Tag: accused

  • ಹಾವೇರಿಯಲ್ಲಿ ದಂಪತಿ ಮರ್ಡರ್ ಕೇಸ್ – ಬುರ್ಖಾ ಧರಿಸಿ ಎಸ್ಕೇಪ್ ಆಗಿದ್ದ ಆರೋಪಿ ಬಂಧನ

    ಹಾವೇರಿಯಲ್ಲಿ ದಂಪತಿ ಮರ್ಡರ್ ಕೇಸ್ – ಬುರ್ಖಾ ಧರಿಸಿ ಎಸ್ಕೇಪ್ ಆಗಿದ್ದ ಆರೋಪಿ ಬಂಧನ

    ಹಾವೇರಿ: ಬೆಳ್ಳಂಬೆಳಗ್ಗೆ ದಂಪತಿಯನ್ನು ಬರ್ಬರ ಹತ್ಯೆ ಮಾಡಿ ಬುರ್ಖಾ ಧರಿಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.

    ಕೋಟೆಪ್ಪ ಬಂಧಿತ ಆರೋಪಿಯಾಗಿದ್ದು, ಹತ್ಯೆ ನಡೆದ ವೇಳೆ ಆರೋಪಿ ಹೆಲ್ಮೆಟ್ ಹಾಗೂ ಬುರ್ಖಾ ಧರಿಸಿ ಬಂದಿದ್ದ ಎನ್ನುವ ಮಾಹಿತಿಯನ್ನು ಗ್ರಾಮಸ್ಥರಿಂದ ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಪೊಲೀಸ್ ತನಿಖೆ ವೇಳೆ ಕೊಲೆಯಾದ ವ್ಯಕ್ತಿ ಮಹಿಳೆಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸುಳಿವು ಸಿಕ್ಕಿತ್ತು. ಬಳಿಕ ಆರೋಪಿಗಾಗಿ ಬಲೆ ಬೀಸಿದ ಪೊಲೀಸರು ಕೃತ್ಯ ನಡೆದ 24 ಗಂಟೆಯೊಳಗೆ ಕೋಟೆಪ್ಪನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಇಂದು ಬೆಳಗ್ಗೆ ಜಿಲ್ಲೆ ಸವಣೂರು ತಾಲೂಕು ಹತ್ತಿಮತ್ತೂರು ಗ್ರಾಮದ ಮನೆಯಲ್ಲಿದ್ದ ಮಾರ್ತಾಂಡಪ್ಪ ಬಾರ್ಕಿ ಮತ್ತು ಸುಧಾ ಬಾರ್ಕಿ ಎಂಬ ದಂಪತಿ ಹತ್ಯೆಯಾಗಿತ್ತು. ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಕೋಟೆಪ್ಪ ಕೊಲೆ ಮಾಡಿ ಪರಾರಿಯಾಗಿದ್ದ.

    ಕೊಲೆಗೆ ಕಾರಣವೇನು: ಸದ್ಯ ಪೊಲೀಸರು ಬಂಧಿಸಿರುವ ಆರೋಪಿ ಕೋಟೆಪ್ಪನ ಪತ್ನಿಯೊಂದಿಗೆ ಮಾರ್ತಾಡಂಪ್ಪ ಅಕ್ರಮ ಸಂಬಂಧ ಹೊಂದಿದ್ದ. ಇದ್ದರಿಂದ ರೋಚ್ಚಿಗೆದ್ದ ಆರೋಪಿ ಕೋಟೆಪ್ಪ ಬುರ್ಖಾ ಧರಿಸಿಕೊಂಡು ಹೋಗಿ ಮಾರ್ತಾಂಡಪ್ಪನನ್ನು ಹತ್ಯೆ ಮಾಡಿದ್ದ. ಅಲ್ಲದೇ ಪತಿಯನ್ನ ಬಿಡಿಸಿಕೊಳ್ಳಲು ಹೋದ ಮಾರ್ತಾಂಡಪ್ಪನ ಪತ್ನಿ ಸುಧಾರನ್ನು ಕೊಲೆ ಮಾಡಿದ್ದಾಗಿ ಕೋಟೆಪ್ಪ ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

  • ಯುವ ಜೋಡಿಯ ಮೇಲೆ ನೈತಿಕ ಪೊಲೀಸ್ ಗಿರಿ- ದಾರಿ ಮಧ್ಯೆ ಅಡ್ಡಗಟ್ಟಿ ಮದುವೆ ಮಾಡಿಸಿದ್ರು!

    ಯುವ ಜೋಡಿಯ ಮೇಲೆ ನೈತಿಕ ಪೊಲೀಸ್ ಗಿರಿ- ದಾರಿ ಮಧ್ಯೆ ಅಡ್ಡಗಟ್ಟಿ ಮದುವೆ ಮಾಡಿಸಿದ್ರು!

    ಗುವಾಹಟಿ: ಯುವಕರ ಗುಂಪೊಂದು ದಾರಿ ಮಧ್ಯೆ ಯುವ ಜೋಡಿಯನ್ನು ತಡೆದು ಹಲ್ಲೆ ನಡೆಸಿ ನೈತಿಕ ಪೊಲೀಸ್  ಗಿರಿ ಪ್ರರ್ಶಿಸಿದ ಘಟನೆ ಮಂಗಳವಾರ ಅಸ್ಸಾಂ ನ ಗೋಲ್ಪಾರಾ ಜಿಲ್ಲೆಯಲ್ಲಿ ನಡೆದಿದೆ.

    ಅವಿವಾಹಿತ ಯುವಕ-ಯುವತಿ ಬೈಕ್‍ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಜನರ ಗುಂಪೊಂದು ರಸ್ತೆ ಅಡ್ಡಗಟ್ಟಿದೆ. ಬಳಿಕ ಬಲವಂತವಾಗಿ ಬೈಕ್‍ನಿಂದ ಇಳಿಯುವಂತೆ ಹೇಳಿದ್ದಾರೆ. ಇಳಿದ ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಜೋಡಿಯನ್ನು ಗ್ರಾಮಕ್ಕೆ ಕರೆದು ತಂದ ಯುವಕರ ಗುಂಪು, ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿಯ ಸಹೋದರ ಹೇಳಿದ್ದಾರೆ.

