದಾಸ ಬಾಬಾ ಅಸಭ್ಯವಾಗಿ ವರ್ತಿಸ್ತಿದ್ದಾರೆ. ಜೊತೆಗೆ ಅನೈತಿಕ ಚಟುವಟಿಕೆ ಗಳಿಗೆ ಅರ್ಚಕರು ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೇ ದೇವಾಲಯದ ಸುತ್ತಮುತ್ತಲಿನ ಭಕ್ತರೊಂದಿಗೂ ಅಸಭ್ಯ ವರ್ತಿಸುತ್ತಿದ್ದು, ವಿನಾಕಾರಣ ಜಗಳವಾಡುತ್ತಾರೆ ಎಂದು ಆರೋಪಿಸಲಾಗಿದೆ.

    ಭಕ್ತರಿಂದ ದೇವಾಲಯಕ್ಕೆ ಇಲ್ಲಿಯವರೆಗೆ ಲಕ್ಷಾಂತರ ರೂ. ಹಣ ದೇಣಿಗೆಯಾಗಿ ಬಂದಿದೆ. ಆದರೆ ವಿದ್ಯಾದಾಸ ಬಾಬಾ ಲೆಕ್ಕ ನೀಡುತ್ತಿಲ್ಲ. ಇದರಿಂದ ಅಂಜನಾದ್ರಿ ಪರ್ವತ ಚಾರಿಟೇಬಲ್ ರಿಲಿಜಿಯಿಸ್ ಟ್ರಸ್ಟ್ ಸದಸ್ಯರು ಸಭೆ ಸೇರಿ ಅರ್ಚಕರ ನಡೆಯನ್ನು ಖಂಡಿಸಿದ್ದಾರೆ. ಇದೀಗ ವಿದ್ಯಾದಾಸ ಬಾಬಾರನ್ನು ಅರ್ಚಕ ಹುದ್ದೆಯಿಂದ ಕೆಳಗಿಳಿಸಿ ಬ್ರಾಹ್ಮಣ ಪಂಡಿತರೊಬ್ಬರನ್ನು ಅರ್ಚಕರನ್ನಾಗಿ ನೇಮಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.

    ವಿದ್ಯಾದಾಸ ಬಾಬಾ 2009 ರಲ್ಲಿ ಪ್ರಧಾನ ಅರ್ಚಕರಾಗಿ ನೇಮಕಗೊಂಡಿದ್ದರು. ಈಗಾಗಲೇ ದೇವಾಲಯದ ಪೂಜಾ ವಿಷಯವಾಗಿ ತುಳಸಿದಾಸಬಾಬಾ, ವಿದ್ಯಾದಾಸಬಾಬಾ ನಡುವೆ ಕಲಹ ಏರ್ಪಟಿದ್ದು, ಈ ಕುರಿತು ಕೋರ್ಟ್‍ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಪ್ರಸ್ತುತ ವಿದ್ಯಾದಾಸಬಾಬಾರನ್ನು ಪ್ರಧಾನ ಅರ್ಚಕ ಹುದ್ದೆಯಿಂದ ಕೆಳಗಿಳಿಸಿದ್ದರಿಂದ ಪೂಜಾ ವಿವಾದ ಪ್ರಕರಣ ತಾರ್ಕಿಕ ಅಂತ್ಯ ಕಂಡಂತಾಗಿದೆ.

     

    https://www.youtube.com/watch?v=6ddrM4Fje_M

     

  • ತಮ್ಮನ ಎದುರೇ 13ರ ಬಾಲಕಿಯನ್ನು ರೇಪ್ ಮಾಡಿ ಕೊಲೆಗೈದ!

    ತಮ್ಮನ ಎದುರೇ 13ರ ಬಾಲಕಿಯನ್ನು ರೇಪ್ ಮಾಡಿ ಕೊಲೆಗೈದ!

    ಕೋಲ್ಕತ್ತಾ: ತಮ್ಮನ ಎದುರೇ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆಗೈದ ಆಘಾತಕಾರಿ ಘಟನೆ ನಡೆದಿದೆ.

    ಈ ಘಟನೆ ಲಾಲ್ ಬಂಧ್ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 19 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಘಟನೆ ವಿವರ: 13 ವರ್ಷದ ಬಾಲಕಿ ಇಂದು ಮುಂಜಾನೆ ತನ್ನ 10 ವರ್ಷದ ತಮ್ಮನೊಂದಿಗೆ ಬಹಿರ್ದೆಸೆಗಾಗಿ ಮನೆಯಿಂದ ಹೊರಗಡೆ ಬಂದಿದ್ದಳು. ಈ ವೇಳೆ ಅದೇ ಪ್ರದೇಶದ ಕಾಮುಕ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಾತ್ರವಲ್ಲದೇ ಆಕೆಯ ದುಪ್ಪಟ್ಟದಿಂದಲೇ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

    ನಡೆದ ಘಟನೆಯನ್ನು ಮೃತಳ ತಮ್ಮ ಬಂಕಾಪುರದ ಎಸ್ ಪಿ ಸುಖೆಂದು ಹಿರಾ ಅವರಿಗೆ ವಿವರಿಸಿದ್ದಾನೆ. ಬಾಲಕ ನೀಡಿದ ಮಾಹಿತಿಯಂತೆ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಐಪಿಸಿ ಸೆಕ್ಷನ್ ಹಾಗೂ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ತನಿಖೆಯ ವೇಳೆ ಆರೋಪಿ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.

  • 58ರ ಮಹಿಳೆಯನ್ನು ರೇಪ್ ಮಾಡಿ ಗುಪ್ತಾಂಗವನ್ನ ರೇಜರ್ ನಿಂದ ಗಾಯಗೊಳಿಸಿದ ಕಾಮುಕ!

    58ರ ಮಹಿಳೆಯನ್ನು ರೇಪ್ ಮಾಡಿ ಗುಪ್ತಾಂಗವನ್ನ ರೇಜರ್ ನಿಂದ ಗಾಯಗೊಳಿಸಿದ ಕಾಮುಕ!

    ಭೋಪಾಲ್: ಕಾಮುಕನೊಬ್ಬ 58 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಆಕೆಯ ಗುಪ್ತಾಂಗವನ್ನು ರೇಜರ್ ನಿಂದ ಗಾಯಗೊಳಿಸಿದ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

    ಇಲ್ಲಿನ ಪರಾಸಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ gತ್ರಿ ಈ ಘಟನೆ ನಡದಿದೆ. ಆರೋಪಿ 25 ವರ್ಷದ ಸುಖ್‍ಲಾಲ್ ಬಲಾವಿಯನ್ನು ಬಂಧಿಸಿರುವುದಾಗಿ ಇನ್ಸ್ ಪೆಕ್ಟರ್ ದೀಪಕ್ ಸೋಂಟಿ ಅರ್ಗುಲಾವರ್ ತಿಳಿಸಿದ್ದಾರೆ.

    ನಿರುದ್ಯೋಗಿಯಾಗಿದ್ದ ಆರೋಪಿ ಯುವಕ ಮದ್ಯದ ಅಮಲಿನಲ್ಲಿ ಮಹಿಳೆಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಆಕೆಯ ಗುಪ್ತಾಂಗವನ್ನು ರೇಜರ್ ನಿಂದ ಗಾಯಗೊಳಿಸಿದ್ದಾನೆ. ಮಹಿಳೆ ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದು, ಮನೆಯಲ್ಲಿ ಒಬ್ಬರೇ ವಾಸವಿದ್ದರು ಅಂತ ಅವರು ಹೇಳಿದ್ದಾರೆ.

    ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಸಂತ್ರಸ್ತೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಹಿಳೆಯ ದೂರಿನನ್ವಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 17 ವರ್ಷದ ಬಾಲಕನೊಂದಿಗೆ ಜೂಟ್ ಆಗಿದ್ದ ಆಂಟಿ ಆರೆಸ್ಟ್

    17 ವರ್ಷದ ಬಾಲಕನೊಂದಿಗೆ ಜೂಟ್ ಆಗಿದ್ದ ಆಂಟಿ ಆರೆಸ್ಟ್

    ಕೋಲಾರ: 17 ವರ್ಷದ ಬಾಲಕನನ್ನು ಅಪಹರಿಸಿ ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ವಿವಾಹಿತ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

    ನಗರದ ಚಾಂಪಿಯನ್ ರೀಫ್ ಮೂಲದ ನಳಿನಿ ಪ್ರಿಯಾ (24) ಎಂಬ ಬಂಧಿತ ಮಹಿಳೆ. ಸೆಪ್ಟೆಂಬರ್ 08 ರಂದು ಬಾಲಕನನ್ನು ನಳಿನಿ ಅಪಹರಣ ಮಾಡಿದ್ದಳು. ನಂತರ ಬಾಲಕನನ್ನು ತಮಿಳುನಾಡಿನ ವೇಲಾಂಗಣಿಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾಳೆ ಎಂದು ಬಾಲಕನ ಪೋಷಕರು ಆರೋಪ ಮಾಡುತ್ತಿದ್ದಾರೆ.

