Tag: acb raid

  • ನಂಗೆ 50 ಸಾವಿರ ಸಂಬಳ, ಸ್ವಂತ ಸಹಿ ಇಲ್ಲ: ಮಾಯಣ್ಣ

    ನಂಗೆ 50 ಸಾವಿರ ಸಂಬಳ, ಸ್ವಂತ ಸಹಿ ಇಲ್ಲ: ಮಾಯಣ್ಣ

    ಬೆಂಗಳೂರು: ನಾನು ಕಾನೂನಿಗೆ ಬದ್ಧನಾಗಿದ್ದೇನೆ. ಯಾವುದೇ ಅಕ್ರಮ ಆಸ್ತಿಗಳನ್ನು ಮಾಡಿಲ್ಲ. ನಾನು ಓಡಾಡುವ ಐಷಾರಾಮಿ ಕಾರು ನನ್ನದಲ್ಲ ಎಂದು ಬಿಬಿಎಂಪಿ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗದಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿ ಕೆಲಸ ಮಾಡಿಕೊಂಡಿದ್ದ ಮಾಯಣ್ಣ ಹೇಳಿಕೆ ನೀಡಿದ್ದಾರೆ.

    ನಿನ್ನೆ ಬೆಳಗ್ಗೆ ಎಸಿಬಿ ಅಧಿಕಾರಿಗಳು ಮಾಯಣ್ಣ ಹಾಗೂ ಅವರ ಸಂಬಂಧಿಕರ ಮನೆಯ ಮೇಲೆ ದಾಳಿ ನಡೆಸಿದ ಬಳಿಕ ಕೋಟಿಗಟ್ಟಲೆ ಅಸ್ತಿ ಹೊಂದಿರುವುದು ಬಯಲಾಗಿತ್ತು. ಇದನ್ನೂ ಓದಿ: ಎಸಿಬಿ ಅಧಿಕಾರಿಗಳ ಭರ್ಜರಿ ರಣಬೇಟೆ – 503 ಅಧಿಕಾರಿಗಳು 68 ಕಡೆ ದಾಳಿ..!

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನಗೆ ಈಗ 50 ಸಾವಿರ ರೂ. ಸಂಬಳ ಬರುತ್ತಿದೆ. ಇದೇ ಹಣದಲ್ಲಿ ನಾನು ಜೀವನವನ್ನು ಸಾಗಿಸುತ್ತಿದ್ದೇನೆ. ಹಾಗೆಯೇ ನಾನೊಬ್ಬ ಪ್ರಥಮ ದರ್ಜೆ ಸಹಾಯಕ. ನನಗೆ ಸ್ವಂತದ ಸಹಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ನನಗೆ ಬರುವ ಸಂಬಳ ಸಾಕಾಗ್ತಿಲ್ಲ: ಮಾಯಣ್ಣ

    ನಾನು ಫೈನಲ್ ಅಥಾರಿಟಿಯೂ ಅಲ್ಲ. ಯಾವುದೇ ಕಡತದ ಇಲ್ಲವೇ ಕಚೇರಿಯ ನಿರ್ಧಾರವನ್ನೂ ತೆಗೆದುಕೊಳ್ಳಲು ನನ್ನಿಂದ ಸಾಧ್ಯವಿಲ್ಲ. ನಾನು ಯಾವುದರ ನಿರ್ಣಾಯಕನೂ ಅಲ್ಲ. ಕೇವಲ ಫಾರ್ವರ್ಡಿಂಗ್ ಆಫಿಸರ್ ಆಗಿದ್ದೇನೆ ಅಷ್ಟೇ ಎಂದು ಹೇಳಿಕೆ ನೀಡಿದರು.

  • ನನಗೆ ಬರುವ ಸಂಬಳ ಸಾಕಾಗ್ತಿಲ್ಲ: ಮಾಯಣ್ಣ

    ನನಗೆ ಬರುವ ಸಂಬಳ ಸಾಕಾಗ್ತಿಲ್ಲ: ಮಾಯಣ್ಣ

    ಬೆಂಗಳೂರು: ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಬರುವ ಸಂಬಳ ಜೀವನಕ್ಕೆ ಸಾಲುತ್ತಿಲ್ಲ ಎಂದು ಬಿಬಿಎಂಪಿ ಕ್ಲರ್ಕ್‌ ಹೇಳಿದ್ದಾರೆ.

    ನಿವಾಸದ ಮೇಲೆ ಎಸಿಬಿ ದಾಳಿ ಕುರಿತು ಪ್ರತಿಕ್ರಿಯಿಸಿರುವ ಅವರು, ಬರುವ ಸಂಬಳ ನನಗೆ ಸಾಕಾಗುತ್ತಿಲ್ಲ. ಸಾಕಷ್ಟು ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದೇನೆ. ಕಸಾಪ ಚುನಾವಣೆಗೆ ಸ್ಪರ್ಧಿಸಿರುವುದಕ್ಕೆ ಹೀಗಾಗಿದೆ. ಎಸಿಬಿ ದಾಳಿ ಕಾನೂನಾತ್ಮಕವಾಗಿದೆ. ಕಾಲವೇ ಇದಕ್ಕೆಲ್ಲ ಉತ್ತರ ಹೇಳುತ್ತದೆ. ನನ್ನನ್ನು ಯಾರೋ ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳುವುದಿಲ್ಲ. ಕಾಲಚಕ್ರ ತಿರುಗಿ ಬರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಪ್ರಾಮಾಣಿಕ ಅಧಿಕಾರಿ, ತೆರಿಗೆ ಕಟ್ಟುತ್ತಿದ್ದೇನೆ: ಎಲ್‌.ಸಿ.ನಾಗರಾಜ್‌

