Tag: Accountant

  • ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆ ಆರೋಪ – ಜೆಸ್ಕಾಂ ಲೆಕ್ಕಾಧಿಕಾರಿಗೆ ಎಸಿಬಿ ಶಾಕ್

    ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆ ಆರೋಪ – ಜೆಸ್ಕಾಂ ಲೆಕ್ಕಾಧಿಕಾರಿಗೆ ಎಸಿಬಿ ಶಾಕ್

    ಯಾದಗಿರಿ: ನಗರದ ಜೆಸ್ಕಾಂ ಲೆಕ್ಕಾಧಿಕಾರಿ ರಾಜು ಪತ್ತಾರ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಕಳೆದ 20 ವರ್ಷದಿಂದ ಯಾದಗಿರಿ ಜೆಸ್ಕಾಂ ಕಚೇರಿಯಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ರಾಜು ಪತ್ತಾರ ಮೇಲೆ ಆದಾಯಕ್ಕೂ ಮೀರಿ ಆಸ್ತಿ ಹೊಂದಿದ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ಯಾದಗಿರಿ ನಗರದ ಸಹರಾ ಕಾಲೋನಿಯಲ್ಲಿರುವ ನಿವಾಸಿ ಮೇಲೆ ಎಸಿಬಿ ದಾಳಿ ನಡೆಸಿದೆ. ದಾಳಿಯಲ್ಲಿ ಅಪಾರ ಪ್ರಮಾಣದ ನಗದು ಹಣ, ಚಿನ್ನಾಭರಣ ಸೇರಿದಂತೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

    ಎಸಿಬಿ ಎಸ್‍ಪಿ ಮಹೇಶ್ ಮೇಗಣ್ಣನವರ್ ಹಾಗೂ ಡಿವೈಎಸ್‍ಪಿ ಉಮಾಶಂಕರ್, ಇನ್‍ಸ್ಪೆಕ್ಟರ್ ಗುರುಪಾದ ಬಿರಾದರ್, ಶರಣಬಸವ ಕೊಡ್ಲಾ, ಮತ್ತು ಸಿಬ್ಬಂದಿ ವಿಜಯ್, ಗುತ್ತಪ್ಪಗೌಡ, ಅಮರನಾಥ್, ಸಾಬಣ್ಣ, ರವಿ ನೇತೃತ್ವದ ತಂಡ ಈ ದಾಳಿ ನಡೆಸಿದೆ. ಇನ್ನೂ ದಾಳಿ ವೇಳೆ ಅಧಿಕಾರಿ ಮನೆಯಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

  • ಮಹಿಳಾ ಕಾರ್ಯಕರ್ತೆಯರ ಮೈ-ಕೈ ಮುಟ್ಟಿ ಅಕೌಂಟೆಂಟ್ ನಿಂದ ಅಸಭ್ಯ ವರ್ತನೆ!

    ಮಹಿಳಾ ಕಾರ್ಯಕರ್ತೆಯರ ಮೈ-ಕೈ ಮುಟ್ಟಿ ಅಕೌಂಟೆಂಟ್ ನಿಂದ ಅಸಭ್ಯ ವರ್ತನೆ!

    ಚಿತ್ರದುರ್ಗ: ಸ್ವಯಂ ಸೇವಾ ಮಹಿಳಾ ಕಾರ್ಯಕರ್ತೆಯರು ಮೇಲೆ ಚಿತ್ರದುರ್ಗದ ನೆಹರು ಯುವ ಕೇಂದ್ರದ ಅಕೌಂಟೆಂಟ್ ಒಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪವೊಂದು ಕೇಳಿ ಬಂದಿದೆ.

    ಅಕೌಂಟೆಂಟ್ ಪ್ರಕಾಶ್ ಮೇಲೆ ಈ ಆರೋಪ ಕೇಳಿಬಂದಿದೆ. ಲಂಚಾವತಾರ ಹಾಗು ಅಸಭ್ಯ ವರ್ತನೆಯ ತೋರಿದ್ದಾನೆ ಎಂದು ಸ್ವಯಂ ಸೇವಾ ಕಾರ್ಯಕರ್ತೆಯರು ಆರೋಪಿಸಿದ್ದಾರೆ.

    ಪ್ರಕಾಶ್ ಕೆಲಸ ಮಾಡುವಾಗ ಮಹಿಳೆಯರ ಮೈ-ಕೈ ಮುಟ್ಟಿ ಅಸಭ್ಯ ವರ್ತನೆ ತೋರುತ್ತಾನೆ. ಮಹಿಳಾ ಸಿಬ್ಬಂದಿಗಳಿಗೆ ಮನೆಗೆ ಬರುವಂತೆ ಒತ್ತಾಯಿಸುತ್ತಾನೆ. ಸಂಬಳ ನೀಡುವಾಗ ಲಂಚ ಕೇಳುತ್ತಾನೆ ಹಾಗೂ ಇಬ್ಬರೇ ಪ್ರವಾಸ ಹೋಗೋಣ ಎಂದು ಪೀಡಿಸುತ್ತಾನೆಂದು ಕಾರ್ಯಕರ್ತೆಯರು ಆರೋಪಿಸಿದ್ದಾರೆ.

    ಅಲ್ಲದೇ ಅಕೌಂಟೆಂಟ್ ಲೈಂಗಿಕ ಕಿರುಕುಳಕ್ಕೆ ಮನನೊಂದ ಕಾರ್ಯಕರ್ತೆಯರು ಪ್ರಕಾಶ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಐದು ಜನ ಮಹಿಳೆಯರು ಈ ಕುರಿತು ಆರೋಪಿಸಿದ್ದು, ಆತ ನೀಡುವ ಕಿರುಕುಳ ತಾಳಲಾರದೇ ಬೇಸತ್ತು ಎಂಟು ಜನ ಮಹಿಳೆಯರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ ಅಂತ ಹೇಳಿದ್ದಾರೆ.

    ಮಹಿಳಾ ಸ್ವಯಂ ಸೇವಾ ಕಾರ್ಯಕರ್ತರು ದಾರಿಕಾಣದೇ ಡಿಸಿ ಮೊರೆ ಹೋದರೆ, ಮಹಿಳೆಯರ ಸಂಕಷ್ಟ ತಿಳಿದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಅಂತ ಹೇಳಲಾಗುತ್ತಿದೆ.