Tag: accused

  • ಈ ನಕಲಿ ಪೊಲೀಸ್ ಗ್ಯಾಂಗ್‍ಗೆ ಚಿನ್ನದ ವ್ಯಾಪಾರಿಗಳೇ ಟಾರ್ಗೆಟ್

    ಈ ನಕಲಿ ಪೊಲೀಸ್ ಗ್ಯಾಂಗ್‍ಗೆ ಚಿನ್ನದ ವ್ಯಾಪಾರಿಗಳೇ ಟಾರ್ಗೆಟ್

    -ಗೋಲ್ಡ್ ಬಿಸ್ಕಟ್ ಕೊಡ್ತೀನಿ ಅಂತಾ ಹೇಳಿ ಕಿಡ್ನ್ಯಾಪ್ ಮಾಡ್ತಾರೆ

    ಚಿಕ್ಕಬಳ್ಳಾಪುರ: ಚಿನ್ನದ ವ್ಯಾಪಾರಿಯನ್ನ ಅಪಹರಣ ಮಾಡಿ ಅವರ ಬಳಿ ಇದ್ದ ಹಣ ಸುಲಿಗೆ ಮಾಡಿದ್ದ ನಕಲಿ ಪೊಲೀಸರನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಆರ್.ಟಿ ಮಣಿ (45), ಸಂಪಂಗಿರಾಮ್(38), ಶ್ರೀನಿವಾಸ್(48), ರಾಮಾಂಜಿನೇಯ ರೆಡ್ಡಿ(28), ಸುರೇಶ್(42), ಆರ್ ಸೋಮು (52), ಜಿ ವೇಣುಗೋಪಾಲ್(40) ಬಂಧಿತರು. ಬಂಧಿತರಿಂದ 9 ಎಂಎಂ ನ ಪಿಸ್ತೂಲು, 10 ಜೀವಂತ ಗುಂಡುಗಳು ಹಾಗೂ 25 ನಕಲಿ ಚಿನ್ನದ ಬಿಸ್ಕೆಟ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಏನಿದು ಪ್ರಕರಣ: ಮೂಲತಃ ತಮಿಳುನಾಡು ಮೂಲದ ಚಿನ್ನದ ವ್ಯಾಪಾರಿ ಧರಣಿಧರನ್ ಎಂಬವರಿಗೆ ಕರೆ ಮಾಡಿದ್ದ ಆರೋಪಿಗಳು ತಮ್ಮ ಬಳಿ ಚಿನ್ನದ ಬಿಸ್ಕೆಟ್ ಇವೆ. ಮಾರಾಟ ಮಾಡುತ್ತೇವೆ ಎಂದು ದೇವನಹಳ್ಳಿಗೆ ಕರೆಸಿಕೊಂಡಿದ್ದರು. ಮೊದಲೇ ಪ್ಲಾನ್ ಮಾಡಿದಂತೆ ದೇವನಹಳ್ಳಿ ಬಂದ ಧರಣಿಧರನ್ ಅವರನ್ನು ಸೆ. 19 ರಂದು ದೇವನಹಳ್ಳಿಯ ರೈಲ್ವೇ ಟ್ರ್ಯಾಕ್ ಬಳಿ ಅಪಹರಣ ಮಾಡಿ, ಅವರ ಬಳಿ ಇದ್ದ ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದರು. ಅಚ್ಚರಿ ಅಂದರೆ ಆರೋಪಿಗಳು ಪೊಲೀಸ್ ವಾಹನ ಮಾದರಿಯ ಬೊಲೇರೊ ಜೀಪ್ ಗೆ ಪೊಲೀಸ್ ಬೋರ್ಡ್ ಹಾಕಿಕೊಂಡು ಚಿನ್ನದ ವ್ಯಾಪಾರಿ ಧರಣಿಧರನ್ ರನ್ನು ಅಪಹರಣ ಮಾಡಿದ್ದರು.

    ಈ ಕುರಿತು ಧರಣಿಧರನ್ ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿದ ತಂಡ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಸಹ ಇದೇ ಮಾದರಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಕೃತ್ಯದ ಬಗ್ಗೆ ಅನುಮಾನಗೊಂಡು ಹಳೆಯ ಗ್ಯಾಂಗ್ ಬಗ್ಗೆ ತನಿಖೆ ನಡೆಸಿದ ವೇಳೆ ಏಳು ಮಂದಿ ಆರೋಪಿಗಳು ತಮ್ಮ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ.

    ಚಿನ್ನದ ವ್ಯಾಪಾರಿಗಳೇ ಟಾರ್ಗೆಟ್: ಹಣಕ್ಕಾಗಿ ಚಿನ್ನದ ವ್ಯಾಪಾರಿಗಳನ್ನು ಕಿಡ್ನಾಪ್ ಮಾಡಿ ಹಣ ದರೋಡೆ ಮಾಡುವುದೇ ಇವರ ಕೆಲಸವಾಗಿತ್ತು. ಅದೇ ರೀತಿ ಧರಣಿಧರನ್ ಅವರಿಗೂ ಫೋನ್ ಮಾಡಿದ ಆರೋಪಿಗಳು ಮೊದಲು ಅಸಲಿ ಚಿನ್ನದ ನಾಣ್ಯವನ್ನು ತೋರಿಸಿ ಧರಣಿಧರ್ ಅವರನ್ನು ನಂಬಿಸಿದರು. ಬಳಿಕ ಹೆಚ್ಚಿನ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿ ಪೊಲೀಸ್ ವೇಷದಲ್ಲಿ ಅಪಹರಣ ಮಾಡಿದ್ದರು.

