Tag: accidents

  • ಆಗಸ್ಟ್‌ 1 ರಿಂದ ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ನಿಷೇಧ – ಅಲೋಕ್ ಕುಮಾರ್

    ಆಗಸ್ಟ್‌ 1 ರಿಂದ ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ನಿಷೇಧ – ಅಲೋಕ್ ಕುಮಾರ್

    – ರಸ್ತೆ ನ್ಯೂನತೆ ಸರಿಪಡಿಸದಿದ್ರೆ ಕಠಿಣ ಕ್ರಮ ಎಂದ ಅಲೋಕ್ ಕುಮಾರ್

    ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ (Bengaluru Mysuru Expressway) ಅಪಘಾತ ತಡೆಯಲು ಪೊಲೀಸ್‌ ಇಲಾಖೆ ಮುಂದಾಗಿದ್ದು ಮಂಗಳವಾರ (ಜು.25) 2ನೇ ಬಾರಿಗೆ ಎಡಿಜಿಪಿ ಅಲೋಕ್ ಕುಮಾರ್ (Alok Kuma) ಹೆದ್ದಾರಿ ಪರಿಶೀಲನೆ ನಡೆಸಿದ್ದಾರೆ.

    ಕಳೆದ ತಿಂಗಳು ಹೆದ್ದಾರಿ ಪರಿಶೀಲನೆ ಮಾಡಿ ಹಲವು ನ್ಯೂನತೆಗಳನ್ನ ಸರಿಪಡಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಒಂದು ತಿಂಗಳ ಗಡುವು ನೀಡಿದ್ದರು‌. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಹೆದ್ದಾರಿ ಪರಿಶೀಲನೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ‌. ಇದನ್ನೂ ಓದಿ: ಸಿಂಗಾಪುರದಲ್ಲಿ ಸರ್ಕಾರವನ್ನು ಉರುಳಿಸುವ ಷಡ್ಯಂತ್ರದ ಬಗ್ಗೆ ತಿಳಿದಿಲ್ಲ: ಸಿಎಂ

    ಬಳಿಕ ಮಾತನಾಡಿದ ಅಲೋಕ್‌ ಕುಮಾರ್, ಇದೇ ಆಗಸ್ಟ್‌ 1 ರಿಂದ ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ನಿಷೇಧ (Two-Wheelers, Three-Wheelers Banned) ಹೇರಲಾಗುವುದು. ಈ ಬಗ್ಗೆ ಕಳೆದ ಜು.12ರಂದೇ ಗೆಜೆಟ್ ನೋಟಿಫಿಕೇಷನ್ ಆಗಿದ್ದು, ಆ.1 ರಿಂದ ನೂತನ ನಿಯಮ ಅನ್ವಯ ಆಗಲಿದೆ ಎಂದು ತಿಳಿಸಿದ್ದಾರೆ.

    ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಇನ್ನೂ ಸಾಕಷ್ಟು ನ್ಯೂನತೆಗಳು ಹಾಗೆ ಇವೆ. ಅಪಘಾತ ತಡೆಗೆ ಪೊಲೀಸ್ ಇಲಾಖೆ ಸಾಕಷ್ಟು ಕೆಲಸ ಮಾಡಿದೆ. ಹಾಗಾಗಿ ಸಾವಿ‌ನ ಸಂಖ್ಯೆ ಕಡಿಮೆ ಆಗಿದೆ. ಆದ್ರೆ ಹೆದ್ದಾರಿ ಪ್ರಾಧಿಕಾರ ಎಂಟ್ರಿ, ಎಕ್ಸಿಟ್‌ ಸರಿಪಡಿಸುವುದು, ಸ್ಕೈವಾಕ್‌ ನಿರ್ಮಾಣ ಮಾಡಬೇಕಿದೆ. ನಾವು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಇರುವ ಸೌಲಭ್ಯ ಬಳಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಮಟ್ಟದಲ್ಲಿ ಟೆಂಡರ್‌ ಆಗಿರೋದ್ರಿಂದ ಹೊಸ ಉಪಕರಣಗಳು ಬರೋದು ತಡವಾಗುತ್ತದೆ. ಹೆದ್ದಾರಿ ಪ್ರಾಧಿಕಾರಕ್ಕೂ ಕಠಿಣ ಸೂಚನೆ ನೀಡಲಾಗಿದೆ. ಪ್ರಾಧಿಕಾರ ಸುಮ್ಮನೆ ಆಟ ಆಡಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್ ಚಿತ್ರೀಕರಣ – ಧ್ವನಿ ಎತ್ತಿದ ಯುವತಿಗೆ ಪೊಲೀಸರಿಂದ ಕಿರುಕುಳ ಆರೋಪ

