Tag: accused

  • ಹುಬ್ಬಳ್ಳಿಯಲ್ಲಿ ಆಸ್ಪತ್ರೆಗೆ ನುಗ್ಗಿ ಜನರ ಮೇಲೆ ಉಗುಳಿದಾತ ಪೊಲೀಸರ ವಶಕ್ಕೆ

    ಹುಬ್ಬಳ್ಳಿಯಲ್ಲಿ ಆಸ್ಪತ್ರೆಗೆ ನುಗ್ಗಿ ಜನರ ಮೇಲೆ ಉಗುಳಿದಾತ ಪೊಲೀಸರ ವಶಕ್ಕೆ

    ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ನಡುವೆ ಆಸ್ಪತ್ರೆಗೆ ನುಗ್ಗಿ ಜನರ ಮೇಲೆ ಉಗುಳುವ ಮೂಲಕ ಸೋಂಕು ಹರಡಲು ಯತ್ನಿಸಿದ ಕಿಡಿಗೇಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಹುಬ್ಬಳ್ಳಿ ಆಜಾದ್ ಪಾರ್ಕ್ ನಿವಾಸಿ ಇನಾಯತ್ ಉಲ್ಲಾಖಾನ್ ಈ ಕೃತ್ಯವೆಸೆಗಿದ ಆರೋಪಿ ಎಂದು ಗುರುತಿಸಲಾಗಿದೆ. ಗದಗ ರಸ್ತೆ ಇಸಿಎಸ್‍ಎಚ್ ಆಸ್ಪತ್ರೆಗೆ ಮಾರ್ಚ 3ರ ಮಧ್ಯಾಹ್ನ 1 ಗಂಟೆಗೆ ಏಕಾಏಕಿ ಪ್ರವೇಶ ಮಾಡಿದಲ್ಲದೇ, ಅಲ್ಲಿದ್ದ ಜನರ ಮೇಲೆ ಇನಾಯತ್ ಉಗುಳಿದ್ದಾನೆ. ಕೊರೊನಾ ಸೋಂಕು ಪರಸ್ಪರ ಅಂತರ ಕಾಯ್ದುಕೊಳ್ಳದೇ ಇರುವುದರಿಂದ ಹಾಗೂ ಮಾತನಾಡುವಾಗ, ಸೀನುವಾಗ ಕೆಮ್ಮುವಾಗ ಹೊರಬರುವ ದ್ರವದಿಂದಲೇ ಇನ್ನೊಬ್ಬರಿಗೆ ಹರಡುತ್ತದೆ. ಅಂಥದರಲ್ಲಿ ಇನಾಯತ್ ಜನರ ಮೇಲೆ ಉಗುಳುವ ಮೂಲಕ ಇನ್ನಷ್ಟು ಭಯ ಹುಟ್ಟಿಸಿದ್ದಾನೆ ಎಂದು ದೂರಲಾಗಿದೆ.

    ಆರೋಪಿ ಏಕಾಏಕಿ ಆಸ್ಪತ್ರಗೆ ನುಗ್ಗಿ ಜನರ ಮೇಲೆ ಉಗುಳಿ ಭೀತಿ ಹೆಚ್ಚಿಸಿದ್ದಾನೆ. ಒಂದು ವೇಳೆ ಆತನಿಗೆ ಸೋಂಕು ತಗುಲಿದ್ದರೆ ಬೇರೆಯವರಿಗೂ ಅದು ಹರಡುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ಸಿಬ್ಬಂದಿ ಯೂಹಾನನ್ ಅವರು ಕೇಶ್ವಾಪುರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ಹಿನ್ನೆಲೆ ಇನಾಯತ್ ಮೇಲೆ ಕೊರೊನಾ ಸಾಂಕ್ರಾಮಿಕ ರೋಗ ಹರಡುವ ಆರೋಪ ಅಡಿಯಲ್ಲಿ ಪ್ರಕರಣ ದಾಖಲಿಸಿ, ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗಾಗಿ ಕಿಮ್ಸ್ ಗೆ ಕಳುಹಿಸಿದ್ದಾರೆ.

    ಕೇಶ್ವಾಪುರ ಪೊಲೀಸ ಠಾಣೆಯಲ್ಲಿ ಇನಾಯತ್ ಮೇಲೆ ಐಪಿಸಿ ಸೆಕ್ಷನ್ 188, 269, 270, 448 ಅಡಿ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ – ಇಬ್ಬರು ಆರೋಪಿಗಳ ಬಂಧನ

    ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ – ಇಬ್ಬರು ಆರೋಪಿಗಳ ಬಂಧನ

    ಮಂಗಳೂರು: ಆರೋಗ್ಯ ವಿಚಾರಿಸಿದ ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ ಹಾಕಿದ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.