    ನಾನು ಬೇನಾಮಿ ಆಸ್ತಿ ಮಾಡಿಲ್ಲ. 59,000 ರೂ. ನಗದು, 556 ಗ್ರಾಂ ಚಿನ್ನ ಇದೆ. ಒಂದೂವರೆ ಕೆ.ಜಿ ಬೆಳ್ಳಿ ಇದೆ. ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿದವರನ್ನೆಲ್ಲ ಟಾರ್ಗೆಟ್ ಮಾಡಿದ್ದಾರೆ. ನಾನು ಸರ್ಕಾರಕ್ಕೆ ಎಲ್ಲ ಆಸ್ತಿಯ ವರದಿಯನ್ನು ನೀಡಿದ್ದೀನಿ. ನನಗೆ ನೋಟಿಸ್‌ ಕೊಟ್ಟಿದ್ದಾರೆ ಎಂದಿದ್ದಾರೆ.

    ಎಸಿಬಿ ಅಧಿಕಾರಿಗಳು ಕಾನೂನು ರೀತಿಯಲ್ಲಿ ಕೆಲಸ ಮಾಡಿದ್ದಾರೆ. ನಾನು ಕಾನೂನು ಬದ್ಧವಾಗಿದ್ದೇನೆ. ಬಿಬಿಎಂಪಿಯಲ್ಲಿ ತಂದೆ-ತಾಯಿ ಪೌರಕಾರ್ಮಿಕರಾಗಿ ದುಡಿದವರು. ಬಿಬಿಎಂಪಿ ಅಧಿಕಾರಿಗಳಿಗೆ ಉತ್ತರಾದಾಯಿತ್ವ ಇದ್ದೀನಿ. ನಾನು ಕಾನೂನು ಬದ್ಧವಾಗಿ ಬದುಕುತ್ತಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಮಹಾನಗರ ಪಾಲಿಕೆ ನನ್ನ ತಾಯಿ ಇದ್ದಂತೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಪೈಪ್, ಬಕೆಟ್‍ನಲ್ಲಿ ಫುಲ್ ಹಣ – ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

    ಸಾಹಿತ್ಯ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ಇದೆಲ್ಲಾ ಆಗಿದೆ. ಉಮಾದೇವಿ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದಕ್ಕೆ ಅವರನ್ನೂ ಗುರಿ ಮಾಡಿದ್ದಾರೆ. ಎಲ್ಲಾ ದಾಖಲೆಯ ಜೆರಾಕ್ಸ್ ಪ್ರತಿಯನ್ನು ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಅವರು ಕೇಳಿದ 24 ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಮಾಯಣ್ಣ ಅವರಿಗೆ ಬೆಂಗಳೂರಲ್ಲಿ 4 ವಾಸದ ಮನೆ, ವಿವಿಧ ಕಡೆ 6 ನಿವೇಶನ, 2 ಎಕರೆ ಕೃಷಿ ಜಮೀನು, 2 ಬೈಕ್ ಮತ್ತು 1 ಕಾರ್, 59 ಸಾವಿರ ನಗದು, 10 ಲಕ್ಷ ರೂ. ಎಫ್‍ಡಿ, ಉಳಿತಾಯ ಖಾತೆಯಲ್ಲಿ 1.50 ಲಕ್ಷ ರೂ., 600 ಗ್ರಾಂ ಚಿನ್ನಾಭರಣ, 3 ಸ್ಥಳಗಳಲ್ಲಿ ಬೇನಾಮಿ ಆಸ್ತಿ, 12 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳಿವೆ. ಅವುಗಳನ್ನು ವಶಕ್ಕೆ ಪಡೆದು ಎಸಿಬಿ ಪರಿಶೀಲನೆ ನಡೆಸಿದ್ದಾರೆ.

  • ನಾನು ಪ್ರಾಮಾಣಿಕ ಅಧಿಕಾರಿ, ತೆರಿಗೆ ಕಟ್ಟುತ್ತಿದ್ದೇನೆ: ಎಲ್‌.ಸಿ.ನಾಗರಾಜ್‌

    ನಾನು ಪ್ರಾಮಾಣಿಕ ಅಧಿಕಾರಿ, ತೆರಿಗೆ ಕಟ್ಟುತ್ತಿದ್ದೇನೆ: ಎಲ್‌.ಸಿ.ನಾಗರಾಜ್‌

    ಬೆಂಗಳೂರು: ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಕೆಎಎಸ್‌ ಅಧಿಕಾರಿ ಎಲ್‌.ಸಿ.ನಾಗರಾಜ್‌ ಪ್ರತಿಕ್ರಿಯಿಸಿದ್ದಾರೆ.

