Tag: accused

  • ತಾಯಿಯನ್ನು ಗ್ಯಾಂಗ್ ರೇಪ್‍ಗೈದು ಮಗಳನ್ನೂ ಕರ್ಕೊಂಡು ಬಾ ಎಂದ್ರು ಕಾಮುಕರು

    ತಾಯಿಯನ್ನು ಗ್ಯಾಂಗ್ ರೇಪ್‍ಗೈದು ಮಗಳನ್ನೂ ಕರ್ಕೊಂಡು ಬಾ ಎಂದ್ರು ಕಾಮುಕರು

    – ಎರಡು ತಿಂಗಳಿಂದ ಅತ್ಯಾಚಾರಗೈದ ದುರುಳರು
    – ಅತ್ಯಾಚಾರದ ವಿಡಿಯೋ ಮಾಡಿ ಬೆದರಿಕೆ

    ಲಕ್ನೋ: ಜಮೀನಿಗೆ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯನ್ನು ಸತತ 2 ತಿಂಗಳು ಸಾಮೂಹಿಕ ಅತ್ಯಾಚಾರಗೈದ ದುರುಳರಿಬ್ಬರು ಆಕೆಯ ಮಗಳ ಮೇಲೂ ಕಾಮುಕ ದೃಷ್ಟಿ ಬೀರಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ಬೆಳಕಿಗೆ ಬಂದಿದೆ.

    ಅಲಿಗಢದ ಮಹಿಳೆಯೊಬ್ಬರು ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ತನ್ನ ಜೀವನ ನಡೆಸುತ್ತಿದ್ದರು. ಮಹಿಳೆಯ ಪತಿ ಆಕೆಯನ್ನು ಬಿಟ್ಟು ಹೋಗಿದ್ದು, ಮಗಳನ್ನು ಆಕೆಯೇ ಕಷ್ಟಪಟ್ಟು ಸಾಕುತ್ತಿದ್ದರು. ಇದನ್ನೇ ದುರುಪಯೋಗಪಡಿಸಿಕೊಂಡ ಕಾಮುಕರಿಬ್ಬರು ಮಹಿಳೆ ಜಮೀನಿಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಆಕೆಯನ್ನು ಸಾಮೂಹಿಕ ಅತ್ಯಾಚಾರಗೈದಿದ್ದಾರೆ. ಅಲ್ಲದೆ ಈ ಕೃತ್ಯವನ್ನು ವಿಡಿಯೋ ಮಾಡಿಟ್ಟುಕೊಂಡು ಮಹಿಳೆಯನ್ನು ಹೆದರಿಸಿ ಸತತ ಎರಡು ತಿಂಗಳಿಂದ ಅತ್ಯಾಚಾರಗೈದಿದ್ದಾರೆ. ಕಾಮುಕರ ಅಟ್ಟಹಾಸದ ಬಗ್ಗೆ ಮಹಿಳೆ ದೂರು ಕೊಡಲು ಹೋದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗೆಯೇ ಆಕೆಯ ಮಗಳನ್ನು ಕೂಡ ಕೆಲಸಕ್ಕೆ ಕರೆತರುವಂತೆ ಪೀಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಾನು ಇಷ್ಟು ದಿನ ನನ್ನ ಮೇಲಾಗುತ್ತಿದ್ದ ದೌರ್ಜನ್ಯವನ್ನು, ಹಿಂಸೆಯನ್ನು ತಡೆದುಕೊಂಡಿದ್ದೆ. ಆದರೆ ಕಾಮುಕರು ನನ್ನ ಮಗಳ ಮೇಲೂ ಕಣ್ಣು ಹಾಕಿದರು. ಅವರ ದುಷ್ಟತನಕ್ಕೆ ಬೇಸತ್ತು ನಾನು ಪೊಲೀಸರ ಮೊರೆಹೋದೆ ಎಂದು ಮಹಿಳೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

    ನಾನು ಈ ಹಿಂದೆ ಕೂಡ ಈ ದುಷ್ಟರ ವಿರುದ್ಧ ದೂರು ಕೊಡಲು ಪೊಲೀಸ್ ಠಾಣೆಗೆ ಹೋಗಿದ್ದೆ. ಆದರೆ ಆಗ ಪೊಲೀಸರು ನನ್ನ ದೂರನ್ನು ಸ್ವೀಕರಿಸಲಿಲ್ಲ. ಕಾಮುಕರ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಬದಲು ನನ್ನನ್ನು ನಿಂದಿಸಿ ಕಳುಹಿಸಿದ್ದರು. ನನ್ನ ಮೇಲೆ ಇಬ್ಬರು ಆರೋಪಿಗಳು ಎರಡು ತಿಂಗಳುಗಳಿಂದ ಅತ್ಯಾಚಾರ ಮಾಡಿದ್ದಾರೆ. ಅವರ ವಿರುದ್ಧ ದೂರು ನೀಡಲು ಹೋದಾಗಲೆಲ್ಲಾ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

