Tag: abu dhabi

  • 3 ವಿಕೆಟ್ ಪಡೆದು 14 ರನ್ ನೀಡಿದ ರಶೀದ್ – ಖಾನ್ ಸ್ಪಿನ್ ಮೋಡಿಗೆ ಡೆಲ್ಲಿ ಉಡೀಸ್

    3 ವಿಕೆಟ್ ಪಡೆದು 14 ರನ್ ನೀಡಿದ ರಶೀದ್ – ಖಾನ್ ಸ್ಪಿನ್ ಮೋಡಿಗೆ ಡೆಲ್ಲಿ ಉಡೀಸ್

    – ಭುವನೇಶ್ವರ್, ನಟರಾಜನ್ ಮಾರಕ ದಾಳಿಗೆ ಐಯ್ಯರ್ ಪಡೆ ತತ್ತರ

    ಅಬುಧಾಬಿ: ಮ್ಯಾಜಿಕಲ್ ಸ್ಪಿನ್ ಬೌಲರ್ ರಶೀದ್ ಖಾನ್ ಅವರ ಮಾರಕ ದಾಳಿಗೆ ನಲುಗಿದ ಡೆಲ್ಲಿ ಐಪಿಎಲ್-2020ಯ 11ನೇ ಪಂದ್ಯದಲ್ಲಿ ಸೋಲುಂಡಿದೆ. ಈ ಮೂಲಕ ಸನ್‍ರೈಸರ್ಸ್ ಹೈದರಾಬಾದ್ ತಂಡ ತನ್ನ ಮೊದಲ ಗೆಲುವನ್ನು ದಾಖಲಿಸಿದೆ.

    ಇಂದು ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಜಾನಿ ಬೈರ್‌ಸ್ಟೋವ್ ಅವರ ಉತ್ತಮ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 162 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ರೈಸರ್ಸ್ ಆಕ್ರಮಣಕಾರಿ ಬೌಲಿಂಗ್‍ಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ ಕೇವಲ 147 ರನ್ ಹೊಡೆದು 15 ರನ್‍ಗಳ ಅಂತರದಿಂದ ಸೋಲನ್ನು ಒಪ್ಪಿಕೊಂಡಿತು.

    ಟ್ವಿಸ್ಟ್ ನೀಡಿದ ರಶೀದ್ ಖಾನ್:
    ತಾನು ಮಾಡಿದ ಮೊದಲ ಓವರಿನಲ್ಲಿ ಸೆಟ್ ಬ್ಯಾಟ್ಸ್ ಮ್ಯಾನ್ ನಾಯಕ ಶ್ರೇಯಸ್ ಐಯ್ಯರ್ ಅವರನ್ನು ಔಟ್ ಮಾಡಿದ್ದ ರಶೀದ್ ಖಾನ್ ಮತ್ತೆ 12ನೇ ಓವರಿನಲ್ಲಿ ಮ್ಯಾಜಿಕ್ ಮಾಡಿದರು. ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದಿದ್ದ ಶಿಖರ್ ಧವನ್ ಅವರನ್ನು ಔಟ್ ಮಾಡಿದರು. ನಂತರ 16ನೇ ಓವರಿನಲ್ಲಿ ಸ್ಫೋಟಕ ಆಟಕ್ಕೆ ಮುಂದಾಗಿದ್ದ ರಿಷಬ್ ಪಂತ್ ಅವರನ್ನು ಔಟ್ ಮಾಡಿದರು. ಈ ಮೂಲಕ ನಾಲ್ಕು ಓವರ್ ಬೌಲ್ ಮಾಡಿ ಪ್ರಮುಖ ಮೂರು ವಿಕೆಟ್ ಕಿತ್ತು ಕೇವಲ 14 ರನ್ ನೀಡಿದರು.

    ಪಂದ್ಯದಲ್ಲಿ ಉತ್ತಮವಾಗಿ ಬೌಲ್ ಮಾಡಿದ ಭುವನೇಶ್ವರ್ ಕುಮಾರ್ ಅವರು ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು 25 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ದೇಶೀಯ ಪ್ರತಿಭೆ ಟಿ ನಟರಾಜನ್ ನಾಲ್ಕು ಓವರ್ ಬೌಲ್ ಮಾಡಿ ಒಂದು ವಿಕೆಟ್ ಪಡೆದು, 25 ರನ್ ನೀಡಿದರು. ಜೊತೆಗೆ ಪ್ರಮುಖ 17ನೇ ಓವರ್ ಬೌಲ್ ಮಾಡಿ ಪಂದ್ಯಕ್ಕೆ ಟ್ವಿಸ್ಟ್ ನೀಡಿದರು.

