Tag: ACB police

  • ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಭೂ ಮಾಪನ ಅಧಿಕಾರಿ

    ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಭೂ ಮಾಪನ ಅಧಿಕಾರಿ

    ಚಿಕ್ಕಬಳ್ಳಾಪುರ: ಜಮೀನು ಸರ್ವೆ ಮಾಡಲು 15 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ ಭೂ ಮಾಪನ ಅಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ನಡೆದಿದೆ.

    ಎಡಿಎಲ್‍ಆರ್ ಕಚೇರಿಯ ಲಕ್ಷ್ಮಣ್ ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಸರ್ಕಾರಿ ಭೂ ಮಾಪನ ಅಧಿಕಾರಿ. ದೇವನಹಳ್ಳಿ ತಾಲೂಕಿನ ಸೋಲೂರು ಗ್ರಾಮದ ಸರ್ವೇ ನಂ 5 ಗೋಮಾಳದ ಜಮೀನನ ಪೈಕಿ 2 ಎಕರೆ ಜಮೀನನನ್ನು ನಾರಾಯಣಪ್ಪ ಎಂಬವರು ಅಕ್ರಮವಾಗಿ ಪೋಡಿ ಮಾಡಿಸಿಕೊಂಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದರು. ಈ ಸಂಬಂಧ ನಾರಾಯಣಪ್ಪ ಅವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.

    ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಜಮೀನು ಸರ್ವೇ ಮಾಡುವಂತೆ ಎಡಿಎಲ್‍ಆರ್ ಭೂ ಮಾಪನ ಲಕ್ಷ್ಮಣ್ ಅವರಿಗೆ ಸೂಚನೆ ನೀಡಿತ್ತು. ಆದರೆ ಸರ್ವೇ ಮಾಡಲು ಹೋದ ಲಕ್ಷ್ಮಣ್ 15 ಸಾವಿರ ರೂ. ಲಂಚ ನೀಡುವಂತೆ ಗ್ರಾಮಸ್ಥರಿಗೆ ಕೇಳಿದ್ದರು. ಲಂಚ ಕೇಳಿದಕ್ಕೆ ಕೋಪಗೊಂಡ ಗ್ರಾಮಸ್ಥರು, ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

    ಲಕ್ಷ್ಮಣ್ ಅವರು ಗ್ರಾಮಸ್ಥರಿಂದ ತಾಲೂಕು ಕಚೇರಿಯ ಹೊರಗಡೆ ಇರುವ ಟೀ ಅಂಗಡಿ ಬಳಿ ಇಂದು 15 ಸಾವಿರ ರೂ. ಲಂಚ ಪಡೆಯುತ್ತಿದ್ದರು. ಈ ವೇಳೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಲಕ್ಷ್ಮಣ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಕೊಂಡಿದ್ದಾರೆ.

  • ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಟ್ರಾಫಿಕ್ ಇನ್ಸ್ ಪೆಕ್ಟರ್

    ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಟ್ರಾಫಿಕ್ ಇನ್ಸ್ ಪೆಕ್ಟರ್

    ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಬಳಿ 15 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಟ್ರಾಫಿಕ್ ಇನ್ಸ್ ಪೆಕ್ಟರ್ ಒಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

    ಕೆಂಗೇರಿ ಟ್ರಾಫಿಕ್ ಇನ್ಸ್ ಪೆಕ್ಟರ್ ಶಬರೀಶ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, 7 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ. ಶಬರೀಶ್ ಅವರು ಈ ಹಿಂದೆ ಮಾಗಡಿ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಕಾರ್ಯ ನಿರ್ವಹಿಸಿದ್ದರು.

    ಏನಿದು ಪ್ರಕರಣ: ಮಾಗಡಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಶಬರೀಶ್ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರ ವಿರುದ್ಧ ನಿವೇಶನದಾರರಿಗೆ ಅಕ್ರಮ ಎಸಗಿದ ದೂರು ಬಂದಿತ್ತು. ಈ ದೂರಿನ ಅನ್ವಯ ಇನ್ಸ್‍ಪೆಕ್ಟರ್ ಉದ್ಯಮಿ ವಿರುದ್ಧ ಪ್ರಕರಣ ದಾಖಲು ಮಾಡುವ ಬೆದರಿಕೆ ಹಾಕಿ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.

    ಇನ್ಸ್‍ಪೆಕ್ಟರ್ ಅವರ ಬೆದರಿಕೆ ಹಾಕುವ ವಿಚಾರವನ್ನು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದ ಉದ್ಯಮಿ ಇಂದು ಹಣ ನೀಡುವುದಾಗಿ ತಿಳಿಸಿ ಶಬರೀಶ್ ಅವರಿಗೆ ಕರೆದಿದ್ದರು. ಉದ್ಯಮಿಯಿಂದ ಹಣ ಪಡೆಯತ್ತಿದ್ದ ವೇಳೆ ದಾಳಿ ನಡೆಸಿದ ಅಧಿಕಾರಿಗಳು ಶಬರೀಶ್‍ರನ್ನ ಬಲೆಗೆ ಕೆಡವಿದ್ದಾರೆ. ಅಲ್ಲದೇ ಇನ್ಸ್ ಪೆಕ್ಟರ್ ಅವರೊಂದಿಗೆ ಇದ್ದ ಹುಲ್ಲೂರಯ್ಯ ಎಂಬ ಖಾಸಗಿ ವ್ಯಕ್ತಿಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

  • ಕೆಲಸ ಜ್ಯೂ. ವಾರ್ಡನ್ ಆದ್ರೆ 250 ಕೋಟಿ ರೂ. ಆಸ್ತಿ!

