Tag: accused

  • ಅತ್ಯಾಚಾರ, ಕೊಲೆ ಆರೋಪಿ ಕೋವಿಡ್ ಆಸ್ಪತ್ರೆಯಿಂದ ಪರಾರಿ

    ಅತ್ಯಾಚಾರ, ಕೊಲೆ ಆರೋಪಿ ಕೋವಿಡ್ ಆಸ್ಪತ್ರೆಯಿಂದ ಪರಾರಿ

    ಮಂಡ್ಯ: ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಜಿಲ್ಲೆಯ ಕೋವಿಡ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

    ಮಂಡ್ಯ ಮಿಮ್ಸ್ ಆಸ್ಪತ್ರೆಯ ಜೈಲು ವಾರ್ಡಿನಿಂದ ಆರೋಪಿ ಎಸ್ಕೇಪ್ ಆಗಿದ್ದಾನೆ. ಪರಾರಿಯಾಗಿರುವ ಆರೋಪಿಯನ್ನು ಜಿಲ್ಲೆಯ ಕೀಲಾರ ಗ್ರಾಮದ ಕುಮಾರ್ ಎಂದು ಗುರುತಿಸಲಾಗಿದೆ. ಕುಮಾರ್ ಭಿಕ್ಷುಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದು, ನಂತರ ಕೊಲೆ ಮಾಡಿದ್ದ ಪ್ರಕರಣದ ಆರೋಪಿಯಾಗಿದ್ದನು.

    ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಆರೋಪಿ ಕುಮಾರ್ ಗೆ  ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ಹೀಗಾಗಿ ಕೊರೊನಾ ಇರುವುದರಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಂದರ್ಭದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಆರೋಪಿ ಪರಾರಿಯಾಗಿದ್ದಾನೆ.

    ಸದ್ಯಕ್ಕೆ ಮಂಡ್ಯ ಪೂರ್ವ ಪೊಲೀಸ್ ಠಾಣಾ ಪೊಲೀಸರಿಂದ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ಗಲಭೆಕೋರರು 1 ಸಾವಿರ ಕಿಮೀ ದೂರ ಹೋದ್ರೂ ಬಂಧಿಸುತ್ತೇವೆ: ಪ್ರವೀಣ್ ಸೂದ್

    ಗಲಭೆಕೋರರು 1 ಸಾವಿರ ಕಿಮೀ ದೂರ ಹೋದ್ರೂ ಬಂಧಿಸುತ್ತೇವೆ: ಪ್ರವೀಣ್ ಸೂದ್

    ಕೋಲಾರ: ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಗಳಲ್ಲಿ ಭಾಗಿಯಾದವರು ಎಷ್ಟೇ ದೂರ ಹೋದರು ಸಹ ಅವರಿಗೆ ಶಿಕ್ಷೆ ನೀಡಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

    ಕೋಲಾರಕ್ಕೆ ಭೇಟಿ ನೀಡಿ ನಗರದ ಹೊರ ವಲಯದ ಟಮಕ ಬಳಿಯ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆ ಮಾಡಿ ನಂತರ ಕೋಲಾರಕ್ಕೆ ಬಂದಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ನಿಮ್ಮ ಕೋಲಾರವೇ ಅಲ್ಲ 1 ಸಾವಿರ ಕಿಮೀ ಹೋಗಿದ್ದರೂ ಸಹ ಅವರನ್ನು ಬಂಧಿಸಲಾಗುವುದು ಎಂದು ಹೇಳಿದರು.

    ಅಂದು ರಾತ್ರಿ ಗಲಭೆಯಲ್ಲಿ ತೊಡಗಿದವರ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಭಾಗಿಯಾದವರು ಕೋಲಾರದಲ್ಲಿ ತಲೆ ಮರೆಸಿಕೊಂಡಿರುವ ಕುರಿತು ವರದಿಗಳು ಬಂದಿವೆ. ಕೋಲಾರ ಅಲ್ಲ ರಾಜ್ಯದ ಯಾವುದೇ ಮೂಲೆಗೆ ಹೋದರೂ ಸಹ ಬಿಡುವುದಿಲ್ಲ. ಅವರನ್ನು ಬಂಧಿಸಲಾಗುವುದು ಎಂದರು. ಕೋಲಾರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲಾಗುವುದು, ಈಗಾಗಲೇ ಪೊಲೀಸ್ ಪೇದೆ ಹಾಗೂ ಪಿಎಸ್‍ಐ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು, ಮುಂದಿನ ತಿಂಗಳು ಪರೀಕ್ಷೆ ನಡೆಯುತ್ತದೆ ಎಂದು ತಿಳಿಸಿದರು.

