Tag: AC Office

  • ಭೂ ಪರಿಹಾರ ವಿಳಂಬ – ಸಂತ್ರಸ್ತ ರೈತರಿಂದ ಎಸಿ ಕಚೇರಿ ವಸ್ತುಗಳ ಜಪ್ತಿ

    ಭೂ ಪರಿಹಾರ ವಿಳಂಬ – ಸಂತ್ರಸ್ತ ರೈತರಿಂದ ಎಸಿ ಕಚೇರಿ ವಸ್ತುಗಳ ಜಪ್ತಿ

    ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಮಾಡಗಿರಿ ಗ್ರಾಮದಲ್ಲಿ 14 ವರ್ಷಗಳಿಂದ ಭೂಪರಿಹಾರ ಸಿಗದ ಹಿನ್ನೆಲೆ ರಾಯಚೂರು (Raichuru) ಸಹಾಯಕ ಆಯುಕ್ತರ ಕಚೇರಿ (AC Office) ವಸ್ತುಗಳ ಜಪ್ತಿಗೆ ರೈತರು ಮುಂದಾಗಿದ್ದಾರೆ.ಇದನ್ನೂ ಓದಿ: ಓಟದ ಅಭ್ಯಾಸ ಮಾಡುತ್ತಿರುವಾಗ 14ರ ಬಾಲಕ ಹೃದಯಾಘಾತದಿಂದ ಸಾವು

    2009-10ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆದಿತ್ತು. ಸಣ್ಣ ನೀರಾವರಿ ಇಲಾಖೆಯಿಂದ ಏತ ನೀರಾವರಿ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ರೈತರು ಈವರೆಗೂ ಪರಿಹಾರವನ್ನು ಪಡೆದಿಲ್ಲ. ಇದರಿಂದ ಸೂಕ್ತ ಪರಿಹಾರಕ್ಕಾಗಿ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ರೈತರ ಪರ ಆದೇಶ ನೀಡಿದ್ದರೂ ಕೂಡ ಇಲ್ಲಿಯವರೆಗೂ ರೈತರಿಗೆ ಯಾವುದೇ ಪರಿಹಾರ ನೀಡಲ್ಲ. ಸುಧೀರ್ಘ ಹೋರಾಟದ ಮಧ್ಯೆ ವಯೊಸಹಜ ಕಾರಣದಿಂದಾಗಿ 14 ಜನರು ಸಾವನ್ನಪ್ಪಿದ್ದಾರೆ. ಇದೀಗ ಮೃತ ರೈತರ ಮಕ್ಕಳಿಂದಲೂ ಹೋರಾಟ ಮುಂದುವರೆದಿದೆ.

    ಒಟ್ಟು 32 ಜನ ರೈತರ 33 ಎಕರೆಯ ಸುಮಾರು 3 ಕೋಟಿ ರೂ. ಪರಿಹಾರ ಬಾಕಿಯಿದೆ. ಹೀಗಾಗಿ ನ್ಯಾಯಾಲಯ ಸೂಚನೆ ಹಿನ್ನೆಲೆ ಸಹಾಯಕ ಆಯುಕ್ತ ಕಚೇರಿ ವಸ್ತುಗಳ ಜಪ್ತಿಗೆ ರೈತರು ಮುಂದಾಗಿದ್ದರು. ಕಚೇರಿಯ ಪೀಠೋಪಕರಣ, ಕಂಪ್ಯೂಟರ್, ಇನ್ನಿತರ ವಸ್ತುಗಳ ಜಪ್ತಿಗೆ ಬಂದಿದ್ದ ರೈತರು ವಸ್ತುಗಳನ್ನ ಹೊರಗಡೆ ತಂದಿದ್ದರು. ರಾಯಚೂರು ಸಹಾಯಕ ಆಯುಕ್ತರ ಭರವಸೆ ಮೇರೆಗೆ ಕಾಲಾವಕಾಶ ನೀಡಿರುವ ರೈತರು, ಪರಿಹಾರ ದೊರೆಯುವ ಭರವಸೆಯಲ್ಲಿ ಜಪ್ತಿ ಮಾಡಲು ಮುಂದಾಗಿದ್ದ ವಸ್ತುಗಳನ್ನ ಬಿಟ್ಟು ಹೋಗಿದ್ದಾರೆ.ಇದನ್ನೂ ಓದಿ: ನಿರ್ಮಲಾನಂದನಾಥ ಶ್ರೀಗಳ ಫೋನ್ ಟ್ಯಾಪ್ ಮಾಡಿದಾಗ ಯಾಕೆ ಮಾತಾಡಲಿಲ್ಲ – ಅಶೋಕ್‌ಗೆ ಡಿಕೆಶಿ ಪ್ರಶ್ನೆ