    ಇದೇ ತಿಂಗಳ ಜುಲೈ 12ರಂದೇ ರಾಷ್ಟ್ರೀಯ ಹೆದ್ದಾರಿ ನಿಯಂತ್ರಣ ಕಾಯ್ದೆ 2002ರ ಅನ್ವಯ ಹೆದ್ದಾರಿ ಪ್ರಾಧಿಕಾರ ಅಧಿಸೂಚನೆ ಹೊರಡಿಸಿತ್ತು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ತಡೆಯಲು ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹನಗಳಿಗೆ ನಿಷೇಧ ಹೇರುವ ತೀರ್ಮಾನ ಮಾಡಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಿತ್ತು. ದಶಪಥ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ವೇಗಮಿತಿ ನಿಗದಿ ಮಾಡಲಾಗಿದ್ದು ಗಂಟೆಗೆ 80 ರಿಂದ 100 ಕಿ.ಮೀಗೆ ಮಿತಿ ಹೇರಿರುವ ಕುರಿತು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

    ಯಾವೆಲ್ಲಾ ವಾಹನಗಳಿಗೆ ನಿರ್ಬಂಧ?
    – ಮೋಟರ್ ಸೈಕಲ್​​ (ಸ್ಕೂಟರ್ ಮತ್ತು ಇತರೆ ದ್ವಿಚಕ್ರವಾಹನ)
    – ತ್ರಿಚಕ್ರವಾಹನ (ಆಟೋ ರಿಕ್ಷಾ, ಇ-ಕಾರ್ಟ್ ವಾಹನಗಳು)
    – ಮೋಟಾರು ರಹಿತ ವಾಹನಗಳು, ಸೈಕಲ್‌ಗಳು
    – ಟ್ರಾಕ್ಟರ್‌ಗಳು, ಮಲ್ಟಿ ಆಕ್ಸೆಲ್‌ ಹೈಡ್ರಾಲಿಕ್ ಟ್ರೇಲರ್‌ ವಾಹನಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಕ್ಸ್‌ಪ್ರೆಸ್‌ವೇನಲ್ಲಿ ಶೀಘ್ರವೇ ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹನಗಳಿಗೆ ನಿಷೇಧ

    ಎಕ್ಸ್‌ಪ್ರೆಸ್‌ವೇನಲ್ಲಿ ಶೀಘ್ರವೇ ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹನಗಳಿಗೆ ನಿಷೇಧ

    ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bengaluru Mysuru Expressway) ಅಪಘಾತ ತಡೆಗೆ ಹೆದ್ದಾರಿ ಪ್ರಾಧಿಕಾರ(National Highway Authority) ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

    ಶೀಘ್ರದಲ್ಲೇ ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹನಗಳಿಗೆ ನಿಷೇಧ (Two-Wheelers, Three-Wheelers Banned) ಹೇರುವ ಕುರಿತು ತೀರ್ಮಾನ ಮಾಡಲಾಗಿದ್ದು, ಬೈಕ್, ಆಟೋ, ಟ್ರ್ಯಾಕ್ಟರ್ ಹಾಗೂ ಇತರ ಸಣ್ಣ ವಾಹನಗಳಿಗೆ ನಿರ್ಬಂಧ ಹೇರಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಇದನ್ನೂ ಓದಿ: ಮಡಿಕೇರಿ-ಮಂಗಳೂರು ಹೈವೇಯಲ್ಲಿ ಗುಡ್ಡ ಕುಸಿತ

    ಈ ಸಂಬಂಧ ಜುಲೈ 12ರಂದು ರಾಷ್ಟ್ರೀಯ ಹೆದ್ದಾರಿ ನಿಯಂತ್ರಣ ಕಾಯ್ದೆ 2002ರ ಅನ್ವಯ ಹೆದ್ದಾರಿ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಅಲ್ಲದೇ ದಶಪಥ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ವೇಗಮಿತಿ ನಿಗದಿ ಮಾಡಲಾಗಿದ್ದು ಗಂಟೆಗೆ 80 ರಿಂದ 100 ಕಿ.ಮೀಗೆ ಮಿತಿ ಹೇರಿರುವ ಕುರಿತು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಳ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ.