    ಎಸಿಬಿ ದಾಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಅಧಿಕಾರಿಯೊಬ್ಬರು ಬೇಕಂತಲೇ ದಾಳಿ ಮಾಡಿದ್ದಾರೆ. ನಾನು ಪ್ರಮಾಣಿಕವಾಗಿ ಇದ್ದೇನೆ. ಪದೇ ಪದೇ ನನ್ನ ಮೇಲೆ ದಾಳಿ ಮಾಡಿದ್ದಾರೆ. ದಾಳಿಗೆ ಭಯ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

    ನನ್ನನ್ನು ಗುರಿಯಾಗಿಸಿ ಇದು 3 ನೇ ಬಾರಿ ದಾಳಿ ಮಾಡಲಾಗಿದೆ. 43 ಲಕ್ಷ ರೂ. ಹಣಕ್ಕೆ ದಾಖಲಾತಿಗಳು ಇವೆ. ನನ್ನ ಪತ್ನಿಗೆ ಸಂಬಂಧಿಸಿದ ಆಸ್ತಿ ಮಾರಾಟ ಮಾಡಲು ಯತ್ನಿಸಿದ್ದೆ. 2.4 ಕೋಟಿಗೆ ಆಸ್ತಿ ಮಾರಾಟ ಮಾಡಿದ್ದೆ. ಅದರ ಹಣವನ್ನು ನಾನು ಪಡೆದಿದ್ದೆ. ಎಲ್ಲಾ ಕೂಡ ವೈಟ್ ಎಂದು ಸ್ಪಷ್ಟಪಡಿಸಿದ್ದಾರೆ.

    ನನ್ನ ಅತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದಕ್ಕೆ ಹಣ ತಂದು ಇಟ್ಟಿದ್ದೆ. ಯಾರೋ ಬೇರೆ ಉದ್ದೇಶ ಇಟ್ಟುಕೊಂಡು ದಾಳಿ ಮಾಡಿದ್ದಾರೆ. ನನ್ನ ನಿಯಂತ್ರಣ ಮಾಡುವ ಉದ್ದೇಶಕ್ಕೆ ದಾಳಿ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಚಿದ ವಾಯುಮಾಲಿನ್ಯ- ಎಲೆಕ್ಟ್ರಿಕ್‌, ಸಿಎನ್‌ಜಿ ವಾಹನಗಳ ಸಂಚಾರಕ್ಕಷ್ಟೇ ಅನುಮತಿ

    ನೆಲಮಂಗಲ ನಗರದಲ್ಲಿ ಮೂರು ಕಡೆ ಎಸಿಬಿ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದರು. ಐಎಂಎ ಪ್ರಕರಣದ ಆರೋಪಿಯೂ ಆಗಿರುವ ಕೆಎಎಸ್‌ ಅಧಿಕಾರಿ ಎಲ್‌.ಸಿ.ನಾಗರಾಜು ಹಾಗೂ ಸಂಬಂಧಿಗಳ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ನಗದು, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

  • 60ಕ್ಕೂ ಹೆಚ್ಚು ಕಡೆ ಎಸಿಬಿ ದಾಳಿ – ಕಂತೆ ಕಂತೆ ಹಣ ಎಣಿಸುತ್ತಿದ್ದಾರೆ ಅಧಿಕಾರಿಗಳು

    60ಕ್ಕೂ ಹೆಚ್ಚು ಕಡೆ ಎಸಿಬಿ ದಾಳಿ – ಕಂತೆ ಕಂತೆ ಹಣ ಎಣಿಸುತ್ತಿದ್ದಾರೆ ಅಧಿಕಾರಿಗಳು

    ಬೆಂಗಳೂರು: ಬಿಡಿಎ ಬಳಿಕ ಬಿಬಿಎಂಪಿಗೆ ಎಸಿಬಿ ಶಾಕ್‌ ನೀಡಿದ್ದು, ರಾಜ್ಯಾದ್ಯಂತ 60 ಕಡೆ ದಾಳಿ ನಡೆದಿದೆ. ಬೆಂಗಳೂರಿನಲ್ಲೇ 30 ಕಡೆ ಎಸಿಬಿ ದಾಳಿ ನಡೆದಿದೆ.

    ಬೆಂಗಳೂರಿನಲ್ಲಿ ನಾಲ್ವರು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಮನೆ ಮೇಲೆ ದಾಳಿ ನಡೆದಿದೆ. ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ 20 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಬರೋಬ್ಬರಿ 1,743 ಕೋಟಿ ಆಸ್ತಿ ಹೊಂದಿರುವ ಶ್ರೀಮಂತ ರಾಜಕಾರಣಿ ಕಣಕ್ಕೆ – ಕೆಜಿಎಫ್‌ ಬಾಬು ಆಸ್ತಿ ಎಷ್ಟಿದೆ?

    ಯಾರ ಮೇಲೆ ದಾಳಿ?
    ಲಹಂಕ ಸರ್ಕಾರಿ ಆಸ್ಪತ್ರೆಯ ಫಿಸಿಯೋಥರಪಿಸ್ಟ್‌ ರಾಜಶೇಖರ, ಬಿಬಿಎಂಪಿ ಸಿಬ್ಬಂದಿ ಮಾಯಣ್ಣ, ಬಾಗಲಗುಂಟೆಯ ಗಿರಿ, ಮಂಗಳೂರು ಸ್ಮಾರ್ಟ್‌ ಸಿಟಿಯ ಇಇ ಕೆಎಸ್‌ ಲಿಂಗೇಗೌಡ, ಮಂಡ್ಯದ ಎಂಜಿನಿಯರ್‌ ಶ್ರೀನಿವಾಸ್‌, ದೊಡ್ಡಬಳ್ಳಾಪುರದ ರೆವೆನ್ಯೂ ಇನ್ಸ್‌ಪೆಕ್ಟರ್‌ ಲಕ್ಷ್ಮೀನರಸಿಂಹಯ್ಯ, ಬೆಂಗಳೂರು ನಿರ್ಮಿತಿ ಕೇಂದ್ರದ ಮಾಜಿ ಪ್ರೊಜೆಕ್ಟ್‌ ಮ್ಯಾನೇಜರ್‌ ವಾಸುದೇವ್‌ ಮನೆ ಮೇಲೆ ದಾಳಿ ನಡೆದಿದೆ. ಇದನ್ನೂ ಓದಿ: ಬಿಡಿಎನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ಮೊನ್ನೆ 300 ಕೋಟಿ, ಇಂದು 200 ಕೋಟಿ ಅಕ್ರಮ