  • ಪರಿಹಾರದ ಹಣ ನೀಡಲಿಲ್ಲ ಅಂತ ಎಸಿ ಕೂತಿದ್ದ ಚೇರನ್ನೇ ಹೊತ್ತೊಯ್ದ ಸಂತ್ರಸ್ತರು!

    ಪರಿಹಾರದ ಹಣ ನೀಡಲಿಲ್ಲ ಅಂತ ಎಸಿ ಕೂತಿದ್ದ ಚೇರನ್ನೇ ಹೊತ್ತೊಯ್ದ ಸಂತ್ರಸ್ತರು!

    ಚಿಕ್ಕಬಳ್ಳಾಪುರ: ಅದು ಸರ್ಕಾರಿ ಕಚೇರಿ ಅದ್ರಲ್ಲೂ ಎಸಿ ಕಚೇರಿ (AC Office), ಎಸಿ ಸೇರಿದಂತೆ ಅಧಿಕಾರಿ ಸಿಬ್ಬಂದಿ ಎಂದಿನಂತೆ ತಮ್ಮ ಕರ್ತವ್ಯಕ್ಕೆ ಹಾಜರಾಗಿ ತಮ್ಮ ಚೇರ್ ಗಳಲ್ಲಿ ಕೂತು ಬೆಳ್ಳಂಬೆಳಗ್ಗೆ ತಮ್ಮ ಕೆಲಸ ಕಾರ್ಯ ನಿರ್ವಹಿಸುತ್ತಿದ್ರು… ಆದ್ರೆ ಆ ಕಚೇರಿಗೆ ಬಂದ 10 ಮಂದಿ ಎಸಿ ಕೂತಿದ್ದ ಚೇರ್ ಸೇರಿದಂತೆ ಅಧಿಕಾರಿ ಸಿಬ್ಬಂದಿ ಕೂತಿದ್ದ ಚೇರ್‌ಗಳನ್ನೇ ಹೊತ್ತೊಯಿದ್ದರು… ಅಂದಹಾಗೆ ಇಂತಹ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ (Chikkaballapura) ಎಸಿ ಕಚೇರಿಯಲ್ಲಿ.

    ಯಾಕೆ ಅಂದ್ರೆ 2011 ರಲ್ಲಿ ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಾದ ಡಿವಿಜಿ ರಸ್ತೆಯನ್ನ ಅಗಲೀಕರಣ ಮಾಡಲಾಗಿತ್ತು. ಹಾಗಾಗಿ ಅಂದು ನೂರಾರು ಮಂದಿ ಮುಖ್ಯರಸ್ತೆಯಲ್ಲಿದ್ದ ಅಂಗಡಿಗಳನ್ನ ಜಾಗಗಳನ್ನ ಕಳೆದುಕೊಂಡಿದ್ರು. ಆದ್ರೆ ಸರ್ಕಾರ ಅಂದು ಭೂ ಸ್ವಾಧೀನ ಮಾಡಿಕೊಂಡ ಜಾಗಕ್ಕೆ ಅಡಿಗೆ 240 ರೂ. ಪರಿಹಾರ ನೀಡಿ ಕೈತೊಳೆದುಕೊಂಡಿತ್ತು. ಆದ್ರೆ ಈ ಪರಿಹಾರದ ಹಣ ನಮಗೆ ಸಾಕಾಗಲ್ಲ ಅಂತ ನೂರಾರು ಮಂದಿ ನ್ಯಾಯಾಲಯದ ಮೆಟ್ಟಿಲೇರಿದ್ರು. ಈಗ ನ್ಯಾಯಾಲಯ ಅಂದು ನೀಡಿದ್ದ 240 ರೂ. ಬದಲು ಅಡಿಗೆ 890 ರೂ. ಪರಿಹಾರ ನೀಡುವಂತೆ ಎಸಿಯವರಿಗೆ ಆದೇಶ ಮಾಡಿತ್ತು. ಆದ್ರೆ ಆದೇಶ ನೀಡಿ 2 ತಿಂಗಳು ಕಳೆದಿದ್ದರೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಆದೇಶದ ಮೇರೆಗೆ ಎಸಿ ಕಚೇರಿ ಪಿಠೋಪಕರಣ ಜಪ್ತಿ ಮಾಡಲಾಯಿತು. ಇದನ್ನೂ ಓದಿ: ಅಮೆರಿಕದಲ್ಲಿ 10 ಶತಕೋಟಿ ಡಾಲರ್‌ ಹೂಡಿಕೆಗೆ ಬದ್ಧ, 15,000 ಉದ್ಯೋಗ ಸೃಷ್ಟಿ ಗುರಿ: ಅದಾನಿ

    ಇನ್ನೂ ಎಸಿ ಕಚೇರಿಗೆ ಆಗಮಿಸಿದ ನ್ಯಾಯಾಲಯದ ದಾವೆ ಹೂಡಿದ್ದ ಶ್ರೀನಿವಾಸ್ ರೆಡ್ಡಿ, ಸತೀಶ್ ಬಾಬು, ನರಸಿಂಹನಾಯಡು, ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಕೂಲಿಯಾಳುಗಳ ಸಮೇತ ಆಗಮಿಸಿ ಎಸಿ ಕಚೇರಿಯಲ್ಲಿ ಕೈಗೆ ಸಿಕ್ಕ ಸಿಕ್ಕ ಚೇರ್, ಟೇಬಲ್ ಕಂಪ್ಯೂಟರ್ ಸೇರಿದಂತೆ ಪಿಠೋಪಕರಣಗಳನ್ನ ಎತ್ತೊಯ್ದರು, ಇದ್ರಿಂದ ಇರುಸು ಮುರಾಸಾದ ಎಸಿ ಅಶ್ವಿನ್ ಕೂರಲು ಚೇರ್ ಇಲ್ಲದೆ ಪ್ರತ್ಯೇಕ ಕೊಠಡಿ ಸೇರಿದ್ರೆ ಇತ್ತ ಅಧಿಕಾರಿ ಸಿಬ್ಬಂದಿ ನಿಂತಲ್ಲೇ ನಿಲ್ಲುವಂತಾಯಿತು. ಇದನ್ನೂ ಓದಿ: ಉದ್ಧವ್ ಠಾಕ್ರೆ ಬ್ಯಾಗ್ ಗದ್ದಲದ ನಡುವೆ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಹೆಲಿಕಾಪ್ಟರ್ ತಪಾಸಣೆ

    ಇನ್ನೂ ಎರಡು ತಿಂಗಳ ಹಿಂದೆಯೇ ನ್ಯಾಯಾಲಯ ಆದೇಶ ಮಾಡಿದ್ರೂ ಎಸಿಯವರು ಪರಿಹಾರ ನೀಡಿಲ್ಲ, ಹೀಗಾಗಿ ಪಿಠೋಪಕರಣ ಜಪ್ತಿ ಮಾಡಲಾಗಿದ್ರೆ ಕೊನೆಗೆ ಮತ್ತೆ ಎಸಿಯವರು ಎರಡು ತಿಂಗಳು ಕಾಲಾವಕಾಶ ಗಡುವು ನೀಡುವಂತೆ ಮನವಿ ಮಾಡಿಕೊಂಡಿರೋದ್ರಿಂದ ಪುನಃ ಚೇರ್ ಹಾಗೂ ಪಿಠೋಪಕರಣ ವಾಪಾಸ್ ನೀಡಲಾಗಿದೆ. ಜಾಗ ಕಳೆದುಕೊಂಡವರು ಪರಿಹಾರಕ್ಕಾಗಿ ಎಸಿ ಕಚೇರಿ ಪಿಠೋಪಕರಣಗಳು ಸೇರಿದಂತೆ ಸ್ವತಃ ಎಸಿಯವರ ಚೇರನ್ನೇ ಹೊತ್ತೊಯ್ದದ್ದರಿಂದ ಸಾರ್ವಜನಿಕರ ಎದುರು ಸ್ವತಃ ಎಸಿ ಹಾಗೂ ಸರ್ಕಾರಿ ಅಧಿಕಾರಿಗಳು ಮುಜುಗರಕ್ಕೊಳಗಾಗಿ ನಗೆಪಾಟೀಲಿಗೀಡಾದರು.