    ಮಾರಪ್ಪ ಪೂಜಾರಿ ಹಾಗೂ ಉಮೇಶ್ ಬಂಧಿತ ಆರೋಪಿಗಳು. ಆರೋಗ್ಯ ಇಲಾಖೆಯಲ್ಲಿ ಕೊರೊನಾ ವೈರಸ್ ತಪಾಸಣೆ ಸಂಬಂಧಿಸಿದ ಕರ್ತವ್ಯ ನಿರ್ತಹಿಸುತ್ತಿದ್ದ ಅಮ್ಟಾಡಿ ಗ್ರಾಮದ ಆಶಾ ಕಾರ್ಯಕರ್ತೆ ತುಳಸಿ(48) ಅವರಿ ಇಬ್ಬರು ಆರೋಪಿಗಳು ಜೀವ ಬೆದರಿಕೆ ಹಾಕಿದ್ದರು. ತನ್ನ ಕರ್ತವ್ಯದಂತೆ ವಿದೇಶದಿಂದ ಬಂದು ಬಂಟ್ವಾಳ ತಾಲೂಕಿನ ಕಿನ್ನಿಬೆಟ್ಟಿನಲ್ಲಿರುವ ನಿತೇಶ್ ಹಾಗೂ ಜಯಂತ್ ಎಂಬವರಿಗೆ ಕರೆ ಮಾಡಿ ತುಳಸಿ ಅವರು ಆರೋಗ್ಯ ವಿಚಾರಿಸಿದ್ದರು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ನರ್ಸ್, ಆಶಾ ಕಾರ್ಯಕರ್ತೆಯರ ಮೇಲೆ ಗ್ಯಾಂಗ್ ದಾಳಿ

    ಇಷ್ಟಕ್ಕೆ ಕೋಪಗೊಂಡ ನಿತೇಶ್ ಸಂಬಂಧಿಗಳಾದ ಮಾರಪ್ಪ ಪೂಜಾರಿ ಹಾಗೂ ಉಮೇಶ್ ಫೋನ್‍ನಲ್ಲಿಯೇ ತುಳಸಿ ಅವರಿಗೆ ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

  • ಪತ್ನಿಯನ್ನು ಹೊಗಳಿದ ಸ್ನೇಹಿತನನ್ನೇ ಕೊಂದು ರಸ್ತೆ ಬದಿ ಹೂತಿಟ್ಟ ಪತಿರಾಯ

    ಪತ್ನಿಯನ್ನು ಹೊಗಳಿದ ಸ್ನೇಹಿತನನ್ನೇ ಕೊಂದು ರಸ್ತೆ ಬದಿ ಹೂತಿಟ್ಟ ಪತಿರಾಯ

    ಗಾಂಧಿನಗರ: ಪತ್ನಿಯನ್ನು ಸ್ನೇಹಿತ ಹೊಗಳಿದಕ್ಕೆ ಸಿಟ್ಟಿಗೆದ್ದ ಪತಿ ಗೆಳೆಯನನ್ನೇ ಕೊಲೆಗೈದು, ರಸ್ತೆ ಬದಿ ಹೂತಿಟ್ಟ ಅಮಾನವೀಯ ಘಟನೆ ಗುಜರಾತ್‍ನ ರಾಜಕೋಟ್‍ನಲ್ಲಿ ಬೆಳಕಿಗೆ ಬಂದಿದೆ.

    ಸೋಮವಾರ ಈ ಘಟನೆ ನಡೆದಿದ್ದು ಬುಧವಾರ ಬೆಳಕಿಗೆ ಬಂದಿದೆ. ಖಜೂರ್ಡಿ ಗ್ರಾಮದ ನಿವಾಸಿ ರಾಕೇಶ್ ದಾಮೋರ್ ಕೊಲೆ ಮಾಡಿದ ಆರೋಪಿ. ನೀಲೇಶ್ ಮಾವಿ ಕೊಲೆಯಾದ ದುರ್ದೈವಿ. ನೀಲೇಶ್ ಸೋಮವಾರ ಖರ್ಜೂಡಿ ಗ್ರಾಮದಲ್ಲಿದ್ದ ಸ್ನೇಹಿತ ಸಂಜಯ್ ತೋಟಕ್ಕೆ ಬಂದಿದ್ದನು. ಈ ವೇಳೆ ಮಾತನಾಡುತ್ತಾ ರಾಕೇಶ್‍ನ ಪತ್ನಿಯನ್ನು ಹೊಗಳುತ್ತಿದ್ದನು. ಪದೇ ಪದೇ ಪತ್ನಿಯನ್ನು ನೀಲೇಶ್ ಹೊಗಳುತ್ತಿದ್ದದನ್ನು ಕಂಡು ರಾಕೇಶ್ ನೀಲೇಶ್ ಮೇಲೆ ಕೋಪಗೊಂಡಿದ್ದನು. ಇದೇ ಕೋಪದಲ್ಲಿ ರಾಕೇಶ್ ಸ್ನೇಹಿತ ನೀಲೇಶ್‍ನನ್ನು ಕೊಲೆ ಮಾಡಲು ನಿರ್ಧರಿಸಿದನು.

