Tag: ac bus

  • ದೇಶದ ಮೊದಲ ಎಲೆಕ್ಟ್ರಿಕ್‌ ಡಬ್ಬಲ್ ಡೆಕ್ಕರ್ ಬಸ್‌ ಇಂದಿನಿಂದ ಕಾರ್ಯಾರಂಭ – ಏನಿದರ ವಿಶೇಷತೆ?

    ದೇಶದ ಮೊದಲ ಎಲೆಕ್ಟ್ರಿಕ್‌ ಡಬ್ಬಲ್ ಡೆಕ್ಕರ್ ಬಸ್‌ ಇಂದಿನಿಂದ ಕಾರ್ಯಾರಂಭ – ಏನಿದರ ವಿಶೇಷತೆ?

    ಮುಂಬೈ: ದೇಶದ ಮೊದಲ ಡಬ್ಬಲ್ ಡೆಕ್ಕರ್ ಹವಾನಿಯಂತ್ರಿತ (ಎಸಿ) ಬಸ್ ಸೇರಿದಂತೆ 2 ಎಲೆಕ್ಟ್ರಿಕ್‌ ಬಸ್‌ಗಳು ಮುಂಬೈನಲ್ಲಿ ಇಂದಿನಿಂದ ಕಾರ್ಯಾರಂಭ ಮಾಡಿವೆ.

    ಈ ಬಸ್‌ಗಳು ಉತ್ತಮ ಆಕರ್ಷಣೆಯಾಗಿದ್ದು, ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಸ್‌ಗಳಲ್ಲಿ 1 ಆ್ಯಪ್ (ತಂತ್ರಾಂಶ) ನಿಯಂತ್ರಿತ ಆಗಿದ್ದು, ಮತ್ತೊಂದು ನಿಯಂತ್ರಿತ ಎಲೆಕ್ಟಿಕ್ ಡಬ್ಬಲ್ ಡೆಕ್ಕರ್ ಬಸ್ ಆಗಿದೆ.

    ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ. ಮುಂಬೈ ನಗರ ಸಾರ್ವಜನಿಕ ಸಾರಿಗೆ ನಗರದಾದ್ಯಂತ ಆಪ್ ಆಧಾರಿತ ಬಸ್ ಸೇವೆ ನೀಡಲು ಯೋಜನೆ ರೂಪಿಸಿದೆ.

    ಇತ್ತೀಚೆಗೆ ದೆಹಲಿಯ ಕೇಜ್ರಿವಾಲ್ ನೇತೃತ್ವದ ಸರ್ಕಾರ ಸುಮಾರು 200 ಎಲೆಕ್ಟ್ರಿಕ್‌ ಬಸ್‌ಗಳಿಗೆ ಚಾಲನೆ ನೀಡಿತ್ತು.

    Live Tv
    [brid partner=56869869 player=32851 video=960834 autoplay=true]

  • ವಾಯವ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದಿಂದ ಎಸಿ ಬಸ್ ಸಂಚಾರ ಆರಂಭ

    ಹುಬ್ಬಳ್ಳಿ: ಲಾಕ್‍ಡೌನ್ ಪರಿಣಾಮ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದ ಎಸಿ ಬಸ್‍ಗಳ ಸಂಚಾರವನ್ನು ಸರ್ಕಾರದ ಅನುಮತಿ ಮೇರೆಗೆ ಸೋಮವಾರದಿಂದ ಪುನರಾರಂಭಿಸಲಾಗುತ್ತಿದೆ.

    ಮೊದಲ ಹಂತದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಮೈಸೂರಿನ ನಡುವೆ ಎಸಿ ಸ್ಲೀಪರ್ ಮತ್ತು ವೋಲ್ವೋ ಬಸ್‍ಗಳ ಸಂಚಾರ ಆರಂಭಿಸಲಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.

    ಬಸ್ ಹೊರಡುವ ಸಮಯದ ವಿವರ:
    ಹುಬ್ಬಳ್ಳಿಯಿಂದ ಬೆಂಗಳೂರಿಗೆ ವೋಲ್ವೊ ಬಸ್ ಮಧ್ಯಾಹ್ನ 3 ಗಂಟೆಗೆ ಮತ್ತು ರಾತ್ರಿ 10.30ಕ್ಕೆ ಹೊರಡುತ್ತದೆ. ಎಸಿ ಸ್ಲೀಪರ್ ಬಸ್ ರಾತ್ರಿ 10.40ಕ್ಕೆ ಹೊರಡುತ್ತದೆ. ಹುಬ್ಬಳ್ಳಿಯಿಂದ ಮೈಸೂರಿಗೆ ಎಸಿ ಸ್ಲೀಪರ್ ರಾತ್ರಿ 9.45ಕ್ಕೆ ಹೊರಡುತ್ತದೆ.

    ಎಸಿ ಬಸ್ ಗಳಲ್ಲದೆ, ಈಗಾಗಲೇ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸಂಚರಿಸುತ್ತಿರುವ ನಾನ್ ಎಸಿ ಸ್ಲೀಪರ್ ಮತ್ತು ರಾಜಹಂಸ ಬಸ್‍ಗಳು ಎಂದಿನಂತೆ ಸಂಚರಿಸಲಿವೆ. ನಾನ್ ಎಸಿ ಸ್ಲೀಪರ್: ರಾತ್ರಿ 8.30, 9 ಹಾಗೂ 10 ಗಂಟೆ ರಾಜಹಂಸ ಸಂಜೆ 7.30 ಗಂಟೆ ಹೊರಡಲಿದೆ.

    ಮಾರ್ಗಸೂಚಿಗಳ ಪ್ರಕಾರ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಬಸ್‍ಗಳನ್ನು ರಸ್ತೆಗಿಳಿಸಲಾಗುತ್ತದೆ. ಬಸ್ ಒಳಗಡೆ ನಿಗದಿತ ತಾಪಮಾನವನ್ನು ನಿರ್ವಹಣೆ ಮಾಡಲಾಗುತ್ತದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ಲೀಪರ್ ಬಸ್ಸಿನಲ್ಲಿ 20 ಹಾಗೂ ವೋಲ್ವೋ ಬಸ್ಸಿನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಸುರಕ್ಷತೆಯ ದೃಷ್ಟಿಯಿಂದ ಬಸ್ಸಿನಲ್ಲಿ ಪ್ರಯಾಣಿಕರಿಗೆ ಬ್ಲಾಂಕೆಟ್ ಗಳನ್ನು ನೀಡುವುದಿಲ್ಲ. ಮಾರ್ಗ ಮಧ್ಯದಲ್ಲಿ ಊಟೋಪಚಾರಕ್ಕಾಗಿ ನಿಲುಗಡೆ ಇರುವುದಿಲ್ಲ. ಆದ್ದರಿಂದ ಪ್ರಯಾಣಿಕರು ಊಟ, ತಿಂಡಿ ಮತ್ತು ನೀರನ್ನು ಮನೆಯಿಂದಲೇ ತರಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ವಿವರಿಸಿದ್ದಾರೆ.

  • ಸೋಮವಾರದಿಂದ ರಸ್ತೆಗಿಳಿಯಲಿವೆ ವೋಲ್ವೋ ಬಸ್‍ಗಳು- ಎಲ್ಲಿಂದ ಎಲ್ಲಿಗೆ ಸಂಚಾರ?

    ಸೋಮವಾರದಿಂದ ರಸ್ತೆಗಿಳಿಯಲಿವೆ ವೋಲ್ವೋ ಬಸ್‍ಗಳು- ಎಲ್ಲಿಂದ ಎಲ್ಲಿಗೆ ಸಂಚಾರ?

    ಬೆಂಗಳೂರು: ಸೋಮವಾರದಿಂದ ವೋಲ್ವೋ ಬಸ್‍ಗಳು ರಸ್ತೆಗಿಳಿಯಲಿದ್ದು, 8 ಮಾರ್ಗಗಳಲ್ಲಿ ಸಂಚಾರ ಮಾಡಲಿವೆ.

    ವೋಲ್ವೋ ಬಸ್‍ಗಳ ಸಂಚಾರಕ್ಕೆ ರಾಜ್ಯ ಸರ್ಕಾರದಿಂದ ಶುಕ್ರವಾರವೇ ಅನುಮತಿ ಸಿಕ್ಕಿತ್ತು. ಆದರೆ ಎಲ್ಲಿ ಎಸಿ ಬಸ್‍ಗಳನ್ನ ಓಡಿಸಬೇಕು ಎನ್ನುವ ಬಗ್ಗೆ ಬಿಎಂಟಿಸಿಯಿಂದ ಚಿಂತನೆ ನಡೆದಿತ್ತು. ಸದ್ಯ ಸಾರಿಗೆ ಇಲಾಖೆಯ ಮಾರ್ಗದರ್ಶನದ ಪ್ರಕಾರ ವಿಮಾನ ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ ಬಸ್‍ಗಳು ಸಂಚರಿಸಲಿದ್ದು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಸಿಬ್ಬಂದಿಯ ಸಂಚಾರಕ್ಕೆ ಅನುಕೂಲವಾಗಲಿದೆ.