    ಕೆಲಸ ಜ್ಯೂ. ವಾರ್ಡನ್ ಆದ್ರೆ 250 ಕೋಟಿ ರೂ. ಆಸ್ತಿ!

    ರಾಮನಗರ: 250 ಕೋಟಿಗೂ ಅಧಿಕ ಆಸ್ತಿಯನ್ನ ಅಕ್ರಮವಾಗಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ರಾಮನಗರ ಎಸಿಬಿ ಪೊಲೀಸರು ನ್ಯಾಯಾಲಯದ ಆದೇಶದ ಮೇರೆಗೆ ಜೂನಿಯರ್ ವಾರ್ಡನ್ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ.

    ಕನಕಪುರ ತಾಲೂಕು ಹುಣಸನಹಳ್ಳಿಯ ಹಾಸ್ಟೆಲ್ ನ ಜೂನಿಯರ್ ವಾರ್ಡನ್ ಬಿ.ನಟರಾಜ್ ವಿರುದ್ಧ ಎಸಿಬಿ ಎಫ್‍ಐಆರ್ ದಾಖಲಿಸಿಕೊಂಡಿದೆ. ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಜೂನಿಯರ್ ವಾರ್ಡನ್ ಆಗಿರುವ ನಟರಾಜ್ ಅಕ್ರಮವಾಗಿ 250 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದಾಗಿ ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಆರೋಪಿಸಿ ದಾಖಲೆಗಳ ಸಹಿತವಾಗಿ ಕನಕಪುರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪಿಸಿಆರ್ ಸಲ್ಲಿಸಿದ್ದರು.

    ದೂರಿನ ಅನ್ವಯ ಪಿಸಿ ಕಾಯ್ದೆ 1988ರ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆಗೆ ನ್ಯಾಯಾಲಯದ ಆದೇಶ ಮಾಡಿದ್ದು ಎಸಿಬಿ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಕನಕಪುರ, ಬೆಂಗಳೂರು, ಹಾರೋಹಳ್ಳಿ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮ ಎಸಗಿ ಸಂಪಾದಿಸಿದ್ದು ತನಿಖೆ ನಡೆಸುವಂತೆ ಆರ್ ಟಿ ಐ ಕಾರ್ಯಕರ್ತ ರವಿಕುಮಾರ್ ದೂರು ನೀಡಿದ್ದರು.

    ಯಾರು ಈ ನಟರಾಜ್?
    ನಟರಾಜ್ ಕನಕಪುರದ ನಿವಾಸಿಯಾಗಿದ್ದು, ಗುತ್ತಿಗೆ ಆಧಾರದ ಮೇರೆಗೆ ವಾರ್ಡನ್ ಆಗಿ ಸೇರಿಕೊಂಡಿದ್ದನು. ಮೊದಲಿಗೆ ಈತನಿಗೆ 7,200 ರೂ. ಸಂಬಳ ಬರುತ್ತಿತ್ತು. ಈಗ ಸದ್ಯಕ್ಕೆ 24 ಸಾವಿರ ಸಂಬಳ ಬರುತ್ತಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವಾರು ಟೆಂಡರ್‍ಗಳನ್ನು ಅಕ್ರಮವಾಗಿ ಪಡೆದು ಕಾಮಗಾರಿ ಕೆಲಸವನ್ನು ಮಾಡುತ್ತಿದ್ದಾನೆ. ಜೊತೆಗೆ ಅಕ್ರಮವಾಗಿ ಆಸ್ತಿಯನ್ನು ಸಂಪಾದನೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.

    ಸಾಕ್ಷಿ ಸಮೇತ ವಾರ್ಡನ್ ಬಿ.ನಟರಾಜ್ ಅಕ್ರಮ ಆಸ್ತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಎಫ್‍ಐಆರ್ ದಾಖಲಾಗಿ 3-4 ದಿನಗಳಾಗಿದ್ದರೂ ಇದುವರೆಗೂ ಸೂಕ್ತ ಕ್ರಮವನ್ನು ಜರುಗಿಸಿಲ್ಲ. ಹೀಗಾಗಿ ಅವರಿಗೆ ರಾಜಕೀಯ ನಾಯಕರು ಬೆಂಬಲವಿದೆ ಎಂಬುವುದು ತಿಳಿಯುತ್ತದೆ. ನಟರಾಜ್ ಗೆ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಸುರೇಶ್ ಬೆಂಬಲವಿದೆ. ಅವರ ಬೆಂಬಲ ಇಲ್ಲದೇ ಇಷ್ಟೊಂದು ಅಕ್ರಮ ಆಸ್ತಿ ಸಂಪಾದನೆ ಮಾಡಲು ಸಾಧ್ಯವಿಲ್ಲ. ಈಗಲೂ ರಾಜಕೀಯ ಶಕ್ತಿಯಿಂದ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿಲ್ಲ ಎಂದು ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಆರೋಪಿಸಿದ್ದಾರೆ.

    https://www.youtube.com/watch?v=3YO0lbkgxeY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv