Tag: accused

  • ರಸ್ತೆ ಬದಿ ಜೀವನ ನಡೆಸುತ್ತಿದ್ದ ನಿವೃತ್ತ ಆರ್ಮಿ ಕ್ಯಾಪ್ಟನ್ ಥಳಿಸಿ ಕೊಲೆ!

    ರಸ್ತೆ ಬದಿ ಜೀವನ ನಡೆಸುತ್ತಿದ್ದ ನಿವೃತ್ತ ಆರ್ಮಿ ಕ್ಯಾಪ್ಟನ್ ಥಳಿಸಿ ಕೊಲೆ!

    ಪುಣೆ: ಸೈನ್ಯದಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ್ದ ವ್ಯಕ್ತಿಯನ್ನು ರಸ್ತೆ ಬದಿ ಬದುಕಲು ಬಿಡದೆ ದುಷ್ಕರ್ಮಿಗಳು ಹಣಕ್ಕಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಈ ಘಟನೆ ಗುರುವಾರ ರಾತ್ರಿ ನಡೆದಿದೆ. ಮಾಜಿ ಕ್ಯಾಪ್ಟನ್ ರವೀಂದ್ರ ಬಲಿ (67) ಕೊಲೆಯಾದ ವ್ಯಕ್ತಿ. ಕಳೆದ ರಾತ್ರಿ ದುಷ್ಕರ್ಮಿಗಳಿಬ್ಬರು ಅವರ ಜೊತೆ ಜಗಳವಾಡಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ರವಿಂದ್ರ ಅವರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಸ್ಥಳೀಯ ಸೆಕ್ಯುರಿಟಿಯೊಬ್ಬರು ನೋಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ರವೀಂದ್ರ ಅವರು ಕಳೆದ ಕೆಲ ವರ್ಷಗಳಿಂದ ಕುಟಂಬದಿಂದ ದೂರವಿದ್ದು, ರಸ್ತೆ ಬದಿಯ ಸಣ್ಣ ಟೆಂಟ್‍ನಲ್ಲಿ ಒಬ್ಬರೇ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಕುರಿತ ಪ್ರಾಥಮಿಕ ತನಿಖೆ ವೇಳೆ ರವೀಂದ್ರ ಅವರ ಕುಟುಂಬಸ್ಥರ ಮಾಹಿತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಪುಣೆಯ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಬೆಂಗ್ಳೂರಲ್ಲಿ ಪೇದೆಗಳ ಬಂದೂಕು ಕಸಿದಿದ್ದವರ ಮೇಲೆ ಗುಂಡಿನ ದಾಳಿ

    ಬೆಂಗ್ಳೂರಲ್ಲಿ ಪೇದೆಗಳ ಬಂದೂಕು ಕಸಿದಿದ್ದವರ ಮೇಲೆ ಗುಂಡಿನ ದಾಳಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ಯಲಹಂಕ ನ್ಯೂಟೌನ್ ನ ಕೆಂಪನಹಳ್ಳಿಯಲ್ಲಿ ಬಳಿ ಮೂವರು ಆರೋಪಿಗಳ ಮೇಲೆ ವಿದ್ಯಾರಣ್ಯಪುರ ಇನ್ಸ್ ಪೆಕ್ಟರ್ ಫೈರಿಂಗ್ ಮಾಡಿದ್ದಾರೆ

    ಜನವರಿ 18 ರಂದು ಮಧ್ಯಪ್ರದೇಶ ಮೂಲದ ಸುರೇಶ್, ಆಜಂ ಹಾಗೂ ಜಿತೇಂದರ್ ಕೊಡಿಗೆಹಳ್ಳಿ ಪೇದೆಯಿಂದ ಬಂದೂಕು ಕಸಿದು ಪರಾರಿಯಾಗಿದ್ದರು. ಈ ಪ್ರಕರಣ ಬೆನ್ನತ್ತಿದ್ದ ವಿದ್ಯಾರಣ್ಯಪುರ ಪೊಲೀಸರು ಇತ್ತೀಚೆಗೆ ಮಧ್ಯಪ್ರದೇಶ ಮೂಲದ ಮನೆಗಳ್ಳ ರಾಮಸಿಂಗ್ ನನ್ನು ಬಂಧಿಸಿದ್ದರು.

    ರಾಮಸಿಂಗ್ ವಿಚಾರಣೆ ವೇಳೆ ಆತ ತನ್ನ ಸಂಗಡಿಗರ ಬಗ್ಗೆ ಬಾಯ್ಬಿಟ್ಟಿದ್ದ. ಹೀಗಾಗಿ ಈತ ನೀಡಿದ ಸುಳಿವಿನ ಆಧಾರದ ಮೇಲೆ ಗುರುವಾರ ರಾತ್ರಿ ಆರೋಪಿಗಳನ್ನ ಹಿಡಿಯಲು ಹೋದಾಗ ಇನ್ಸ್ ಪೆಕ್ಟರ್ ರಾಮಮೂರ್ತಿ ಮೇಲೆ ಹಲ್ಲೆ ಯತ್ನ ನಡೆಯಿತು. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಮಧ್ಯಪ್ರದೇಶ ಮೂಲದ ಸುರೇಶ್, ಆಜಂ ಹಾಗೂ ಜಿತೆಂದರ್ ಮೇಲೆ ಮೂರು ಸುತ್ತಿನ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.