    ಅಪಹರಣ ಮಾಡಿದ ಬಳಿಕ ಧರಣಿಧರ್ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ಬಳಿಕ ಪೊಲೀಸ್ ಬೋರ್ಡ್ ಇರುವ ಬುಲೆರೋ ವಾಹನದಲ್ಲಿ ವಿಜಯಪುರ ರಸ್ತೆಯಲ್ಲಿ ಧರಣಿದರನ್ ಅವರನ್ನು ಬಿಟ್ಟು ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ 9 ಮಂದಿ ಭಾಗಿಯಾಗಿದ್ದು, ಉಳಿದ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿರುವುದಾಗಿ ಬೆಂಗಳೂರು ಗ್ರಾಮಾಂತರ ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಣಯ್ ಕೊಲೆ: ಆರೋಪಿಗಳ ಜಾಮೀನು ತಿರಸ್ಕಾರ

    ಪ್ರಣಯ್ ಕೊಲೆ: ಆರೋಪಿಗಳ ಜಾಮೀನು ತಿರಸ್ಕಾರ

    -ಕೋರ್ಟ್ ನಲ್ಲಿ ಅಮೃತಾ ಹೇಳಿದ್ದೇನು?

    ಹೈದರಾಬಾದ್: ಇಡೀ ದೇಶದಲ್ಲಿ ಸಂಚಲನ ಹುಟ್ಟು ಹಾಕಿದ್ದ ಪ್ರಣಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ತಿರಸ್ಕರಿಸಿ ನ್ಯಾಯಾಂಗ ಬಂಧನವನ್ನು ಮುಂದುವರೆಸುವಂತೆ ಆದೇಶಿಸಿದೆ.

    ಆರೋಪಿಗಳಾದ ಪ್ರಣಯ್ ಮಾವ ಮಾರುತಿ ರಾವ್, ಅಸ್ಗರ್ ಅಲಿ, ಮೊಹಮ್ಮದ್ ಅಬುಲ್ ಬರಿ, ಟಿ.ಶರವಣ ಮತ್ತು ಎಸ್.ಶಿವ ಆರೋಪಿಗಳು ತೆಲಂಗಾಣದ ನಾಲ್ಗೊಂಡ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

    ಅಮೃತಾ ಹೇಳಿದ್ದೇನು?
    ಗರ್ಭಿಣಿ ಅಮೃತಾ, ಪ್ರಣಯ್ ತಂದೆ ಬಾಲಸ್ವಾಮಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ಮೊದಲ ಆರೋಪಿಯಾಗಿರುವ ನಮ್ಮ ತಂದೆ ಮಾರುತಿ ರಾವ್ ಗೆ ಜಾಮೀನು ನೀಡಬಾರದು. ಆತ ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಹಣ ಬಲ ಬಳಸಿ ನನಗೂ ಮತ್ತು ನನ್ನ ಮಗುವಿಗೆಸ ತೊಂದರೆ ಮಾಡುವ ಸಾಧ್ಯತೆಗಳಿವೆ. ತಂದೆ ಕೋಪಿಷ್ಟನಾಗಿದ್ದು ತಾಳ್ಮೆ ಕಳೆದುಕೊಳ್ಳುತ್ತಿರುತ್ತಾನೆ. ಬಂಧನಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡುತ್ತಿರುವಾಗ ಎಷ್ಟು ಕೋಪಿಷ್ಠ ಎಂಬುವುದು ಸಾಬೀತಾಗಿದೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳು ನಿಮ್ಮ ಮುಂದಿವೆ ಅಂತಾ ಅಮೃತ ನ್ಯಾಯಾಲಯದ ಮುಂದೆ ಹೇಳಿದ್ದರು.

    ಸರ್ಕಾರ ಪರ ವಕೀಲರು ಸಹ ಆರೋಪಿಗಳಿಗೆ ಜಾಮೀನು ನೀಡಬಾರದು. ಸಾಕ್ಷ್ಯಗಳನ್ನು ನಾಶಗೊಳಿಸುವ ಸಾಧ್ಯತೆಗಳಿವೆ ಎಂಬ ವಾದ ಮಂಡಿಸಿದ್ದರು. ಪ್ರಣಯ್ ಮತ್ತು ಅಮೃತಾ ಇಬ್ಬರು ಪ್ರೀತಿಸಿ ಜನೆವರಿಯಲ್ಲಿ ಮದುವೆ ಆಗಿದ್ದರು. ಪ್ರಣಯ್ ಓರ್ವ ದಲಿತ ಯುವಕ ಎಂದು ಅಮೃತಾ ತಂದೆ 1 ಕೋಟಿ ರೂ.ಗೆ ಸುಪಾರಿ ನೀಡಿ ಕೊಲ್ಲಿಸಿದ್ದನು. ಹಂತಕ ಪ್ರಣಯ್ ನನ್ನು ಕೊಲ್ಲುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹಂತಕ ಬಿಹಾರ ಮೂಲದ ಸುಭಾಶ್ ಶರ್ಮಾ ಆಗಿದ್ದು, ಆತ ಈಗ ರಾಜಮಂಡ್ರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