    ಬೆಂಗಳೂರು ನಂದಿನಿ ಡೈರಿಯ ಜನರಲ್‌ ಮ್ಯಾನೇಜರ್‌ ಕೃಷ್ಣರೆಡ್ಡಿ, ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿಎಸ್ ರುದ್ರೇಶಪ್ಪ, ಸಹಕಾರ ಇಲಾಖೆ ಅಧಿಕಾರಿ ಕೆ ಮಸ್ತಿ, ಗೋಕಾಕ್‌ ಹಿರಿಯ ಮೋಟಾರ್‌ ಇನ್ಸ್‌ಪೆಕ್ಟರ್‌ ಸದಾಶಿವ ಮಾರಲಿಂಗಣ್ಣನವರ್, ಬೆಳಗಾವಿ ಹೆಸ್ಕಾಂ ನೇತಾಜಿ ಹೀರಾಜಿ ಪಾಟೀಲ್, ಬಳ್ಳಾರಿಯ ನಿವೃತ್ತ ಸಬ್‍ರಿಜಿಸ್ಟ್ರರ್ ಕೆಎಸ್ ಶಿವಾನಂದ, ಜೇವರ್ಗಿ ಪಿಡಬ್ಲ್ಯೂಡಿ ಜೆಇ ಎಸ್ ಎಂ ಬಿರಾದರ್ ಮನೆ ಮೇಲೆ ದಾಳಿ ನಡೆದಿದೆ.

  • ಬಿಡಿಎ ಅಧಿಕಾರಿಗಳಿಗೆ ಎಸಿಬಿ ಶಾಕ್‌- ಕಂತೆ ಕಂತೆ ನೋಟು, ಬ್ಯಾಗ್‌ಗಟ್ಟಲೆ ದಾಖಲೆಗಳು ವಶ!

    ಬಿಡಿಎ ಅಧಿಕಾರಿಗಳಿಗೆ ಎಸಿಬಿ ಶಾಕ್‌- ಕಂತೆ ಕಂತೆ ನೋಟು, ಬ್ಯಾಗ್‌ಗಟ್ಟಲೆ ದಾಖಲೆಗಳು ವಶ!

    ಬೆಂಗಳೂರು: ನಗರದ ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿ ಅಧಿಕಾರಿಗಳಿಗೆ ಎಸಿಬಿ ಶಾಕ್‌ ನೀಡಿದೆ. ಏಕಕಾಲಕ್ಕೆ 60ಕ್ಕೂ ಹೆಚ್ಚು ಅಧಿಕಾರಿಗಳು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

    ಹಣ ವಸೂಲಿ ಮಾಡುತ್ತಿರುವ ಬಗ್ಗೆ ಬಿಡಿಎ ಅಧಿಕಾರಿಗಳ ವಿರುದ್ಧ ಪದೇ ಪದೇ ಆರೋಪಗಳು ಕೇಳಿಬರುತ್ತಿದ್ದವು. ಎಸಿಬಿ ಎಡಿಜಿಪಿ ಸೀಮಂತ್‌ ಕುಮಾರ್‌ ನೇತೃತ್ವದಲ್ಲಿ ಖುದ್ದು ಮೂವರು ಎಸ್‌ಪಿಗಳು ಬಿಡಿಎ ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಡಿ.13ರಿಂದ ಬೆಳಗಾವಿ ವಿಧಾನಮಂಡಲ ಅಧಿವೇಶನ

    ಬಿಡಿಎ ಭೂ ಸ್ವಾಧೀನ ವಿಭಾಗ, ಕಾರ್ಯದರ್ಶಿಗಳ ಕಚೇರಿಗಳ ಮೇಲೆ ಈ ದಾಳಿ ನಡೆದಿದೆ. ಡಿಎಸ್ 1,2,3,4 ಕಚೇರಿಗಳು ಹಾಗೂ ಅವರ ಅಪ್ತರ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಭೂ ಸ್ವಾಧೀನ ವಿಭಾಗದಲ್ಲಿ ಸ್ವಾಧೀನ ಜಾಗಕ್ಕೆ ಪರಿಹಾರ ಸೈಟ್ ನೀಡುವಲ್ಲಿ ಅಕ್ರಮ, ಪರಿಹಾರದ ಹಣ ನೀಡುವಲ್ಲಿ ಅಕ್ರಮ ದೂರುಗಳು ಕೇಳಿ ಬಂದಿದ್ದವು. ದಾಳಿ ವೇಳೆ ಬಿಡಿಎ ಡೆಪ್ಯುಟಿ ಸೆಕ್ರೆಟರಿ ನವೀನ್ ಜೋಸೆಫ್ ಕಚೇರಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಹಣವನ್ನು ವಶಕ್ಕೆ ಪಡೆದು ಪರಿಶೀಲನೆ ಮುಂದುವರಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಈಗಲೂ ರೈತರು ಪ್ರತಿಭಟನೆ ಮಾಡುತ್ತಿರುವುದು ಯಾಕೆ – ಅಮರಿಂದರ್ ಪ್ರಶ್ನೆ

