Tag: Academy

  • ಬೆಂಗಳೂರು ಚಿತ್ರೋತ್ಸವ : ಲಕ್ಷ ಲಕ್ಷ ಏರಿಕೆಯಾದ ಬಹುಮಾನ ಮೊತ್ತ

    ಬೆಂಗಳೂರು ಚಿತ್ರೋತ್ಸವ : ಲಕ್ಷ ಲಕ್ಷ ಏರಿಕೆಯಾದ ಬಹುಮಾನ ಮೊತ್ತ

    ಮಾರ್ಚ್ 23 ರಿಂದ ಬೆಂಗಳೂರು (Bangalore) ಅಂತಾರಾಷ್ಟ್ರೀಯ ಚಿತ್ರೋತ್ಸವ ನಿಗದಿಯಾಗಿದೆ. ಇದು 14ನೇ ಅಂತಾರಾಷ್ಟ್ರೀಯ ಬೆಂಗಳೂರು ಚಿತ್ರೋತ್ಸವ (Film Festival) ಆಗಿದ್ದು, ನಾನಾ ರೀತಿಯ ಬದಲಾವಣೆಗಳನ್ನು ಮಾಡುವ ಮೂಲಕ ಮತ್ತಷ್ಟು ನಿರೀಕ್ಷೆ ಮೂಡುವಂತೆ ಮಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ. ಸರಕಾರದಿಂದ ಹಣ ಬಿಡುಗಡೆ ಆಗಿಲ್ಲ ಎನ್ನುವ ಕಾರಣಕ್ಕಾಗಿ ಚಿತ್ರೋತ್ಸವ ನಡೆಯುತ್ತದೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಕೊನೆಗೂ ಹಣ ಬಿಡುಗಡೆಯಾಗಿ ಚಿತ್ರೋತ್ಸವದ ಕೆಲಸಗಳಿಗೆ ವೇಗ ಬಂದಿದೆ.

    ಈ ಬಾರಿ ನಡೆಯುವ ಚಿತ್ರೋತ್ಸವದ ಕುರಿತು ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ (Ashok Kashyap) ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡರು. ಅದರಲ್ಲೂ ಸಿನಿಮಾ ಸ್ಪರ್ಧೆಯಲ್ಲಿ ಗೆದ್ದ ಚಿತ್ರಗಳ ಬಹುಮಾನ ಮೊತ್ತವನ್ನು ತಿಳಿಸಿ ಅಚ್ಚರಿ ಮೂಡಿಸಿದರು. ಈ ಬಾರಿ ಮೊದಲ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದ ಚಿತ್ರಕ್ಕೆ ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಸಿಗುವ ಸಾಧ್ಯತೆ ಇದೆ. ಈವರೆಗೂ ಮೂರು ಲಕ್ಷ ರೂಪಾಯಿಗಳನ್ನು ಮಾತ್ರ ನೀಡಲಾಗುತ್ತಿತ್ತು. ಈ ಬಾರಿ ಹತ್ತು ಲಕ್ಷಕ್ಕೆ ಏರಿಸಿ ಎಂದು ಸರಕಾರಕ್ಕೆ ಅಕಾಡೆಮಿ ಶಿಫಾರಸು ಮಾಡಿದೆಯಂತೆ. ಇದನ್ನೂ ಓದಿ: ನನ್ನ ಸಾವಿಗೆ ಇವರೇ ಕಾರಣವೆಂದು ಸೂಸೈಡ್‌ ನೋಟ್‌ ಬರೆದಿಟ್ಟ ʻವರ್ಷಧಾರೆʼ ನಟಿ ಪಾಯಲ್‌

    ಏಷಿಯನ್, ಭಾರತೀಯ ಹಾಗೂ ಕನ್ನಡ ಸಿನಿಮಾ ಹೀಗೆ ಮೂರು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಬಹುಮಾನಗಳನ್ನು ನೀಡಲಾಗುತ್ತಿದ್ದು, ಕ್ರಮವಾಗಿ 10 ಲಕ್ಷ ರೂ, 5 ಲಕ್ಷ ರೂ ಹಾಗೂ 3 ಲಕ್ಷ ರೂಪಾಯಿ ಬಹುಮಾನವಾಗಿ ಇರಲಿದೆ ಎಂದೂ ಕಶ್ಯಪ್ ತಿಳಿಸಿದ್ದಾರೆ. ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ಮಾರ್ಚ್ 23 ರಂದು ಸಂಜೆ 6 ಗಂಟೆಗೆ ಚಿತ್ರೋತ್ಸವ ಉದ್ಘಾಟನೆಯಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ.

