Tag: accused

  • ಟೀ ಅಂಗಡಿ ನಡೆಸುತ್ತಾ ಬರೋಬ್ಬರಿ 15 ಬೈಕ್ ಕದ್ದ ಆರೋಪಿ ಅರೆಸ್ಟ್

    ಟೀ ಅಂಗಡಿ ನಡೆಸುತ್ತಾ ಬರೋಬ್ಬರಿ 15 ಬೈಕ್ ಕದ್ದ ಆರೋಪಿ ಅರೆಸ್ಟ್

    ಬೆಂಗಳೂರು: ನಗರದಲ್ಲಿ ಟೀ ಮಾರಾಟ ಮಾಡುವ ಅಂಗಡಿ ನಡೆಸುತ್ತಾ ಬರೋಬ್ಬರಿ 15 ಬೈಕ್ ಗಳನ್ನು ಕದ್ದಿದ್ದ ಆರೋಪಿಯನ್ನ ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.

    ನಿಹಾಲ್ ಬಂಧಿತ ಆರೋಪಿಯಾಗಿದ್ದು, ಬೈಕ್ ಕಳ್ಳತನ ಮಾಡಲು ಆರೋಪಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ಇಸಾಕ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ಹಲವು ದಿನಗಳಿಂದ ತಿಲಕ್ ನಗರ ಸೇರಿದಂತೆ ಶಾಂತಿನಗರ, ಅಶೋಕ್ ನಗರ, ಜಾನ್ಸನ್ ಮಾರ್ಕೆಟ್ ಪ್ರದೇಶದಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿತ್ತು. ಪರಿಣಾಮ ಆರೋಪಿಗಳಿಗೆ ಕಡಿವಾಣ ಹಾಕಲು ತಿಲಕ್ ನಗರ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಪ್ರಕರಣದಗಳ ತನಿಖೆ ವೇಳೆ ಬೈಕ್ ಕಳ್ಳತನ ಮಾಡುತ್ತಿದ್ದ ಸಂದರ್ಭದ ಸಿಸಿಟಿವಿ ವಿಡಿಯೋ ಪೊಲೀಸರಿಗೆ ಲಭಿಸಿದೆ.

    ತಿಲಕ್ ನಗರವನ್ನೇ ಫೇವರಿಟ್ ಸ್ಪಾಟ್ ಆಗಿ ಮಾಡಿಕೊಂಡಿದ್ದ ಆರೋಪಿಗಳು ಲಾಕ್ ಇಲ್ಲದೇ ಇರುವ ಬೈಕ್ ಗಳನ್ನು ಮಾತ್ರ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಇದುವರೆಗೂ 15 ಬೈಕ್ ಗಳನ್ನು ಕದ್ದಿದ್ದರು. ಆರೋಪಿ ನಿಹಾಲ್ ಬೈಕ್ ಕಳ್ಳತನ ಮಾಡಲು ಕ್ಯಾಬ್ ಚಾಲಕನಾಗಿದ್ದ ಇಸಾಕ್ ಸಹಾಯ ಮಾಡುತ್ತಿದ್ದ. ಆ ಬಳಿಕ ಕದ್ದ ಬೈಕ್ ಗಳನ್ನು ಪರಿಚಯ ಇರುವ ಸ್ನೇಹಿತರಿಗೆ ಮಾತ್ರ ಮಾರಾಟ ಮಾಡುತ್ತಿದ್ದ ಆರೋಪಿಗಳು ಹಲವು ದಿನಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕೃತ್ಯ ನಡೆಸುತ್ತಿದ್ದರು.

