Tag: acb raid

  • ಶಾಸಕ ಜಮೀರ್‌ ಅಹ್ಮದ್‌ ಆಸ್ತಿ ಶೇ.2031ರಷ್ಟು ಹೆಚ್ಚಳ!

    ಶಾಸಕ ಜಮೀರ್‌ ಅಹ್ಮದ್‌ ಆಸ್ತಿ ಶೇ.2031ರಷ್ಟು ಹೆಚ್ಚಳ!

    – ಎಸಿಬಿಗೆ ಇಡಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖ

    ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್‌ ಅವರು ಆದಾಯಕ್ಕಿಂತ ಶೇ.2031ರಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

    ಜಮೀರ್‌ ಮನೆ ಮೇಲೆ ದಾಳಿ ಪ್ರಕರಣ ಸಂಬಂಧ ಎಸಿಬಿ ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಆಗಸ್ಟ್‌ 6 ರಂದು ಜಮೀರ್‌ ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಪತ್ತೆಯಾದ ದಾಖಲೆಗಳ ಆಧಾರದ ಮೇಲೆ ಎಸಿಬಿ ದಾಳಿ ನಡೆದಿದೆ ಎಂದು ತಿಳಿಸಿದೆ.

    ಜಮೀರ್ ಶೇ.2031ರಷ್ಟು ಅಕ್ರಮ ಆಸ್ತಿ ಅಂದರೆ 87,44,05,057 ರೂ. ಆಸ್ತಿ ಹೊಂದಿದ್ದಾರೆ. 2005ರಿಂದ ಆಗಸ್ಟ್ 2021ರ ತನಕದ ಜಮೀರ್‌ ಆಸ್ತಿಯನ್ನು ಮೌಲ್ಯ ಮಾಪನ ಮಾಡಲಾಗಿದೆ. ದಾಳಿ ಸಂದರ್ಭದಲ್ಲಿ ಕೆಲವೊಂದು ದಾಖಲಾತಿಗಳು ಸಿಕ್ಕಿದ್ದು ಬೇರೆಯವರ ಹೆಸರಿನಲ್ಲಿ ದಾಖಲಾತಿ ಸಿಕ್ಕಿದೆ ಎನ್ನಲಾಗ್ತಿದೆ.

    ಅಕ್ರಮ ಆಸ್ತಿ ಗಳಿಕೆ ಆರೋಪದಮೇರೆಗೆ ಬೆಂಗಳೂರಿನ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣ ಸಮೀಪ ಬಂಬೂ ಬಜಾರ್‌ನಲ್ಲಿರುವ ಜಮೀರ್ ಅವರ ವೈಭವೋಪೇತ ಮನೆ, ಸದಾಶಿವ ನಗರದಲ್ಲಿರುವ ಅತಿಥಿ ಗೃಹ, ಕಲಾಸಿಪಾಳ್ಯದಲ್ಲಿನ ಅವರ ಒಡೆತನದ ನ್ಯಾಶನಲ್ ಟ್ರಾವೆಲ್ಸ್ ಕಂಪನಿಯ ಕಚೇರಿ, ಓಕಾ ಅಪಾರ್ಟ್‌ಮೆಂಟ್‌ ಫ್ಲ್ಯಾಟ್ ಹಾಗೂ ಬನಶಂಕರಿಯ ಜೆ.ಕೆ ಅಸೋಸಿಯೇಟ್ಸ್‌ ಕಚೇರಿ ಸೇರಿ ಐದು ಸ್ಥಳಗಳ ಮೇಲೆ ದಾಳಿ ನಡೆಸಿತ್ತು.

    2006ರ ಚಾಮರಾಜಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ಜಯಗಳಿಸಿ ಮೊದಲ ಬಾರಿಗೆ ಶಾಸಕರಾದ ಜಮೀರ್‌ ಬಳಿಕ ಸತತ 4 ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ.

    ಶಾಸಕ ಜಮೀರ್ ಆಸ್ತಿ ವಿವರ
    ಐಟಿ ಇಲಾಖೆಗೆ ನೀಡಿದ ಆಸ್ತಿ ವಿವರ: 73,94,35,027 ಕೋಟಿ ರೂ.)
    ಖರ್ಚು-ವೆಚ್ಚ : 17.80 ಕೋಟಿ ರೂ. (17,80,18,000 – ಕೌಟುಂಬಿಕ ನಿರ್ವಹಣೆ, ಮಗಳ ಮದುವೆ, ಮಗನ ಸಿನಿಮಾ ನಿರ್ಮಾಣ)
    ಆದಾಯ : 4.30 ಕೋಟಿ ರೂ. (4,30,48,790 – 17 ವರ್ಷದಲ್ಲಿ ಬಂದಿರುವ ಆದಾಯ)
    ಅಕ್ರಮ ಆಸ್ತಿ: 87 ಕೋಟಿ 44 ಲಕ್ಷ ರೂ.( 87,44,05,057 ರೂ.)

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ 21 ಸರ್ಕಾರಿ ಕುಬೇರರಿಗೆ ಎಸಿಬಿ ಶಾಕ್ – ಕೆಜಿಗಟ್ಟಲೇ ಚಿನ್ನ, ಕೋಟಿ ಕೋಟಿ ನಗದು ವಶ

    ರಾಜ್ಯದ 21 ಸರ್ಕಾರಿ ಕುಬೇರರಿಗೆ ಎಸಿಬಿ ಶಾಕ್ – ಕೆಜಿಗಟ್ಟಲೇ ಚಿನ್ನ, ಕೋಟಿ ಕೋಟಿ ನಗದು ವಶ

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಸರ್ಕಾರಿ ಕುಬೇರರ ಕೋಟೆಗೆ ಎಸಿಬಿ ಅಧಿಕಾರಿಗಳು ಲಗ್ಗೆಯಿಟ್ಟಿತು. ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ 21 ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಚೇರಿಗಳ ಮೇಲೆ ಬೆಂಗಳೂರು ಸೇರಿ ರಾಜ್ಯದ 80 ಕಡೆ 400 ಅಧಿಕಾರಿಗಳು ಏಕಕಾಲದಲ್ಲಿ ರೇಡ್ ನಡೆಸಿದ್ರು.

