Tag: accused

  • ರಾಜಕೀಯ ಪ್ರೇರಿತವಾಗಿ ನಡೆದಿದೆ ತನ್ವೀರ್ ಸೇಠ್ ಕೊಲೆ ಯತ್ನ!

    ರಾಜಕೀಯ ಪ್ರೇರಿತವಾಗಿ ನಡೆದಿದೆ ತನ್ವೀರ್ ಸೇಠ್ ಕೊಲೆ ಯತ್ನ!

    ಮೈಸೂರು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ರಾಜಕೀಯ ಪ್ರೇರಿತವಾಗಿ ಈ ಕೊಲೆ ಯತ್ನ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ.

    ಪೊಲೀಸರ ವಿಚಾರಣೆ ವೇಳೆ ಈ ಮಾಹಿತಿ ಬಹಿರಂಗವಾಗಿದೆ. ಈ ಮೊದಲು ತನ್ವೀರ್ ಅವರ ಕೊಲೆ ಯತ್ನದ ಹಿಂದೆ ಸಂಘಟನೆಯೊಂದರ ಕೈವಾಡ ಇದೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಈಗ ರಾಜಕೀಯ ಪ್ರೇರಿತವಾಗಿ ಈ ಕೊಲೆ ಯತ್ನ ನಡೆದಿದೆ ಎಂಬುದು ತಿಳಿದಿದೆ. ಈಗಾಗಲೇ ಆರೋಪಿ ಫರಾನ್ ಪಾಷಾನನ್ನು ಬಂಧಿಸಿದ್ದು, ಈ ಪ್ರಕರಣ ಸಂಬಂಧ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮತ್ತಷ್ಟು ವಿಚಾರಣೆ ಮುಂದುವರಿದಿದೆ. ಇದನ್ನೂ ಓದಿ:ತನ್ವೀರ್ ಸೇಠ್ ಹತ್ಯೆ ಯತ್ನಕ್ಕೆ ಬಾಲಿವುಡ್ ಸಿನಿಮಾ ಪ್ರೇರಣೆ

    ಪ್ರಕರಣದ ಹಿಂದಿರುವ ವ್ಯಕ್ತಿ ಬಗ್ಗೆ ಪೊಲೀಸರು ಹುಡುಕಾಟ ಆರಂಭಿಸಿದ್ದು, ಕೊಲೆ ಮಾಡಲು ಯತ್ನಿಸುವ ಮೊದಲು ಫರಾನ್ ಸಾಕಷ್ಟು ಪ್ಲಾನ್ ಮಾಡಿಕೊಂಡಿರಲಿಲ್ಲ. ಕೊಲೆ ಮಾಡಬೇಕೆಂದಷ್ಟೆ ನಿರ್ಧಾರ ಮಾಡಿದ್ದನು. ಆದರೆ ಹೇಗೆ? ಯಾವ ರೀತಿ ಕೊಲೆ ಮಾಡಬೇಕು ಎಂಬುದನ್ನು ಪ್ಲಾನ್ ಮಾಡಿರಲಿಲ್ಲ ಎಂಬುದನ್ನು ವಿಚಾರಣೆ ವೇಳೆ ಫರಾನ್ ಬಾಯಿಬಿಟ್ಟಿದ್ದಾನೆ.

    ಭಾನುವಾರ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮೈಸೂರು ಪೊಲೀಸರು, ಹಲವಾರು ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಈ ವೇಳೆ ಆರೋಪಿ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ಮಾಡುವ ಮುನ್ನಾ ಬಾಲಿವುಡ್ ಸಿನಿಮಾವೊಂದನ್ನು ಐದಾರು ಬಾರಿ ನೋಡಿದ್ದ ಎಂದು ಆತನ ಸ್ನೇಹಿತರು ಹೇಳಿದ್ದರು. ಇದನ್ನೂ ಓದಿ:‘ಗಣ್ಯರನ್ನು ಕೊಲೆ ಮಾಡಿ ಫೇಮಸ್ ಆಗ್ತೀನಿ’ – ಸ್ನೇಹಿತರ ಬಳಿ ಕೊಚ್ಚಿಕೊಂಡಿದ್ದ ಫರಾನ್

    ಆರೋಪಿ ಫರಾನ್ ಪಾಷಾ ತನ್ವೀರ್ ಸೇಠ್ ಅವರ ಹತ್ಯೆಗೆ ಯತ್ನ ಮಾಡುವ ಹಿಂದಿನ ರಾತ್ರಿ ಬಾಲಿವುಡ್‍ನ ‘ವಾಸ್ತವ್’ ಸಿನಿಮಾವನ್ನು ಐದಾರು ಬಾರಿ ನೋಡಿದ್ದ. ಇದು ಬಾಲಿವುಡ್ ನಟ ಸಂಜಯ್ ದತ್ ನಟನೆಯ ಗ್ಯಾಂಗ್ ಸ್ಟಾರ್ ಸಿನಿಮಾವಾಗಿದ್ದು, ಸಿನಿಮಾವನ್ನು ಹಲ್ಲೆ ಮಾಡುವ ಹಿಂದಿನ ರಾತ್ರಿ ಐದಾರು ಬಾರಿ ನೋಡಿದ್ದ ಎಂದು ಆರೋಪಿ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದೇ ಸಿನಿಮಾ ಯಾಕೆ ನೋಡ್ತಿದ್ದೀಯಾ ಎಂದು ಪ್ರಶ್ನಿಸಿದಾಗ ಆ ಸಿನಿಮಾ ಹೀರೋ ಥರ ನಾನು ಆಗಬೇಕು. ನನಗೆ ಇದು ಪ್ರೇರಣೆ ಆಗ್ತಿದೆ ಎಂದು ಫರಾನ್ ಹೇಳಿದ್ದನಂತೆ. ಇದನ್ನೂ ಓದಿ:ತನ್ವೀರ್ ಸೇಠ್ ಕೊಲೆಗೆ ಯತ್ನ – ರಾತ್ರೋರಾತ್ರಿಯೇ ಆರೋಪಿ ಕುಟುಂಬ ಪರಾರಿ