  • ಪ್ರೀತಿಗಾಗಿ ಕತ್ತು ಸೀಳಿ ವೈದ್ಯೆಯ ಬರ್ಬರ ಹತ್ಯೆ – 3 ದಿನದ ನಂತ್ರ ಆರೋಪಿ ಅರೆಸ್ಟ್

    ಪ್ರೀತಿಗಾಗಿ ಕತ್ತು ಸೀಳಿ ವೈದ್ಯೆಯ ಬರ್ಬರ ಹತ್ಯೆ – 3 ದಿನದ ನಂತ್ರ ಆರೋಪಿ ಅರೆಸ್ಟ್

    ನವದೆಹಲಿ: ಮೂರು ದಿನಗಳ ಹಿಂದೆ ವೈದ್ಯೆಯೊಬ್ಬಳನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈಗ ಮೂರು ದಿನಗಳ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಡಾ. ಗರೀಮಾ ಮಿಶ್ರಾ(25) ಮೃತ ವೈದ್ಯೆಯಾಗಿದ್ದು, ಡಾ. ಚಂದ್ರಪ್ರಕಾಶ್ ಕೊಲೆ ಮಾಡಿದ ಆರೋಪಿ. ಗರೀಮಾ ಮಂಗಳವಾರ ದೆಹಲಿಯ ರಂಜೀತ್‍ನಗರದಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಗರೀಮಾ ಶವದ ಪಕ್ಕದಲ್ಲಿ ರಕ್ತದ ಕಲೆಯಿದ್ದ ಮುರಿದು ಬಿದ್ದ ಚಾಕು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ಗರೀಮಾ ಮೂಲತಃ ಉತ್ತರಪ್ರದೇಶದ ಬಾರೈಚ್‍ನವಳಾಗಿದ್ದು, ಎಂಬಿಬಿಎಸ್ ನಂತರ ಎಂಡಿ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ಬಂದಿದ್ದಳು. ಡಾ. ಚಂದ್ರಶೇಖರ್ ಕೂಡ ಎಂಡಿ ಮಾಡುತ್ತಿದ್ದು, ಈ ಹಿಂದೆ ಗರೀಮಾ ಜೊತೆ ಕೆಲಸ ಮಾಡಿದ್ದನು. ಪ್ರೀತಿಗಾಗಿ ಚಂದ್ರಶೇಖರ್, ಗರೀಮಾಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದರು.

    ಚಂದ್ರಪ್ರಕಾಶ್, ಗರೀಮಾ ಮಿಶ್ರಾಳನ್ನು ಪ್ರೀತಿಸುತ್ತಿದ್ದನು. ಆದರೆ ಗರೀಮಾ ಆತನನ್ನು ಒಳ್ಳೆಯ ಸ್ನೇಹಿತನ ರೀತಿ ನೋಡುತ್ತಿದ್ದಳು. ಈ ವಿಷಯಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಇದರಿಂದ ಕೋಪಗೊಂಡ ಚಂದ್ರಪ್ರಕಾಶ್, ಗರೀಮಾಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಗರೀಮಾ ಅಪಾರ್ಟ್ ಮೆಂಟ್‍ನ ಮೂರನೇ ಮಹಡಿಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತಿದ್ದಳು. ಆ ರೂಮಿನ ಪಕ್ಕದಲ್ಲಿದ್ದ ಮತ್ತೊಂದು ರೂಮಿನಲ್ಲಿ ವೈದ್ಯರಾದ ಚಂದ್ರಪ್ರಕಾಶ್ ಹಾಗೂ ರಾಕೇಶ್ ವಾಸಿಸುತ್ತಿದ್ದರು. ಮಂಗಳವಾರ ರಾತ್ರಿ ಸುಮಾರು 11.45ಕ್ಕೆ ಗರೀಮಾಳನ್ನು ಕೊನೆಯದಾಗಿ ನೋಡಿದ್ದೆ ಎಂದು ಮನೆ ಮಾಲೀಕ ತಿಳಿಸಿದ್ದಾರೆ.

    ಅನುಮಾನ ಬಂದಿದ್ದು ಹೇಗೆ?
    ಗರೀಮಾ ಕೊಲೆಯಾದ ದಿನದಿಂದ ಆಕೆಯ ನೆರೆ ಮನೆಯಲ್ಲಿದ್ದ ವೈದ್ಯ ಚಂದ್ರಪ್ರಕಾಶ್ ವರ್ಮಾ ಕೂಡ ಕಾಣೆಯಾಗಿದ್ದನು. ಅಲ್ಲದೆ ಆತ ಮನೆಯಿಂದ ಹೊರಗೆ ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಆರೋಪಿ ಚಂದ್ರಪ್ರಕಾಶ್‍ನನ್ನು ಪೊಲೀಸರು ಉತ್ತರಖಂಡದ ರೋರ್ಕಿಯಲ್ಲಿ ಬಂಧಿಸಿದ್ದಾರೆ.