  • ಬೆಂಗ್ಳೂರಲ್ಲಿ ಬಾಲಕನ ಕಿಡ್ನಾಪ್ ಮಾಡ್ದವರ ಮೇಲೆ ಪೊಲೀಸರು ಫೈರಿಂಗ್- ಆರೋಪಿಗಳ ಬಂಧನ

    ಬೆಂಗ್ಳೂರಲ್ಲಿ ಬಾಲಕನ ಕಿಡ್ನಾಪ್ ಮಾಡ್ದವರ ಮೇಲೆ ಪೊಲೀಸರು ಫೈರಿಂಗ್- ಆರೋಪಿಗಳ ಬಂಧನ

    ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮತ್ತೆ ಖಾಕಿ ರಿವಾಲ್ವರ್ ಸದ್ದು ಮಾಡಿದೆ. ಬಾಲಕನನ್ನ ಅಪಹರಣ ಮಾಡಿದ್ದ ಆರೋಪಿಗಳ ಕಾಲಿಗೆ ಪೊಲೀಸರಿಂದ ಗುಂಡು ಹಾರಿಸಿದ್ದಾರೆ.

    ಕೆಂಗೇರಿ ಸಮೀಪದ ವಿಶ್ವೇಶ್ವರನಗರ ಬಳಿ ಈ ಶೂಟೌಟ್ ನಡೆದಿದ್ದು, ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಅವರು ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ಆರೋಪಿ ದಿವ್ಯತೇಜ್ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಏನಿದು ಘಟನೆ?: ಬೆಂಗಳೂರಿನ ಕೆಪಿ ಅಗ್ರಹಾರದ ಮಂಜುನಾಥ್ ನಗರದ ರಾಜೇಶ್ ಮತ್ತು ಮಾಲಾ ದಂಪತಿಯ 5 ವರ್ಷದ ಮಗ ಚಂದನ್ ಎಂಬಾತನನ್ನು ಅಪಹರಣ ಮಾಡಲಾಗಿತ್ತು. ಭಾನುವಾರ ಚಂದನ್ ತಾಯಿ ಮಾಲಾರ ಬರ್ತ್ ಡೇ ಇತ್ತು. ಈ ಖುಷಿಯಲ್ಲಿದ್ದ ಪೋಷಕರು ದೇವಸ್ಥಾನಕ್ಕೆ ಹೋಗಲು ಮೊದಲು ಮಗುವನ್ನು ರೆಡಿ ಮಾಡಿ ಆಟವಾಡೋಕೆ ಬಿಟ್ಟು, ನಂತ್ರ ತಾವು ರೆಡಿ ಆಗುತ್ತಿದ್ದರು. ಈ ವೇಳೆ ನಾನು ನಿಮ್ಮ ಮಾವ ಅಂತಾ ಬಂದ ವ್ಯಕ್ತಿಯೊಬ್ಬ ಮಗುವನ್ನು ಕಿಡ್ನಾಪ್ ಮಾಡಿ ಪರಾರಿಯಾಗಿದ್ದನು.


    ಇದೇ ವೇಳೆ ಫೋನ್ ಮಾಡಿದ ಕಿಡ್ನಾಪರ್, ನಿಮಗೆ ನಿಮ್ಮ ಮಗು ಬೇಕಾದ್ರೆ 30 ಸಾವಿರ ಕೊಡಿ ಅಂತಾ ಹೇಳಿ ಫೋನ್ ಕಟ್ ಮಾಡಿದ್ದಾನೆ. ಆದ್ರೆ ಸೋಮವಾರ ಬೆಳಗಿನ ಜಾವ ಮತ್ತೆ ಫೋನ್ ಮಾಡಿ ಅದು 30 ಸಾವಿರ ಅಲ್ಲ, 30 ಲಕ್ಷ ಕೊಡಿ ಅಂತಾ ಬೇಡಿಕೆ ಇಟ್ಟಿದ್ದನು.

    ಸದ್ಯ ಪ್ರಕರಣ ಕುರಿತಂತೆ ಪೊಲೀಸರು ಮಗುವನ್ನು ಪೋಷರ ಕೈಗೆ ಒಪ್ಪಿಸಲಾಗಿದ್ದು, ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಹೊಸ ನೋಟುಗಳ ಖೋಟಾನೋಟು ಮುದ್ರಿಸುತ್ತಿದ್ದ ಮೂವರು ಖದೀಮರ ಬಂಧನ

    ಹೊಸ ನೋಟುಗಳ ಖೋಟಾನೋಟು ಮುದ್ರಿಸುತ್ತಿದ್ದ ಮೂವರು ಖದೀಮರ ಬಂಧನ

    ವಿಜಯಪುರ: ಖೋಟಾ ನೋಟು ಮುದ್ರಿಸುತ್ತಿದ್ದ ಮೂವರು ಆರೋಪಿಗಳನ್ನು ಡಿಸಿಐಬಿ ಇನ್ಸ್ ಪೆಕ್ಟರ್ ಚಂದ್ರಕಾಂತ ಅವರು ಎಲ್.ಟಿ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.

    ಹಾಜಿಮಸ್ತಾನ ವಾಲೀಕಾರ್(23), ಸೀರಾಜ್ ಮಳ್ಳಿ(27), ಮೇಹಬೂಬ್ ವಾಲೀಕಾರ್(23) ಬಂಧಿತ ಆರೋಪಿಗಳು. ಬಂಧಿತರಿಂದ 200, 500 ಹಾಗೂ 2000 ಮುಖಬೆಲೆಯ ಒಟ್ಟು 67,200ರೂ ಮೌಲ್ಯದ ಖೋಟಾ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಖೋಟಾ ನೋಟು ಮುದ್ರಿಸುವ 38 ಪೇಪರ್‍ಗಳು, 2ಎಪ್ಸಾನ್ ಕಂಪನಿಯ ಪ್ರೀಂಟರ್‍ಗಳನ್ನ ಜಪ್ತಿ ಮಾಡಿದ್ದಾರೆ.

    ವಿಜಯಪುರ ನಗರದ ದರ್ಗಾ ಜೈಲು ಬಳಿಯ ಮನೆಯೊಂದರಲ್ಲಿ ಖೋಟಾ ನೋಟು ತಯಾರಿಸಲಾಗುತ್ತದೆ ಎಂಬ ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಪೊಲೀಸರು ಈ ದಾಳಿ ಮಾಡಿದ್ದಾರೆ.

    ಈ ಕುರಿತು ಡಿಸಿಐಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಲ್ಪಸಂಖ್ಯಾತರ ಮೇಲಿನ ಕೇಸ್ ವಾಪಸ್: ಸಿಬ್ಬಂದಿಯ ಕಣ್ತಪ್ಪಿನಿಂದಾದ ಅಚಾತುರ್ಯ ಅಂದ್ರು ರಾಮಲಿಂಗಾ ರೆಡ್ಡಿ

    ಅಲ್ಪಸಂಖ್ಯಾತರ ಮೇಲಿನ ಕೇಸ್ ವಾಪಸ್: ಸಿಬ್ಬಂದಿಯ ಕಣ್ತಪ್ಪಿನಿಂದಾದ ಅಚಾತುರ್ಯ ಅಂದ್ರು ರಾಮಲಿಂಗಾ ರೆಡ್ಡಿ

    ಬೆಂಗಳೂರು: ಅಲ್ಪಸಂಖ್ಯಾತರ ಮೇಲಿನ ಕೇಸ್ ವಾಪಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಯ ಕಣ್ತಪ್ಪಿನಿಂದ ಆಗಿರುವ ಪ್ರಮಾದ. ನಿನ್ನೆಯ ಆದೇಶವನ್ನು ಹಿಂಪಡೆಯಲಾಗಿದೆ ಅಂತಾ ಗೃಹ ಸಚಿವ ರಾಮಲಿಂಗಾ ರೆಡ್ಡಿ ಇಂದು ಹೇಳಿದ್ದಾರೆ.

    2015 ಮತ್ತು 2017ರಲ್ಲಿ 414 ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ 3,166 ಆರೋಪಿಗಳಿದ್ದಾರೆ. 2,806 ಹಿಂದುಗಳು, 341 ಮುಸ್ಲಿಂ ಮತ್ತು ಇತರೆ 17 ಜನ ಆರೋಪಿಗಳಿದ್ದಾರೆ. ಯಾವ ರೀತಿಯ ಪ್ರಕರಣಗಳನ್ನು ಹಿಂಪಡೆಯುವ ಬೇಕೆಂಬುದರ ಬಗ್ಗೆ ಗೃಹ ಇಲಾಖೆಯ ಅಭಿಪ್ರಾಯವನ್ನು ಕೇಳಲಾಗಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ಭಾಗ್ಯ- ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ ಕೊಟ್ಟಿದ್ದು ಹೀಗೆ

    ಕೋಮು ಗಲಭೆಗಳಲ್ಲಿ ಭಾಗಿಯಾದ ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ನೀಡಲು ಸಿದ್ದರಾಮಯ್ಯ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಅಭಿಯೋಜನೆಯಿಂದ ಕೇಸ್‍ಗಳನ್ನು ವಾಪಸ್ ಪಡೆಯಲು ಕೋರಿ ಪತ್ರ ಬರೆಯಲಾಗಿತ್ತು. 5 ವರ್ಷಗಳಲ್ಲಿ 20 ಜಿಲ್ಲೆ, ಬೆಳಗಾವಿ ಮತ್ತು ಮಂಗಳೂರು ಕಮಿಷನರೇಟ್‍ಗಳಲ್ಲಿ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರ ಅಭಿಯೋಜನೆಯನ್ನು ಕೋರಿತ್ತು. ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಸಿಕ್ತು ಕ್ಲೀನ್‍ಚಿಟ್ ಭಾಗ್ಯ- ಸರ್ಕಾರದಿಂದಲೇ ಹಿಂದೂ-ಮುಸ್ಲಿಂ ಇಬ್ಭಾಗ ಕೆಲಸ