    ಭಾನುವಾರ ರಾತ್ರಿ ತನ್ವೀರ್ ಸೇಠ್ ಮೈಸೂರಿನ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ ಚಾಕುವಿನಿಂದ ಹಲ್ಲೆ ಮಾಡಿದ್ದ. ಅವರ ಕತ್ತಿಗೆ ಭಾಗಕ್ಕೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

  • ತನ್ವೀರ್ ಸೇಠ್ ಹತ್ಯೆ ಯತ್ನಕ್ಕೆ ಬಾಲಿವುಡ್ ಸಿನಿಮಾ ಪ್ರೇರಣೆ

    ತನ್ವೀರ್ ಸೇಠ್ ಹತ್ಯೆ ಯತ್ನಕ್ಕೆ ಬಾಲಿವುಡ್ ಸಿನಿಮಾ ಪ್ರೇರಣೆ

    – ಐದು ಬಾರಿ ಸಿನಿಮಾ ವೀಕ್ಷಿಸಿದ್ದ ಆರೋಪಿ
    – ಸಂಜಯ್ ದತ್ ಸಿನಿಮಾ ನೋಡಿ ಚಾಕು ಹಾಕ್ದ

    ಮೈಸೂರು: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನಕ್ಕೆ ಬಾಲಿವುಡ್ ಸಿನಿಮಾವೊಂದು ಪ್ರೇರಣೆಯಾಗಿದೆ ಎಂಬ ಸ್ಫೋಟಕ ಸುದ್ದಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.

    ಭಾನುವಾರ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮೈಸೂರು ಪೊಲೀಸರು, ಹಲವಾರು ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಈ ವೇಳೆ ಆರೋಪಿ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ಮಾಡುವ ಮುನ್ನಾ ಬಾಲಿವುಡ್ ಸಿನಿಮಾವೊಂದನ್ನು ಐದಾರು ಬಾರಿ ನೋಡಿದ್ದ ಎಂದು ಆತನ ಸ್ನೇಹಿತರು ಹೇಳಿದ್ದಾರೆ.

    ಆರೋಪಿ ಫರಾನ್ ಪಾಷಾ ತನ್ವೀರ್ ಸೇಠ್ ಅವರ ಹತ್ಯೆಗೆ ಯತ್ನ ಮಾಡುವ ಹಿಂದಿನ ರಾತ್ರಿ ಬಾಲಿವುಡ್‍ನ ವಾಸ್ತವ್ ಸಿನಿಮಾವನ್ನು ಐದಾರು ಬಾರಿ ನೋಡಿದ್ದ. ಇದು ಬಾಲಿವುಡ್ ನಟ ಸಂಜಯ್ ದತ್ ನಟನೆಯ ಗ್ಯಾಂಗ್ ಸ್ಟಾರ್ ಸಿನಿಮಾವಾಗಿದ್ದು, ಸಿನಿಮಾವನ್ನು ಹಲ್ಲೆ ಮಾಡುವ ಹಿಂದಿನ ರಾತ್ರಿ ಐದಾರು ಬಾರಿ ನೋಡಿದ್ದ ಎಂದು ಆರೋಪಿ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದೇ ಸಿನಿಮಾ ಯಾಕೆ ನೋಡ್ತಿದ್ದೀಯಾ ಎಂದು ಪ್ರಶ್ನಿಸಿದಾಗ ಆ ಸಿನಿಮಾ ಹೀರೋ ಥರ ನಾನು ಆಗಬೇಕು. ನನಗೆ ಇದು ಪ್ರೇರಣೆ ಆಗ್ತಿದೆ ಎಂದು ಫರಾನ್ ಹೇಳಿದ್ದನಂತೆ.