    ನಾವು ಡಾ. ಚಂದ್ರಪ್ರಕಾಶ್‍ರನ್ನು ಹಿಡಿಯಲು ಹೋಗಿದ್ದಾಗ ಆತ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದನು. ನಾವು ಆತನ ಕಾಲ್ ರೆಕಾರ್ಡ್ ಹಾಗೂ ವಾಟ್ಸಾಪ್‍ನಿಂದ ಟ್ರೇಸ್ ಮಾಡಿ ರೋರ್ಕಿಗೆ ಹೋಗಿದ್ದೇವು. ಸದ್ಯ ಚಂದ್ರಪ್ರಕಾಶ್ ತಾನು ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಮುಂದಿನ ವಿಚಾರಣೆ ದೆಹಲಿಯಲ್ಲಿ ನಡೆಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

  • ರಾಯಚೂರು ವಿದ್ಯಾರ್ಥಿನಿ ಸಾವು – ತನಿಖೆ ವೇಳೆ ಮಹತ್ವದ ಸಾಕ್ಷ್ಯ ಲಭ್ಯ

    ರಾಯಚೂರು ವಿದ್ಯಾರ್ಥಿನಿ ಸಾವು – ತನಿಖೆ ವೇಳೆ ಮಹತ್ವದ ಸಾಕ್ಷ್ಯ ಲಭ್ಯ

    ರಾಯಚೂರು: ನಗರದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣ ಹಿನ್ನೆಲೆಯಲ್ಲಿ ಸಿಐಡಿ ವಶದಲ್ಲಿದ್ದ ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

    ಕಳೆದ 9 ದಿನಗಳಿಂದ ಆರೋಪಿ ಸುದರ್ಶನ್ ಯಾದವ್‍ನನ್ನು ವಶದಲ್ಲಿಟ್ಟುಕೊಂಡು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇಂದಿಗೆ ಪೊಲೀಸ್ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಆರೋಪಿಗೆ ಶೇವಿಂಗ್ ಮಾಡಿಸಿ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

    ವಿಚಾರಣೆ ನಡೆಸಿದ ರಾಯಚೂರು 3ನೇ ಜೆಎಂಎಫ್‍ಸಿ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಯನ್ನು ಎರಡು ಬಾರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ಮಹತ್ವದ ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದಾರೆ.

    ಮೃತ ವಿದ್ಯಾರ್ಥಿನಿ ಹಾಗೂ ಆರೋಪಿ ಓಡಾಡಿದ ಸ್ಥಳಗಳು, ವಿದ್ಯಾರ್ಥಿನಿ ಸಾವಿನ ಬಳಿಕ ಆರೋಪಿ ಓಡಾಡಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆಂಧ್ರಪ್ರದೇಶದ ಮಂತ್ರಾಲಯ, ಆದೋನಿಯಲ್ಲಿನ 5 ಕಡೆಗಳಲ್ಲಿ ಸಿಐಡಿ ಪೊಲೀಸರು ಸಿಸಿಟಿವಿ ಫೂಟೇಜ್ ಸಂಗ್ರಹ ಮಾಡಿದ್ದಾರೆ. ಲಾಡ್ಜ್ ರಿಜಿಸ್ಟರ್‍ನಲ್ಲಿ ಹೆಸರು ನೋಂದಣಿ ಮಾಡಿರುವ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

    ಆರೋಪಿ ಸುದರ್ಶನ್ ಮತ್ತು ವಿದ್ಯಾರ್ಥಿನಿ ಜೊತೆಯಾಗಿ ಹೊರ ಹೋಗಿರುವುದಕ್ಕೆ ಮಹತ್ವದ ಸಾಕ್ಷಾಧಾರಗಳ ಸಂಗ್ರಹ ಮಾಡಲಾಗಿದೆ. ಈ ಹಿಂದೆಯೂ ಕೂಡಾ ಇಬ್ಬರು ಜೊತೆಯಾಗಿ ಸುತ್ತಾಡುತ್ತಿದ್ದರು ಎನ್ನುವುದಕ್ಕೆ ಪೂರಕವಾಗಿ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.

