Tag: ACB attack

  • 2.5 ಕೆಜಿ ಚಿನ್ನ, 12 ಕೆಜಿ ಬೆಳ್ಳಿ – ಆಸ್ತಿ ಕಂಡು ಎಸಿಬಿ ಅಧಿಕಾರಿಗಳು ಶಾಕ್

    2.5 ಕೆಜಿ ಚಿನ್ನ, 12 ಕೆಜಿ ಬೆಳ್ಳಿ – ಆಸ್ತಿ ಕಂಡು ಎಸಿಬಿ ಅಧಿಕಾರಿಗಳು ಶಾಕ್

    ಬಾಗಲಕೋಟೆ: ಎರಡೂವರೆ ಕೆಜಿಯಷ್ಟು ಚಿನ್ನಾಭರಣ, 12 ಕೆಜಿಯಷ್ಟು ಬೆಳ್ಳಿ, 16 ಲಕ್ಷ ಬ್ಯಾಂಕ್ ಡೆಪಾಸಿಟ್ ಹಣ, ಮನೆಯಲ್ಲಿ ಬಗೆದಷ್ಟು ಬಯಲಾಗುತ್ತಿರುವ ಸಂಪತ್ತು, 9 ಗಂಟೆ ಕಳೆದರೂ ಮುಗಿಯದ ಶೋಧಕಾರ್ಯ. ಇದು ಯಾವುದೋ ಸಿನಿಮಾದ ಕಥೆಯಲ್ಲಿ ಬರುವ ಸನ್ನಿವೇಶವಲ್ಲ. ಬಾಗಲಕೋಟೆ ನವನಗರ ಸೆಕ್ಟರ್ ನಂ.15ರಲ್ಲಿರುವ ಆರ್‌ಎಫ್‌ಒ ಪಿ.ಎಸ್.ಖೇಡಗಿ ಅವರ ನಿವಾಸದಲ್ಲಿ ಎಸಿಬಿ ಅಧಿಕಾರಿಗಳು ನಡೆಸುತ್ತಿರುವ ಕಾರ್ಯಾಚರಣೆ.

    ಹೌದು. ಖೇಡಗಿ ಅವರ ಮನೆ, ಬಾದಾಮಿ ಅರಣ್ಯ ಇಲಾಖೆ ಕಚೇರಿ, ಸೆಕ್ಟರ್ ನಂ.12ರಲ್ಲಿರುವ ಸಂಬಂಧಿಕರ ಮನೆ ಹಾಗೂ ಹಾಗೂ ಹರ್ಷಾ ಎಲೆಕ್ಟ್ರಿಕಲ್ ಶಾಪ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು ಸತತ 9 ಗಂಟೆಗಳಿಂದ ಶೋಧಕಾರ್ಯ ನಡೆಸುತ್ತಿದ್ದಾರೆ. ಮನೆಯಲ್ಲಿ ಕೈಹಾಕಿದ ಕಡೆಯೆಲ್ಲ ನಗ, ನಾಣ್ಯ, ಚಿನ್ನ, ಬೆಳ್ಳಿ ವಸ್ತುಗಳು ಪತ್ತೆಯಾಗುತ್ತಿದ್ದು ಎಸಿಬಿ ಅಧಿಕಾರಿಗಳೇ ದಂಗಾಗುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ಅಭಿಮಾನಿಗಳಿಗೆ ಭಾರೀ ನಿರಾಸೆ : ಮೆರವಣಿಗೆ ಇಲ್ಲ, ಹೆಲಿಕಾಪ್ಟರ್ ಗೆ ಅನುಮತಿ ಕೊಟ್ಟಿಲ್ಲ

    ಸದ್ಯಕ್ಕೆ ಖೇಡಗಿ ಅವರ ನಿವಾಸದಲ್ಲಿ 10 ಲಕ್ಷ ರೂ. ನಗದು, ಎರಡೂವರೆ ಕೆಜಿ ಚಿನ್ನಾಭರಣ, 12 ಕೆಜಿ ಬೆಳ್ಳಿ, 16 ಲಕ್ಷ ರೂ. ಬ್ಯಾಂಕ್ ಡೆಪಾಸಿಟ್ ಪತ್ತೆಯಾಗಿದ್ದು, ಚಿನ್ನ, ಬೆಳ್ಳಿ ತೂಕ ಮಾಡಲೆಂದು ಸ್ಥಳಕ್ಕೆ ಅಕ್ಕಸಾಲಿಗರನ್ನು ಕರೆಸಿದ್ದಾರೆ. ಅಲ್ಲದೆ ಖೇಡಗಿಯವರು 5 ಪ್ಲಾಟ್ ಖರೀದಿಸಿರುವ ದಾಖಲೆಗಳು, ಹಣ ಎಣಿಕೆ ಮಾಡುವ ಮಷೀನ್ ಹಾಗೂ ಶ್ರೀಗಂಧದ ಕಟ್ಟಿಗೆ ತುಂಡುಗಳು ಪತ್ತೆಯಾಗಿವೆ. ಇದನ್ನೂ ಓದಿ: ಭದ್ರತಾ ಲೋಪ – ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ

    ಬಾದಾಮಿ ತಾಲೂಕಿನ ವಲಯ ಅರಣ್ಯಾಧಿಕಾರಿಯಾಗಿರುವ ಪಿ.ಎಸ್.ಖೇಡಗಿ ಅವರು ಬಾಗಲಕೋಟೆಯ ನವನಗರದ 15ನೇ ಸೆಕ್ಟರ್ ನಲ್ಲಿ ನೆಲೆಸಿದ್ದಾರೆ. ಶೋಧ ಕಾರ್ಯ ಮುಂದುವರಿಸಿರುವ ಅಧಿಕಾರಿಗಳು ಮನೆಯಲ್ಲಿ ತನಿಖೆ ಮುಗಿದ ನಂತರ ಬ್ಯಾಂಕ್ ಲಾಕರ್ ಓಪನ್ ಮಾಡುವುದಾಗಿ ತಿಳಿಸಿದ್ದಾರೆ.

  • ಮಾಜಿ ಸಚಿವ ಆಪ್ತನ ಮನೆ ಮೇಲೆ ಎಸಿಬಿ ದಾಳಿ-ಕೋಟಿ ಕೋಟಿ ಆಸ್ತಿ, ಕೆಜಿಗಟ್ಟಲೇ ಚಿನ್ನಾಭರಣ ಪತ್ತೆ!

    ಮಾಜಿ ಸಚಿವ ಆಪ್ತನ ಮನೆ ಮೇಲೆ ಎಸಿಬಿ ದಾಳಿ-ಕೋಟಿ ಕೋಟಿ ಆಸ್ತಿ, ಕೆಜಿಗಟ್ಟಲೇ ಚಿನ್ನಾಭರಣ ಪತ್ತೆ!

    ಬೆಂಗಳೂರು: ಮಂಗಳವಾರ ಬೆಳಗ್ಗೆ ಆರು ಗಂಟೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಪ್ರಮುಖವಾಗಿ ಸಹಕಾರಿ ಇಲಾಖೆಯಲ್ಲಿ ಹೆಚ್ಚುವರಿ ನೋಂದಣಾ ಅಧಿಕಾರಿಯಾಗಿರುವ ಬಿಸಿ ಸತೀಶ್ ಅವರ ಬೆಂಗಳೂರಿನ ಬಸವೇಶ್ವರನಗರದ ಹತ್ತನೇ ಮುಖ್ಯ ರಸ್ತೆಯಲ್ಲಿರುವ ನಿವಾಸದ ಮೇಲೆ ದಾಳಿ ನಡೆದಿತ್ತು.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಪ್ತರಾಗಿರುವ ಬಿಸಿ ಸತೀಶ್, ಒಂದೇ ಕಡೆ ಎರಡು ಐಷಾರಾಮಿ ಮನೆ ಮತ್ತು ಮೂರು ವಿವಿಧ ಅಕೌಂಟ್‍ಗಳಲ್ಲಿ ಮೂರು ಕೋಟಿಗೂ ಅಧಿಕ ಪ್ರಮಾಣದ ಹಣ, ಚಿನ್ನಾಭರಣ, ಕೋಟಿಗಟ್ಟಲೇ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಬಿಸಿ ಸತೀಶ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಪ್ತ ಕಮ್ ಪಿಎಸ್ ಕೂಡ ಆಗಿದ್ದು, ರಮೇಶ್ ಜಾರಕಿಹೊಳಿಗೆ ಸೇರಿದ ವಿವಿಧ ಆಸ್ತಿ ಪತ್ರಗಳು, ಸೇರಿದಂತೆ ಬಹುತೇಕ ಹಣದ ವ್ಯವಹಾರಗಳು ಸತೀಶ್ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್‍ಗೆ ಕೈಕೊಟ್ಟು, ಬಿಜೆಪಿ ಸೇರಲು ಬಯಸಿರುವ ಜಾರಕಿಹೊಳಿಗೆ ರಾಜ್ಯ ಸರ್ಕಾರ ಎಸಿಬಿ ಗಾಳದ ಮೂಲಕ ಶಾಕ್ ಕೊಡೋಕೆ ಮುಂದಾಗಿದ್ಯಾ…? ಅನ್ನೋ ಅನುಮಾನ ಎಲ್ಲರನ್ನು ಕಾಡುತ್ತಿದೆ.

    ಇದೇ ವೇಳೆ ಜೆಬಿ ನಗರ ಸಬ್ ಡಿವಿಷನ್‍ನಲ್ಲಿ ಬಿಬಿಎಂಪಿ ಆಸಿಸ್ಟೆಂಟ್ ರೆವಿನ್ಯೂ ಆಫೀಸರ್ ಆಗಿರುವ ಮಂಜುನಾಥ್ ಮನೆ ಮೇಲು ದಾಳಿ ನಡೆಸಿದ್ದು, ಐಷಾರಾಮಿ ಮನೆ ಸೇರಿದಂತೆ ಕೋಟಿ ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ರಗಳು, ಭೂ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ. ದಾಳಿ ಮುಗಿದ ನಂತರವೇ ಏನೆಲ್ಲಾ ಸಿಕ್ತು ಆಸಲಿ ಸತ್ಯ ತಿಳಿಯಬೇಕಿದೆ.