    ಮಹದಾಯಿ, ಕಾವೇರಿ, ವಿಚಾರದಲ್ಲಿ ರೈತರ ಮೇಲಿನ ಕೇಸ್ ಗಳನ್ನ ಹಿಂಪಡೆದಿದ್ದೀವಿ. ಟಿಪ್ಪು-ಜಯಂತಿ ವೇಳೆ ಹಲವಡೆ ಪರ ವಿರೋಧದ ಪ್ರತಿಭಟನೆಗಳು ನಡೆದಿವೆ. ಆಸ್ತಿ-ಪಾಸ್ತಿ ಹಾನಿ, ಕೊಲೆ ಯತ್ನ ಪ್ರಕರಣಗಳನ್ನು ನಾವು ಹಿಂಪಡೆಯುವುದಿಲ್ಲ. ಆಸ್ತಿ-ಪಾಸ್ತಿ ಹಾನಿ, ಕೊಲೆ ಯತ್ನ ಪ್ರಕರಣಗಳು ಇಲ್ಲದೆ ಇರುವವರ ಕೆಲ ಪ್ರಕರಣಗಳನ್ನ ನಾವು ಕೈಬಿಟ್ಟಿದ್ದೇವೆ ಅಂತ ಶುಕ್ರವಾರ ಸಚಿವರು ತಮ್ಮ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದರು.

    https://www.youtube.com/watch?v=d5vZRulRL9E

    https://www.youtube.com/watch?v=58NOGrYA4y4

    https://www.youtube.com/watch?v=QxXjt8cAJfo

  • ದೀಪಕ್ ರಾವ್ ಕೊಲೆ ಪ್ರಕರಣ – ಮತ್ತಿಬ್ಬರು ಆರೋಪಿಗಳ ಬಂಧನ

    ದೀಪಕ್ ರಾವ್ ಕೊಲೆ ಪ್ರಕರಣ – ಮತ್ತಿಬ್ಬರು ಆರೋಪಿಗಳ ಬಂಧನ

    ಮಂಗಳೂರು: ಜಿಲ್ಲೆಯ ಕಾಟಿಪಳ್ಳ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಅಬ್ದುಲ್ ಅಜೀಜ್ (42), ಅಬ್ದುಲ್ ಅಜೀಮ್ (34) ಬಂಧಿತ ಆರೋಪಿಗಳು. ಕೊಲೆಯಾದ ದಿನದಂದು ಬಂಧನ ಮಾಡಿದ್ದ ನಾಲ್ವರು ಆರೋಪಿಗಳು ನೀಡಿದ ಮಾಹಿತಿಯನ್ನು ಆಧಾರಿಸಿ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಬ್ಬರು ಮಂಗಳೂರಿನ ಕಾಟಿಪಳ್ಳ ನಿವಾಸಿಗಳು ಎಂದು ತಿಳಿದು ಬಂದಿದೆ.

    ಜ.3 ರಂದು ಮಂಗಳೂರಿನ ಕಾಟಿಪಳ್ಳದಲ್ಲಿ ಹಾಡಹಗಲೇ ದೀಪಕ್ ರಾವ್ ನನ್ನು ಹತ್ಯೆ ಮಾಡಲಾಗಿತ್ತು. ಹತ್ಯೆಯಾದ ದಿನ ಸ್ಥಳೀಯರು ನೀಡದ ಮಾಹಿತಿ ಆಧಾರಿಸಿ ಅರೋಪಿಗಳು ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದರು ಎಂದು ತಿಳಿಸಿದ್ದರು. ಈ ಮಾಹಿತಿ ಆಧಾರಿಸಿ ಎಲ್ಲ ಪೊಲೀಸ್ ಠಾಣೆಗಳಿಗೆ ತುರ್ತು ಸಂದೇಶ ಕಳುಹಿಸಿದ್ದರು. ಈ ವೇಳೆ ಆರೋಪಿಗಳು ರಕ್ತಸಿಕ್ತ ತಲಾವರುಗಳನ್ನು ಇಟ್ಟುಕೊಂಡು ಕಾಟಿಪಳ್ಳದಿಂದ ಸೂರಿಂಜೆ-ಶಿಬರೂರು ಮೂಲಕ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿಯನ್ನು ಕೂಡಲೇ ಕಿನ್ನಿಗೋಳಿಯಲ್ಲಿದ್ದ ಗಸ್ತು ವಾಹನಕ್ಕೆ ತಿಳಿಸಲಾಯಿತು. ವಾಹನಗಳ ತಪಾಸಣೆ ವೇಳೆ ಬಿಳಿ ಬಣ್ಣದ ಸ್ವಿಫ್ಟ್ ಕಾರು ನಿಲ್ಲಿಸುವಂತೆ ಸೂಚನೆ ನೀಡಿದರೂ ನಿಲ್ಲಿಸದೇ ಹೋಗಿತ್ತು. ಸೂಚನೆ ಧಿಕ್ಕರಿಸಿ ಮುಂದಕ್ಕೆ ಹೋದಾಗ ಕೂಡಲೇ ಪೊಲೀಸರು ಅನುಮಾನಗೊಂಡು ಕಾರನ್ನು ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಆರೋಪಿಗಳ ಮೇಲೆ ಗುಂಡಿನ ದಾಳಿಯನ್ನು ಮಾಡಲಾಗಿತ್ತು. ಇದರರಲ್ಲಿ ಪಿಂಕಿ ನವಾಸ್, ರಿಜ್ವಾನ್ ಎಂಬ ಆರೋಪಿಗಳಿಗೆ ಗುಂಡೇಟು ತಗಲಿತ್ತು. ಇದನ್ನೂ ಓದಿ:  ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ

    ಪ್ರಸ್ತುತ ಪಿಂಕಿ ನವಾಸ್, ರಿಜ್ವಾನ್ ಇಬ್ಬರು ಆರೋಪಿಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ಮತ್ತಿಬ್ಬರು ಆರೋಪಿಗಳಾದ ನೌಶಾದ್, ಇರ್ಷಾನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಘಟನೆ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದೆ.

  • ಧನ್ಯಶ್ರೀ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಬಂಧನ

    ಧನ್ಯಶ್ರೀ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಬಂಧನ

    ಚಿಕ್ಕಮಗಳೂರು: ಮೂಡಿಗೆರೆ ಧನ್ಯಶ್ರೀ ಪ್ರಕರಣದ ಪ್ರಮುಖ ಆರೋಪಿ ಸಂತೋಷ್‍ನನ್ನು ಚಿಕ್ಕಮಗಳೂರು ಪೊಲೀಸರು ಬೆಂಗಳೂರಿನಲ್ಲಿ ಬಂಧನ ಮಾಡಿದ್ದಾರೆ.

    ಧನ್ಯಶ್ರೀ ಜೊತೆ ವಾಟ್ಸಾಪ್ ನಲ್ಲಿ ಚಾಟ್ ಮಾಡಿದ್ದ ಸಂತೋಷ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಕಜೇಕಾರ್ ಗ್ರಾಮದವನೆಂದು ತಿಳಿದು ಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಊರನ್ನು ಬಿಟ್ಟು ತಲೆಮರೆಸಿಕೊಂಡಿದ್ದ ಸಂತೋಷ್ ನನ್ನು ಮೂಡಿಗೆರೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಕರೆತಂದಿದ್ದಾರೆ. ಧನ್ಯಶ್ರೀ ಜೊತೆ ವಾಟ್ಸಾಪ್ ನಲ್ಲಿ ಚಾಟ್ ಮಾಡಿದ್ದ ಸಂತೋಷ್, ಅದನ್ನು ಸ್ಕ್ರೀನ್ ಶಾಟ್ ತೆಗೆದು ಹಿಂದೂಪರ ಸಂಘಟನೆಗಳ ಗ್ರೂಪ್ ಗೆ ಹಾಕಿದ್ದನು. ಅಲ್ಲದೇ ಕರೆ ಮಾಡಿ ಧನ್ಯಶ್ರೀ ಹಾಗೂ ತಾಯಿ ಸರಸ್ವತಿಗೆ ಧಮ್ಕಿ ಹಾಕಿದ್ದನು.

    ಏನಿದು ಪ್ರಕರಣ: ಕಳೆದ ಕೆಲ ದಿನಗಳ ಹಿಂದೆ ಬಿಕಾಂ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಳು. ಈ ಪ್ರಕರಣದಲ್ಲಿ ಯುವತಿ ಆತ್ಮಹತ್ಯಗೆ ಮಾಡಿಕೊಳ್ಳುವ ನೈತಿಕ ಪೊಲೀಸ್‍ಗಿರಿ ಕಾರಣ ಎಂದು ತಿಳಿದು ಬಂದಿತ್ತು.

    ಧನ್ಯಶ್ರೀ ಆತ್ಮಹತ್ಯೆ ನಂತರ ಪ್ರಕರಣದಲ್ಲಿ ಹಲವು ಬೆಳವಣಿಗೆಗಳು ಕಾಣಿಸಿಕೊಂಡಿದ್ದವು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಅವರು, ಪೊಲೀಸ್ ಇಲಾಖೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡ್ತಿರೋ ಸಂಘಟನಾಕಾರರು ಹಾಗೂ ವ್ಯಕ್ತಿಗಳ ಬಗ್ಗೆ ಹಾವಿನ ಜೊತೆ ಸರಸವಾಡಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೇ ಮೃತ ಧನ್ಯಶ್ರೀಗೆ ಸಂತೋಷ್ ಸೇರಿದಂತೆ ಐವರು ಸಂಘಟನೆ ಕಾರ್ಯಕರ್ತರು ಧಮ್ಕಿ ಹಾಕಿದ್ದ ಹಿನ್ನೆಲೆಯಲ್ಲಿ ಧನ್ಯಶ್ರೀ ಸಾವಿಗೂ ಮುನ್ನ 36 ಗಂಟೆ ಏನನ್ನೂ ತಿನ್ನದೆ ಖಾಲಿ ಹೊಟ್ಟೆ ಇದ್ದದ್ದು ಮರಣೋತ್ತರ ಪರೀಕ್ಷೆಯಿಂದ ಧೃಡಪಟ್ಟಿದೆ ಎಂದು ಹೇಳಿದ್ದರು. ಓದಿ: ಅನ್ಯ ಧರ್ಮದ ಯುವಕರ ಜೊತೆ ಕಾಣಿಸಿಕೊಂಡರೆ ಧರ್ಮದೇಟು ಗ್ಯಾರಂಟಿ-ವಾರ್ನಿಂಗ್ ಮೆಸೇಜ್ ವೈರಲ್

    ಧನ್ಯಶ್ರೀ ಮನೆಗೆ ಐವರು ಸಂಘಟನಾಕಾರರು ಎರಡು ಬಾರಿ ಹೋಗಿ ಬಂದಿರೋ ದಾಖಲೆ ಇದೆ. ಅವರ ಮನೆಗೆ ಹೋಗಿ ಹೆತ್ತವರ ಎದುರೇ ಸೊಂಟದ ಕೆಳಗಿನ ಭಾಷೆಯಲ್ಲಿ ಬಾಯಿಗೆ ಬಂದಂತೆ ಬಯ್ದಿರೋದು ಗೊತ್ತಾಗಿದೆ. ಎರಡು, ಮೂರು, ನಾಲ್ಕನೇ ತಾರೀಖು ಬೋಲ್ಡ್ ಆಗಿದ್ದ ಧನ್ಯಶ್ರೀ ಐದನೇ ತಾರೀಖು, ಐವರು ಎರಡು ಬಾರಿ ಮನೆಗೆ ಬಂದುಹೋದ ಮೇಲೆ ಆಕೆ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣವನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರಕರಣದಲ್ಲಿ ಯಾರೇ ಇರಲಿ, ಎಷ್ಟೆ ದೊಡ್ಡ ವ್ಯಕ್ತಿಗಳೇ ಬರಲಿ, ಎಷ್ಟೆ ಒತ್ತಡ ಬಂದರು ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅಣ್ಣಾಮಲೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಇದನ್ನೂ ಓದಿ: ನೇಣು ಬಿಗಿದುಕೊಂಡು ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ- ಸಾವಿಗೂ ಮುನ್ನ ಐ ಲವ್ ಮುಸ್ಲಿಮ್ಸ್ ಎಂದು ಮೆಸೇಜ್ ಮಾಡಿದ್ದ ಯುವತಿ

    https://www.youtube.com/watch?v=RFSQfZFZs4Y

    https://youtu.be/H8lL8K6TcM8

  • ತಮಾಷೆಗಾಗಿ ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ್ರು!

    ತಮಾಷೆಗಾಗಿ ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ್ರು!

    ಲಕ್ನೋ: ಉತ್ತರಪ್ರದೇಶದ ಬುಲಂದರ್ ಶಹರ್ ನಲ್ಲಿ ಜ. 2ರಂದು ನಡೆದ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

    ಬಂಧಿತರನ್ನು ಜುಲ್ಫೀಕರ್ ಅಬ್ಬಸಿ ಹಾಗೂ ದಿಲ್ ಶದ್ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಬುಲಂದರ್ ಶಹರ್ ನ ಸಿಕಂದ್ರಾಬಾದ್ ನಿವಾಸಿಗಳು ಎನ್ನಲಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಇಸ್ರೈಲಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.

    ಆರೋಪಿಗಳು ಮೊದಲು ಸಿನಿಮಾ ನೋಡಿದ್ದಾರೆ. ನಂತರ ಮದ್ಯಪಾನ ಸೇವಿಸಿ, ಬಳಿಕ ಬುಲಂದರ್ ಶಹರ್ ರಾಷ್ಟ್ರೀಯ ಹೆದ್ದಾರಿ 91ರಲ್ಲಿ 16 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ಆರೋಪಿಗಳು ತಮಾಷೆಗಾಗಿ ಈ ಕೃತ್ಯ ಎಸಗಿದ್ದಾರೆಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಬಾಲಕಿ ಟ್ಯೂಷನ್ ನಿಂದ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಆಕೆಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಕಾರಿನೊಳಗೆ ಬಲವಂತವಾಗಿ ಎಳೆದುಕೊಂಡಿದ್ದಾರೆ. ಬಳಿಕೆ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಕತ್ತು ಹಿಸುಕಿ ಕೊಲೆಗೈದಿದ್ದಾರೆ. ನಂತ್ರ ಶವವನನ್ನು ಗ್ರೇಟರ್ ನೋಯ್ಡಾದಲ್ಲಿರೋ ಬಿಲ್ ಅಕ್ಬರ್ ಪುರ್ ಗ್ರಾಮದಲ್ಲಿನ ಕಾಲುವೆಗೆ ಎಸೆದಿದ್ದಾರೆ ಎಂದು ಅವರು ವಿವರಿಸಿದ್ದಾರೆ.

    ಸದ್ಯ ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಾಲಕಿಯನ್ನು ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಹೇಳಿದಾಗ ಪೊಲೀಸರು ಇದೊಂದು ಲವ್ ಕೇಸ್ ಎಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ನಿರಾಕರಿಸಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.

  • ಅಬ್ದುಲ್ ಬಶೀರ್ ಕೊಲೆ ಯತ್ನ- ನಾಲ್ವರು ಆರೋಪಿಗಳ ಬಂಧನ

    ಅಬ್ದುಲ್ ಬಶೀರ್ ಕೊಲೆ ಯತ್ನ- ನಾಲ್ವರು ಆರೋಪಿಗಳ ಬಂಧನ

    ಮಂಗಳೂರು: ಜಿಲ್ಲೆಯ ಫಾಸ್ಟ್ ಫುಡ್ ವ್ಯಾಪಾರಿ ಅಬ್ದುಲ್ ಬಶೀರ್ ಮಾರಣಾಂತಿಕ ಹಲ್ಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ ಬಂಧನವಾಗಿದೆ.

    ಶ್ರೀಜಿತ್ ಪಿ.ಕೆ (25), ಕಿಶನ್ ಪೂಜಾರಿ (21), ಧನುಷ್ ಪೂಜಾರಿ (22), ಸಂದೇಶ್ ಕೋಟ್ಯಾನ್ (22) ಬಂಧಿತ ಆರೋಪಿಗಳು. ಶ್ರೀಜಿತ್, ಕಾಸರಗೋಡಿನ ಉಪ್ಪಳದ ಮಂಗಲ್ಪಾಡಿ ನಿವಾಸಿ, ಸಂದೇಶ್ ಮಂಜೇಶ್ವರದ ಕುಂಜತ್ತೂರು ನಿವಾಸಿ, ಕಿಶನ್ ಮತ್ತು ಧನುಷ್ ಮಂಗಳೂರಿನ ಪಡೀಲ್ ನಿವಾಸಿಗಳು ಎಂದು ತಿಳಿದು ಬಂದಿದೆ.

    ಮಂಗಳೂರಿನ ಕಂಕನಾಡಿ ಗರೋಡಿ ಜಾತ್ರೆಗೆ ಬಂದಿದ್ದ ಯುವಕರ ತಂಡ ದೀಪಕ್ ರಾವ್ ಹತ್ಯೆಯಾದ ದಿನ ಎಜೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ಹಿಂದೂ ಯುವಕನ ಕೊಲೆಯಾಗಿದೆ ಎಂದು ಆಕ್ರೋಶಗೊಂಡ ಈ ಯುವಕರು ಸೇಡು ತೀರಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ದೀಪಕ್ ಹತ್ಯೆಗೆ ರಿವೇಂಜ್ ಆಗಿ ಕೃತ್ಯ ಬಷೀರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಕಮೀಷನರ್ ಹೇಳಿದರು.

    ಬಷೀರ್ ಗೂ ಬಂಧಿತ ಆರೋಪಿಗಳಿಗೂ ಸಂಬಂಧವಿಲ್ಲ. ಮೇಲ್ನೋಟಕ್ಕೆ ಹಳೇ ವೈಷಮ್ಯ ಕಾಣಿಸುತ್ತಿಲ್ಲ. ಮುಂದೆ ತನಿಖೆಯಲ್ಲಿ ಎಲ್ಲಾ ಸತ್ಯಗಳು ಬಹಿರಂಗ ಆಗುತ್ತದೆ ಎಂದು ಇದೇ ವೇಳೆ ಹೇಳಿದ್ದಾರೆ. ಜ.3 ರಂದು ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಅಬ್ದುಲ್ ಬಶೀರ್ ಚಿಕಿತ್ಸೆಗೆ ಸ್ಪಂದಿಸ್ತಾಯಿದ್ದಾರೆ, ಅಬ್ದುಲ್ ಬಶೀರ್ ದೇಹ ಸ್ಥಿತಿ ಸುಧಾರಿಸಿದೆ ಎಂದು ಸ್ಪಷ್ಟಪಡಿಸಿದರು.