    ಮಹಿಳೆಯ ದೂರನ್ನು ಸ್ವೀಕರಿಸಿದ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • ಕೌಟುಂಬಿಕ ಕಲಹಕ್ಕೆ ಗಂಡನಿಗೆ ನಡುಬೀದಿಯಲ್ಲಿ ಬಾರಿಸಿದ ಪತ್ನಿ

    ಕೌಟುಂಬಿಕ ಕಲಹಕ್ಕೆ ಗಂಡನಿಗೆ ನಡುಬೀದಿಯಲ್ಲಿ ಬಾರಿಸಿದ ಪತ್ನಿ

    ಬೆಂಗಳೂರು: ಕೌಟುಂಬಿಕ ಕಲಹದಿಂದ ಗಂಡನಿಗೆ ಹೆಂಡತಿಯೇ ನಡು ಬೀದಿಯಲ್ಲಿ ಹೊಡೆದ ಘಟನೆ ಬೆಂಗಳೂರಿನ ಬಾಣಸವಾಡಿಯ ಮಾರುತಿ ಸೇವಾ ನಗರದಲ್ಲಿ ನಡೆದಿದೆ. ಮಾರುತಿ ಸೇವಾನಗರದ ವಿನೋದ್ ಮತ್ತು ದಿವ್ಯಾ ಇಬ್ಬರು ನಾಲ್ಕು ವರ್ಷದ ಹಿಂದೆ ಮದುವೆ ಆಗಿದ್ದರು. ಆದರೆ ಗಂಡ ಹೆಂಡತಿಯ ನಡುವೆ ಸಾಮರಸ್ಯ ಇರಲಿಲ್ಲ.

    ನಾಲ್ಕು ವರ್ಷದಿಂದ ಇಬ್ಬರಿಗೂ ಸಾಮರಸ್ಯ ಇಲ್ಲದ ಹಿನ್ನೆಲೆಯಲ್ಲಿ ಪತ್ನಿ ದಿವ್ಯಾ ತನ್ನ ತಾಯಿಯ ಮನೆಗೆ ಬಂದು ಸೇರಿಕೊಂಡಿದ್ದರು. ಹೆಂಡತಿಯ ಕಾಟವೇ ಬೇಡ ಎಂದು ಗಂಡ ಕೂಡ ತಾನಾಯ್ತು ತನ್ನ ಪಾಡಾಯ್ತು ಅಂತ ಸುಮ್ಮನೆ ಇದ್ದ. ಆದರೆ ಹೆಂಡತಿಯ ಮನೆಯವರು ಮಾತ್ರ ಸುಮ್ಮನೇ ಇರಲಿಲ್ಲ. ವಿನೋದ್‍ನ ಅಸಾಹಯಕತೆಯನ್ನು ಲಾಭ ಪಡೆದು ಪದೇ ಪದೇ ಕ್ಯಾತೆ ತೆಗೆದಿದ್ದರು. ಕ್ಯಾತೆಯಿಂದ ದೂರ ಇದ್ರು ಗಂಡನನ್ನು ಮಾತ್ರ ಹೆಂಡತಿ ಬಿಡುತ್ತಿರಲಿಲ್ಲ.

    ಕೊನೆಗೆ ಮೂರು ದಿನಗಳ ಹಿಂದೆ ವಿನೋದ್‍ನ ಹೆಂಡತಿ ದಿವ್ಯಾ ತನ್ನ ಸಂಬಂಧಿಕರೊಂದಿಗೆ ಬಂದು ನಡುರಸ್ತೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದಿವ್ಯಾ ಸಂಬಂಧಿ ಅಣ್ಣಯ್ಯಪ್ಪ ಹಲಸೂರು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆ ಆಗಿದ್ದರು ಕೂಡ ವಿನೋದ್‍ಗೆ ಹಲ್ಲೆ ಮಾಡಿದ್ದಾನೆ. ಇದರಿಂದ ಬೇಸತ್ತ ವಿನೋದ್ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದು, ಆರೋಪಿಗಳಿಗಾಗಿ ಬಾಣಸವಾಡಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ಹೊಂಚು ಹಾಕಿ ರೌಡಿಶೀಟರ್‌ನನ್ನು ಕೊಚ್ಚಿ ಕೊಲೆಗೈದ್ರು!

    ಹೊಂಚು ಹಾಕಿ ರೌಡಿಶೀಟರ್‌ನನ್ನು ಕೊಚ್ಚಿ ಕೊಲೆಗೈದ್ರು!