    ಬಾಲಕ ಮನೆಯಿಂದ ಕಾಣೆಯಾದ ನಂತರ ಪೋಷಕರು ಕೋಲಾರದ ಅಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ಬಳಿಕ ನಳಿನಿ ಮತ್ತು ಬಾಲಕನನ್ನು ಪತ್ತೆ ಹೆಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ಆರೋಪಿ ನಳಿನಿಗೆ ಈಗಾಗಲೇ ವಿವಾಹವಾಗಿದ್ದು, ಕಳೆದ ಕೆಲ ದಿನಗಳಿಂದ ಗಂಡನಿಂದ ದೂರವಾಗಿದ್ದಳು ಎಂದು ತಿಳಿದು ಬಂದಿದೆ.

    ಈ ಸಂಬಂಧ ಅಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣ ಹಾಗೂ ಮಕ್ಕಳ ವಿರುದ್ದ ಲೈಂಗಿಕ ದೌರ್ಜನ್ಯ ತಡೆ (ಫೊಕ್ಸೋ) ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

  • ಸೇತುವೆ ಕೆಳಗೆ ಎಳೆದುಕೊಂಡು ಹೋಗಿ, ಯುವತಿಯ ಕೈಕಾಲು ಕಟ್ಟಿ ನಾಲ್ವರಿಂದ ಗ್ಯಾಂಗ್‍ ರೇಪ್

    ಸೇತುವೆ ಕೆಳಗೆ ಎಳೆದುಕೊಂಡು ಹೋಗಿ, ಯುವತಿಯ ಕೈಕಾಲು ಕಟ್ಟಿ ನಾಲ್ವರಿಂದ ಗ್ಯಾಂಗ್‍ ರೇಪ್

    ಭೋಪಾಲ್: ಕೋಚಿಂಗ್ ಕ್ಲಾಸ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ 19 ವರ್ಷದ ಯುವತಿಯನ್ನು ಸೇತುವೆಯ ಕೆಳಗೆ ಎಳೆದುಕೊಂಡು ಹೋಗಿ ಕೈಕಾಲು ಕಟ್ಟಿ ಹಾಕಿ ಆಕೆಯ ಮೇಲೆ ಸತತ 3 ಗಂಟೆಗಳ ಕಾಲ ಗ್ಯಾಂಗ್ ರೇಪ್ ಎಸಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

    ಈ ಘಟನೆ ಮಂಗಳವಾರ ಸಂಜೆ ಹಬೀಬ್ ಗಂಜ್ ರೈಲ್ವೇ ನಿಲ್ದಾಣ ಬಳಿ ನಡೆದಿದೆ. ಯುವತಿ ಭೋಪಾಲ್ ನಿಂದ 1 ಕಿ.ಮೀ ದೂರ ವಾಸಿಸುತ್ತಿದ್ದು, ಕೋಚಿಂಗ್ ಕ್ಲಾಸ್ ಮುಗಿದ ನಂತರ ಸಿವಿಲ್ ಸರ್ವಿಸ್ ಪರೀಕ್ಷೆಗೆ ತಯಾರಾಗಲು ದಿನನಿತ್ಯ ರೈಲಿನಲ್ಲಿ ಸಂಚರಿಸುತ್ತಿದ್ದಳು.

    ಸಂಜೆ ಸುಮಾರು 7 ಗಂಟೆ ಆಗುತ್ತಿದಂತೆ ಆರೋಪಿ ಗೋಲು ಬಿಹಾರಿ ಎಂಬಾತ ನನ್ನನ್ನು ಎಳೆದುಕೊಂಡು ಹೋಗಲು ಮುಂದಾಗಿದ್ದಾನೆ. ಈ ವೇಳೆ ನಾನು ಹೊಡೆದು ತಪ್ಪಿಸಿಕೊಂಡು ಹೋಗುವಾಗ ಗೋಲು ತನ್ನ ಭಾವ ಅಮರ್ ಗುಂಟುನನ್ನು ಕರೆದಿದ್ದಾನೆ. ಅವರಿಬ್ಬರು ಜೊತೆಯಾಗಿ ಸೇರಿ ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ನನ್ನ ಮೇಲೆ ಕೃತ್ಯ ಎಸಗಿದ್ದಾರೆ ಎಂದು ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಯುವತಿ ಅವರಿಬ್ಬರ ಜೊತೆ ಜಗಳವಾಡುತ್ತಾ, ಹೊಡೆಯುತ್ತಾ ಹಾಗೂ ಕಿರುಚುತ್ತಿದ್ದಾಗ ಅಲ್ಲಿದ್ದ ಒಬ್ಬ ಆರೋಪಿ ಆಕೆಯ ತಲೆಯ ಮೇಲೆ ಕಲ್ಲಿನಿಂದ ಹೊಡೆದಿದ್ದಾನೆ. ನಂತರ ನನ್ನನ್ನು ಕಟ್ಟಿ ಹಾಕಿ ಅತ್ಯಾಚಾರ ಎಸೆಗಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