    ಭಾನುವಾರ ರಾತ್ರಿ ಮೈಸೂರಿನ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿದ್ದ. ಅವರ ಕತ್ತಿಗೆ ಭಾಗಕ್ಕೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದನ್ನು ಓದಿ: ಶಾಸಕ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ

    ಸದ್ಯ ಆರೋಪಿ ಫರಾನ್ ಪೋಲಿಸರ ವಶದಲ್ಲಿದ್ದು, ಆರೋಪಿಯನ್ನು ಸೋಮವಾರ ರಾತ್ರಿ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರು ಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ಮೈಸೂರು ಜೆಎಂಎಫ್‍ಸಿ ನ್ಯಾಯಾಧೀಶರು ಆರೋಪಿ ಫರಾನ್ ನನ್ನು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಇದನ್ನು ಓದಿ: ‘ಗಣ್ಯರನ್ನು ಕೊಲೆ ಮಾಡಿ ಫೇಮಸ್ ಆಗ್ತೀನಿ’ – ಸ್ನೇಹಿತರ ಬಳಿ ಕೊಚ್ಚಿಕೊಂಡಿದ್ದ ಫರಾನ್

  • ತನ್ವೀರ್ ಸೇಠ್ ಕೊಲೆಗೆ ಯತ್ನ – ರಾತ್ರೋರಾತ್ರಿಯೇ ಆರೋಪಿ ಕುಟುಂಬ ಪರಾರಿ

    ತನ್ವೀರ್ ಸೇಠ್ ಕೊಲೆಗೆ ಯತ್ನ – ರಾತ್ರೋರಾತ್ರಿಯೇ ಆರೋಪಿ ಕುಟುಂಬ ಪರಾರಿ

    – 12 ದಿನ ಪೊಲೀಸ್ ಕಸ್ಟಡಿಗೆ ಆರೋಪಿ

    ಮೈಸೂರು: ಮಾಜಿ ಸಚಿವ ತನ್ವೀರ್ ಸೇಠ್ ಅವರ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿರುವ ಫರಾನ್ ಪಾಷಾ ಕುಟುಂಬಸ್ಥರು ರಾತ್ರೋರಾತ್ರಿ ಮನೆ ಖಾಲಿಮಾಡಿಕೊಂಡು ಪರಾರಿಯಾಗಿದ್ದಾರೆ.

    ನಿನ್ನೆ ತಡರಾತ್ರಿಯೇ ಮನೆಯಿಂದ ಪರಾರಿಯಾಗಿರುವ ಫರಾನ್ ಪಾಷಾ ಕುಟುಂಬಸ್ಥರು, ಫರಾನ್ ತಂದೆ, ತಾಯಿ ಮತ್ತು ತಂಗಿ ಎಲ್ಲರು ಮನೆ ಖಾಲಿ ಮಾಡಿದ್ದಾರೆ. ಮೈಸೂರಿನ ಗೌಸಿಯಾ ನಗರದಲ್ಲಿ ವಾಸವಿದ್ದ ಫರಾನ್ ಕುಟುಂಬ ಪೊಲೀಸರ ವಿಚಾರಣೆಗೆ ಹೆದರಿ ಮನೆ ಬಿಟ್ಟ ತಲೆಮರೆಸಿಕೊಂಡಿದೆ.

    ಸದ್ಯ ಆರೋಪಿ ಫರಾನ್ ಪೋಲಿಸರ ವಶದಲ್ಲಿದ್ದು, ಆರೋಪಿಯನ್ನು ಸೋಮವಾರ ರಾತ್ರಿ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರು ಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ಮೈಸೂರು ಜೆಎಂಎಫ್‍ಸಿ ನ್ಯಾಯಾಧೀಶರು ಆರೋಪಿ ಫರಾನ್ ನನ್ನು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಇದನ್ನು ಓದಿ: ‘ಗಣ್ಯರನ್ನು ಕೊಲೆ ಮಾಡಿ ಫೇಮಸ್ ಆಗ್ತೀನಿ’ – ಸ್ನೇಹಿತರ ಬಳಿ ಕೊಚ್ಚಿಕೊಂಡಿದ್ದ ಫರಾನ್

    ಇತ್ತ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಈವರೆಗೆ ವಿಚಾರಣೆಯಲ್ಲಿ ಹಲ್ಲೆಗೆ ನಿಖರ ಕಾರಣವನ್ನು ಆರೋಪಿ ಫರಾನ್ ಪಾಷಾ ಬಾಯಿಬಿಟ್ಟಿಲ್ಲ. ಆದ್ದರಿಂದ ತನಿಖೆ ಚುರುಕುಗೊಳಿಸಿರುವ ಪೋಲಿಸರು ಆತನ ಸ್ನೇಹಿತರು ಸೇರಿ ಹಲವು ಅನುಮಾನಿತರ ವಿಚಾರಣೆ ಮಾಡುತ್ತಿದ್ದಾರೆ. ಮೈಸೂರು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

  • ‘ಗಣ್ಯರನ್ನು ಕೊಲೆ ಮಾಡಿ ಫೇಮಸ್ ಆಗ್ತೀನಿ’ – ಸ್ನೇಹಿತರ ಬಳಿ ಕೊಚ್ಚಿಕೊಂಡಿದ್ದ ಫರಾನ್

    ‘ಗಣ್ಯರನ್ನು ಕೊಲೆ ಮಾಡಿ ಫೇಮಸ್ ಆಗ್ತೀನಿ’ – ಸ್ನೇಹಿತರ ಬಳಿ ಕೊಚ್ಚಿಕೊಂಡಿದ್ದ ಫರಾನ್

    – ಫರಾನ್‍ಗೆ ಹೆಸರು ಮಾಡುವ ಹುಚ್ಚು ಹಿಡಿದಿತ್ತು
    – ಪೊಲೀಸರಿಗೆ ಫರಾನ್ ಸ್ನೇಹಿತರಿಂದ ವಿವರಣೆ

    ಮೈಸೂರು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಫರಾನ್ ಗಣ್ಯರನ್ನ ಕೊಲೆ ಮಾಡಿ ಹೆಸರು ಮಾಡ್ತಿನಿ ಎಂದು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಸ್ಫೋಟಕ ವಿಚಾರ ಈಗ ಬಹಿರಂಗವಾಗಿದೆ.