    ನರಸಾಪುರ ಸೇರಿದಂತೆ ಕೋಲಾರ ಜಿಲ್ಲೆಯ ಕೆಲ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲು ಚಿಂತನೆ ನಡೆಯುತ್ತಿದೆ. ರಾಜ್ಯದಲ್ಲಿ ಕೋವಿಡ್ ಆರಂಭ ನಂತರ ಪೊಲೀಸ್ ಸಿಬ್ಬಂದಿ ಸಾಕಷ್ಟು ಶ್ರಮವಹಿಸಿದೆ ಜೊತೆಗೆ ಕೆಲವರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಅವರಿಗೆ ಪೊಲೀಸ್ ಇಲಾಖೆ ಕೃತಜ್ಞತೆ ತಿಳಿಸುತ್ತೇವೆ ಎಂದರು. ಇದೆ ವೇಳೆ ಕೇಂದ್ರ ವಲಯದ ಐಜಿ ಸೀಮಂತ್ ಕುಮಾರ್ ಸಿಂಗ್, ಕೋಲಾರ ಎಸ್‍ಪಿ ಕಾರ್ತಿಕ್ ರೆಡ್ಡಿ, ಕೆಜಿಎಫ್ ಎಸ್‍ಪಿ ಇಲಕ್ಕೀಯಾ ಕರುಣಾಗರನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

  • ಬಂಧಿಸಲು ಹೋದ ಪೊಲೀಸರ ಮೇಲೆ ಬಾಂಬ್ ಎಸೆದ – ಪೇದೆ ಸಾವು, ಡಬಲ್ ಕೊಲೆಗಾರನೂ ಬಲಿ

    ಬಂಧಿಸಲು ಹೋದ ಪೊಲೀಸರ ಮೇಲೆ ಬಾಂಬ್ ಎಸೆದ – ಪೇದೆ ಸಾವು, ಡಬಲ್ ಕೊಲೆಗಾರನೂ ಬಲಿ

    – ಡಬಲ್ ಮರ್ಡರ್ ಆರೋಪಿ ಕೈಯಲ್ಲೇ ಬಾಂಬ್ ಸ್ಫೋಟ

    ಚೆನ್ನೈ: ಡಬಲ್ ಮರ್ಡರ್ ಆರೋಪಿಯನ್ನು ಹಿಡಿಯಲು ಹೋಗಿದ್ದ ವಿಶೇಷ ಪೊಲೀಸ್ ತಂಡದ ಮೇಲೆ ಆರೋಪಿ ದೇಶಿ ಬಾಂಬ್ ದಾಳಿ ನಡೆಸಿದ್ದಾನೆ. ಪರಿಣಾಮ ಪೊಲೀಸ್ ಕಾನ್‍ಸ್ಟೇಬಲ್ ಓರ್ವ ಮೃತಪಟ್ಟಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮನಕ್ಕರೈನಲ್ಲಿ ಕರ್ತವ್ಯದಲ್ಲಿದ್ದ ಸುಬ್ರಮಣ್ಯಂ ಮೃತ ಪೊಲೀಸ್ ಕಾನ್‍ಸ್ಟೇಬಲ್. ವಿಶೇಷ ಪೊಲೀಸ್ ತಂಡದ ಮೇಲೆ ಆರೋಪಿ ಎಸೆದ ಎರಡು ಬಾಂಬ್‍ಗಳಲ್ಲಿ ಎರಡನೇ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಕಾನ್‍ಸ್ಟೇಬಲ್ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಜವರ್ತಿರುನಗರಿ ಪೊಲೀಸ್ ಠಾಣೆಗೆ ಸುಬ್ರಮಣ್ಯಂ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾನ್‍ಸ್ಟೇಬಲ್ ಸುಬ್ರಮಣ್ಯಂ ಪತ್ನಿ ಮತ್ತು ಅವರ 6 ತಿಂಗಳ ಮಗುವನ್ನು ಅಗಲಿದ್ದಾರೆ.

    ಆರೋಪಿಯನ್ನು ಮೇಲಮಂಗಲಕುರಿಚಿ ಮೂಲದ ದುರೈ ಮುತ್ತು ಎಂದು ಗುರುತಿಸಲಾಗಿದೆ. ಆರೋಪಿ ಬಾಂಬುಗಳನ್ನು ಎಸೆಯುವಾಗ ಕೈಯಲ್ಲೇ ಬಾಂಬ್ ಸ್ಫೋಟಗೊಂಡು ಕೈಗಳಿಗೆ ಗಂಭೀರವಾಗಿ ಗಾಯಗಳಾಗಿತ್ತು. ತಕ್ಷಣ ಆತನನ್ನು ಸಮೀಪದ ತಿರುನೆಲ್ವೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆರೋಪಿಯೂ ಸಾವನ್ನಪ್ಪಿದ್ದಾನೆ.