    ಯುವತಿಯ ಬಟ್ಟೆ ಹರಿದಿದ್ದರಿಂದ ಗೋಲು ಹಾಗೂ ಅವನ ಇಬ್ಬರ ಸ್ನೇಹಿತರ ಜೊತೆ ಸ್ಲಂನಲ್ಲಿರುವ ತನ್ನ ಮನೆಗೆ ಹೋಗಿ ಬಟ್ಟೆಯನ್ನು ತಂದು ಅದನ್ನು ಧರಿಸಲು ಹೇಳಿದ್ದನು. ರಾತ್ರಿ 10 ಗಂಟೆವರೆಗೂ 4 ಜನ ಆರೋಪಿಗಳು ಒಬ್ಬೊಬ್ಬರಾಗಿ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದರು. ನಂತರ ಯುವತಿಗೆ ಬಟ್ಟೆ ಧರಿಸಲು ಹೇಳಿ ಆಕೆಯ ಹತ್ತಿರವಿದ್ದ ಕಿವಿ ಓಲೆ, ವಾಚ್ ಮತ್ತು ಮೊಬೈಲ್ ನನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಯುವತಿ ಹಬೀಬ್ ಗಂಜ್ ರೈಲ್ವೇ ನಿಲ್ದಾಣದಲ್ಲಿರುವ ಪೊಲೀಸ್ ಠಾಣೆಗೆ ಹೋಗಿ ತನ್ನ ಪೋಷಕರನ್ನು ಕರೆ ಮಾಡಿ ತಿಳಿಸಿದ್ದಾಳೆ. ಮರುದಿನ ಯುವತಿಯ ತಂದೆ ಆಕೆಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದಾಗ, ಸಬ್ ಇನ್ಸ್ ಪೆಕ್ಟರ್ ಒಬ್ಬರು ಇದು ಸಿನಿಮಾ ಕಥೆಯೆಂದು ಹೇಳಿ ಕೇಸ್ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. 11 ಗಂಟೆಯ ಬಳಿಕ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ.

    ಯುವತಿ ಹಬೀಬ್ ಗಂಜ್ ಪೊಲೀಸ್ ಠಾಣೆಯಿಂದ ತನ್ನ ಪೋಷಕರ ಜೊತೆ ಹಿಂತಿರುಗುವಾಗ ಆಕೆಯ ಮೇಲೆ ಅತ್ಯಾಚಾರ ವೆಸಗಿದ ಇಬ್ಬರು ಆರೋಪಿಗಳನ್ನು ಗುರುತಿಸಿದ್ದಳು. ನಂತರ ಆಕೆಯ ಕುಟುಂಬದವರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಪ್ರಕರಣದಲ್ಲಿ ಆರೋಪಿಯಾಗಿರುವ ಗೋಲು ತನ್ನ ಮಗಳನ್ನು ಕೊಂದು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿದ್ದ.

  • 12 ವರ್ಷದ ಬಾಲಕಿಯ ಮೇಲೆ ಗ್ಯಾಂಗ್‍ರೇಪ್: ಓರ್ವ ಆರೋಪಿ ಅರೆಸ್ಟ್

    12 ವರ್ಷದ ಬಾಲಕಿಯ ಮೇಲೆ ಗ್ಯಾಂಗ್‍ರೇಪ್: ಓರ್ವ ಆರೋಪಿ ಅರೆಸ್ಟ್

    ಹೈದರಾಬಾದ್: 12 ವರ್ಷದ ಬಾಲಕಿಯ ಮೇಲೆ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಕೃಷ್ಣ ಜಿಲ್ಲೆಯ ಜಗ್ಗಯ್ಯಪೇಟ್ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ತೊರಗಾಂಡಪಾಲೇಮ್ ಗ್ರಾಮದ ಸ್ಥಳೀಯ ಸರ್ಕಾರಿ ಕಚೇರಿಯ ಹಿಂಭಾಗದ ಕಟ್ಟಡದಲ್ಲಿ ಅಪ್ರಾಪ್ತೆಯ ಮೇಲೆ ಮೂವರು ಕಾಮುಕರು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅತ್ಯಾಚಾರ ಎಸಗಿದ್ದರು.

    ಈ ಘಟನೆಯಿಂದ ಬಾಲಕಿ ಆಘಾತಕ್ಕೆ ಒಳಗಾಗಿ ಕಳೆದ ವಾರ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಳು. ಭಾನುವಾರ ಆರೋಪಿಗಳ ವಿರುದ್ಧ ಜಗ್ಗಯ್ಯಪೇಟ್ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ ಎಂದು ಇನ್ಸ್ ಪೆಕ್ಟರ್ ಎಸ್. ಶ್ರೀಕುಮಾರ್ ಹೇಳಿದ್ದಾರೆ.

    ಈ ಪ್ರಕರಣದ ಸಂಬಂಧ ಆರೋಪಿಗಳಲ್ಲಿ ಓರ್ವನನ್ನು ಬಂಧಿಸಲಾಗಿದೆ. ಇನ್ನುಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರಿಗೆ ಜಾಲ ಬೀಸಿದ್ದೇವೆ ಎಂದು ಪೋಲಿಸರು ತಿಳಿಸಿದ್ದಾರೆ.

    ಇದನ್ನು ಓದಿ: ಹಾಡಹಗಲೇ ಫುಟ್ ಪಾತ್‍ನಲ್ಲೇ ರೇಪ್- ಸಹಾಯಕ್ಕೆ ಯಾರು ಬರಲಿಲ್ಲ ಆದ್ರೆ ವಿಡಿಯೋ ಮಾಡಿದ್ರು

  • ಬಂಧಿಸಲು ಹೋದಾಗ ತಿರುಗಿಬಿದ್ದ ಕೊಲೆ ಆರೋಪಿ – ಪೊಲೀಸರ ಮೇಲೆ ಚಾಕು ಹಿಡಿದು ದಾಳಿ

    ಬಂಧಿಸಲು ಹೋದಾಗ ತಿರುಗಿಬಿದ್ದ ಕೊಲೆ ಆರೋಪಿ – ಪೊಲೀಸರ ಮೇಲೆ ಚಾಕು ಹಿಡಿದು ದಾಳಿ

    ರಾಮನಗರ: ಕೊಲೆ ಪ್ರಕರಣದ ಆರೋಪಿ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಬೋರೇಗೌಡನ ದೊಡ್ಡಿಯಲ್ಲಿ ನಡೆದಿದೆ.

    ಚಂದ್ರು ಅಲಿಯಾಸ್ ಚಂದ್ರುಕುಮಾರ್ ಪೊಲೀಸರ ಗುಂಡೇಟು ತಿಂದಿರುವ ಕೊಲೆ ಆರೋಪಿ. ತಡರಾತ್ರಿ ಆರೋಪಿ ಬಂಧನಕ್ಕೆ ಕನಕಪುರ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದ ತಂಡ ಬೋರೇಗೌಡನ ದೊಡ್ಡಿಗೆ ತೆರಳಿತ್ತು. ಈ ವೇಳೆ ಪೊಲೀಸರಿಂದ ಪರಾರಿಯಾಗಲು ಆರೋಪಿ ಚಂದ್ರು ಪ್ರಯತ್ನಿಸಿದ್ದಲ್ಲದೇ ಚಾಕುವಿನಿಂದ ಕನಕಪುರ ಟೌನ್ ಪಿಎಸ್‍ಐ ಅನಂತರಾಮು ಅವರ ಎಡಗೈಗೆ ಇರಿದು ಪರಾರಿಯಾಗಲೆತ್ನಿಸಿದ್ದಾನೆ.

    ಈ ವೇಳೆ ಪೊಲೀಸರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದು, ಬಳಿಕ ಪರಾರಿಯಾಗುತ್ತಿದ್ದ ಆರೋಪಿ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಕಳೆದ ಸೆಪ್ಟೆಂಬರ್ 20 ರಂದು ಹುಣಸೂರಿನಲ್ಲಿ ಒಂಟಿ ಮನೆ ವೃದ್ಧೆಯನ್ನು ಕೊಂದು ಆರೋಪಿ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿದ್ದನು. ಈ ಪ್ರಕರಣ ಸಂಬಂಧ ಬಂಧಿಸಲು ಹೋಗಿದ್ದಾಗ ಘಟನೆ ಜರುಗಿದೆ.

    ಈ ಘಟನೆಯಲ್ಲಿ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ಚಂದ್ರು ಹಾಗು ಚಾಕು ಹಿರಿತಕ್ಕೆ ಒಳಗಾಗಿರುವ ಪಿಎಸ್‍ಐ ಅನಂತರಾಮುರನ್ನ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.