    ಆರಂಭದಲ್ಲಿ ಇದ್ದಂತಹ ವಿಷಮ ಸ್ಥಿತಿ ಈಗ ಮಂಗಳೂರಲ್ಲಿ ಇಲ್ಲ ಎಂದು ಪೊಲೀಸ್ ಕಮೀಷನರ್ ಹೇಳಿದರು. ಇದನ್ನೂ ಓದಿ: ದೀಪಕ್ ಹತ್ಯೆ ನಡೆದ ರಾತ್ರಿ ಮಂಗ್ಳೂರಿನಲ್ಲಿ ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ

    https://www.youtube.com/watch?v=prf8LAzRcus

    https://www.youtube.com/watch?v=XIln_78eJlQ

    https://www.youtube.com/watch?v=nqZ3ZShX1q0

  • ದೀಪಕ್ ರಾವ್ ಹತ್ಯೆ ಪ್ರಕರಣ- ಪೊಲೀಸರ ಕೆಲಸವನ್ನು ಶ್ಲಾಘಿಸಿದ ಸಚಿವ ಆಂಜನೇಯ

    ದೀಪಕ್ ರಾವ್ ಹತ್ಯೆ ಪ್ರಕರಣ- ಪೊಲೀಸರ ಕೆಲಸವನ್ನು ಶ್ಲಾಘಿಸಿದ ಸಚಿವ ಆಂಜನೇಯ

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕೆಲಸ ಶ್ಲಾಘನೀಯ ಎಂದು ಸಚಿವ ಆಂಜನೇಯ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವರು, ಹತ್ಯೆ, ಸಾವು ಯಾವುದೂ ಆಗಬಾರದು. ಕೊಲೆ ಹಿಂದಿನ ಸತ್ಯ ತನಿಖೆಯಲ್ಲಿ ಬೆಳಕಿಗೆ ಬರುತ್ತೆ. ಸಾವಿನಲ್ಲಿ ಯಾವುದೇ ರಾಜಕೀಯ ಮಾಡಬಾರದು. ಘಟನೆಯಾದ ಕೆಲವೇ ಗಂಟೆಯಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕೆಲಸ ನಿಜಕ್ಕೂ ಶ್ಲಾಘನೀಯವಾಗಿದೆ ಅಂದ್ರು.

    ಪ್ರಕರಣ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರುತ್ತದೆ. ಬಳಿಕ ತಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲಿದೆ ಅಂತ ಅವರು ಹೇಳಿದ್ರು.

    ಇದೇ ವೇಳೆ ತನ್ನ ರಾಜಕೀಯ ನಡೆಯ ಬಗ್ಗೆ ಮಾತನಾಡಿದ ಅವರು, ನಾನು ಕ್ಷೇತ್ರ ಬದಲಾವಣೆ ಮಾಡುವುದಿಲ್ಲ. ಹೊಳಲ್ಕೆರೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ನನ್ನ ಜಿಲ್ಲೆ ಚಿತ್ರದುರ್ಗ. 44 ವರ್ಷದಿಂದ ಇಲ್ಲೆ ರಾಜಕೀಯ ಮಾಡಿದ್ದೇನೆ. ಸೋಲು, ಗೆಲುವು ಮಂತ್ರಿ ಸ್ಥಾನ ಎಲ್ಲವನ್ನು ಇದೇ ಕ್ಷೇತ್ರ ಕೊಟ್ಟಿದೆ. ನನ್ನ ಅಭಿಮಾನಿಗಳು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಕೇಳಿಕೊಳ್ತಿದ್ದಾರೆ. ಆದ್ರೆ ನಾನು ಕ್ಷೇತ್ರ ಬದಲಾಯಿಸೊಲ್ಲ. ಹೀಗಾಗಿ ಹೊಳಲ್ಕೆರೆಯಿಂದಲೇ ಈ ಬಾರಿ ಸ್ಪರ್ಧೆ ಮಾಡಿ ಗೆಲ್ತೀನಿ ಅಂತ ತಿಳಿಸಿದ್ರು.

    ಬಹುಮಾನ ಘೋಷಣೆ: ದೀಪಕ್ ರಾವ್ ಹತ್ಯೆ ಪ್ರಕರಣ ಭೇದಿಸುವಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರನ್ನು ಎಡಿಜಿಪಿ ಕಮಲ್ ಪಂತ್ ಅವರು ಪ್ರಶಂಸಿಸಿದ್ದು, ರೂ.1,20,000 ಬಹುಮಾನ ಘೋಷಣೆ ಮಾಡಿದ್ದಾರೆ. ದೀಪಕ್ ಹತ್ಯೆ ನಡೆದ 5 ಗಂಟೆಗಳ ಒಳಗಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಒಟ್ಟು ನಾಲ್ವರು ಆರೋಪಿಗಳನ್ನು ಬುಧವಾರ ಬಂಧನಕ್ಕೊಳಪಡಿಸಿದ್ದರು. ಗೃಹ ರಕ್ಷಕ ದಳದ ಸಿಬ್ಬಂದಿ ಹರೀಶ್ ಸೇರಿದಂತೆ ಒಟ್ಟು 6 ಮಂದಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.