    ಕಚೇರಿಯಲ್ಲಿದ್ದ ಎಂಟು ಅಧಿಕಾರಿಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಪಾರ್ಕಿಂಗ್‍ನಲ್ಲಿರುವ ವಾಹನಗಳು ಹಾಗೂ ಹೊರಗಿದ್ದವರನ್ನೂ ಪರಿಶೀಲನೆ ನಡೆಸಲಾಗಿದೆ. ಫಾರ್ಚೂನರ್ ಕಾರ್‌ವೊಂದರಲ್ಲಿ ಬ್ಯಾಗ್‌ಗಟ್ಟಲೆ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಸದ್ಯ ಕಾರು ಮತ್ತು ಚಾಲಕನನ್ನು ಅಧಿಕಾರಿಗಳು ವಶಕ್ಕೆ ಪಡೆದರು. ನಂತರ ಸಂಬಂಧಪಟ್ಟ ಮಾಲೀಕನಿಗೆ ಫೋನ್‌ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಪರಿಶೀಲನೆ ನಡೆಸಲಾಯಿತು. ಕಾರಿನಲ್ಲಿ ಸೀಲ್‌ಗಳು ಪತ್ತೆಯಾಗಿದ್ದು, ಎಸಿಬಿ ತಂಡ ಪರಿಶೀಲನೆ ನಡೆಸಿತು. ಇದೇ ವೇಳೆ ಕಚೇರಿಯ ಹೊರಗೆ ಹಾಗೂ ಒಳಗಡೆ ಇದ್ದ ಸಾರ್ವಜನಿಕರನ್ನೂ ಪರಿಶೀಲನೆಗೆ ಒಳಪಡಿಸಲಾಯಿತು.

  • ಕೆಐಎಡಿಬಿ ಕಚೇರಿ ಮೇಲೆ ಎಸಿಬಿ ದಾಳಿ – 70 ಸಾವಿರ ನಗದು, ದಾಖಲೆ ಜಪ್ತಿ

    ಕೆಐಎಡಿಬಿ ಕಚೇರಿ ಮೇಲೆ ಎಸಿಬಿ ದಾಳಿ – 70 ಸಾವಿರ ನಗದು, ದಾಖಲೆ ಜಪ್ತಿ

    ಹುಬ್ಬಳ್ಳಿ: ಕೆಐಎಡಿಬಿ ಕಚೇರಿ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಹುಬ್ಬಳ್ಳಿಯ ರಾಯಾಪುರ ಬಳಿಯ ಕೆಐಎಡಿಬಿ ಕಚೇರಿ ಮೇಲೆ ದಾಳಿ ನಡೆಸಿ 70 ಸಾವಿರ ನಗದು ಸೇರಿದಂತೆ ಮಹತ್ವದ ದಾಖಲೆಗಳನ್ನ ಜಪ್ತಿ ಮಾಡಿದ್ದಾರೆ.

    ಕೆಐಎಡಿಬಿ ಕಚೇರಿಯಲ್ಲಿ ದೊಡ್ಡಮಟ್ಟದ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಾದಿರಾಜ ಮನ್ನಾರಿ ಹಾಗೂ ಶಿವಾಜಿ ಎನ್ನುವವರು ಪ್ರತ್ಯೇಕ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸಿಬಿ ಎಸ್‍ಪಿ ಎಸ್ ನ್ಯಾಮೇಗೌಡ ನೇತೃತ್ವದ ತಂಡ ಕೆಐಎಡಿಬಿ ಕಚೇರಿ ಮೇಲೆ ದಾಳಿ ನಡೆಸಿ ನಗದು ಸೇರಿದಂತೆ ದಾಖಲಾತಿಗಳನ್ನ ವಶಪಡಿಸಿಕೊಂಡಿದ್ದಾರೆ.

    ಕಳೆದ ಎರಡು ದಿನಗಳಿಂದ ಸತತವಾಗಿ ಕೆಐಎಡಿಬಿ ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಸಿದ ಎಸಿಬಿ ಅಧಿಕಾರಿಗಳು, ನೈಜ ಫಲಾನುಭವಿಗಳಿಗೆ ಪರಿಹಾರ ನೀಡದೇ, ವ್ಯಾಜ್ಯಗಳು ನ್ಯಾಯಾಲಯದಲ್ಲಿರುವ ಪರಿಹಾರ ವಿತರಣೆ ಮಾಡಿರುವ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ.

    ನವಲೂರು ಸಮೀಪದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ವಿಶೇಶ ಭೂಸ್ವಾಧೀನಾಧಿಕಾರಿಗಳ ಕಚೇರಿಯಿಂದ ದಾಖಲೆ ಹಾಗೂ ನಗದು ವಶಪಡಿಸಿಕೊಂಡಿರುವ ಎಸಿಬಿ ಅಧಿಕಾರಿಗಳು ಕೆಐಎಡಿಬಿ ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಓಡಿದ ಆಸ್ಪತ್ರೆ ವೈದ್ಯ, ಸಿಬ್ಬಂದಿ

  • ಸುಧಾ ಆಪ್ತೆಯ ಮನೆ ಮೇಲೆ ದಾಳಿ –  ಕೆಜಿಗಟ್ಟಲೇ ಚಿನ್ನ, ಬೆಳ್ಳಿ ನೋಡಿ ದಂಗಾದ ಅಧಿಕಾರಿಗಳು

    ಸುಧಾ ಆಪ್ತೆಯ ಮನೆ ಮೇಲೆ ದಾಳಿ – ಕೆಜಿಗಟ್ಟಲೇ ಚಿನ್ನ, ಬೆಳ್ಳಿ ನೋಡಿ ದಂಗಾದ ಅಧಿಕಾರಿಗಳು

    – ಇನ್ನೂ ಮುಂದುವರಿದಿದೆ ಹಣ ಎಣಿಕೆ ಲೆಕ್ಕಾಚಾರ
    –  ಸುಧಾ ಏಜೆಂಟ್‌  ರೇಣುಕಾ ಚಂದ್ರಶೇಖರ್?

    ಬೆಂಗಳೂರು: ಕೆಎಎಎಸ್ ಅಧಿಕಾರಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತ ಅಧಿಕಾರಿ ಡಾ.ಸುಧಾ ಮೇಲೆ ನಡೆದ ಎಸಿಬಿ ರೇಡ್‍ನಲ್ಲಿ ಮತ್ತೊಂದು ತಿಮಿಂಗಲ ಸಿಕ್ಕಿ ಬಿದ್ದಿದೆ. ಸುಧಾ ಅತ್ಯಾಪ್ತೆ ರೇಣುಕಾ ಚಂದ್ರಶೇಖರ್ ಮನೆ ಮೇಲೆ ರೇಡ್ ಮಾಡಿದ್ದ ಎಸಿಬಿ ಅಧಿಕಾರಿಗಳು ಸಿಕ್ಕಿದ ಸಂಪತ್ತುಗಳನ್ನು ನೋಡಿ  ದಂಗಾಗಿ ಹೋಗಿದ್ದಾರೆ.

    ಬ್ಯಾಟರಾಯನಪುರದಲ್ಲಿರುವ ರೇಣುಕಾ ಚಂದ್ರಶೇಖರ್ ಪ್ಲಾಟ್‍ನಲ್ಲಿ ಮಣಬಾರದಷ್ಟು ಚಿನ್ನಾಭರಣ, ನಗ-ನಾಣ್ಯ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಇದೆಲ್ಲದರ ಒಟ್ಟು ಮೌಲ್ಯ 250 ಕೋಟಿ ದಾಟಬಹುದು ಎಂದು ಎಸಿಬಿ ಅಧಿಕಾರಿಗಳು ಅಂದಾಜಿಸಿದ್ದಾರೆ.

    ರೇಣುಕಾ ಚಂದ್ರಶೇಖರ್ ಮನೆಯಲ್ಲಿ ಇನ್ನೂ ಹಣ ಎಣಿಕೆ ಮತ್ತು ದಾಖಲೆ ಪರಿಶೀಲನೆ ಕಾರ್ಯ ಮುಂದುವರಿದಿದೆ. ಬ್ಯಾಂಕ್ ವ್ಯವಹಾರ ಲೆಕ್ಕಾಚಾರ ಮಾಡಲು ಇನ್ನೂ ಮೂರು ದಿನ ಬೇಕಾಗಬಹುದು ಅಂತ ಎಸಿಬಿ ಹೇಳಿದ್ದು, ರೇಣುಕಾ ಆಸ್ತಿ-ಪಾಸ್ತಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಗೆ ಸಿಕ್ಕಿರುವ ಎಸಿಬಿ ಮೂಲಗಳ ಮಾಹಿತಿ ಪ್ರಕಾರ, ರೇಣುಕಾ ಚಂದ್ರಶೇಖರ್ ಅವರು ಡಾ. ಸುಧಾ ಅವರ ಏಜೆಂಟ್ ಆಗಿದ್ದರು ಎನ್ನಲಾಗುತ್ತಿದೆ. ಸುಧಾ ಹೇಳಿದ ಕಡೆ ಹಣ ಪಡೆಯುತ್ತಿದ್ದ ಅನುಮಾನದ ಮೇಲೆ ರೇಣುಕಾ ಮನೆ ಮೇಲೆ ದಾಳಿ ನಡೆದಿದೆ.

    ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಿದ್ದ ರೇಣುಕಾ 4 ಕಂಪನಿ ಹೊಂದಿದ್ದಾರೆ. ಈ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಡಾ. ಸುಧಾ ಬೇನಾಮಿ ಇದೆಯೇ ಎಂಬುದರ ಬಗ್ಗೆಯೂ ಎಸಿಬಿ ತನಿಖೆ ಮಾಡುತ್ತಿದೆ. ಜೊತೆಗೆ, ರೇಣುಕಾ ಪತಿ ಚಂದ್ರಶೇಖರ್ ನಿವೃತ್ತ ಡಿವೈಎಸ್ಪಿ ಆಗಿದ್ದಾರೆ.

    ರೇಣುಕಾ ಪುತ್ರ ಕೂಡ ಎಇಇ ಆಗಿ ಕೆಲಸ ಮಾಡ್ತಿದ್ದಾರೆ. ನಾಳೆ ಕೆಎಎಸ್ ಅಧಿಕಾರಿ ಸುಧಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ನೀಡಿದೆ.

    ಸುಧಾ ಫ್ರೆಂಡ್ ಮನೇಲಿ ಸಿಕ್ಕಿದ್ದೇನು?
    * ಬರೋಬ್ಬರಿ ಮೂರೂವರೆ ಕೆ.ಜಿ ಚಿನ್ನ
    * 7 ಕೆಜಿ ಬೆಳ್ಳಿ, 36 ಲಕ್ಷ ನಗದು
    * ಸುಮಾರು 250 ಕೋಟಿ ಆಸ್ತಿ ಪತ್ರ
    * 40 ಬ್ಯಾಂಕ್‍ಗಳ ಪಾಸ್‍ಬುಕ್
    * ಬ್ಯಾಂಕ್‍ಗಳಲ್ಲಿ 4 ಕೋಟಿ ಡಿಪಾಸಿಟ್
    * ನೂರಕ್ಕೂ ಹೆಚ್ಚು ಚೆಕ್‍ಗಳು, ಒಪ್ಪಂದ ಪತ್ರಗಳು

  • ಯಾದಗಿರಿ, ಕೊಪ್ಪಳದ ಆರ್‌ಟಿಒ ಕಚೇರಿ ಮೇಲೆ ಎಸಿಬಿ ದಾಳಿ

    ಯಾದಗಿರಿ, ಕೊಪ್ಪಳದ ಆರ್‌ಟಿಒ ಕಚೇರಿ ಮೇಲೆ ಎಸಿಬಿ ದಾಳಿ

    ಯಾದಗಿರಿ/ಕೊಪ್ಪಳ: ಸಾರ್ವಜನಿಕರ ದೂರಿನ ಮೇರೆಗೆ ಯಾದಗಿರಿ ಹಾಗೂ ಕೊಪ್ಪಳದ ಆರ್‌ಟಿಒ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

    ಯಾದಗಿರಿಯಲ್ಲಿ ಎಸಿಬಿ ಡಿಎಸ್‍ಪಿ ಸಂತೋಷ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ವಾಹನ ನೋಂದಣಿ ಮತ್ತು ಪರವಾನಗಿ ನೀಡಲು ಕೆಲ ಅಧಿಕಾರಿಗಳು ಮಧ್ಯವರ್ತಿಗಳ ಮೂಲಕ ಜನರಿಗೆ ಲಂಚದ ಬೇಡಿಕೆ ಇಡುತ್ತಿದ್ದರು. ಅಲ್ಲದೆ. ಆರ್‌ಟಿಒ ಕಚೇರಿ ಮುಂಭಾಗದ ಝರಾಕ್ಸ್ ಅಂಗಡಿಯಲ್ಲಿ ಕಾನೂನು ಬಾಹಿರವಾಗಿ ಸರ್ಕಾರದ ಮುದ್ರೆಗಳನ್ನು ಮತ್ತು ವಾಹನ ಚಲಾವಣೆಗೆ ಬೇಕಾದ ಮುಖ್ಯ ದಾಖಲೆಗಳನ್ನು ಸೃಷ್ಟಿ ಮಾಡಲಾಗುತ್ತಿತ್ತು ಎಂಬ ಆರೋಪಿದ ಮೇಲೆ ದಾಳಿ ನಡೆಸಲಾಗಿದೆ.

    ಅಲ್ಲದೆ ಈ ಬಗ್ಗೆ ಸಾರ್ವಜನಿಕರು ಎಸಿಬಿ ಅಧಿಕಾರಿಗಳಿಗೆ ಹಲವು ಬಾರಿ ದೂರು ಸಲ್ಲಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಇಂದು ಬೆಳಗ್ಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯಲ್ಲಿರುವ ಆರ್‌ಟಿಒ ಕಚೇರಿಯಲ್ಲಿ ಎಲ್ಲ ವಿಭಾಗದ ಅಧಿಕಾರಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಝರಾಕ್ಸ್ ಶಾಪ್ ಗಳಲ್ಲಿದ್ದ ಕೆಲವು ಪ್ರಮುಖ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದು, ತೀವ್ರ ಶೋಧ ನಡೆಸಿದ್ದಾರೆ.

    ಕೊಪ್ಪಳದಲ್ಲೂ ದಾಳಿ
    ಭ್ರಷ್ಟಾಚಾರ ಹಾಗೂ ಏಜೆಂಟರ ಹಾವಳಿ ಆರೋಪದ ಹಿನ್ನಲೆಯಲ್ಲಿ ಕೊಪ್ಪಳದ ಆರ್‌ಟಿಒ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಪ್ಪಳ ನಗರದ ಹೊರವಲಯದಲ್ಲಿರುವ ಆರ್‌ಟಿಒ ಕಚೇರಿ ಮೇಲೆ ಎಸಿಬಿ ಡಿವೈಎಸ್ಪಿಗಳಾದ ಆರ್.ಎಸ್.ಉಜ್ಜಿನಕೊಪ್ಪ, ಚಂದ್ರಕಾಂತ್ ಪೂಜಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಎಸಿಬಿ ಏಜೆಂಟರನ್ನು ಹಾಗೂ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಆರ್‌ಟಿಒ ಕಚೇರಿಯಲ್ಲಿನ ನೌಕರರು ಹಾಗೂ ಏಜೆಂಟರು ಸಾರ್ವಜನಿಕರಿಂದ ಅಧಿಕ ಹಣ ವಸೂಲಿ ಮಾಡುತ್ತಿರುವ ಕುರಿತು ಎಸಿಬಿ ಅಧಿಕಾರಿಗಳಿಗೆ ದೂರು ಬಂದಿದ್ದವು. ದೂರಿನ ಹಿನ್ನಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹಲವಾರು ಏಜೆಂಟರು ಹಾಗೂ ನೌಕರರಿಂದ ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

  • ಆರ್‌ಟಿಓ ಕಛೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ

    ಆರ್‌ಟಿಓ ಕಛೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ

    ಕೊಪ್ಪಳ: ಭ್ರಷ್ಟಾಚಾರ ಹಾಗೂ ಏಜೆಂಟರ ಹಾವಳಿ ಆರೋಪದ ಹಿನ್ನಲೆಯಲ್ಲಿ ಕೊಪ್ಪಳದ ಆರ್‌ಟಿಓ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಕೊಪ್ಪಳ ನಗರದ ಹೊರವಲಯದಲ್ಲಿರುವ ಆರ್‌ಟಿಓ ಕಚೇರಿ ಮೇಲೆ ಎಸಿಬಿ ಡಿವೈಎಸ್‍ಪಿ ಆರ್.ಎಸ್ ಉಜ್ಜಿನಕೊಪ್ಪ, ಚಂದ್ರಕಾಂತ್ ಪೂಜಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಎಸಿಬಿ ಅಧಿಕಾರಿಗಳು ಏಜೆಂಟರನ್ನು ಹಾಗೂ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಆರ್‌ಟಿಓ ಕಚೇರಿಯಲ್ಲಿನ ನೌಕರರು ಹಾಗೂ ಏಜೆಂಟರು ಸಾರ್ವಜನಿಕರಿಂದ ಅಧಿಕ ಹಣ ವಸೂಲಿ ಮಾಡುತ್ತಿರುವ ಕುರಿತು ಎಸಿಬಿ ಅಧಿಕಾರಿಗಳಿಗೆ ದೂರುಗಳು ಬಂದಿದ್ದವು. ಈ ದೂರಿನ ಹಿನ್ನಲೆಯಲ್ಲಿ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಧಿಕಾರಿಗಳು ಹಲವಾರು ಏಜೆಂಟರು ಹಾಗೂ ನೌಕರರಿಂದ ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

  • ರಾಯಚೂರು ಆರ್.ಟಿ.ಓ ಕಚೇರಿ ಮೇಲೆ ಎಸಿಬಿ ದಾಳಿ

    ರಾಯಚೂರು ಆರ್.ಟಿ.ಓ ಕಚೇರಿ ಮೇಲೆ ಎಸಿಬಿ ದಾಳಿ

    ರಾಯಚೂರು: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಸಾರಿಗೆ ಪ್ರಾಧಿಕಾರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಚೇರಿಯಲ್ಲಿ ಮಿತಿ ಮೀರಿದ ಲಂಚ ಹಾಗೂ ಬ್ರೋಕರ್ ಗಳ ಹಾವಳಿ ಕುರಿತ ದೂರು ಹಿನ್ನೆಲೆ ದಾಳಿ ನಡೆಸಲಾಗಿದೆ. ಎಸಿಬಿ ಡಿಎಸ್‍ಪಿ ಸಂತೋಷ್ ಬನ್ನಟ್ಟಿ ನೇತೃತ್ವದಲ್ಲಿ ದಾಳಿ ನಡೆದಿದೆ.

    ಬಳ್ಳಾರಿ, ಬೀದರ್, ಕೊಪ್ಪಳ, ಯಾದಗಿರಿ ಹಾಗೂ ರಾಯಚೂರು ಸೇರಿದಂತೆ 5 ಜಿಲ್ಲೆಗಳ ಒಟ್ಟು 30 ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ಮಧ್ಯಾಹ್ನ ಒಂದು ಗಂಟೆಯಿಂದ ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆ ಆರಂಭವಾಗಿದೆ. ದಾಳಿ ಸಮಯದಲ್ಲಿ ಕಚೇರಿ ಒಳಗಿದ್ದ ಬ್ರೋಕರ್‍ ಗಳು ಹಾಗೂ ಸಾರ್ವಜನಿಕರನ್ನ ಎಸಿಬಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

    ಆರ್.ಟಿ.ಓ ಕಚೇರಿಯಲ್ಲಿ ಪ್ರತಿಯೊಂದಕ್ಕೂ ಲಂಚ ಕೊಡಬೇಕು ಹಾಗೂ ಬ್ರೋಕರ್ ಗಳು ಇಲ್ಲದಿದ್ದರೆ ಯಾವುದೇ ಕೆಲಸಗಳು ಆಗುವುದಿಲ್ಲ ಅನ್ನೋ ಮಟ್ಟಿಗೆ ಪರಸ್ಥಿತಿಯಿದೆ ಎಂದು ಬಂದಿದ್ದ ದೂರುಗಳ ಹಿನ್ನೆಲೆ ಅಧಿಕಾರಿಗಳು ಇಂದು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.