    ಭಾನುವಾರ ರಾತ್ರಿ ಮದುವೆ ಸಮಾರಂಭಕ್ಕೆ ಹೋಗಿದ್ದ ತನ್ವೀರ್ ಸೇಠ್ ಅವರ ಮೇಲೆ ಆರೋಪಿ ಫರಾನ್ ಚಾಕುವಿನಿಂದ ಹಲ್ಲೆ ಮಾಡಿದ್ದ. ಈ ವಿಚಾರದ ತನಿಖೆ ವೇಳೆ ಫಾರನ್ ಸ್ನೇಹಿತರನ್ನು ಕರೆದು ಪೊಲೀಸರು ವಿಚಾರಣೆ ನಡೆಸಿದಾಗ, ಫರಾನ್ ಗಣ್ಯರನ್ನ ಕೊಲೆ ಮಾಡಿ ಹೆಸರು ಮಾಡುತ್ತೇನೆ ಎಂದು ಅವನ ಆಪ್ತರು ಹಾಗೂ ಗೆಳೆಯರೊಂದಿಗೆ ಹೇಳಿಕೊಂಡಿದ್ದ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ತನ್ವೀರ್ ಕೊಲೆ ಯತ್ನ ಪ್ರಕರಣ ತನಿಖೆ ಚುರುಕುಗೊಳಿಸಿರುವ ಪೊಲೀಸರು ಫರಾನ್ ಜೊತೆಗೆ ಫೋಟೋದಲ್ಲಿ ಗುರುತಿಸಿಕೊಂಡಿದ್ದ ಸ್ನೇಹಿತರನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಆತನ ಸ್ನೇಹಿತರು, ಫರಾನ್‍ಗೆ ಇತ್ತೀಚೆಗೆ ಹೆಸರು ಮಾಡುವ ಹುಚ್ಚು ಹಿಡಿದಿತ್ತು. ನಮ್ಮ ಜೊತೆಗೆ ವಿಐಪಿ ಒಬ್ಬರನ್ನು ಕೊಲೆ ಮಾಡಿ ಫೇಮಸ್ ಆಗುತ್ತೇನೆ ಎಂದು ಹೇಳಿದ್ದ. ಯಾರು ಆ ವಿಐಪಿ? ಯಾವಾಗ ಮಾಡುತ್ತೇನೆ ಎಂದು ಹೇಳಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ: ಏರಿಯಾದಲ್ಲಿ ಹವಾ ಸೃಷ್ಟಿಸಲು 20ಕ್ಕೂ ಹೆಚ್ಚು ಕಾರುಗಳನ್ನು ಜಖಂಗೊಳಿಸಿದ ಪುಂಡರು ಅರೆಸ್ಟ್

    ಆತ ತಮಾಷೆಗೆ ಹೇಳುತ್ತಿದ್ದಾನೆ ಎಂದುಕೊಂಡಿದ್ದೇವು. ಆದರೆ ಭಾನುವಾರ ರಾತ್ರಿ ತನ್ವೀರ್ ಸೇಠ್ ಮೇಲಿನ ಕೊಲೆಯತ್ನ ಕಂಡು ನಮಗೂ ಭಯವಾಗಿದೆ ಎಂದು ಫರಾನ್ ಸ್ನೇಹಿತರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

    ಏನಿದು ಪ್ರಕರಣ?
    ಭಾನುವಾರ ರಾತ್ರಿ ಮೈಸೂರಿನ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿದ್ದ. ಅವರ ಕತ್ತಿಗೆ ಭಾಗಕ್ಕೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

  • ಎಟಿಎಂಗಳಲ್ಲಿ ಕಾರ್ಡ್ ಮಾಹಿತಿ ಕದಿಯುತ್ತಿದ್ದವರ ಬಂಧನ

    ಎಟಿಎಂಗಳಲ್ಲಿ ಕಾರ್ಡ್ ಮಾಹಿತಿ ಕದಿಯುತ್ತಿದ್ದವರ ಬಂಧನ

    ಬೆಂಗಳೂರು: ಎಟಿಎಂಗಳಲ್ಲಿ ಸ್ಕಿಮ್ಮರ್ ಅಳವಡಿಸಿ ಡೆಬಿಟ್ ಕಾರ್ಡ್ ಮಾಹಿತಿ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

    ಗುಜರಾತ್ ಮೂಲದ ಗೌರಂಗ್, ತಮಿಳುನಾಡಿನ ಕಿರುಬಗರನ್ ಬಂಧಿತ ಆರೋಪಿಗಳು. ಬೆಳ್ಳಂದೂರು ಸುತ್ತಮುತ್ತಲ ಪ್ರದೇಶದಲ್ಲಿ ಎಟಿಎಂಗಳಲ್ಲಿ ಮೊದಲು ಸ್ಕಿಮ್ಮರ್ ಅಳವಡಿಸಿ, ಗ್ರಾಹಕರು ಎಟಿಎಂಗೆ ಬಂದ ವೇಳೆ ಸ್ಕಿಮ್ಮರ್ ಮೂಲಕ ಗುಪ್ತ ಮಾಹಿತಿಯನ್ನು ಕಳ್ಳತನ ಮಾಡುತ್ತಿದ್ದರು.