    ಬೆಂಗಳೂರು: ಹಳೆ ವೈಷಮ್ಯಕ್ಕೆ ರೌಡಿಶೀಟರ್​ನೋರ್ವನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಸುಹೇಬ್ ಪಾಷಾ ಕೊಲೆಯಾದ ವ್ಯಕ್ತಿ. ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಗುಡ್ಡದಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮುಂಜಾನೆ ಸುಮಾರು 4:30ರ ವೇಳೆಗೆ ಸುಹೇಬ್‍ನನ್ನು ಕೊಲೆ ಮಾಡಲಾಗಿದೆ. ಈ ಹಿಂದೆ ಹಲವು ಪ್ರಕರಣದಲ್ಲಿ ಸುಹೇಬ್ ಪಾಷಾ ಭಾಗಿಯಾಗಿದ್ದನು. ಇದೇ ಕಾರಣಕ್ಕಾಗಿ ಸುಹೇಬ್‍ನನ್ನು ಕೊಲೆ ಮಾಡಲು ಎದುರಾಳಿ ಗ್ಯಾಂಗ್ ಹೊಂಚು ಹಾಕಿ, ಕಾದು ಕುಳಿತಿತ್ತು. ಇಂದು ಮುಂಜಾನೆ ಸುಹೇಬ್ ಎದೆಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪಾರಾರಿಯಾಗಿದ್ದಾರೆ.

    ವಿಚಾರ ತಿಳಿದ ಜೆಜೆಆರ್ ನಗರ ಪೊಲೀಸರು ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ, ಮರಣೊತ್ತರ ಪರೀಕ್ಷೆ ಮಾಡಿಸಿದ್ದಾರೆ. ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302(ಕೊಲೆ) ಅಡಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

  • 2 ಕೋಟಿ ಮೌಲ್ಯದ ರಕ್ತಚಂದನ ವಶ

    2 ಕೋಟಿ ಮೌಲ್ಯದ ರಕ್ತಚಂದನ ವಶ

    – ಹಡಗಿನ ಮೂಲಕ ವಿದೇಶಕ್ಕೆ ಸಾಗಿಸುವ ಮಾಸ್ಟರ್ ಪ್ಲಾನ್ ವಿಫಲ

    ಮಂಗಳೂರು: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬರೋಬ್ಬರಿ 2 ಕೋಟಿ ರೂ. ಮೌಲ್ಯದ ರಕ್ತಚಂದನವನ್ನು ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಮಂಗಳೂರಿನ ಬೈಕಂಪಾಡಿ ಇಂಡಸ್ಟ್ರಿಯಲ್ ಎಸ್ಟೇಟ್‍ನ ಕಟ್ಟಡವೊಂದರಲ್ಲಿ ಅಕ್ರಮವಾಗಿ ರಕ್ತಚಂದನವನ್ನು ದಾಸ್ತಾನು ಇರಿಸಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪಣಂಬೂರು ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ 4 ಸಾವಿರ ಕೆಜಿ ರಕ್ತಚಂದನ ಪತ್ತೆಯಾಗಿದೆ.

    ರಕ್ತಚಂದನವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಶೇಖ್ ತಬ್ರೇಜ್ (35), ರಾಕೇಶ್ ಶೆಟ್ಟಿ (44), ಲೋಹಿತ್ (36), ಫಾರೂಕ್ (45), ಹುಸೇನ್ ಕುಂಞ (46) ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಈ ರಕ್ತ ಚಂದನವನ್ನು ಮಂಗಳೂರಿನ ಎನ್‍ಎಂಪಿಟಿ ಬಂದರು ಮೂಲಕ ವಿದೇಶಕ್ಕೆ ಸಾಗಿಸಲು ತಯಾರಿ ನಡೆಸಿದ್ದು, ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಆರೋಪಿಗಳಿಂದ ರಕ್ತಚಂದನ, ಬ್ರೀಝಾ, ಮಾರುತಿ ಕಾರು ಸಹಿತ ಒಟ್ಟು 2.20 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಹಿಳೆಯ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿ ಹತ್ಯೆಗೆ ಯತ್ನಿಸಿದ ವ್ಯಕ್ತಿಯ ಬಂಧನ

    ಮಹಿಳೆಯ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿ ಹತ್ಯೆಗೆ ಯತ್ನಿಸಿದ ವ್ಯಕ್ತಿಯ ಬಂಧನ

    ಹಾವೇರಿ: ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಯ ಗುಪ್ತಾಂಗಕ್ಕೆ ಮತ್ತು ಕಾಲಿಗೆ ಆ್ಯಸಿಡ್ ಎರಚಿ ಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿಯಿರುವ ಸಿದ್ದನಗುಡ್ಡದಲ್ಲಿ ನಡೆದಿದೆ.

    ಮಂಜುನಾಥ್ ಕಳಸದ(42) ಕೃತ್ಯವೆಸಗಿದ ಆರೋಪಿ. ಶಿಗ್ಗಾಂವಿ ಪಟ್ಟಣದ ನಿವಾಸಿಯಾಗಿರುವ ಮಂಜುನಾಥ್ ಮಂಗಳವಾರ ಮಾತನಾಡುವುದಿದೆ ಬಾ ಎಂದು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆಕೆಯ ಗುಪ್ತಾಂಗ ಮತ್ತು ಕಾಲಿಗೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದಾನೆ.

    ಮಂಜುನಾಥ್ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಮಂಗಳವಾರ ಮಂಜುನಾಥ್ ನಿನ್ನೊಂದಿಗೆ ಮಾತನಾಡಬೇಕು ಬಾ ಎಂದು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಬೇರೆಯವರೊಂದಿಗೆ ಫೋನಿನಲ್ಲಿ ಮಾತನಾಡುತ್ತಿಯಾ, ನೀನು ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಜಗಳವಾಡಿದ್ದಾನೆ.

    ಜಗಳವಾಡಿದ ಬಳಿಕ ಮಂಜುನಾಥ್ ಬಾಟಲಿನಲ್ಲಿ ತಂದಿದ್ದ ಆ್ಯಸಿಡ್ ಅನ್ನು ಮಹಿಳೆಯ ಗುಪ್ತಾಂಗ ಹಾಗೂ ಕಾಲಿನ ಮೇಲೆ ಎರಚಿದ್ದಾನೆ. ಈ ಘಟನೆಯಿಂದ ಗಾಯಗೊಂಡ ಮಹಿಳೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸದ್ಯ ಆರೋಪಿ ಮಂಜುನಾಥ್‍ನನ್ನು ಬಂಕಾಪುರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಚುಡಾಯಿಸಿ, ಲೈಂಗಿಕ ದೌರ್ಜನ್ಯವೆಸೆಗಿದ ಕಾಮುಕನ ಗ್ರಹಚಾರ ಬಿಡಿಸಿದ ವಿದ್ಯಾರ್ಥಿನಿಯರು

    ಚುಡಾಯಿಸಿ, ಲೈಂಗಿಕ ದೌರ್ಜನ್ಯವೆಸೆಗಿದ ಕಾಮುಕನ ಗ್ರಹಚಾರ ಬಿಡಿಸಿದ ವಿದ್ಯಾರ್ಥಿನಿಯರು

    ಮಂಗಳೂರು: ಕಾಲೇಜ್ ವಿದ್ಯಾರ್ಥಿನಿಯರನ್ನು ಚುಡಾಯಿಸಿ, ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ವ್ಯಕ್ತಿಯನ್ನು ಹಿಡಿದು ವಿದ್ಯಾರ್ಥಿನಿಯರೇ ಸಖತ್ ಕ್ಲಾಸ್ ತೆಗೆದುಕೊಂಡು ಗ್ರಹಚಾರ ಬಿಡಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

    ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಕಾಮುಕ ರೋಹಿತ್‍ಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾಲೇಜಿನಲ್ಲಿ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದ ಆರೋಪಿ ರೋಹಿತ್ ಮ್ಯಾನೇಜ್ಮೆಂಟ್ ಕಡೆಯವನು ಎಂದು ಬೇಕಾಬಿಟ್ಟಿ ವರ್ತಿಸುತ್ತಿದ್ದನು. ಕ್ಲಾಸ್‍ಗೆ ಬಂದು ವಿದ್ಯಾರ್ಥಿನಿಯರ ಕೈ ಹಿಡಿದು ಎಳೆಯುತ್ತಿದ್ದನು. ರೋಹಿತ್‍ನ ಈ ಕಿರುಕುಳದ ಬಗ್ಗೆ ಪ್ರಾಂಶುಪಾಲರಿಗೆ ಈ ಹಿಂದೆಯೇ ಕಂಪ್ಲೆಂಟ್ ಮಾಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

    ಇತ್ತ ರೋಹಿತ್ ಕಾಟಕ್ಕೆ ಬೇಸತ್ತ ವಿದ್ಯಾರ್ಥಿನಿಯರು ಆತನನ್ನ ಹಿಡಿದು ಪ್ರಾಂಶುಪಾಲರ ಮುಂದೆಯೇ ಗ್ರಹಚಾರ ಬಿಡಿಸಿದ್ದಾರೆ. ವಿದ್ಯಾರ್ಥಿನಿಯರು ಕಾಮುಕನನ್ನು ತರಾಟೆಗೆ ತೆಗೆದುಕೊಂಡ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

    ತರಾಟೆಗೆ ತೆಗೆದುಕೊಂಡ ಬಳಿಕ ಆರೋಪಿ ವಿರುದ್ಧ ಪೊಲೀಸ್ ಠಾಣೆಗೆ ವಿದ್ಯಾರ್ಥಿನಿಯರು ದೂರು ಕೂಡಾ ನೀಡಿದ್ದಾರೆ. ಸದ್ಯ ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಲೈಂಗಿಕ ದೌರ್ಜನ್ಯ ಆರೋಪದಡಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಪ್ರವಾಸಕ್ಕೆಂದು ಬುಕ್- ಇನ್ನೋವಾ ಕಾರಿನೊಂದಿಗೆ ಎಸ್ಕೇಪ್ ಆಗಿದ್ದವ ಅರೆಸ್ಟ್