    ಸಿಐಡಿ ಡಿವೈಎಸ್‍ಪಿ ಕೆ. ರವಿಶಂಕರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಲಭ್ಯವಾದ ಸಾಕ್ಷಾಧಾರ ಆಧಾರದ ಮೇಲೆ ಆರೋಪಿ ವಿಚಾರಣೆ ಮಾಡಲಾಗಿದೆ. ಇದುವರೆಗೆ ಆರೋಪಿ ಹೇಳಿಕೆಗಳ ಆಧಾರದ ಮೇಲೆ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಈಗ ಬೇರೆ ಆಯಾಮಗಳಲ್ಲಿ ತನಿಖೆ ಮುಂದುವರಿಸಲಿದ್ದಾರೆ.

  • ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 31 ಕ್ವಿಂಟಾಲ್ ಅಕ್ಕಿ ವಶ – ಆರೋಪಿ ಪರಾರಿ

    ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 31 ಕ್ವಿಂಟಾಲ್ ಅಕ್ಕಿ ವಶ – ಆರೋಪಿ ಪರಾರಿ

    ಕಾರವಾರ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಆಹಾರ ಇಲಾಖೆ ವಶಪಡಿಸಿಕೊಂಡಿದೆ.

    ಇಲ್ಲಿನ ಪರವರ್ಗ ಗ್ರಾಮದ ಗಣೇಶ ನಗರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ಬೊಲೆರೊ ಪಿಕಪ್ ವಾಹನಕ್ಕೆ ತುಂಬುತ್ತಿದ್ದನು. ಈತನ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರಿನ್ವಯ ಆಹಾರ ನಿರೀಕ್ಷಕರು ಹಾಗೂ ಕಂದಾಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ವೇಳೆ ಚಾಲಕ ಪರಾರಿಯಾಗಿದ್ದು, ವಾಹನ ಸಮೇತ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.

    ಮೊಹ್ಮದ್ ಯುಸೂಬ್ ಹಮ್ಮಿದ್ ಎಂಬವರ ಮನೆಯ ಶೆಡ್‍ನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಕ್ಕಿಯನ್ನು ಪಿಕಪ್ ಗೆ ತುಂಬುತ್ತಿದ್ದ ವೇಳೆ ಅಲ್ಲಿನ ಸಾರ್ವಜನಿಕರು ತಹಸೀಲ್ದಾರ್ ಕಛೇರಿಗೆ ಕರೆ ಮಾಡಿ ದೂರು ನೀಡಿದ್ದರು.

    ತಹಸೀಲ್ದಾರ್ ಎನ್.ಬಿ ಪಾಟೀಲ್ ಅವರ ಆದೇಶದ ಮೇರೆಗೆ ಕಾರ್ಯಪ್ರವೃತ್ತರಾದ ಆಹಾರ ನಿರೀಕ್ಷಕರು ಹಾಗೂ ಕಂದಾಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. 50 ಕೆಜಿಯ ತೂಕದ 60 ಚೀಲಗಳಲ್ಲಿದ್ದ ಒಟ್ಟು 31 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಅಕ್ಕಿಯನ್ನು ಬಂದರ್ ರಸ್ತೆಯಲ್ಲಿ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ದಾಸ್ತಾನು ಮಳಿಗೆಯಲ್ಲಿ ಶೇಖರಿಸಿಡಲಾಗಿದೆ.

    ಅಕ್ಕಿ ಸಾಗಾಟಕ್ಕೆ ಬಳಸಲಾದ ಬೊಲೆರೊ ಪಿಕಪ್ ವಾಹನವನ್ನು ವಶಕ್ಕೆ ಪಡೆದ ಅಧಿಕಾರಿಗಳು ನಗರ ಠಾಣೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕಾರ್ಯಾಚರಣೆಯಲ್ಲಿ ಆಹಾರ ಇಲಾಖೆ ನಿರೀಕ್ಷಕ ಪ್ರವೀಣ, ಕಂದಾಯ ನಿರೀಕ್ಷಕ ಗಣಪತಿ ಮೇತ್ರಿ, ಮುಠ್ಠಳ್ಳಿ ಗ್ರಾಮ ಲೆಕ್ಕಾದಿಕಾರಿ ಸಲ್ಮಾನ್ ಖಾನ್ ಹಾಗೂ ಇತರ ಸಿಬ್ಬಂದಿಗಳು ಇದ್ದರು.

  • ವಿದ್ಯಾರ್ಥಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ- ಭಯದಿಂದ ತಾನೂ ನೇಣಿಗೆ ಶರಣಾದ!

    ವಿದ್ಯಾರ್ಥಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ- ಭಯದಿಂದ ತಾನೂ ನೇಣಿಗೆ ಶರಣಾದ!

    ಗದಗ: ವಿದ್ಯಾರ್ಥಿಯೊಬ್ಬನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ಭಯದಿಂದ ಆರೋಪಿಯೂ ನೇಣಿಗೆ ಶರಣಾದ ಭಯಾನಕ ಘಟನೆ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ನಡೆದಿದೆ.

    ಜಕ್ಕಲಿ ಗ್ರಾಮದ ನಿವಾಸಿ ವಿಕಾಸ್ ದೊಡ್ಡಮೇಟಿ(18) ಕೊಲೆಯಾದ ವಿದ್ಯಾರ್ಥಿ. ಈತನನ್ನು ಅದೇ ಗ್ರಾಮದ ಶೌಕತ್ ಅಲಿ ಕೊಲೆ ಮಾಡಿದ್ದು, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪಿಯುಸಿ ಮುಗಿಸಿರುವ ವಿಕಾಸ್ ಸೋಮವಾರದಂದು ಸಿಇಟಿ ಪರೀಕ್ಷೆ ಬರೆಯಲು ಸಜ್ಜಾಗಿದ್ದನು. ಆದರೆ ದುರಾದೃಷ್ಟವಶಾತ್ ಕೊಲೆಯಾಗಿದ್ದಾನೆ.

    ಇಂದು ಬೆಳಗ್ಗಿನ ಜಾವ ಬಹಿರ್ದೆಸೆಗೆ ತೆರಳಿದ ವೇಳೆ ವಿಕಾಸ್ ಹಾಗೂ ಶೌಕತ್ ಅಲಿ ನಡುವೆ ಜಗಳ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ವಿಕಾಸ್ ಮೇಲೆ ಕೊಡಲಿಯಿಂದ ಶೌಕತ್ ಅಲಿ ಹಲ್ಲೆ ಮಾಡಿದ್ದಾನೆ. ಇದರಿಂದ ವಿಕಾಸ್ ಕುತ್ತಿಗೆಗೆ ಬಲವಾಗಿ ಹೊಡೆತ ಬಿದ್ದಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಲೆ ಮಾಡಿದ ನಂತರ ಶೌಕತ್, ಭಯದಿಂದ ತಾನೂ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಸ್ಥಳಕ್ಕೆ ನರೇಗಲ್ ಹಾಗೂ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೌಕತ್ ಅಲಿ ಮಾನಸಿಕ ಅಸ್ವಸ್ಥನೆಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ನರೇಗಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಬಂಧಿಸಲು ಹೋಗಿದ್ದ ಪೇದೆಗೆ ಆರೋಪಿಯಿಂದ ಕಪಾಳ ಮೋಕ್ಷ

    ಬಂಧಿಸಲು ಹೋಗಿದ್ದ ಪೇದೆಗೆ ಆರೋಪಿಯಿಂದ ಕಪಾಳ ಮೋಕ್ಷ

    ಚಿಕ್ಕಬಳ್ಳಾಪುರ: ಬಂಧಿಸಲು ಹೋಗಿದ್ದ ಪೇದೆಯೊಬ್ಬರಿಗೆ ಆರೋಪಿ ಕಪಾಳ ಮೋಕ್ಷ ಮಾಡಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೀರ್ಜೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಬೀರ್ಜೇನಹಳ್ಳಿ ಗ್ರಾಮದ ಎನ್.ಮೂರ್ತಿ ನಂದಗುಡಿ ಪೊಲೀಸ್ ಠಾಣೆಯ ಪೇದೆ ಶಿವಲಿಂಗಯ್ಯ ಅವರ ಕಪಾಳಕ್ಕೆ ಹೊಡೆದಿದ್ದಾನೆ.

    ವಂಚನೆ ಆರೋಪದಡಿ ಎನ್.ಮೂರ್ತಿ ವಿರುದ್ಧ ಹೊಸಕೋಟೆ ತಾಲೂಕಿನ ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಆರೋಪಿಯನ್ನು ಬಂಧಿಸಲು ದಫೇದಾರ್ ಶಿವಲಿಂಗಯ್ಯ ಅವರು ಬೀರ್ಜೇನಹಳ್ಳಿ ಗ್ರಾಮಕ್ಕೆ ಬಂದಿದ್ದರು. ಬಂಧನವನ್ನು ವಿರೋಧಿಸಿದ ಎನ್.ಮೂತಿ ಶಿವಲಿಂಗಯ್ಯ ಅವರ ಮೇಲೆ ಹಲ್ಲೆ ಮಾಡಿದ್ದಾನೆ.