    ಸ್ಕಿಮ್ಮರ್ ಮೂಲಕ ಗುಪ್ತ ಮಾಹಿತಿಯನ್ನು ಕದ್ದ ನಂತರ ಪಿಒಎಸ್(ಪಾಯಿಂಟ್ ಆಫ್ ಸೇಲ್) ಉಪಕರಣದ ಸಹಾಯದಿಂದ ಗ್ರಾಹಕರ ಖಾತೆಯಿಂದ ಬೇರೊಂದು ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದ್ದರು.

    ಪೊಲೀಸರ ಗಸ್ತು ತಿರುಗುವ ವೇಳೆ ವ್ಯಕ್ತಿಗಳು ಎಟಿಎಂ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಅನುಮಾನಗೊಂಡ ಪೊಲೀಸರು ಅವರನ್ನು ವಿಚಾರಣೆ ನಡೆಸಲು ಪ್ರಾರಂಭಿಸಿದ್ದಾರೆ. ಈ ವೇಳೆ ಇಬ್ಬರು ಪರಾರಿಯಾಗಲು ಯತ್ನಿಸಿದ್ದಾರೆ.

    ಬಳಿಕ ಅವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೃತ್ಯದ ಕುರಿತು ಬಾಯ್ಬಿಟ್ಟಿದ್ದಾರೆ. ಸದ್ಯ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ ಸ್ಕಿಮ್ಮರ್ ಉಪಕರಣ, ಕೆಲವು ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ.

  • ಕಿರುಕುಳದಿಂದ ಯುವತಿಯನ್ನು ರಕ್ಷಿಸಿದ ಗುಂಪಿನಿಂದಲೇ ಗ್ಯಾಂಗ್ ರೇಪ್

    ಕಿರುಕುಳದಿಂದ ಯುವತಿಯನ್ನು ರಕ್ಷಿಸಿದ ಗುಂಪಿನಿಂದಲೇ ಗ್ಯಾಂಗ್ ರೇಪ್

    ಲಕ್ನೋ: ಲೈಂಗಿಕ ಕಿರುಕುಳ ನೀಡುತ್ತಿದ್ದವನಿಂದ ಯುವತಿಯನ್ನು ರಕ್ಷಿಸಿದ 6 ಮಂದಿ ಯುವಕರೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕ್ರೂರ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಬುಧವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನೋಯ್ಡಾದ 21 ವರ್ಷದ ಯುವತಿ ತನ್ನ ಕುಟುಂಬವನ್ನು ಸಾಕಲು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ಆಕೆಗೆ ವ್ಯಕ್ತಿಯೋರ್ವನ ಪರಿಚಯವಾಗಿತ್ತು. ಆ ವ್ಯಕ್ತಿ ನಿನಗೆ ಕೆಲಸ ಕೊಡಿಸುತ್ತೇನೆ, ಆ ಬಗ್ಗೆ ಮಾತನಾಡಬೇಕು ಎಂದು ಬುಧವಾರ ರಾತ್ರಿ 7 ಗಂಟೆ ವೇಳೆಗೆ ಪಾರ್ಕ್ ವೊಂದರಲ್ಲಿ ಆತನನ್ನು ಭೇಟಿಯಾಗುವಂತೆ ಯುವತಿಗೆ ಹೇಳಿದ್ದನು. ಆತನ ಮಾತು ನಂಬಿ ಯುವತಿ ಪಾರ್ಕಿಗೆ ಹೋಗಿದ್ದಳು. ಆದರೆ ಅಲ್ಲಿ ವರಸೆ ಬದಲಿಸಿದ ವ್ಯಕ್ತಿ ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಇದನ್ನೂ ಓದಿ:ಬಾಲಕಿಯನ್ನು ಮಂಚಕ್ಕೆ ಕಟ್ಟಿ 16ರ ಬಾಲಕನಿಂದ ರೇಪ್

    ಈ ವೇಳೆ ಸ್ಥಳದಲ್ಲಿದ್ದ 6 ಮಂದಿ ಯುವಕರು ಯುವತಿಯ ಸಹಾಯಕ್ಕೆ ಬಂದು, ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಅಲ್ಲಿಂದ ಓಡಿಸಿದರು. ಬಳಿಕ ಯವತಿ ಮೇಲೆ ತಾವೇ ಸಾಮೂಹಿಕ ಅತ್ಯಾಚಾರ ನಡೆಸಿ ವಿಕೃತಿ ಮೆರೆದಿದ್ದರು. ಘಟನೆ ಬಳಿಕ ಯುವತಿ ಈ ಸಂಬಂಧ ಮೂರ್ನಾಲ್ಕು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೂ ಯಾರು ದೂರು ತೆಗೆದುಕೊಂಡಿಲ್ಲ. ಕೊನೆಗೆ ಶುಕ್ರವಾರ ಪೊಲೀಸರು ಯುವತಿಯ ದೂರು ಪಡೆದು, ಈ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಪತ್ನಿ ಮನೆಯಲಿಲ್ಲ, ಬಂದು ಅಡುಗೆ ಮಾಡು’- ನಡುರಾತ್ರಿ ವಿದ್ಯಾರ್ಥಿನಿಗೆ ಪ್ರೊಫೆಸರ್ ಮೆಸೇಜ್

    ಸದ್ಯ ಯುವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354, 376 ಮತ್ತು 511 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ:ಫೇಸ್‍ಬುಕ್‍ನಲ್ಲಿ ಪರಿಚಯ- ನಂತ್ರ ಚಾಟಿಂಗ್, ಮೀಟಿಂಗ್, ಚೀಟಿಂಗ್

    ಆರೋಪಿಗಳ ಬಗ್ಗೆ ನಿಖರ ಮಾಹಿತಿ ಇಲ್ಲ, ಅಲ್ಲದೆ ಅವರ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣ ಕೂಡ ಇಲ್ಲ. ಹೀಗಾಗಿ ಅವರನ್ನು ಪತ್ತೆಹಚ್ಚುವುದು ಕಷ್ಟದ ಕೆಲಸವಾಗಿದೆ. ಸದ್ಯ ಆರೋಪಿಗಳಲ್ಲಿ ಮೂವರು ಘಟನೆ ನಡೆದ ಸ್ಥಳದ ಸುತ್ತಮುತ್ತಲು ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.

    ಅಲ್ಲದೆ ಆರೋಪಿಗಳೆಲ್ಲರೂ 20ರಿಂದ 25 ವರ್ಷದ ವಯಸ್ಸಿನವರು, ಅವರನ್ನು ಹುಡುಕಿ ಕೊಟ್ಟವರಿಗೆ 25 ಸಾವಿರ ಬಹುಮಾನ ಹಣನವನ್ನು ಕೂಡ ಪೊಲೀಸರು ಘೋಷಿಸಿದ್ದಾರೆ. ಸದ್ಯ ಈ ಸಂಬಂಧ ತನಿಖೆ ಮುಂದುವರಿದಿದೆ.

  • ಕಂಬಕ್ಕೆ ಕಟ್ಟಿ ಥಳಿಸಿ, ನೀರು ಕೇಳಿದ್ದಕ್ಕೆ ಮೂತ್ರ ಕುಡಿಸಿದ್ರು- ವ್ಯಕ್ತಿ ಸಾವು

    ಕಂಬಕ್ಕೆ ಕಟ್ಟಿ ಥಳಿಸಿ, ನೀರು ಕೇಳಿದ್ದಕ್ಕೆ ಮೂತ್ರ ಕುಡಿಸಿದ್ರು- ವ್ಯಕ್ತಿ ಸಾವು

    ಚಂಡೀಗಢ: ತಮ್ಮೊಂದಿಗೆ ಗಲಾಟೆ ಮಾಡಿದ್ದಾನೆ ಎಂದು ಕಿಡಿಗೇಡಿಗಳು ದಲಿತ ವ್ಯಕ್ತಿಯೋರ್ವನನ್ನು ಕಂಬಕ್ಕೆ ಕಟ್ಟಿ ಥಳಿಸಿ, ಕುಡಿಯಲು ನೀರು ಕೇಳಿದಾಗ ಬಲವಂತವಾಗಿ ಮೂತ್ರ ಕುಡಿಸಿದ ಅಮಾನುಷ ಘಟನೆ ಪಂಜಾಬ್‍ನಲ್ಲಿ ನಡೆದಿದೆ. ತೀವ್ರ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದ್ದಾನೆ.

    ನವೆಂಬರ್ 7ರಂದು ಪಂಜಾಬ್‍ನ ಸಂಗೂರ್‌ನಲ್ಲಿ ಈ ಘಟನೆ ನಡೆದಿತ್ತು. 37 ವರ್ಷದ ದಲಿತ ವ್ಯಕ್ತಿ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿತ್ತು. ಅಷ್ಟೇ ಅಲ್ಲದೆ ಆತನಿಗೆ ಒತ್ತಾಯಪೂರ್ವಕವಾಗಿ ಮೂತ್ರ ಕುಡಿಸಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದರು. ಗಂಭೀರ ಗಾಯಗೊಂಡಿದ್ದ ಸಂತ್ರಸ್ತನಿಗೆ ಚಂಡೀಗಢದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕಳೆದ 9 ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ದಲಿತ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

    ಚಂಗಲಿವಾಲಾ ಗ್ರಾಮದ ನಿವಾಸಿಯಾಗಿರುವ ಸಂತ್ರಸ್ತ ಹಾಗೂ ಗ್ರಾಮದ ರಿಂಕು, ಆತನ ಸ್ನೇಹಿತರೊಡನೆ ವಾಗ್ವಾದ ನಡೆದಿತ್ತು. ಈ ಗಲಾಟೆ ಗ್ರಾಮಸ್ಥರ ಮಧ್ಯಸ್ಥಿಕೆಯಿಂದ ಅಂತ್ಯಗೊಂಡಿತ್ತು. ಆದರೆ ಇದಾದ ಬಳಿಕ ಮಾತುಕತೆಗೆಂದು ರಿಂಕು ಸಂತ್ರಸ್ತನನ್ನು ತನ್ನ ಮನೆಗೆ ಕರೆಸಿಕೊಂಡಿದ್ದನು. ಈ ವೇಳೆ ಸಂತ್ರಸ್ತನ ಮೇಲೆ ನಾಲ್ವರು ಸೇರಿ ಹಲ್ಲೆ ನಡೆಸಿ, ಕಂಬಕ್ಕೆ ಕಟ್ಟಿದ್ದರು. ಆಗ ಬಾಯರಿಕೆಯಿಂದ ಸಂತ್ರಸ್ತ ನೀರು ಕೇಳಿದಾಗ ಬಲವಂತವಾಗಿ ಆತನಿಗೆ ರಿಂಕು ಮತ್ತು ಆತನೊಟ್ಟಿಗೆ ಇದ್ದವರು ಮೂತ್ರ ಕುಡಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳಾದ ರಿಂಕು, ಅಮರ್‍ಜೀತ್ ಸಿಂಗ್, ಲಕ್ಕಿ, ಬೀಟಾ ತಲೆಮರಿಸಿಕೊಂಡಿದ್ದು, ನಾಲ್ವರ ಮೇಲೂ ಸೆಕ್ಷನ್ 302 (ಕೊಲೆ) ಆರೋಪದ ಅಡಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ ರಾಜ್ಯದ ಪರಿಶಿಷ್ಟ ಜಾತಿ ಆಯೋಗ ಕೂಡ ಈ ಕುರಿತು ವಿವರ ಕೇಳಿದೆ ಎನ್ನಲಾಗಿದೆ.

  • ಆರೋಪಿಗಳಿಗೆ ಜಾಮೀನು ಕೊಡಿಸಲು ನಕಲಿ ದಾಖಲೆ ಸೃಷ್ಟಿ- ನಾಲ್ವರ ಬಂಧನ

    ಆರೋಪಿಗಳಿಗೆ ಜಾಮೀನು ಕೊಡಿಸಲು ನಕಲಿ ದಾಖಲೆ ಸೃಷ್ಟಿ- ನಾಲ್ವರ ಬಂಧನ

    ಬೆಂಗಳೂರು: ಆರೋಪಿಗಳಿಗೆ ಜಾಮೀನು ಕೊಡಿಸಲು ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದು ಪತ್ತೆಯಾಗಿದೆ.

    ಜಾಮೀನು ಕೊಡಿಸಲು ಇವರು ಎಲ್ಲ ರೀತಿಯ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು, ಈ ಮೂಲಕ ಆರೋಪಿಗಳಿಗೆ ಶೀಘ್ರವೇ ಜಾಮೀನು ಸಿಗಬೇಕು ಆ ರೀತಿ ಪಕ್ಕಾ ದಾಖಲೆಗಳನ್ನು ನೀಡುತ್ತಿದ್ದು. ಇಂತಹ ಖತರ್ನಾಕ್ ಗ್ಯಾಂಗನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಬಸವಕುಮಾರ್, ರಮಾದೇವಿ, ಮದುಕರ್, ರತ್ನಮ್ಮ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ಜಾಮೀನು ಕೊಡಿಸಲು ನಕಲಿ ದಾಖಲೆ ಸೃಷ್ಟಿಸುವುದೇ ಇವರ ಕಾಯಕವಾಗಿತ್ತು. ಎಂತಹದ್ದೇ ಪ್ರಕರಣವಾದರೂ ಅದಕ್ಕೆ ಸೂಕ್ತ ಜಾಮೀನು ಪತ್ರದ ದಾಖಲೆಗಳನ್ನು ಈ ಗ್ಯಾಂಗ್ ತಯಾರು ಮಾಡಿ ಕೊಡುತ್ತಿತ್ತು.

    ಪ್ರಕರಣದ ಕಿಂಗ್ ಫಿನ್ ರತ್ನಮ್ಮ ಮೂಲತಃ ಆಂಧ್ರ ಪ್ರದೇಶದವಳಾಗಿದ್ದು, ನಕಲಿ ವಿಲೇಜ್ ಅಕೌಂಟೆಂಟ್ ಗಳ ಮೂಲಕ ನಕಲಿ ಸೀಲ್ ಇಟ್ಟುಕೊಂಡು ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಲವರಿಗೆ ವಂಚಿಸಿದ್ದಾರೆ. ಸದ್ಯ ಆರೋಪಿಗಳಿಂದ ಎರಡು ನಕಲಿ ಸೀಲ್, ಆಧಾರ್ ಕಾರ್ಡ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಹತ್ತು ದಿನಗಳ ಕಾಲ ಕಸ್ಟಡಿಗೆ ತಗೆದುಕೊಳ್ಳಲಾಗಿದೆ.

  • ಪತಿಗೆ ಮದ್ಯದ ಬಾಟಲಿಯಿಂದ ಹೊಡೆದು ಪತ್ನಿಗೆ ಲೈಂಗಿಕ ಕಿರುಕುಳ

    ಪತಿಗೆ ಮದ್ಯದ ಬಾಟಲಿಯಿಂದ ಹೊಡೆದು ಪತ್ನಿಗೆ ಲೈಂಗಿಕ ಕಿರುಕುಳ

    ನವದೆಹಲಿ: ಆರು ಮಂದಿ ಕಾಮುಕರು ಮದ್ಯದ ನಶೆಯಲ್ಲಿ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಿಕೃತಿ ಮೆರೆದ ಅಮಾನುಷ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

    ಗುರುಗ್ರಾಮದ ರೆಸ್ಟೋರೆಂಟ್ ಒಂದರಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಂಪತಿ ಇದ್ದ ಸ್ಥಳಕ್ಕೆ ಬಂದ 6 ಮಂದಿ ದುಷ್ಕರ್ಮಿಗಳ ಗುಂಪು ಅವರ ಬಳಿ ಅಸಭ್ಯವಾಗಿ ವರ್ತಿಸಿದೆ. ಈ ವೇಳೆ ದಂಪತಿ ಹಾಗೂ ದುಷ್ಕರ್ಮಿಗಳ ಮಧ್ಯೆ ಗಲಾಟೆ ನಡೆದಿದ್ದು, ಸಿಟ್ಟಿನಿಂದ ದುಷ್ಕರ್ಮಿಗಳು ಪತಿಯ ತಲೆಗೆ ಮದ್ಯದ ಬಾಟಲ್ ನಿಂದ ಹೊಡೆದು ಹತ್ಯೆಗೆ ಯತ್ನಿಸಿ, ಪತ್ನಿ ಮೇಲೆಯೂ ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ರೆಸ್ಟೋರೆಂಟ್‍ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋದಲ್ಲಿ ಆರು ಮಂದಿ ಕಿಡಿಗೇಡಿಗಳು ದಂಪತಿ ಕುಳಿತಿದ್ದ ಟೇಬಲ್ ಸುತ್ತುವರಿದು ಗಲಾಟೆ ಮಾಡಿ ಹಲ್ಲೆ ನಡೆಸಿರುವುದು ಸೆರೆಯಾಗಿದೆ.

    ಹಲ್ಲೆಯಿಂದಾಗಿ ಗಾಯಗೊಂಡಿದ್ದ ದಂಪತಿ ಚೇತರಿಸಿಕೊಂಡ ಬಳಿಕ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ದಂಪತಿ ದೂರಿನ ಆಧಾರದ ಮೇರೆಗೆ ಪೊಲೀಸರು 6 ಮಂದಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಘಟನೆ ಬಳಿಕ ಆರೋಪಿಗಳು ತಲೆಮರಿಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

  • ಹಾಡಹಾಗಲೇ ಚುಚ್ಚಿ ಕೊಂದವರನ್ನು ಬಂಧಿಸಿದ ಪೊಲೀಸರು

    ಹಾಡಹಾಗಲೇ ಚುಚ್ಚಿ ಕೊಂದವರನ್ನು ಬಂಧಿಸಿದ ಪೊಲೀಸರು

    ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಬಾಗೂರು ರಸ್ತೆಯ ನೇತಾಜಿ ಸರ್ಕಲಿನಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಈಗ ಮತ್ತೆ ಇನ್ನಿಬ್ಬರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

    ಚನ್ನರಾಯಪಟ್ಟಣದ ಬಾಗೂರು ರಸ್ತೆಯ ನೇತಾಜಿ ಸರ್ಕಲಿನಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಆರೋಪಿಯಾಗಿದ್ದ ಅಭಿಷೇಕ್ (26) ಎಂಬುವನನ್ನು ಮಂಟಿ ಹುಡುಗರಾದ ನಾಲ್ಕು ಮಂದಿ ಅ.29 ರಂದು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು. ಈ ದೃಶ್ಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಿವಾಸ್ ಸೆಪಟ್, ಡಿವೈಎಸ್ಪಿ ಲಕ್ಷ್ಮೇ ಗೌಡ ಮತ್ತು ಸಿಪಿಐ ಕಾಂತರಾಜು ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ಆರೋಪಿಗಳ ಪತ್ತೆಗಾಗಿ ರಚನೆ ಮಾಡಿದ್ದರು. ನ.2 ರಂದು ಪ್ರಮುಖ ಆರೋಪಿಗಳು ಎನ್ನಲಾದ ಶೇಖರ್ (23) ಮತ್ತು ವಿನೋದ್ ಅಲಿಯಾಸ್ ಕೋಳಿ ಮಂಜ (21) ಎಂಬುವರನ್ನು ಬಂಧಿಸಿದ್ದ ಪೊಲೀಸರು, ಇಂದು ಅವರ ಸಹಚರರಾದ ಶಿವಕುಮಾರ್ (21) ಮತ್ತು ನಿಖಿಲ್ (21) ಎಂಬುವರನ್ನು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಬಸ್ ನಿಲ್ದಾಣದ ಸಮೀಪ ಬಂಧಿಸಿದ್ದಾರೆ.

    ಕೊಲೆ ನಡೆದ ಸ್ಥಳಕ್ಕೆ ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ಮಾಡಿಸಿದ ಬಳಿಕ ಆರೋಪಿಗಳನ್ನ ಚನ್ನರಾಯಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹಾಸನದ ಉಪ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.