    ಸಂಜೆ ನೀಲೇಶ್‍ನನ್ನು ಮನೆಗೆ ಬಿಡುವ ನೆಪವೊಡ್ಡಿ ತನ್ನೊಡನೆ ಆತನನ್ನು ರಾಕೇಶ್ ಬೈಕ್‍ನಲ್ಲಿ ಕರೆದೊಯ್ದನು. ಮಾರ್ಗ ಮಧ್ಯೆ ಜಮುನಾನಗರ ಹೈವೇಯಲ್ಲಿ ಬೈಕ್‍ನಿಂದ ಕೆಳಗಿಳಿದು ಹಗ್ಗದಿಂದ ನೀಲೇಶ್ ಕತ್ತನ್ನು ಬಿಗಿದು ರಾಕೇಶ್ ಕೊಲೆಮಾಡಿದನು. ಬಳಿಕ ಸ್ವಲ್ಪ ದೂರ ಮೃತದೇಹವನ್ನು ಕೊಂಡೊಯ್ದು ರಸ್ತೆ ಬದಿ ಗುಂಡಿ ತೋಡಿ ಶವವನ್ನು ರಾಕೇಶ್ ಹೂತುಹಾಕಿ ಮನೆಗೆ ವಾಪಸ್ ತೆರೆಳಿದ್ದನು.

    ಇತ್ತ ನೀಲೇಶ್ ತಡರಾತ್ರಿಯಾದರೂ ಮನೆಗೆ ವಾಪಸ್ ಮರಳದಿದ್ದಾಗ ಆತನ ಮನೆಮಂದಿ ಪೊಲೀಸರ ಮೊರೆ ಹೋಗಿದ್ದು, ನೀಲೇಶ್ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದರು. ಮನೆಯವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನೀಲೇಶ್‍ಗಾಗಿ ಹುಡುಕಾಟ ನಡೆಸಿದರು. ಈ ವೇಳೆ ಕೊನೆಯದಾಗಿ ನೀಲೇಶ್ ರಾಕೇಶ್ ಜೊತೆ ಕಾಣಿಸಿಕೊಂಡಿದ್ದ ಎಂದು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದರು.

    ಪೊಲೀಸರು ರಾಕೇಶ್‍ನನ್ನು ವಿಚಾರಣೆ ನಡೆಸಿದಾಗ ಆರೋಪಿ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾನೆ. ಅಲ್ಲದೇ ನೀಲೇಶ್ ನನ್ನ ಪತ್ನಿಯನ್ನು ಪದೇ ಪದೇ ಹೊಗಳುತ್ತಿದ್ದ. ಇದರಿಂದ ನನಗೆ ಸಿಟ್ಟುಬಂದು ಆತನನ್ನು ಕೊಲೆ ಮಾಡಿ ರಸ್ತೆ ಬದಿ ಹೂತುಹಾಕಿದೆ ಎಂದು ಆರೋಪಿ ತಪ್ಪೋಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

  • ಪೊಲೀಸ್ ಮೇಲೆ ಹಲ್ಲೆಗೈದಿದ್ದ ಆರೋಪಿ ಕಾಲಿಗೆ ಗುಂಡೇಟು

    ಪೊಲೀಸ್ ಮೇಲೆ ಹಲ್ಲೆಗೈದಿದ್ದ ಆರೋಪಿ ಕಾಲಿಗೆ ಗುಂಡೇಟು

    ಬೆಂಗಳೂರು: ಸಂಜಯ ನಗರದ ಪೇದೆಗಳ ಮೇಲೆ ಹಲ್ಲೆಗೈದಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿದ್ದಾರೆ.

    ಆರೋಪಿ ತಾಜುದ್ದೀನ್ ಸಂಜಯ ನಗರದಲ್ಲಿ ಬುಧವಾರ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದ. ಈ ಸಂಬಂಧ ಆತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ರಾತ್ರಿ ಸ್ಥಳ ಮಹಜರು ಮಾಡಲು ಕರೆದೊಯ್ದಿದ್ದರು. ಈ ವೇಳೆ ತಾಜುದ್ದೀನ್ ಪೊಲೀಸರ ಮೇಲೆ ಕಲ್ಲು ಎಸೆದು ಎಸ್ಕೇಪ್ ಆಗಲು ಯತ್ನಿಸಿದ್ದ. ಇದರಿಂದಾಗಿ ಸಂಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಾಜಿ ಅವರು ಆರೋಪಿ ಮೇಲೆ ಫೈರಿಂಗ್ ಮಾಡಿದ್ದಾರೆ.

    ಘಟನೆಯಲ್ಲಿ ಮಹಿಳಾ ಪಿಎಸ್‍ಐ ರೂಪಾ ಅವರ ಕೈಗೆ ಗಂಭೀರವಾಗಿ ಗಾಯವಾಗಿದೆ. ಆರೋಪಿ ಹಾಗೂ ರೂಪಾ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ನಿನ್ನೆ ಆಗಿದ್ದೇನು?
    ಬೆಂಗಳೂರಿನ ಸಂಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ದುರ್ವರ್ತನೆ ತೋರಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಚೆಕ್ ಪೊಸ್ಟ್ ನಲ್ಲಿ ಗಾಡಿ ತಪಾಸಣೆ ಮಾಡುತ್ತಿದ್ದರು. ಅಲ್ಲದೆ ಮನೆಯಿಂದ ಹೊರಗೆ ಬಂದಿದ್ದಕ್ಕೆ ಸಾರ್ವಜನಿಕರನ್ನು ಪ್ರಶ್ನೆ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಕಿಡಿಗೇಡಿಗಳು ಪೊಲೀಸರನ್ನ ನೆಲಕ್ಕೆ ತಳ್ಳಿ ಅವರ ಮೇಲೆಯೇ ಹಲ್ಲೆಗೈದಿದ್ದರು.

    ಘಟನೆಯಿಂದಾಗಿ ಪೊಲೀಸ್ ಪೇದೆಗಳಿಗೆ ಗಾಯಗಳಾಗಿವೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ, ಪೊಲೀಸರು ಎಲ್ಲಾ ಅಪಾಯಗಳನ್ನು ಎದುರಿಸಿಕೊಂಡು ನಮಗೋಸ್ಕರ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಅವರು ವಿಶ್ರಾಂತಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದರು.

  • ವಿದ್ಯಾರ್ಥಿಗಳಿಗೆ ಗಾಂಜಾ ಮಾರುತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ- 2 ಕೆ.ಜಿ ಗಾಂಜಾ ವಶ

    ವಿದ್ಯಾರ್ಥಿಗಳಿಗೆ ಗಾಂಜಾ ಮಾರುತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ- 2 ಕೆ.ಜಿ ಗಾಂಜಾ ವಶ

    ಕಾರವಾರ: ಕಾಲೇಜು ಯುವಕರನ್ನೇ ಗುರಿಯಾಗಿಸಿಕೊಂಡು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ವಿದ್ಯಾರ್ಥಿಗಳಿಗೆ ಗಾಂಜಾ ಮಾರಲು ಬಂದಿದ್ದ ಹಾವೇರಿಯ ಶಿಗ್ಗಾಂವ್ ಮೂಲದ ಭಾಷಾ ಸಾಬ್, 15 ಜನ ವಿದ್ಯಾರ್ಥಿಗಳಿಗೆ ಮಾರಲು ಎರಡು ಕೆ.ಜಿ ಗಾಂಜವನ್ನು ಶಿರಸಿ ನಗರಕ್ಕೆ ತಂದಿದ್ದ. ಈ ವೇಳೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಗಾಂಜಾ ಪಡೆಯಲು ಬಂದಿದ್ದ ವಿದ್ಯಾರ್ಥಿಗಳು ತಪ್ಪಿಸಿಕೊಂಡಿದ್ದು, ಶಿಗ್ಗಾಂವ್ ನ ಭಾಷಾ ಸಾಬ್ ಗಾಂಜಾ ಸಮೇತ ಸಿಕ್ಕಿಬಿದ್ದಿದ್ದಾನೆ.

    ಈ ಕುರಿತು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ವಿದ್ಯಾರ್ಥಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಶಿರಸಿ ಸೇರಿದಂತೆ ಜಿಲ್ಲೆಯ ಹಲವು ಭಾಗದಲ್ಲಿ ಗಾಂಜಾ, ಬ್ರೌನ್ ಶುಗರ್ ಮಾರಾಟ ಜಾಲ ವ್ಯಾಪಕವಾಗಿದೆ. ಕಳೆದ ಮೂರು ದಿನಗಳ ಹಿಂದೆ ಬ್ರೌನ್ ಶುಗರ್ ಮಾರಾಟ ಮಾಡುತ್ತಿದ್ದ ನಾಲ್ಕು ಜನರನ್ನು ಬಂಧಿಸಿ ಎರಡು ಕೋಟಿ ರೂ. ಮೌಲ್ಯದ ಬ್ರೌನ್ ಶುಗರ್ ವಶಪಡಿಸಿಕೊಳ್ಳುವ ಮೂಲಕ ಜಿಲ್ಲಾ ಪೊಲೀಸರು ಮಾದಕ ವಸ್ತು ಸಾಗಾಟಗಾರರ ಹೆಡೆಮುರಿ ಕಟ್ಟಿದ್ದರು.