    ಡೆಲ್ಲಿ ಕ್ಯಾಪಿಟಲ್ ತಂಡಕ್ಕೆ ಆರಂಭದಲ್ಲೇ ಶಾಕ್ ನೀಡಿದ ಭುವನೇಶ್ವರ್ ಕುಮಾರ್ ಅವರು ಉತ್ತಮ ಲಯದಲ್ಲಿದ್ದ ಪೃಥ್ವಿ ಶಾ ಅವರನ್ನು ಔಟ್ ಮಾಡಿದರು. ಕೇವಲ ಎರಡು ರನ್ ಗಳಿಸಿದ್ದ ಶಾ ಜಾನಿ ಬೈರ್‌ಸ್ಟೋವ್ ಅವರಿಗೆ ಕ್ಯಾಚ್ ಇತ್ತು ಹೊರನಡೆದರು. ನಂತರ ಜೊತೆಯಾದ ನಾಯಕ ಶ್ರೇಯಸ್ ಐಯ್ಯರ್ ಮತ್ತು ಶಿಖರ್ ಧವನ್ ನಿಧಾನವಾಗಿ ಜೊತೆಯಾಟವಾಡಿದರು. ಪರಿಣಾಮ ಆರು ಓವರ್ ಮುಕ್ತಾಯಕ್ಕೆ ಡೆಲ್ಲಿ ಒಂದು ವಿಕೆಟ್ ಕಳೆದುಕೊಂಡು 34 ರನ್ ಸೇರಿಸಿತು.

    ಈ ವೇಳೆ ಬೌಲಿಂಗ್‍ಗೆ ಇಳಿದ ರಶೀದ್ ಖಾನ್ ಅವರು ನಾಯಕ ಶ್ರೇಯಸ್ ಐಯ್ಯರ್ ವಿಕೆಟ್ ಕೀಳುವ ಮೂಲಕ ಡೆಲ್ಲಿ ಆಘಾತ ನೀಡಿದರು. ಈ ಮೂಲಕ 17 ರನ್ ಗಳಿಸಿದ್ದ ಐಯ್ಯರ್ ಅಬ್ದುಲ್ ಸಮದ್ ಅವರಿಗೆ ಕ್ಯಾಚ್ ನೀಡಿ ಹೊರನಡೆದರು. ಈ ನಡುವೆ ಹೈದರಾಬಾದ್ ಸ್ಪಿನ್ನರ್ ಗಳು ಬಿಗುವಿನ ಬೌಲಿಂಗ್ ದಾಳಿ ಮಾಡಿದರು. ಹೀಗಾಗಿ ರನ್ ಕದಿಯಲು ಡೆಲ್ಲಿ ಬ್ಯಾಟ್ಸ್ ಮ್ಯಾನ್‍ಗಳು ಕಷ್ಟಪಡಬೇಕಾಯ್ತು. 11 ಓವರ್ ಮುಕ್ತಾಯ ಡೆಲ್ಲಿ ತಂಡ ಎರಡು ವಿಕೆಟ್ ಕಳೆದುಕೊಂಡು ಕೇವಲ 60 ರನ್ ಗಳಿಸಿತು.

    ನಂತರ ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದಿದ್ದ ಶಿಖರ್ ಧವನ್ (31 ಎಸೆತ, 34 ರನ್, 4 ಫೋರ್) ಅವರನ್ನು ಔಟ್ ಮಾಡಿದರು. ಈ ವೇಳೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ ರಿಷಬ್ ಪಂತ್ ಅವರು ತಂಡದ ಮೊತ್ತಕ್ಕೆ ಸ್ವಲ್ಪ ವೇಗ ನೀಡಿದರು. ನಂತರ ಶಿಮ್ರಾನ್ ಹೆಟ್ಮಿಯರ್ ಅವರ ಕೂಡ 14ನೇ ಓವರಿನಲ್ಲಿ ಬ್ಯಾಕ್ ಟು ಬ್ಯಾಕ್ ಡೆಲ್ಲಿಯನ್ನು 100ರ ಗಡಿ ದಾಟಿಸಿದರು. ಆದರೆ ನಂತರ 15ನೇ ಓವರ್ ಬೌಲ್ ಮಾಡಿ ವನೇಶ್ವರ್ ಕುಮಾರ್ ಅವರು ಹೆಟ್ಮಿಯರ್ ಅವರನ್ನು ಔಟ್ ಮಾಡಿದರು. 12 ಬಾಲಿಗೆ 21 ರನ್ ಸಿಡಿಸಿ ಆಡುತ್ತಿದ್ದ ಶಿಮ್ರಾನ್ ಹೆಟ್ಮಿಯರ್ ಮನೀಶ್ ಪಾಂಡೆ ಹಿಡಿದ ಭರ್ಜರಿ ಕ್ಯಾಚಿಗೆ ಬಲಿಯಾದರು.

    ನಂತರ ದೊಡ್ಡ ಹೊಡೆತಕ್ಕೆ ಕೈಹಾಕಿದ ರಿಷಬ್ ಪಂತ್ ಅವರು, 16ನೇ ಓವರಿನಲ್ಲಿ 27 ಬಾಲಿಗೆ 28 ರನ್ ಸಿಡಿಸಿ ರಶೀದ್ ಖಾನ್ ಅವರಿಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಪಂದ್ಯದ ಪ್ರಮುಖ ಘಟ್ಟದಲ್ಲಿ ರಶೀದ್ ಒಳ್ಳೆ ಬ್ರೇಕ್ ನೀಡಿದರು. ಈ ವೇಳೆ 17ನೇ ಓವರ್ ಬೌಲ್ ಮಾಡಿದ ಟಿ ನಟರಾಜನ್ ಅವರು ಡೇಂಜರ್ಸ್ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಔಟ್ ಮಾಡಿ ಕೇವಲ ಏಳು ರನ್ ನೀಡಿದ್ದು, ಸನ್‍ರೈಸರ್ಸ್ ತಂಡಕ್ಕೆ ಗೆಲುವಿನ ಅಡಿಪಾಯ ಹಾಕಿಕೊಟ್ಟಿತ್ತು.