    ಪ್ರವಾಸಕ್ಕೆಂದು ಬುಕ್- ಇನ್ನೋವಾ ಕಾರಿನೊಂದಿಗೆ ಎಸ್ಕೇಪ್ ಆಗಿದ್ದವ ಅರೆಸ್ಟ್

    – ಆರೋಪಿಯ ಮತ್ತೊಂದು ಪ್ರಕರಣ ಬೆಳಕಿಗೆ

    ಬೆಂಗಳೂರು: ಮೈಸೂರಿಗೆ ಟ್ರಿಪ್ ಹೋಗಬೇಕು ಅಂತ ಕರೆದೊಯ್ದು ಇನ್ನೋವಾ ಕಾರು ಕಳ್ಳತನ ಮಾಡಿಕೊಂಡು ಹೋಗಿದ್ದ ಆರೋಪಿಯನ್ನ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

    ಕರಣ್ ಕುಮಾರ್(27) ಬಂಧಿತ ಆರೋಪಿ. ಜಸ್ಟ್ ಡಯಲ್ ಮೂಲಕ ಸೌಮ್ಯ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಸಂಪರ್ಕಿಸಿದ್ದ ಆರೋಪಿ, ಮೈಸೂರಿಗೆ ಟ್ರಿಪ್ ಹೋಗಬೇಕು ಅಂತ ಇನ್ನೋವಾ ಕಾರು ಬುಕ್ ಮಾಡಿ ಪಡೆದುಕೊಂಡಿದ್ದನು.

    ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಬರುತ್ತಿದ್ದಂತೆಯೇ ಡ್ರೈವರ್ ಅರುಣ್ ಕುಮಾರ್ ಗೆ ಕಾರು ನಿಲ್ಲಿಸುವಂತೆ ಕರನ್ ತಿಳಿಸಿದ್ದನು. ನಂತರ ಮಿಸ್ ಚೀಫ್ ಹೋಟೆಲ್ ರೂಂ ನಂಬರ್ 105ರಲ್ಲಿ ನನ್ನ ಸ್ನೇಹಿತ ಇದ್ದಾನೆ. 10 ಸಾವಿರ ಹಣ ಕೊಡುತ್ತಾನೆ ತೆಗೆದುಕೊಂಡು ಬಾ ಎಂದು ಡ್ರೈವರ್ ಬಳಿ ಅಂದಿದ್ದನು.

    ಡ್ರೈವರ್ ಅರುಣ್ ಕುಮಾರ್ ಕಾರಿನಿಂದ ಕೆಳಗಿಳಿದು, ಕೀ ತೆಗೆದುಕೊಂಡು ಹೊರಡಲು ಮುಂದಾದಾಗ ಕರಣ್, ಎಸಿ ಹಾಕಿ ಹೋಗು ಎಂದಿದ್ದನು. ಅಂತೆಯೇ ಡ್ರೈವರ್ ಎಸಿ ಆನ್ ಮಾಡಿ ರೂಂ ಕಡೆ ಹೊರಟಿದ್ದನು. ಈ ವೇಳೆ 22 ಲಕ್ಷ ಮೌಲ್ಯದ ಇನ್ನೋವಾ ಕಾರಿನೊಂದಿಗೆ ಕರಣ್ ಎಸ್ಕೇಪ್ ಆಗಿದ್ದನು. ಇದನ್ನೂ ಓದಿ: ಪ್ರವಾಸಕ್ಕೆಂದು ಕಾರು ಬುಕ್ ಮಾಡಿ ಕ್ಷಣಾರ್ಧದಲ್ಲೇ ಕಳವುಗೈದ!

    ವಾಪಸ್ ಅರುಣ್ ಬಂದು ನೋಡಿದಾಗ ಕಾರು ಕಳವಾಗಿತ್ತು. ಅದೇ ದಿನ ಆರೋಪಿ ಮತ್ತೊಂದು ಸ್ವಿಫ್ಟ್ ಡಿಸೈರ್ ಬುಕ್ ಮಾಡಿದ್ದನು. ಗಾಡಿ ನಿಲ್ಲಿಸು ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ಕರಣ್ ಡ್ರೈವರ್ ಗೆ ಹೇಳಿದ್ದನು. ಆಗ ಡ್ರೈವರ್ ನಾನೂ ಮಾಡಬೇಕು ಅಂದಿದ್ದಾನೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಕರಣ್, ಡ್ರೈವರ್ ಮೂತ್ರ ಮಾಡಿ ಬರವಷ್ಟರಲ್ಲಿ ಸ್ವಿಫ್ಟ್ ಡಿಸೈರ್ ಕಾರಿನೊಂದಿಗೆ ಪರಾರಿಯಾಗಿದ್ದನು.

    ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಇನ್ನೋವಾ ಕ್ರಿಸ್ಟ ಮತ್ತು ಸ್ವಿಫ್ಟ್ ಡಿಸೈರ್ ಕಾರನ್ನು ವಶಪಡಿಸಿಕೊಂಡಿದ್ದಾರೆ.

  • ವ್ಯಕ್ತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆರೋಪಿಗಳು ಅರೆಸ್ಟ್

    ವ್ಯಕ್ತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆರೋಪಿಗಳು ಅರೆಸ್ಟ್

    ಆನೇಕಲ್: ಹಣಕಾಸಿನ ವಿಚಾರಕ್ಕೆ ವ್ಯಕ್ತಿಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿ ಪೈಶಾಚಿಕ ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ.

    ಕಳೆದ ಮೂರನೇ ತಾರೀಖಿನಂದು ಬೆಂಗಳೂರು ಹೊರವಲಯ ಹೆನ್ನಾಗರ ಬಳಿಯ ರೇಣುಕಾ ಯಲ್ಲಮ್ಮ ದೇವಾಲಯದ ಮುಂಭಾಗ ಹೊಸಹಳ್ಳಿ ನಿವಾಸಿ ಜ್ಯೋತಪ್ಪ (51) ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಮಾರಕಸ್ತ್ರಗಳಿಂದ ಹಲ್ಲೆ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು ಬಳಿಕ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

    ಬಳಿಕ ಕೊಲೆ ಪ್ರಕರಣ ದಾಖಲು ಮಾಡಿಕೊಂಡ ಸೂರ್ಯನಗರ ಪೊಲೀಸರು, ದಾಳಿಗೆ ಒಳಗಾಗಿದ್ದ ವ್ಯಕ್ತಿ ಸಾವಿಗೂ ಮುನ್ನ ಅನುಮಾನ ವ್ಯಕ್ತಪಡಿಸಿದ್ದ ರಜಿಯಾಬೇಗಂ ಎಂಬ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಜ್ಯೋತಪ್ಪ ಹಣದ ವ್ಯವಹಾರ ನಡೆಸುತ್ತಿದ್ದು, ರಜಿಯಾಬೇಗಂಗೆ ಸಾಲವಾಗಿ 20,000 ಹಣವನ್ನು ನೀಡಿದ್ದ ಬಳಿಕ ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದ. ಆದರೆ ರಜಿಯಾಬೇಗಂಗೆ ಹಣವನ್ನು ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ. ಆಗ ದೈಹಿಕ ಸಂಪರ್ಕ ಬೆಳೆಸುವಂತೆ ಜ್ಯೋತಪ್ಪ ಹಿಂಸಿಸುತ್ತಿದ್ದ. ಆದ್ದರಿಂದ ಈ ಬಗ್ಗೆ ಪರಿಚಯಸ್ತರಾದ ಲಿಂಗರಾಜು ಬಳಿ ಆಕೆ ಹೇಳಿಕೊಂಡಿದ್ದಳು. ಆಗ ಲಿಂಗರಾಜು ಹಾಗೂ ಆತನ ಸ್ನೇಹಿತರಾದ ಸತೀಶ್ ಮತ್ತು ಶಶಿಕುಮಾರ್ ಸೇರಿ ಕೃತ್ಯವನ್ನು ಎಸೆಗಿದ್ದಾರೆಂದು ಪೊಲೀಸ್ ತನಿಖೆ ವೇಳೆ ಮಹಿಳೆ ಬಾಯ್ಬಿಟ್ಟಿದ್ದಾಳೆ.

    ಬಳಿಕ ಆರೋಪಿಗಳಾದ ರಜಿಯಾಬೇಗಂ, ಲಿಂಗರಾಜು, ಸತೀಶ್ ಮತ್ತು ಶಶಿಕುಮಾರ್ ಅನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದು, ಆರೋಪಿಗಳನ್ನು ಸ್ಥಳ ಮಹಾಜರ್ ಮಾಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • ಮೂಕ ಯುವತಿಯ ಬಾಯಿಗೆ ಬಟ್ಟೆ ಹಾಕಿ ಅತ್ಯಾಚಾರ

    ಮೂಕ ಯುವತಿಯ ಬಾಯಿಗೆ ಬಟ್ಟೆ ಹಾಕಿ ಅತ್ಯಾಚಾರ

    – ಕೆಲವೇ ಕ್ಷಣಗಳಲ್ಲಿ ಆರೋಪಿಯ ಬಂಧನ

    ಬೆಳಗಾವಿ: ಜಿಲ್ಲೆಯ ಕೆಲವು ಕಡೆ ವಿಕೃತ ಕಾಮಿಗಳ ಅಟ್ಟಹಾಸ ಮುಂದುವರಿದಿದೆ. ಅಸಾಹಾಯ ಹಾಗೂ ಮೂಕ ಯುವತಿಯರನ್ನೇ ಟಾರ್ಗೆಟ್ ಮಾಡುವ ಇವರು ಅತ್ಯಾಚಾರವೆಸಗಿ ಪರಾರಿಯಾಗುತ್ತಾರೆ.