    ಈ ಬಾರಿಯ ಚಿತ್ರೋತ್ಸವದ ಮತ್ತೊಂದು ವಿಶೇಷವೆಂದರೆ, ಮೊನ್ನೆಯಷ್ಟೇ ನಡೆದ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಏಳು ಆಸ್ಕರ್ ಪ್ರಶಸ್ತಿಯನ್ನು ಪಡೆದಿರುವ ‘ಎವ್ರಿಥಿಂಗ್ ಎವ್ರಿವೇರ್ ಆಲ್ ಆಟ್ ಒನ್ಸ್’ ಸಿನಿಮಾ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಜೊತೆಗೆ ವಿಶ್ವದ 61 ಸಿನಿಮಾಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಭಾಗಿಯಾಗಲಿವೆ. ಒಟ್ಟು 50 ದೇಶಗಳ 200 ಚಿತ್ರಗಳನ್ನು ಈ ಆವೃತ್ತಿಯಲ್ಲಿ ಪ್ರದರ್ಶಿಸಲು ತೀರ್ಮಾನಿಸಲಾಗಿದೆ ಎಂದು ಕಶ್ಯಪ್ ತಿಳಿಸಿದ್ದಾರೆ.

  • ಮಾರ್ಚ್ 23 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ

    ಮಾರ್ಚ್ 23 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ

    ಪ್ರತಿಷ್ಠಿತ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಈ ವರ್ಷ ನಡೆಯುವುದು ಅನುಮಾನ ಎನ್ನಲಾಗಿತ್ತು. ಚುನಾವಣೆ ನೀತಿಸಂಹಿತೆ ಹಾಗೂ ಇನ್ನೂ ಸರಕಾರ ಅನುದಾನ ಬಿಡುಗಡೆ ಮಾಡದೇ ಇರುವ ಕಾರಣದಿಂದಾಗಿ ಈ ವರ್ಷ ಚಿತ್ರೋತ್ಸವ ನಡೆಯುವುದರ ಬಗ್ಗೆ ಗೊಂದಲ ಮೂಡಿತ್ತು. ಆದರೆ, ಎಲ್ಲದಕ್ಕೂ ತೆರೆ ಎಳೆಯಲಾಗಿದೆ. ಫೆಬ್ರವರಿಯಲ್ಲಿ ಫಿಲ್ಮೋತ್ಸವ ನಡೆಸದೇ ಮಾರ್ಚ್ ಕೊನೆಯ ವಾರದಲ್ಲಿ ಚಿತ್ರೋತ್ಸವ ನಡೆಸುವುದಾಗಿ ಅಕಾಡೆಮಿ ತಿಳಿಸಿದೆ.

    14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನವನ್ನು ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಅನಾವರಣ ಮಾಡಿದರು. ನಗರದ ಪದ್ಮನಾಭನಗರದಲ್ಲಿ ನಿನ್ನೆ ಸಂಜೆ ನಡೆದ ಸಮಾರಂಭದಲ್ಲಿ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನ ಬಿಡುಗಡೆಗೊಂಡಿದ್ದು, 2023 ಮಾರ್ಚ್ 23ರಿಂದ 30ರವರೆಗೆ ಚಿತ್ರೋತ್ಸವ ನಡೆಯಲಿದೆ. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ರಸ್ತೆ ಇಂದು ಉದ್ಘಾಟನೆ

    ಸಮಾರಂಭದಲ್ಲಿ ಚಿತ್ರೋತ್ಸವದ ಸಂಘಟನಾ ಸಮಿತಿ ಅಧ್ಯಕ್ಷರೂ ಆದ ಕಂದಾಯ ಸಚಿವ ಆರ್.ಅಶೋಕ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಸೇರಿದಂತೆ ಸಂಸದರು, ಶಾಸಕರು, ಹಿರಿಯ ಅಧಿಕಾರಿಗಳು, ಚಲನಚಿತ್ರರಂಗದ ಗಣ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Exclusive- ಬೆಂಗಳೂರು ಚಿತ್ರೋತ್ಸವಕ್ಕೆ ಬಾಲಿವುಡ್ ನಟಿ ರೇಖಾ ಅತಿಥಿ

    Exclusive- ಬೆಂಗಳೂರು ಚಿತ್ರೋತ್ಸವಕ್ಕೆ ಬಾಲಿವುಡ್ ನಟಿ ರೇಖಾ ಅತಿಥಿ

    ರ್ನಾಟಕ ಚಲನಚಿತ್ರ ಅಕಾಡೆಮಿ (Academy) ನಡೆಸುವ ಬೆಂಗಳೂರು (Bangalore) ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ (Film Festival) ಈ ಬಾರಿ ಬಾಲಿವುಡ್ ನಟಿ ರೇಖಾ (Rekha) ಅತಿಥಿಯಾಗಿ (Guest) ಭಾಗಿಯಾಗಲಿದ್ದಾರೆ. ಈ ಕುರಿತು ಸ್ವತಃ ಕಂದಾಯ ಸಚಿವ ಆರ್.ಅಶೋಕ್ ಅವರೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.  ಮಾರ್ಚ್ ನಲ್ಲಿ ಚಿತ್ರೋತ್ಸವ ನಡೆಯಲಿದ್ದು, ನಾಳೆ ಫಿಲ್ಮ್ ಫೆಸ್ಟಿವಲ್ ಲೋಗೋವನ್ನು ಲಾಂಚ್ ಮಾಡಲಾಗುತ್ತಿದೆ ಎನ್ನುವ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದಾರೆ.