    ದುರೈ ಮುತ್ತು ವಿರುದ್ಧ ಎರಡು ಕೊಲೆ ಪ್ರಕರಣಗಳು ದಾಖಲಾಗಿದ್ದವು. ತಲೆಮರೆಸಿಕೊಂಡಿದ್ದ ಆರೋಪಿ ದುರೈ ಮುತ್ತುನನ್ನು ಪೊಲೀಸರು ಹುಡುಕುತ್ತಿದ್ದರು. ಆತನನ್ನು ಬಂಧಿಸಲು ಸಬ್ ಇನ್ಸ್‌ಪೆಕ್ಟರ್ ಮುರುಗ ಪೆರುಮಾಳ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ವಿಶೇಷ ತಂಡವು ದುರೈ ಮುತ್ತು ಆತನ ಸಹೋದರ ಮತ್ತು ಇತರ ಸಹಚರರೊಂದಿಗೆ ಅಡಗಿಕೊಂಡಿದ್ದ ಸ್ಥಳವನ್ನು ತಲುಪಿದೆ. ಈ ವೇಳೆ ದುರೈ ಮುತ್ತು ಪೊಲೀಸ್ ತಂಡದ ಮೇಲೆ ದೇಶಿ ಬಾಂಬುಗಳನ್ನು ಎಸೆದಿದ್ದಾನೆ ಎಂದು ತಿಳಿದುಬಂದಿದೆ.

    ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಕಾನ್‍ಸ್ಟೇಬಲ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಸುಬ್ರಮಣ್ಯಂ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗದ ನೀಡುವ ಭರವಸೆ ನೀಡಿದ್ದಾರೆ.

  • ಬೆಂಗ್ಳೂರು ಗಲಭೆ ವೇಳೆ ಸಿಕ್ಕ ಓರ್ವ ಆರೋಪಿಗೆ ಐಸಿಸ್ ನಂಟಿದೆ: ಮುತಾಲಿಕ್

    ಬೆಂಗ್ಳೂರು ಗಲಭೆ ವೇಳೆ ಸಿಕ್ಕ ಓರ್ವ ಆರೋಪಿಗೆ ಐಸಿಸ್ ನಂಟಿದೆ: ಮುತಾಲಿಕ್

    – ಸೂಕ್ತ ತನಿಖೆಯಾಗಬೇಕು

    ಧಾರವಾಡ: ಬೆಂಗಳೂರು ಗಲಾಟೆಯ ಆರೋಪಿಯೋರ್ವನಿಗೆ ಐಸಿಸ್ ನಂಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ ಆಗ್ರಹಿಸಿದ್ದಾರೆ.

    ಧಾರವಾಡದಲ್ಲಿ ಈ ಸಂಬಂಧ ಪತ್ರಿಕ್ರಿಯೆ ನೀಡಿರುವ ಅವರು, ಬೆಂಗಳೂರು ಗಲಭೆಯ ಆರೋಪಿಯೊಬ್ಬನಿಗೆ ಐಸಿಸ್ ನಂಟು ಇರುವುದು ಬೆಳಕಿಗೆ ಬಂದಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯಾಗಬೇಕಿದೆ. ಈ ರೀತಿಯ ಗಲಾಟೆಯ ಸಾಕಷ್ಟು ಪ್ರಕ್ರಿಯೆಗಳು ನಮ್ಮ ಕರ್ನಾಟಕದಲ್ಲಿ ಆಗಿವೆ. ಈಗ ಅದೆನ್ನೆಲ್ಲವನ್ನೂ ಶೋಧನೆ ಮಾಡಬೇಕು ಎಂದರು.

    ಬೆಂಗಳೂರಿನಲ್ಲಿ ಗಲಾಟೆಗಳು ನಡೆದ ಬಳಿಕ ಮಾತ್ರವೇ ಸರ್ಕಾರ, ಪೊಲೀಸರು ಮತ್ತು ಗುಪ್ತಚರ ಇಲಾಖೆ ಜಾಗೃತ ಆಗುತ್ತದೆ. ಆದರೆ ನಿತ್ಯ 24 ಗಂಟೆಯೂ ಸರ್ಕಾರ, ಪೊಲೀಸರು ಮತ್ತು ಗುಪ್ತಚರ ಇಲಾಖೆ ಕಣ್ಣು, ಕಿವಿ ತೆರೆದು ಕೆಲಸ ಮಾಡಬೇಕಿದೆ. ಇಂಥಹ ಧಂಗೆಕೋರರನ್ನು ಹದ್ದುಬಸ್ತಿನಲ್ಲಿಡಬೇಕಿದೆ. ಇಲ್ಲದೇ ಹೋದಲ್ಲಿ ಮುಂದೆ ಅನಾಹುತಗಳು ತಪ್ಪಿದ್ದಲ್ಲ ಎಂದು ಹೇಳಿದ್ದಾರೆ.