    ಸುಮಾರು 800ಕ್ಕೂ ಹೆಚ್ಚು ಎಸಿ, ವೋಲ್ವೋ ಬಸ್‍ಗಳು ಲಾಕ್‍ಡೌನ್ ಆದಾಗಿನಿಂದ ನಿಂತಲ್ಲೇ ನಿಂತಿದ್ದವು. ಈ ಪೈಕಿ ಮೊದಲಿಗೆ 75 ಬಸ್‍ಗಳನ್ನು ರಸ್ತೆಗಿಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.

    ಎಲ್ಲಿಂದ ಎಲ್ಲಿಗೆ ಸಂಚಾರ?
    ಮೆಜೆಸ್ಟಿಕ್ – ಹೊಸಕೋಟೆ
    ಮೆಜೆಸ್ಟಿಕ್ – ಕಾಡುಗೋಡಿ
    ಮೆಜೆಸ್ಟಿಕ್ – ಸರ್ಜಾಪುರ
    ಮೆಜೆಸ್ಟಿಕ್ – ಅತ್ತಿಬೆಲೆ
    ಹೆಬ್ಬಾಳ – ಬನಶಂಕರಿ
    ಹೆಬ್ಬಾಳ – ಸಿಲ್ಕ್ ಬೋರ್ಡ್
    ಬನಶಂಖರಿ – ಐಟಿಪಿಎಲ್
    ಎಲೆಕ್ಟ್ರಾನಿಕ್ ಸಿಟಿ – ಐಟಿಪಿಎಲ್

  • ವಿಡಿಯೋ: ಚಲಿಸುತ್ತಿದ್ದ ಬಸ್‍ನಲ್ಲಿ ಅಗ್ನಿ ಅವಘಡ- ಮೂವರು ಸಜೀವ ದಹನ

    ವಿಡಿಯೋ: ಚಲಿಸುತ್ತಿದ್ದ ಬಸ್‍ನಲ್ಲಿ ಅಗ್ನಿ ಅವಘಡ- ಮೂವರು ಸಜೀವ ದಹನ

    ಚಂಡೀಗಢ: ಚಲಿಸುತ್ತಿದ್ದ ಎಸಿ ಬಸ್‍ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಸಜೀವವಾಗಿ ದಹನವಾದ ಮನಕಲಕುವ ಘಟನೆ ಪಂಜಾಬ್‍ನ ಬಾಥಿಂಡಾದ 35 ಕಿ.ಮೀ ದೂರದ ರಾಂಪುರ್ ಪುಲ್‍ನಲ್ಲಿ ಶನಿವಾರ ಸಂಜೆ ನಡೆದಿದೆ.

    ರೈಯಾ ಸಾರಿಗೆ ಕಂಪೆನಿ(ಆರ್‍ಟಿಸಿ) ಎಂಬ ಖಾಸಗಿ ಕಂಪೆನಿಗೆ ಸೇರಿದ ಬಸ್ ಇದಾಗಿದ್ದು, ಬಾಥಿಂಡಾದಿಂದ ಲೂದಿಯಾನದ ಕಡೆ ಚಲಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ 23 ಮಂದಿಗೆ ಗಾಯಗಳಾಗಿವೆ.

    ಮೊದಲು ಬಸ್ ನ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಪ್ರಯಾಣಿಕರು ಬಸ್ ನಿಂದ ಹೊರಗಿಳಿದಿದ್ದಾರೆ. ಆದ್ರೆ ಈ ವೇಳೆಗಾಗಲೇ ಬೆಂಕಿ ಬಸ್ಸನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದು, ಮೂವರು ಸಜೀವ ದಹನವಾಗಿದ್ದಾರೆ. ಮೃತರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಕೂಡಲೇ ಮಾಹಿತಿ ತಿಳಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದು, ಸುಮಾರು ಎರಡು ಗಂಡೆಗಳ ಕಾಲ ಬೆಂಕಿ ನಂದಿಸಲು ಹರಸಾಹಸಪಟ್ಟರು.

    ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಬಸ್ ನಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು ಹಾಗೂ ಬಸ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನೆಂದು ನಿಖರವಾಗಿ ತಿಳಿದುಬಂದಿಲ್ಲ. ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಚಾಲಕ ಬಸ್ ನಿಂದ ಹಾರಿದ್ದು, ಸ್ಥಳದಲ್ಲೇ ಸಾವನಪ್ಪಿದ್ದಾರೆ.

    ಬಸ್ ಚಲಿಸುತ್ತಿದ್ದಂತೆಯೇ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರವೂ 300 ಮೀಟರ್ ವರೆಗೆ ಬಸ್ ಚಲಿಸುತ್ತಲೇ ಇತ್ತು ಅಂತಾ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.