    ಅಂದುಕೊಂಡಂತೆ ಆಗಿದ್ದರೆ ಫೆಬ್ರವರಿಯಲ್ಲೇ ಚಿತ್ರೋತ್ಸವ ನಡೆಯಬೇಕಿತ್ತು. ಆದರೆ, ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸರಕಾರದಿಂದ ಈವರೆಗೂ ಯಾವುದೇ ಅನುದಾನ ಬಾರದೇ ಇರುವ ಕಾರಣದಿಂದಾಗಿ ಈ ತಿಂಗಳು ನಡೆಸಲಿಕ್ಕೆ ಆಗಲಿಲ್ಲ. ಚಿತ್ರೋತ್ಸವ ನಡೆಯುವುದಕ್ಕೆ ಬರೋಬ್ಬರಿ ಮೂರು ತಿಂಗಳ ಕಾಲ ಸಿದ್ಧತೆ ಬೇಕು ಎನ್ನುವುದು ಅಕಾಡೆಮಿಯಲ್ಲಿ ಕೆಲಸ ಮಾಡಿರುವವರ ಹೇಳಿಕೆ. ಆದರೆ, ಕಂದಾಯ ಸಚಿವರು ಮಾರ್ಚ್ ನಲ್ಲಿ ಚಿತ್ರೋತ್ಸವ ನಡೆಸುವುದಾಗಿ ಹೇಳಿದ್ದಾರೆ. ಈ ಕುರಿತು ನಾಳೆ ಅವರು ವಿವರಣೆ ನೀಡುತ್ತಾರೆ ಎನ್ನುವುದು ನಿರೀಕ್ಷೆ. ಇದನ್ನೂ ಓದಿ: ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ನಿಧನ

    ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿಸಂಹಿತೆ ಜಾರಿ ಆಗುವ ಮುನ್ನವೇ ಚಿತ್ರೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡಬೇಕು ಎನ್ನುವುದು ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.  ನಾಲ್ಕು ವರ್ಷಗಳಿಂದ ಚಲನಚಿತ್ರ ಪ್ರಶಸ್ತಿಗಳನ್ನೂ ನೀಡಿಲ್ಲ. ಕನಿಷ್ಠ ಎರಡು ವರ್ಷಗಳ ಪ್ರಶಸ್ತಿ ಪ್ರದಾನ ಸಮಾರಂಭ ಮಾಡುವ ತರಾತುರಿ ಕೂಡ ನಡೆದಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಮಾರ್ಚ್ ನಲ್ಲಿ ಅಂದುಕೊಂಡಿರುವ ಕಾರ್ಯಕ್ರಮಗಳು ನಡೆಯುತ್ತಿವೆಯಾ ಎಂದು ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Breaking- ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಶೋಕ್ ಕಶ್ಯಪ್ ನೇಮಕ

    Breaking- ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಶೋಕ್ ಕಶ್ಯಪ್ ನೇಮಕ

    ಸುನೀಲ್ ಪುರಾಣಿಕ್ ಅವರಿಂದ ತೆರುವಾಗಿದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ಭರ್ತಿ ಮಾಡಲಾಗಿದ್ದು, ಕನ್ನಡದ ಖ್ಯಾತ ಸಿನಿಮಾಟೋಗ್ರಾಫರ್ ಅಶೋಕ್ ಕಶ್ಯಪ್ (Ashok Kashyap) ಅವರನ್ನು ನೇಮಕ ಮಾಡಿ, ಸರಕಾರ ಆದೇಶ ಹೊರಡಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವ್ಯಾಪ್ತಿಯ ಕರ್ನಾಟಕ ಚಲನಚಿತ್ರ ಅಕಾಡೆಮಿ (Academy), ಬೆಂಗಳೂರು ಇದರ ಅಧ್ಯಕ್ಷರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಿಸಿ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಈ ಆದೇಶವನ್ನು ಹೊರಡಿಸಿದ್ದಾರೆ.

    ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿರುವ ಅಶೋಕ್ ಕಶ್ಯಪ್, ಲಿಫ್ಟ್ ಕೊಡ್ಲಾ, ಧ್ವಜ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅಶೋಕ್ ಅವರು ಕರ್ನಾಟಕ ಚಲನಚಿತ್ರ ಅಕಾಡಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿ, ರಾಷ್ಟ್ರ ಪ್ರಶಸ್ತಿ ಪಡೆದ ತಲೆದಂಡ ಸಿನಿಮಾಗೆ ಅಶೋಕ್ ಕಶ್ಯಪ್ ಅವರೇ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ವಿಜಯ್ ದೇವರಕೊಂಡ- ರಶ್ಮಿಕಾ

    ಜಗ್ಗೇಶ್, ಉಪೇಂದ್ರ, ಪ್ರಿಯಾಮಣಿ ಸೇರಿದಂತೆ ಕನ್ನಡದ ಅನೇಕ ಸ್ಟಾರ್ ನಟರ ಚಿತ್ರಗಳಿಗೆ ಕ್ಯಾಮೆರಾ ಕೆಲಸ ಮಾಡಿದ ಹೆಗ್ಗಳಿಕೆ ಅಶೋಕ್ ಅವರದ್ದು. ಅಲ್ಲದೇ ಅನೇಕ ಧಾರಾವಾಹಿಗಳಿಗೆ ಕೆಲಸ ಕೂಡ ಮಾಡಿದ್ದಾರೆ. ಇವರದ್ದೇ ನಿರ್ಮಾಣ ಸಂಸ್ಥೆಯಿಂದ ಧಾರಾವಾಹಿಗಳು ಕೂಡ ನಿರ್ಮಾಣವಾಗಿವೆ. ಸಿನಿಮಾಟೋಗ್ರಾಫರ್, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದಾರೆ. ಭಾರತೀಯ ಸಿನಿಮಾ ರಂಗದ ಅತ್ಯುತ್ತಮ ಸಿನಿಮಾಟೋಗ್ರಾಫರ್ ಗಳಲ್ಲಿ ಇವರು ಒಬ್ಬರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 16 ಅಕಾಡೆಮಿ/ ಪ್ರಾಧಿಕಾರಕ್ಕೆ ಅಧ್ಯಕ್ಷರು, ಸದಸ್ಯರ ನೇಮಕ

    16 ಅಕಾಡೆಮಿ/ ಪ್ರಾಧಿಕಾರಕ್ಕೆ ಅಧ್ಯಕ್ಷರು, ಸದಸ್ಯರ ನೇಮಕ

    ಬೆಂಗಳೂರು: ಅಧಿಕಾರಕ್ಕೆ ಬರುತ್ತಿದಂತೆ ಮೈತ್ರಿ ಸರ್ಕಾರ ನೇಮಕ ಮಾಡಿದ್ದ ಅಕಾಡೆಮಿ/ಪ್ರಾಧಿಕಾರಿಗಳ ಅಧ್ಯಕ್ಷರು, ಸದಸ್ಯರನ್ನು ರದ್ದು ಮಾಡಿದ್ದ ಬಿಎಸ್ ಯಡಿಯೂರಪ್ಪ ಸರ್ಕಾರ ಹೊಸ ಸಮಿತಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

    ತಕ್ಷಣದಿಂದ ಜಾರಿ ಬರುವಂತೆ ಸರ್ಕಾರ ಆದೇಶವನ್ನು ನೀಡಿದ್ದು, ಸದ್ಯ ನೇಮಕವಾಗಿರುವ ಅಧ್ಯಕ್ಷರು, ಸದಸ್ಯರ ಅವಧಿ ಮುಂದಿನ ಆದೇಶ ಅಥವಾ ಮುಂಬರುವ ಮೂರು ವರ್ಷಗಳ ಅವಧಿಯವರೆಗೆ ನೇಮಕ ಮಾಡಲಾಗಿದೆ.

    1)ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಅಧ್ಯಕ್ಷರು – ಟಿ.ಎಸ್.ನಾಗಾಭರಣ
    ಸದಸ್ಯರು – ಕಬ್ಬಿನಾಲೆ ವಸಂತ ಭಾರದ್ವಾಜ, ಡಾ:ವಿಜಯಲಕ್ಷ್ಮೀ ಬಾಳೆಕುಂದ್ರಿ, ರೋಹಿತ್ ಚಕ್ರತೀರ್ಥ, ಅಬ್ದುಲ್ ರಹಮಾನ್ ಪಾಷಾ, ರಮೇಶ್ ಗುಬ್ಬಿಗೂಡ, ಸುರೇಶ್ ಬಡಿಗೇರ, ಎನ್.ಆರ್. ವಿಶುಕುಮಾರ್.

    2)ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಅಧ್ಯಕ್ಷರು – ಅಜರ್ಕಳ ಗಿರೀಶ್ ಭಟ್
    ಸದಸ್ಯರು – ಅಜ್ಜಂಪುರ ಮಂಜುನಾಥ, ಡಾ:ಮಾಧವ ಪೆರಾಜೆ, ಡಾ:ಷಣ್ಮುಖ, ಡಾ:ಎಂ.ಎಸ್.ಚೈತ್ರ, ಡಾ:ಡಂಕಿನ್ ಜಳಕಿ, ಸ.ಗಿರಿಜಾಶಂಕರ್.