  • ಕೆಲಸದಿಂದ ತೆಗೆದಿದ್ದಕ್ಕೆ ಕೊಲೆಗೆ ಯತ್ನಿಸಿದ್ದ ಆರೋಪಿಗಳು ಅರೆಸ್ಟ್

    ಕೆಲಸದಿಂದ ತೆಗೆದಿದ್ದಕ್ಕೆ ಕೊಲೆಗೆ ಯತ್ನಿಸಿದ್ದ ಆರೋಪಿಗಳು ಅರೆಸ್ಟ್

    ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮಾಲೀಕನನ್ನು ಕೊಲೆ ಮಾಡಲು ಯತ್ನಿಸಿದ್ದ ನಾಲ್ವರನ್ನ ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಆರೋಪಿಗಳಾದ ಪ್ರೇಮ್ ಕುಮಾರ್, ಸುನೀಲ್, ವಿನೋದ್, ಕಿರಣ್ ಸೇರಿ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಸುನೀಲ್, ವಿನೋದ್, ಕಿರಣ್ ಮೂವರು ಕೂಡ ಶೇಖರ್ ಗೌಡ ಎಂಬವರ ಬಳಿ ಕೆಲಸ ಮಾಡುತ್ತಿದ್ದರು. ಆದರೆ ಶೇಖರ್ ಗೌಡ ಹಾಗೂ ಆರೋಪಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಕೆಲಸದಿಂದ ತೆಗೆದಿದ್ದರು. ಇದೇ ಕಾರಣಕ್ಕೆ ಆರೋಪಿಗಳು ಶೇಖರ್ ಗೌಡರ ಕೊಲೆ ಮಾಡಲು ಮುಂದಾಗಿದ್ದರು. ಶೇಖರ್ ಅವರನ್ನು ಮುಗಿಸಿ ಅವರ ಬಳಿ ಇದ್ದ ನಗದು ಹಾಗೂ ಚಿನ್ನಾಭರಣವನ್ನ ದೋಚಲು ಹೊಂಚು ಹಾಕಿದ್ದರು.

    ಆರೋಪಿಗಳು ಮಂಗಳವಾರ ರಾತ್ರಿ ಕುರುಬರ ಹಳ್ಳಿ ಬಳಿ ಇರುವ ಕೆಂಪೇಗೌಡ ಆಟದ ಮೈಧಾನದ ಬಳಿ ಕತ್ತಲ್ಲಿನಲ್ಲಿ ಶೇಖರ್ ಗೌಡರ ಮೇಲೆ ಹಲ್ಲೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಈ ಬಗ್ಗೆ ತಿಳಿದ ಸಿಸಿಬಿ ಪೊಲೀಸರು ದಾಳಿ ಮಾಡಿ ನಾಲ್ವರನ್ನ ಬಂಧಿಸಿದ್ದಾರೆ. ಆರೋಪಿಗಳು ಕೆಲಸ ಬಿಸಿಡಿದ್ದನ್ನೇ ನೆಪ ಮಾಡಿಕೊಂಡು ಆರೋಪಿಗಳು ಶೇಖರ್ ಗೌಡರಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ, ಹಣ, ಚಿನ್ನವನ್ನ ದೋಚುವುದಕ್ಕೆ ಯತ್ನಸಿರುವ ಬಗ್ಗೆ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.

    ಸದ್ಯ ಆರೋಪಿಗಳ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಹಾಗೂ ಶೇಖರ್ ಗೌಡ ನಡುವೆ ಯಾಕೆ ಗಲಾಟೆ ನಡೆದಿತ್ತು? ಇನ್ನಿತರೆ ವಿಚಾರದ ಕುರಿತು ಪೊಲೀಸರು ಆರೋಪಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

  • 9.65 ಲಕ್ಷ ರೂ. ಮೌಲ್ಯದ ಗೋಲ್ಡ್ ಬಿಸ್ಕೆಟ್ ಮಾರಲು ಹೋದ ಏರ್‌ಪೋರ್ಟ್ ಸಿಬ್ಬಂದಿ ಅಂದರ್

    9.65 ಲಕ್ಷ ರೂ. ಮೌಲ್ಯದ ಗೋಲ್ಡ್ ಬಿಸ್ಕೆಟ್ ಮಾರಲು ಹೋದ ಏರ್‌ಪೋರ್ಟ್ ಸಿಬ್ಬಂದಿ ಅಂದರ್

    ಬೆಂಗಳೂರು: ಸುಮಾರು 9.65 ಲಕ್ಷ ರೂ. ಮೌಲ್ಯದ ಎರಡು ಗೋಲ್ಡ್ ಬಿಸ್ಕೆಟ್ ಮಾರಲು ಹೋದ ಏರ್‌ಪೋರ್ಟ್ ಸಿಬ್ಬಂದಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೌಚಾಲಯ ಸ್ವಚ್ಚತೆ ಕೆಲಸ ಮಾಡುವ ಅಂಜಪ್ಪ ಬಂಧಿತ ಆರೋಪಿ. ಅಂಜಪ್ಪ ಚಿಂತಾಮಣಿ ತಾಲೂಕು ಶೆಟ್ಟಿಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಚಿಂತಾಮಣಿ ನಗರದ ಬಾಲಾಜಿ ಜ್ಯೂವೆಲ್ಲರ್ಸ್‍ನಲ್ಲಿ ತನ್ನ ಬಳಿ ಇದ್ದ ಚಿನ್ನದ ಬಿಸ್ಕೆಟ್‍ಗಳನ್ನು ಮಾರಾಟ ಮಾಡಲು ಮುಂದಾಗಿದ್ದನು. ಸುಮಾರು 9.65 ಲಕ್ಷ ರೂ. ಮೌಲ್ಯದ 232 ಗ್ರಾಂ ತೂಕದ ಎರಡು ಚಿನ್ನದ ಬಿಸ್ಕೆಟ್ ಗಳನ್ನು ಮಾರಾಟ ಮಾಡಲು ಅಂಜಪ್ಪ ಹೋಗಿದ್ದನು.