    ಬೆಳಗಾವಿ ಜಿಲ್ಲೆಯ ಗೋಕಾಕ್ ಹಾಗೂ ಖಾನಾಪೂರ ತಾಲೂಕಿನ ಎರಡು ಪ್ರತ್ಯೇಕಗಳು ಪ್ರಕರಣ ದಾಖಲಾಗಿವೆ. ಗೋಕಾಕ್ ತಾಲೂಕಿನಲ್ಲಿ ಮೂಕ ಯುವತಿಯನ್ನು ಟಾರ್ಗೆಟ್ ಮಾಡಿದ ಆರೋಪಿ ಆಕೆಯ ಬಾಯಲ್ಲಿ ಬಟ್ಟೆ ಹಾಕಿ ಕ್ರೂರವಾಗಿ ವರ್ತಿಸಿ ಅತ್ಯಾಚಾರವೆಸಗಿದ್ದಾನೆ. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ.

    ಇನ್ನೊಂದು ಪ್ರಕರಣ ಖಾನಾಪೂರ ತಾಲೂಕಿನಿಂದ ವರದಿಯಾಗಿದ್ದು, ಕೃತ್ಯ ನಡೆದು ಒಂದು ವಾರದ ನಂತರ ಜನ ಗುಸುಗುಸು ಎಂದು ಗುಲ್ಲೆಬ್ಬಿಸುತ್ತಿದ್ದಂತೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

    ದೇಶದ ಹಲವಾರು ಕಡೆ ಇಂತಹ ಘಟನೆಗಳು ನಡೆದು ಭಾರೀ ಶಿಕ್ಷೆಗೆ ಗುರಿಯಾಗಿದ್ದರೂ ಕೂಡ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಈ ಕುರಿತು ಜನಜಾಗೃತಿ ಅತಿ ಅವಶ್ಯ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.

  • ಶೃಂಗೇರಿ ವಿದ್ಯಾರ್ಥಿನಿ ರೇಪ್ ಕೇಸ್ – ಆರೋಪ ಸಾಬೀತು, ಶಿಕ್ಷೆಯಷ್ಟೇ ಬಾಕಿ

    ಶೃಂಗೇರಿ ವಿದ್ಯಾರ್ಥಿನಿ ರೇಪ್ ಕೇಸ್ – ಆರೋಪ ಸಾಬೀತು, ಶಿಕ್ಷೆಯಷ್ಟೇ ಬಾಕಿ

    ಚಿಕ್ಕಮಗಳೂರು: ಕಾಲೇಜು ಮುಗಿಸಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರ ಹಾಗೂ ಕೊಲೆಗೈದಿದ್ದ ಇಬ್ಬರು ಆರೋಪಿಗಳ ಅಪರಾಧ ಸಾಬೀತಾಗಿದ್ದು ಶಿಕ್ಷೆಯ ಪ್ರಮಾಣವಷ್ಟೇ ಬಾಕಿ ಉಳಿದಿದೆ.

    2016, ಫೆಬ್ರವರಿ 16ರಂದು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದ್ದ ಈ ಘಟನೆಯಿಂದ ಮಲೆನಾಡೇ ಬೆಚ್ಚಿ ಬಿದ್ದಿತ್ತು. ಕಾಲು ದಾರಿಯಲ್ಲಿ ಮನೆಗೆ ಹೋಗ್ತಿದ್ದ ಪ್ರಥಮ ಬಿಕಾಂ ವಿದ್ಯಾರ್ಥಿಯನ್ನ ಅದೇ ಊರಿನ ಪ್ರದೀಪ್ ಹಾಗೂ ಸಂತೋಷ್ ಎಂಬುವರು ಅತ್ಯಾಚಾರಗೈದು, ಕೊಲೆ ಮಾಡಿ ಪಾಳು ಬಾವಿಗೆ ಎಸೆದಿದ್ರು. ಇದರಿಂದ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳಿಸುವುಕ್ಕೂ ಹೆತ್ತವರು ಯೋಚಿಸಿದ್ದರು. ಆದ್ರೀಗ, ಮೂರು ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಇಬ್ಬರ ಮೇಲಿನ ಆರೋಪ ಸಾಬೀತಾಗಿದೆ.

    ಏನಿದು ಪ್ರಕರಣ?
    2016, ಫೆಬ್ರವರಿ 16ರಂದು ಜಿಲ್ಲೆಯ ಶೃಂಗೇರಿಯ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಅದೇ ಊರಿನ ಸಂತೋಷ್ ಹಾಗೂ ಪ್ರದೀಪ್ ಎಂಬುವರು ಅತ್ಯಾಚಾರಗೈದು ಕೊಲೆ ಮಾಡಿದ್ರು. ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿದ್ದ ಕಾರಣ ಬೇಗ ಮನೆಗೆ ಹೋಗಿ ಓದಿಕೊಳ್ಳೋಣವೆಂದು ದಿನನಿತ್ಯದ ದಾರಿ ಬಿಟ್ಟು ಕಾಲುದಾರಿಯಲ್ಲಿ ಮನೆಗೆ ಹೋಗುತ್ತಿದ್ದ ಯುವತಿಯನ್ನು ಇಬ್ಬರು ಯುವಕರು ಅತ್ಯಾಚಾರಗೈದು, ಕೊಲೆಮಾಡಿ ಗಿಡಗಂಟೆಗಳಿಂದ ತುಂಬಿದ್ದ 50 ಅಡಿಯ ಪಾಳುಬಾವಿಯೊಂದಕ್ಕೆ ಎಸೆದಿದ್ದರು. ಘಟನೆ ಹೊರಬಂದ ನಂತರ ಪೊಲೀಸರು ಪ್ರಕರಣದ ಬೆನ್ನು ಬೀಳುತ್ತಿದ್ದಂತೆ ಇಬ್ಬರು ಆರೋಪಿಗಳಲ್ಲಿ ಓರ್ವ ಆತ್ಮಹತ್ಯೆಗೆ ಯತ್ನಿಸಿದ್ದ, ಮತ್ತೋರ್ವ ಪೊಲೀಸರ ಅತಿಥಿಯಾಗಿದ್ದ. ಈ ಕೇಸ್ ಹೊರತುಪಡಿಸಿಯೂ ಇಬ್ಬರ ಮೇಲೂ ಹಲವು ಕೇಸ್‍ಗಳಿದ್ದು, ಇದೀಗ ಮೂರು ವರ್ಷಗಳಿಂದ ಸುದೀರ್ಘ ವಿಚಾರಣೆ ನಡೆಸಿರೋ ಜಿಲ್ಲಾ ಸತ್ರ ನ್ಯಾಯಾಲಯ ಸೆಕ್ಷನ್ 376 (ಡಿ), 302, 201 376 (2) (ಎಂ) ಸೆಕ್ಷನ್ ಅಡಿ ಇವರ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದೆ.

    ಈಡೇರಿದ ಊರಿನವರ ಆಸೆ:
    ಈ ಇಬ್ಬರು ಆರೋಪಿಗಳಿಗೆ ನೇಣಿಗೆ ಹಾಕಬೇಕು ಎಂದು ಊರಿನ ಗ್ರಾಮಸ್ಥರು ಹಾಗೂ ಯುವತಿಯ ಕುಟುಂಬಸ್ಥರು ಆಗ್ರಹಿಸಿದ್ದರು. ಅಷ್ಟೆ ಅಲ್ಲದೇ ಈ ಯುವಕರು ಊರಿನ ಯುವತಿಯರಿಗೆ ಹಣ ನೀಡಿ ಬಾ ಅನ್ನೋದು, ಒಂಟಿ ಮಹಿಳೆ ಮನೆಗೆ ನುಗ್ಗೋದು ಮಾಡುತ್ತಿದ್ದರು ಎಂದು ಊರಿನ ಜನ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಇಬ್ಬರ ಮೇಲಿನ ಆರೋಪ ಸಾಬೀತಾಗಿದ್ದು, ಇಬ್ಬರಿಗೂ ಶಿಕ್ಷೆಯಾಗುತ್ತೆಂದು ಊರಿನ ಜನರಿಗೆ ಸಂತೋಷವಾಗಿದೆ.

    ಘಟನೆ ಬೆಳಕಿಗೆ ಬರುವ ಮುನ್ನ ಊರಿನ ಜನ ಯುವತಿಗಾಗಿ ಹುಡುಕಾಟದಲ್ಲಿದ್ದರೆ ಈ ಇಬ್ಬರು ಯುವಕರು ಮಾತ್ರ ತಮಗೇನು ಗೊತ್ತಿಲ್ಲದಂತಿದ್ರು. ಘಟನೆ ಬೆಳಕಿಗೆ ಬಂದು ಕೇಸ್ ದಾಖಲಾಗುತ್ತಿದ್ದಂತೆ ಶೃಂಗೇರಿಯ ಅಂದಿನ ಸಬ್ ಇನ್ಸ್‍ಪೆಕ್ಟರ್ ಸುದೀರ್ ಹೆಗ್ಡೆ ಇಬ್ಬರನ್ನು ಬಂಧಿಸಿದ್ದರು. ಮೂರು ವರ್ಷಗಳ ವಿಚಾರಣೆಯ ಬಳಿಕ ಇವರ ತಪ್ಪು ಸಾಬೀತಾಗಿ ಕೇಸ್ ಶಿಕ್ಷೆಯ ಹೊಸ್ತಿಲಿಗೆ ಬಂದು ನಿಂತಿದೆ. ವಿದ್ಯಾರ್ಥಿನಿಯ ಪರವಾಗಿ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ಯಳಗೇರಿ ವಾದ ಮಂಡಿಸಿದ್ದರು.