    3)ಕನ್ನಡ ಪುಸ್ತಕ ಪ್ರಾಧಿಕಾರ: ಅಧ್ಯಕ್ಷರು – ಡಾ:ಎಂ.ಎನ್.ನಂದೀಶ್ ಹಂಜೆ
    ಸದಸ್ಯರು – ಅಶೋಕ್ ರಾಯ್ಕರ್, ಡಾ:ಪುರುಷೋತ್ತಮ ಗೌಡ, ಟಿ.ಎ.ಎನ್.ಖಂಡಿಗೆ, ಸಂಗಮೇಶ್ ಪೂಜಾರ್, ಪ್ರಕಾಶ ಕಂಬತ್ತಹಳ್ಳಿ, ಪ್ರೊ.ಗದ್ದಗಿಮಠ, ಎ.ವಿ.ನಾವಡ, ಎಚ್.ಬಿ.ಬೋರಲಿಂಗಯ್ಯ.

    4)ಕನ್ನಡ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರು – ಡಾ:ಬಿ.ವಿ.ವಸಂತಕುಮಾರ್
    ಸದಸ್ಯರು – ಜಿನದತ್ತ ಹಡಗಲಿ, ಛಾಯಾ ಭಗವತಿ, ರೋಹಿಣಾಕ್ಷ ಶಿರ್ಲಾಲು, ಸಂತೋಷ್ ತಮ್ಮಯ್ಯ, ಡಾ:ಬಿ.ಎಂ.ಶರಭೇಂದ್ರ ಸ್ವಾಮಿ, ಪಾರ್ವತಿ ಪಿಟಗಿ, ಪ್ರೊ.ಕೃಷ್ಣೇಗೌಡ, ಡಾ:ಎನ್.ಎಸ್.ತಾರಾನಾಥ ಮೈಸೂರು, ಡಾ.ವೈ.ಸಿ.ಭಾನುಮತಿ.

    5)ಕರ್ನಾಟಕ ನಾಟಕ ಅಕಾಡೆಮಿ: ಅಧ್ಯಕ್ಷರು – ಭೀಮಸೇನೆ
    ಸದಸ್ಯರು – ಎಂ.ಕೆ.ಮಠ, ಪ್ರೇಮ ಬದಾಮಿ, ಪ್ರಭುದೇವ ಕಪ್ಪಗಲ, ವಿನೋದ ಅಂಬೇಕರ್, ಶಿವಪ್ಪ ಭರಮಪ್ಪ ಅದರಗುಂಚಿ, ಜೋಸೆಫ್, ಡಾ:ಎಂ.ಗುಣಶೀಲನ್, ಕೆ.ಆರ್.ಪ್ರಕಾಶ್, ಟಿ.ಎ.ರಾಶಿವಯ್ಯ ತುಮಕೂರು, ನಾಗರಾಜ ರಾವ್ ಕಲ್ಕಟ್ಟೆ ಚಿಕ್ಕಮಗಳೂರು, ಯಶವಂತರಾವ್ ಸರ್ ದೇಶಪಾಂಡೆ, ವೈದ್ಯನಾಥ್ ಬಿರಾದಾರ್ (ಬೀದರ್), ಟಿ.ರಾಜರಾಮ್.

    6)ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ: ಅಧ್ಯಕ್ಷರು – ಆನೂರು ಅನಂತಕೃಷ್ಣ ಶರ್ಮ
    ಸದಸ್ಯರು – ಡಾ:ವೀರಣ್ಣ ಪತ್ತರ್, ಡಾ:ನಿರುಪಮಾ ರಾಜೇಂದ್ರ, ಶಂಕರ ಶಾನುಭಾಗ್, ಸುಜೇಂದ್ರ ಬಾಬು, ರಾಜಗೋಪಾಲ್, ಹೊಸಹಳ್ಳಿ ವೆಂಕಟರಾಮ್, ಶಾರದಾಮಣಿ ಶೇಖರ್, ರಮ್ಯ ಸೂರಜ್, ಹೇಮಾ ವಾಗ್ಮೋರೆ, ರೇಖಾ ಪ್ರೇಮಕುಮಾರ್, ಪದ್ಮನಿವೋಕ್, ಕಿಕ್ಕೇರಿ ಕೃಷ್ಣಮೂರ್ತಿ.