    ಯಾವೆಲ್ಲಾ ವಾಹನಗಳಿಗೆ ನಿರ್ಬಂಧ?
    – ಮೋಟರ್ ಸೈಕಲ್​​ (ಸ್ಕೂಟರ್ ಮತ್ತು ಇತರೆ ದ್ವಿಚಕ್ರವಾಹನ)
    – ತ್ರಿಚಕ್ರವಾಹನ (ಆಟೋ ರಿಕ್ಷಾ, ಇ-ಕಾರ್ಟ್ ವಾಹನಗಳು)
    – ಮೋಟಾರು ರಹಿತ ವಾಹನಗಳು, ಸೈಕಲ್‌ಗಳು
    – ಟ್ರಾಕ್ಟರ್‌ಗಳು, ಮಲ್ಟಿ ಆಕ್ಸೆಲ್‌ ಹೈಡ್ರಾಲಿಕ್ ಟ್ರೇಲರ್‌ ವಾಹನಗಳು

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಓವರ್‌ಲೋಡ್‌ನಿಂದ ಕೊಳಕ್ಕೆ ಉರುಳಿದ ಬಸ್ – 17 ಮಂದಿ ಸಾವು, 35 ಮಂದಿಗೆ ಗಾಯ

    ಓವರ್‌ಲೋಡ್‌ನಿಂದ ಕೊಳಕ್ಕೆ ಉರುಳಿದ ಬಸ್ – 17 ಮಂದಿ ಸಾವು, 35 ಮಂದಿಗೆ ಗಾಯ

    ಢಾಕಾ: ಬಸ್‌ವೊಂದು ಕೊಳಕ್ಕೆ ಉರುಳಿದ ಪರಿಣಾಮ ಮೂರು ಮಕ್ಕಳೂ ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದು 35 ಮಂದಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದ (Bangladesh) ಜಲಕತಿ ಸದರ್ ಉಪಜಿಲಾ ವ್ಯಾಪ್ತಿಯಲ್ಲಿ ನಡೆದಿದೆ.

    ಬಂಢಾರಿಯಾದಿಂದ ಹೊರಟಿದ್ದ ಬಸ್ (Government Bus) ಚಾಲಕನ ನಿಯಂತ್ರಣ ತಪ್ಪಿ ಇದ್ದಕ್ಕಿದ್ದಂತೆ ಕೊಳಕ್ಕೆ ಉರುಳಿದೆ. ಬಸ್ ಮಿತಿಮೀರಿ ಜನರನ್ನ ತುಂಬಿದ್ದರಿಂದ ಕೊಳದಲ್ಲಿ ಮುಳುಗಿದೆ. ನಾನು ಹರಸಾಹದ ಮಾಡಿ ಹೊರಬಂದೆ ಎಂದು ಬದುಕುಳಿದ ಸಂತ್ರಸ್ತ ಮೊಮಿನ್ ಹೇಳಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿಬಂದ 49ರ ಪೋಲೆಂಡ್‌ ಮಹಿಳೆ

    17 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ಫಿರೋಜ್‌ಪುರದ ಭಂಡಾರಿಯಾ ಉಪಜಿಲಾ ಮತ್ತು ಜಲ್ಕತಿಯ ರಾಜಾಪುರ ಪ್ರದೇಶದ ನಿವಾಸಿಗಳು ಹೆಚ್ಚಿನವರಿದ್ದಾರೆ ಎಂದು ಬಾರಿಶಾಲ್ ವಿಭಾಗೀಯ ಆಯುಕ್ತ ಎಂ.ಡಿ ಶೌಕತ್ ಅಲಿ ತಿಳಿಸಿದ್ದಾರೆ.

    ಬಾಂಗ್ಲಾದೇಶದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿಬಿಟ್ಟಿವೆ. ರೋಡ್ ಸೇಫ್ಟಿ ಫೌಂಡೇಶನ್ ಪ್ರಕಾರ, ಕಳೆದ ಜೂನ್‌ನಲ್ಲಿ ಒಟ್ಟು 559 ರಸ್ತೆ ಅಪಘಾತಗಳು ಸಂಭವಿಸಿದ್ದು ಅಪಘಾತಗಳಲ್ಲಿ 562 ಜನರು ಸಾವನ್ನಪ್ಪಿದ್ದು, 812 ಜನರು ಗಾಯಗೊಂಡಿದ್ದಾರೆ. ದೇಶಾದ್ಯಂತ ನಡೆದ 207 ಮೋಟಾರ್‌ಸೈಕಲ್ ಅಪಘಾತಗಳಲ್ಲಿ 169 ಜನರು ಸಾವನ್ನಪ್ಪಿದ್ದಾರೆ ಅದರಲ್ಲಿ 78 ಮಹಿಳೆಯರು ಮತ್ತು 114 ಮಕ್ಕಳೂ ಸೇರಿದ್ದಾರೆ ಎಂಬುದು ತಿಳಿದುಬಂದಿದೆ.