  • ಡೆಲ್ಲಿ ಬೌಲರ್‌ಗಳ ಅಬ್ಬರಕ್ಕೆ ತತ್ತರಿಸಿದ ಸನ್‍ರೈಸರ್ಸ್ – ಐಯ್ಯರ್ ಪಡೆಗೆ 163 ರನ್‍ಗಳ ಗುರಿ

    ಡೆಲ್ಲಿ ಬೌಲರ್‌ಗಳ ಅಬ್ಬರಕ್ಕೆ ತತ್ತರಿಸಿದ ಸನ್‍ರೈಸರ್ಸ್ – ಐಯ್ಯರ್ ಪಡೆಗೆ 163 ರನ್‍ಗಳ ಗುರಿ

    ಅಬುಧಾಬಿ: ಡೆಲ್ಲಿ ಬೌಲರ್‌ಗಳ ಅಬ್ಬರಕ್ಕೆ ತತ್ತರಿಸಿದ ವಾರ್ನರ್ ಪಡೆ ಉತ್ತಮ ಆರಂಭ ಕಂಡರು ಡೆಲ್ಲಿಗೆ ದೊಡ್ಡ ಟಾರ್ಗೆಟ್ ನೀಡುವಲ್ಲಿ ವಿಫಲವಾಗಿದೆ.

    ಇಂದು ಅಬುಧಾಬಿ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್-2020ಯ 11ನೇ ಮ್ಯಾಚಿನಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ ದೆಹಲಿ ಕ್ಯಾಪಿಟಲ್ ತಂಡಕ್ಕೆ 163 ರನ್‍ಗಳ ಸಾಧಾರಣ ಟಾರ್ಗೆಟ್ ನೀಡಿದೆ. ಹೈದರಾಬಾದ್ ತಂಡ ಆರಂಭದಲ್ಲಿ ಉತ್ತಮ ಲಯದಲ್ಲಿದ್ದರೂ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲವಾಯ್ತು. ಡೆಲ್ಲಿ ಪರ ಅಮಿತ್ ಮಿಶ್ರಾ ಮತ್ತು ಕಗಿಸೊ ರಬಡಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

    ಮೊದಲಿನಿಂದಲೇ ಹೈದರಾಬಾದ್ ಮಂದಗತಿಯ ಬ್ಯಾಟಿಂಗ್ ಮಾಡಿತು. ಡೆಲ್ಲಿ ಬೌಲರ್ ಗಳ ಬಿಗಿ ಬೌಲಿಂಗ್ ದಾಳಿಗೆ ಮಂಕಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‍ಸ್ಟೋವ್ ಪವರ್ ಪ್ಲೇ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ನಷ್ಟವಿಲ್ಲದೇ ಕೇವಲ 38 ರನ್ ಗಳಿಸಿದರು. ನಿಧಾನವಾಗಿಯೇ ತಂಡಕ್ಕೆ ರನ್ ಕಲೆಹಾಕುತ್ತಿದ್ದ ನಾಯಕ ಡೇವಿಡ್ ವಾರ್ನರ್ ಅವರು 33 ಎಸೆತಗಳಲ್ಲಿ 45 ರನ್ ಗಳಿಸಿ ಅಮಿತ್ ಮಿಶ್ರಾ ಅವರಿಗೆ ವಿಕೆಟ್ ನೀಡಿದರು.

    ಇದಾದ ಬಳಿಕ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಮನೀಶ್ ಪಾಂಡೆ ಕೇವಲ ಮೂರು ರನ್ ಗಳಿಸಿ ಅಮಿತ್ ಮಿಶ್ರಾ ಅವರಿಗೆ ಎರಡನೇ ಬಲಿಯಾಗಿ ಪೆವಿಲಿಯನ್ ಸೇರಿದರು. ನಂತರ ಒಂದಾದ ಕೇನ್ ವಿಲಿಯಮ್ಸನ್ ಹಾಗೂ ಜಾನಿ ಬೈರ್‍ಸ್ಟೋವ್ ಉತ್ತಮವಾಗಿ ಬ್ಯಾಟ್ ಬೀಸಿದರು. ಇದೇ ವೇಳೆ ಮೊದಲಿನಿಂದಲೂ ಉತ್ತಮವಾಗಿ ಆಡಿದ ಜಾನಿ ಬೈರ್ ಸ್ಟೋವ್ ಅವರು 45 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಇದೇ ವೇಳೆ ಕೇನ್ ಮತ್ತು ಜಾನಿ ಜೋಡಿ 36 ಬಾಲಿಗೆ ಅರ್ಧಶತಕದ ಜೊತೆಯಾಟವಾಡಿತು.

