Tag: accused

  • ಕೊಲೆಗೈದು ಮಹಿಳೆ ಶವದ ಮೇಲೆ ರೇಪ್ – ವಿಡಿಯೋ ಸೆರೆಹಿಡಿದ ವಿಕೃತಕಾಮಿ ಅರೆಸ್ಟ್

    ಕೊಲೆಗೈದು ಮಹಿಳೆ ಶವದ ಮೇಲೆ ರೇಪ್ – ವಿಡಿಯೋ ಸೆರೆಹಿಡಿದ ವಿಕೃತಕಾಮಿ ಅರೆಸ್ಟ್

    – ಮನೆಗೆ ನುಗ್ಗಿ ಪತಿಯನ್ನು ಕಲ್ಲಿಂದ ಜಜ್ಜಿ ಕೊಂದ
    – ದಂಪತಿಯ ಮಗಳ ಮೇಲೂ ಅತ್ಯಾಚಾರ
    – ಒಂದೇ ಕುಟುಂಬದ ಮೂವರನ್ನು ಬಲಿ ಪಡೆದ

    ಲಕ್ನೋ: ವಿಕೃತಕಾಮಿಯೋರ್ವ ಮನೆಯೊಂದಕ್ಕೆ ನುಗ್ಗಿ ದಂಪತಿಯನ್ನು ಕೊಲೆ ಮಾಡಿ ಮಹಿಳೆ ಶವದ ಮೇಲೆ ಅತ್ಯಾಚಾರವೆಸೆಗಿದ್ದಲ್ಲದೆ, ಅವರ 10 ವರ್ಷದ ಮಗಳನ್ನು ರೇಪ್‍ಗೈದ ಭಯಾನಕ ಪ್ರಕರಣ ಉತ್ತರ ಪ್ರದೇಶದ ಅಜಮ್‍ಗಢ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಆರೋಪಿಯನ್ನು ನಾಸಿರುದ್ಧೀನ್(38) ಎಂದು ಗುರುತಿಸಲಾಗಿದೆ. ಈತ ನವೆಂಬರ್ 24ರಂದು ಮುಬಾರಕ್‍ಪುರ ಪ್ರದೇಶದಲ್ಲಿನ ಮನೆಯೊಂದಕ್ಕೆ ನುಗ್ಗಿ ದಂಪತಿ ಹಾಗೂ ಅವರ 4 ತಿಂಗಳ ಮಗನನ್ನು ಕಲ್ಲಿಂದ ಜಜ್ಜಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ಅಲ್ಲದೆ ದಂಪತಿಯ 10 ವರ್ಷದ ಮಗಳ ಮೇಲೆ ರೇಪ್ ಮಾಡಿ, ಮಹಿಳೆಯ ಮೃತದೇಹದ ಮೇಲೆ 3 ಗಂಟೆ ಸತತವಾಗಿ ಅತ್ಯಾಚಾರಗೈದು, ದಂಪತಿಯ ಇನ್ನಿಬ್ಬರು ಮಕ್ಕಳನ್ನು ಕೊಲ್ಲಲು ಯತ್ನಿಸಿದ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದನು. ಇದನ್ನೂ ಓದಿ: ಮಲಗಿದ್ದ ಮಕ್ಕಳ ಕತ್ತು ಹಿಸುಕಿ ಕೊಂದು 8ನೇ ಮಹಡಿಯಿಂದ ಜಿಗಿದ ದಂಪತಿ

    ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆ ನಡೆಸಿದಾಗ ಆರೋಪಿಯೋರ್ವ ವಿಕೃತಕಾಮಿ, ಸೈಕೋಪಾತ್ ಎಂಬುದು ಬೆಳಕಿಗೆ ಬಂದಿದೆ. ಈ ಪ್ರಕರಣ ಮಾತ್ರವಲ್ಲದೆ ಆರೋಪಿ ಬೇರೆ ರಾಜ್ಯಗಳಲ್ಲಿ ಇನ್ನೂ ಅನೇಕ ರೇಪ್, ಕೊಲೆಗಳನ್ನು ಮಾಡಿರುವುದರ ಬಗ್ಗೆಯೂ ಬಾಯಿಬಿಟ್ಟಿದ್ದಾನೆ. ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾಗಿ ಪ್ರೀತಿ ನಿರೂಪಿಸೆಂದ – ನಿರಾಕರಿಸಿದ ಪ್ರೇಯಸಿಯ ಕತ್ತು ಸೀಳಿದ

    ನ. 24ರಂದು ದಂಪತಿ, ಮಕ್ಕಳು ಮಲಗಿದ್ದಾಗ ಮನೆಗೆ ನುಗ್ಗಿ, ಮೊದಲು ಪತಿಯನ್ನು ಕಲ್ಲಿಂದ ಜಜ್ಜಿ ಕೊಲೆ ಮಾಡಿದೆ. ಬಳಿಕ ಮಹಿಳೆಯನ್ನು ಕೊಲೆಗೈದು ಮೃತದೇಹದ ಮೇಲೆ ಅತ್ಯಾಚಾರವೆಸಗಿದೆ. ಆ ನಂತರ ದಂಪತಿಯ ಮಗಳ ಮೇಲೂ ಅತ್ಯಾಚಾರಗೈದು, ಅವರ 4 ತಿಂಗಳ ಮಗನನ್ನು ಹತ್ಯೆ ಮಾಡಿದೆ. ಉಳಿದ ಇಬ್ಬರು ಮಕ್ಕಳ ಮೇಲೂ ಹಲ್ಲೆ ಮಾಡಿದೆ. ಕೃತ್ಯವೆಸೆಗಿದ ಬಳಿಕ ಸ್ಥಳದಿಂದ ಓಡಿಹೋದೆ ಎಂದು ಆರೋಪಿ ಸತ್ಯಾಂಶ ಬಿಚ್ಚಿಟ್ಟಿದ್ದಾನೆ.

    https://twitter.com/azamgarhpolice/status/1201470409746464770

    ಜೊತೆಗೆ ಈ ಕೃತ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿದು, ನನ್ನ ನಾದಿನಿಯರಿಗೂ ವಿಡಿಯೋ ತೋರಿಸಿದೆನು. ಅದನ್ನು ನೋಡಿ ಅವರು ಬೆಚ್ಚಿಬಿದ್ದಿದ್ದರು. ನಾನು ಇಲ್ಲಿಯವರೆಗೆ ಎಲ್ಲರನ್ನೂ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದೇ ಕೊಲೆ ಮಾಡಿದ್ದು ಎನ್ನುವ ಭಯಾನಕ ವಿಚಾರವನ್ನು ಪೊಲೀಸರಿಗೆ ಆರೋಪಿ ಹೇಳಿದ್ದಾನೆ. ಆರೋಪಿಯ ಈ ವಿಕೃತ ಮನಸ್ಥಿತಿ ನೋಡಿ ಸ್ವತಃ ಪೊಲೀಸರೇ ದಂಗಾಗಿದ್ದಾರೆ.

    ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನ್ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಆರೋಪಿ ತಾನು ಮಾಡಿದ ಒಂದೊಂದೆ ಕೃತ್ಯಗಳನ್ನು ಪೊಲೀಸರ ಬಳಿ ಬಾಯಿಬಿಡುತ್ತಿದ್ದಾನೆ.

  • ಗಲ್ಲಿಗೇರಿಸಲು ಆಗಿಲ್ಲವೆಂದ್ರೆ ‘ಅದನ್ನೇ’ ಕಟ್ ಮಾಡಿ: ರಾಖಿ ಸಾವಂತ್

    ಗಲ್ಲಿಗೇರಿಸಲು ಆಗಿಲ್ಲವೆಂದ್ರೆ ‘ಅದನ್ನೇ’ ಕಟ್ ಮಾಡಿ: ರಾಖಿ ಸಾವಂತ್

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ತೆಲಂಗಾಣದಲ್ಲಿ ನಡೆದ ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಇನ್‍ಸ್ಟಾದಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ತನ್ನ ಆಕ್ರೋಶವನ್ನು ಹೊರಹಾಕಿದ್ದಾಳೆ.

    ವಿಡಿಯೋದಲ್ಲಿ ರಾಖಿ, ಸ್ನೇಹಿತರೇ ಇಂದು ನನಗೆ ತುಂಬಾ ದುಃಖವಾಗುತ್ತಿದೆ. ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಈ ಆರೋಪಿಗಳು ನಂಬಿಕೆಗೆ ಅರ್ಹರಲ್ಲ ಎಂದು ದೇಶದ ಮಹಿಳೆಯರಿಗೆ ಹೇಳಲು ಇಷ್ಟಪಡುತ್ತೇನೆ. ಇವರು ಮಾನವೀಯತೆಯನ್ನು ನೋಡುವುದಿಲ್ಲ. ರಾತ್ರಿ ವೇಳೆ ಹೋಗುವಾಗ ಸುರಕ್ಷಿತವಾಗಿರಿ. ನಿಮ್ಮ ಮಾನವನ್ನು ನೀವೇ ಉಳಿಸಿಕೊಳ್ಳಿ. ಏಕೆಂದರೆ ನಿಮ್ಮ ಮಾನ ಉಳಿಸಲು ಇಲ್ಲಿ ಯಾರೂ ಬರುವುದಿಲ್ಲ ಎಂದು ಹೇಳಿದ್ದಾಳೆ. ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರಿಗಳಿಗೆ ಜೈಲಿನಲ್ಲಿ ಮಟನ್ ಊಟ, ಹೈ ಸೆಕ್ಯೂರಿಟಿ

    ಆರೋಪಿಗಳಿಗೆ ಗಲ್ಲಿಗೆ ಏರಿಸಬೇಕೆಂದು ನಾನು ಈ ದೇಶದ ಕಾನೂನಿಗೆ ಹೇಳಲು ಬಯಸುತ್ತೇನೆ. ಗಲ್ಲಿಗೇರಿಸಲು ಆಗಲಿಲ್ಲ ಎಂದರೆ ಅವರನ್ನು ನಪುಂಸಕನನ್ನಾಗಿ ಮಾಡಬೇಕು. ಇದರಿಂದ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದರಿಂದ ಏನು ಆಗುತ್ತೆ ಎಂಬುದು ತಿಳಿಯುತ್ತದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇದರಿಂದ ಭಾರತದ ಕಾನೂನು ಎಷ್ಟು ಕಠಿಣವಾಗಿದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದಳು.

    ಇದೇ ವೇಳೆ ರಾಖಿ, ದೇಶದಲ್ಲಿ ಯಾವುದೇ ಮಹಿಳೆ ಜೊತೆ ಅತ್ಯಾಚಾರವಾಗಬಾರದು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ನಾನು ಮೋದಿ ಅವರಿಗೆ, ಹೈದರಾಬಾದ್ ಪೊಲೀಸರಿಗೆ ಹಾಗೂ ಕಾನೂನಿಗೆ ಕೇಳಿಕೊಳ್ಳುತ್ತೇನೆ. ಎಲ್ಲಿಯವರೆಗೂ ಕಾನೂನು ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಅತ್ಯಾಚಾರ ನಿಲ್ಲುವುದಿಲ್ಲ. ಮೋದಿ ಸರ್ಕಾರ ಎದ್ದೇಳಿ. ನಾನು ಯುವತಿಗೆ ನ್ಯಾಯ ಕೇಳುತ್ತಿದ್ದೇನೆ. ಈಗ ನಾವು ನಮ್ಮ ಧ್ವನಿಯನ್ನು ಏರಿಸದಿದ್ದರೆ ಮುಂದೆ ಏನೂ ಆಗುವುದಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ.

  • ಪಶುವೈದ್ಯೆ ಅತ್ಯಾಚಾರಿಗಳಿಗೆ ಜೈಲಿನಲ್ಲಿ ಮಟನ್ ಊಟ, ಹೈ ಸೆಕ್ಯೂರಿಟಿ

    ಪಶುವೈದ್ಯೆ ಅತ್ಯಾಚಾರಿಗಳಿಗೆ ಜೈಲಿನಲ್ಲಿ ಮಟನ್ ಊಟ, ಹೈ ಸೆಕ್ಯೂರಿಟಿ

    ಹೈದರಾಬಾದ್: ಸಂಚು ರೂಪಿಸಿ ಪಶುವೈದ್ಯೆಯನ್ನು ಅತ್ಯಾಚಾರಗೈದು, ಕೊಲೆ ಮಾಡಿ ಅಮಾನುಷವಾಗಿ ಸುಟ್ಟುಹಾಕಿ ವಿಕೃತಿ ಮೆರೆದಿದ್ದ ಕಾಮ ಪಿಶಾಚಿಗಳಿಗೆ ಜೈಲಿನಲ್ಲಿ ಹೈ ಸೆಕ್ಯೂರಿಟಿ ನೀಡಲಾಗುತ್ತಿದ್ದು, ರಾತ್ರಿ ಊಟಕ್ಕೆ ಮಟನ್ ನೀಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ತಿಳಿದು ಹೀನಾಯ ಕೃತ್ಯವೆಸೆಗಿದ ನೀಚರನ್ನು ಗಲ್ಲಿಗೇರಿಸುವ ಬದಲು ಸತ್ಕರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೈದರಾಬಾದ್ ಪಶುವೈದ್ಯೆ ಮೇಲಿನ ಭೀಕರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಡೀ ದೇಶ ಮಮ್ಮಲ ಮರುಗಿದೆ. ಕೃತ್ಯವೆಸೆಗಿದ ನಾಲ್ವರು ಆರೋಪಿಗಳನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿನಲ್ಲಿರಿಸಲಾಗಿದೆ. ಒಂದೆಡೆ ಈ ದುಷ್ಟರನ್ನು ನಮಗೆ ಒಪ್ಪಿಸಿ ನಾವೇ ಶಿಕ್ಷೆ ವಿಧಿಸುತ್ತೇವೆ ಎಂದು ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಆದರೆ ಜೈಲಿನ ಕೈಪಿಡಿ ಪ್ರಕಾರ, ಭಾನುವಾರ ಕೈದಿಗಳಿಗೆ ಬಾಡೂಟ ನೀಡಲಾಗುತ್ತದೆ. ಆ ನಿಯಮದಂತೆ ಜೈಲಿನ ಒಳಗಿರುವ ಆರೋಪಿಗಳಿಗೂ ಮಟನ್ ಊಟ ನೀಡಲಾಗಿದ್ದು, ಬಿಗಿಭದ್ರತೆ ಒದಗಿಸಲಾಗಿದೆ. ಇದನ್ನೂ ಓದಿ: ಕೊಲೆಗೈದ ಮೇಲೂ ಪಶುವೈದ್ಯೆ ಮೇಲೆ ಅತ್ಯಾಚಾರವೆಸೆಗಿದ ರಾಕ್ಷಸರು

    ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಚೆರಪಲ್ಲಿಯ ಜೈಲಿನಲ್ಲಿ ಬಿಗಿಭದ್ರತೆಯ ಒದಗಿಸಲಾಗಿದೆ. ಭಾನುವಾರ ಮಧ್ಯಾಹ್ನದ ಊಟಕ್ಕೆ ಆರೋಪಿಗಳಿಗೆ ದಾಲ್ ಹಾಗೂ ಅನ್ನವನ್ನು ನೀಡಲಾಗಿತ್ತು. ಆದರೆ ರಾತ್ರಿ ಊಟಕ್ಕೆ ಮಟನ್ ಕರಿ ನೀಡಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಬಗ್ಗೆ ತಿಳಿದ ಸಾರ್ವಜನಿಕರು ರೊಚ್ಚಿಗೆದ್ದಿದ್ದು, ನಡುರಸ್ತೆಯಲ್ಲಿ ಕೊಂದು ಶಿಕ್ಷೆ ನೀಡಬೇಕಾದ ಕಾಮುಕರಿಗೆ ಜೈಲಿನಲ್ಲಿ ಸತ್ಕರಿಸುತ್ತಿದ್ದೀರಾ ಎಂದು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಪಶುವೈದ್ಯೆಯನ್ನು ಕೊಂದಂತೆ ನನ್ನ ಮಗನನ್ನು ಕೊಲ್ಲಿ – ಸಿಡಿದೆದ್ದ ಅತ್ಯಾಚಾರಿಯ ತಾಯಿ

    ಸ್ವತಃ ಆರೋಪಿ ತಾಯಿಯೇ ನನ್ನ ಮಗನ ತಪ್ಪು ಮಾಡಿದ್ದಾನೆ ಎಂದು ಸಾಬೀತಾದರೆ ಸಂತ್ರಸ್ತೆಯನ್ನು ಕೊಲೆಗೈದಂತೆ ಆತನನ್ನು ಕೊಲೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ದೇಶದೆಲ್ಲೆಡೆ ಮಹಿಳೆಯರ ಮೇಲೆ ನಡೆಯುತ್ತಿರುವ ಕಾಮುಕರ ಅಟ್ಟಹಾಸ ಕೊನೆಯಾಗಬೇಕು. ರೇಪ್ ಆರೋಪಿಗಳನ್ನು ಗಲ್ಲಿಗೇರಿಸಿ ಆಗ ವಿಕೃತಿ ಮೆರೆಯಲು ದುಷ್ಕರ್ಮಿಗಳು ಹೆದರುತ್ತಾರೆ ಎಂಬ ಕೂಗುಗಳು ಕೇಳಿಬರುತ್ತಿವೆ. ಇದನ್ನೂ ಓದಿ: ವೈದ್ಯೆಗೆ ಕೂಲ್ ಡ್ರಿಂಕ್ಸ್‌ನಲ್ಲಿ ವಿಸ್ಕಿ ಕುಡಿಸಿ ಅತ್ಯಾಚಾರಗೈದ ಪಾಪಿಗಳು

    ನವೆಂಬರ್ 27ರಂದು 26 ವರ್ಷದ ಪಶುವೈದ್ಯೆಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮಹ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಈ ಕೃತ್ಯಕ್ಕೆ ಇವರನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

  • ಚಾಕಲೇಟ್ ಆಸೆ ತೋರಿಸಿ ಅಪ್ರಾಪ್ತೆಯ ರೇಪ್ ಮಾಡಿ ಕೊಲೆಗೈದ ದುರುಳ

    ಚಾಕಲೇಟ್ ಆಸೆ ತೋರಿಸಿ ಅಪ್ರಾಪ್ತೆಯ ರೇಪ್ ಮಾಡಿ ಕೊಲೆಗೈದ ದುರುಳ

    ಕಲಬುರಗಿ: ಚಾಕಲೇಟ್ ಕೊಡಿಸುವುದಾಗಿ 8 ವರ್ಷದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗಿ, ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಾಕಾಪುರ ಗ್ರಾಮದಲ್ಲಿ ನಡೆದಿದೆ.