    ಜಲಮಾರ್ಗಗಳಲ್ಲಿ ನಡೆದ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆ. ಅದೇ ಸಮಯದಲ್ಲಿ 21 ರೈಲ್ವೆ ಅಪಘಾತಗಳು ಸಂಭವಿಸಿದ್ದು 18 ಜನ ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿರುವುದಾಗಿ ವರದಿಗಳು ಹೇಳಿವೆ. ಜೊತೆಗೆ 38 ಪ್ರಾಣಿಗಳು ಬಲಿಯಾಗಿವೆ. ಇದನ್ನೂ ಓದಿ: ಮಣಿಪುರದಲ್ಲಿ ನಡೆದ ಘಟನೆ ದುಃಖಕರ – ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಬ್ರಿಜ್‌ ಭೂಷಣ್‌ ಸಿಂಗ್‌ ಖಂಡನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿಸಿಪಿ ಆದೇಶ – ಅಪಘಾತ ತಡೆಗೆ ಮೇಲ್ಸೇತುವೆಗೆ ಬಣ್ಣ

    ಡಿಸಿಪಿ ಆದೇಶ – ಅಪಘಾತ ತಡೆಗೆ ಮೇಲ್ಸೇತುವೆಗೆ ಬಣ್ಣ

    ಬೆಂಗಳೂರು: ಸಿಲಿಕಾನ್ ಸಿಟಿಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಮೇಲೆ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಅಪಘಾತಗಳನ್ನ ತಪ್ಪಿಸುವ ಉದ್ದೇಶದಿಂದ ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಸೌಮ್ಯಲತಾ ಆದೇಶದ ಮೇರೆಗೆ ಸೇತುವೆಗೆ ಬಣ್ಣ ಬಳೆಯಲಾಗಿದೆ.

    ಸಿಟಿ ಮಾರ್ಕೆಟ್, ಮೈಸೂರು ರೋಡ್ ಸದಾ ಬ್ಯುಸಿ ಇರುವ ರಸ್ತೆ. ದಿನಕ್ಕೆ ಲಕ್ಷಾಂತರ ವಾಹನಗಳು ಮೈಸೂರು ರಸ್ತೆ ಮೂಲಕ ಸಂಚಾರ ಮಾಡುತ್ತಿರುತ್ತವೆ. ಹೀಗಾಗಿ ಸದಾ ಟ್ರಾಫಿಕ್‍ನಿಂದ ಕೂಡಿರುತ್ತದೆ. ಕೆಂಗೇರಿ, ಬಿಡದಿ, ರಾಮನಗರ, ಮಂಡ್ಯ ಮತ್ತು ಮೈಸೂರು ಕಡೆ ಹೋಗುವ ವಾಹನ ಸವಾರರು ಈ ಮಾರ್ಗವಾಗಿ ಹೋಗುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ.

    ಅದರಲ್ಲೂ ಮೆಜೆಸ್ಟಿಕ್ ಮತ್ತು ಟೌನ್‍ಹಾಲ್ ಕಡೆಯಿಂದ ಬರುವ ವಾಹನಗಳು ಸಿಟಿ ಮಾರ್ಕೆಟ್‍ನ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಮೇಲೆ ಸಂಚಾರ ಮಾಡಬೇಕಾಗಿದೆ. ಈ ಮೇಲ್ಸೇತುವೆ ಮೇಲೆ ವಾಹನಗಳ ಸಂಖ್ಯೆ ಹೆಚ್ಚಾದಂತೆ ಸಂಚಾರಿ ನಿಯಮಗಳು ಉಲ್ಲಂಘನೆ ಮಾಡುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಆದ್ದರಿಂದ ಈ ಮೇಲ್ಸೇತುವೆ ಮೇಲೆ ಅಪಘಾತಗಳನ್ನ ತಪ್ಪಿಸುವ ಉದ್ದೇಶದಿಂದ ಸೇತುವೆಗೆ ಬಣ್ಣ ಬಳಿಯಲಾಗಿದೆ.

    ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಸೌಮ್ಯಲತಾ ಅವರು ಈ ಮೇಲ್ಸೇತುವೆಗೆ ಬಣ್ಣವನ್ನು ಬಳಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಇರಬಹುದು, ಮುಂಜಾನೆ ಇರಬಹುದು, ಬೆಳಗಿನ ಸಮಯದಲ್ಲಿ ಕೂಡ ಸೇತುವೆ ಗೋಡೆ, ಅಡೆತಡೆ ವಾಹನ ಸವಾರರಿಗೆ ಕಂಡು ಎಚ್ಚರಿಕೆಯಿಂದ ಸವಾರರು ವಾಹನಗಳನ್ನ ಸಂಚಾರಿಸಲಿ ಎಂದು ಬಣ್ಣ ಬಳಿಯಲಾಗಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸೌಮ್ಯಲತಾ ಅವರು, “ಈ ದಿನ ಪಶ್ಚಿಮ ವಿಭಾಗ ವ್ಯಾಪ್ತಿಯ ಮೈಸೂರು ರಸ್ತೆ, ಸಿಟಿ ಮಾರುಕಟ್ಟೆಯ ಶ್ರೀ ಬಾಲಗಂಗಾಧರನಾಥ ಸ್ವಾಮಿಜಿ ಮೇಲ್ಸೇತುವೆ ರಸ್ತೆಯಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದವು. ಈ ರಸ್ತೆಯಲ್ಲಿ ಅಪಘಾತವನ್ನು ತಡೆಗಟ್ಡುವ ನಿಟ್ಟಿನಲ್ಲಿ ನನ್ನ ಸೂಚನೆ, ನಿಲುವಳಿ ಮತ್ತು ನಿರ್ದೇಶನದ ಮೇರೆಗೆ ಬಿಬಿಎಂಪಿಯು ಮೇಲ್ಸೇತುವೆಯ ರಸ್ತೆಯ ಗೋಡೆಗೆ ಬಣ್ಣ ಬಳಿಸಿ ಕ್ರಮ ಕೈಗೊಂಡಿರುತ್ತದೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

    ಪಶ್ಚಿಮ ವಿಭಾಗದ ಡಿಸಿಪಿ ಸೌಮ್ಯಲತಾ ಅವರು ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಬಣ್ಣ ಬಳಿಯುವಂತೆ ಬಿಬಿಎಂಪಿಗೆ ನಿರ್ದೇಶನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಸೇತುವೆಗೆ ಬಣ್ಣ ಬಳಿಯುವ ಮೂಲಕ ಅಪಘಾತ ತಡೆಗೆ ಮುಂದಾಗಿದ್ದಾರೆ. ಇನ್ನಾದರೂ ವಾಹನ ಸವಾರರು ಎಚ್ಚೇತ್ತು ಎಚ್ಚರಿಕೆ ವಾಹನಗಳನ್ನ ಓಡಿಸುತ್ತಾರ ಕಾದು ನೋಡಬೇಕಿದೆ.

  • ಅಪಘಾತದಲ್ಲಿ ರೈತ ಸಾವು ಎಂದು ದಾಖಲಾಗಿದ್ದ ಕೇಸ್‍ಗೆ ಟ್ವಿಸ್ಟ್- ಕೊಲೆ ಎಂದು ಗೊತ್ತಾಗಿದ್ದು ಹೀಗೆ

    ಅಪಘಾತದಲ್ಲಿ ರೈತ ಸಾವು ಎಂದು ದಾಖಲಾಗಿದ್ದ ಕೇಸ್‍ಗೆ ಟ್ವಿಸ್ಟ್- ಕೊಲೆ ಎಂದು ಗೊತ್ತಾಗಿದ್ದು ಹೀಗೆ