  • ರೌಡಿಶೀಟರ್ ಇರ್ಫಾನ್ ಹತ್ಯೆ- ಐವರು ಆರೋಪಿಗಳು ಅರೆಸ್ಟ್‌

    ರೌಡಿಶೀಟರ್ ಇರ್ಫಾನ್ ಹತ್ಯೆ- ಐವರು ಆರೋಪಿಗಳು ಅರೆಸ್ಟ್‌

    – ಸಜೀವ ಗುಂಡು, ಬೈಕ್ ಕಾರು ವಶ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಬೆಚ್ಚಿಬೀಳಿಸಿದ ಶೂಟೌಟ್ ಪ್ರಕರಣವನ್ನು ಬೆನ್ನಟ್ಟಿದ ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸರು ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

    ಧಾರವಾಡ ಫ್ರೂಟ್ ಇರ್ಫಾನ್ ಎಂಬುವ ರೌಡಿಶೀಟರ್ ಅನ್ನು ಹಳೇ ಹುಬ್ಬಳ್ಳಿ ಅಲ್ತಾಜ್ ಸಭಾ ಭವನ ಬಳಿ ಆಗಸ್ಟ್ 6ರಂದು ಗುಂಡಿನ ಮಳೆಗೆರೆದು ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಎಸ್ಕೇಪ್ ಆಗಲು ನೆರವಾಗಿದ್ದ ಮತ್ತು ಕೃತ್ಯದಲ್ಲಿ ಭಾಗಿಯಾಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

    ಬುಲೆಟ್ ಚಲಾಯಿಸಿದ ಧಾರವಾಡದ ಅಫ್ತಾಬ್ ಬೇಪಾರಿ, ಡಿಯೋ ಚಲಾಯಿಸಿದ ತೌಸೀಫ್, ಕಾರು ಚಾಲನೆ ಮಾಡಿದ್ದ ಅಮೀರ್ ತಮಟಗಾರ, ಆರೋಪಿಗಳಿಗೆ ಹಣ ನೀಡಿದ್ದನೆನ್ನಲಾಗಿರುವ ಮೊಹೀನ್ ಪಟೇಲ್ ಹಾಗೂ ಇನ್ನೊಬ್ಬ ಅತಿಯಾಬಖಾನ್ ತಡಕೋಡ ನನ್ನು ಬಂಧಿಸಲಾಗಿದೆ. ಫ್ರೂಟ್ ಇರ್ಫಾನ್ ಮೇಲೆ ಗುಂಡು ಹಾರಿಸಿದವರು ಮುಂಬೈನಿಂದ ಬಂದಿದ್ದ ಬಾಡಿಗೆ ಹಂತಕರು ಎನ್ನಲಾಗಿದೆ. ಅವರು ಪರಾರಿಯಾಗಿದ್ದು, ಅವರನ್ನು ಹಿಡಿಯಲು ಶೋಧ ಮುಂದುವರಿದಿದೆ.

    ಹತ್ಯೆಗೈದು ಪರಾರಿಯಾಗಲು ನೆರವಾದ ಸ್ಥಳೀಯ ತಂಡಕ್ಕೆ ಮೊಮಿನ್ 3 ಲಕ್ಷ ರೂ. ಹಾಗೂ ಮುಂಬೈನಿಂದ ಬಂದಿದ್ದ ಹಂತಕರಿಗೆ 5 ಲಕ್ಷ ರೂ.ಗಳನ್ನು ನೀಡಿದ್ದನು ಎಂದು ಹೇಳಲಾಗಿದೆ. ಕೃತ್ಯಕ್ಕೆ ಬಳಕೆಯಾಗಿದ್ದ 2 ಬೈಕ್ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಡಿಜೆ ಹಳ್ಳಿ ಗಲಭೆ ಪ್ರಕರಣ- ಮಗನ ಬಂಧನ ಸುದ್ದಿ ತಿಳಿದು ತಂದೆ ಹೃದಯಾಘಾತದಿಂದ ಸಾವು

    ಡಿಜೆ ಹಳ್ಳಿ ಗಲಭೆ ಪ್ರಕರಣ- ಮಗನ ಬಂಧನ ಸುದ್ದಿ ತಿಳಿದು ತಂದೆ ಹೃದಯಾಘಾತದಿಂದ ಸಾವು

    ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನ ಸುದ್ದಿ ತಿಳಿದು ತಂದೆ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಡಿಜೆ ಹಳ್ಳಿಯ ಕುಬ್ಬ ಮಸೀದಿ ರಸ್ತೆಯ ನಿವಾಸಿ ಫರ್ಹಾನ್ ಬಂಧನದ ಸುದ್ದಿ ಕೇಳಿ ಆತನ ತಂದೆಗೆ ಹೃದಯಾಘಾತವಾಗಿದ್ದು, ಸಾವನ್ನಪ್ಪಿದ್ದಾರೆ. ಫರ್ಹಾನ್ ಗಲಭೆಯಲ್ಲಿ ಭಾಗಿಯಾಗಿ ಪೊಲೀಸರ ವಶದಲ್ಲಿದ್ದು, ಘಟನೆ ಸಂಬಂಧ ಗುರುವಾರ ಮಧ್ಯಾಹ್ನ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