    ಬಾಗಲಕೋಟೆ, ಬೆಳಗಾವಿ, ಹಾವೇರಿ,ಧಾರವಾಡ, ಬೀದರ್, ಕಾರವಾರ, ಚಿತ್ರದುರ್ಗ, ಉಡುಪಿ, ಹಾಸನ ಸೇರಿ ಹಲವೆಡೆ ಶೋಧ ನಡೆಸಿ ಕೋಟಿ ಕೋಟಿ ಹಣ, ಚಿನ್ನಾಭರಣ ಹೊರತೆಗೆದ್ರು. ಉಡುಪಿಯ ಕೊರಂಗ್ರಪಾಡಿಯಲ್ಲಿರುವ ಸಣ್ಣ ನೀರಾವರಿ ಇಲಾಖೆ ಎಇ ಹರೀಶ್ ಮನೆಯಲ್ಲಿ 2 ಕೆಜಿ ಚಿನ್ನ, ಕಂತೆ ಕಂತೆ ಹಣ ಪತ್ತೆಯಾಗಿದೆ. 15ಕ್ಕೂ ಹೆಚ್ಚು ಚಿನ್ನದ ಬಳೆ, 30ಕ್ಕೂ ಹೆಚ್ಚು ಸರ, ನೆಕ್ಲೆಸ್, ಬ್ರಾಸ್ಲೆಟ್, ಚಿನ್ನದ ತಟ್ಟೆ, ಚಿನ್ನದ ತಗಡು, ದುಬಾರಿ ಬೆಲೆಯ ವಾಚ್‍ಗಳು ಪತ್ತೆಯಾಗಿದೆ.

    ಬಾಗಲಕೋಟೆಯ ಆರ್‍ಟಿಓ ಅಧಿಕಾರಿ ಯಲ್ಲಪ್ಪ ಪಡಸಾಲಿಯ ಕೊಪ್ಪಳ, ಧಾರವಾಡ ನಿವಾಸದಲ್ಲಿ 58 ಲಕ್ಷ ಹಣ ಸಿಕ್ಕಿದೆ. ಬೆಳಗಾವಿ ಪಿಡಿಬ್ಲ್ಯೂಡಿ ಅಧೀಕ್ಷಕ ಬಿ.ವೈ ಪವಾರ್ ಮನೆಯ ಬಾತ್ ರೂಂನಲ್ಲಿ 5 ಲಕ್ಷ ಪತ್ತೆಯಾಗಿದೆ. ಒಟ್ಟು 50ಲಕ್ಷ ಮೌಲ್ಯದ ಚಿನ್ನ, 9.5 ಲಕ್ಷ ನಗದು ಸಿಕ್ಕಿದೆ. ಬೆಂಗಳೂರಿನ ಐಬಿ ಸಿಪಿಐ ಉದಯರವಿಯ ಮುದಗಲ್ ನಿವಾಸದಲ್ಲಿ ರಾಶಿ ರಾಶಿ ಹಣ, ಚಿನ್ನಾಭರಣ ಪತ್ತೆಯಾಗಿದೆ. ಇದನ್ನೂ ಓದಿ: ಡಿನೊಟಿಫೈ ಕೇಸಲ್ಲಿ ಶನಿವಾರ ಬಿಎಸ್‍ವೈ ಬೇಲ್ ಭವಿಷ್ಯ

    ಬೆಂಗಳೂರಿನ ಪಿಡಬ್ಲ್ಯೂಡಿ ಇಲಾಖೆ ನಿವೃತ್ತ ಎಂಜಿನಿಯರ್ ಜಿ ಮಂಜುನಾಥ್ ಕೊರೋನಾ ಕಾಲದಲ್ಲಿ ಕೋಟಿ ಕೋಟಿ ವಹಿವಾಟು ನಡೆಸಿರೋದು ಬೆಳಕಿಗೆ ಬಂದಿದೆ. ತಾಯಿ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿರೋದು ಗೊತ್ತಾಗಿದೆ. ಜಯನಗರದ 9ನೇ ಬ್ಲಾಕ್‍ನಲ್ಲಿ 20 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡ, ಮಗಳ ಹೆಸರಿನಲ್ಲಿ ಪ್ಲ್ಯಾಟ್ ಇದೆ. ಕಂದಾಯ ಇಲಾಖೆಯ ಹಲವು ಕಡತಗಳು ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿವೆ.

    ಯಾರ್ಯಾರ ಮನೆ ಮೇಲೆ ದಾಳಿಯಗಿದೆ..?
    * ಭೀಮರಾವ್ ಪವಾರ್, ಅಧೀಕ್ಷಕ ಎಂಜಿನಿಯರ್, ಪಿಡಬ್ಲುಡಿ ಇಲಾಖೆ, ಬೆಳಗಾವಿ
    * ಹರೀಶ್, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಉಡುಪಿ
    * ರಾಮಕೃಷ್ಣ, ಎಇಇ, ಸಣ್ಣ ನೀರಾವರಿ ಇಲಾಖೆ, ಹಾಸನ
    * ರಾಜೀವ್ ನಾಯಕ್, ಎಇ, ಲೋಕೋಪಯೋಗಿ ಇಲಾಖೆ, ಕಾರವಾರ
    * ಬಿ.ಆರ್. ಬೋಪಯ್ಯ, ಪೊನ್ನಂಪೇಟೆ ಜಿ.ಪಂ ಜೆ.ಇ
    * ಮಧುಸೂದನ್, ಡಿಸ್ಟ್ರಿಕ್ಟ್ ರಿಜಿಸ್ಟ್ರಾರ್, ಐಜಿಆರ್ ಕಚೇರಿ, ಬೆಳಗಾವಿ
    * ಪರಮೇಶ್ವರಪ್ಪ, ಎಇ, ಸಣ್ಣ ನೀರಾವರಿ ಇಲಾಖೆ, ಹೂವಿನಹಡಗಲಿ
    * ಯಲ್ಲಪ್ಪ ಎನ್ ಪಡಸಲಿ, ಆರ್‍ಟಿಒ, ಬಾಗಲಕೋಟೆ


