Tag: accient

  • Kolar| ಅಪಘಾತದಲ್ಲಿ ಐವರು ಸಾವು –  ಮುಳಬಾಗಿಲು ಶಾಸಕನಿಂದ ತಲಾ 20,000 ರೂ. ಆರ್ಥಿಕ ನೆರವು

    Kolar| ಅಪಘಾತದಲ್ಲಿ ಐವರು ಸಾವು – ಮುಳಬಾಗಿಲು ಶಾಸಕನಿಂದ ತಲಾ 20,000 ರೂ. ಆರ್ಥಿಕ ನೆರವು

    – ಅಧಿವೇಶನದ ಬಳಿಕ ಮತ್ತಷ್ಟು ನೆರವಿನ ಭರವಸೆ

    ಕೋಲಾರ: ಬೈಕ್‌ಗಳಿಗೆ ಬೊಲೆರೋ ಡಿಕ್ಕಿಯಾಗಿ ಐವರು ಮೃತಪಟ್ಟಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ. ಈ ಹಿನ್ನೆಲೆ ಮೃತರ ಕುಟುಂಬಗಳಿಗೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ (Samruddi Manjunath) ಆರ್ಥಿಕ ನೆರವು ನೀಡಿದ್ದಾರೆ.

    ಮೃತರ ಕುಟುಂಬಸ್ಥರು ತೀವ್ರ ಬಡವರಾಗಿದ್ದರಿಂದ ಅಂತ್ಯ ಸಂಸ್ಕಾರಕ್ಕಾಗಿ ತಲಾ 20,000 ರೂ. ನೆರವು ನೀಡಿದ್ದಾರೆ. ಬುಧವಾರ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಗುಡಿಪಲ್ಲಿ ರಸ್ತೆಯಲ್ಲಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಡು ಬಡತನದ ಕುಟುಂಬಕ್ಕೆ ಸಾವಿನಿಂದ ಆಘಾತವಾದ ಹಿನ್ನೆಲೆ ಅಂತ್ಯಸಂಸ್ಕಾರಕ್ಕಾಗಿ ಸಮೃದ್ಧಿ ಮಂಜುನಾಥ್ ಆರ್ಥಿಕ ನೆರವು ನೀಡಿದ್ದಾರೆ. ಇದನ್ನೂ ಓದಿ: 4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ‘ಲೋಕಾ’ ಬಲೆಗೆ ಬಿದ್ದ ಅಧಿಕಾರಿ – ಅರೆಸ್ಟ್‌

    ಕೂಲಿ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದವರು ಸಾವಿನ ಮನೆಗೆ ಹೋಗಿದ್ದು, ಅವರ ಕುಟುಂಬಗಳು ಬೀದಿಪಾಲಾಗಿವೆ. ಇದನ್ನರಿತ ಸಮೃದ್ಧಿ ಮಂಜುನಾಥ್ ಮೃತರ ಕುಟುಂಬಗಳಿಗೆ ಆರ್ಥಿಕ ನೆರವಿನ ಹಸ್ತ ಚಾಚಿದ್ದಾರೆ. ಸದ್ಯ ಬೆಳಗಾವಿ ಅಧಿವೇಶನದಲ್ಲಿರುವ ಶಾಸಕ ಸಮೃದ್ಧಿ ಮಂಜುನಾಥ್ ತಮ್ಮ ಆಪ್ತ ಸಹಾಯಕ ಹಾಗೂ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಅಂತ್ಯಸಂಸ್ಕಾರಕ್ಕಾಗಿ ಹಣ ತಲುಪಿಸಿದ್ದು, ಅಧಿವೇಶನ ಮುಗಿದ ನಂತರ ಸ್ವತಃ ಮೃತರ ಕುಟುಂಬಗಳನ್ನು ಭೇಟಿ ಮಾಡಿ ಮತ್ತಷ್ಟು ಪರಿಹಾರ ನೀಡುವುದಾಗಿ ತಮ್ಮ ಆಪ್ತರ ಮೂಲಕ ಸಂದೇಶವನ್ನು ರವಾನೆ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದ ಭತ್ತಕ್ಕೆ ಏಕಾಏಕಿ ನಿರ್ಬಂಧ ಹೇರಿದ ತೆಲಂಗಾಣ

    ಇನ್ನು ಕಳೆದ ವಾರ ಮುರುಡೇಶ್ವರದಲ್ಲಿ ನೀರು ಪಾಲಾದ ವಿದ್ಯಾರ್ಥಿನಿಯರ ಕುಟುಂಬಗಳಿಗೂ ಸಹ ಸಮೃದ್ಧಿ ಮಂಜುನಾಥ್ ತಲಾ ಒಂದೊಂದು ಲಕ್ಷ ಪರಿಹಾರ ನೀಡಿದ್ದರು. ಇದನ್ನೂ ಓದಿ: ಬಿಎಸ್‌ವೈ ಹೆಸರಲ್ಲಿ ನಡೆಯುವುದು ಶಕ್ತಿ ಪ್ರದರ್ಶನವಲ್ಲ, ಗುಂಪುಗಾರಿಕೆ ಪ್ರದರ್ಶನ: ಈಶ್ವರಪ್ಪ

  • ಟ್ರ್ಯಾಕ್ಟರ್ ರಿಪೇರಿ ಮಾಡ್ತಿದ್ದಾಗ ಬೊಲೆರೋ ಡಿಕ್ಕಿ- ವ್ಯಕ್ತಿ ದುರ್ಮರಣ

    ಟ್ರ್ಯಾಕ್ಟರ್ ರಿಪೇರಿ ಮಾಡ್ತಿದ್ದಾಗ ಬೊಲೆರೋ ಡಿಕ್ಕಿ- ವ್ಯಕ್ತಿ ದುರ್ಮರಣ

    ಹಾವೇರಿ: ಟ್ರ್ಯಾಕ್ಟರ್ ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾವೇರಿ ನಗರದ ಹೊರವಲಯದಲ್ಲಿರೋ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಡ್ಡದಬೇವಿನಹಳ್ಳಿ ಗ್ರಾಮದ ನಿವಾಸಿ ಸಹದೇವಪ್ಪ ಸಂಗಾಪುರ(52) ಎಂದು ಗುರುತಿಸಲಾಗಿದೆ.

    ಅಪಘಾತದಲ್ಲಿ 32 ವರ್ಷ ಮಂಜುನಾಥ ಎಂಬಾತ ಗಾಯಗೊಂಡಿದ್ದು, ಸದ್ಯ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ವ್ಯಕ್ತಿ ಮತ್ತು ಗಾಯಗೊಂಡವರು ತಂದೆ ಹಾಗೂ ಮಗ ಎಂದು ಹೇಳಲಾಗುತ್ತಿದೆ.

    ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ರಸ್ತೆ ಪಕ್ಕದಲ್ಲಿ ನಿಲ್ಲಿಸಿಕೊಂಡು ರಿಪೇರಿ ಮಾಡುತ್ತಿದ್ದ ವೇಳೆ ಬೊಲೆರೋ ವಾಹನ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಹಾವೇರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಹಾವೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.