    7)ಕರ್ನಾಟಕ ಶಿಲ್ಪಕಲಾ ಅಕಾಡೆಮಿ: ಅಧ್ಯಕ್ಷರು – ವೀರಣ್ಣ ಅರ್ಕಸಾಲಿ
    ಸದಸ್ಯರು – ರಾಜೇಶ್ ಪತ್ತಾರ್, ಸುರೇಶ್ ಗುಡಿಗಾರ್, ಅಣ್ಣಪ್ಪ ಆಚಾರ್ಯ, ಚಂದ್ರಶೇಖರ್ ನಾಯ್ಕ, ನಟರಾಜ್, ಶ್ರೀಧರ ಕಾಶಿನಾಥ್, ಕೃಷ್ಣಪ್ಪ ಬಡಿಗೇರ, ಸುರೇಶ್ ಎಸ್.ಕಮ್ಮಾರ್, ಮಂಜುನಾಥ್ ಆಚಾರ್, ಜಗದೀಶ್ ಎಸ್.ದೊಡ್ಡಮನಿ, ಮನೋಹರ್ ಕಾಳಪ್ಪ ಪತ್ತಾರ್,

    8)ಕರ್ನಾಟಕ ಲಲಿತಕಲಾ ಅಕಾಡೆಮಿ: ಅಧ್ಯಕ್ಷರು – ಡಿ.ಮಹೇಂದ್ರ
    ಸದಸ್ಯರು – ರಮೇಶ್ ಚೌಹಾಣ್, ಬಿ.ಆರ್.ಉಪ್ಪಳ, ಗಣೇಶ್ ಧ್ವಾರೇಶ್ವರ, ನರಸಿಂಹಮೂರ್ತಿ, ವಿನೋದ್ ಕುಮಾರ್, ಲಕ್ಷ್ಮೀ ಮೈಸೂರು, ಸೂರ್ಯಪ್ರಕಾಶ್, ಆತ್ಮಾನಂದ ಎಚ್.ಎ, ಅನೀಸ್ ಫಾತೀಮ, ಜಯಾನಂದ ಮಾದರ.

    9)ಕರ್ನಾಟಕ ಯಕ್ಷಗಾನ ಅಕಾಡೆಮಿ: ಅಧ್ಯಕ್ಷರು – ಎಂ.ಎ.ಹೆಗ್ಡೆ
    ಸದಸ್ಯರು – ಮಾಧವ ಭಂಡಾರಿ, ನವನೀತ ಶೆಟ್ಟಿ, ಆರತಿ ಪಟ್ರಮೆ, ರಾಧಾಕೃಷ್ಣ ಕಲ್ಚಾರು, ರಮೇಶ್ ಬೇಗಾರು, ದಿವಾಕರ ಹೆಗಡೆ, ಕೆ.ಎಂ.ಶೇಖರ್, ಶ್ರೀನಿವಾಸ್ ಸಾಸ್ತಾನ್, ಯೋಗೇಶ್ ರಾವ್, ಜಿ.ಎಸ್.ಭಟ್ (ಮೈಸೂರು), ನಿರ್ಮಲಾ ಮಂಜುನಾಥ್ ಹೆಗಡೆ.

    10)ಕರ್ನಾಟಕ ಜಾನಪಡ ಅಕಾಡೆಮಿ: ಅಧ್ಯಕ್ಷರು – ಮಂಜಮ್ಮ ಜೋಗತಿ
    ಸದಸ್ಯರು – ಲಿಂಗಪ್ಪ, ಶಂಕರ ಅರ್ಕಸಾಲಿ, ಚಟ್ಟಿಕುಟ್ಟಡ ಡಾ.ಅನಂತಸುಬ್ಬಯ್ಯ, ಕುಡಿಯರ ಖೋಜಕ್ಕಿ, ಅಮರಯ್ಯ ಸ್ವಾಮಿ, ಡಾ:ವೇಮಗಲ್ ನಾರಾಯಣಸ್ವಾಮಿ, ಡಾ:ರಾಜೇಂದ್ರ ಯರನಾಳ, ಡಾ.ಪಿ.ಕೆ.ರಾಜಶೇಖರ್, ಪುಷ್ಪಲತಾ, ಎಸ್.ಜಿ.ಲಕ್ಷ್ಮೀದೇವಮ್ಮ, ಬೂದ್ಯಪ್ಪ.

    11)ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ: ಅಧ್ಯಕ್ಷರು – ದಯಾನಂದ ಕತ್ತಲಸರ
    ಸದಸ್ಯರು – ಲೀಲಾಕ್ಷ ಕರ್ಕೇರ, ರವೀಂದ್ರ ಶೆಟ್ಟಿ ಬಳಂಜ, ಡಾ:ಸಾಯಿಗೀತ ಹೆಗಡೆ, ನಾಗೇಶ್ ಕುಲಾಲ್, ವಿಜಯಲಕ್ಷ್ಮೀ ರೈ, ಮಲ್ಲಿಕಾ ಶೆಟ್ಟಿ, ಕಡಬ ದಿನೇಶ್ ರೈ, ಡಾ:ವೈ.ಎನ್.ಶೆಟ್ಟಿ, ತಾರಾ ಉಮೇಶ್, ನಿಟ್ಟೆ ಶಶಿಧರ ಶೆಟ್ಟಿ, ಆಕಾಶ್‍ರಾಜ್ ಜೈನ್.