    ಮಾರುತಿ ರಾವ್ ಅಳಿಯನನ್ನು ಕೊಲ್ಲಲು ಅಸ್ಗರ್ ಅಲಿ ಮತ್ತು ಮೊಹಮ್ಮದ್ ಅಬುಲ್ ಬರಿ ಇಬ್ಬರನ್ನು ಸಂಪರ್ಕಿಸಿದ್ದನು. ಇಬ್ಬರು ಪ್ರಣಯ್ ಕೊಲ್ಲಲು ಮೊದಲಿಗೆ 2 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಮೂವರ ಮಧ್ಯೆ 1 ಕೋಟಿ ರೂ.ಗೆ ಒಪ್ಪಂದವಾಗಿತ್ತು. ಕೊಲೆಗೂ ಮುನ್ನ ಮಾರುತಿ ರಾವ್ ಹಂತಕರಿಗೆ 15 ಲಕ್ಷ ರೂ. ನೀಡಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚೇತನ್ ಫೈರ್ ಸಂಸ್ಥೆಯಿಂದ ಪ್ರಿಯಾಂಕ ಉಪೇಂದ್ರ ಎಕ್ಸಿಟ್!

    ಚೇತನ್ ಫೈರ್ ಸಂಸ್ಥೆಯಿಂದ ಪ್ರಿಯಾಂಕ ಉಪೇಂದ್ರ ಎಕ್ಸಿಟ್!

    ಬೆಂಗಳೂರು: ನಟ ಚೇತನ್ ಒಡೆತನದ ಫೈರ್ ಸಂಸ್ಥೆಯಲ್ಲಿ ಫೈರ್ ಆಗಿದೆ. ಸ್ಯಾಂಡಲ್‍ವುಡ್‍ನಲ್ಲಿ ಕಳೆದ ವಾರದಿಂದ ನಡೆಯುತ್ತಿರುವ ವಿವಾದದಿಂದಾಗಿ, ನಟಿ ಪ್ರಿಯಾಂಕ ಉಪೇಂದ್ರ ಅವರು ಚೇತನ್ ಒಡೆತನದ ಸಂಸ್ಥೆಗೆ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ.

    ಸಂಸ್ಥೆಯಲ್ಲಿ ಆಂತರಿಕ ಸಮಸ್ಯೆ ಉಂಟಾಗಿದ್ದು ಪ್ರಿಯಾಂಕ ಉಪೇಂದ್ರ ಜೊತೆ, ಹಲವು ಸದಸ್ಯರು ಸಂಸ್ಥೆಯಿಂದ ಹೊರಬರುವುದಕ್ಕೆ ನಿರ್ಧರಿಸಿದ್ದಾರೆ. ಜೊತೆಗೆ ನಟಿ ರೂಪಾ ಅಯ್ಯರ್ ರೇಖಾರಾಣಿ ಕೂಡ ಸಂಸ್ಥೆಯಿಂದ ಹೊರಬರುತ್ತಾರೆ ಅನ್ನುವ ಸುದ್ದಿ ಹಬ್ಬಿದೆ. ಮಹಿಳೆಯರ ಒಳಿತಿಗಾಗಿ ಹುಟ್ಟಿಕೊಂಡ ಫೈರ್ ಸಂಸ್ಥೆ ರಾಜಕೀಯ, ಜಾತಿಪರ ತಳುಕು ಹಾಕಿಕೊಂಡಿದೆ. ಹೀಗಾಗಿ ಪ್ರಿಯಾಂಕ ಉಪೇಂದ್ರ ಜೊತೆ, ಇತರೇ ಸದಸ್ಯರು ವಾಪಸ್ ಆಗೋಕೆ ನಿರ್ಧರಿಸಿದ್ದಾರೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ, ಹೆಣ್ಣು ಮಕ್ಕಳಿಗೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಧನಿ ಎತ್ತಲು ನಾವು ಈ ಸಂಸ್ಥೆಯನ್ನು ಶುರು ಮಾಡಿದ್ದೆವು. ಆದರೆ ಮುಂದಿನ ದಿನಗಳಲ್ಲಿ ಈ ಸಂಸ್ಥೆ ಬೇರೆ ರೂಪವನ್ನು ತಾಳುತ್ತಿವೆ. ಹೀಗಾಗಿ ನಾನು ಅಧ್ಯಕ್ಷೆಯಾಗಿ ಪೂರ್ತಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೇ ಶೃತಿ ಹರಿಹರನ್ ಅವರು ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಬರೆದು ಮಾರನೆ ದಿನವೇ ಪತ್ರಿಕಾಗೋಷ್ಠಿ ಕರೆದಿದ್ದಾರೆ. ನಾವು ಇಲ್ಲದ ವೇಳೆ ಪತ್ರಿಕಾಗೋಷ್ಠಿ ಮಾಡಿದ್ದಾರೆ ಇದು ನನಗೆ ಸರಿ ಅನ್ನಿಸುತ್ತಿಲ್ಲ. ಹೀಗಾಗಿ ನಾನು ರಾಜೀನಾಮೆ ಕೊಡಬೇಕೆಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುಡಾಯಿಸಿ ಬಾಲಕಿಯ ತಲೆ ಕತ್ತರಿಸಿ ರೋಡ್‍ನಲ್ಲಿ ಬಿಸಾಡ್ದ!

    ಚುಡಾಯಿಸಿ ಬಾಲಕಿಯ ತಲೆ ಕತ್ತರಿಸಿ ರೋಡ್‍ನಲ್ಲಿ ಬಿಸಾಡ್ದ!

    ಚೆನ್ನೈ: 13 ವರ್ಷದ ಬಾಲಕಿಯ ತಲೆಯನ್ನು ಕತ್ತರಿಸಿ ಬೀದಿಯಲ್ಲಿ ಎಸೆದ 27 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಸೋಮವಾರ ಈ ಘಟನೆ ನಡೆದಿದ್ದು, ರಾಜಲಕ್ಷ್ಮೀ(13) ಕಾಮುಕನಿಗೆ ಬಲಿಯಾದ ಬಾಲಕಿ. ದಿನೇಶ್ ಕುಮಾರ್ ಬಾಲಕಿಗೆ ಕಿರುಕುಳವನ್ನು ನೀಡಿದ ಆರೋಪಿ. ತಲವಾಯಪಟ್ಟಿ ನಿವಾಸಿಯಾದ ರಾಜಲಕ್ಷ್ಮೀ 8 ನೇ ತರಗತಿ ಓದುತ್ತಿದ್ದಳು. ಪ್ರತಿನಿತ್ಯ ಬಾಲಕಿ ರಾಜಲಕ್ಷ್ಮೀಗೆ ದಿನೇಶ್ ಚುಡಾಯಿಸುತ್ತಿದ್ದ. ಇದೇ ವೇಳೆ ಸೋಮವಾರ ರಾಜಲಕ್ಷ್ಮೀ ಮನೆಯಲ್ಲಿ ಯಾರೂ ಇಲ್ಲದ್ದನ್ನು ಕಂಡು ಮನೆಯೊಳಗೆ ನುಗ್ಗಿ ಅವಳನ್ನು ಮತ್ತಷ್ಟು ಚುಡಾಯಿಸಿದ್ದಾನೆ ಎಂದು ಅತ್ತೆರ್ ಪೊಲೀಸರು ಹೇಳಿದ್ದಾರೆ.

    ಇದೇ ವೇಳೆ ದಿನೇಶ್ ಮನೆಯೊಳಗೆ ನುಗ್ಗಿದಾಗ ರಾಜಲಕ್ಷ್ಮೀ ಕಿರುಚಿಕೊಂಡಿದ್ದಾಳೆ. ರಾಜಲಕ್ಷ್ಮೀಯ ಕಿರುಚಾಟವನ್ನು ಕೇಳಿಸಿಕೊಂಡು ತಾಯಿ ಸ್ಥಳಕ್ಕೆ ಆಗಮಿಸುತ್ತಿದ್ದರು. ಇದನ್ನು ಕಂಡ ಕಾಮುಕ ಬಾಲಕಿ ಮೇಲೆ ಹಲ್ಲೆ ಮಾಡಿ ಆಕೆಯ ತಲೆಯನ್ನು ಕತ್ತರಿಸಿ ಬೀದಿಯಲ್ಲಿ ಎಸೆದು ಹೋಗಿದ್ದಾರೆ.

    ಈ ಘಟನೆಯ ವೇಳೆ ಆರೋಪಿ ದಿನೇಶ್ ಮದ್ಯಪಾನ ಸೇವನೆ ಮಾಡಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯಂತೆ ವರ್ತಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮರ್ಮಾಂಗವನ್ನ ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾದ ಸಾಧು!

    ಮರ್ಮಾಂಗವನ್ನ ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾದ ಸಾಧು!

    ಲಕ್ನೋ: 45 ವರ್ಷದ ಸಾಧು ಒಬ್ಬರು ಬ್ಲೇಡ್‍ನಿಂದ ತಮ್ಮ ಮರ್ಮಾಂಗವನ್ನು ಕತ್ತರಿಸಿಕೊಂಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶ ರಾಜ್ಯದ ಬಾಂದಾ ಜಿಲ್ಲೆಯ ಕಾಮಸಿನ್ ನಗರದಲ್ಲಿ ನಡೆದಿದೆ.

    ಮದನಿ ಬಾಬಾ ಮರ್ಮಾಂಗ ಕತ್ತರಿಸಿಕೊಂಡ ಸಾಧು. ಮದನಿ ಬಾಬಾ ಕಳೆದ ಹಲವು ವರ್ಷಗಳಿಂದ ಕಾಮಸಿನ್ ನಗರದ ಸರ್ಕಾರಿ ನಿವೇಶನದಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಗುರುವಾರ ನಗರದ ಕೆಲ ಮಹಿಳೆಯರು ಸಾಧು ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪದಿಂದ ಮನನೊಂದು ಸಾಧು ರಾತ್ರಿ ಬ್ಲೇಡ್ ನಿಂದ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರೇಪಿಸ್ಟ್ ಕಾಮಿ ಸ್ವಾಮೀಜಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು ಯುವತಿ!

    ಮದನಿ ಬಾಬಾರನ್ನ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೇಹದಿಂದ ಮರ್ಮಾಂಗ ಶೇ.80 ರಷ್ಟು ಬೇರೆಯಾಗಿದೆ. ಸದ್ಯ ಸಾಧು ಅವರ ಆರೋಗ್ಯ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾಧು ಮದನಿ ಬಾಬಾರಿಗೆ ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ 

    2017ರಲ್ಲಿ ರಾಜಸ್ಥಾನದ 30 ವರ್ಷದ ಸ್ವಯಂಘೋಷಿತ ದೇವಮಾನವ ಸಂತೋಷ್ ದಾಸ್ ಅಕ್ರಮ ಸಂಬಂಧದ ಆರೋಪಕ್ಕೆ ಮನನೊಂದು ಮರ್ಮಾಂಗವನ್ನು ಕಟ್ ಮಾಡಿಕೊಂಡಿದ್ದ ಘಟನೆ ನಡೆದಿತ್ತು. ಕೇರಳದಲ್ಲಿ 23 ವರ್ಷದ ಕಾನೂನು ವಿದ್ಯಾರ್ಥಿನಿಯ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀ ಹರಿ ಅಲಿಯಾಸ್ ಗಣೇಶಾನಂದ ತೀರ್ಥಪಾದ ಸ್ವಾಮಿ ಮರ್ಮಾಂಗ ಕತ್ತರಿಸಿಕೊಂಡಿದ್ದ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. ಇದನ್ನೂ ಓದಿ: ಅಕ್ರಮ ಸಂಬಂಧ ಆರೋಪಕ್ಕೆ ಮನನೊಂದು ಸ್ವಾಮೀಜಿ `ಅದನ್ನೇ’ ಕಟ್ ಮಾಡ್ಕೊಂಡ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 7ರ ಬಾಲೆಯನ್ನು ಅಪಹರಿಸಿ ಅತ್ಯಾಚಾರಗೈದ 38ರ ಕಾಮುಕ!

    7ರ ಬಾಲೆಯನ್ನು ಅಪಹರಿಸಿ ಅತ್ಯಾಚಾರಗೈದ 38ರ ಕಾಮುಕ!

    ಚಂಡೀಗಢ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಏಳು ವರ್ಷದ ಅಪ್ರಾಪ್ತ ಬಾಲಕಿಯನ್ನು 39 ವರ್ಷದ ಕಾಮುಕ ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ಹರ್ಯಾಣದ ರೆವಾರಿಯಲ್ಲಿ ನಡೆದಿದೆ.

    ಈ ಘಟನೆಯು ಮಂಗಳವಾರ ನಡೆದಿದ್ದು, ಬಾಲಕಿಯನ್ನು ಅಪಹರಿಸಿ ಹತ್ತಿರದ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಬಳಿಕ ಬಾಲಕಿ ಮನೆಗೆ ಹಿಂತಿರುಗಿದ್ದಾಳೆ. ಬಾಲಕಿಗೆ ರಕ್ತಸ್ರಾವವಾಗಿದ್ದ ಕಾರಣ ತಾಯಿಗೆ ತಿಳಿಸಿದ್ದಾಳೆ. ಬಳಿಕ ಕಾರ್ಮಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪ್ರಾಪ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮಂಗಳವಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಹಾಗೂ ಈ ಕುರಿತು ಮತ್ತಷ್ಟು ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಪೊಲೀಸ್ ಉಪ ಅಧೀಕ್ಷಕ (ಡಿಎಸ್ಪಿ) ಸತ್ಪಾಲ್ ಕುಮಾರ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

    ಈ ಹಿಂದೆ ಅದೇ ಜಿಲ್ಲೆಯ ಕೋಸ್ಲಿ ಪ್ರದೇಶದ 19 ವರ್ಷದ ಸಿಬಿಎಸ್‍ಇ ಮೇಲಾಧಿಕಾರಿ ಮಹೇಂದ್ರಗಢದ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದ ಯುವತಿಯ ಮೇಲೆ ಗ್ಯಾಂಗ್‍ರೇಪ್ ನಡೆದ ಒಂದೇ ತಿಂಗಳಿಗೆ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ ಮಹಿಳೆಯ ಎದೆಗೆ ಚಾಕು ಹಾಕಿ ಪೊಲೀಸರಿಗೆ ಶರಣಾದ!

    ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ ಮಹಿಳೆಯ ಎದೆಗೆ ಚಾಕು ಹಾಕಿ ಪೊಲೀಸರಿಗೆ ಶರಣಾದ!