    ಯಾಕಾಪುರ ಗ್ರಾಮದ ಯಲ್ಲಪ್ಪ(35) ಕೃತ್ಯವೆಸೆಗಿದ ಕಾಮುಕ. ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ತನ್ನೊಡನೆ ಕರೆದುಕೊಂಡು ಹೋಗಿ ಕಾಮುಕ ಅತ್ಯಾಚಾರಗೈದಿದ್ದಾನೆ. ಬಳಿಕ ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿ, ಶವವನ್ನು ಗ್ರಾಮದ ಹೊರವಲಯದಲ್ಲಿ ಬಿಸಾಡಿದ್ದಾನೆ. ಸೋಮವಾರ ಮಧ್ಯಾಹ್ನ ಶಾಲೆಗೆ ಹೋಗಿದ್ದ ಬಾಲಕಿ ಮನೆಗೆ ಮರಳದಿದ್ದಾಗ ಆತಂಕಗೊಂಡ ಪೋಷಕರು ಹಾಗೂ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: 6ರ ಬಾಲಕಿಯನ್ನು ಅತ್ಯಾಚಾರಗೈದು ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಂದ ಕಾಮುಕರು

    ಆದರೆ ಸಂಜೆ ಸಮಯದಲ್ಲಿ ಯಲ್ಲಪ್ಪ ಜೊತೆ ಬಾಲಕಿ ಓಡಾಡುತ್ತಿರುವದನ್ನು ಕೆಲ ಗ್ರಾಮಸ್ಥರು ನೋಡಿದ್ದು, ಸಂಶಯದ ಮೇಲೆ ಯಲ್ಲಪ್ಪನನ್ನು ಸುಲೇಪೇಠ್ ಠಾಣೆಯ ಪೊಲೀಸರು ವಿಚಾರಿಸಿದ್ದಾಗ ಆರೋಪಿ ಅಸಲಿ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ತಾನೇ ಅತ್ಯಾಚಾರಗೈದು, ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಪಶುವೈದ್ಯೆಯನ್ನು ಕೊಂದಂತೆ ನನ್ನ ಮಗನನ್ನು ಕೊಲ್ಲಿ – ಸಿಡಿದೆದ್ದ ಅತ್ಯಾಚಾರಿಯ ತಾಯಿ

    ಈ ಪ್ರಕರಣದಿಂದ ಮೃತ ಬಾಲಕಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆರೋಪಿ ವಿರುದ್ಧ ಸಿಟ್ಟಿಗೆದ್ದಿದ್ದು, ಸದ್ಯ ಇದರಿಂದ ಗ್ರಾಮದಲ್ಲಿ ಎರಡು ಕೋಮಿನ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ. ಇದನ್ನೂ ಓದಿ: ಇಡ್ಲಿ ಆಸೆ ತೋರಿಸಿ 5ರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವಿವಾಹಿತ

    ಹೈದರಾಬಾದ್‍ನಲ್ಲಿ ಪಶುವೈದ್ಯೆ ಮೇಲಿನ ಪೈಶಾಚಿಕ ಕೃತ್ಯಕ್ಕೆ ಇಡೀ ದೇಶವೇ ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಇತ್ತ ಕರ್ನಾಟಕದಲ್ಲಿಯೂ ಹೆಣ್ಣುಮಕ್ಕಳ ಮೇಲೆ ಕಾಮುಕರು ವಿಕೃತಿ ಮೆರೆಯುತ್ತಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.

  • 6ರ ಬಾಲಕಿಯನ್ನು ಅತ್ಯಾಚಾರಗೈದು ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಂದ ಕಾಮುಕರು

    6ರ ಬಾಲಕಿಯನ್ನು ಅತ್ಯಾಚಾರಗೈದು ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಂದ ಕಾಮುಕರು

    – ಶಾಲೆಯಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾದ್ಳು
    – ಪೊದೆಯ ಮಧ್ಯೆ ರಕ್ತದ ಮಡುವಿನಲ್ಲಿ ಬಾಲಕಿ ಪತ್ತೆ

    ಜೈಪುರ: ಶಾಲೆಗೆ ಹೋಗಿದ್ದ 6 ವರ್ಷದ ಬಾಲಕಿಯನ್ನು ಕಾಮುಕರು ಅತ್ಯಾಚಾರಗೈದು, ಬೆಲ್ಟ್‌ನಿಂದ ಬಾಲಕಿ ಕತ್ತು ಹಿಸುಕಿ ಕೊಂದು ಪೊದೆಯಲ್ಲಿ ಬಿಸಾಡಿ ಹೋದ ಅಮಾನವೀಯ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯ ಖೇತಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಶನಿವಾರದಂದು ಶಾಲೆಗೆ ತೆರೆಳಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಭಾನುವಾರ ಬಾಲಕಿಯ ಶವ ಶಾಲೆಯಿಂದ ತುಸು ದೂರದಲ್ಲಿ ಪತ್ತೆಯಾಗಿದೆ. ಶಾಲೆಗೆ ಹೋಗಿದ್ದ ಬಾಲಕಿಯನ್ನು ಕಾಮುಕರು ಅಪಹರಿಸಿ ಅತ್ಯಾಚಾರಗೈದು, ಬಳಿಕ ಆಕೆಯ ಶಾಲಾ ಸಮವಸ್ತ್ರದ ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಪೊದೆಯೊಂದರ ಮಧ್ಯೆ ಬಿಸಾಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊಲೆಗೈದ ಮೇಲೂ ಪಶುವೈದ್ಯೆ ಮೇಲೆ ಅತ್ಯಾಚಾರವೆಸೆಗಿದ ರಾಕ್ಷಸರು

    ಬಾಲಕಿಯ ಶಾಲೆ ಬಳಿ ಇದ್ದ ನಿರ್ಜನ ಪ್ರದೇಶದ ಪೊದೆಯೊಂದರಲ್ಲಿ ಶವ ಪತ್ತೆಯಾಗಿದೆ. ಶವದ ಬಳಿ ಮದ್ಯದ ಬಾಟಲಿಗಳು, ಸ್ಯಾಕ್ಸ್ ಪ್ಯಾಕೆಟ್‍ಗಳು ಹಾಗೂ ರಕ್ತದ ಕಲೆಗಳು ಪತ್ತೆಯಾಗಿವೆ.

    ಶನಿವಾರ ಬಾಲಕಿಯ ಶಾಲೆಯಲ್ಲಿ ಕ್ರೀಡಾಕೂಟವಿತ್ತು. ಆದರೆ ಶಾಲೆ ಮುಗಿದ ಬಳಿಕ ಬಾಲಕಿ ನಾಪತ್ತೆಯಾಗಿದ್ದಳು. ಪೋಷಕರು ಮಧ್ಯಾಹ್ನ 3 ಗಂಟೆಯಾದರೂ ಮಗಳು ಮನೆಗೆ ಬಾರದಿದ್ದಾಗ ಗಾಬರಿಗೊಂಡು ಹುಡುಕಾಟ ನಡೆಸಿದರೂ ಬಾಲಕಿ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಸಂಬಂಧಿಕರ ಮನೆಯಲ್ಲಿ, ಸ್ನೇಹಿತರ ಮನೆಯಲ್ಲೆಲ್ಲಾ ಪೋಷಕರು ಮಗಳಿಗಾಗಿ ಹುಡುಕಾಟ ನಡೆಸಿದರೂ ಬಾಲಕಿ ಪತ್ತೆಯಾಗಲಿಲ್ಲ. ಬಳಿಕ ಈ ಬಗ್ಗೆ ಪೋಷಕರು ದೂರು ಕೊಟ್ಟಿದ್ದರು. ಆದರೆ ಭಾನುವಾರ ಬೆಳಗ್ಗೆ ಶಾಲೆಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.  ಇದನ್ನೂ ಓದಿ:  4ರ ಬಾಲೆಯ ಮೇಲೆ ಅತ್ಯಾಚಾರ- ಆರೋಪಿಯ ಬೆತ್ತಲೆ ಮೆರವಣಿಗೆ

