Tag: Accused Nagesh

  • ಸಿಎಂ ಭೇಟಿಯಾದ ಆ್ಯಸಿಡ್‌ ಸಂತ್ರಸ್ತೆ – ಸರ್ಕಾರಿ ಉದ್ಯೋಗ, ಮನೆ ಕಲ್ಪಿಸುವ ಭರವಸೆ

    ಸಿಎಂ ಭೇಟಿಯಾದ ಆ್ಯಸಿಡ್‌ ಸಂತ್ರಸ್ತೆ – ಸರ್ಕಾರಿ ಉದ್ಯೋಗ, ಮನೆ ಕಲ್ಪಿಸುವ ಭರವಸೆ

    ಬೆಂಗಳೂರು: ನಾಗೇಶ್‌ (Accused Nagesh) ಎಂಬಾತನಿಂದ ಆ್ಯಸಿಡ್‌ ದಾಳಿಗೆ (Acid Victim) ಒಳಗಾಗಿ ಚಿಕಿತ್ಸೆ ಪಡೆದು ನಂತರ ಗುಣಮುಖರಾಗಿರುವ ಸಂತ್ರಸ್ತೆ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಸಂತ್ರಸ್ತೆಗೆ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

    ಕಳೆದ ಏಪ್ರಿಲ್ 28 ರಂದು ಯುವತಿ ಮೇಲೆ ಆ್ಯಸಿಡ್ ದಾಳಿ ಆಗಿತ್ತು. ನಾಗೇಶ್‌ ಎಂಬಾತನಿಂದ ಯುವತಿ ಆ್ಯಸಿಡ್ ದಾಳಿಗೊಳಗಾಗಿದ್ದರು. ನಂತರ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್‌ ಆಗಿದ್ದಾರೆ. ಸರ್ಕಾರದಿಂದ ಅನುಕಂಪದ ಆಧಾರದಲ್ಲಿ ಕೆಲಸ, ಮನೆ, ಪರಿಹಾರದ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಸರ್ಕಾರದಿಂದ ಇದುವರೆಗೆ ಯಾವುದೇ ಭರವಸೆ ಈಡೇರಿಲ್ಲ. ಇದೀಗ ಯುವತಿಗೆ ಕೆಲಸ, ಮನೆ, ಪರಿಹಾರ ಒದಗಿಸುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ನಾಗನ ಮೇಲೆ 900 ಪುಟಗಳ ಚಾರ್ಜ್‍ಶೀಟ್

    Young, Acid, Nagesh,

    ಆ್ಯಸಿಡ್‌ ಸಂತ್ರಸ್ತೆ ಭೇಟಿ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ಇವತ್ತು ಯುವತಿ ಮತ್ತು ಅವರ ಕುಟುಂಬದವರು ಭೇಟಿ ಮಾಡಿದ್ದಾರೆ. ಇವತ್ತೇ ಮುಖ್ಯ ಕಾರ್ಯದರ್ಶಿ ಅವರ ಜತೆ ಯುವತಿ ಬಗ್ಗೆ ಮಾತಾಡ್ತೀನಿ. ಕೆಲಸ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ. ಈಗಾಗಲೇ ಸರ್ಕಾರ ಆ್ಯಸಿಡ್ ದಾಳಿಗೆ ಒಳಗಾಗಿರುವವರಿಗೆ ಮಾಸಾಶನ ಹೆಚ್ಚಿಸಿದೆ. 3 ರಿಂದ 10 ಸಾವಿರಕ್ಕೆ ಮಾಸಾಶನ ಏರಿಸಲಾಗಿದೆ. ಯುವತಿಗೆ ಮಾಸಾಶನವನ್ನೂ ಕೊಡ್ತೇವೆ. ಬೆಂಗಳೂರು ಸಮೀಪ 40 ಸಾವಿರ ಮನೆಗಳ ನಿರ್ಮಾಣ ಆಗ್ತಿದೆ. ಈ ಯುವತಿಗೂ ಒಂದು ಮನೆ ಕೊಡ್ತೇವೆ. ವಸತಿ ಸಚಿವರ ಜತೆ ಮನೆ ಕೊಡುವ ಬಗ್ಗೆ ಹೇಳ್ತೇನೆ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ.

    ಸಿಎಂ ಭೇಟಿ ಬಳಿಕ ಆ್ಯಸಿಡ್ ದಾಳಿಗೊಳಗಾದ ಯುವತಿಯ ದೊಡ್ಡಪ್ಪ ಶಂಕರ್ ಮಾತನಾಡಿ, ನಮ್ಮ ಮಗಳು ಏಪ್ರಿಲ್ ತಿಂಗಳಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದಳು. ಸಿಎಂ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಮನೆ ಕೊಡುವ ಭರವಸೆ ಕೊಟ್ಟಿದ್ದಾರೆ. ಸರ್ಕಾರಿ ಕೆಲಸ ಕೊಡುವ ಭರವಸೆ ಸಹ ನೀಡಿದ್ದಾರೆ. ಮುಖ್ಯಮಂತ್ರಿಗಳು ನಮ್ಮ ಅಹವಾಲು ಸ್ವೀಕರಿಸಿದ್ದರು. ಆ್ಯಸಿಡ್ ದಾಳಿ ಮಾಡಿದವನಿಗೆ ಉಗ್ರ ಶಿಕ್ಷೆ ಆಗಬೇಕೆಂದು ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಾಯಂಕಾಲದೊಳಗೆ ಆ್ಯಸಿಡ್ ಸಂತ್ರಸ್ತೆಯ ಜೊತೆ ಮಾತನಾಡಲಿದ್ದಾರೆ ಕಿಚ್ಚ ಸುದೀಪ್