    ಇನ್ನೂ ಈ ಪ್ರಕರಣ ಈಗಾಗಲೇ ಹೈಕೋರ್ಟ್ ಮೆಟ್ಟೇಲೇರಿದ್ದು ಮುಂದಾಗಿದ್ದು ಮುಂದೆನಾಗಲಿದೆಯೋ ಕಾದು ನೋಡಬೇಕಿದೆ. ಇದನ್ನೂ ಓದಿ: 5 ಕೋಟಿಗೆ ಮಾಜಿ ಸಿಎಂ ದಿ.ಎಸ್ ನಿಜಲಿಂಗಪ್ಪ ಮನೆ ಖರೀದಿಸಿದ ಸರ್ಕಾರ 

  • ಧಾರವಾಡ ಎಸಿ ಕಚೇರಿಯಲ್ಲಿ ಪುನುಗು ಬೆಕ್ಕು ಪ್ರತ್ಯಕ್ಷ

    ಧಾರವಾಡ ಎಸಿ ಕಚೇರಿಯಲ್ಲಿ ಪುನುಗು ಬೆಕ್ಕು ಪ್ರತ್ಯಕ್ಷ

    ಧಾರವಾಡ: ನಗರದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಪುನುಗು ಬೆಕ್ಕನ್ನು ಕಂಡು ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಂದು ಕ್ಷಣ ಗಾಬರಿಯಾಗಿದ್ದಾರೆ.

    ಪುನುಗು ಬೆಕ್ಕು ಕಂಡು ಕೆಲವರು ಹೌಹಾರಿದರೆ, ಇನ್ನೂ ಕೆಲವರು ಕುತೂಹಲದಿಂದ ನೋಡುತ್ತ ನಿಂತಿದ್ದರು. ಬೆಳ್ಳಂಬೆಳ್ಳಗ್ಗೆ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಾಲ್ಕು ಗಂಟೆಗೂ ಅಧಿಕ ಕಾಲ ಪುನುಗು ಬೆಕ್ಕು ಕಾಣಿಸಿಕೊಂಡಿದೆ.

    ಕಚೇರಿಗೆ ಬರುತ್ತಿದ್ದ ಸಿಬ್ಬಂದಿ ಹಾಗೂ ಜನ ಪುನುಗು ಬೆಕ್ಕನ್ನು ಕುತೂಹಲದಿಂದ ನೋಡುತ್ತಲೇ ನಿಂತಿದ್ದರು. ಸುಮಾರು ನಾಲ್ಕು ಗಂಟೆಗಳ ಈ ಬೆಕ್ಕು ಕಚೇರಿ ಆವರಣದಲ್ಲಿಯೇ ಓಡಾಡುತ್ತಿತ್ತು. ಬಳಿಕ ಉರಗ ತಜ್ಞ ಯಲ್ಲಪ್ಪ ಸ್ಥಳಕ್ಕಾಗಮಿಸಿ, ಈ ಅಪರೂಪದ ಬೆಕ್ಕನ್ನು ಸೆರೆ ಹಿಡಿದು ಅರಣ್ಯದಲ್ಲಿ ಬಿಟ್ಟು ಬಂದಿದ್ದಾರೆ. ಇತ್ತೀಚೆಗೆ ಧಾರವಾಡದಲ್ಲಿ ಅಲ್ಲಲ್ಲಿ ಪುನುಗು ಬೆಕ್ಕುಗಳು ಕಂಡು ಬರುತ್ತಿದ್ದು, ಇದರ ಸಂತತಿ ಧಾರವಾಡದಲ್ಲಿ ಹೆಚ್ಚಾಗಿದೆಯಾ ಎನ್ನುವ ಸಂಶಯ ವ್ಯಕ್ತವಾಗಿದೆ.