    ರಾಯಚೂರು: ಆಕ್ಸಿಡೆಂಟ್ ಕೇಸೊಂದು ಪೊಲೀಸರ ಸಮಯೋಚಿತ ತನಿಖೆಯಿಂದಾಗಿ ಮರ್ಡರ್ ಎಂದು ಸಾಬೀತಾಗಿದೆ. ನೀರಿನ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ತನ್ನ ಜಮೀನಿಗೆ ನೀರು ಬಿಡುತ್ತಿಲ್ಲ ಅಂತ ಜಗಳ ತೆಗೆದು ರೈತನನ್ನ ಕೊಲೆ ಮಾಡಿರುವ ಘಟನೆ ರಾಯಚೂರಿನ ದೇವದುರ್ಗ ತಾಲೂಕಿನ ಎನ್ ಗಣೇಕಲ್ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    40 ವರ್ಷದ ಮಹೇಶ್ ಕೊಲೆಯಾಗಿರುವ ರೈತ. ಮಹೇಶ್ ಅವರ ಪಕ್ಕದ ಜಮೀನಿನ ರೈತ ಆಂಜಿನಪ್ಪ ಕೊಲೆ ಆರೋಪಿ. ನಾರಾಯಣಪುರ ಬಲದಂಡೆ ಕಾಲುವೆ ನೀರಿಗಾಗಿ ಇವರಿಬ್ಬರ ಮಧ್ಯೆ ಹಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಏಪ್ರಿಲ್ 4ರಂದು ಜಗಳ ವಿಪರೀತ ಮಟ್ಟಕ್ಕೆ ಹೋಗಿ ದೊಣ್ಣೆಯಿಂದ ಹೊಡೆದು ಮಹೇಶ್‍ನನ್ನ ಕೊಲೆ ಮಾಡಿದ್ದ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಆರೋಪಿ ಆಂಜಿನಪ್ಪ ಕೊಲೆಯನ್ನು ಅಪಘಾತ ಎಂದು ಬಿಂಬಿಸಿದ್ದ. ಬೈಕ್ ಅಪಘಾತದಲ್ಲಿ ಮಹೇಶ್ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಆದ್ರೆ ಗಬ್ಬೂರು ಠಾಣೆಯ ಪೊಲೀಸರು ಮಹೇಶನ ಮೈಮೇಲಿನ ಗಾಯದ ಗುರುತುಗಳಿಂದ ಅನುಮಾನಗೊಂಡು ತನಿಖೆ ನಡೆಸಿದಾಗ ಆಂಜಿನಪ್ಪ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಅಂಜಿಪ್ಪನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

     

  • ತ್ರಿಬಲ್ ರೈಡಿಂಗ್ ತಂದ ಆಪತ್ತು: ಸವಾರರಿಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

    ತ್ರಿಬಲ್ ರೈಡಿಂಗ್ ತಂದ ಆಪತ್ತು: ಸವಾರರಿಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

    ರಾಯಚೂರು: ಸಿಂಧನೂರು ತಾಲೂಕಿನ ಮೂರು ಮೈಲ್ ಕ್ಯಾಂಪ್ ಬಳಿ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

    ಸಿಂಧನೂರು ನಗರದ ಮಹಿಬೂಬಾ ಕಾಲೋನಿಯ 26 ವರ್ಷದ ಮಾರುತಿ, 21 ವರ್ಷದ ಆದೇಶ್ ಮೃತ ದುರ್ದೈವಿಗಳು. ಸಿಂಧನೂರಿನಿಂದ ಮೂರು ಮೈಲ್ ಕ್ಯಾಂಪ್ ಗೆ ಮೂವರು ಒಂದೇ ಬೈಕ್‍ನಲ್ಲಿ ತೆರಳುತ್ತಿದ್ದಾಗ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ. ಎರಡು ವಾಹನಗಳ ಅತಿವೇಗದ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ.

    ಇನ್ನೋರ್ವ ಸವಾರ ಆಂಜನೇಯ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಹಾಗೂ ಲಾರಿ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಅಪಘಾತದಲ್ಲಿ ಎರಡೂ ಕಾಲುಗಳು ಕಟ್ ಆದ್ರೂ ಆಸ್ಪತ್ರೆಗೆ ಸೇರಿಸದೇ ವಿಡಿಯೋ ಮಾಡಿದ್ರು!

    ಅಪಘಾತದಲ್ಲಿ ಎರಡೂ ಕಾಲುಗಳು ಕಟ್ ಆದ್ರೂ ಆಸ್ಪತ್ರೆಗೆ ಸೇರಿಸದೇ ವಿಡಿಯೋ ಮಾಡಿದ್ರು!

    ಚಿತ್ರದುರ್ಗ: ಅಪಘಾತ ನಡೆದಾಗ ಗಾಯಗೊಂಡವರ ರಕ್ಷಣೆಗೆ ಧಾವಿಸಿ ಎಂದು ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ವರದಿಯಾದರೂ ಜನರಿಗೆ ಮಾತ್ರ ಇನ್ನೂ ಸಹಾಯ ಪ್ರಜ್ಞೆ ಬಂದಿಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.