    ಸದ್ಯ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳನ್ನು ಸ್ಥಳದಲ್ಲಿದ್ದ ಕೆಲವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೈಯಲ್ಲಿ ಕೋಲು ಹಿಡಿದು ಜೋಡಿಗೆ ಬೆದರಿಕೆ ಹಾಕಿ, ಯುವತಿಗೆ ಬಿದಿರು ಕೋಲಿನಿಂದ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಆಧರಿಸಿ ಘಟನೆಯಲ್ಲಿ ಜೋಡಿಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಉಳಿದವರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ ಅಂತ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಘಟನೆ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸರು, ಈ ಕುರಿತು ತಮಗೇ ಯಾವುದೇ ದೂರು ಬಂದಿಲ್ಲ. ಆದರೆ ವಿಡಿಯೋ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಒಬ್ಬ ಆರೋಪಿಯನ್ನು ಶುಕ್ರವಾರ ಹಾಗೂ ಮತ್ತೊಬ್ಬನನ್ನು ಶನಿವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಅಸ್ಸಾಂ ಡಿಜಿಪಿ ಕುಲಧರ್ ಸೈಕಿಯಾ ಹೇಳಿದ್ದಾರೆ.

    ಇದೇ ಪ್ರದೇಶದಲ್ಲಿ ಕಳೆದ ಮೂರು ದಿನಗಳ ಹಿಂದೆ ಕಾರಿನಲ್ಲಿ ಚಲಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ತೆಡೆದು ಮಕ್ಕಳ ಕಳ್ಳರು ಎಂದು ಹಲ್ಲೆ ನಡೆಸಿ ಕೊಲೆ ಮಾಡಿಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿ ಮದುವೆ ಮಾಡಿಸಿದ್ದಾರೆ.

  • ಪತ್ನಿಗೆ ಗುಂಡಿಕ್ಕಿದ ಉದ್ಯಮಿ ಪ್ರಕರಣ- ಬಂಧನವಾಗುವ ಮೊದ್ಲೇ ಮಕ್ಳನ್ನೂ ಮುಗಿಸಲು ಸ್ಕೆಚ್ ಹಾಕಿದ್ದ!

    ಪತ್ನಿಗೆ ಗುಂಡಿಕ್ಕಿದ ಉದ್ಯಮಿ ಪ್ರಕರಣ- ಬಂಧನವಾಗುವ ಮೊದ್ಲೇ ಮಕ್ಳನ್ನೂ ಮುಗಿಸಲು ಸ್ಕೆಚ್ ಹಾಕಿದ್ದ!

    ಬೆಂಗಳೂರು: ಜಯನಗರದಲ್ಲಿ ತನ್ನ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಯನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸಹನಾ(42) ಪತಿ ಗಣೇಶ್ ನಿಂದಲೇ ಕೊಲೆಯಾದ ದುರ್ದೈವಿಯಾಗಿದ್ದು, ಈ ಘಟನೆ ಜಯನಗರದ ನಾಲ್ಕನೇ ಬ್ಲಾಕ್ ನಲ್ಲಿ ನಡೆದಿತ್ತು. ಆರೋಪಿ ಮಕ್ಕಳ ಮೇಲೂ ಶೂಟ್ ಮಾಡಿದ್ದು, ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆ ವಿವರ:
    ಉದ್ಯಮಿ ಗಣೇಶ್ ಮೂಲತಃ ಸಕಲೇಶಪುರದವನಾಗಿದ್ದಾನೆ. ಅಲ್ಲಿ ಕಾಫಿ ತೋಟ ಮಾರಿ ಬೆಂಗಳೂರಿಗೆ ಬಂದಿದ್ದು, ನಗರದಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದನು. ಕನಕಪುರ ರಸ್ತೆಯಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದ್ದನು. ಆದ್ರೆ ಕಳೆದ ಎರಡು ವರ್ಷದಿಂದ ರೆಸಾರ್ಟ್ ನಲ್ಲಿ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದನು. ಇತ್ತೀಚೆಗೆ ಸಾಲಗಾರರ ಕಾಟ ಜಾಸ್ತಿಯಾಗಿತ್ತು. ಹೀಗಾಗಿ ಗಣೇಶ್ ಹಾಗೂ ಪತ್ನಿ ಸಹಾನ ನಡುವೆ ಆಗಾಗ ಸಾಲದ ವಿಚಾರಕ್ಕೆ ಜಗಳವಾಗುತ್ತಿತ್ತು. ಗುರುವಾರ ರಾತ್ರಿಯೂ ಇದೇ ವಿಚಾರಕ್ಕೆ ಸಂಬಂಧಿಸಿ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ಜಗಳ ತಾರಕಕ್ಕೇರಿದ್ದು ಗಣೇಶ್ ತನ್ನ ಲೈಸೆನ್ಸ್ ಗನ್ ನಿಂದ ಪತ್ನಿ ಸಹಾನಾಗೆ ಶೂಟ್ ಮಾಡಿದ್ದನು. ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಗಣೇಶ್ ತನ್ನ ಪತ್ನಿಗೆ ಶೂಟ್ ಮಾಡಿ ಮುಗಿಸಿದ್ದನು.

    ಅರೆಸ್ಟ್ ಆಗಿದ್ದು ಹೇಗೆ?:
    ಮನೆಯಲ್ಲೇ ಪತ್ನಿ ಸಹಾನ ಸಾವನ್ನಪ್ಪಿದ್ದ ಬಳಿಕ ಮೂರು ಮಕ್ಕಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು, ಬಿಡದಿಯ ಫಾರ್ಮ್ ಹೌಸ್ ನಲ್ಲಿ ತಲೆಮರೆಸಿಕೊಂಡಿದ್ದನು. ಫಾರ್ಮ್ ಹೌಸ್ ನಲ್ಲಿ ಮಕ್ಕಳಿಗೆ ಶೂಟ್ ಮಾಡಿದ್ದಾನೆ. ಪರಿಣಾಮ ಹೆಣ್ಣು ಮಗಳ ಹೊಟ್ಟೆಗೆ ಹಾಗೂ ಮಗನ ಕೈ ಹಾಗೂ ತೊಡೆ ಭಾಗಕ್ಕೆ ಗಾಯಗಳಾಗಿವೆ. ಬಳಿಕ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗ್ತಿದ್ದನು.

    ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮಕ್ಕಳು, ಗಣೇಶ್ ಬಳಿ ನೀರು ಕೇಳಿದ್ದಾರೆ. ಹೀಗಾಗಿ ನೀರು ಕುಡಿಸಲೆಂದು ಆತ ಕಾರಿನಲ್ಲೇ ಮುಖ್ಯ ರಸ್ತೆಗೆ ಬಂದಿದ್ದಾನೆ. ಇತ್ತ ಗಣೇಶ್ ಗಾಗಿ ಹುಡುಕುತ್ತಿದ್ದ ಪೊಲೀಸರಿಗೆ ಆತನ ಕಾರ್ ನಂಬರ್ ಮಾಹಿತಿ ಸಿಕ್ಕಿದೆ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿ ಗಣೇಶ್ ನನ್ನು ಬೆನ್ನಟ್ಟಿದ್ದು, ಅಂಚೆ ಪಾಳ್ಯದ ಬಳಿ ಬಂಧಿಸಿದ್ದಾರೆ. ಇನ್ನು ಗಾಯಗೊಂಡ ಮಕ್ಕಳಿಬ್ಬರನ್ನ ಕೋಣನಕುಂಟೆಯ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಕ್ಕಳಿಬ್ಬರ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಪೊಲೀಸರು ತನ್ನನ್ನು ಬಂಧಿಸೋ ಮುಂಚೆ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದೆ. ಅದಕ್ಕಾಗಿಯೇ ಮಕ್ಕಳ ಮೇಲೆ ಗುಂಡು ಹಾರಿಸಿದ್ದೆ. ನನಗೆ ತುಂಬಾ ಸಾಲ ಇತ್ತು. ಅದಕ್ಕಾಗಿ ಆಸ್ತಿ ಮಾರಾಟ ಮಾಡಲು ಪ್ರಯತ್ನ ಮಾಡ್ತಿದ್ದೆ. ಆಸ್ತಿ ಮಾರಾಟ ಮಾಡಲು ಪತ್ನಿ ಅನುಮತಿ ನೀಡುತ್ತಿರಲಿಲ್ಲ. ಆಸ್ತಿ ಮಾರಾಟ ಮಾಡಿದ್ದರೆ ಮಕ್ಕಳು ಬೀದಿಗೆ ಬರುತ್ತಾರೆ ಎಂದು ಹೇಳುತ್ತಿದ್ದಳು. ಮಕ್ಕಳಿಗಾಗಿ ನಾನು ಜೀವ ಕಳೆದುಕೊಳ್ಳುವ ರೀತಿ ಇರಲಿಲ್ಲ. ಅದಕ್ಕಾಗಿ ನಾನು ಈ ಕೃತ್ಯ ಮಾಡಿದೆ ಅಂತ ಗಣೇಶ್ ತಪ್ಪೊಪ್ಪಿಕೊಂಡಿದ್ದಾನೆ.

    https://www.youtube.com/watch?v=FtP56UNZo1w

     

  • 150 ಕೇಸ್ ನಲ್ಲಿ ಬೇಕಾಗಿದ್ದ ಆರೋಪಿಗೆ ಶೂಟ್, ಅರೆಸ್ಟ್ – ಡಿಸಿಪಿ ರವಿ ಡಿ.ಚನ್ನಣ್ಣನವರಿಂದ ತಂಡಕ್ಕೆ ಬಹುಮಾನ ಘೋಷಣೆ

    150 ಕೇಸ್ ನಲ್ಲಿ ಬೇಕಾಗಿದ್ದ ಆರೋಪಿಗೆ ಶೂಟ್, ಅರೆಸ್ಟ್ – ಡಿಸಿಪಿ ರವಿ ಡಿ.ಚನ್ನಣ್ಣನವರಿಂದ ತಂಡಕ್ಕೆ ಬಹುಮಾನ ಘೋಷಣೆ

    ಬೆಂಗಳೂರು: ಸುಮಾರು 150 ಕೇಸ್ ಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸಿದ್ದ ಪೊಲೀಸ್ ತಂಡಕ್ಕೆ ಡಿಸಿಪಿ ರವಿ ಡಿ. ಚನ್ನಣ್ಣನರ್ ಬಹುಮಾನವನ್ನು ಘೋಷಣೆ ಮಾಡಿದ್ದಾರೆ.

    ಅಚ್ಯುತ್ ಕುಮಾರ್ ಗಣಿ ಪೊಲೀಸರ ದಾಳಿಗೆ ಒಳಗಾದ ಆರೋಪಿ. ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸುಮಾರು 5.45 ಕ್ಕೆ ಶೂಟ್ ಮಾಡಿ ಬಂಧಿಸಿದ್ದಾರೆ.

    ಶೂಟ್ ಮಾಡಿದ್ದು ಯಾಕೆ?
    ಸರಗಳ್ಳ ಅಚ್ಯುತ್ ಕುಮಾರ್ ನನ್ನ ಭಾನುವಾರ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ನಸುಕಿನ ಜಾವ ಸುಮಾರು 2.30ಕ್ಕೆ ಕುಂಬಳಗೋಡಿಗೆ ಕರೆದೊಯ್ಯುಲಾಗುತ್ತಿತ್ತು. ಕೆಂಗೇರಿ ಸ್ಯಾಟ್ ಲೈಟ್ ಬಳಿ ಬರುವ ವೇಳೆಗೆ ಮೂತ್ರ ವಿಸರ್ಜನೆ ಮಾಡಬೇಕೆಂದು ಹೇಳಿ ತಪ್ಪಿಸಿಕೊಂಡಿದ್ದನು. ತಪ್ಪಿಸಿಕೊಂಡ ಆರೋಪಿಗಾಗಿ ಪೊಲೀಸ್ ತಂಡವನ್ನು ಆಯೋಜಿಸಲಾಗಿತ್ತು. ಕೋಡಿಪಾಳ್ಯ ನೈಸ್ ಮಾರ್ಗದಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದು ಕೆಂಗೇರಿ ಮತ್ತು ಜ್ಞಾನಭಾರತಿ ಪೊಲೀಸರು ಬಂಧಿಸಲು ಹೋಗಿದ್ದಾರೆ. ಆಗ ಬಂಧಿಸಲು ಬಂದಿದ್ದ ಜ್ಞಾನಭಾರತಿ ಎ.ಎಸ್.ಐ ವೀರಭದ್ರಯ್ಯ ಹಾಗೂ ಹೆಡ್ ಕಾನ್ಸ್ ಟೇಬಲ್ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತ್ಮರಕ್ಷಣೆಗೆಂದು ಪೊಲೀಸರು ಆತನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇದನ್ನೂ ಓದಿ: ತನ್ನ ಹೆಸರನ್ನು ದುರ್ಬಳಕೆ ಮಾಡೋ ಮಂದಿಗೆ ವಾರ್ನಿಂಗ್ ಕೊಟ್ಟ ಎಸ್‍ಪಿ ರವಿ ಚೆನ್ನಣ್ಣನವರ್