    ಆತನ ತಂದೆ ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಿ ಮಾನವೀಯತೆ ಮರೆದಿದ್ದಾರೆ. ತಂದೆಯ ಅಂತ್ಯ ಸಂಸ್ಕಾರಕ್ಕೆ ತೆರಳಲು ಆರೋಪಿ ಫರ್ಹಾನ್‍ಗೆ ಅವಕಾಶ ಕಲ್ಪಿಸಿದ್ದಾರೆ.

    ಗಲಭೆ ಸಂಬಂಧ ಇದುವರೆಗೂ 151 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಮುಖ ಆರೋಪಿ ಮುಜಾಮಿಲ್‍ನನ್ನು ಐದು ದಿನ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಕೋವಿಡ್ ಪರೀಕ್ಷೆಗೆ ಒಳಪಟ್ಟ 40 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಮೂವರಿಗೆ ಕೊರೋನಾ ಬಂದಿದೆ. ಉಳಿದ ಆರೋಪಿಗಳ ಟೆಸ್ಟ್ ವರದಿ ಬಂದ ಬಳಿಕ ಕೋರ್ಟ್‍ಗೆ ಹಾಜರುಪಡಿಸಲಾಗುತ್ತದೆ. ತನಿಖೆ ಹಂತದಲ್ಲಿ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾವೇ ಮಾಹಿತಿ ನೀಡುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

  • ಪೋರ್ನ್ ವಿಡಿಯೋ ಕಳುಹಿಸಿ ಕಿರುಕುಳ- ಹನಿ ಟ್ರ್ಯಾಪ್ ಮೂಲಕ ಆರೋಪಿಯನ್ನು ಬಲೆಗೆ ಬೀಳಿಸಿದ್ಲು

    ಪೋರ್ನ್ ವಿಡಿಯೋ ಕಳುಹಿಸಿ ಕಿರುಕುಳ- ಹನಿ ಟ್ರ್ಯಾಪ್ ಮೂಲಕ ಆರೋಪಿಯನ್ನು ಬಲೆಗೆ ಬೀಳಿಸಿದ್ಲು

    – ಹಲವು ನಂಬರ್ ಗಳಿಂದ ಯುವತಿಗೆ ಕರೆ ಮಾಡಿ ಹಿಂಸೆ

    ಚೆನ್ನೈ: ಹಲವು ನಂಬರ್ ಗಳಿಂದ ಕರೆ ಮಾಡಿ, ಪೋರ್ನ್ ವಿಡಿಯೋ ಕಳುಹಿಸಿ ಚಿತ್ರ ಹಿಂಸೆ ನೀಡುತ್ತಿದ್ದ ಕಾಮುಕನಿಗೆ ಮಹಿಳೆ ತಕ್ಕ ಪಾಠ ಕಲಿಸಿದ್ದು, ಹನಿ ಟ್ರ್ಯಾಪ್ ಮೂಲಕವೇ ಆರೋಪಿಯನ್ನು ಬಲೆಗೆ ಬೀಳಿಸಿದ್ದಾಳೆ.

    ತಮಿಳುನಾಡಿನ ಚೆನ್ನೈನಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು 29 ವರ್ಷದ ವಿಮಲ್‍ರಾಜ್ ಎಂದು ಗುರುತಿಸಲಾಗಿದೆ. ಈತ ಇ-ಕಾಮರ್ಸ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿದ್ದಾನೆ. ಕುಟುಂಬದ ಸದಸ್ಯರ ಸಹಾಯದಿಂದ ಮಹಿಳೆ ಕಾಮುಕನನ್ನು ಬಲೆಗೆ ಬೀಳಿಸಿದ್ದಾಳೆ. ಶ್ರೀನಿಧಿ (ಹೆಸರು ಬದಲಾಯಿಸಲಾಗಿದೆ) ಪತಿಯೊಂದಿಗೆ ಜಗಳವಾಡಿಕೊಂಡು ತವರು ಮನೆ ಸೇರಿದ್ದು, ಕಳೆದ ನಾಲ್ಕು ವರ್ಷಗಳಿಂದ ತಮ್ಮ ಕುಟುಂಬದ ಸದಸ್ಯರೊಂದಿಗೆ ವಾಸಿಸುತ್ತಿದ್ದರು.

    ಆರೋಪಿ ವಿರುದ್ಧ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಡಿ ಹಾಗೂ ಐಟಿ ಕಾಯ್ದೆಯ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದ್ದು, ವಿಮಲ್‍ರಾಜನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಬಲೆ ಬೀಸಿದ್ದು ಹೇಗೆ?
    ಆಗಸ್ಟ್ 4ರಂದು ಮಹಿಳೆಗೆ ಮೊದಲ ಕರೆ ಬಂದಿದ್ದು, ಈ ವೇಳೆ ಆರೋಪಿ ಅಶ್ಲೀಲವಾಗಿ ಮಾತನಾಡಿದ್ದಾನೆ. ನಂತರ ಮಹಿಳೆ ಕರೆ ಕಟ್ ಮಾಡಿದ್ದು, ಆರೋಪಿ ಬೇರೆ ನಂಬರ್ ಗಳಿಂದ ಕರೆ ಮಾಡಿ ಹಿಂಸೆ ನೀಡಿದ್ದಾನೆ. ಅಲ್ಲದೆ ಆಗಸ್ಟ್ 8ರಂದು ಮಹಿಳೆಯ ವಾಟ್ಸಪ್‍ಗೆ ಪೋರ್ನ್ ವಿಡಿಯೋ ಕಳುಹಿಸಿ ವಿಕೃತಿ ಮೆರೆದಿದ್ದಾನೆ.

    ಇಷ್ಟೆಲ್ಲ ನಡೆದ ಬಳಿಕ ಮಹಿಳೆ ಮನೆಯವರೊಂದಿಗೆ ಈ ಕುರಿತು ಚರ್ಚಿಸಿದ್ದು, ಆಕೆಯ ಪೋಷಕರು ಸೇರಿಕೊಂಡು ಆರೋಪಿಯನ್ನು ಹಿಡಿಯಲು ಪ್ಲಾನ್ ಮಾಡಿದ್ದಾರೆ. ನಂತರ ಮಹಿಳೆ ಮಾತನಾಡಬೇಕು, ಮನೆಗೆ ಬಾ ಎಂದು ಆರೋಪಿಯನ್ನು ಕರೆದಿದ್ದಾಳೆ.  ಇದಕ್ಕೆ ಆರೋಪಿ ಸಹ ಒಪ್ಪಿದ್ದಾನೆ.

    ಆರೋಪಿ ಮಹಿಳೆಯ ಮನೆಗೆ ಭೇಟಿ ನೀಡಲು ಸಮಯ ನಿಗದಿ ಮಾಡಿಕೊಂಡಿದ್ದು, ಆರೋಪಿಯನ್ನು ಹಿಡಿಯಲು ಕುಟುಂಬಸ್ಥರು ರೂಮ್‍ನಲ್ಲಿ ಅಡಗಿ ಕುಳಿತಿದ್ದಾರೆ. ಆರೋಪಿ ವಿಮಲ್‍ರಾಜ್ ಮನೆಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರೆಲ್ಲರೂ ಸೇರಿ ಹಿಗ್ಗಾಮುಗ್ಗಾ ತಳಿಸಿದ್ದಾರೆ. ನಂತರ ಪೊಲೀಸ್ ಕಂಟ್ರೋಲ್ ರೂಮ್‍ಗೆ ಕರೆ ಮಾಡಿದ್ದಾರೆ. ಪೊಲೀಸರು ಮನೆಗೆ ಆಗಮಿಸಿ ಆರೋಪಿಯನ್ನು ಠಾಣೆಗೆ ಎಳೆದೊಯ್ದಿದ್ದಾರೆ.

    ಮಹಿಳೆಯರ ನಂಬರ್ ಪಡೆದು ಬೇಕಾಬಿಟ್ಟಿಯಾಗಿ ಅವರಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ, ವಿಡಿಯೋ ಕಳುಹಿಸುತ್ತಿದ್ದ. ಈ ಮೂಲಕ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ.

    ಮಹಿಳೆಯ ಪತಿಯ ಕೈವಾಡವೂ ಇರಬಹುದು ಎಂದು ಮಹಿಳೆಯ ಪೋಷಕರು ಆರೋಪಿಸಿದ್ದು, ಈ ಕುರಿತು ಮಹಿಳೆಯ ಪತಿಯನ್ನೂ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

  • ಜೈ ಶ್ರೀರಾಮ್, ಮೋದಿ ಜಿಂದಾಬಾದ್ ಹೇಳಲು ನಿರಾಕರಿಸಿದ ಆಟೋ ಚಾಲಕನ ಮೇಲೆ ಹಲ್ಲೆ

    ಜೈ ಶ್ರೀರಾಮ್, ಮೋದಿ ಜಿಂದಾಬಾದ್ ಹೇಳಲು ನಿರಾಕರಿಸಿದ ಆಟೋ ಚಾಲಕನ ಮೇಲೆ ಹಲ್ಲೆ

    – ಇಬ್ಬರ ಬಂಧನ

    ಜೈಪುರ: ಜೈ ಶ್ರೀರಾಮ್ ಹಾಗೂ ಮೋದಿ ಜಿಂದಾಬಾದ್ ಎಂದು ಹೇಳದ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ಇಬ್ಬರನ್ನು ಪೊಲಿಸರು ಬಂಧಿಸಿದ್ದಾರೆ.