    12)ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರು – ಡಾ:ಪಾರ್ವತಿ ಅಪ್ಪಯ್ಯ
    ಸದಸ್ಯರು – ಗೌರಮ್ಮ ಮದಮ್ಮಯ್ಯ, ಜಾನಕಿ ಮಾಚಯ್ಯ, ಬಬ್ಬಿರ ಸರಸ್ವತಿ, ಶಂಬಯ್ಯ, ಪಂಡಿರಂಡ ಪ್ರಭುಕುಮಾರ್, ರವಿ ಕಾಳಪ್ಪ, ಮೆಚ್ಚಿರ ಸುಭಾಷ್ ನಾಣಯ್ಯ.

    13)ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರು – ಡಾ: ಜಗದೀಶ್ ಪೈ
    ಸದಸ್ಯರು – ಗುರುಮೂರ್ತಿ ಶೇಟ್, ಗೋಪಿ ಭಟ್, ನವೀನ್ ನಾಯ್ಕ, ಚಿದಾನಂದ ಹರಿಭಂಡಾರಿ, ಭಾಸ್ಕರ ನಾಯಕ್, ಸುರೇಂದ್ರ ವಿ.ಬಾಲಂಕರ್, ಪ್ರಮೋದ್ ಸೇಟ್, ಪೂರ್ಣಿಮಾ ಸುರೇಶ್ ನಾಯ್ಕ, ಕೆ.ನಾರಾಯಣ ಕಾರ್ವಿ, ಡಾ: ವಸಂತ ಬಾಂದೇಕರ್, ಅರುಣ್ ಜಿ.ಸೇಟ್.

    14)ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರು – ರಹೀಂ ಉಚ್ಚಿಲ
    ಸದಸ್ಯರು – ರೂಪೇಶ್ ಕುಮಾರ್, ಮುರಳಿ ರಾಜ್, ಡಾ:ಮುನೀರ್ ಬಾವ, ಸುರೇಖ, ಚಂಚಲಾಕ್ಷಿ, ಫಸಲ್ ಹಸ್ಸಿಗೋಳಿ, ಸಿರಾಜ್ ಮುಡುಪು.

    15)ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ: ಅಧ್ಯಕ್ಷರು – ಲಕ್ಷ್ಮೀನಾರಾಯಣ ಕಜೆಗದ್ದೆ
    ಸದಸ್ಯರು – ಜಾನಕಿ ಬೈತಡ್ಕ, ಸ್ಮಿತಾ ಅಮೃತರಾಜ್, ಪ್ರೇಮಾ ರಾಘವಯ್ಯ, ಎ.ಪಿ.ಧನಂಜಯ, ಆನಂದ ದಂಬೆಕೊಡಿ, ಸೋಮಣ್ಣ ಆರ್.ಸೂರ್ತಲೆ.

    16)ಕರ್ನಾಟಕ ಬಯಲಾಟ ಅಕಾಡೆಮಿ (ಬಾಗಲಕೋಟೆ): ಅಧ್ಯಕ್ಷರು – ಸೊರಬಕ್ಕನವರ್ ಹಾವೇರಿ
    ಸದಸ್ಯರು – ಎನ್.ಎಸ್.ರಾಜು, ಡಾ:ಕರಿಶೆಟ್ಟಿ ರುದ್ರಪ್ಪ ಬಳ್ಳಾರಿ, ಗಂಗವ್ವ, ಬಿರಾದಾರ್ ಹಳಿಯಾಳ, ಶಿವಲಿಂಗಪ್ಪ ಪೂಜಾರಿ, ಕೆ.ಸತ್ಯನಾರಾಯಣ, ಮಂಜುಗುರುಲಿಂಗ, ಡಾ:ಅನುಪಮ ಹೊಸಗೆರೆ, ಚರಚೋಗಿ ಬಸವರಾಜು, ಶಿವಾನಂದ ಶೆಲ್ಲಿಕೇರಿ.

  • ಸೈನಾ, ಸಿಂಧೂಗೆ ಬೇರೆ ಬೇರೆ ಕಡೆಯಲ್ಲಿ ಪ್ರತ್ಯೇಕ ತರಬೇತಿ ನೀಡ್ತಿದ್ದಾರೆ ಗೋಪಿಚಂದ್!

    ಸೈನಾ, ಸಿಂಧೂಗೆ ಬೇರೆ ಬೇರೆ ಕಡೆಯಲ್ಲಿ ಪ್ರತ್ಯೇಕ ತರಬೇತಿ ನೀಡ್ತಿದ್ದಾರೆ ಗೋಪಿಚಂದ್!

    ಹೈದರಾಬಾದ್: ಭಾರತದ ಸ್ಟಾರ್ ಬ್ಯಾಡ್ಮಿಟನ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧೂ ಅವರು ಸದ್ಯ ರಾಷ್ಟ್ರೀಯ ತಂಡದ ತರಬೇತುದಾರ ಗೋಪಿಚಂದ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ಕೋಚ್ ಇಬ್ಬರಿಗೂ ಬೇರೆ ಬೇರೆ ಕೇಂದ್ರಗಳಲ್ಲಿ ತರಬೇತಿ ನೀಡುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೋಪಿಚಂದ್, ಇದು ತರಬೇತಿ ತಂಡದ ನಿರ್ಧಾರವಾಗಿದ್ದು, ಇಬ್ಬರು ಆಟಗಾರ್ತಿಯರ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ. ಈ ಹಿಂದೆಯೂ ಇದೇ ರೀತಿ ಪ್ರತ್ಯೇಕ ತರಬೇತಿ ನೀಡಿದ್ದು, ಇಬ್ಬರು ಆಟಗಾರ್ತಿಯರ ಕುರಿತು ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಸದ್ಯ ಈ ತೀರ್ಮಾನದ ಹಿನ್ನೆಲೆಯಲ್ಲಿ ಗೋಪಿಚಂದ್ ಅವರ ಆಕಾಡೆಮಿಯ ತರಬೇತಿ ಸಮಯವನ್ನು ಪ್ರತ್ಯೇಕಗೊಳಿಸಲಾಗಿದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ ಎಂದು ಗೋಪಿಚಂದ್ ಹೇಳಿದ್ದಾರೆ.

    ಸದ್ಯ ಗೋಪಿಚಂದ್ ಅವರು ಎರಡು ಆಕಾಡೆಮಿಗಳನ್ನು ಹೊಂದಿದ್ದು, ಅರ್ಧ ಕಿಮೀ ಅಂತರದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಈ ಮೊದಲು ಇದ್ದ ಹಳೆಯ ತರಬೇತಿ ಕೇಂದ್ರದ ಅಲ್ಪ ದೂರದಲ್ಲೇ ಮತ್ತೊಂದು ಹೊಸ ಕೇಂದ್ರ ಸ್ಥಾಪನೆ ಕೆಲ ವರ್ಷಗಳ ಹಿಂದೆ ಆರಂಭ ಮಾಡಲಾಗಿತ್ತು.

    2014 ರಲ್ಲಿ ಗೋಪಿಚಂದ್ ತರಬೇತಿ ಕೇಂದ್ರದಿಂದ ಹೊರ ನಡೆದಿದ್ದ ಸೈನಾ ಬೆಂಗಳೂರಿನಲ್ಲಿ ವಿಮಲ್ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದರು. ಕಳೆದ ಸೆಪ್ಟೆಂಬರ್ ನಲ್ಲಿ ಮತ್ತೆ ಸೈನಾ ಗೋಪಿಚಂದ್ ಅವರ ಆಕಾಡೆಮಿಗೆ ಹಿಂದಿರುಗಿದ್ದರು. ವಿಶ್ವ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದ ನಂತರ ಗೋಪಿಚಂದ್ ಅವರ ಆಕಾಡೆಮಿಗೆ ಹಿಂದುರುಗಿ ಪಿವಿ ಸಿಂಧೂ ರನ್ನು ಮಣಿಸಿ ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

    ತರಬೇತಿ ತಂಡದ ಈ ತೀರ್ಮಾನದ ಕುರಿತು ಪ್ರತಿಕ್ರಿಯೆ ನೀಡಿರುವ ಸಿಂಧೂ ತಂದೆ, ಸದ್ಯ ನಿಗಧಿ ಮಾಡಿರುವ ಅವಧಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಗೋಪಿಚಂದ್ ಅವರು ಎಲ್ಲಾ ಆಟಗಾರರಿಗೂ ಒಂದೇ ಸಮಯವನ್ನು ನೀಡುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನದಾಗಿ ಏನನ್ನು ಕೇಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

    ಪ್ರತ್ಯೇಕ ತರಬೇತಿ ಯಾಕೆ?
    ಸೈನಾ ಮತ್ತು ಸಿಂಧೂಗೆ ಪ್ರತ್ಯೇಕ ತರಭೇತಿ ನೀಡುತ್ತಿರುವುದು ಯಾಕೆ ಎನ್ನುವುದನ್ನು ಯಾರು ಅಧಿಕೃತವಾಗಿ ತಿಳಿಸಿಲ್ಲ. ಇಬ್ಬರಿಗೆ ಪ್ರತ್ಯೇಕ ಅವಧಿಯಲ್ಲಿ ತರಬೇತಿ ನೀಡುತ್ತಿರುವುದರ ಹಿಂದೆ ಆಟಗಾರ್ತಿಯರ ಹಿತಾದೃಷ್ಟಿಯೂ ಕಾರಣವಾಗಿದೆ ಎನ್ನಲಾಗಿದೆ. ಇಬ್ಬರು ಒಂದೇ ಕಡೆ ಅಭ್ಯಾಸ ನಡೆಸಿದರೆ ದೌರ್ಬಲ್ಯಗಳು ತಿಳಿಯುವ ಕಾರಣ ಇಬ್ಬರನ್ನು ದೂರ ಇಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.