    ಶಿವಲಿಂಗಯ್ಯ ಅವರು ಕೊನೆಗೂ ಆರೋಪಿಯನ್ನು ಬಂಧಿಸಿ ನಂದಗುಡಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಎನ್.ಮೂರ್ತಿ ವಿರುದ್ಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಎಂಜಿನಿಯರಿಂಗ್ ವಿದ್ಯಾರ್ಥಿನಿ ಜೊತೆಗಿನ ಆರೋಪಿ ಫೋಟೋ ವೈರಲ್

    ಎಂಜಿನಿಯರಿಂಗ್ ವಿದ್ಯಾರ್ಥಿನಿ ಜೊತೆಗಿನ ಆರೋಪಿ ಫೋಟೋ ವೈರಲ್

    ರಾಯಚೂರು: ಇಡೀ ದೇಶಾದ್ಯಂತ ಚರ್ಚೆಗೆ ಒಳಗಾಗಿರುವ ರಾಯಚೂರು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆಯುತ್ತಿದೆ. ಈಗ ಮೃತ ವಿದ್ಯಾರ್ಥಿನಿ ಹಾಗೂ ಆರೋಪಿ ಸುದರ್ಶನ್ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

    ಪಿಯುಸಿಯಲ್ಲಿ ಸಹಪಾಠಿಗಳಾಗಿದ್ದ ವಿದ್ಯಾರ್ಥಿನಿ ಹಾಗೂ ಸುದರ್ಶನ್ ಯಾದವ್ ಒಟ್ಟಾಗಿ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈಗಾಗಲೇ ಸಿಐಡಿ ಅಧಿಕಾರಿಗಳ ಮುಂದೆ ಸುದರ್ಶನ್ ಯಾದವ್ ತಮ್ಮಿಬ್ಬರ ಸ್ನೇಹ ಸಂಬಂಧ ಹಾಗೂ ಲವ್ ಬ್ರೇಕ್ ಅಪ್ ಬಗ್ಗೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೇ ನಾಲ್ಕು ತಿಂಗಳ ಹಿಂದೆ ಇಬ್ಬರ ನಡುವೆ ಅಂತರ ಹೆಚ್ಚಾಗಿ ಸ್ವತಃ ವಿದ್ಯಾರ್ಥಿನಿ ತಂದೆಯ ಮುಂದೆಯೇ ರಸ್ತೆಯಲ್ಲೇ ವಿದ್ಯಾರ್ಥಿನಿ ಮೇಲೆ ಕೈಮಾಡಿದ್ದ ಘಟನೆ ಬಗ್ಗೆಯೂ ಆರೋಪಿ ಬಾಯಿಬಿಟ್ಟಿದ್ದಾನೆ.

    ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ವಿದ್ಯಾರ್ಥಿನಿ ಸಾವಿನ ಬಗ್ಗೆ ಮರಣೋತ್ತರ ಪರೀಕ್ಷೆಯಿಂದ ಉತ್ತರ ಸಿಗಲಿದ್ದು, ರಾಯಚೂರಿನಲ್ಲೇ ಬೀಡು ಬಿಟ್ಟಿರುವ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

  • ಆಸ್ಪತ್ರೆಯಿಂದ ಪರಾರಿಯಾದ ಒಂದು ಗಂಟೆಯಲ್ಲೇ ಸೈಕೋ ಬೆಂಕಿರಾಜ ಅರೆಸ್ಟ್

    ಆಸ್ಪತ್ರೆಯಿಂದ ಪರಾರಿಯಾದ ಒಂದು ಗಂಟೆಯಲ್ಲೇ ಸೈಕೋ ಬೆಂಕಿರಾಜ ಅರೆಸ್ಟ್

    – ಇಬ್ಬರು ಪೇದೆಗಳು ಅಮಾನತು

    ಬೆಂಗಳೂರು: ಶೂಟೌಟ್ ನಡೆಸಿ ಬಂಧಿಸಲಾಗಿದ್ದ ಕೊಲೆ ಆರೋಪಿ ಸೈಕೋ ಬೆಂಕಿರಾಜ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ಪರಾರಿಯಾದ ಒಂದು ಗಂಟೆಯಲ್ಲಿ ಮತ್ತೆ ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಎಟಿಎಂ ಕಾವಲುಗಾರನ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿ ಸೈಕೋ ಬೆಂಕಿರಾಜ ಇಂದು ಬೆಳಗ್ಗೆ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ. ಇತ್ತ ಆರೋಪಿ ತಪ್ಪಿಸಿಕೊಂಡಿದ್ದನ್ನು ತಿಳಿದ ಪೊಲೀಸರು ಪತ್ತೆ ಮಾಡಲು ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಆಸ್ಪತ್ರೆ ಪಕ್ಕದ ರಸ್ತೆಯಲ್ಲೇ ನಡೆದು ಹೋಗುತ್ತಿದ್ದ ಆತನನ್ನು ಮತ್ತೆ ಬಂಧಿಸಿಲಾಗಿದೆ.

    ಮಾರ್ಚ್ 23ರ ಮುಂಜಾನೆ ಕುಮಾರಸ್ವಾಮಿ ಲೇಔಟ್ ಬಳಿಯ ಎಟಿಎಂ ಸೆಕ್ಯೂರಿಟಿ ಗಾರ್ಡ್ ಒಬ್ಬರನ್ನು ಕೊಲೆಗೈದಿದ್ದ ಆರೋಪಿ ಸೈಕೋ ಬೆಂಕಿ ರಾಜನನ್ನು ಮಾಚ್ 31 ರಂದು ಕೋಣನಕುಂಟೆ ಬಳಿಯಿರುವ ನಾರಾಯಣನಗರ ಬಳಿ ಗುಂಡು ಹಾರಿಸಿ ಬಂಧಿಸಲಾಗಿತ್ತು. ಆ ಬಳಿಕ ಚಿಕಿತ್ಸೆಗಾಗಿ ಆರೋಪಿಯನ್ನು ನಗರದ ಸಾಯಿ ರಾಮ್ ಆಸ್ಪತೆಗೆ ದಾಖಲಿಸಲಾಗಿತ್ತು. ಈ ವೇಳೆ ಆರೋಪಿ ಪೊಲೀಸರ ಕಣ್ತಪ್ಪಿಸಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ. ಘಟನೆ ಸಂಬಂಧ ಎಚ್ಚೆತ್ತ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾ ಮಲೈ ಅವರು ಇಬ್ಬರು ಪೇದೆಗಳನ್ನು ಅಮಾನತು ಮಾಡಿದ್ದಾರೆ. ನಿರ್ಲಕ್ಷ್ಯದ ಆರೋಪದಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಉತ್ತರಹಳ್ಳಿಯ ಮುಖ್ಯ ರಸ್ತೆಯಲ್ಲಿದ್ದ ಕರ್ಣಾಟಕ ಬ್ಯಾಂಕ್ ಎಟಿಎಂ ಕಾವಲುಗಾರ ಲಿಂಗಪ್ಪ ಮೇಲೆ ಕಲ್ಲು ಎತ್ತಿಹಾಕಿ ಸೈಕೋ ರಾಜ ಕೊಲೆ ಮಾಡಿದ್ದ. ಈ ವೇಳೆ ಲಿಂಗಪ್ಪ ಬಳಿ ಇದ್ದ 150 ರೂ. ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದ. ಗಾಂಜಾ ವ್ಯಸನಿಯಾಗಿದ್ದ ಈತ 10 ವರ್ಷಗಳ ಹಿಂದೆ ಸ್ವಂತ ತಂಗಿಯನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಈತ ಮತ್ತೆ ತನ್ನ ಕಾರ್ಯ ಮುಂದುವರಿಸಿ ಬಸವನಗಡಿಯ ಸೂಪರ್ ವೈಸರ್ ನನ್ನು ಕೊಲೆ ಮಾಡಿದ್ದ. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿ ಹಣಕ್ಕಾಗಿ ಸಾಮಾನ್ಯ ಜನರ ಮೇಲೆ ಹಲ್ಲೆ ಮಾಡಿ ಸಿಕ್ಕಿದಷ್ಟು ಹಣವನ್ನು ದೋಚುತ್ತಿದ್ದ.