    ಬೆಂಗಳೂರು: ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿ ಆಕೆ ನಿರಾಕರಿಸಿದಕ್ಕೆ ಚಾಕುವಿನಿಂದ ಕೊಲೆ ಮಾಡಲು ಯತ್ನಿಸಿ ಬಳಿಕ ಪೊಲೀಸರಿಗೆ ಯುವಕನೊಬ್ಬ ಶರಣಾಗಿರುವ ಘಟನೆ ನಗರದ ರಾಜರಾಜೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ರಾಘವೇಂದ್ರ ಶಾಸ್ತ್ರಿ ಅಲಿಯಾಸ್ ರಘು ಪೊಲೀಸರಿಗೆ ಶರಣಾದ ಆರೋಪಿ. ಸಿರಿಶಾ ಎಂಬಾಕೆ ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇಬ್ಬರ ನಡುವೆಯೂ ಈಗಾಗಲೇ ಕೆಲ ದಿನಗಳಿಂದ ಅನೈತಿಕ ಸಂಬಂಧ ಇತ್ತು, ಆದರೆ ಮಂಗಳವಾರ ಆಕೆ ದೈಹಿಕ ಸಂಪರ್ಕಕ್ಕೆ ಒಪ್ಪದೇ ನಿರಾಕರಿಸಿದ್ದಕ್ಕೆ ಆರೋಪಿ ಚಾಕುವಿನಿಂದ ಎದೆ ಹಾಗೂ ಹೊಟ್ಟೆ ಭಾಗಕ್ಕೆ 10ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ.

    ಈ ಹಿಂದೆಯೂ ರಘು ವಿವಾಹಿತ ಮಹಿಳೆಯನ್ನ ಪ್ರೀತಿಸಿ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದ ಎಂಬ ಮಾಹಿತಿ ಲಭಿಸಿದ್ದು, ಬಳಿಕ ಸಿರಿಶಾರೊಂದಿಗೆ ಸಂಪರ್ಕ ಹೊಂದಿದ್ದ. ಆದರೆ ಮಹಿಳೆ ಕೆಲ ದಿನಗಳಿಂದ ಕೌಟುಂಬಿಕ ಕಾರಣ ಹೇಳಿ ಮಹಿಳೆ ದೂರವಾಗಿದ್ದಳು ಎನ್ನಲಾಗಿದ್ದು, ಫೋನ್‍ನಲ್ಲಿ ಮಾತ್ರ ಮಾತನಾಡುತ್ತಿದ್ದರು. ಈ ನಡುವೆ ಸಿರಿಶಾಳೊಂದಿಗೆ ಹಣಕಾಸಿನ ವ್ಯವಹಾರದ ಕುರಿತು ಮಾತನಾಡಬೇಕು ಎಂದು ಹೇಳಿ ರಘು ಬನಶಂಕರಿಗೆ ಕರೆದಿದ್ದ. ಆದರೆ ಸಿರಿಶಾ ಅಲ್ಲಿಗೆ ಬರಲು ನಿರಾಕರಿಸಿ ಆರ್ ಆರ್ ನಗರದ ಬಳಿ ಇರುವ ಆರ್ಮುಗಂ ದೇವಸ್ಥಾನಕ್ಕೆ ಬರಲು ತಿಳಿಸಿದ್ದಳು. ಇಬ್ಬರು ಕೆಲ ಸಮಯ ಮಾತುಕತೆ ನಡೆಸಿ ನೈಸ್ ರಸ್ತೆಗೆ ತೆರಳಿದ್ದಾರೆ. ಈ ವೇಳೆ ರಘು ಲೈಂಗಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದು, ಇದನ್ನು ನಿರಾಕರಿಸಿದ್ದ ಕಾರಣ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಚಾಕುವನ್ನು ಸ್ಥಳದಲ್ಲೇ ಬಿಟ್ಟು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

    ಆರೋಪಿ ರಘು, ಸಿರಿಶಾಳನ್ನು ಭೇಟಿ ಮಾಡುವ ಮೊದಲೇ ಕೊಲೆ ಮಾಡಲು ನಿರ್ಧರಿಸಿದ್ದ. ಇದರಂತೆ ನಗರದ ಇಟ್ಟಮಡುವಿನಲ್ಲಿ ಚಾಕು ಖರೀದಿಸಿ ಮಾಡಿದ್ದ. ಬಳಿಕ ಕದಿರೇನಹಳ್ಳಿಯ ಬಾರ್ ಒಂದರಲ್ಲಿ ಮದ್ಯ ಸೇವಿಸಿ ಮಹಿಳೆಯನ್ನು ಭೇಟಿ ಮಾಡಲು ತೆರಳಿದ್ದ. ನೈಸ್ ರಸ್ತೆಯ ಬ್ರಿಡ್ಜ್ ಬಳಿ ಇಬ್ಬರು ಭೇಟಿ ಆಗಿದ್ದ ಈ ವೇಳೆ ಘಟನೆ ನಡೆದಿದೆ. ಅಂದಹಾಗೇ ಆರೋಪಿ ರಘುಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ. ಘಟನೆ ಕುರಿತು ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಹೈಸ್ಕೂಲ್ ಪ್ರಾಂಶುಪಾಲರ ಕೊಲೆ ಪ್ರಕರಣ: ಆರೋಪಿಗೆ ಗುಂಡಿಟ್ಟು ಬಂಧಿಸಿದ ಪೊಲೀಸರು