    ಈ ಘಟನೆ ಶನಿವಾರ ರಾಜಸ್ಥಾನದ ಸಿಕರ್ ಎಂಬಲ್ಲಿ ನಡೆದಿದೆ. ಗಫರ್ ಅಹ್ಮದ್ ಕಚ್ಛಾವಾ(52) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಬಂಧಿತರನ್ನು ಶಂಭು ದಯಾಳ್(35) ಹಾಗೂ ರಾಜೇಂದ್ರ(30) ಎಂದು ಗುರುತಿಸಲಾಗಿದೆ.

    ಇಬ್ಬರು ನನ್ನ ಗಡ್ಡ ಹಿಡಿದುಕೊಂಡು ತಳ್ಳಿ ಹಲ್ಲೆಗೈದಿದ್ದಾರೆ. ಅಲ್ಲದೆ ಪಾಕಿಸ್ತಾನಕ್ಕೆ ಹೋಗು ಎಂದು ಗದರಿಸಿರುವುದಾಗಿ ಆಟೋ ಚಾಲಕ ಗಫರ್ ಪೊಲೀಸರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಗಫರ್ ದೂರು ನೀಡಿದ ಬಳಿಕ ಕೇಲವ 6 ಗಂಟೆಯಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

    ಗಫರ್ ಪೊಲೀಸರಿಗೆ ನೀಡಿದ ದೂರಿನಲ್ಲಿ, ಆರೋಪಿಗಳು ನನ್ನ ಕೈಯಿಂದ ವಾಚ್ ಹಾಗೂ ಹಣವನ್ನು ಕಸಿದುಕೊಂಡರು. ನಂತರ ನನ್ನ ಕೆನ್ನೆಗೆ ಹೊಡೆದು ಹಲ್ಲು ಮುರಿದಿದ್ದಾರೆ. ಕಣ್ಣು, ಮುಖ ನೋಡದೆ ಹಿಗ್ಗಾಮುಗ್ಗ ಥಳಿಸಿದ್ದು, ಪರಿಣಾಮ ಕಣ್ಣು ಊದುಕೊಂಡಿದೆ ಎಂದು ತಿಳಿಸಿದ್ದಾರೆ.

    ಗಫರ್ ಶುಕ್ರವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಪ್ರಯಾಣಿಕರೊಬ್ಬರನ್ನು ಅವರ ಗ್ರಾಮಕ್ಕೆ ಬಿಟ್ಟು ವಾಪಸ್ ಬರುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಇಬ್ಬರು ಗಫರ್ ಅವರನ್ನು ತಡೆದಿದ್ದಾರೆ. ಅಲ್ಲದೆ ಗಫರ್ ಬಳಿ ತಂಬಾಕು ಕೊಡುವಂತೆ ಕೇಳಿದ್ದಾರೆ. ತಂಬಾಕು ಕೇಳಿದ ತಕ್ಷಣ ಗಫರ್ ಅವರಿಗೆ ನೀಡಿದ್ದರೂ, ಅದನ್ನು ತೆಗೆದುಕೊಳ್ಳಲು ಆರೋಪಿಗಳು ನಿರಾಕರಿಸಿದ್ದಾರೆ. ಅಲ್ಲದೆ ಮೋದಿ ಜಿಂದಾಬಾದ್ ಹಾಗೂ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿದ್ದಾರೆ. ನನ್ನ ಆಟೋವನ್ನು ನೆಲಕ್ಕೆ ತಳ್ಳಿ ನನ್ನ ಮೇಲೆ ಹಿಗ್ಗಾಮುಗ್ಗವಾಗಿ ಕೋಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ಗಫರ್ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.

    ಗಫರ್ ನೀಡಿದ ದೂರಿನಂತೆ ಘಟನೆಯ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಪಾನಮತ್ತ ಸ್ಥಿತಿಯಲ್ಲಿ ಸಂತ್ರಸ್ತನೊಂದಿಗೆ ಆರೋಪಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯ ವೇಳೆ ಬಯಲಾಗಿದೆ ಅಂತ ಸಿಕರ್ ನ ಹಿರಿಯ ಪೊಲೀಸ್ ಅಧಿಕಾರಿ ಪುಷ್ಪೇಂದ್ರ ಸಿಂಗ್ ತಿಳಿಸಿದ್ದಾರೆ.

  • ಪ್ರಧಾನಿ ಕಚೇರಿ ವಿಸಿಟಿಂಗ್ ಕಾರ್ಡ್ ಬಳಸಿ ವಂಚನೆ

    ಪ್ರಧಾನಿ ಕಚೇರಿ ವಿಸಿಟಿಂಗ್ ಕಾರ್ಡ್ ಬಳಸಿ ವಂಚನೆ

    ಬೆಂಗಳೂರು: ಪ್ರಧಾನ ಮಂತ್ರಿ ಕಚೇರಿ ವಿಸಿಟಿಂಗ್ ಕಾರ್ಡ್ ಬಳಸಿ ಸಿಲಿಕಾನ್ ಸಿಟಿಯ ಐಷಾರಾಮಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿ ಆರೋಪಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಉತ್ತರ ಪ್ರದೇಶ ಮೂಲದ ಅನಿಕೇತ್ ಬಂಧಿತ ಆರೋಪಿ, ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್‍ನಲ್ಲಿ ಆರೋಪಿ ರೂಮ್ ಬುಕ್ ಮಾಡಿದ್ದ. ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಯೂತ್ ಅಡ್ವೈಸರ್ ಎಂದು ವಿಸಿಟಿಂಗ್ ಕಾರ್ಡ್ ತೋರಿಸಿ ಆರೋಪಿ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದ. ಜೂನ್ 16 ರಿಂದ 20ರ ವರೆಗೆ ಐಷಾರಾಮಿ ಹೋಟೆಲ್ ನಲ್ಲಿ ಈತ ವಾಸ್ತವ್ಯ ಹೂಡಿದ್ದ.

    ಅನುಮಾನಗೊಂಡ ಹೋಟೆಲ್‍ನವರು, ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಕಬ್ಬನ್ ಪಾರ್ಕ್ ಪೊಲೀಸರು ಪ್ರಧಾನಿ ಕಚೇರಿಗೆ ಪತ್ರ ಬರೆದು ಪರಿಶೀಲನೆ ನಡೆಸಿದಾಗ ಈತ ನಕಲಿ ಎಂಬುದು ಬೆಳಕಿಗೆ ಬಂದಿದೆ. ಸತತ ಒಂದು ತಿಂಗಳ ಕಾಲ ತನಿಖೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿ ಬಂಧನದ ವಿಚಾರ ತಿಳಿದು ಕೇಂದ್ರದ ಐಬಿ(ಇಂಟಲಿಜೆನ್ಸ್ ಬ್ಯೂರೋ) ಮತ್ತು ಎಫ್‍ಆರ್‍ಆರ್‍ಒ ತಂಡಗಳು ಭೇಟಿ ನೀಡಿದ್ದು, ಎರಡೂ ತಂಡಗಳು ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿವೆ.

  • ನೀರಿಗಾಗಿ ಬೀದಿ ಜಗಳ- ಪ್ರತಿಕಾರ ತೀರಿಸಿಕೊಳ್ಳಲು ಕೊಲೆ ಮಾಡಿದ್ದ ಆರೋಪಿಗಳ ಬಂಧನ

    ನೀರಿಗಾಗಿ ಬೀದಿ ಜಗಳ- ಪ್ರತಿಕಾರ ತೀರಿಸಿಕೊಳ್ಳಲು ಕೊಲೆ ಮಾಡಿದ್ದ ಆರೋಪಿಗಳ ಬಂಧನ

    ಬೆಂಗಳೂರು: ನೀರಿನ ವಿಚಾರವಾಗಿ ನಡೆದಿದ್ದ ಜಗಳಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುಮನ್, ದಿನಕರನ್, ರಂಜಿತ್, ರಂಜಿತೇಶ್ ಕುಮಾರ್ ಹಾಗೂ ಮೂವರು ಅಪ್ರಾಪ್ತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ದಿನಗಳ ಹಿಂದೆ ಭೈರತಿ ಬಂಡೆ ಬಳಿ ಸುರೇಶ್‍ನನ್ನು ಆರೋಪಿಗಳು ಕೊಲೆ ಮಾಡಿದ್ದರು. ಈ ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳು ಮತ್ತು ಕೊಲೆಯಾದ ಸುರೇಶ್ ಒಂದೇ ಏರಿಯಾದವರು. ವಾರದ ಹಿಂದೆ ನೀರಿನ ವಿಚಾರವಾಗಿ ಜಗಳ ನಡೆದಿತ್ತು. ಈ ಬೀದಿ ಜಗಳಕ್ಕೆ ಸೇಡು ತೀರಿಸಿಕೊಳ್ಳಲು ಮೂರು ದಿನಗಳ ಹಿಂದೆ ಆರೋಪಿಗಳು ಕೊಲೆ ಮಾಡಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ. ಕೊತ್ತನೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.