    Live Tv
    [brid partner=56869869 player=32851 video=960834 autoplay=true]

  • ನಾನು ಆ್ಯಸಿಡ್ ಹಾಕೋಕೆ ಯುವತಿನೇ ಕಾರಣ – ಕಿರಾತಕ ನಾಗೇಶ್ ಆರೋಪ

    ನಾನು ಆ್ಯಸಿಡ್ ಹಾಕೋಕೆ ಯುವತಿನೇ ಕಾರಣ – ಕಿರಾತಕ ನಾಗೇಶ್ ಆರೋಪ

    ಬೆಂಗಳೂರು: ನಾನು ಆ್ಯಸಿಡ್ ಹಾಕುವುದಕ್ಕೆ ಯುವತಿನೇ ಕಾರಣ ಎಂದು ಆ್ಯಸಿಡ್ ನಾಗೇಶ್ ಉಡಾಫೆ ಮಾತುಗಳನ್ನು ಆಡಿದ್ದಾನೆ.

    ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಕಳೆದ 11 ದಿನಗಳಿಂದ ಆಶ್ರಮವೊಂದರಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ನಾಗೇಶ್‍ನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆ್ಯಸಿಡ್ ನಾಗೇಶ್ ನಾನೇನು ತಪ್ಪು ಮಾಡಿದೆ ಸರ್.. ಆ್ಯಸಿಡ್ ತಾನೇ ಹಾಕಿದ್ದೇನೆ ಸಣ್ಣ ತಪ್ಪು ಮಾಡಿದ್ದೇನೆ ಅಷ್ಟೇ. ಆಯ್ತು ನನ್ನನ್ನು ಬಿಡಿ. ಠಾಣೆಗೆ ಬರುತ್ತೇನೆ ಎಂದು ಪೊಲೀಸರ ಜೊತೆಗೆ ಬೆಂಗಳೂರಿಗೆ ಬಂದಿದ್ದಾನೆ. ಇದನ್ನೂ ಓದಿ: ನನ್ನ ಕಣ್ಣ ಮುಂದೆಯೇ ಅವನಿಗೆ ಶಿಕ್ಷೆ ಆಗಬೇಕು – ಸಂತ್ರಸ್ತ ಯುವತಿ ಕಣ್ಣೀರು

    ಇದೇ ವೇಳೆ ಆ್ಯಸಿಡ್ ಹಾಕುವುದಕ್ಕೂ ಮುನ್ನ ಹೆದರಿಸುವುದಕ್ಕೆ ಮಾತ್ರ ಆ್ಯಸಿಡ್ ಹಾಕುತ್ತೇನೆ ಅಂದಿದ್ದೆ. ಆದರೆ ಅವಳು ಇದೇ ವಿಚಾರವನ್ನು ದೊಡ್ಡದು ಮಾಡಿ ಅವರ ದೊಡ್ಡಪ್ಪನ ಮೂಲಕ ನಮ್ಮ ಅಣ್ಣನಿಗೆ ಹೇಳಿಸಿದ್ದಳು. ನಮ್ಮ ಅಣ್ಣ ನನಗೆ ಬೈದಿದ್ದ, ಇದರಿಂದ ಕೋಪಗೊಂಡ ಆ್ಯಸಿಡ್ ಹಾಕಿಯೇ ಬಿಡೋಣ ಅಂತಾ ತೀರ್ಮಾನ ಮಾಡಿದೆ ಎಂದು ಪೊಲೀಸರ ಮುಂದೆ ಆ್ಯಸಿಡ್ ನಾಗನ ಸ್ಟೋಟಕ ಹೇಳಿಕೆ ನೀಡಿದ್ದಾನೆ. ಇದನ್ನೂ ಓದಿ: ಆ್ಯಸಿಡ್ ನಾಗನನ್ನು ಹಿಡಿಯಲು ಸ್ವತಃ ಖಾವಿ ಧರಿಸಿದ್ದ ಪೊಲೀಸರು

    ಆ್ಯಸಿಡ್ ಹಾಕುವ ಹಿಂದಿನ ದಿನ ಅವಳನ್ನ ಭೇಟಿಯಾಗಿದ್ದೆ. ಏಳು ವರ್ಷದಿಂದ ಕಾಯುತ್ತಿದ್ದೇನೆ. ಮದುವೆಯಾಗೋಣ ಅಂತಾ ಕೇಳಿದೆ. ನನ್ನನ್ನು ಅಣ್ಣ ಅಂದುಬಿಟ್ಟಳು. ಜೊತೆಗೆ ನನಗೆ ಮದುವೆ ಸೆಟ್ಟಾಗಿದೆ ಅಂದಳು. ಇದರಿಂದ ನನಗೆ ಕೋಪ ಬಂದಿತ್ತು. ಅವತ್ತೇ ಆ್ಯಸಿಡ್ ಖರೀದಿ ಮಾಡಿದ್ದೆ. ಆದರೆ ಹಾಕಬೇಕು ಅಂದುಕೊಂಡಿರಲಿಲ್ಲ. ಯಾವಾಗ ಅವರ ಮನೆಯವರು ಆ್ಯಸಿಡ್ ಹಾಕುವುದಕ್ಕೆ ಪ್ರಚೋದನೆ ಮಾಡಿದರೋ ಆಗ ಹಾಕಿದೆ ಎಂದು ಸಂತ್ರಸ್ತೆ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಆರೋಪಿಸಿದ್ದಾನೆ.