    ಹೈಸ್ಕೂಲ್ ಪ್ರಾಂಶುಪಾಲರ ಕೊಲೆ ಪ್ರಕರಣ: ಆರೋಪಿಗೆ ಗುಂಡಿಟ್ಟು ಬಂಧಿಸಿದ ಪೊಲೀಸರು

    ಬೆಂಗಳೂರು: ಹಾಡಹಗಲೇ ಅಗ್ರಹಾರ ದಾಸರಹಳ್ಳಿಯ ಬಳಿ ಪ್ರಾಂಶುಪಾಲರನ್ನು ಹತ್ಯೆಮಾಡಿದ್ದ ಆರೋಪಿಯನ್ನು ಮಾಗಡಿ ರೋಡ್ ಪೊಲೀಸರು ಗುಂಡಿಕ್ಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಇಂದು ಬೆಳಗ್ಗೆ ಅಗ್ರಹಾರ ದಾಸರಹಳ್ಳಿಯ ಹಾವನೂರು ಪಬ್ಲಿಕ್ ಶಾಲೆಯಲ್ಲಿ, ವಿಶೇಷ ತರಗತಿ ನಡೆಸುತ್ತಿದ್ದ ಪ್ರಾಂಶುಪಾಲ ರಂಗನಾಥ್ ರವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಾಗಡಿ ರೋಡ್ ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದರು.

    ಪ್ರಾಂಶುಪಾಲರ ಹತ್ಯೆಯಲ್ಲಿ ಬಬ್ಲಿ ಅಲಿಯಾಸ್ ಮುನಿರಾಜು ಪ್ರಮುಖ ಆರೋಪಿಯಾಗಿದ್ದನೆಂದು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯ ಪ್ರವೃತರಾದ ಪೊಲೀಸರು ಆರೋಪಿ ಬಬ್ಲಿ ಮಹಾಲಕ್ಷ್ಮೀ ಲೇಔಟ್‍ನ ಕಿರ್ಲೋಸ್ಕರ್ ಪೌಂಡ್ರಿ ಬಳಿ ಇರುವುದನ್ನು ಪತ್ತೆ ಹಚ್ಚಿ ದಾಳಿ ನಡೆಸಿದ್ದರು. ದಾಳಿ ವೇಳೆ ಪೊಲೀಸರ ಮೇಲೆಯೇ ಬಬ್ಲಿ ಹಲ್ಲೆಗೆ ಯತ್ನಿಸಿದ್ದನು. ಕೂಡಲೇ ಎಚ್ಚೆತ್ತ ಮಾಗಡಿ ರೋಡ್ ಇನ್ಸ್‍ಪೆಕ್ಟರ್ ಹೇಮಂತ್ ಕುಮಾರ್ ಆತ್ಮ ರಕ್ಷಣೆಗಾಗಿ ಬಬ್ಲಿ ಮೇಲೆ ಫೈರಿಂಗ್ ಮಾಡಿದ್ದರು.

    ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸದ್ಯ ಆರೋಪಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿದ್ಯಾರ್ಥಿಗಳ ಎದುರೇ ಬೆಂಗಳೂರು ಹೈಸ್ಕೂಲ್ ಪ್ರಾಂಶುಪಾಲರ ಬರ್ಬರ ಹತ್ಯೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಂಡನನ್ನು ಬಿಡಿಸಲು ಲಂಚ ಕೇಳಿದ್ದರಂತೆ ಪೊಲೀಸರು

    ಗಂಡನನ್ನು ಬಿಡಿಸಲು ಲಂಚ ಕೇಳಿದ್ದರಂತೆ ಪೊಲೀಸರು

    ಬೆಂಗಳೂರು: ವಿಚಾರಣೆಗೆಂದು ನನ್ನ ಗಂಡನನ್ನ ಠಾಣೆಗೆ ಕರೆಸಿ ಏಕಾಏಕಿ ಬಂಧಿಸಿಟ್ಟು, ಈಗ ಆತನನ್ನು ಬಿಡುಗಡೆಗೊಳಿಸಲು ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸಂತ್ರಸ್ತ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡುತ್ತಿದ್ದಾರೆ.

    ಬೆಂಗಳೂರು ಹೊರವಲಯ ಬಾಗಲಗುಂಟೆ ಪೊಲೀಸರ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಕಳೆದ ಮೂರು ದಿನಗಳ ಹಿಂದೆ ನಿಮ್ಮ ಮೇಲೆ ದೂರು ಬಂದಿದೆ ವಿಚಾರಣೆ ನಡೆಸಬೇಕು ಎಂದು ಸಂತ್ರಸ್ತೆ ಲಕ್ಷ್ಮೀಯ ಗಂಡ ಮಂಜುನಾಥ್ ಎಂಬವರನ್ನು ಪೊಲೀಸ್ ಠಾಣೆಗೆ ಕರೆಸಿದ್ದರಂತೆ. ವಿಚಾರಣೆಯ ನೆಪವೊಡ್ಡಿ ಬಂಧಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಮರುದಿನ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ನಿನ್ನ ಗಂಡನನ್ನು ಕಳುಹಿಸಬೇಕೆಂದರೆ ಬರೋಬ್ಬರಿ 25,000 ಹಣ ಕೇಳಿದರಂತೆ ಇಲ್ಲ ಅಂದದಕ್ಕೆ, ಎಷ್ಟಾಗುತ್ತೋ ಅಷ್ಟು ಕೊಟ್ಟು, ಎಲ್ಲಾ ಸೆಟ್ಲು ಮಾಡಿಕೊಂಡು ಹೋಗಿ ಎನ್ನುವುದರೊಂದಿಗೆ, 5,000 ರೂ. ಹಣ ಕೊಡು ಎಂದು ಬೇಡಿಕೆ ಇಟ್ಟಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