    ಮೃತದೇಹ ಪತ್ತೆಯಾದ ತಕ್ಷಣ ಸ್ಥಳದಲ್ಲಿ ಸೇರಿದ್ದ ಗ್ರಾಮಸ್ಥರು ಕಾಮುಕರ ದುಷ್ಕೃತ್ಯಕ್ಕೆ ಹಿಡಿ ಶಾಪ ಹಾಕಿದ್ದಾರೆ. ಅಲ್ಲದೆ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು, ಪ್ರಾಥಮಿಕ ವರದಿಯಲ್ಲಿ ಬಾಲಕಿಯನ್ನು ರೇಪ್ ಮಾಡಿ ಕೊಲೆಗೈಯಲಾಗಿದೆ ಎಂಬುದು ಬಯಲಾಗಿದೆ.

    ಈ ಪ್ರಕರಣ ಸಂಬಂಧ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವೊಂದನ್ನು ನೇಮಿಸಿ, ತನಿಖೆ ಮುಂದುವರಿಸಿದ್ದಾರೆ. ಅಲ್ಲದೆ ಗ್ರಾಮದ ನಿವಾಸಿ ಮಹೇಂದ್ರ(40) ಬಾಲಕಿಯ ಅತ್ಯಾಚಾರಗೈದು, ಕೊಲೆ ಮಾಡಿರಬಹುದು ಎಂಬ ಅನುಮಾನದ ವ್ಯಕ್ತವಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಕೊಲೆಗೈದ ಮೇಲೂ ಪಶುವೈದ್ಯೆ ಮೇಲೆ ಅತ್ಯಾಚಾರವೆಸೆಗಿದ ರಾಕ್ಷಸರು

    ಕೊಲೆಗೈದ ಮೇಲೂ ಪಶುವೈದ್ಯೆ ಮೇಲೆ ಅತ್ಯಾಚಾರವೆಸೆಗಿದ ರಾಕ್ಷಸರು

    -ಲಾರಿ ಕ್ಯಾಬಿನ್‍ನಲ್ಲೇ ರೇಪ್

    ಹೈದರಾಬಾದ್: ತೆಲಂಗಾಣ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಉಸಿರುಗಟ್ಟಿಸಿ ಕೊಂದ ಮೇಲೂ ಪಾಪಿಗಳು ಶವವನ್ನೂ ಬಿಡದೆ ಅತ್ಯಾಚಾರಗೈದಿದ್ದರು ಎನ್ನುವ ಸತ್ಯ ಬಯಲಾಗಿದೆ.

    ದಿನ ಕಳೆದಂತೆ ಆರೋಪಿಗಳು ಪೊಲೀಸರ ಬಳಿ ಪಶುವೈದ್ಯೆಗೆ ಯಾವ ರೀತಿಯಲ್ಲೆಲ್ಲ ಹಿಂಸೆಕೊಟ್ಟು ಕೊಲೆ ಮಾಡಲಾಯ್ತು ಎನ್ನುವ ಸತ್ಯವನ್ನು ಬಾಯಿಬಿಡುತ್ತಿದ್ದಾರೆ. ವೈದ್ಯೆಯ ಮೇಲೆ ಅವರು ಎಷ್ಟರ ಮಟ್ಟಿಗೆ ವಿಕೃತಿ ಮೆರೆದಿದ್ದಾರೆ ಎಂದರೆ ಆಕೆಯನ್ನು ಕೊಲೆ ಮಾಡಿದ ಬಳಿಕವೂ ಶವವನ್ನು ಬಿಡದೇ ಅತ್ಯಾಚಾರಗೈದಿದ್ದಾರೆ. ಇದನ್ನೂ ಓದಿ: ವೈದ್ಯೆಗೆ ಕೂಲ್ ಡ್ರಿಂಕ್ಸ್‌ನಲ್ಲಿ ವಿಸ್ಕಿ ಕುಡಿಸಿ ಅತ್ಯಾಚಾರಗೈದ ಪಾಪಿಗಳು

    26 ವರ್ಷದ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮಹ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳನ್ನು 14 ದಿನಗಳ ಕಾಲ ರಿಮ್ಯಾಂಡ್‍ನಲ್ಲಿ ಇರಿಸುವಂತೆ ಕೋರ್ಟ್ ಆದೇಶಿಸಿದೆ. ಇದನ್ನೂ ಓದಿ: ಪಶುವೈದ್ಯೆಯನ್ನು ಕೊಂದಂತೆ ನನ್ನ ಮಗನನ್ನು ಕೊಲ್ಲಿ – ಸಿಡಿದೆದ್ದ ಅತ್ಯಾಚಾರಿಯ ತಾಯಿ

    ಸದ್ಯ ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದು, ಹೇಗೆಲ್ಲಾ ಸಂತ್ರಸ್ತೆಯನ್ನು ಕಾಮುಕರು ಕೊಂದರು ಎಂಬುದು ಬಯಲಾಗುತ್ತಿದೆ. ಆರೋಪಿಗಳು ಲಾರಿಯ ಕ್ಯಾಬಿನ್‍ನಲ್ಲಿ ಪಶುವೈದ್ಯೆಯನ್ನು ಒಬ್ಬರಾದ ಮೇಲೋಬ್ಬರು ಅತ್ಯಾಚಾರಗೈದರು. ಬಳಿಕ ಆರೋಪಿ ಶಿವಾ ಸಂತ್ರಸ್ತೆಯ ಸ್ಕೂಟಿಯ ಪಂಕ್ಚರ್ ಆಗಿದ್ದ ಟಯರ್ ಗೆ ಗಾಳಿ ಹಾಕಿಸಿಕೊಂಡು ಬರಲು ಹೋಗಿದ್ದನು. ಆತ ವಾಪಸ್ ಬರುವಷ್ಟರಲ್ಲಿ ಉಳಿದ ಆರೋಪಿಗಳು ಅತ್ಯಾಚಾರ ಮಾಡಿ ಸಂತ್ರಸ್ತೆಯ ಬಾಯಿ, ಮೂಗು ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಇದನ್ನೂ ಓದಿ: ಪಶುವೈದ್ಯೆ ರೇಪ್, ಕೊಲೆ ಪ್ರಕರಣ- ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರ ಅಮಾನತು

    ಆದರೂ ಬಿಡದ ಶಿವಾ ಸಂತ್ರಸ್ತೆಯ ಶವದ ಮೇಲೆಯೇ ಅತ್ಯಾಚಾರಗೈದನು. ಬಳಿಕ ಮೃತದೇಹವನ್ನು ಬೆಡ್ ಶೀಟ್‍ನಲ್ಲಿ ಸುತ್ತಿ, ಜನಗಳು ಓಡಾಡದ ಸ್ಥಳದಲ್ಲಿ ಸೇತುವೆ ಬಳಿ ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿ ಹಾಕಿದರು ಎನ್ನುವ ಸತ್ಯವನ್ನು ಆರೋಪಿಗಳು ಪೊಲೀಸರ ಎದುರು ಬಾಯಿ ಬಿಟ್ಟಿದ್ದಾರೆ.

    ಪೆಟ್ರೋಲ್ ಬಂಕ್ ಸಿಬ್ಬಂದಿಯಿಂದ ಸುಳಿವು:
    ಮಾಧ್ಯಮಗಳಲ್ಲಿ ಪಶುವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ನೋಡಿದಾಗ ಪೆಟ್ರೋಲ್ ಬಂಕ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ, ಈ ಘಟನೆ ನಡೆದ ರಾತ್ರಿ ಇಬ್ಬರು ವ್ಯಕ್ತಿಗಳು ಬಂಕ್‍ನಲ್ಲಿ ಲೂಸ್ ಪೆಟ್ರೋಲ್ ಖರೀದಿಸಲು ಬಂದಿದ್ದರು ಎಂದು ತಿಳಿಸಿದ್ದರು. ಅಲ್ಲದೆ ಆ ವ್ಯಕ್ತಿಗಳನ್ನು ನಾನು ಗುರುತಿಸಬಲ್ಲೆ, ಅವರ ಅನುಮಾನಾಸ್ಪದ ನಡವಳಿಕೆ ನೋಡಿ ನಾನು ಅವರ ಮುಖವನ್ನು ಹಾಗೂ ಸ್ಕೂಟಿ ನಂಬರ್ ಅನ್ನು ನೆನಪಿಟ್ಟುಕೊಂಡಿದ್ದೆ ಎಂದು ಸಿಬ್ಬಂದಿ ಹೇಳಿದ್ದರು. ಇದನ್ನೂ ಓದಿ: ಪಶುವೈದ್ಯೆಯನ್ನ ಗ್ಯಾಂಗ್‍ರೇಪ್ ಮಾಡಿ, ಕೊಲೆ – 25 ಕಿ.ಮೀ ದೂರ ಶವವೊಯ್ದು ಸುಟ್ಟರು

    ಪೆಟ್ರೋಲ್ ಖರೀದಿಸಲು ಆರೋಪಿಗಳು ಸ್ಕೂಟಿಯಲ್ಲಿ ಪೆಟ್ರೋಲ್ ಬಂಕ್ ಬಳಿ ಬಂದಿದ್ದರು. ಈ ವೇಳೆ ಆರೋಪಿಗಳ ವರ್ತನೆ ನೋಡಿ ಅನುಮಾನ ಬಂದಿತ್ತು. ಅಲ್ಲದೆ ಆರೋಪಿಗಳು ಪ್ಲಾಸ್ಟಿಕ್ ಬಾಟಲಿಯಲ್ಲಿ ಪೆಟ್ರೋಲ್ ತುಂಬಿ ಕೊಡುವಂತೆ ಹೇಳಿದಾಗ ನಾನು ನಿರಾಕರಿಸಿದ್ದೆ ಎಂದು ಸಿಬ್ಬಂದಿ ತಿಳಿಸಿದ್ದರು.

    ಸಿಬ್ಬಂದಿ ಕೊಟ್ಟ ಮಾಹಿತಿ ಬಳಿಕ ಪೊಲೀಸರು ಪೆಟ್ರೋಲ್ ಬಂಕ್ ಬಳಿ ಹೋಗಿ ವಿಚಾರಿಸಿದಾಗ, ಪ್ರಕರಣ ನಡೆದ ರಾತ್ರಿ ಬಂಕ್‍ನಿಂದ ಪೆಟ್ರೋಲ್ ತೆಗೆದುಕೊಂಡು ಹೋಗಲು ಬಂದವರೇ ಆರೋಪಿಗಳು ಎನ್ನುವುದು ತಿಳಿದುಬಂದಿತ್ತು. ಈ ಮಾಹಿತಿಯಿಂದಲೇ ಆರೋಪಿಗಳನ್ನು ಪೊಲೀಸರು ಬಂಧಿಸಲು ಸಹಾಯವಾಯ್ತು.

  • ಪೊಲೀಸರಿಗೆ ಚಾಕು ಹಾಕಿದ್ದ ದುಷ್ಕರ್ಮಿಗೆ ಗುಂಡೇಟು

    ಪೊಲೀಸರಿಗೆ ಚಾಕು ಹಾಕಿದ್ದ ದುಷ್ಕರ್ಮಿಗೆ ಗುಂಡೇಟು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಎರಡು ದಿನಗಳ ಹಿಂದೆ ಪೊಲೀಸ್ ಸಿಬ್ಬಂದಿಗೆ ಚಾಕು ಹಾಕಿದ್ದ ದುಷ್ಕರ್ಮಿಗೆ ಖಾಕಿ ಪಡೆ ಗುಂಡೇಟು ಕೊಟ್ಟಿದೆ.

    ಗುಂಡೇಟು ತಿಂದ ಆರೋಪಿಯನ್ನು ಮರ್ಧಾನ್ ಖಾನ್ ಎಂದು ಗುರುತಿಸಲಾಗಿದೆ. ಈತ ಎರಡು ದಿನಗಳ ಹಿಂದೆ ನಗರದಲ್ಲಿ ಗಲಾಟೆ ಮಾಡಿದ್ದನು. ಪುಂಡ ಯುವಕರನ್ನ ಹಿಡಿಯಲು ಹೋದಾಗ ಪಿಸಿ ನಾಗರಾಜುಗೆ ಚಾಕು ಹಾಕಿ ಈತ ಎಸ್ಕೇಪ್ ಆಗಿದ್ದನು. ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಬೆನ್ನು ಬಿದ್ದಿದ್ದರು.

    ಮುಂಜಾನೆ 4 ಗಂಟೆ ಸುಮಾರಿಗೆ ಆರೋಪಿಯನ್ನು ಹಿಡಿಯಲು ಪೊಲೀಸರು ಹೋದಾಗ ಮತ್ತೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದನು. ಈ ವೇಳೆ ಇನ್ಸ್‌ಪೆಕ್ಟರ್ ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರ್.ಟಿ ನಗರ ಇನ್ಸ್‌ಪೆಕ್ಟರ್ ಮಿಥುನ್ ಶಿಲ್ಪಿ ಅವರು ಫೈರಿಂಗ್ ಮಾಡಿದ್ದಾರೆ. ಈ ವೇಳೆ ಆರೋಪಿ ಕಾಲಿಗೆ ಎರಡು ಗುಂಡು ಬಿದ್ದಿದ್ದು, ಸದ್ಯ ಆರೋಪಿಯನ್ನು ಬಂಧಿಸಿದ ಪೊಲೀಸರು ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

  • ಹಾಸ್ಟೆಲ್‍ಗೆ ನುಗ್ಗಿದ್ದವನ ಕಣ್ಣಿಗೆ ಖಾರದಪುಡಿ ಹಾಕಿ ವಿದ್ಯಾರ್ಥಿನಿಯರಿಂದ ಥಳಿತ

    ಹಾಸ್ಟೆಲ್‍ಗೆ ನುಗ್ಗಿದ್ದವನ ಕಣ್ಣಿಗೆ ಖಾರದಪುಡಿ ಹಾಕಿ ವಿದ್ಯಾರ್ಥಿನಿಯರಿಂದ ಥಳಿತ

    ಕಲಬುರಗಿ: ತಡರಾತ್ರಿ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ನುಗ್ಗಿದ ವ್ಯಕ್ತಿಗೆ ವಿದ್ಯಾರ್ಥಿನಿಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಕೆಸರಟಗಿ ಗ್ರಾಮದ ನಿವಾಸಿ ಸತೀಶ್ ಹಾಸ್ಟೆಲ್‍ಗೆ ನುಗ್ಗಿದ ವ್ಯಕ್ತಿ. ಪಿಡಿಎ ಎಂಜನಿಯರಿಂಗ್ ಕಾಲೇಜು ಬಳಿಯಿರುವ ಸರ್ಕಾರಿ ಬಾಲಕಿಯರ ಹಾಸ್ಟೆಲ್‍ಗೆ ಆರೋಪಿ ನುಗ್ಗಿದ್ದನು. ತಡರಾತ್ರಿ 2 ಗಂಟೆ ವೇಳೆಗೆ ಕಂಪೌಂಡ್ ಹತ್ತಿ ಹಾಸ್ಟೆಲ್‍ಗೆ ಬಂದಿದ್ದನು. ಈ ವೇಳೆ ಕೆಲ ವಿದ್ಯಾರ್ಥಿನಿಯರು ಆತನನ್ನು ಕಂಡು ಇತರೆ ವಿದ್ಯಾರ್ಥಿನಿಯರನ್ನು ಕರೆದು, ಆರೋಪಿ ಕಣ್ಣಿಗೆ ಖಾರದ ಪುಡಿ ಹಾಕಿ ಗೂಸಾ ಕೊಟ್ಟು ಧೈರ್ಯ ಮೆರೆದಿದ್ದಾರೆ.

    ಥಳಿಸಿದ ಬಳಿಕ ಆರೋಪಿಯನ್ನು ವಿದ್ಯಾರ್ಥಿನಿಯರು ಪೊಲೀಸರಿಗೆ ಒಪ್ಪಿಸಿದ್ದು, ಕುಡಿದ ಮತ್ತಿನಲ್ಲಿ ಹಾಸ್ಟೆಲ್‍ಗೆ ಬಂದಿರೋದಾಗಿ ಆರೋಪಿ ಸತೀಶ್ ಹೇಳಿದ್ದಾನೆ. ಸದ್ಯ ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದ್ವೆ ಮಾತುಕತೆಗೆಂದು ಕರೆದು ಅರೆಸ್ಟ್ ಮಾಡಿದ ಮಹಿಳಾ ಪೊಲೀಸ್

    ಮದ್ವೆ ಮಾತುಕತೆಗೆಂದು ಕರೆದು ಅರೆಸ್ಟ್ ಮಾಡಿದ ಮಹಿಳಾ ಪೊಲೀಸ್

    – ಮಹಿಳೆಯ ಐಡಿಯಾಕ್ಕೆ ಪ್ರಶಂಸೆಯ ಸುರಿಮಳೆ

    ಭೋಪಾಲ್: ಸಾಮಾನ್ಯವಾಗಿ ಕಾಲಿಗೆ ಗುಂಡೇಟು ನೀಡಿ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಾರೆ. ಆದರೆ ಇಲ್ಲೊಬ್ಬರು ಮಹಿಳಾ ಪೊಲೀಸ್ ಕೊಲೆ ಆರೋಪಿಯನ್ನು ಹಿಡಿಯಲು ಪ್ಲಾನ್ ಮಾಡಿದ್ದು, ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಹೌದು. ಮಧ್ಯಪ್ರದೇಶದ ಛತ್ತಾರ್ ಪುರ ನೌಗಾಂವ್ ಬ್ಲಾಕ್ ನ ಗರೋಲಿ ಚೌಕಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಅವರು ಮದುವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಬಂಧಿಸಿದ್ದು, ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ.

    ಬಾಲಕೃಷ್ಣ ಚೌಬೆ(55) ಎಂಬಾತ ಕಳೆದ ಮೂರು ವರ್ಷಗಳಿಂದ ಮಧ್ಯಪ್ರದೇಶದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದನು. ಈತ ಕೊಲೆ ಮತ್ತು ದರೋಡೆ ಕೇಸಿನಲ್ಲಿ ಗುರುತಿಸಿಕೊಂಡ ಬಳಿಕ ತನ್ನ ಗ್ರಾಮದಿಂದ ತಲೆಮರೆಸಿಕೊಂಡಿದ್ದನು. ಅದರಲ್ಲೂ ಕೊಲೆ ಪ್ರಕರಣದ ಬಳಿಕ ಬಾಲಕೃಷ್ಣ ಉತ್ತರಪ್ರದೇಶಕ್ಕೆ ಹಾರಿದ್ದನು.

    ಆರೋಪಿಯನ್ನು ಹಿಡಿಯಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರೂ ವಿಫಲರಾಗುತ್ತಿದ್ದರು. ಹೀಗೆ ಹಲವು ತಿಂಗಳು ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಬಾಲಕೃಷ್ಣ, ಒಂದು ದಿನ ತನ್ನ ಪರಿಚಯಸ್ಥರಿಗೆ ಮೆಸೇಜ್ ಮಾಡಿದ್ದಾನೆ. ತನಗೆ ಮದುವೆಯಾಗಬೇಕು, ಹುಡುಗಿ ಹುಡುಕಿ ಎಂದು ಸಂದೇಶದಲ್ಲಿ ತಿಳಿಸಿದ್ದನು.

    ಈ ವಿಚಾರ ತಿಳಿದು ನೌಗಾಂವ್ ಬ್ಲಾಕ್ ನ ಗರೋಲಿ ಚೌಕಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಅವರು ಆರೋಪಿಯನ್ನು ಕರೆತರುವ ಜಾವಾಬ್ದಾರಿಯನ್ನು ಹೊತ್ತುಕೊಂಡರು. ಅಂತೆಯೇ ಮೂವತ್ತರ ಹರೆಯದ ಮಾಧವಿ ಒಂದೊಳ್ಳೆ ಉಪಾಯವನ್ನು ಕಂಡುಕೊಂಡು ತನ್ನ ಹಳೆಯ ಫೋಟೋವೊಂದನ್ನು ಮಾಹಿತಿ ನಿಡಿದವರ ಮೂಲಕ ಬಾಲಕೃಷ್ಣಗೆ ಕಳುಹಿಸಿ ಮದುವೆ ಪ್ರಸ್ತಾಪವನ್ನು ಮುಂದಿಡುವ ಐಡಿಯಾವನ್ನು ತಿಳಿಸಿದರು.

    ಮಾಧವಿಯ ಅದ್ಭುತ ಉಪಾಯಕ್ಕೆ ಪೊಲೀಸ್ ಉಪವಿಭಾಗಾಧಿಕಾರಿ(ಎಸ್‍ಡಿಓಪಿ) ಶ್ರೀನಾಥ್ ಸಿಂಗ್ ಬಗೇಲ್ ತಲೆದೂಗಿದರು. ಅಲ್ಲದೆ ಮಾಧ್ವಿ ಸಹಾಯಕ್ಕಾಗಿ ಎಸ್ ಐ ಅತುಲ್ ಝಾ, ಮನೋಜ್ ಯಾದವ್, ಎಎಸ್‍ಐ ಗ್ಯಾನ್ ಸಿಂಗ್ ಹಾಗೂ ಇತರ ಮೂವರು ಪೊಲೀಸ್ ಸಿಬ್ಬಂದಿಯನ್ನು ನೇಮಿಸುವ ಮೂಲಕ ಆರೋಪಿಯ ಪತ್ತೆಗೆ ತಂಡ ರಚಿಸಿದರು.

    ಇತ್ತ ಗುರುವಾರ ಉತ್ತರಪ್ರದೇಶದ ಬಿಜೋರಿ ಗ್ರಾಮಕ್ಕೆ ಬಂದು ಭೇಟಿಯಾಗುವಂತೆ ಬಾಲಕೃಷ್ಣ, ಮಾಧವಿ ಅಗ್ನಿಹೋತ್ರಿಯವರನ್ನು ಆಹ್ವಾನಿಸಿದ್ದಾನೆ. ಹಾಗೆಯೇ ಭೇಟಿಗೆ ಬಂದ ಮಾಧವಿ, ಆರೋಪಿ ತನ್ನನ್ನು ಭೇಟಿಯಾಗಲು ಬರುತ್ತಿದ್ದಂತೆಯೇ ತಂಡಕ್ಕೆ ಸೂಚನೆ ನೀಡಿದರು. ಹಾಗೆಯೇ ತಂಡ ಆತನನ್ನು ಅರೆಸ್ಟ್ ಮಾಡಿತು. ಶುಕ್ರವಾರ ಪೊಲಿಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ.

  • ಬಾಲಕನನ್ನು ಕಿಡ್ನಾಪ್ ಮಾಡಿ, 50 ಲಕ್ಷ ಬೇಡಿಕೆಯಿಟ್ಟು ಗುಂಡೇಟು ತಿಂದ

    ಬಾಲಕನನ್ನು ಕಿಡ್ನಾಪ್ ಮಾಡಿ, 50 ಲಕ್ಷ ಬೇಡಿಕೆಯಿಟ್ಟು ಗುಂಡೇಟು ತಿಂದ

    ಬೆಂಗಳೂರು: ಕಿಡ್ನಾಪ್ ಮಾಡಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ಮೇಲೆ ಹೆಣ್ಣೂರಿನ ಸಾರಾಯಿಪಾಳ್ಯ ಬಳಿ ಪೊಲೀಸರು ಗುಂಡು ಹಾರಿಸಿದ್ದಾರೆ.

    ಶನಿವಾರ ಮಧ್ಯಹ್ನ 2 ಗಂಟೆ ಸುಮಾರಿಗೆ 15 ವರ್ಷದ ಬಾಲಕನನ್ನು ಆರೋಪಿ ಮುಬಾರಕ್ ಸೇರಿ ಮೂವರು ಕಿಡ್ನಾಪ್ ಮಾಡಿದ್ದರು. ಬಳಿಕ ಬಾಲಕನ ಪೋಷಕರಿಗೆ ಕರೆ ಮಾಡಿ 50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸಂಜೆ 5:30ರ ವೇಳೆಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು.

    ಆರೋಪಿಗಳನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಗ್ಯಾಂಗ್ ಹಲ್ಲೆ ಮಾಡಿತ್ತು. ಬಾಣಸವಾಡಿ ಪೊಲೀಸ್ ಪೇದೆ ನಾಯಕ್ ಅವರಿಗೆ ಆರೋಪಿಗಳು ಚಾಕು ಇರಿದಿದ್ದರು. ಈ ವೇಳೆ ಆತ್ಮ ರಕ್ಷಣೆಗಾಗಿ ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಹಾಗೆಯೇ ತಪ್ಪಿಸಿಕೊಂಡು ಹೋಗುತ್ತಿದ್ದ ಮುಬಾರಕ್ ಕಾಲಿಗೆ ಕೆ.ಜಿ ಹಳ್ಳಿ ಇನ್ಸ್‌ಪೆಕ್ಟರ್ ಅಜಯ್ ಸಾರತಿ ಅವರು ಗುಂಡು ಹೊಡೆದು, ಬಾಲಕನನ್ನು ರಕ್ಷಿಸಿದರು.

    ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಗುಂಡೇಟು ತಿಂದ ಮುಬಾರಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಬಾಲಕನನ್ನು ಪೊಲೀಸರು ಸುರಕ್ಷಿತವಾಗಿ ಪೋಷಕರ ಬಳಿ ತಲುಪಿಸಿದ್ದಾರೆ.