    ಪೊಲೀಸರು ಗುಂಡಿನ ದಾಳಿ ಮಾಡಿದ ಪರಿಣಾಮ ಆರೋಪಿಯ ಕಾಲಿಗೆ ಗುಂಡು ಬಿದ್ದು, ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ನಂತರ ಆತನನ್ನು ಸರ್ಕಾರಿ ಆಸ್ಪತ್ರೆ ದಾಖಲಿಸಿದ್ದಾರೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:  ಪೊಲೀಸರ ಅಭಿಯಾನಕ್ಕೆ ಯಶ್ ಸಾಥ್ – “Do Not Entertain False Rumors” ಅಂದ್ರು ರವಿಚೆನ್ನಣ್ಣವರ್

    ಅಚ್ಯುತ್ ಕುಮಾರ್ ವಿರುದ್ಧ ಸುಮಾರು ಬೆಂಗಳೂರಿನಲ್ಲಿ 70 ಸರಗಳ್ಳತನ ಕೇಸ್ ಗಳು ದಾಖಲಾಗಿದೆ. ಆದರೆ ರಾಜ್ಯದ ಇತರ ಜಿಲ್ಲೆಗಳೂ ಸೇರಿ ಒಟ್ಟು 150 ಕ್ಕೂ ಹೆಚ್ಚು ಕೇಸ್ ಆರೋಪಿ ಅಚ್ಯುತ್ ಮೇಲೆ ದಾಖಲಾಗಿದೆ. ಅಷ್ಟೇ ಅಲ್ಲದೇ ಬಂಧನಕ್ಕೂ ಮುನ್ನ ಅಂದರೆ ಭಾನುವಾರ ತುಮಕೂರಿನಲ್ಲಿ ಮೂರು ಕಡೆ ಸರಗಳ್ಳತನ ಮಾಡಿದ್ದನು. ಆರೋಪಿ ಒಬ್ಬಂಟಿಯಾಗಿ ಬೈಕಿನಿಂದ ಇಳಿಯದೇ ಸರ ಕಿತ್ತು ಪರಾರಿಯಾಗುತ್ತಿದ್ದನು. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ.ಚನ್ನಣ್ಣನವರ್ 1 ಲಕ್ಷ ರೂ. ಬಹುಮಾನವನ್ನು ಘೋಷಿಸಿದ್ದಾರೆ.

  • ಗೌರಿ ಹಂತಕರ ಹಿಟ್‍ಲಿಸ್ಟಲ್ಲಿ ಇದ್ದದ್ದು ಐವರಲ್ಲ- 4 ಜನರಿಂದ 10 ಮಂದಿಯ ಟಾರ್ಗೆಟ್!

    ಗೌರಿ ಹಂತಕರ ಹಿಟ್‍ಲಿಸ್ಟಲ್ಲಿ ಇದ್ದದ್ದು ಐವರಲ್ಲ- 4 ಜನರಿಂದ 10 ಮಂದಿಯ ಟಾರ್ಗೆಟ್!

    ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದರಂರೆ ಕುತೂಹಲಕಾರಿ ವಿಚಾರಗಳು ಲಭ್ಯವಾಗುತ್ತಿದೆ. ಇದೀಗ ಗೌರಿಯನ್ನು ಹತ್ಯೆ ಮಾಡಿದ್ದ ಹಂತಕರು 10 ಮಂದಿಯನ್ನು ಕೊಲ್ಲಲು ಪ್ಲಾನ್ ಮಾಡಿದ್ದರು ಎಂಬ ಮಾಹಿತಿಯೊಂದು ಹೊರಬಿದ್ದಿದೆ.

    ಸಾಹಿತಿ ಚಂಪಾ, ಸಿಎಸ್ ದ್ವಾರಕಾನಾಥ್, ಬಂಜಗೆರೆ ಜಯಪ್ರಕಾಶ್, ಬರಗೂರು ರಾಮಚಂದ್ರಪ್ಪ, ಮಾಜಿ ಸಚಿವೆ ಬಿಟಿ ಲಲಿತಾನಾಯಕ್, ನಿಡುಮಾಮಿಡಿ ಸ್ವಾಮೀಜಿ, ಪ್ರೊ, ಕೆಎಸ್ ಭಗವಾನ್, ಗಿರೀಶ್ ಕಾರ್ನಾಡ್, ಗೌರಿ ಟಾರ್ಗೆಟ್ ಆಗಿತ್ತು. ಈ ಹಿಟ್‍ಲಿಸ್ಟ್ ನ ಮಾಹಿತಿ ಗೌರಿ ಹತ್ಯೆಗೈದ ಆರೋಪಿ ಅಮೋಲ್ ಕಾಳೆ ಡೈರಿಯಲ್ಲಿ ದೊರೆತಿದೆ. ಈ 10 ಮಂದಿಯ ಲಿಸ್ಟಲ್ಲಿ ಹಂತಕರು ಮೊದಲು ಗೌರಿಯನ್ನ ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಗೆ ಹಂತಕರು ಇಟ್ಟಿದ್ದ ಹೆಸರು `ಅಮ್ಮ’ – ಇನ್ನಿಬ್ಬರು ಹತ್ಯೆಗೂ ಎರಡಕ್ಷರದ ಕೋಡ್‍ವರ್ಡ್

    ಡೈರಿ ಬರಿಯೋ ಚಟ: ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತರ ಪೈಕಿ ಅಮೋಲ್ ಕಾಳೆ, ಅಮಿತ್ ದೆಗ್ವೇಕರ್, ಸುಜಿತ್, ಯಡವೆ ಡೈರಿ ಬರೆಯುವ ಹವ್ಯಾಸವಿತ್ತು. ಅದಕ್ಕಾಗಿಯೇ ಅವರು `ಸ್ವಭಾವ ದೋಷ ನಿರ್ವಹಣೆ’ ಅಂತಾ ಸೆಪರೇಟ್ ಪೇಜ್ ಕೂಡ ಮಾಡಿದ್ದರು. ಅದರಲ್ಲಿ ಈ ದಿನ ಏನು ತಪ್ಪು ಮಾಡಿದೆ ಅನ್ನೋದನ್ನ ಬರೆದಿಡುತ್ತಿದ್ದರು. ಇದರ ಜೊತೆಗೆ ಗೌರಿ ಹತ್ಯೆ ಬಗ್ಗೆಯೂ ಕೋಡ್ ವರ್ಡ್‍ನಲ್ಲಿ ಬರೆದಿದ್ದರು. ಆರೋಪಿ ಮನೋಹರ್ ಯಡವೆ ಸಿಸಿಟಿವಿಗೆ `ಬಲ್ಬ್’ ಅಂತಾ ಬರೆದುಕೊಂಡಿದ್ದನು. ಮೊಬೈಲ್ ಬಳಸಬಾರದು ಅನ್ನೋದಕ್ಕೆ `ಸಿಮ್ ಕಾರ್ಡ್ ಬಂದ್’ ಅಂತಾ ಬರೆದಿದ್ದಾರೆ. ಈ ಎಲ್ಲಾ ಇಂಟರೆಸ್ಟಿಂಗ್ ಕೋಡ್ ವರ್ಡ್ ಗಳು ಮನೋಹರ್ ಯಡವೆಯ ಡೈರಿಯಲ್ಲಿದ್ದವು. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಕೇಸ್ – ಎಸ್‍ಐಟಿ ಮುಂದೆ ತಪ್ಪೊಪ್ಪಿಕೊಂಡು ಕಣ್ಣೀರಿಟ್ಟ ವಾಗ್ಮೋರೆ!

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗಾಗಿ ಎಸ್‍ಐಟಿಯಿಂದ ಬಲೆ ಬೀಸಿದ್ದಾರೆ. ಗೌರಿ ಹತ್ಯೆ ದಿನ ಹಂತಕರು ಎರಡು ಬೈಕ್‍ಗಳನ್ನ ಬಳಸಿದ್ದು, ಒಂದು ಬೈಕ್‍ನ ಹಿಂಬದಿಯಲ್ಲಿ ಶೂಟರ್ ಪರಶುರಾಮ್ ವಾಗ್ಮೋರೆ ಕುಳಿತಿದ್ದನು. ಬೈಕ್ ರೈಡರ್ ಹಾಗು ಮತ್ತೊಂದು ಬೈಕ್‍ನ ಇಬ್ಬರು ಹಂತಕರು ಯಾರು..? ಹಾಗೂ ದಾದಾ ಅಂತಾ ಕರೆಸಿಕೊಳ್ತಿರೋ ಮಾಸ್ಟರ್ ಮೈಂಡ್‍ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಹಂತಕರನ್ನ ಪತ್ತೆಹಚ್ಚಲು ಇದುವರೆಗೂ 126 ಕಾಯಿನ್‍ಬಾಕ್ಸ್ ಗಳಿಂದ ಬರೋ ಕಾಲ್‍ಗಳ ಬಗ್ಗೆ ಎಸ್‍ಐಟಿ ಪರಿಶೀಲನೆ ನಡೆಸಿದೆ.ಇದನ್ನೂ ಓದಿ: ಗೌರಿ ಕೇಸ್: ಪರಶುರಾಮ್ ವಾಗ್ಮೋರೆ ಕುರಿತಂತೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

  • ಗೌರಿ ಲಂಕೇಶ್ ಹತ್ಯೆಗೆ ಹಂತಕರು ಇಟ್ಟಿದ್ದ ಹೆಸರು `ಅಮ್ಮ’ – ಇನ್ನಿಬ್ಬರು ಹತ್ಯೆಗೂ ಎರಡಕ್ಷರದ ಕೋಡ್‍ವರ್ಡ್

    ಗೌರಿ ಲಂಕೇಶ್ ಹತ್ಯೆಗೆ ಹಂತಕರು ಇಟ್ಟಿದ್ದ ಹೆಸರು `ಅಮ್ಮ’ – ಇನ್ನಿಬ್ಬರು ಹತ್ಯೆಗೂ ಎರಡಕ್ಷರದ ಕೋಡ್‍ವರ್ಡ್

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ ವಾಗ್ಮೋರೆ ಬಂಧನದ ಬಳಿಕ ಹಲವು ಮಹತ್ವದ ವಿಚಾರಗಳನ್ನು ಎಸ್‍ಐಟಿ ತಂಡ ಸಂಗ್ರಹಿಸಿದ್ದು, ಸದ್ಯ ಗೌರಿ ಲಂಕೇಶ್ ಅವರ ಹತ್ಯೆಗೆ `ಅಪರೇಷನ್ ಅಮ್ಮ’ ಎಂದು ಹೆಸರಿಟ್ಟಿದ್ದರು ಎಂದು ಮೂಲಗಳು ತಿಳಿಸಿದೆ.

    ಪ್ರಮುಖವಾಗಿ ಗೌರಿ ಅವರ ಹತ್ಯೆಗೂ ಮುನ್ನ ಆರೋಪಿಗಳಿಗೆ ಕುರಿತು ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಕೋರ್ಡ್ ವಾರ್ಡ್‍ಗಳನ್ನು ಬಳಕೆ ಮಾಡಲಾಗುತ್ತಿತ್ತು. ಅದ್ದರಿಂದಲೇ ಹತ್ಯೆಗೂ ಮುನ್ನ ಆರೋಪಿಗಳಿಗೆ ಗೌರಿ ಅವರ ಕುರಿತು ಮಾಹಿತಿ ನೀಡಿರಲಿಲ್ಲ. ಈ ಕುರಿತು ಎಸ್‍ಐಟಿ ಅಧಿಕಾರಿಗಳು ಆರೋಪಿಗಳಿಂದ ಜಪ್ತಿಯಾದ ಡೈರಿಯಲ್ಲಿ ಬಹುತೇಕ ಕೋಡ್‍ವರ್ಡ್ ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ.

    ಸಂವಹನಕ್ಕೂ ಕೋಡ್‍ವರ್ಡ್: ಹತ್ಯೆ ಸಂಚು ರೂಪಿಸುವ ವೇಳೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳಿಗೂ ಸಂವಹನ ನಡೆಸಲು ಕೋಡ್ ವರ್ಡ್‍ಗಳನ್ನೇ ಬಳಕೆ ಮಾಡುತ್ತಿದ್ದರು. ಮೊಬೈಲ್ ನಂಬರ್, ಭೇಟಿಯಾಗುವ ಸ್ಥಳಕ್ಕೂ ಕೋಡ್‍ವರ್ಡ್ ನಿಗಧಿಯಾಗಿತ್ತು. ಎಲ್ಲಾ ಕೋಡ್‍ವರ್ಡ್‍ಗಳನ್ನು ಮರಾಠಿ ಮಿಶ್ರಿತ ಅಕ್ಷರಗಳಲ್ಲಿರುವ ಬಳಕೆ ಮಾಡಲಾಗುತ್ತಿತ್ತು. ಪ್ರಕರಣದಲ್ಲಿ ಯಾವುದೇ ಸುಳಿವು ಸಿಗಬಾರದು ಎಂಬ ಉದ್ದೇಶಕ್ಕೆ ಈ ಕೋಡ್‍ವರ್ಡ್ ಬಳಕೆ ಮಾಡಿದ್ದು, ಸದ್ಯ ಬಹುತೇಕ ಕೋಡ್‍ಗಳನ್ನು ಎಸ್‍ಐಟಿ ತಂಡ ಬಹುತೇಕ ಡಿಕೋಡ್ ಮಾಡಿದೆ ಎಂದು ತಿಳಿದು ಬಂದಿದೆ.

    ಮತ್ತಿಬ್ಬರು ಸಾಹಿತಿಗಳ ಹತ್ಯೆಗೆ ಸಂಚು: ಗೌರಿ ಲಂಕೇಶ್ ಹತ್ಯೆ ಮಾಡಿರುವ ರೀತಿಯಲ್ಲೇ ಆರೋಪಿಗಳು ಇನ್ನಿಬ್ಬರ ಸಾಹಿತಿಗಳ ಹತ್ಯೆಗೂ ಸಂಚು ರೂಪಿಸಿದ್ದರು. ವಿಶೇಷವಾಗಿ ಇನ್ನಿಬ್ಬರು ಸಾಹಿತಿಗಳ ಹತ್ಯೆಗೂ ಎರಡಕ್ಷರದ ಕೋಡ್‍ವರ್ಡ್ ಬಳಕೆ ಮಾಡಲಾಗಿದ್ದು, ಈ ಕುರಿತ ಪಟ್ಟಿ ಸಹ ತಯಾರು ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಇದನ್ನು ಓದಿ:  ಗೌರಿ ಲಂಕೇಶ್ ಹತ್ಯೆ ಕೇಸ್ – ಎಸ್‍ಐಟಿ ಮುಂದೆ ತಪ್ಪೊಪ್ಪಿಕೊಂಡು ಕಣ್ಣೀರಿಟ್ಟ ವಾಗ್ಮೋರೆ!

    https://www.youtube.com/watch?v=O-__JlcxgVc

  • ಗೌರಿ ಕೇಸ್ ಸಂಬಂಧ ಎಸ್‍ಐಟಿಯಿಂದ ವಿಚಾರಣೆ ತೀವ್ರ- ರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್ ಮಠಗೆ ಬುಲಾವ್

    ಗೌರಿ ಕೇಸ್ ಸಂಬಂಧ ಎಸ್‍ಐಟಿಯಿಂದ ವಿಚಾರಣೆ ತೀವ್ರ- ರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್ ಮಠಗೆ ಬುಲಾವ್

    ವಿಜಯಪುರ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್ ಮಠಗೆ ಎಸ್‍ಐಟಿ ಬುಲಾವ್ ನೀಡಿದೆ.

    ಬೆಂಗಳೂರಿಗೆ ತೆರಳುವ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಎಸ್ ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಯಾವ ವಿಚಾರಣೆಗೆ ಎಂಬುದು ಗೊತ್ತಿಲ್ಲ, ಅಲ್ಲಿ ಹೋದ ಬಳಿಕವೇ ಗೊತ್ತಾಗಲಿದೆ. ಪರಶುರಾಮ ನನ್ನ ಜೊತೆ ಬಹಳ ಹತ್ತಿರದಿಂದ ಇದ್ದ, ಅವನು ಇಂತಹ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದು ನನಗೆ ಶಾಕ್ ಆಗಿದೆ. ಪರಶುರಾಮ ಈ ಕೇಸ್ ನಿಂದ ನಿರ್ದೋಷಿ ಆಗಿ ಬರಲಿ ಎಂದು ಆಶಿಸುತ್ತೇನೆ. ಅಲ್ಲದೆ ಅವನು ಬಹಳ ಮುಗ್ಧ ವ್ಯಕ್ತಿಯಾಗಿದ್ದಾನೆ. ಪರಶುರಾಮ ವಾಗ್ಮೋರೆ ಕುಟುಂಬದವರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರಿಗೆ ಸಹಾಯ ಆಗಲಿ ಎಂದು ಫೇಸ್ ಬುಕ್ ನಲ್ಲಿ ಮನವಿ ಮಾಡಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ: ಗೌರಿ ಕೇಸ್: ಪರಶುರಾಮ್ ವಾಗ್ಮೋರೆ ಕುರಿತಂತೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ಪೊಲೀಸ್ ನೋಟಿಸ್ ಮೂಲಕ ರಾಕೇಶ್ ಗೆ ಬೆಂಗಳೂರಿಗೆ ಬರಲು ಬುಲಾವ್ ನೀಡಿದ್ದು, ಬೆಂಗಳೂರಿನ ರಾಜರಾಜೇಶ್ವರಿ ಪೊಲೀಸ್ ಠಾಣೆಯ ಕಲಂ 302, 120(B), 114, 118, 35 ಐಪಿಸಿ 3, 25 ಆರ್ಮ್ಸ್ ಆಕ್ಟ್ ಪ್ರಕರಣದಲ್ಲಿ ತನಿಖೆ ನಡೆಸಲು ವಿಚಾರಣೆಗಾಗಿ ಬುಲಾವ್ ಮಾಡಲಾಗಿದೆಯಂತೆ. ಇಂದು ಬೆಳಗ್ಗೆ ಸಿಐಡಿ ಕಚೇರಿಗೆ ಹಾಜರಾಗುವಂತೆ ಸಿಐಡಿ ಮುಖ್ಯ ವಿಚಾರಣಾ ಅಧಿಕಾರಿ ಎಮ್ ಎನ್ ಅನುಚೇತನ್ ರಿಂದ ನೋಟಿಸ್ ನೀಡಲಾಗಿದ್ದು, ಅದರಂತೆ ಹಾಜರಾಗಲು ಶ್ರೀರಾಮಸೇನೆ ವಿಜಯಪುರ ಜಿಲ್ಲಾಧ್ಯಕ್ಷ ರಾಕೇಶ್ ಬೆಂಗಳೂರಿಗೆ ಆಗಮಿಸಿದ್ದಾರೆ. ಇನ್ನು ಇವರ ಜೊತೆ ವಾಗ್ಮೋರೆ ತಂದೆ ಕೂಡ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆ

    ಸುನೀಲ್

    ಇನ್ನು ಪ್ರಕರಣ ಸಂಬಂಧ ಎಸ್‍ಐಟಿ ವಶದಲ್ಲಿದ್ದ ಸುನಿಲ್ ಅಗಸರ್ ನ್ನು ಬಿಡುಗಡೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ನಿವಾಸಿ ಸುನಿಲ್ ಅಗಸರ್ ಎಸ್‍ಐಟಿ ಪೊಲೀಸರು ಕಳೆದ ರವಿವಾರ ವಶಕ್ಕೆ ತೆಗೆದುಕೊಂಡಿದ್ದರು. ಇನ್ನು ವಿಚಾರಣೆ ಬಳಿಕ ಎಸ್‍ಐಟಿ ಪೊಲೀಸರು ಕ್ಲೀನ್‍ಚಿಟ್ ನೀಡಿ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಹಿಡಿಯಲು ಸುಳಿವು ನೀಡಿತ್ತು ಕಾಯಿನ್ ಬಾಕ್ಸ್!

  • ನನ್ನ ಮಗ ತಪ್ಪು ಮಾಡಿಲ್ಲ- ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಕ್ಕೆ ಬಂಧನ – ಪರಶುರಾಮ ಪೋಷಕರ ಆರೋಪ

    ನನ್ನ ಮಗ ತಪ್ಪು ಮಾಡಿಲ್ಲ- ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಕ್ಕೆ ಬಂಧನ – ಪರಶುರಾಮ ಪೋಷಕರ ಆರೋಪ

    ವಿಜಯಪುರ: ನನ್ನ ಮಗ ಯಾವುದೇ ತಪ್ಪು ಮಾಡಲಿಲ್ಲ. ವಿನಾಕಾರಣ ನನ್ನ ಮಗನನ್ನು ಬಂಧಿಸಿದ್ದಾರೆ. ಶ್ರೀರಾಮ ಸೇನೆ ಮತ್ತು ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದಕ್ಕೆ ಈ ರೀತಿ ಮಾಡಿದ್ದಾರೆ. ಒಂದು ವೇಳೆ ಬಿಡುಗಡೆ ಮಾಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತವಾಗಿರುವ ಅರೋಪಿ ಪರಶುರಾಮ ವಾಗ್ಮೋರೆ ಪೋಷಕರು ಹೇಳಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಯೊಂದಿಗೆ ಮಾತನಾಡಿದ ಅವರು, ನಾವು ಕೂಲಿ ನಾಲಿ ಮಾಡಿ ಬದುಕು ಜನ. ನನ್ನ ಮಗ ಕೊಲೆ ಮಾಡುವಂತಹ ವ್ಯಕ್ತಿಯಲ್ಲ. ಭಾನುವಾರ ಬೆಳಿಗ್ಗೆ 9 ಗಂಟೆಗೆ ಎಸ್ ಐಟಿ ತಂಡ ಹಾಗೂ ಕೆಲ ಸ್ಥಳೀಯ ಪೊಲೀಸ್ ಮನೆಗೆ ಬಂದು ಪಾಕಿಸ್ತಾನ ಧ್ವಜ ಹಾರಿಸಿದ ಬಗ್ಗೆ ವಿಚಾರಣೆಗೆ ಕರೆದೊಯ್ಯುವುದಾಗಿ ತಮ್ಮ ಮಗನನ್ನು ಕರೆಕೊಡು ಹೋದರು ಎಂದು ತಿಳಿಸಿದರು.

    ಎಸ್ ಐಟಿ ತಂಡ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ತಿಳಿದಿಲ್ಲ. ಈ ಕುರಿತು ಇಂದು ಮಧ್ಯಾಹ್ನ ಎಸ್ ಐಟಿ ಡಿವೈಎಸ್ ಪಿ, ಪರಶುರಾಮ ಜೊತೆ ನಮ್ಮ ಸಂಬಂಧಿ ಅಶೋಕ ಕಾಂಬ್ಳೆ ಅವರೊಂದಿಗೆ ಮಾತನಾಡಿಸಿದ್ದಾರೆ. ಆಗ ನನ್ನನ್ನ ವಿಚಾರಣೆಗಾಗಿ ಕರೆತಂದಿದ್ದಾರೆ ನೀವು ಬೆಂಗಳೂರಿಗೆ ಬನ್ನಿ ಎಂದು ಹೇಳಿದ್ದು, ಆದರೆ ಈ ಪ್ರಕರಣದಲ್ಲಿ ಅರೋಪಿ ಮಾಡಿದ್ದಾರೆ ಎಂಬುವುದು ಮಾಧ್ಯಮದಿಂದಲೇ ಗೊತ್ತಾಗಿದ್ದು ಎಂದು ತಿಳಿಸಿದರು.

    ನ್ಯಾಯಾಲಯದ ಮೇಲೆ ನಂಬಿಕೆ ಇದ್ದು, ಪ್ರಕರಣದಲ್ಲಿ ತಮ್ಮ ಮಗ ಖುಲಾಸೆ ಹೊರ ಬರುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನು ಓದಿ: ಪತ್ರಕರ್ತೆ ಗೌರಿಲಂಕೇಶ್ ಹತ್ಯೆಗೈದ ಶಂಕಿತ ಶೂಟರ್ ಅರೆಸ್ಟ್!

  • ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ- 50 ಸಾವಿರ ರೂ. ದಂಡ

    ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ- 50 ಸಾವಿರ ರೂ. ದಂಡ

    ರಾಮನಗರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ್ದ ನಾಲ್ವರಿಗೆ ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಕಠಿಣ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದ್ದಾರೆ.

    ದೊಡ್ಡಮಳೂರು ಗ್ರಾಮದ ಕುಮಾರ್, ರಾಮು, ತೀರ್ಥ, ಹಾಗೂ ಮರಿಸ್ವಾಮಿ ಜೀವಾವಧಿ ಶಿಕ್ಷೆಗೆ ಒಳಗಾದವರು. 2016ರ ಫೆಬ್ರವರಿ 15 ರಂದು ಚನ್ನಪಟ್ಟಣ ತಾಲೂಕಿನ ದೊಡ್ಡ ಮಳೂರು ಗ್ರಾಮದಲ್ಲಿ ಕಲ್ಲಾಪುರ ಗ್ರಾಮದ ನಿವಾಸಿ ರವಿ ಎಂಬ ವ್ಯಕ್ತಿಯ ಮೇಲೆ ನಾಲ್ವರು ಆರೋಪಿಗಳು ಬಡಿಗೆಗಳಿಂದ ಹೊಡೆದು ಕೊಲೆ ಮಾಡಿದ್ರು.

    ಘಟನೆ ಸಂಬಂಧ ನಾಲ್ವರನ್ನ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಗೋಪಾಲಕೃಷ್ಣ ರೈ ಅವರು ಕೊಲೆ ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದಾರೆ. ಜೀವಾವಧಿ ಶಿಕ್ಷೆಗೆ ಒಳಗಾದವರ ಸಂಬಂಧಿಕರು ಕಣ್ಣೀರಿಟ್ರೆ, ಕೊಲೆಯಾದ ವ್ಯಕ್ತಿಯ ತಂದೆ ತಮ್ಮ ಮಗನ ಕೊಲೆಗೆ ಇದೀಗ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದೆ ಅಂತಾ ಸಂತೋಷ ವ್ಯಕ್ತಪಡಿಸಿದ್ರು.

  • 10 ವರ್ಷದ ಬಾಲಕಿಯನ್ನು ಪುಸಲಾಯಿಸಿ ದೇವಸ್ಥಾನದ ಹಿಂದೆ ಅತ್ಯಾಚಾರಗೈದ!

    10 ವರ್ಷದ ಬಾಲಕಿಯನ್ನು ಪುಸಲಾಯಿಸಿ ದೇವಸ್ಥಾನದ ಹಿಂದೆ ಅತ್ಯಾಚಾರಗೈದ!

    ತುಮಕೂರು: 10 ವರ್ಷದ ಬಾಲಕಿಯನ್ನು ಪುಸಲಾಯಿಸಿ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ ಘಟನೆ ತಮಕೂರಿನ ಶಿರಾ ಪಟ್ಟಣದಲ್ಲಿ ನಡೆದಿದೆ.

    ಪ್ರಭು(35) ಅತ್ಯಾಚಾರವೆಸಗಿದ ಆರೋಪಿಯಾಗಿದ್ದು, ಶಿರಾ ಪಟ್ಟಣದಲ್ಲಿ ಪಾನಿಪೂರಿ ಅಂಗಡಿ ಇಟ್ಟುಕೊಂಡಿದ್ದನು. ಸಂಬಂಧಿಕ ಬಾಲಕಿ ರಜೆ ನಿಮಿತ್ತ ಊರಿಗೆ ಬಂದಿದ್ದಳು. ಆಕೆಯನ್ನ ಪುಸಲಾಯಿಸಿ ದೇವಸ್ಥಾನವೊಂದರ ಹಿಂದೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

    ಅತ್ಯಾಚಾರವೆಸಗಿ ಯಾರಿಗೂ ತಿಳಿಸದಂತೆ ಹೆದರಿಸಿ ಬಾಲಕಿಯನ್ನು ಮನೆಗೆ ಕಳುಹಿಸಿದ್ದಾನೆ. ಬಾಲಕಿ ನೋವು ತಾಳಲಾರದೇ ಅತ್ಯಾಚಾರದ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾಳೆ. ಆ ಬಳಿಕ ಶಿರಾ ಪಟ್ಟಣದ ಸಂತೇಪೇಟೆಯಲ್ಲಿದ್ದ ಪ್ರಭುವಿಗೆ ಸಂಬಂಧಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬಾಲಕಿಯ ಪೋಷಕರ ಥಳಿತದಿಂದಾಗಿ ಅಸ್ವಸ್ಥನಾಗಿದ್ದ ಪ್ರಭುಗೆ ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಪ್ರಭು ವಿರುದ್ಧ ಶಿರಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಯಡಿ ಪ್ರಕರಣ ದಾಖಲಾಗಿದೆ.