    ಠಾಣೆಗೆ ಹೋದ ವೇಳೆ ಮಹಿಳೆ ಎನ್ನುವುದನ್ನು ನೋಡದೆ ಅವಾಚ್ಯ ಶಬ್ಧಗಳಿಂದ ನಿಂದಿನೆ ಮಾಡಿದ್ದಾರೆ. ಅಲ್ಲದೆ ಮೂರು ದಿನಗಳ ನಂತರ ಕೇಳಿದಾಗ, ನಿನ್ನ ಗಂಡನ ಮೇಲೆ ಎಫ್‍ಐಆರ್ ದಾಖಲಿಸಿಕೊಂಡು ಜೈಲಿಗೆ ಕಳಿಸಿದ್ದೇವೆ ಎಂದು ಹೇಳುತ್ತಾರೆ. ಮೂರು ದಿನಗಳಿಂದ ಗಂಡನನ್ನು ಕಾಣದ ಮಹಿಳೆ, ಪೊಲೀಸರು ತೋರಿರುವ ನಡೆಯಿಂದ ಬೇಸತ್ತು ನನ್ನ ಗಂಡನನ್ನು ಕೊಡಿಸಿ ಎಂದು ಅಂಗಲಾಚಿದ್ದಾರೆ.

    ಮಂಜುನಾಥನಿಗೆ ದೂರುದಾರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಅವಳು ಈತನನ್ನು ಬಿಟ್ಟು ಮತ್ತೊಬ್ಬನ ಜೊತೆ ಸಂಸಾರ ಮಾಡುವುದಾಗಿ ತಿಳಿಸಿದ್ದು, ಈತ ಅದನ್ನು ನಿರಾಕರಿಸಿದ್ದಾನೆ. ಹೀಗಾಗಿ ದೂರುದಾರೆ ಮಹಿಳೆ ತನ್ನ ಮತ್ತೊಂದು ಹೊಸ ಸಂಬಂಧಕ್ಕೆ ಧಕ್ಕೆ ಉಂಟಾಗಬಾರದು ಎಂದು ಮಂಜುನಾಥನ ವಿರುದ್ಧ ದೂರು ನೀಡಿ ಠಾಣೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ದೂರುದಾರೆ ದೂರು ನೀಡುವ ಮೊದಲು ಮಂಜುನಾಥನಿಗೆ ಫೋನ್ ಮಾಡಿ, ತನ್ನ ಮತ್ತೊಂದು ಸಂಬಂಧದ ಬಗ್ಗೆ ನಿವೇದನೆ ಮಾಡಿಕೊಂಡಿರುವ ಆಡಿಯೋ ಸಹ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸರ ಮೇಲೆ ಕುಡುಕನಿಂದ ಹಲ್ಲೆ!- ವಿಡಿಯೋ

    ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸರ ಮೇಲೆ ಕುಡುಕನಿಂದ ಹಲ್ಲೆ!- ವಿಡಿಯೋ

    ದಾವಣಗೆರೆ: ಕುಡುಕನೊಬ್ಬ ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ದಾವಣಗೆರೆಯ ಹದಡಿ ರೋಡ್ ಬಳಿ ನಡೆದಿದೆ.

    ಕಂಠಪೂರ್ತಿ ಕುಡಿದಿದ್ದ ರುದ್ರೇಶ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪೊಲೀಸರು ಹದಡಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ರುದ್ರೇಶ್ ಬೈಕನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಇದಕ್ಕೆ ಸಿಟ್ಟಾದ ರುದ್ರೇಶ್ ಎಎಸ್‍ಐ ಅಂಜಿನಪ್ಪ, ಪೇದೆ ಸಿದ್ದೇಶ್, ಹಾಗೂ ಮುಖ್ಯ ಪೇದೆ ನಾರಾಯಣರಾಜ್ ಅರಸು ಮೇಲೆ ಹಲ್ಲೆ ನಡೆಸಿದ್ದಾನೆ.

    ಬೆಳಗ್ಗಿನ ಸಮಯದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆ ಏಕೆ ನಡೆಸುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ ರುದ್ರೇಶ್‍ಗೆ ಪೊಲೀಸರು ಠಾಣೆಗೆ ಬರುವಂತೆ ಸೂಚಿಸಿದ ವೇಳೆ ಏಕಾಏಕಿ ಪೊಲೀಸರ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ. ಅಲ್ಲದೇ ರಸ್ತೆ ಬದಿ ವ್ಯಾಪಾರ ನಡೆಸಿದ್ದ ತರಕಾರಿ ಹಾಗೂ ಗೊಂಬೆಗಳನ್ನು ಎತ್ತಿ ಪೊಲೀಸ್ ಪೇದೆಗಳ ಮೇಲೆ ದಾಳಿ ನಡೆಸಿದ್ದಾನೆ. ಮುಖ್ಯ ಪೇದೆ ಅರಸು ಅವರ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದು ಈಗ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಹಲ್ಲೆ ನಡೆಸಿದ ರುದ್ರೇಶ್ ವಕೀಲ ವೃತ್ತಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಸದ್ಯ ಕೆಟಿಜೆ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಪೊಲೀಸ್ ಪದೆಗಳು ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಡವಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=MyojsAvB18c