    ಅಪಘಾತದಿಂದಾಗಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ನೆರದಿದ್ದ ಜನ ಮಾತ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸದೇ ಮೊಬೈಲ್‍ಗಳಲ್ಲಿ ದೃಶ್ಯ ಸೆರೆಹಿಡಿದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

    ಆಗಿದ್ದೇನು?: ಫೆಬ್ರವರಿ 22 ರಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಅಶೋಕ ಸಿದ್ದಾಪುರ ಗ್ರಾಮದಲ್ಲಿ ಆಟೋಗೆ ಲಾರಿ ಡಿಕ್ಕಿ ಹೊಡೆದು ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 11 ಜನರು ಗಾಯಗೊಂಡಿದ್ದರು.

    ಆಟೋದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಗನ್ನಿಗಮ್ಮನ ಹಳ್ಳಿಯ ನಿವಾಸಿ ರಮೇಶ್ (18) ಪ್ರಯಾಣಿಸುತ್ತಿದ್ದರು. ಲಾರಿ ಎರಡು ಕಾಲುಗಳ ಮೇಲೆ ಲಾರಿ ಹಾದು ಹೋಗಿದ್ದರಿಂದ ರಮೇಶ್ ಕಾಲು ತುಂಡಾಗಿತ್ತು. ಎರಡು ಗಂಟೆಗಳ ಚಿಕಿತ್ಸೆಗಾಗಿ ರಮೇಶ್ ಅಂಗಲಾಚಿದ್ರೂ ಸ್ಥಳೀಯರು ಸಹಾಯ ಹಸ್ತ ನೀಡದೇ ಮೂಕಪ್ರೇಕ್ಷಕರಾಗಿ ನಿಂತಿದ್ದರು.

    ಕೊನೆಗೆ ಅಂಬುಲೆನ್ಸ್ ಮುಖಾಂತರ ರಾಂಪುರ ಗ್ರಾಮದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಮೇಶ್ ಅವರನ್ನು ಬಳ್ಳಾರಿಯ ಆಸ್ಪತ್ರೆಗೆ ದಾಖಲಿಸದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಳೆದ ತಿಂಗಳು ಇಂಹುದೇ ಪ್ರಕರಣ ಕೊಪ್ಪಳ ಹಾಗೂ ಯಾದಗಿರಿಯಲ್ಲೂ ಪ್ರಕರಣಗಳು ನಡೆದಿತ್ತು.

    https://youtu.be/AESbC8wVrcQ

  • ರಾಯಚೂರು: ಲಾರಿ ಡಿಕ್ಕಿ ಹೊಡೆದು ಪಾದಚಾರಿ ಸಾವು

    ರಾಯಚೂರು: ಲಾರಿ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯರಮರಸ್ ಗ್ರಾಮದಲ್ಲಿ ಇಂದು ನಡೆದಿದೆ.

    ಯರಮರಸ್ ಗ್ರಾಮದ 30 ವರ್ಷದ ರಮೇಶ್ ಸಾವಿಗಿಡಾದ ವ್ಯಕ್ತಿ. ರಸ್ತೆ ಬದಿ ಹೋಗುತ್ತಿದ್ದ ವ್ಯಕ್ತಿಗೆ ವೇಗವಾಗಿ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ತಮಿಳುನಾಡು ಮೂಲದ ಲಾರಿ ಚಾಲಕ ಮುರುಗನ್ ನಿರ್ಲಕ್ಷ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ರಾಯಚೂರು- ಹೈದ್ರಾಬಾದ್ ಮುಖ್ಯ ರಸ್ತೆ ಗ್ರಾಮದಲ್ಲಿ ಹಾದು ಹೋಗುವುದರಿಂದ ಲಾರಿ ಸೇರಿ ದೊಡ್ಡ ವಾಹನಗಳು ವೇಗವಾಗಿ ಚಲಿಸುವುದೇ ಇಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಬೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಚಾಲಕ ಮುರುಗನ್ ನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಬಳ್ಳಾರಿಯಲ್ಲಿ ಅದಿರು ಲಾರಿಗಳ ಅಬ್ಬರಕ್ಕೆ ನಿತ್ಯ ಅಮಾಯಕರು ಬಲಿ!

    -ಜನರ ಪಾಲಿಗೆ ಕಿಲ್ಲರ್ ಲಾರಿಗಳಾದ್ರೂ ಜಿಲ್ಲಾಡಳಿತಕ್ಕಿಲ್ಲ ವರಿ

    ಬಳ್ಳಾರಿ: ಜಿಲ್ಲೆಯಲ್ಲಿ ಅದಿರು ಲಾರಿಗಳ ಅಬ್ಬರ ಜೋರಾಗಿಬಿಟ್ಟಿದೆ. ಅದಿರು ಲಾರಿಗಳಿಗೆ ಸಿಲುಕಿ ನಿತ್ಯ ಅಮಾಯಕ ಪ್ರಯಾಣಿಕರು ಬಲಿಯಾಗುತ್ತಿದ್ದಾರೆ. ಗಣಿ ಪ್ರದೇಶವಾದ ಸಂಡೂರು, ತೋರಣಗಲ್‍ನಲ್ಲಿ ಅದಿರು ಲಾರಿಗಳು ಇದೀಗ ಅಕ್ಷರಶಃ ಕಿಲ್ಲರ್ ಲಾರಿಗಳಂತೆ ಓಡಾಡುತ್ತಿವೆ. ಹೀಗಾಗಿ ಜನರು ರಸ್ತೆಯ ಮೇಲೆ ಓಡಾಡಲೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಅದಿರು ಲಾರಿಗಳ ಅಬ್ಬರಕ್ಕೆ ಬ್ರೇಕ್ ಹಾಕೋರೆ ಇಲ್ಲದಂತಾಗಿ ಬಿಟ್ಟಿದೆ. ಗಣಿಗಾರಿಕೆ ನಿಂತರೂ ಅದಿರು ಲಾರಿಗಳ ಅಬ್ಬರ ಮಾತ್ರ ಇನ್ನೂ ತಗ್ಗಿಲ್ಲ. ಸಾಕ್ಟ್ ಯಾರ್ಡ್ ಕಾರ್ಖಾನೆಗಳಿಗೆ ಬೇಗನೇ ಅದಿರು ಸರಬುರಾಜು ಮಾಡಲು ಲಾರಿಗಳು ಓವರ್ ಸ್ಪೀಡ್ ಆಗಿ ಓಡುತ್ತಿರುವುದರಿಂದ ನಿತ್ಯ ಒಂದಿಬ್ಬರು ಅದಿರು ಲಾರಿಗಳಿಗೆ ಆಹಾರವಾಗುವಂತಾಗಿದೆ.

    ಕಳೆದ 5 ವರ್ಷಗಳಲ್ಲಿ 73 ಜನರು ಅದಿರು ಲಾರಿಗಳ ಅಪಘಾತದಲ್ಲಿ ಮೃತಪಟ್ಟರೆ ಬರೋಬ್ಬರಿ 304 ಜನರು ಲಾರಿಗಳ ಅಪಘಾತದಿಂದ ಗಾಯಗೊಂಡು ನಿತ್ಯ ನರಕಯಾತನೆ ಪಡುವಂತಾಗಿದೆ. ಕಳೆದ ಜನವರಿ ತಿಂಗಳೊಂದರಲ್ಲೇ 6 ಜನರು ಮೃತಪಟ್ಟು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೀಗಾಗಿ ಅದಿರು ಲಾರಿಗಳ ಅಬ್ಬರಕ್ಕೆ ಬ್ರೇಕ್ ಹಾಕೋರೂ ಯಾರು ಇಲ್ವಾ ಅನ್ನೋ ಪ್ರಶ್ನೆ ಎದುರಾಗಿದೆ.

    ಅದಿರು ಲಾರಿಗಳ ಅಬ್ಬರಕ್ಕೆ ಅಮಾಯಕ ಜನರು ಬಲಿಯಾಗಿರುವುದನ್ನು ವಿರೋಧಿಸಿ ಸ್ಥಳೀಯ ಸಂಘಟನೆಗಳು ಪ್ರತಿಭಟನೆ ಮಾಡಿದ್ರೆ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಇದೀಗ ಹೋರಾಟಗಾರರ ವಿರುದ್ಧವೇ ಪ್ರಕರಣ ದಾಖಲಿಸಿ ಹೋರಾಟ ಹತ್ತಿಕ್ಕುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ ಜನರ ಜೀವ ಕಾಪಾಡಬೇಕಾದ ಜಿಲ್ಲಾಧಿಕಾರಿಗಳೇ ಜನರ ಜೀವ ತಗೆಯುವ ಲಾರಿಗಳ ಪರವಾಗಿ ನಿಂತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.