Tag: Accidemt

  • ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ನಾಲ್ವರ ದುರ್ಮರಣ

    ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ನಾಲ್ವರ ದುರ್ಮರಣ

    ಮಂಡ್ಯ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ನಾಲ್ವರು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ನಡೆದಿದೆ.

    ಜಯದೀಪ್(29) ಹಾಗೂ ಅವರ ಪತ್ನಿ ಜ್ಞಾನತೀರ್ಥ(26), ಕಿರಣ್(30) ಹಾಗೂ ಅವರ ಪತ್ನಿ ಜಿನ್ಸಿ(27) ಮೃತ ದುರ್ದೈವಿಗಳು. ಕಳೆದ ರಾತ್ರಿ ಈ ಅಪಘಾತ ನಡೆದಿದ್ದು, ಮೃತಪಟ್ಟವರು ಕೇರಳ ಮೂಲದವರು ಎಂಬುದು ತಿಳಿದು ಬಂದಿದೆ.

    ಕೇರಳ ಮೂಲದ ನಾಲ್ವರು ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಮದ್ದೂರು ಪಟ್ಟಣದ ಕೊಪ್ಪ ಸರ್ಕಲ್ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

    ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಈ ಬಗ್ಗೆ ಮದ್ದೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.