    ಈ ವೇಳೆ ಅನುಮಾನಗೊಂಡ ಚಿನ್ನದಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಚಿಂತಾಮಣಿ ಪೊಲೀಸರು ಅಂಜಪ್ಪನನ್ನು ಬಂಧಿಸಿದ್ದಾರೆ. ಅಲ್ಲದೇ ಅಂಜಪ್ಪ ಬಳಿ ಒಟ್ಟು 6 ಚಿನ್ನದ ಬಿಸ್ಕೆಟ್‍ಗಳು ಪತ್ತೆಯಾಗಿದೆ. ಏರ್‌ಪೋರ್ಟ್‌ನಲ್ಲಿ ಅಪರಿಚಿತ ವ್ಯಕ್ತಿಗಳು ತನಗೆ ಚಿನ್ನದ ಬಗ್ಗೆ ಮಾಹಿತಿ ಕೊಟ್ಟಿದ್ದರು ಎಂದನು. ಕಸ್ಟಮ್ಸ್ ಅಧಿಕಾರಿಗಳಿಗೆ ಹೆದರಿ ಅಂಜಪ್ಪಗೆ ಅಪರಿಚಿತರು ಚಿನ್ನದ ಬಿಸ್ಕೆಟ್ ನೀಡಿ ಪರಾರಿಯಾಗಿದ್ದರು. ಏರ್‌ಪೋರ್ಟ್‌ನಿಂದ ಹೊರಬಂದ ಬಳಿಕ ಚಿನ್ನವನ್ನು ವಾಪಸ್ ಕೊಡುವಂತೆ ಹೇಳಿದ್ದರು, ಆದರೆ ಅಂಜಪ್ಪ ಚಿನ್ನವನ್ನು ವಾಪಸ್ ಕೊಡದೆ ತಾನೇ ಇಟ್ಟುಕೊಂಡಿದ್ದನು.

  • ಸುಧಾಮೂರ್ತಿ ಸಹಿ ಫೋರ್ಜರಿ ಪ್ರಕರಣ- ಹೈದರಾಬಾದ್ ಟೆಕ್ಕಿ ಬಂಧನ

    ಸುಧಾಮೂರ್ತಿ ಸಹಿ ಫೋರ್ಜರಿ ಪ್ರಕರಣ- ಹೈದರಾಬಾದ್ ಟೆಕ್ಕಿ ಬಂಧನ

    ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರ ಹೆಸರಿನಲ್ಲಿ ನಕಲಿ ಲೆಡರ್ ಹೆಡ್ ಸೃಷ್ಟಿಸಿ, ಫೋರ್ಜರಿ ಸಹಿ ಮಾಡಿದ್ದ ಆರೋಪಿಯನ್ನು ಬಂಧನ ಮಾಡಲಾಗಿದೆ.

    ಹೈದರಾಬಾದ್ ಮೂಲದ ಟೆಕ್ಕಿ ಎಲ್.ಸಾಯಿಕೃಷ್ಣ ಬಂಧಿತ ಆರೋಪಿ. ಕಳೆದ ವರ್ಷ ಫೆಬ್ರವರಿ 26ರಂದು ಟೆಕ್ಕಿ ಸಾಯಿಕೃಷ್ಣ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಆಫರ್ಸ್ ನಿಯರ್ ಬೈ ಎಂಬ ಮೊಬೈಲ್ ಅಪ್ಲಿಕೇಶನ್ ಬ್ರಾಂಡ್ ಅಂಬಾಸಿಡರ್ ಆಗುವಂತೆ ಟಾಲಿವುಡ್ ಸ್ಟಾರ್ ನಟ ವಿಜಯ ದೇವರಕೊಂಡ ಅವರಿಗೆ ಸುಳ್ಳು ಮಾಹಿತಿ ನಮೂದಿಸಿ ರಿಜಿಸ್ಟರ್ ಪೋಸ್ಟ್ ಮಾಡಿದ್ದ.

    ತನ್ನ ಅಪ್ಲೀಕೇಶನ್‍ಗೆ ಬ್ರಾಂಡ್ ಅಂಬಾಸಿಡರ್ ಆಗುವಂತೆ ತೆಲುಗು ನಟ ವಿಜಯದೇವರ ಕೊಂಡ ಅವರಿಗೆ ಪತ್ರ ಬರೆದಿದ್ದ ಟೆಕ್ಕಿ, ಇದಕ್ಕೆ ಇನ್ಫೋಸಿಸ್ ಸುಧಾಮೂರ್ತಿ ಫೋರ್ಜರಿ ಸಹಿ ಮಾಡಿ ಪೋಸ್ಟ್ ಮಾಡಿದ್ದ. ಆದ್ದರಿಂದ ಆರೋಪಿ ವಿರುದ್ಧ ಕ್ರಮ ಕ್ರಮಕೈಗೊಳ್ಳುವಂತೆ ಇನ್ಫೋಸಿಸ್ ಪೌಂಡೇಷನ್ ಕಚೇರಿಯ ಲೆ.ಕರ್ನಲ್ ರಮೇಶ್ ಪೊಲೀಸರಿಗೆ ದೂರು ನೀಡಿದ್ದರು.