  • ಕಾಡಿನಲ್ಲಿದ್ದ ರೇಪ್ ಆರೋಪಿ ಅರೆಸ್ಟ್- ಪೊಲೀಸರಿಗೆ ಸಾರ್ವಜನಿಕರ ಸಾಥ್

    ಕಾಡಿನಲ್ಲಿದ್ದ ರೇಪ್ ಆರೋಪಿ ಅರೆಸ್ಟ್- ಪೊಲೀಸರಿಗೆ ಸಾರ್ವಜನಿಕರ ಸಾಥ್

    ಉಡುಪಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಕಣ್ಮರೆಯಾಗಿದ್ದ ಆರೋಪಿಯನ್ನು ಸಾರ್ವಜನಿಕರ ಸಹಕಾರದಿಂದ ಬಂಧಿಸುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.

    ಬಾದಾಮಿ ತಾಲೂಕಿನ ಹನುಮಂತ ಬಸಪ್ಪಕಂಬಳಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಜಿಲ್ಲೆಯ ಮೂಡುಸಗ್ರಿ ಗ್ರಾಮದ ಬಾಲಕಿಯನ್ನು ಅತ್ಯಾಚಾರವೆಸೆಗಿ, ಕೊಲೆ ಮಾಡಿದ್ದ ಪ್ರಕರಣದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದರು. ಒಂದು ದಿನದ ಹಿಂದೆ ಪೊಲೀಸರು ಆರೋಪಿಯನ್ನು ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಿವಾಸದ ಮುಂದೆ ಹಾಜರುಪಡಿಸಿದ್ದರು.

    ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಹುನುಮಂತನನ್ನು ಮಣಿಪಾಲ ಪೊಲೀಸರು ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ದಾರಿ ಮಧ್ಯೆ ಆರೋಪಿ ಪೊಲೀಸ್ ವಾಹನದಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಕಣ್ಮರೆಯಾಗಿದ್ದನು.

    ಬಳಿಕ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾಗ ಪೆರ್ಣಂಕಿಲದ ಹೊಟೇಲೊಂದರಲ್ಲಿ ಚಾಹ ಕುಡಿದು ಹೋಗಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಅಲ್ಲಿಯೇ ಹುಡುಕಾಟ ಮುಂದುವರಿಸಿದ್ದಾರೆ. ಆಗ ಕಾಡಿನಲ್ಲಿ ಸಂಜೆ ವೇಳೆ ಹನುಮಂತ ಪತ್ತೆಯಾಗಿದ್ದು, ಮತ್ತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • 10 ವರ್ಷದ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ

    10 ವರ್ಷದ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ

    ಮೈಸೂರು: 10 ವರ್ಷದ ಇಬ್ಬರು ಅಪ್ರಾಪ್ತೆಯರ ಮೇಲೆ ಕಾಮುಕರು ಅತ್ಯಾಚಾರವೆಸಗಿದ ಘಟನೆ ಮೈಸೂರಿನ ಸುಭಾಷ್ ನಗರದಲ್ಲಿ ನಡೆದಿದೆ.

    ಜೈ ಶಿವಮಾದೇವ(53) ಹಾಗೂ ಖೈಸರ್(30) ಅತ್ಯಾಚಾರವೆಸಗಿದ ಆರೋಪಿಗಳಾಗಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

    ಇಬ್ಬರು ಹೆಣ್ಣುಮಕ್ಕಳು ಮನೆ ಮುಂದೆ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿ ಶಿವಮಾದೇವ ಚಾಕ್ಲೆಟ್ ಕೊಡಿಸುತ್ತೇನೆ ಎಂದು ಇಬ್ಬರನ್ನೂ ಪಾರ್ಕ್‍ಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅವರ ಮೇಲೆ ಅತ್ಯಾಚಾರವೆಸಗಿದ್ದಾನೆ.

    ಇದನ್ನು ಗಮನಿಸಿದ ಮತ್ತೊಬ್ಬ ಆರೋಪಿ ಖೈಸರ್, ಜೈ ಶಿವಮಾದುವನ್ನು ಬೆದರಿಸಿ ಅಲ್ಲಿಂದ ಓಡಿಸಿದ್ದಾನೆ. ಅಲ್ಲದೆ ತಾನು ಕೂಡ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಮಾಡಿದ್ದಾನೆ.

    ಇಬ್ಬರೂ ಆರೋಪಿಗಳನ್ನು ಎನ್.ಆರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.