    * ಶಂಕರಪ್ಪ ಗೊಗಿ, ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ, ಬಾಗಲಕೋಟೆ
    * ಪ್ರದೀಪ್ ಎಸ್. ಆಲೂರು, ಪಂಚಾಯತ್ ಗ್ರೇಡ್ ಸೆಕ್ರೆಟರಿ, ಗದಗ
    * ಸಿದ್ದಪ್ಪ ಟಿ, ಉಪ ಎಲೆಕ್ಟ್ರಿಕಲ್ ಅಧಿಕಾರಿ, ಬೆಂಗಳೂರು
    * ತಿಮ್ಮಪ್ಪ ಪಿ.ಸಿರ್ಸಗಿ, ಜಿಲ್ಲಾ ಯೋಜನಾ ಅಧಿಕಾರಿ, ಬೀದರ್
    * ಮೃತ್ಯುಂಜಯ ತಿರನಿ, ಅಸಿಸ್ಟೆಂಟ್ ಕಂಟ್ರೋಲರ್, ಕರ್ನಾಟಕ ಪಶು ವಿವಿ, ಬೀದರ್
    * ಮೋಹನ್ ಕುಮಾರ್, ಇಇ, ನೀರಾವರಿ ಇಲಾಖೆ, ಚಿಕ್ಕಬಳ್ಳಾಪುರ
    * ಶ್ರೀಧರ್, ಜಿಲ್ಲಾ ರಿಜಿಸ್ಟ್ರಾರ್, ಕಾರವಾರ
    * ಮಂಜುನಾಥ್ ಜಿ, ನಿವೃತ್ತ ಇಇ, ಲೋಕೋಪಯೋಗಿ ಇಲಾಖೆ, ಬೆಂಗಳೂರು
    * ಶಿವಲಿಂಗಯ್ಯ, ಗ್ರೂಪ್ ಸಿ ನೌಕರ, ಬಿಡಿಎ
    * ಉದಯ ರವಿ, ಪೊಲೀಸ್ ಇನ್ಸ್ ಪೆಕ್ಟರ್, ಕೊಪ್ಪಳ
    * ಬಿ.ಜಿ ತಿಮ್ಮಯ್ಯ, ಕೇಸ್ ವರ್ಕರ್, ಕಡೂರು ಪುರಸಭೆ
    * ಚಂದ್ರಪ್ಪ ಸಿ. ಓಲೆಕರ್, ಯುಟಿಪಿ ಕಚೇರಿ, ರಾಣೆಬೆನ್ನೂರು
    * ಜನಾರ್ದನ್, ನಿವೃತ್ತ ರಿಜಿಸ್ಟ್ರಾರ್, ಬೆಂಗಳೂರು ವಿವಿ

    Live Tv

  • ಜನರಿಗೆ ಬೆಲೆ ಏರಿಕೆ ಚರ್ಚೆಯ ವಿಷಯ ಅಲ್ಲ, ಮಾತಿನಲ್ಲೇ ಅಭಿವೃದ್ಧಿ ಮಾಡುವವವರು ಇಷ್ಟ: ಹೆಚ್‍ಡಿಕೆ

    ಜನರಿಗೆ ಬೆಲೆ ಏರಿಕೆ ಚರ್ಚೆಯ ವಿಷಯ ಅಲ್ಲ, ಮಾತಿನಲ್ಲೇ ಅಭಿವೃದ್ಧಿ ಮಾಡುವವವರು ಇಷ್ಟ: ಹೆಚ್‍ಡಿಕೆ

    ಬೆಂಗಳೂರು: ಜನ ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅವರು ಸಮೃದ್ಧವಾಗಿದ್ದಾರೆ. ಜನರಿಗೆ ಬೆಲೆ ಏರಿಕೆಗಿಂತ ಭಾವನಾತ್ಮಕ ವಿಷಯಗಳೇ ಹೆಚ್ಚು ಖುಷಿ ನೀಡುತ್ತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

    ವಿಧಾನಸೌಧದಲ್ಲಿ ಪಂಚರಾಜ್ಯ ಚುನಾವಣೆಯ ನಂತರ ಬೆಲೆ ಏರಿಕೆ ಆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲೇ ಗ್ಯಾಸ್ ಮತ್ತಿತರ ಬೆಲೆ ಏರಿಕೆ ಆಗಿದೆ. ಜನ ಇಂದು ಹಣವಂತರಾಗಿದ್ದಾರೆ. ಮೌನವಾಗಿ ಬೆಂಬಲಿಸಿದ್ದಾರೆ. ಜನರಿಗೆ ಈಗ ಧರ್ಮದ ಅವಶ್ಯಕತೆ ಇದೆ. ಸಮಸ್ಯೆಗಳ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ ಎಂದರು.

    ಭಗವದ್ಗೀತೆ, ದೇಶ, ಭಾಷೆ, ಧರ್ಮ ಜನರಿಗೆ ಬೇಕಾಗಿದೆ. ಜನ ಎಷ್ಟೇ ಬೆಲೆ ಏರಿಕೆ ಆದರೂ ಕೊಡಲು ಸಿದ್ಧರಿದ್ದಾರೆ. ಮೋದಿ ಮಾತಿನಿಂದಲೆ ಅಭಿವೃದ್ಧಿಯಾಗಿದ್ದಾರೆ. ಬೆಲೆ ಏರಿಕೆ ಈಗ ಜನರಿಗೆ ಚರ್ಚೆಯ ವಿಷಯ ಅಲ್ಲ. ಏನಿದ್ದರೂ ಭಾವನಾತ್ಮಕ ಮೋಡಿ ಮಾಡುವ ಮಾತುಗಳೇ ಪ್ರಿಯ. ಮಾತಿನಲ್ಲೇ ಅಭಿವೃದ್ಧಿ ಮಾಡುವವವರೇ ಇಷ್ಟ ಎಂದು ಟೀಕಿಸಿದರು. ಇದನ್ನೂ ಓದಿ:  ತಮಿಳುನಾಡು ವಿಧಾನಸಭೆ ನಿರ್ಣಯಕ್ಕೆ ಬೆಲೆ ಇಲ್ಲ: ಬೊಮ್ಮಾಯಿ

    ಬಿಡಿಎ ಬ್ರೋಕರ್‌ಗಳ ಮೇಲೆ ಎಸಿಬಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಎಸಿಬಿಯಿಂದ ಇತ್ತೀಚಿನ ದಾಳಿ ಪ್ರಕರಣವನ್ನು ನೋಡುತ್ತಿದ್ದೇನೆ ಎಂದ ಅವರು, ಎಷ್ಟು ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಎಷ್ಟು ಪ್ರಕರಣದಲ್ಲಿ ಆಸ್ತಿ ಮುಟ್ಟುಗೋಲು ಆಗಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಶ್ಮೀರ್‌ ಫೈಲ್ಸ್‌ನಲ್ಲಿ ಏನಿದೆ?: ಹೆಚ್‍ಡಿಕೆ ಪ್ರಶ್ನೆ

    ಕೇವಲ ಎಸಿಬಿ ದಾಳಿ ನಡೆಸಿದರೆ ಪರಿಣಾಮ ಸಿಗಲ್ಲ. ಏನು ಕ್ರಮ ಆಗಿದೆ ಅನ್ನೋದು ಯಾರಿಗೂ ಮಾಹಿತಿ ಇಲ್ಲ. ಐ ವಾಷಿಂಗ್‍ಗೋಸ್ಕರ ಎಸಿಬಿ ದಾಳಿ ನಡೆಯುತ್ತಿದೆ. ಎಸಿಬಿ ರೈಡ್ ತೋರ್ಪಡಿಕೆಗೆ ನಡೆಯುತ್ತಿದೆ. ಯಾವುದೇ ಪರಿಣಾಮ ಆಗುತ್ತಿಲ್ಲ. ಬಿಡಿಎಯಂತಹ ಆಯಕಟ್ಟಿನ ಸ್ಥಳಗಳಿಗೆ ಅಂತಹ ಭ್ರಷ್ಟ ಅಧಿಕಾರಿಗಳನ್ನೆ ತಂದು ಕೂರಿಸ್ತಾರೆ. ಮತ್ತೆ ಅಂತವರ ವಿರುದ್ಧ ಏನು ಕ್ರಮ ಆಗುತ್ತೆ. ಯಾರಿಗೆ ಇದುವರೆಗೆ ಶಿಕ್ಷೆ ಆಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೇಕೆದಾಟು ಯೋಜನೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂದು ದೇವೇಗೌಡ್ರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ: ಎಚ್‍ಡಿಕೆ

  • 2.5 ಕೆಜಿ ಚಿನ್ನ, 12 ಕೆಜಿ ಬೆಳ್ಳಿ – ಆಸ್ತಿ ಕಂಡು ಎಸಿಬಿ ಅಧಿಕಾರಿಗಳು ಶಾಕ್

    2.5 ಕೆಜಿ ಚಿನ್ನ, 12 ಕೆಜಿ ಬೆಳ್ಳಿ – ಆಸ್ತಿ ಕಂಡು ಎಸಿಬಿ ಅಧಿಕಾರಿಗಳು ಶಾಕ್

    ಬಾಗಲಕೋಟೆ: ಎರಡೂವರೆ ಕೆಜಿಯಷ್ಟು ಚಿನ್ನಾಭರಣ, 12 ಕೆಜಿಯಷ್ಟು ಬೆಳ್ಳಿ, 16 ಲಕ್ಷ ಬ್ಯಾಂಕ್ ಡೆಪಾಸಿಟ್ ಹಣ, ಮನೆಯಲ್ಲಿ ಬಗೆದಷ್ಟು ಬಯಲಾಗುತ್ತಿರುವ ಸಂಪತ್ತು, 9 ಗಂಟೆ ಕಳೆದರೂ ಮುಗಿಯದ ಶೋಧಕಾರ್ಯ. ಇದು ಯಾವುದೋ ಸಿನಿಮಾದ ಕಥೆಯಲ್ಲಿ ಬರುವ ಸನ್ನಿವೇಶವಲ್ಲ. ಬಾಗಲಕೋಟೆ ನವನಗರ ಸೆಕ್ಟರ್ ನಂ.15ರಲ್ಲಿರುವ ಆರ್‌ಎಫ್‌ಒ ಪಿ.ಎಸ್.ಖೇಡಗಿ ಅವರ ನಿವಾಸದಲ್ಲಿ ಎಸಿಬಿ ಅಧಿಕಾರಿಗಳು ನಡೆಸುತ್ತಿರುವ ಕಾರ್ಯಾಚರಣೆ.

    ಹೌದು. ಖೇಡಗಿ ಅವರ ಮನೆ, ಬಾದಾಮಿ ಅರಣ್ಯ ಇಲಾಖೆ ಕಚೇರಿ, ಸೆಕ್ಟರ್ ನಂ.12ರಲ್ಲಿರುವ ಸಂಬಂಧಿಕರ ಮನೆ ಹಾಗೂ ಹಾಗೂ ಹರ್ಷಾ ಎಲೆಕ್ಟ್ರಿಕಲ್ ಶಾಪ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು ಸತತ 9 ಗಂಟೆಗಳಿಂದ ಶೋಧಕಾರ್ಯ ನಡೆಸುತ್ತಿದ್ದಾರೆ. ಮನೆಯಲ್ಲಿ ಕೈಹಾಕಿದ ಕಡೆಯೆಲ್ಲ ನಗ, ನಾಣ್ಯ, ಚಿನ್ನ, ಬೆಳ್ಳಿ ವಸ್ತುಗಳು ಪತ್ತೆಯಾಗುತ್ತಿದ್ದು ಎಸಿಬಿ ಅಧಿಕಾರಿಗಳೇ ದಂಗಾಗುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ಅಭಿಮಾನಿಗಳಿಗೆ ಭಾರೀ ನಿರಾಸೆ : ಮೆರವಣಿಗೆ ಇಲ್ಲ, ಹೆಲಿಕಾಪ್ಟರ್ ಗೆ ಅನುಮತಿ ಕೊಟ್ಟಿಲ್ಲ

    ಸದ್ಯಕ್ಕೆ ಖೇಡಗಿ ಅವರ ನಿವಾಸದಲ್ಲಿ 10 ಲಕ್ಷ ರೂ. ನಗದು, ಎರಡೂವರೆ ಕೆಜಿ ಚಿನ್ನಾಭರಣ, 12 ಕೆಜಿ ಬೆಳ್ಳಿ, 16 ಲಕ್ಷ ರೂ. ಬ್ಯಾಂಕ್ ಡೆಪಾಸಿಟ್ ಪತ್ತೆಯಾಗಿದ್ದು, ಚಿನ್ನ, ಬೆಳ್ಳಿ ತೂಕ ಮಾಡಲೆಂದು ಸ್ಥಳಕ್ಕೆ ಅಕ್ಕಸಾಲಿಗರನ್ನು ಕರೆಸಿದ್ದಾರೆ. ಅಲ್ಲದೆ ಖೇಡಗಿಯವರು 5 ಪ್ಲಾಟ್ ಖರೀದಿಸಿರುವ ದಾಖಲೆಗಳು, ಹಣ ಎಣಿಕೆ ಮಾಡುವ ಮಷೀನ್ ಹಾಗೂ ಶ್ರೀಗಂಧದ ಕಟ್ಟಿಗೆ ತುಂಡುಗಳು ಪತ್ತೆಯಾಗಿವೆ. ಇದನ್ನೂ ಓದಿ: ಭದ್ರತಾ ಲೋಪ – ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ

    ಬಾದಾಮಿ ತಾಲೂಕಿನ ವಲಯ ಅರಣ್ಯಾಧಿಕಾರಿಯಾಗಿರುವ ಪಿ.ಎಸ್.ಖೇಡಗಿ ಅವರು ಬಾಗಲಕೋಟೆಯ ನವನಗರದ 15ನೇ ಸೆಕ್ಟರ್ ನಲ್ಲಿ ನೆಲೆಸಿದ್ದಾರೆ. ಶೋಧ ಕಾರ್ಯ ಮುಂದುವರಿಸಿರುವ ಅಧಿಕಾರಿಗಳು ಮನೆಯಲ್ಲಿ ತನಿಖೆ ಮುಗಿದ ನಂತರ ಬ್ಯಾಂಕ್ ಲಾಕರ್ ಓಪನ್ ಮಾಡುವುದಾಗಿ ತಿಳಿಸಿದ್ದಾರೆ.

  • ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಏಕಕಾಲದಲ್ಲಿ ಎಸಿಬಿ ದಾಳಿ

    ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಏಕಕಾಲದಲ್ಲಿ ಎಸಿಬಿ ದಾಳಿ

    ಬೆಂಗಳೂರು; ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಹಲವು ಕಡೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

    18 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿ ಬೆಂಗಳೂರಿನಲ್ಲಿ ಮೂರು ಕಡೆ ಸೇರಿ ರಾಜ್ಯಾದ್ಯಂತ ಒಟ್ಟು 78 ಕಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಏಕಕಾಲಕ್ಕೆ ಇನ್ನೂರಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಹಿರಿಯ ವಕೀಲರು ಕಾಂಗ್ರೆಸ್ ಸಂಸ್ಕೃತಿಯ ವ್ಯಕ್ತಿಯಲ್ಲ: ಕಪಿಲ್ ಸಿಬಲ್ ವಿರುದ್ಧ ಗೆಹ್ಲೋಟ್ ಕಿಡಿ

    ಮಹಾಲಕ್ಷ್ಮಿ ಲೇಔಟ್‍ನಲ್ಲಿ ಜಂಟಿ ನಿರ್ದೇಶಕ ಶಿವಕುಮಾರ್ ನಿವಾಸ, ಕೈಗಾರಿಕೆ & ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಬಿ.ಕೆ.ಶಿವಕುಮಾರ್, ಸಾರಿಗೆ ಇಲಾಖೆ ರಸ್ತೆ ಸುರಕ್ಷತೆಯ ಹೆಚ್ಚುವರಿ ಆಯುಕ್ತ ಸಿ.ಜೆ ಜ್ಞಾನೇಂದ್ರ ಕುಮಾರ್, ಜ್ಞಾನೇಂದ್ರ ಕುಮಾರ್ ಬಸವೇಶ್ವರ ನಗರ ಮನೆ ಹಾಗೂ ಶಾಂತಿನಗರ ಕಚೇರಿ, ಬಿಡಿಎ ನಗರ ಯೋಜನೆ ಉಪ ನಿರ್ದೇಶಕ ವಿ ರಾಕೇಶ್ ಕುಮಾರ್ ಹಾಗೂ ರಾಕೇಶ್ ಕುಮಾರ್ ಅವರ ನಾಗರಬಾವಿ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.

  • ಕುಶಾಲನಗರ ತಾಲೂಕು ಕಚೇರಿಯ ಕಂದಾಯ ಅಧಿಕಾರಿ ಎಸಿಬಿ ಬಲೆಗೆ

    ಕುಶಾಲನಗರ ತಾಲೂಕು ಕಚೇರಿಯ ಕಂದಾಯ ಅಧಿಕಾರಿ ಎಸಿಬಿ ಬಲೆಗೆ

    ಮಡಿಕೇರಿ: ಜಾಗದ ದಾಖಲಾತಿಗಳನ್ನು ಸರಿಪಡಿಸುವ ಸಾಲುವಾಗಿ ತಾಲೂಕು ಕಚೇರಿಯ ಕಂದಾಯ ಅಧಿಕಾರಿ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದ ತಾಲೂಕು ಕಚೇರಿ ಬಳಿ ನಡೆದಿದೆ.

    ತಾಲೂಕು ಕಚೇರಿಯ ಅಧಿಕಾರಿ ವಿನೋದ್ ಲಂಚ ಪಡೆದಾತ. ಕುಶಾಲನಗರ ತಾಲೂಕಿನ ಶುಂಠಿಕೊಪ್ಪ ಹೋಬಳಿಯ ಅಂದಗೋವೆ ನಿವಾಸಿ ಬೆಳ್ಳಿಯಪ್ಪ ಆಸ್ತಿ ದಾಖಲಾತಿಗಳನ್ನು ಸರಿಪಡಿಸಲು ತಾಲೂಕು ಕಚೇರಿಗೆ ಬಂದಿದ್ದರು. ಈ ವೇಳೆ ಶಿರಸ್ತೆದಾರ ವಿನೋದ್ ಅವರು 14.5 ಲಕ್ಷ ಲಂಚ ನೀಡಲು ಬೇಡಿಕೆ ಇಟ್ಟಿದ್ದರು.

    ಈ ಹಿನ್ನೆಲೆಯಲ್ಲಿ ಬೆಳ್ಳಿಯಪ್ಪ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಇಂದು ವಿನೋದ್ ತಾಲೂಕು ಕಚೇರಿ ಬಳಿ ಇರುವ ಟೀ ಕ್ಯಾಂಟೀನ್ ಬಳಿ ಹಣ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಲಂಚ ಸ್ವೀಕರಿಸಿದ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ, ವಿನೋದ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಹಿಂದೂ ಮಹಿಳೆ, ಮುಸ್ಲಿಂ ವ್ಯಕ್ತಿ ರೈಲಿನಲ್ಲಿ ಪ್ರಯಾಣ – ಲವ್ ಜಿಹಾದ್ ಅಂತ ಠಾಣೆಗೆ ಎಳೆದೊಯ್ದ ಭಜರಂಗದಳ ಸದಸ್ಯರು

    ಡಿವೈಎಸ್ಪಿ ಸದಾನಂದ ತಿಪ್ಪಣ್ಣವರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ವಿಚಾರಣೆಯಲ್ಲಿ ಎಸಿಬಿ ಇನ್ಸ್‍ಪೆಕ್ಟರ್ ಹರೀಶ್, ಕುಮಾರ್ ಸಿಬ್ಬಂದಿ ದಿನೇಶ್, ವಿಶ್ವನಾಥ್, ಸುರೇಶ್, ಲೋಹಿತ್, ದೀಪಿಕಾ, ವಿಜಯ್ ಕುಮಾರ್ ಭಾಗಿಯಾಗಿದ್ದರು. ಇದನ್ನೂ ಓದಿ: ತಜ್ಞರು ಗ್ರೀನ್ ಸಿಗ್ನಲ್ ಕೊಟ್ರೆ ಬೆಂಗಳೂರಿನಲ್ಲಿ ಮರು ದಿನವೇ ಶಾಲೆ ಪ್ರಾರಂಭ: ಬಿಸಿ ನಾಗೇಶ್

  • ಬೋಪಯ್ಯಗೆ ಎಸಿಬಿ ದಾಳಿ ಬೆದರಿಕೆ ಹಾಕಿದ್ದ ರೌಡಿಶೀಟರ್ ಅರೆಸ್ಟ್

    ಬೋಪಯ್ಯಗೆ ಎಸಿಬಿ ದಾಳಿ ಬೆದರಿಕೆ ಹಾಕಿದ್ದ ರೌಡಿಶೀಟರ್ ಅರೆಸ್ಟ್

    ಮಡಿಕೇರಿ: ಮಾಜಿ ಸ್ಪೀಕರ್ ಹಾಗೂ ಕೊಡಗಿನ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರ ಮನೆಯ ಮೇಲೆ ಎಸಿಬಿ ದಾಳಿ ನಡೆಸುತ್ತೇವೆ ಎಂದು ಬೆದರಿಕೆ ಹಾಕಿ ಹಣ ಕೇಳಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ತುಮಕೂರಿನ ಕೊರಟಗೆರೆ ನಿವಾಸಿ ರೌಡಿ ಶೀಟರ್ ಆನಂದ್ (31) ಬಂಧಿತ ಆರೋಪಿ. ಕೆಲವು ದಿನಗಳ ಹಿಂದೆಯಷ್ಟೇ ತಮ್ಮ ಮೇಲೆ ಎಸಿಬಿ ದಾಳಿಯಾಗಲಿದ್ದು, ಅದನ್ನು ತಡೆಯಲು ಫೋನ್ ಮೂಲಕ ಹಣದ ಆಮಿಷ ಇಟ್ಟಿದ್ದ ವ್ಯಕ್ತಿಯನ್ನು ಮಡಿಕೇರಿ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

    ಕರೆ ಮಾಡಿದ ಸಂಖ್ಯೆಯ ಫೋನ್ ಲೊಕೇಶನ್ ಆಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರಿಗೆಲು ಆಂಧ್ರಪ್ರದೇಶ ಗಡಿಯಲ್ಲಿ ಪತ್ತೆಯಾಗಿದ್ದು, ನಂತರ ರೈಲು ಮೂಲಕ ಬೆಂಗಳೂರು ಕಡೆಗೆ ವಾಪಸ್ಸಾಗುತ್ತಿರುವುದು ತಿಳಿದಿದೆ. ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ಆನಂದ್‍ನನ್ನು ಬಂಧಿಸಲಾಗಿದೆ. ದನ್ನೂ ಓದಿ: ನಿಮ್ಮ ಮನೆ ಮೇಲೆ ಎಸಿಬಿ ದಾಳಿ ನಡೆಯುತ್ತೆ – ಬೋಪಯ್ಯಗೆ ಕರೆ ಮಾಡಿ ಬೆದರಿಕೆ

    ಕೊಡಗಿನ ಕ್ರೈಂ ಬ್ರಾಂಚ್‍ನ ಸಿದ್ದಾಪುರದ ಎಸ್.ಐ ಮೋಹನ್ ರಾಜ್, ಕಾನ್ಸ್ ಟೇಬಲ್ ವಸಂತ್, ಮಡಿಕೇರಿಯ ನಾಗರಾಜ್, ನಂದಕುಮಾರ್ ನೇತೃತ್ವದ ಆರು ಮಂದಿಯ ತಂಡ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಮಡಿಕೇರಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದನ್ನೂ ಓದಿ: 1 ಕಿ.ಮೀ ಓಡಿ ಕಳ್ಳನನ್ನು ಹಿಡಿದ ಮಂಗಳೂರು ಪೊಲೀಸ್ ವೀಡಿಯೋ ವೈರಲ್

  • ನಿಮ್ಮ ಮನೆ ಮೇಲೆ ಎಸಿಬಿ ದಾಳಿ ನಡೆಯುತ್ತೆ – ಬೋಪಯ್ಯಗೆ ಕರೆ ಮಾಡಿ ಬೆದರಿಕೆ

    ನಿಮ್ಮ ಮನೆ ಮೇಲೆ ಎಸಿಬಿ ದಾಳಿ ನಡೆಯುತ್ತೆ – ಬೋಪಯ್ಯಗೆ ಕರೆ ಮಾಡಿ ಬೆದರಿಕೆ

    ಮಡಿಕೇರಿ: ನಿಮ್ಮ ಮನೆಯಲ್ಲಿ ನಾಳೆ ಎಸಿಬಿ ದಾಳಿ ನಡೆಯುತ್ತದೆ. ಇದನ್ನು ತಡೆಯಲು ಒಂದು ಕೋಟಿ ರೂ. ನೀಡುವಂತೆ ಅಪರಿಚಿತ ವ್ಯಕ್ತಿಯೋರ್ವನು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರಿಗೆ ಕರೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

    ಮಡಿಕೇರಿಯಲ್ಲಿ ಇರುವ ಶಾಸಕ ಕೆ.ಜಿ ಬೋಪಯ್ಯ ಅವರ ನಿವಾಸದಲ್ಲಿ ನಿನ್ನೆ ಸಂಜೆ 6:30ರ ಆಸುಪಾಸಿಗೆ ಕರೆ ಬಂದಿದೆ. ಅಪರಿಚಿತರೊಬ್ಬರು ಕರೆಮಾಡಿ ಎಸಿಬಿ ಕಡೆಯಿಂದ ಕರೆ ಮಾಡುತ್ತಿದ್ದೇವೆ. ತಮ್ಮ ಮೇಲೆ ಎಸಿಬಿ ದಾಳಿ ಮಾಡಲು ಸಜ್ಜಾಗುತ್ತಿದ್ದು, ಈ ಎಸಿಬಿ ದಾಳಿಯನ್ನು ತಡೆಹಿಡಿಯಲು ಒಂದು ಕೋಟಿ ರೂ. ನೀಡಬೇಕೆಂದು ಎಂದು ಕನ್ನಡದಲ್ಲೇ ಅಪರಿಚಿತ ವ್ಯಕ್ತಿ ಶಾಸಕರೊಂದಿಗೆ ಮಾತಾನಾಡಿದ್ದಾನೆ.

    ಹಣ ನೀಡಿದೆ ಇದ್ದರೇ ಎಸಿಬಿ ದಾಳಿ ನಡೆಸುವುದು ಖಚಿತ ಎಂದು ತಿಳಿಸಿದ್ದಾನೆ. ಆಗ ಶಾಸಕ ಬೋಪಯ್ಯ ಮಾತಾನಾಡಿ, ಮನೆಯನ್ನು ಎಸಿಬಿ ದಾಳಿ ನಡೆಸಬಹುದು. ತಾನು ಯಾರಿಗೂ ಹಣ ನೀಡುವುದಿಲ್ಲ ಎಂದು ಖಡಕ್ ಆಗಿ ಹೇಳಿ ಫೋನ್ ಕರೆ ಕಟ್ ಮಾಡಿದ್ದಾರೆ. ದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತೆಸೆಯುತ್ತೇವೆ: ಸಿದ್ದರಾಮಯ್ಯ

    ಆದರೂ ಅಪರಿಚಿತ ವ್ಯಕ್ತಿ ಮತ್ತೆ ಬೇರೆ ಫೋನ್ ಮೂಲಕ ಕರೆ ಮಾಡಿ ಹಣದ ಬಗ್ಗೆ ವಿಚಾರ ಮಾಡಿದ್ದಾನೆ. ಆಗಲೂ ಶಾಸಕ ಬೋಪಯ್ಯ ಹಣ ನೀಡುವುದಿಲ್ಲ. ಎಸಿಬಿ ಅವರು ಬರಲಿ ತೊಂದರೆ ಇಲ್ಲ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ

    POLICE JEEP

    ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಜಿ. ಬೋಪಯ್ಯ ಇಂದು ಬೆಂಗಳೂರಿನ ಐಜಿ ಹಾಗೂ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಅಪರಿಚಿತ ಮೊಬೈಲ್ ಸಂಖ್ಯೆಯಲ್ಲಿ ಆಂಧ್ರದ ಝಹೀಬ್ ಖಾನ್ ಹೆಸರಿನಲ್ಲಿ ಖರೀದಿಯಾಗಿರುವ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

  • ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದ ಎಎಸ್‌ಐ

    ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದ ಎಎಸ್‌ಐ

    ಆನೇಕಲ್: ವೈಟ್‌ಫೀಲ್ಡ್ ಠಾಣೆಯ ಎಎಸ್‌ಐ ದೇವರಾಜ್ ಅವರು ಬಾಬು ಎಂಬುವರಿಂದ 10 ಸಾವಿರ ರೂ. ಲಂಚ ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಆರೋಪಿ ದೇವರಾಜ್ ಅವರು ಸಿಮೆಂಟ್ ಮತ್ತು ಸ್ಟೀಲ್ ಅಂಗಡಿ ಮಾಲೀಕರ ವಾಹನ ರಸ್ತೆಯಲ್ಲಿ ಕಂಡಾಕ್ಷಣ ಅದನ್ನು ವಶ ಪಡಿಸಿಕೊಂಡು ಠಾಣೆಗೆ ತರುತ್ತಿದ್ದರು. ನಂತರ ಆ ವಾಹನವನ್ನು ಬಿಡಿಸಿಕೊಳ್ಳಲು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಹಣ ನೀಡದಿದ್ದರೆ ಮಾಲೀಕರು ಕಳ್ಳ ಸಾಗಣೆ ಮಾಡುತ್ತಿದ್ದಾರೆ ಎಂದು ಕೇಸು ದಾಖಲು ಮಾಡುವುದಾಗಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಮೊದಲಿನಿಂದಲೂ ಕೇಳಿಬಂದಿತ್ತು.

    ಬಾಬು ಅವರು ಸ್ಟೀಲ್ ವ್ಯಾಪಾರ ಮತ್ತು ಸ್ಟೀಲ್ ಸರಬರಾಜು ಮಾಡುವ ವಾಹನಗಳನ್ನು ಹೊಂದಿದ್ದರು. ಇವರಿಂದಲೂ ಸಾಕಷ್ಟು ಬಾರಿ ಹಣ ವಸೂಲಿ ಮಾಡಿದ್ದಾರೆ. ಬ್ಯಾಂಕ್ ಲೋನ್ ಕಟ್ಟಲು ಹಣ ಬೇಕು. 50 ಸಾವಿರ ರೂ. ಕೊಡು ಎಂದು ಆಗಾಗ ಕಾಲ್ ಮಾಡಿ ಹಿಂಸೆ ಕೊಡುತ್ತಿದ್ದರು. ಇದರಿಂದ ಬೇಸತ್ತ ಬಾಬು ಎಸಿಬಿ ಮೊರೆ ಹೋಗಿದ್ದಾರೆ. ಇಂದು ಟ್ರ‍್ಯಾಪ್ ಮಾಡಿಸಿ ಬಲೆಗೆ ಬೀಳಿಸಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಬೆಳತ್ತೂರು ಪರಮೇಶ್ ತಿಳಿಸಿದರು.

    ಕಳೆದ ಏಳು ಎಂಟು ವರ್ಷಗಳಿಂದ ಹಣ ವಸೂಲಿ ಮಾಡಿ ಎರಡು ಎಕರೆ ಜಮೀನು, ಬಗಲುಗುಂಟೆ ವ್ಯಾಪ್ತಿಯಲ್ಲಿ ನಾಲ್ಕು ಸೈಟ್ ಖರೀದಿ ಮಾಡಿದ್ದಾರೆ. ತೊಂಡೆ ಕೊಪ್ಪದಲ್ಲಿ ಐಶಾರಾಮಿ ಬಂಗಲೆ ಕಟ್ಟಿದ್ದಾನೆ ಎಂದು ಪರಮೇಶ್ ಆರೋಪಿಸಿದ್ದಾರೆ. ಇದನ್ನೂ ಓದಿ: ಸ್ಟಾರ್‌ಲಿಂಕ್ ಇಂಡಿಯಾದ ಮುಖ್ಯಸ್ಥ ಸಂಜಯ್ ಭಾರ್ಗವ ರಾಜೀನಾಮೆ

    ಡಿಸಿಪಿ ಕಚೇರಿ ಕೆಳಗೆ ಇರುವ ಠಾಣೆಯಲ್ಲೇ ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದೆ. ಇನ್ನೂ ಬೇರೆ ಕಡೆ ಯಾವ ರೀತಿ ಭ್ರಷ್ಟಾಚಾರ ನಡೆಯಬಹುದು ಎಂದ ಅವರು, ಸದ್ಯದಲ್ಲೇ ಮತ್ತೊಬ್ಬ ಅಧಿಕಾರಿಯ ಬಣ್ಣ ಬಯಲು ಮಾಡುವುದಾಗಿ ತಿಳಿಸಿದರು.

    POLICE JEEP

    ಈ ಬಗ್ಗೆ ಮಂಗಳವಾರ ಎಸಿಬಿ ತನಿಖಾಧಿಕಾರಿಗಳು ಟ್ರ‍್ಯಾಪ್ ಕಾರ್ಯಾಚರಣೆ ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರು ನಗರ ಎಸಿಬಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ. ಇದನ್ನೂ ಓದಿ: 12,000 ಕೆಜಿ ತೂಕದ ಬಸ್ಸನ್ನು ಕೂದಲಿನಿಂದ ಎಳೆದ ಭಾರತೀಯ ಮಹಿಳೆ- Video Viral

  • ಮನೆಯಲ್ಲೇ ಹಣ, ಚಿನ್ನದ ಕೃಷಿ – ಭ್ರಷ್ಟರ ಆದಾಯಕ್ಕಿಂತ ಆಸ್ತಿ ಎಷ್ಟು ಹೆಚ್ಚಾಗಿದೆ?

    ಮನೆಯಲ್ಲೇ ಹಣ, ಚಿನ್ನದ ಕೃಷಿ – ಭ್ರಷ್ಟರ ಆದಾಯಕ್ಕಿಂತ ಆಸ್ತಿ ಎಷ್ಟು ಹೆಚ್ಚಾಗಿದೆ?

    ಬೆಂಗಳೂರು: ಬಾತ್‍ರೂಂನ ನೀರಿನ ಪೈಪ್‍ನಲ್ಲಿ ಕಂತೆ ಕಂತೆ ನೋಟುಗಳ ರಾಶಿ, ಮನೆಯಲ್ಲಿ ಚಿನ್ನದ ಗಟ್ಟಿಗಳ ರಾಶಿ, ಚಿನ್ನಾಭರಣದ ರಾಶಿ, ಲಾಕರ್‌ಗಳಲ್ಲೂ ದುಡ್ಡು, ಬಂಗಾರ, ಕಂಡಕಂಡಲ್ಲಿ ಭೂಮಿ ಖರೀದಿ. 15 ಅಧಿಕಾರಿಗಳ ಮೇಲೆ 63 ಕಡೆ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಭ್ರಷ್ಟ ಅಧಿಕಾರಿಗಳ ಹೆಸರಲ್ಲಿ ಪತ್ತೆ ಆಗಿರುವ ಆಸ್ತಿ ಮತ್ತು ಅವರ ಆದಾಯದ ಮೂಲಕ್ಕೂ ಇರುವ ವ್ಯತ್ಯಾಸಗಳ ಬಗ್ಗೆ ಮಾಹಿತಿ ನೀಡಿದೆ.

    1. ವಾಸುದೇವ್
    ಮಾಜಿ ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ ಬೆಂಗಳೂರು
    ಒಟ್ಟು ಆಸ್ತಿ: 18,20,63,868 ರೂ.
    ಆದಾಯಕ್ಕಿಂತ ಆಸ್ತಿ: ಶೇ.879.53 ಇದನ್ನೂ ಓದಿ: ಅಕ್ರಮ ಎಸಗಿಲ್ಲ, ನನಗೆ 50 ಸಾವಿರ ಸಂಬಳ, ಸ್ವಂತ ಸಹಿ ಇಲ್ಲ: ಮಾಯಣ್ಣ

    2.ಜಿ.ವಿ. ಗಿರಿ
    ಬಿಬಿಎಂಪಿ ಗ್ರೂಪ್ ಡಿ ನೌಕರ
    ಒಟ್ಟು ಆಸ್ತಿ: 6,24,03,000 ರೂ.
    ಆದಾಯಕ್ಕಿಂತ ಆಸ್ತಿ: ಶೇ.563.85

    3. ಎಸ್.ಎಂ. ಬಿರಾದಾರ್
    ಕಿರಿಯ ಎಂಜಿನಿಯರ್, ಪಿಡಬ್ಲ್ಯೂಡಿ, ಕಲಬುರಗಿ
    ಒಟ್ಟು ಆಸ್ತಿ: 4,15,12,491 ರೂ.
    ಆದಾಯಕ್ಕಿಂತ ಆಸ್ತಿ: ಶೇ.406.17 ಇದನ್ನೂ ಓದಿ: ತಾನು ನೆಟ್ಟ ಗಿಡದಲ್ಲಿ ಹಣ್ಣು ಕೀಳಲು ಮುಂದಾದ ಅತ್ತೆಯತ್ತ ಚಾಕು ಬೀಸಿದ ಸೊಸೆ

    4. ಟಿ.ಎಸ್. ರುದ್ರೇಶಪ್ಪ
    ಕೃಷಿ ಇಲಾಖೆ ಜಂಟಿ ನಿರ್ದೇಶಕ, ಗದಗ
    ಒಟ್ಟು ಆಸ್ತಿ: 6,65,03,782 ರೂ.
    ಆದಾಯಕ್ಕಿಂತ ಆಸ್ತಿ: ಶೇ.400

    5. ಬಿ. ಕೃಷ್ಣಾರೆಡ್ಡಿ
    ಪ್ರಧಾನ ವ್ಯವಸ್ಥಾಪಕ, ಕೆಎಂಎಫ್
    ಒಟ್ಟು ಆಸ್ತಿ: 4,82,03,049 ರೂ.
    ಆದಾಯಕ್ಕಿಂತ ಆಸ್ತಿ: ಶೇ.305

    6. ಎಲ್.ಸಿ. ನಾಗರಾಜ್
    ಆಡಳಿತಾಧಿಕಾರಿ, ಸಕಾಲ ಮಷಿನ್
    ಒಟ್ಟು ಆಸ್ತಿ: 10,82,07,660 ರೂ.
    ಆದಾಯಕ್ಕಿಂತ ಆಸ್ತಿ: ಶೇ.198

    7. ಕೆ. ಶ್ರೀನಿವಾಸ್
    ತುಂಗಾಭದ್ರ ಎಂಜಿನಿಯರ್
    ಒಟ್ಟು ಆಸ್ತಿ: 3,10,20,826 ರೂ.
    ಆದಾಯಕ್ಕಿಂತ ಆಸ್ತಿ: ಶೇ.179.37