    ದೂರಿನ ಹಿನ್ನೆಲೆ ಐಪಿಸಿ ಸೆಕ್ಸನ್ 419, 465, 471, 468 ಅಡಿ ಪ್ರಕರಣ ದಾಖಲಾಗಿತ್ತು. ಸುಧಾಮೂರ್ತಿ ಅವರು ಸೈನ್ ಹಾಕಿ ಕಳಿಸಿದ್ದಾರೆ ಎಂದರೆ ವಿಜಯ್ ದೇವರಕೊಂಡ ಒಪ್ಪಿಕೊಳ್ಳುತ್ತಾರೆ ಎಂಬ ದೃಷ್ಟಿಯಲ್ಲಿ ಲೆಟರ್ ಹೆಡ್ ತಯಾರಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

  • ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಕೊಲೆ ಆರೋಪಿ ಮೇಲೆ ಪೊಲೀಸರಿಂದ ಶೂಟೌಟ್

    ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಕೊಲೆ ಆರೋಪಿ ಮೇಲೆ ಪೊಲೀಸರಿಂದ ಶೂಟೌಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ್ ಗುಂಡೇಟಿನ ಸದ್ದು ಕೇಳಿಬಂದಿದ್ದು, ಕೊಲೆ ಆರೋಪಿ ಮೇಲೆ ಬಾಗಲೂರು ಠಾಣಾ ಇನ್ಸ್‌ಪೆಕ್ಟರ್  ಗುಂಡು ಹಾರಿಸಿದ್ದಾರೆ.

    ರವಿ ಅಲಿಯಾಸ್ ಕಮ್ರಾನ್ ರವಿ ಮೇಲೆ ಬಾಗಲೂರು ಪೊಲೀಸ್ ಇನ್ಸ್‌ಪೆಕ್ಟರ್ ಬಿ. ರಾಮಮೂರ್ತಿ ಅವರು ಗುಂಡು ಹಾರಿಸಿದ್ದಾರೆ. ನಗರದ ಕೋಗಿಲು ಕ್ರಾಸ್ ಬಳಿ ಈ ಘಟನೆ ನಡೆದಿದೆ. ಕಮ್ರಾನ್ ರವಿ ಮಾರ್ಚ್ 10ರಂದು ಮಿಟ್ಟಗಾನಹಳ್ಳಿ ಬಳಿ ನಡೆದಿದ್ದ ಉಮಾಶಂಕರ್ ಅಲಿಯಾಸ್ ದೊಂಗನ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಉಮಾಶಂಕರನನ್ನ ಕೊಲೆಗೈದು ಆಕ್ಸಿಡೆಂಟ್ ಮಾದರಿಯಲ್ಲಿ ಬಿಂಬಿಸಲು ಆರೋಪಿ ಯತ್ನಿಸಿದ್ದನು. ಆದರೆ ಉಮಾಶಂಕರ್ ಪತ್ನಿ ಧನಲಕ್ಷ್ಮೀ ಹೇಳಿಕೆ ಅನ್ವಯ ಬಾಗಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

    ಹೀಗಾಗಿ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಕೋಗಿಲು ಕ್ರಾಸ್ ಬಳಿ ಆರೋಪಿಗಳಾದ ರವಿ ಹಾಗೂ ರಾಜೇಶ್ ಇರುವ ಮಾಹಿತಿ ಲಭ್ಯವಾದ ಹಿನ್ನೆಲೆ ಸ್ಥಳಕ್ಕೆ ಪೊಲೀಸರು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ರವಿ ಮುಂದಾಗಿದ್ದು, ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಬಿ. ರಾಮಮೂರ್ತಿ ಅವರು ಆರೋಪಿ ಕಾಲಿಗೆ ಗುಮಡು ಹೊಡೆದು ಬಂಧಿಸಿದ್ದಾರೆ. ಸದ್ಯ ಗಾಯಗೊಂಡ ಆರೋಪಿಗಳನ್ನು ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಬಿಜೆಪಿ ಮುಖಂಡನ ಹತ್ಯೆಗೆ ಅಸಲಿ ಕಾರಣ ಬಿಚ್ಚಿಟ್ಟ ಆರೋಪಿ

    ಬಿಜೆಪಿ ಮುಖಂಡನ ಹತ್ಯೆಗೆ ಅಸಲಿ ಕಾರಣ ಬಿಚ್ಚಿಟ್ಟ ಆರೋಪಿ

    – ಆರೋಪಿ ಅಕ್ಕನ ಬಗ್ಗೆ ಬಳಸಿದ ಪದವೇ ಕೊಲೆಗೆ ಕಾರಣ

    ಮೈಸೂರು: ಮೈಸೂರಿನಲ್ಲಿ ಮಾರ್ಚ್ 6 ರಂದು ಹುಟ್ಟುಹಬ್ಬದ ಪಾರ್ಟಿಯಲ್ಲೇ ನಡೆದಿದ್ದ ಬಿಜೆಪಿ ಮುಖಂಡ ಆನಂದ್ ಬರ್ಬರ ಹತ್ಯೆಗೆ ಅಸಲಿ ಕಾರಣ ಈಗ ಸ್ಪಷ್ಟವಾಗಿದೆ.

    ಆನಂದ್ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ ಬಸವರಾಜ್ ಕೊಲೆಗೆ ಕಾರಣ ಬಿಚ್ಚಿಟ್ಟಿದ್ದಾನೆ. ಆರೋಪಿ ಬಸವರಾಜ್ ನ ಅಕ್ಕನ ಬಗ್ಗೆ ಕೊಲೆಯಾದ ಆನಂದ್ ಕೆಟ್ಟದಾಗಿ ಮಾತನಾಡಿದ್ದೇ ಆತನ ಕೊಲೆಗೆ ಕಾರಣವಾಗಿದೆ. ಆರೋಪಿ ಬಸವರಾಜ್, ರಾ ಎಣ್ಣೆ ಕುಡಿದು ಅದೇ ಬಾಟಲ್‍ನಲ್ಲಿ ಆನಂದ್ ಬುರುಡೆ ಬಿಚ್ಚಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

    ಮಾರ್ಚ್ 5ರ ಸಂಜೆ ಬಸವರಾಜ್‍ಗೆ ಕರೆ ಮಾಡಿ ಆನಂದ್ ಪಾರ್ಟಿಗೆ ಕರೆಸಿಕೊಂಡಿದ್ದ. ಮಧ್ಯರಾತ್ರಿಯವರೆಗೆ ಪಾರ್ಟಿ ಮಾಡಿದ್ದರು. ಕುಡಿದಾಗ ಬಾಸ್‍ನಂತೆ ವರ್ತಿಸುತ್ತಿದ್ದ ಬಿಜೆಪಿ ಮುಖಂಡ ಆನಂದ್, ತನ್ನ ಸುತ್ತಮುತ್ತ ಇದ್ದವರನ್ನು ನಿಂದಿಸುತ್ತ ತಾನು ಹೇಳಿದ ಕೆಲಸ ಮಾಡುವಂತೆ ಸೂಚಿಸುತ್ತಿದ್ದ. ಅಲ್ಲದೆ ಈ ಹಿಂದೆಯೂ ಪಾರ್ಟಿ ಕೊಡಿಸಿ ಬಸವರಾಜ್ ಮೇಲೆ ಆನಂದ್ ಹಲ್ಲೆ ಮಾಡಿದ್ದ.

    ಈ ಬಾರಿಯೂ ಹುಟ್ಟುಹಬ್ಬದ ದಿನ ಪಾರ್ಟಿಯಲ್ಲಿ ಮಧ್ಯರಾತ್ರಿ ಬಸವರಾಜ್ ಜೊತೆ ಆನಂದ್ ಕುಚೇಷ್ಠೆ ಮಾಡಿ, ಬಸವರಾಜ್ ತಲೆ ಮೇಲೆ ಹೊಡೆದು ಅವರ ಅಕ್ಕನ ಬಗ್ಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಆನಂದ್ ಮಾತಿನಿಂದ ಸಿಟ್ಟಿಗೆದ್ದ ಬಸವರಾಜ್ ಅರ್ಧ ಬಾಟೆಲ್ ರಾ ಎಣ್ಣೆಯನ್ನು ಕುಡಿದು, ಅದೇ ಬಾಟಲ್‍ನಿಂದಲೇ ಆನಂದ್ ತಲೆಗೆ ಹೊಡೆದಿದ್ದಾನೆ. ಒಂದೇ ಏಟಿಗೆ ಆನಂದ್ ತಲೆ ಹಾಗೂ ಬಾಟಲ್ ಎರಡು ಓಪನ್ ಆಗಿದೆ. ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದಾನೆ. ಆಗ ಜೇಬಿನಲ್ಲಿದ್ದ ಚಾಕುವಿನಿಂದ ಆನಂದ್‍ಗೆ ಹಿಗ್ಗಾಮುಗ್ಗ ಇರಿದು ಕೊಲೆ ಮಾಡಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಕೊಲೆ ನಂತರ ಅಪಾರ್ಟ್‌ಮೆಂಟ್‌ ನಿಂದ ಮನೆಗೆ ತೆರಳಿ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಮಾರ್ಚ್ 6ರಂದೆ ಬೆಂಗಳೂರಿಗೆ ತೆರಳಿದ್ದಾನೆ. ನಂತರ ಸ್ನೇಹಿತರ ಸಲಹೆಯಂತೆ ತಾನೇ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ.