Tag: ac

  • ಎಸಿ ಬಳಕೆಗೆ ಹೊಸ ನಿಯಮ – ದೇಶಕ್ಕೆ 18,000 ಕೋಟಿ ಉಳಿತಾಯ

    ಎಸಿ ಬಳಕೆಗೆ ಹೊಸ ನಿಯಮ – ದೇಶಕ್ಕೆ 18,000 ಕೋಟಿ ಉಳಿತಾಯ

    ನವದೆಹಲಿ: ದೇಶದಲ್ಲಿ ಏರ್ ಕಂಡೀಷನ್ (Air-Conditioners) ಯಂತ್ರಗಳಿಗೆ ಹೊಸ ನಿಯಮವನ್ನು ಜಾರಿ ಮಾಡಲು ಕೇಂದ್ರ ಸರ್ಕಾರ (Union Government) ಮುಂದಾಗಿದೆ.

    ಇನ್ನು ಮುಂದೆ ಹೊಸ ಹವಾನಿಯಂತ್ರಣ ಯಂತ್ರಗಳ (AC) ಕನಿಷ್ಠ ತಾಪಮಾನ 16 ಅಥವಾ 18 ಡಿಗ್ರಿಗಳ ಬದಲಿಗೆ 20 ಡಿಗ್ರಿ ಸೆಲ್ಸಿಯಸ್ ಮತ್ತು ಪ್ರಸ್ತುತ ಗರಿಷ್ಠ ಇರುವ 30 ಡಿಗ್ರಿಗಳ ಬದಲಿಗೆ ಗರಿಷ್ಠ 28 ಡಿಗ್ರಿಯೊಂದಿಗೆ ಬರಲಿದೆ.

    ಈ ಆದೇಶ ಜಾರಿಗೆ ಬಂದ ನಂತರ ಮೂರು ವರ್ಷಗಳಲ್ಲಿ 18,000-20,000 ಕೋಟಿ ರೂ. ಉಳಿತಾಯವಾಗಬಹುದು ಎಂದು ಅಂದಾಜಿಸಲಾಗಿದೆ.

    ಪ್ರಸ್ತುತ ಎಸಿ ಕನಿಷ್ಠ ತಾಪಮಾನವು 18°C ​​(ಕೆಲವು ಸಂದರ್ಭಗಳಲ್ಲಿ 16°C) ವರೆಗೆ ಹೋದರೆ ಗರಿಷ್ಠ 30°C ವರೆಗೆ ಏರಿಸಬಹುದಾಗಿದೆ. ಸರ್ಕಾರದ ಈ ಆದೇಶ ಜಾರಿಯಾದರೆ ಎಸಿ ತಾಪಮಾನ 20°C – 28°C ಗೆ ನಿರ್ಬಂಧಿಸುತ್ತದೆ. ಇದರರ್ಥ ಬಳಕೆದಾರರು ತಮ್ಮ ಎಸಿ ತಾಪಮಾನವನ್ನು 20°C ಗಿಂತ ಕಡಿಮೆ ಮತ್ತು 30°C ಗಿಂತ ಹೆಚ್ಚು ಹೊಂದಿಸಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ: ಶೀಘ್ರದಲ್ಲೇ ಜಾರಿಗೆ ಬರಲಿದೆ ಕಿಲೋಮೀಟರ್ ಆಧಾರಿತ ಹೊಸ ಟೋಲ್ ತೆರಿಗೆ ನೀತಿ

    ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್‌ ಮಾತನಾಡಿ, ಇದೊಂದು ವಿಶಿಷ್ಟ ಪ್ರಯೋಗವಾಗಿದ್ದು, ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಮತ್ತು ವಿದ್ಯುತ್ ಬಿಲ್‌ಗಳಲ್ಲಿನ ಏರಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

    ಈ ನಿಯಮ ಜಾರಿಯಾದ ನಂತರ ಗೃಹಬಳಕೆಯಿಂದ ಹಿಡಿದು ವಾಣಿಜ್ಯ ಸಂಸ್ಥೆಗಳಾದ ಕಚೇರಿ ಬ್ಲಾಕ್‌ಗಳು, ಮಾಲ್‌, ಹೋಟೆಲ್‌ ಮತ್ತು ಚಲನಚಿತ್ರ ಮಂದಿರಗಳ ಸೇರಿದಂತೆ ವಿವಿಧ ವಲಯಗಳಲ್ಲಿ ಬಳಸುವ ಎಸಿಗಳಿಗೆ ಅನ್ವಯವಾಗುತ್ತದೆ.

    ಈಗಾಗಲೇ ಈ ಪ್ರಯೋಗ ಇಟಲಿ ಮತ್ತು ಜಪಾನ್‌ನಲ್ಲಿ ಜಾರಿಯಾಗಿದೆ. ರೋಮ್ ಸಾರ್ವಜನಿಕ ಕಟ್ಟಡಗಳಿಗೆ ಕನಿಷ್ಠ ತಾಪಮಾನವನ್ನು 23 ಡಿಗ್ರಿ ಸೆಲ್ಸಿಯಸ್‌ಗೆ ನಿಗದಿಪಡಿಸಿದರೆ, ಜಪಾನ್ 27 ಡಿಗ್ರಿ ಸೆಲ್ಸಿಯಸ್‌ ಫಿಕ್ಸ್‌ ಮಾಡಲಾಗಿದೆ.

    ಪ್ರತಿ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಳವು ವಿದ್ಯುತ್ ಬಳಕೆಯನ್ನು 6% ರಷ್ಟು ಕಡಿಮೆ ಮಾಡುತ್ತದೆ. 6 ಕೋಟಿ ನಗರ ಮನೆಗಳು ಮತ್ತು 12 ಲಕ್ಷ ವಾಣಿಜ್ಯ ಸಂಸ್ಥೆಗಳು ತಮ್ಮ ಎಸಿ ಸೆಟ್ಟಿಂಗ್ ಅನ್ನು 22 ರಿಂದ 24 ಡಿಗ್ರಿ ಸೆಲ್ಸಿಯಸ್ ನಡುವೆ ಇಟ್ಟುಕೊಂಡರೆ ವಾರ್ಷಿಕವಾಗಿ 12-15 ಬಿಲಿಯನ್ ಯೂನಿಟ್ ವಿದ್ಯುತ್ ಉಳಿಸುತ್ತದೆ ಮತ್ತು 4-5 ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ಅಗತ್ಯವನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲದೇ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

  • ರಾತ್ರಿಯಿಡೀ ಎಸಿ ಆನ್ ಮಾಡಿ ಮಲಗಿದ ವೈದ್ಯ – ಎರಡು ನವಜಾತ ಶಿಶುಗಳು ಸಾವು

    ರಾತ್ರಿಯಿಡೀ ಎಸಿ ಆನ್ ಮಾಡಿ ಮಲಗಿದ ವೈದ್ಯ – ಎರಡು ನವಜಾತ ಶಿಶುಗಳು ಸಾವು

    ಲಕ್ನೋ: ಖಾಸಗಿ ಕ್ಲಿನಿಕ್‌ನಲ್ಲಿ (Clinic) ವೈದ್ಯ ಹವಾನಿಯಂತ್ರಣವನ್ನು (AC) ರಾತ್ರಿಯಿಡೀ ಆನ್ ಮಾಡಿ ಮಲಗಿದ ಪರಿಣಾಮ ಎರಡು ನವಜಾತ ಶಿಶುಗಳು (Newborn Baby) ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ (Uttar Pradesh) ಶಾಮ್ಲಿ (Shamli) ಜಿಲ್ಲೆಯಲ್ಲಿ ನಡೆದಿದೆ.

    ಕ್ಲಿನಿಕ್‌ನ ಮಾಲೀಕ ಡಾಕ್ಟರ್ (Doctor) ನೀತು, ಚೆನ್ನಾಗಿ ನಿದ್ದೆ ಮಾಡುವ ಸಲುವಾಗಿ ಹವಾನಿಯಂತ್ರಣ (ಎಸಿ) ಆನ್ ಮಾಡಿದ್ದಾನೆ. ತಂಪು ವಾತಾವರಣದಿಂದಾಗಿ ಎರಡು ನವಜಾತ ಶಿಶುಗಳು ಮೃತಪಟ್ಟಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಚಿನ್ನದಂಗಡಿ ಗೋಡೆ ಒಡೆದು 25 ಕೋಟಿ ರೂ. ಮೌಲ್ಯದ ಆಭರಣ ದರೋಡೆ

    ನವಜಾತ ಶಿಶುಗಳು ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಜನಿಸಿದ್ದು, ಅದೇ ದಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಕ್ಕಳನ್ನು ಚಿಕಿತ್ಸೆಗೆಂದು ಫೋಟೋಥೆರಪಿ ಘಟಕದಲ್ಲಿ ಇರಿಸಲಾಗಿತ್ತು. ಈ ವೇಳೆ ವೈದ್ಯ ಮಲಗಲೆಂದು ಎಸಿ ಆನ್ ಮಾಡಿದ್ದು, ಮರುದಿನ ಬೆಳಗ್ಗೆ ಕುಟುಂಬಸ್ಥರು ಮಕ್ಕಳನ್ನು ನೋಡಲೆಂದು ಹೋದಾಗ ಎರಡೂ ಶಿಶುಗಳು ಶವವಾಗಿ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 5ನೇ ತರಗತಿ ವಿದ್ಯಾರ್ಥಿನಿಗೆ ಮುಖ್ಯ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ಆರೋಪ

    ಘಟನೆಗೆ ಸಂಬಂಧಿಸಿದಂತೆ ಮೃತ ಶಿಶುಗಳ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದು, ವೈದ್ಯನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ವೈದ್ಯನ ವಿರುದ್ಧ ಐಪಿಸಿ ಸೆಕ್ಷನ್ 304 ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಎಸ್‌ಹೆಚ್‌ಒ ನೇತ್ರಪಾಲ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ತಾಯಿಯ ಕುತ್ತಿಗೆಗೆ 30 ಬಾರಿ ಚುಚ್ಚಿ, ಕಬ್ಬಿಣದ ಬಾಣಲೆಯಲ್ಲಿ ಹೊಡೆದು ಕೊಂದ ಪಾಪಿ ಮಗಳು!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿದ್ಯಾರ್ಥಿಗಳಿಗೆ ABCD ಕಲಿಸದ ಶಿಕ್ಷಕಿ – ಸರ್ಕಾರಿ ಶಾಲೆಯ ಪರಿಸ್ಥಿತಿ ಕಂಡು ಎಸಿ ಶಾಕ್

    ವಿದ್ಯಾರ್ಥಿಗಳಿಗೆ ABCD ಕಲಿಸದ ಶಿಕ್ಷಕಿ – ಸರ್ಕಾರಿ ಶಾಲೆಯ ಪರಿಸ್ಥಿತಿ ಕಂಡು ಎಸಿ ಶಾಕ್

    ರಾಯಚೂರು: ತಾಲೂಕಿನ ಲಿಂಗನಖಾನದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ (Government School) ದಿಢೀರ್ ಭೇಟಿ ನೀಡಿದ ರಾಯಚೂರು ಉಪವಿಭಾಗದ ಸಹಾಯಕ ಆಯುಕ್ತ (Assistant Commissioner) ರಜನಿಕಾಂತ್ ಚವ್ಹಾಣ್ ಅಲ್ಲಿನ ಪರಿಸ್ಥಿತಿ ಕಂಡು ಶಾಕ್ ಆಗಿದ್ದಾರೆ.

    ಎರಡನೇ ತರಗತಿ ಮಕ್ಕಳಿಗೆ ಇಂಗ್ಲಿಷ್ (English) ವರ್ಣಮಾಲೆ ಪರಿಚಯವೇ ಇಲ್ಲದ್ದನ್ನು ತಿಳಿದು ದಿಢೀರ್ ಭೇಟಿ ವೇಳೆ ಎಸಿ ಗರಂ ಆಗಿದ್ದಾರೆ. ಮಕ್ಕಳಿಗೆ ಎಬಿಸಿಡಿ ಓದಲು ಬರುವುದಿಲ್ಲ ಏನ್ ಕಲಿಸುತ್ತಿದ್ದಿರಿ ಎಂದು ಶಿಕ್ಷಕಿ (Teacher) ಹಾಗೂ ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಸ್ಯೆಗಳನ್ನೇ ಹೇಳುತ್ತಿರುವುದನ್ನು ಬಿಟ್ಟು ಮಕ್ಕಳಿಗೆ ಕಲಿಸುವ ಕಡೆಯೂ ಗಮನಹರಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾವನ್ನಪ್ಪುವ ಮೊದಲು ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ತೆರಳಿದ್ದ ಮೇಸ್ತಾ – ಸಿಬಿಐ ವರದಿಯಲ್ಲಿ ಬಯಲು

    ಕೋವಿಡ್ (Covid-19) ಕಾರಣಕ್ಕೆ ಎರಡು ವರ್ಷದಿಂದ ಮಕ್ಕಳು ಓದಿನಲ್ಲಿ ಹಿಂದೆ ಬಿದ್ದಿದ್ದಾರೆ ಅನ್ನೋ ಶಿಕ್ಷಕಿಯ ಸಮಜಾಯಿಷಿಗೆ ಅಧಿಕಾರಿ ಗರಂ ಆದರು. ನಾನೇ ಶಿಕ್ಷಕನಾಗಿ ಬರಲೇ ಎರಡೇ ದಿನದಲ್ಲಿ ಎಬಿಸಿಡಿ ಕಲಿಸುತ್ತೇನೆ. ಒಂದು ವಾರದೊಳಗೆ ಮಕ್ಕಳಿಗೆ ಎಬಿಸಿಡಿ ಕಲಿಸಬೇಕು. ಮಕ್ಕಳು ಪಟಪಟನೆ ಎಬಿಸಿಡಿ ಹೇಳುವುದನ್ನು ವೀಡಿಯೋ ಮಾಡಿ ಕಳುಹಿಸಿ ಎಂದು ತಾಕೀತು ಮಾಡಿದರು. ಶಾಲೆಯ ಶಿಕ್ಷಕರ ಕೊರತೆ ಬಗ್ಗೆ ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರೆಮಾಡಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳುವಂತೆ ಎಸಿ ಸೂಚಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರೈನೇಜ್ ಬ್ಲಾಕ್ ದಂಧೆ – ಹಣಕ್ಕಾಗಿ ಮಿಡ್‌ನೈಟ್‌ ಆಪರೇಷನ್‌

    Live Tv
    [brid partner=56869869 player=32851 video=960834 autoplay=true]

  • ಎಸಿ ಸ್ಫೋಟ – ಓರ್ವ ಸಾವು, ಐವರಿಗೆ ಗಾಯ

    ಎಸಿ ಸ್ಫೋಟ – ಓರ್ವ ಸಾವು, ಐವರಿಗೆ ಗಾಯ

    ನವದೆಹಲಿ: ಹವಾನಿಯಂತ್ರಣ(ಎಸಿ)ದ ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ಆಗ್ನೇಯ ದೆಹಲಿಯ ಜಾಮಿಯಾ ನಗರದಲ್ಲಿನ ಉಪಾಹಾರ ಗೃಹವೊಂದರಲ್ಲಿ ನಡೆದಿದೆ.

    ಎರಡು ಅಂತಸ್ತಿನ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಉಪಾಹಾರ ಗೃಹದಲ್ಲಿ ಎಸಿಯನ್ನು ಸರಿಪಡಿಸಲು ನದೀಮ್ ಮತ್ತು ಶಾನ್ ಅವರನ್ನು ಕರೆಸಲಾಗಿತ್ತು. ಈ ವೇಳೆ ಎಸಿ ಸ್ಫೋಟಗೊಂಡಿದ್ದು, ನದೀಮ್ ಅವರ ತಲೆ ಮತ್ತು ಎದೆಯ ಮೇಲೆ ತೀವ್ರವಾಗಿ ಗಾಯವಾಗಿ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ರಷ್ಯಾದಿಂದ ಬಂತು ಎಸ್ 400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ

    ಉಳಿದಂತೆ ಶಾನ್, ಡ್ಯಾನಿಶ್, ಅಜ್ಜು, ಬಿಜಯ್ ಮತ್ತು ಇಕ್ರಾ ಅವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ಗಂಟೆಗಳ ಬಳಿಕ ಇಕ್ರಾ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    POLICE JEEP

    ಘಟನೆ ಕುರಿತಂಯತೆ ಪ್ರಾಥಮಿಕ ತನಿಖೆ ವೇಳೆ ಮೊದಲಿಗೆ ಅಗ್ನಿಶಾಮಕ ದಳ ಇಲಾಖೆ ಉಪಾಹಾರ ಗೃಹದಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ 13 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದರು. ಆದರೆ ನಂತರ ಎಸಿ ಕಂಪ್ರೆಸರ್ ಆಗಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರಿಗೆ ತಿಳಿದುಬಂದಿದೆ. ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?

  • AC ವಿಷಾನಿಲ ಸೋರಿಕೆ, ಬೆಂಕಿ ಅವಘಡ – ನಾಲ್ವರು ಸಜೀವ ದಹನ

    AC ವಿಷಾನಿಲ ಸೋರಿಕೆ, ಬೆಂಕಿ ಅವಘಡ – ನಾಲ್ವರು ಸಜೀವ ದಹನ

    ವಿಜಯನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಎಸಿಯ ವಿಷಾನಿಲ ಸೋರಿಕೆಯಾಗಿದ್ದು, ನಾಲ್ಕು ಜನ ಮಲಗಿದ್ದಲ್ಲೇ ಮೃತಪಟ್ಟಿರುವ ಘಟನೆ ವಿಜಯನಗರದ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯ ರಾಘವೇಂದ್ರ ಶೆಟ್ಟಿ ಎಂಬುವವರ ಮನೆಯಲ್ಲಿ ತಡರಾತ್ರಿ ಸಂಭವಿಸಿದೆ.

    ರಾಘವೇಂದ್ರ ಶೆಟ್ಟಿ ಎಂಬವರ ಮನೆಯಲ್ಲಿ ಅವಘಡ ಸಂಭವಿಸಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಸಿಯ ವಿಷಾನಿಲ ಸೋರಿಕೆಯಾಗಿದ್ದು, ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಈ ಅವಘಡದಲ್ಲಿ ವೆಂಕಟ್ ಪ್ರಶಾಂತ್ (42), ಪತ್ನಿ ಡಿ.ಚಂದ್ರಕಲಾ (38), ಮಕ್ಕಳಾದ ಎಚ್.ಎ.ಅದ್ವಿಕ್(16), ಪ್ರೇರಣಾ,(8) ಹೊರಬರಲಾಗದೇ ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: 2 ಕೋಟಿ ದರೋಡೆ ಕೇಸ್ – ಪತ್ನಿ ಸಾಲ ತೀರಿಸಲು ಕನ್ನ ಹಾಕಿದ ಇಬ್ಬರು ಪತ್ನಿಯರ ಮುದ್ದಿನ ಗಂಡ

    Ac

    ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಸಿಯಲ್ಲಿ ಸೋರಿಕೆಯೊಗಿ ಸ್ಫೋಟ ಸಂಭವಿಸಿದೆ. ತಡರಾತ್ರಿ ಹೊತ್ತು ನಿದ್ದೆ ಮಾಡುತ್ತಿದ್ದ ವೇಳೆ ಎಸಿ ಸ್ಫೋಟಗೊಂಡು ಬೆಂಕಿ ಧಗಧಗನೆ ಹೊತ್ತಿ ಉರಿದು ಇಡೀ ಮನೆ ಆವರಿಸಿದ್ದರಿಂದ ದಂಪತಿ ಮತ್ತು ಮಕ್ಕಳು ಹೊರಬರಲಾಗದೆ ಸಜೀವ ದಹನಗೊಂಡಿದ್ದಾರೆ.

    ಇಷ್ಟಾದರು ಅಗ್ನಿಯ ರೌದ್ರಾವತಾರ ಮತ್ತೆ ಮುಂದುವರಿದಿದ್ದು, ಎಸಿಯ ವೈರ್ ಮತ್ತು ಮನೆಯ ವೈರಿಂಗ್ ಮೂಲಕ ಮತ್ತೊಮ್ಮೆ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಇದನ್ನೂ ಓದಿ: ಮದ್ಯದ ಬಾಟಲಿಯಿಂದ ಸಿಕ್ಕಿ ಬಿದ್ರು 2 ಕೋಟಿ ಕದ್ದ ಖದೀಮರು

    ಈ ಸಂಬಂಧ ಮರಿಯಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಕುಟುಂಬದಲ್ಲಿ ಸ್ವಲ್ಪ ವೈಮನಸ್ಸು, ವಿವಾದಗಳಿದ್ದು ತೆಗೆದುಕೊಂಡ ಸಾಲ ಮರುಪಾವತಿ ಮಾಡಿರಲಿಲ್ಲ, ಆ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    AC 03

    ಜೀವ ಉಳಿಸುತ್ತಿತ್ತು ಫೋನ್ ಕಾಲ್: ಘಟನೆ ಸಂಬಂಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರಾಘವೇಂದ್ರ ಶೆಟ್ಟಿ, ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ನಾವು ಕೆಳ ಮನೆಯಲ್ಲಿ ಮಲಗಿದ್ದು, ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳು ಮಹಡಿಯಲ್ಲಿ ಮಲಗಿದ್ದರು. ಈ ವೇಳೆ ಬೆಂಕಿ ಕಾಣಿಸಿಕೊಂಡಾಗ, ನಾನು ಫೋನ್‌ಕಾಲ್ ಮಾಡಿ ಮಗನನ್ನು ಎಬ್ಬಿಸಲು ಪ್ರಯತ್ನಿಸಿದೆ. ಆದರೆ ಮಗ ಫೋನ್ ತೆಗೆಯಲೇ ಇಲ್ಲ. ನಾವು ಹೊರಬಂದು ಬಿಟ್ಟೆವು. ಮಹಡಿ ಮೇಲಿನ ರೂಂ ಒಳಗಡೆಯಿಂದ ಲಾಕ್ ಆಗಿದ್ದರಿಂದ ಅವರು ಗಾಬರಿಯಿಂದ ಹೊರ ಬರಲು ಆಗಲಿಲ್ಲ. ಇದರಿಂದಾಗಿ ಅವಘಡ ಸಂಭವಿಸಿದ್ದು, ಈಗ ಮನೆಯಲ್ಲಿ ನೀರವ ಮೌನ ತುಂಬಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ನಡುಬೀದಿಯಲ್ಲೇ 25 ವರ್ಷದ ಮಗನಿಗೆ ಬೆಂಕಿ ಹಚ್ಚಿದ ತಂದೆ: ಸಾವು-ಬದುಕಿನ ನಡ್ವೆ ಹೋರಾಡ್ತಿದ್ದಾಗ ಅರ್ಪಿತ್ ಹೇಳಿದ್ದೇನು..?

    ರಾಘವೇಂದ್ರ ಅವರಿಗೆ ಮತ್ತೆ ಶಾಕ್: ಘಟನೆಯಲ್ಲಿ ಈಗಾಗಲೇ ಮಗ ಸೊಸೆ, ಮೊಮ್ಮಕ್ಕಳನ್ನು ಕಳೆದುಕೊಂಡಿರುವ ರಾಘವೇಂದ್ರ ಶೆಟ್ಟಿ ಅವರಿಗೆ ಘಟನೆ ಮಾಸುವ ಮುನ್ನವೇ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯಲ್ಲಿ ಕಾಣಿಸಿಕೊಂಡ ದಟ್ಟ ಹೊಗೆಯನ್ನು ಗಮನಿಸಿ ಸ್ಥಳೀಯರೇ ಬೆಂಕಿ ನಂದಿಸಿದ್ದಾರೆ.

  • ರಾತ್ರಿ ಎಸಿ ಹಾಕೊಂಡು ಮಲಗಿದ್ದ ದಂಪತಿ ಸಾವು

    ರಾತ್ರಿ ಎಸಿ ಹಾಕೊಂಡು ಮಲಗಿದ್ದ ದಂಪತಿ ಸಾವು

    – ಕಿಟಿಕಿಯ ಕಬ್ಬಿಣದ ಗ್ರಿಲ್ ಕತ್ತರಿಸಿ ಒಳಗೆ ಎಂಟ್ರಿ

    ಲಕ್ನೋ: ಸೆಕೆ ಎಂದು ದಂಪತಿ ಬೆಡ್‍ರೂಮಿನಲ್ಲಿ ಎಸಿ ಹಾಕಿಕೊಂಡು ಮಲಗಿದ್ದರು. ಆದರೆ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ  ಉಸಿರುಗಟ್ಟಿ ದಂಪತಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಅಜಯ್ ಮಿಶ್ರಾ (48) ಮತ್ತು ಪತ್ನಿ ನಿಶಾ ಮಿಶ್ರಾ (45) ಮೃತ ದಂಪತಿ. ಇವರು ತುಂಡ್ಲಾದಲ್ಲಿರುವ ಮೊಹಲ್ಲಾ ಭಗವಾನ್ ಆಶ್ರಮ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಈ ದಂಪತಿ ಬೆಡ್‍ರೂಮಿನಲ್ಲಿ ರಾತ್ರಿ ಮಲಗುವಾಗ ಎಸಿ ಆನ್ ಮಾಡಿಕೊಂಡು ಮಲಗಿದ್ದಾರೆ. ಆದರೆ ದಂಪತಿ ನಿದ್ದೆ ಮಾಡುತ್ತಿದ್ದಾಗ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್‍ ಆಗಿದೆ. ಇದರಿಂದ ದಂಪತಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶುಕ್ರವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಜೊತೆ ಬಂದಿದ್ದಾರೆ.

    ಬಾಗಿಲು ಲಾಕ್ ಆಗಿದ್ದರಿಂದ ದಂಪತಿ ವಾಸವಿದ್ದ ಮನೆಯ ಕಿಟಿಕಿಗೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್ ಕತ್ತರಿಸಿ ಒಳಗೆ ಹೋಗಿ ದಂಪತಿಯ ಮೃತದೇಹವನ್ನು ಹೊರ ತೆಗೆದುಕೊಂಡು ಬಂದಿದ್ದಾರೆ. ಸದ್ಯಕ್ಕೆ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

  • ರಜೆ ಬೇಕಾ? ಮನೆಗೆ ಎಸಿ ಹಾಕ್ಸು: ತಹಶೀಲ್ದಾರ್ ಡಿಮ್ಯಾಂಡ್

    ರಜೆ ಬೇಕಾ? ಮನೆಗೆ ಎಸಿ ಹಾಕ್ಸು: ತಹಶೀಲ್ದಾರ್ ಡಿಮ್ಯಾಂಡ್

    ಚಿಕ್ಕಬಳ್ಳಾಪುರ: ತಹಶೀಲ್ದಾರ್ ದ್ವಿತೀಯ ದರ್ಜೆಯ ಸಹಾಯಕನಿಗೆ ಕರೆ ಮಾಡಿ ಮನೆಗೆ ಎಸಿ ಹಾಕಿಸಿಕೊಡು ಎಂದು ಡಿಮ್ಯಾಂಡ್ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.

    ಗೌರಿಬಿದನೂರು ತಹಶೀಲ್ದಾರ್ ರಾಜಣ್ಣ, ದ್ವೀತಿಯ ದರ್ಜೆ ಸಹಾಯಕ ಮಹಮದ್ ಹಸನ್ ಮುಲ್ಲಾ ಅವರಿಗೆ ಕರೆ ಮಾಡಿದ್ದು, ಮನೆಗೆ ಎಸಿ ವ್ಯವಸ್ಥೆ ಮಾಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.

    ಮಾರ್ಚ್ 23ರಂದು ಕರೆ ಮಾಡಿ, ಏನು ಕೆಲಸ ಮಾಡದೆ ನಿನಗೆ ಸಂಬಳ ಮಾಡಿಕೊಟ್ಟಿದ್ದೇನೆ. ಹಾಗಾಗಿ ನೀನು ನನ್ನ ಮನೆಗೆ ಎಸಿ ಹಾಕಿಸಿಕೊಡುವಂತೆ ಏರು ಧ್ವನಿಯಲ್ಲಿ ಡಿಮ್ಯಾಂಡ್ ಮಾಡಲಾಗಿದೆ. ತಹಶೀಲ್ದಾರ್ ಅಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಷ್ಟಕ್ಕೇ ಸುಮ್ಮನಾಗದೆ ಮನೆಗೆ ಎಸಿ ಹಾಕಿಸಿಕೊಡಲಿಲ್ಲ ಎಂದು ಮಹಮದ್ ಹಸನ್ ಮುಲ್ಲಾಗೆ ತಹಶೀಲ್ದಾರ್ ರಾಜಣ್ಣ ನೋಟಿಸ್ ನೀಡಿದ್ದಾರೆ. ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂದು ಆರೋಪಿಸಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

    ಆಡಿಯೋದಲ್ಲಿ ಮಾತನಾಡಿರುವ ರಾಜಣ್ಣ, ನಾನು ಹೊಸದಾಗಿ ಮನೆ ಮಾಡಿದ್ದೇನೆ. ಈ ಬಿಸಿಲಲ್ಲಿ ಮನೆಯಲ್ಲಿ ಮಲ್ಕೊಳಕ್ಕೆ ಆಗುತ್ತಾ, ಬಿಸಿಲಲ್ಲಿ ಮಲಗಲು ಏನ್ ಬೇಕು ನಮಗೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ರಾಜಣ್ಣ ಎಸಿ ಬೇಕು ಎಂದು ಉತ್ತರಿಸಿದ್ದಾರೆ. ನಮಗೆ ಒಂದು ಎಸಿ ವ್ಯವಸ್ಥೆ ಮಾಡಿಸಿ ಮತ್ತೆ ಎಂದು ಕೇಳಿದ್ದಾರೆ. ಅಲ್ಲದೆ ಎಸಿ ಹಾಕಿಸಬೇಕ್ರೀ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಅಲ್ಲದೆ ಎಸಿ ಹಾಕಿಸಿದರೆ ನಿಮಗೆ 28ರ ವರೆಗೂ ರಜೆ ಕೊಡುತ್ತೇನೆ ಎಂದು ಹೇಳಿದ್ದಾರೆ.

  • ಉಪ ವಿಭಾಗ ದಂಡಾಧಿಕಾರಿ, ಟೀಮ್ ದುರ್ಗಾ ಕಾಲ್ನಡಿಗೆ- ಸಾರ್ವಜನಿಕರಲ್ಲಿ ಜಾಗೃತಿ

    ಉಪ ವಿಭಾಗ ದಂಡಾಧಿಕಾರಿ, ಟೀಮ್ ದುರ್ಗಾ ಕಾಲ್ನಡಿಗೆ- ಸಾರ್ವಜನಿಕರಲ್ಲಿ ಜಾಗೃತಿ

    – ಲಾಠಿ ಬೀಸುವ ಬದಲು ಪೊಲೀಸರಿಂದ ಜಾಗೃತಿ

    ಬಳ್ಳಾರಿ: ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದು, ಆದರೂ ಕೆಲವರು ತಮ್ಮ ವಾಹನಗಳ ಮೂಲಕ ರಸ್ತೆಗಿಳಿಯುತ್ತಿದ್ದಾರೆ. ಹೀಗಾಗಿ ಬಳ್ಳಾರಿಯಲ್ಲಿ ಪೊಲೀಸ್ ಇಲಾಖೆ ವಿಶೇಷ ತಂಡ ಟೀಮ್ ದುರ್ಗಾ ಜೊತೆಗೆ ಉಪವಿಭಾಗ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್ ಹಾಗೂ ಡಿವೈಎಸ್ಪಿ ವಿ.ರಘುಕುಮಾರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ, ಅನಗತ್ಯವಾಗಿ ಓಡಾಡುವ ಜನರಿಗೆ ಕೊರೊನಾ ವೈರಸ್ ಕುರಿತು ತಿಳುವಳಿಕೆ ನೀಡುತ್ತ ಕಾಲ್ನಡಿಗೆ ಮೂಲಕ ಸಿಟಿ ರೌಂಡ್ಸ್ ಹಾಕಿದರು.

    ಹೊಸಪೇಟೆ ನಗರದಲ್ಲಿ ಭಾನುವಾರ ರಾತ್ರಿ ಶೇಖ್ ತನ್ವೀರ್ ಅಸೀಫ್ ಅವರು ಮೇನ್ ಬಜಾರ್, ವಾಲ್ಮೀಕಿ ವೃತ್ತ, ಡ್ಯಾಂ ರಸ್ತೆ, ವಿಜಯನಗರ ಕಾಲೇಜ್ ರಸ್ತೆ, ಅಂಬೇಡ್ಕರ್ ವೃತ್ತ ಸೇರಿದಂತೆ ನಗರದ ವಿವಿಧೆಡೆ ಕಾಲ್ನಡಿಗೆಯಲ್ಲಿ ವೀಕ್ಷಣೆ ಮಾಡಿದರು.

    ಕೊರೊನಾ ವೈರಸ್ ಹೇಗೆ ಹರಡುತ್ತದೆ, ಮುಂಜಾಗೃತಾ ಕ್ರಮ ಹೇಗೆ ಕೈಗೊಳ್ಳಬೇಕು ಎಂಬುದರ ಕುರಿತು ಎಸಿ ಅವರು ಸಾರ್ವಜನಿಕರಗೆ ತಿಳಿಸಿದರು. ಅಲ್ಲದೆ ಸೆಕ್ಷನ್ 144 ಜಾರಿಯಲ್ಲಿದೆ ಯಾರು ತಿರುಗಾಡುವಂತಿಲ್ಲ. ನಿಮ್ಮ ಮನೆಯಲ್ಲೇ ಇರಬೇಕು. ತರಕಾರಿ, ಹಾಲು, ಔಷಧಿ, ಆಸ್ಪತ್ರೆ, ದಿನಸಿ ಅಂಗಡಿಗಳು ತೆಗೆದಿರುತ್ತವೆ. ಅವಶ್ಯಕತೆ ಇದ್ದವರು ಕುಟುಂಬದ ಯಾರಾದರು ಒಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ತೆಗದುಕೊಂಡು ಹೋಗಬಹುದು ಎಂದು ವಿವರಿಸಿದರು.

    ನಾವೆಲ್ಲ ಇರುವುದು ನಿಮಗಾಗಿ, ಸರ್ಕಾರ ಇದರ ಬಗ್ಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಯಾರೂ ಆತಂಕ ಪಡುವುದು ಬೇಡ. ಮನೆ ಬಿಟ್ಟು ಬರಬಾರದು ಎಂದು ಮನವಿ ಮಾಡಿದರು. ಪೊಲೀಸ್ ಇಲಾಖೆಯ ಟೀಮ್ ದುರ್ಗಾ ಎಸಿ ಅವರಿಗೆ ಸಾಥ್ ನೀಡಿತು. ನಗರದ ಬಹುತೇಕ ಬಡಾವಣೆಗಳಿಗೆ ಅವರೊಂದಿಗೆ ಸಂಚರಿಸಿತು.

  • ಪರಿಷತ್ ನಲ್ಲಿ ಕೊರೊನಾ ಎಫೆಕ್ಟ್ – ಸಭಾಂಗಣದ ಎಸಿ ಆಫ್

    ಪರಿಷತ್ ನಲ್ಲಿ ಕೊರೊನಾ ಎಫೆಕ್ಟ್ – ಸಭಾಂಗಣದ ಎಸಿ ಆಫ್

    ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎಫೆಕ್ಟ್ ಸಿಕ್ಕಾಪಟ್ಟೆ ಜಾಸ್ತಿ ಆಗುತ್ತಿದೆ. ಟಿಕ್ ಟಾಕ್ ಟ್ರೆಂಡ್, ಕಾಲರ್ ಟ್ಯೂನ್ ಟ್ರೆಂಡ್ ಹೀಗೆ ಕೊರೊನಾ ಎಫೆಕ್ಟ್‍ಗೆ ಸಿಕ್ಕಾಪಟ್ಟೆ ಪರಿಣಾಮ ಬೀರಿದೆ. ಇವತ್ತು ವಿಧಾನ ಪರಿಷತ್‍ನಲ್ಲೂ ಕೊರೊನಾ ಎಫೆಕ್ಟ್ ಗೆ ಸಖತ್ ಸದ್ದು ಮಾಡಿತು. ಕೊರೊನಾ ಎಫೆಕ್ಟ್ ಗೆ ಪರಿಷತ್ ಎಸಿ ಆಫ್ ಮಾಡಲಾಗಿತ್ತು. ಎಸಿ ಆಫ್ ಆಗಿದ್ದಕ್ಕೆ ಅವಸ್ಥೆ ಪಟ್ಟ ಪರಿಷತ್ ಸದಸ್ಯರು ಶೆಕೆ ತಡೆಯಲಾರದೆ ಎಸಿ ಮತ್ತೆ ಹಾಕಿಸಿಕೊಂಡರು.

    ಕಡಿಮೆ ಉಷ್ಣಾಂಶದಲ್ಲಿ ಕೊರೊನಾ ವೈರಸ್ ಬೇಗ ಹರಡುತ್ತದೆ ಅನ್ನೋ ಹಿನ್ನೆಲೆಯಲ್ಲಿ ಮಧ್ಯಾಹ್ನದ ನಂತರದ ಕಲಾಪದಲ್ಲಿ ಸಭಾಪತಿಗಳು ಸಭಾಂಗಣದ ಎಸಿಯನ್ನು ಆಫ್ ಮಾಡಿಸಿದರು. ಎಸಿ ಆಫ್ ಮಧ್ಯೆ ಸದನದಲ್ಲಿ ಚರ್ಚೆ ನಡೆದಿತ್ತು. ಕಲಾಪ ಪ್ರಾರಂಭವಾಗಿ ಒಂದು ಗಂಟೆ ಕಳೆಯುವ ಹೊತ್ತಿಗೆ ಸದಸ್ಯರಿಗೆ ಸೆಕೆ ಆರಂಭವಾಯಿತು. ಸೆಕೆಯನ್ನು ತಡೆಯಲಾರದ ಪರಿಷತ್ ಸದಸ್ಯರು ಸೆಕೆಗೆ ಒದ್ದಾಡಿದರು. ಕೂಡಲೇ ಎದ್ದು ನಿಂತ ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ತುಂಬಾ ಸೆಕೆ ಆಗುತ್ತಿದೆ. ಎಸಿ ಆನ್ ಮಾಡಿ ಎಂದು ಉಪ ಸಭಾಪತಿಗಳಿಗೆ ಮನವಿ ಮಾಡಿದರು. ಉಪ ಸಭಾಪತಿಗಳು ಕೂಡಲೇ ಎಸಿ ಆನ್ ಮಾಡಿಸಿದರು.

    ಸದನ ಪ್ರಾರಂಭವಾದ ಕೂಡಲೇ ಸಾಮಾನ್ಯವಾಗಿ ಎಸಿ ಆನ್ ಇರುತ್ತೆ. ಆದರೆ ಇಂದಿನ ಕಲಾಪದಲ್ಲಿ ಮಧ್ಯಾಹ್ನ ಎಸಿ ಆಫ್ ಮಾಡಲಾಗಿತ್ತು. ಆದರೆ ಎಸಿ ಆಫ್ ಮಾಡಿರೋದನ್ನು ಹೇಳಲಾಗದೆ ಪತ್ರಕರ್ತರು ಒದ್ದಾಡುತ್ತಿದ್ದರು. ಕೊನೆಗೆ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರೇ ವಿಷಯ ಪ್ರಸ್ತಾಪ ಮಾಡಿ ಎಸಿ ಪ್ರಸಂಗಕ್ಕೆ ತೆರೆ ಎಳೆದರು.

  • ಬ್ಯಾಟ್, ಬಾಲ್ ಹಿಡಿದು ಮೈದಾನಕ್ಕಿಳಿದ ಡಿಸಿ, ಎಸಿ

    ಬ್ಯಾಟ್, ಬಾಲ್ ಹಿಡಿದು ಮೈದಾನಕ್ಕಿಳಿದ ಡಿಸಿ, ಎಸಿ

    ಯಾದಗಿರಿ: ಫೈಲ್ಸ್, ಕಂಪ್ಯೂಟರ್ ಕೀ ಬೋರ್ಡ್ ಹಿಡಿದು ಕಾರ್ಯನಿರ್ವಹಿಸುತ್ತಿದ್ದ ಜಿಲ್ಲೆಯ ಕಂದಾಯ ಇಲಾಖೆಯ ಸಿಬ್ಬಂದಿ ಇಂದು ಬ್ಯಾಟ್ ಹಿಡಿದು ಮೈದಾನಕ್ಕೆ ಎಂಟ್ರಿಕೊಟ್ಟರು.

    ಜಿಲ್ಲೆಯ ವಿವಿಧ ತಾಲೂಕಿನ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಾಗಿ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟವನ್ನು ಯಾದಗಿರಿ ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಇಂದು ನಡೆದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಭಾಗವಹಿಸಿ ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಿದರು.

    ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಕ್ರಿಕೆಟ್, ಕಬ್ಬಡಿ, ವಾಲಿಬಾಲ್ ಪಂದ್ಯ ಹಾಗೂ ಚೇಸ್ ಏರ್ಪಡಿಸಲಾಗಿದೆ. ಎಲ್ಲಾ ಪಂದ್ಯಾವಳಿಗಳಿಗೆ ಎಐಡಿಸಿ ಪ್ರಕಾಶ್ ರಜಪೂತ್ ಮತ್ತು ಎಸಿ ಶಂಕರಗೌಡ ಮೈಕ್ ಹಿಡಿದು ಕಾಮಂಟ್ರಿ ಹೇಳಲಿದ್ದಾರೆ.