    ನಂತರ ಅರ್ಧಶತಕ ಸಿಡಿಸಿದ ಜಾನಿ ಬೈರ್ ಸ್ಟೋವ್ 53 ರನ್ ಗಳಿಸಿ ಕಗಿಸೊ ರಬಡಾ ಅವರಿಗೆ ಔಟ್ ಆಗಿ ಹೊರನಡೆದರು. ನಂತರ ಜೊತೆಯಾದ ಅಬ್ದುಲ್ ಸಮದ್ ಮತ್ತು ಕೇನ್ ವಿಲಿಯಮ್ಸನ್ ಅವರು ಕೊನೆಯ ಎರಡು ಓವರಿನಲ್ಲಿ ಸ್ಫೋಟಕ ಆಟಕ್ಕೆ ಮುಂದಾದರು. ಆದರೆ ಕಗಿಸೊ ರಬಡಾ ಅವರ ಕೊನೆಯ ಓವರಿನಲ್ಲಿ 41 ರನ್ ಗಳಿಸಿದ್ದ ಕೇನ್ ವಿಲಿಯಮ್ಸನ್ ಔಟ್ ಆದರು.

  • ಸೋಲುಂಡ ತಂಡಗಳ ಫೈಟ್- ಹೈದರಾಬಾದ್, ಕೋಲ್ಕತ್ತಾ ನಡ್ವೆ ಗೆಲುವು ಯಾರಿಗೆ?

    ಸೋಲುಂಡ ತಂಡಗಳ ಫೈಟ್- ಹೈದರಾಬಾದ್, ಕೋಲ್ಕತ್ತಾ ನಡ್ವೆ ಗೆಲುವು ಯಾರಿಗೆ?

    ಅಬುಧಾಬಿ: ಐಪಿಎಲ್ 2020ರ ಆವೃತ್ತಿಯ ಡೆಬ್ಯು ಪಂದ್ಯದಲ್ಲಿ ಸೋಲುಂಡಿರುವ ಸನ್‌ರೈಸ‌ರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ತಂಡಗಳು ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಎರಡೂ ತಂಡಗಳಲ್ಲಿ ಕೆಲ ಬದಲಾವಣೆಗಳುವ ಸಾಧ್ಯತೆ ಇದೆ.

    ಕೆಕೆಆರ್ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ 49 ರನ್‍ಗಳಿಂದ ಕಳೆದುಕೊಂಡರೆ, ಆರ್‌ಸಿಬಿ ವಿರುದ್ಧ ಎಸ್‌ಆರ್‌ಎಚ್ 10 ರನ್‍ಗಳಿಂದ ಸೋಲುಂಡಿತ್ತು. ಇಂದು ಸೋಲಿನ ಕಹಿ ಅನುಭವಿಸಿದ್ದ ಇತ್ತಂಡಗಳು ಮುಖಾಮುಖಿ ಆಗುತ್ತಿರುವುದರಿಂದ ಯಾರಿಗೆ ಗೆಲುವು ಸಿಗಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ: ಸನ್ ರೈಸರ್ಸ್‍ಗೆ ಆರಂಭಿಕ ಆಘಾತ – ಐಪಿಎಲ್‍ನಿಂದ ಮಿಚೆಲ್ ಮಾರ್ಷ್ ಔಟ್

    ಇದುವರೆಗೂ ಇತ್ತಂಡಗಳು 17 ಬಾರಿ ಮುಖಾಮುಖಿಯಾಗಿದ್ದು, 10 ಕೋಲ್ಕತ್ತಾ, 7 ಪಂದ್ಯಗಳಲ್ಲಿ ಹೈದರಾಬಾದ್ ಗೆಲವು ಪಡೆದಿದೆ. ಅನುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ 2 ಪಂದ್ಯಗಳನ್ನು ಗಮನಿಸುವುದಾದರೇ ಪಿಚ್ ಬ್ಯಾಟ್ಸ್ ಮನ್ ಮತ್ತು ಬೌಲರ್ ಗಳಿಗೆ ಸಹಕಾರಿಯಾಗಿದೆ. ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಕ್ರೀಡಾಂಗಣದಲ್ಲಿ ಸರಾಸರಿ 150 ಮೊತ್ತದಲ್ಲಿ ಟಾರ್ಗೆಟ್ ಲಭಿಸಿದೆ.

    ಟೂರ್ನಿಯ ಆರಂಭದಲ್ಲೇ ಆಸೀಸ್ ಆಟಗಾರ ಮಿಚೆಲ್ ಮಾರ್ಷ್ ಗಾಯದ ಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದ ಪರಿಣಾಮ ಹೈದರಾಬಾದ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಮಾರ್ಷ್ ಸ್ಥಾನಕ್ಕೆ ಜೇಸನ್ ಹೋಲ್ಡರ್ ಆಗಮಿಸಿದ್ದಾರೆ. ಗಾಯದ ಸಮಸ್ಯೆಯಿಂದ 2017ರ ಐಪಿಎಲ್ ಟೂರ್ನಿಯಿಂದ ಹೊರ ನಡೆದಿದ್ದ ಮಾರ್ಷ್ 2ನೇ ಬಾರಿಗೆ ಐಪಿಎಲ್‍ನಿಂದ ದೂರವಾಗಿದ್ದಾರೆ.

    ಕೋಲ್ಕತ್ತಾ ತಂಡ ವಿಶ್ವದರ್ಜೆಯ ಆಟಗಾರರನ್ನು ಹೊಂದಿದ್ದು, ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್, ಕಮಿನ್ಸ್, ಸುನಿಲ್ ನಾರಾಯಣ್ ಸೇರಿದಂತೆ ಪಂದ್ಯ ಗೆಲ್ಲಿಸಿಕೊಡುವ ಸಾಮಥ್ರ್ಯವಿರುವ ಆಟಗಾರರನ್ನು ಹೊಂದಿದೆ. ಯುವ ಆಟಗಾರ ಶುಭಮನ್ ಗಿಲ್, ನಿತೀಶ್ ರಾಣಾ ಸೇರಿದಂತೆ ಮಾರ್ಗನ್ ಅವರು ತಮ್ಮ ಲಯಕ್ಕೆ ಮರಳಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಕಮಿನ್ಸ್ ಕಳೆದ ಪಂದ್ಯದಲ್ಲಿ ಭರವಸೆ ಮೂಡಿಸಿದ್ದು, ಶಿವಂ ಮಾವಿ, ಕುಲದೀಪ್ ಯಾದವ್ ತಂಡದ ಗೆಲುವಿಗೆ ಕಾಣಿಕೆ ನೀಡಬೇಕಿದೆ.

    ಹೈದರಾಬಾದ್ ತಂಡ ಉತ್ತಮ ಬ್ಯಾಟಿಂಗ್ ಲೈನ್‍ಅಪ್ ಹೊಂದಿದ್ದರು ಕೂಡ ಕಳೆದ ಪಂದ್ಯದಲ್ಲಿ ಆರ್ ಸಿಬಿ ಬೌಲಿಂಗ್ ವಿರುದ್ಧ ದಿಢೀರ್ ಕುಸಿತ ಕಂಡಿತ್ತು. ವಾರ್ನರ್ ಅನೂಹ್ಯ ರೀತಿಯಲ್ಲಿ ರನೌಟ್ ಆಗಿದ್ದು ಬಹುದೊಡ್ಡ ಪೆಟ್ಟು ನೀಡಿತ್ತು. ಕೇವಲ 32 ಎಸೆಗಳಲ್ಲಿ 7 ವಿಕೆಟ್ ಕಳೆದುಕೊಂಡಿದ್ದ ಹೈದರಾಬಾದ್ ಸೋಲುಂಡಿತ್ತು. ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್‍ಗೆ ಅವಕಾಶ ಲಭಿಸೋ ನಿರೀಕ್ಷೆ ಇದೆ. ಭುವನೇಶ್ವರ್ ನೇತೃತ್ವದ ಬೌಲಿಂಗ್ ಪಡೆಯಲ್ಲಿ ಖಲೀಲ್ ಅಹಮದ್, ರಶೀದ್ ಖಾನ್, ಸಿದ್ಧಾರ್ಥ್ ಕೌಲ್ ಮಿಂಚುವ ಅಗತ್ಯವಿದೆ.

    ಸಂಭಾವ್ಯ ತಂಡ:

    ಹೈದರಾಬಾದ್: ಸುನಿಲ್ ನರೇನ್, ಶುಭ್‍ಮನ್ ಗಿಲ್, ನಿತಿಶ್ ರಾಣಾ, ಮಾರ್ಗನ್, ಆ್ಯಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ನಾಯಕ), ಕಮಿನ್ಸ್, ಕುಲ್ದೀಪ್ ಯಾದವ್, ಸಂದೀಪ್, ಶಿವಂ ಮಾವಿ, ನಿಖಿಲ್ ನಾಯ್ಕ್.

    ಕೋಲ್ಕತ್ತಾ: ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್ಸ್ಟೋವ್, ಮನೀಷ್ ಪಾಂಡೆ, ವಿಜಯ್ ಶಂಕರ್, ಪ್ರಿಯಮ್ ಗಾರ್ಗ್, ಅಭಿಶೇಕ್ ಶರ್ಮಾ, ರಷೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ, ಜೇಸನ್ ಹೋಲ್ಡರ್.

  • ನೆಟ್ಸ್‌ನಲ್ಲಿ ಧೋನಿ ಹೆಲಿಕಾಪ್ಟರ್ ಶಾಟ್ ಕಲಿಯುತ್ತಿರುವ ಸ್ಮಿತ್

    ನೆಟ್ಸ್‌ನಲ್ಲಿ ಧೋನಿ ಹೆಲಿಕಾಪ್ಟರ್ ಶಾಟ್ ಕಲಿಯುತ್ತಿರುವ ಸ್ಮಿತ್

    ಅಬುಧಾಬಿ: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಅವರು ನೆಟ್ಸ್‌ನಲ್ಲಿ  ಧೋನಿಯವರ ಹೆಲಿಕಾಪ್ಟರ್ ಶಾಟ್ ಹೊಡೆಯಲು ಅಭ್ಯಾಸ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

    ಐಪಿಎಲ್ ಯುವ ಆಟಗಾರರಿಗೆ ಮತ್ತು ಕ್ರಿಕೆಟಿನಲ್ಲಿ ಹೊಸತನವನ್ನು ಪ್ರಯತ್ನಿಸಲು ಉತ್ತಮ ವೇದಿಕೆಯಾಗಿದೆ. ಇದರಿಂದ ಹಲವಾರು ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಈಗ ಅಂತೆಯೇ ಎಂದೂ ಹೆಲಿಕಾಪ್ಟರ್ ಶಾಟ್ ಹೊಡೆಯದ ಸ್ಟೀವ್ ಸ್ಮಿತ್ ಅವರು ಐಪಿಎಲ್ ವೇಳೆ ಅದನ್ನು ಕಲಿಯಲು ಪ್ರಯತ್ನ ಮಾಡುತ್ತಿದ್ದಾರೆ.

    ಅಭ್ಯಾಸದ ವೇಳೆ ಸ್ಮಿತ್ ಹೆಲಿಕಾಪ್ಟರ್ ಶಾಟ್ ಹೊಡೆಯಲು ಪ್ರಯತ್ನ ಮಾಡಿರುವ ವಿಡಿಯೋವನ್ನು ರಾಜಸ್ಥಾನ್ ರಾಯಲ್ಸ್ ತಂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಜೊತೆಗೆ ಹೆಲಿಕಾಪ್ಟರ್ ಶಾಟ್ ಹೊಡೆಯುವ ನಾಯಕನ್ನು ನಾವು ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ವೇಗದ ಬೌಲರ್ ಎಸೆದ ಯಾರ್ಕರ್ ಗೆ ಸ್ಮಿತ್ ಹೆಲಿಕಾಪ್ಟರ್ ಶಾಟ್ ಬಾರಿಸಿರುವುದನ್ನು ಕಾಣಬಹುದು.

    ಕಳೆದ ಮಂಗಳವಾರ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ರಾಯಲ್ಸ್ ತಂಡ 16 ರನ್ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಮಂಗಳವಾರ ನಡೆದ ಐಪಿಎಲ್ ನಾಲ್ಕನೇ ಮ್ಯಾಚಿನಲ್ಲಿ ಸ್ಟೀವ್ ಸ್ಮಿತ್ ಅವರು ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. 47 ಎಸೆತದಲ್ಲಿ 69 ರನ್ ಪೇರಿಸಿದ ಸ್ಮಿತ್, 146.81ರ ಸ್ಟ್ರೈಕ್ ರೇಟ್‍ನಲ್ಲಿ ನಾಲ್ಕು ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದ್ದರು.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್ ಮತ್ತು ಸ್ಟೀವ್ ಸ್ಮಿತ್ ಅವರ ಉತ್ತಮ ಬ್ಯಾಟಿಂಗ್ ಹಾಗೂ ಕೊನೆಯಲ್ಲಿ ಜೋಪ್ರಾ ಆರ್ಚರ್ ಅವರ ಮಿಂಚಿನಂತ ಹೊಡೆತಗಳಿಂದ ಭರ್ಜರಿ 217 ರನ್‍ಗಳ ಟಾರ್ಗೆಟ್ ನೀಡಿತ್ತು. ಆದರೆ ಇದನ್ನು ಬೆನ್ನಟ್ಟಿದ ಚೆನ್ನೈ ತಂಡ ರಾಯಲ್ಸ್ ತಂಡದ ಬಿಗಿ ಬೌಲಿಂಗ್ ದಾಳಿಗೆ ನಲುಗಿ ನಿಗದಿತ 20 ಓವರಿನಲ್ಲಿ ಕೇವಲ 199 ರನ್ ಗಳಿಸಿ 16 ರನ್‍ಗಳಿಂದ ಸೋಲುಂಡಿತ್ತು.

  • ಬುಮ್ರಾ, ಬೌಲ್ಟ್ ದಾಳಿಗೆ ರೈಡರ್ಸ್ ತತ್ತರ – ಮುಂಬೈಗೆ ಮೊದಲ ಜಯ

    ಬುಮ್ರಾ, ಬೌಲ್ಟ್ ದಾಳಿಗೆ ರೈಡರ್ಸ್ ತತ್ತರ – ಮುಂಬೈಗೆ ಮೊದಲ ಜಯ

    – ಕೊನೆಯಲ್ಲಿ ಅಬ್ಬರಿಸಿದ ಕಮ್ಮಿನ್ಸ್

    ಅಬುಧಾಬಿ: ಮುಂಬೈ ಇಂಡಿಯನ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಟೂರ್ನಿಯ ಮೊದಲ ಪಂದ್ಯದಲ್ಲೇ ಸೋಲುಂಡಿದೆ. ಈ ಮೂಲಕ ಮುಂಬೈ ಐಪಿಎಲ್-2020ಯಲ್ಲಿ ತನ್ನ ಮೊದಲ ಗೆಲುವನ್ನು ಸಾಧಿಸಿದೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ಅವರು ರೋಚಕ ಅರ್ಧಶತಕ ಮತ್ತು ಸೂರ್ಯಕುಮಾರ್ ಯಾದವ್ ಅವರು ಮಿಂಚಿನ ಆಟದಿಂದ ನಿಗದಿತ 20 ಓವರಿನಲ್ಲಿ 195 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭದಿಂದಲೇ ಕುಂಟುತ್ತಾ ಸಾಗಿತ್ತು. ಪರಿಣಾಮ ನಿಗದಿತ 20 ಓವರಿನಲ್ಲಿ 9 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿ 49 ರನ್ ಅಂತರದಲ್ಲಿ ಸೋಲನ್ನು ಒಪ್ಪಿಕೊಂಡಿತು.

    ಬೂಮ್ರಾ, ಬೌಲ್ಟ್ ಮಾರಕ ದಾಳಿ
    ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಗಳು ನೈಟ್ ರೈಡರ್ಸ್ ಗಳ ಮೇಲೆ ಸವರಿ ಮಾಡಿದರು. ಮೊದಲ ಓವರಿನಿಂದಲೇ ಒತ್ತಡ ಹಾಕಲು ಶುರು ಮಾಡಿದ ಟ್ರೆಂಟ್ ಬೌಲ್ಟ್ 4 ಓವರ್ ಮಾಡಿ 30 ರನ್ ನೀಡಿ ಎರಡು ವಿಕೆಟ್ ಪಡೆದರು. ಅಂತಯೇ ಜಸ್ಪ್ರೀತ್ ಬುಮ್ರಾ ಅವರು ನಾಲ್ಕು ಓವರ್ ಮಾಡಿ ಒಂದೇ ಓವರಿನಲ್ಲಿ ಎರಡು ಪ್ರಮುಖ ವಿಕೆಟ್ ಕಿತ್ತು ಕೋಲ್ಕತ್ತಾ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

    ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರರ ಮೇಲೆ ಟ್ರೆಂಟ್ ಬೌಲ್ಟ್ ಆರಂಭದಿಂದಲೇ ಪ್ರಭಾವ ಬೀರಿದರು. ಇನ್ನಿಂಗ್ಸ್ ಮೊದಲ ಓವರ್ ಅನ್ನೇ ಮೇಡನ್ ಓವರ್ ಮಾಡಿದ ಬೌಲ್ಟ್ ತಾವು ಮಾಡಿದ ಎರಡನೇ ಓವರಿನಲ್ಲಿ ಯುವ ಆಟಗಾರ ಶುಭಮನ್ ಗಿಲ್ ಅವರನ್ನು ಔಟ್ ಮಾಡಿದರು. ನಾಲ್ಕನೇ ಓವರಿನಲ್ಲಿ ಜೇಮ್ಸ್ ಪ್ಯಾಟಿನ್ಸನ್ ಅವರ ಬೌನ್ಸರ್ ಗೆ ಸುನಿಲ್ ನರೈನ್ ಅವರು ಕೀಪರ್ ಕ್ಯಾಚ್ ಕೊಟ್ಟು ಔಟ್ ಆಗಿ ಹೊರನಡೆದರು.

    ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದ ಮುಂಬೈ ಬೌಲರ್ ಗಳು ಕೋಲ್ಕತ್ತಾವನ್ನು ಪವರ್ ಪ್ಲೇನಲ್ಲಿ ಕೇವಲ 33 ರನ್ ಒಳಗೆ ಕಟ್ಟಿ ಹಾಕಿದರು. ಜೊತೆಗೆ ಕೋಲ್ಕತ್ತಾ 6 ಓವರ್ ಮುಕ್ತಾಯದ ವೇಳೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತ್ತು. ಇದಾದ ನಂತರ ನಾಯಕ ದಿನೇಶ್ ಕಾರ್ತಿಕ್ ಮತ್ತು ನಿತೀಶ್ ರಾಣಾ ಉತ್ತಮ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ದರು. ಆದರೆ 10ನೇ ಓವರಿನ ಮೊದಲ ಬಾಲಿನಲ್ಲಿ 30 ರನ್ ಗಳಿಸಿ ಆಡುತ್ತಿದ್ದ ಕಾರ್ತಿಕ್ ಔಟ್ ಆದರು.

    24 ರನ್‍ಗಳಿಸಿ ತಾಳ್ಮೆಯಿಂದ ಆಟವಾಡುತ್ತಿದ್ದ ನಿತೀಶ್ ರಾಣಾ ಬೌಂಡರಿಯಲ್ಲಿ ಹಾರ್ದಿಕ್ ಪಾಂಡ್ಯ ಹಿಡಿದ ಸೂಪರ್ ಕ್ಯಾಚಿಗೆ ಬಲಿಯಾದರು. ನಂತರ ಜಸ್ಪ್ರೀತ್ ಬುಮ್ರಾರ ಬೌಲಿಂಗ್ ಬೆಚ್ಚಿಬಿದ್ದ ಆಂಡ್ರೆ ರಸ್ಸೆಲ್ ಅವರು ಕ್ಲೀನ್ ಬೌಲ್ಡ್ ಆದರು. ಇದಾದ ಬಳಿಕ ಆದೇ ಓವರಿನಲ್ಲಿ ಇಯೊನ್ ಮೋರ್ಗಾನ್ ಅವರಿಗೂ ಕೂಡ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು. ನಂತರ ಬಂದ ನಿಖಿಲ್ ನಾಯಕ್ ಅವರು ಟ್ರೆಂಟ್ ಬೌಲ್ಟ್ ಅವರಿಗೆ ವಿಕೆಟ್ ಒಪ್ಪಿಸಿದರು.

    ನಂತರ ಪ್ಯಾಟ್ ಕಮ್ಮಿನ್ಸ್ ಸ್ವಲ್ಪ ಅಬ್ಬರದ ಆಟವಾಡಿ 12 ಬಾಲಿಗೆ 33 ರನ್ ಚಚ್ಚಿದರು‌. ಇದರಲ್ಲಿ ನಾಲ್ಕು ಭರ್ಜರಿ ಸಿಕ್ಸರ್ ಕೂಡ ಸೇರಿದ್ದವು. ಆದರೆ 18ನೇ ಓವರಿನಲ್ಲಿ ಜೇಮ್ಸ್ ಪ್ಯಾಟಿನ್ಸನ್ ಕಮ್ಮಿನ್ಸ್ ಔಟ್ ಆದರು.

  • 6 ಸಿಕ್ಸರ್ ಸಿಡಿಸಿದ ರೋಹಿತ್ – ಕೋಲ್ಕತ್ತಾಗೆ 196 ರನ್‍ಗಳ ಟಾರ್ಗೆಟ್

    6 ಸಿಕ್ಸರ್ ಸಿಡಿಸಿದ ರೋಹಿತ್ – ಕೋಲ್ಕತ್ತಾಗೆ 196 ರನ್‍ಗಳ ಟಾರ್ಗೆಟ್

    ಅಬುಧಾಬಿ: ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಭರ್ಜರಿ ಬ್ಯಾಟಿಂಗ್‍ನಿಂದ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 196 ದೊಡ್ಡ ಮೊತ್ತದ ಟಾರ್ಗೆಟ್ ನೀಡಿದೆ.

    ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಧೋನಿ ನಂತರ 200 ಸಿಕ್ಸರ್ ಸಿಡಿಸಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕ್ರಿಸ್ ಗೇಲ್ (326) ಮತ್ತು ಎರಡನೇ ಸ್ಥಾನದಲ್ಲಿ ಎಬಿಡಿ ವಿಲಿಯರ್ಸ್ (214) ಮತ್ತು ಮೂರನೇ ಸ್ಥಾನದಲ್ಲಿ ಧೋನಿ (212) ಇದ್ದಾರೆ.

    ಟಾಸ್ ಸೋತು ಬ್ಯಾಟಿಂಗ್ ಬಂದ ಮುಂಬೈ ಇಂಡಿಯನ್ಸ್‍ಗೆ ಆರಂಭಿಕ ಆಘಾತ ನೀಡಿದ ಶಿವಂ ಮಾವಿ, ಪಂದ್ಯದ ಎರಡನೇ ಓವರಿನಲ್ಲಿ ಆರಂಭಿಕ ಕ್ವಿಂಟನ್ ಡಿ ಕಾಕ್ ಒಂದು ರನ್‍ ಗಳಿಗೆ ಔಟ್ ಆದರು. ಆದರೆ ನಂತರ ಒಂದಾದ ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮವಾಗಿ ಬ್ಯಾಟ್ ಬೀಸಿದರು. ಪರಿಣಾಮ ಪವರ್ ಪ್ಲೇ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ ತಂಡ ಒಂದು ವಿಕೆಟ್ ಕಳೆದುಕೊಂಡು 59 ರನ್ ಗಳಿಸಿತು.

    ನೈಟ್ ರೈಡರ್ಸ್ ಬೌಲರ್ ಗಳನ್ನು ಕಾಡಿದ ಈ ಜೋಡಿ ಉತ್ತಮವಾಗಿ ಜೊತೆಯಾಟವಾಡಿತು. ಈ ಮೂಲಕ ಹತ್ತು ಓವರ್ ಮುಕ್ತಾಯದ ವೇಳೆಗೆ ಮುಂಬೈ ಇಂಡಿಯನ್ಸ್ ತಂಡ 94 ರನ್ ಗಳಿಸಿತು. ಆದರೆ 11ನೇ ಓವರಿನಲ್ಲಿ ಇಲ್ಲದ ರನ್ ಕದಿಯಲು ಹೋದ ಸೂರ್ಯಕುಮಾರ್ ಯಾದವ್ 28 ಬಾಲಿಗೆ 47 ರನ್ ಸಿಡಿಸಿ ರನೌಟ್ ಆದರು. ನಂತರ ಬಂದು ರೋಹಿತ್‍ಗೆ ಉತ್ತಮ ಸಾತ್ ನೀಡಿದ ಸೌರಭ್ ತಿವಾರಿ 15ನೇ ಓವರಿನಲ್ಲಿ 21 ರನ್‍ಗಳಿಸಿ ಸುನಿಲ್ ನರೈನ್ ಅವರಿಗೆ ಔಟ್ ಆಗಿ ಹೊರ ನಡೆದರು.

    ನಂತರ ರೋಹಿತ್ ಜೊತೆಯಾಗಿ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು, ಆದರೆ 54 ಎಸೆತದಲ್ಲಿ 80 ರನ್ (3 ಫೋರ್, 6 ಸಿಕ್ಸ್) ಸಿಡಿಸಿ ಆಡುತ್ತಿದ್ದ ರೋಹಿತ್ ಶರ್ಮಾ ಶಿವಂ ಮಾವಿ ಅವರ ಬೌಲಿಂಗ್‍ನಲ್ಲಿ ಔಟ್ ಆದರು. ನಂತರ ಅಬ್ಬರಿಸುವ ಮುನ್ಸೂಚನೆ ನೀಡಿದ್ದ ಪಾಂಡ್ಯ ಹಿಟ್ ವಿಕೆಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಕೀರನ್ ಪೊಲಾರ್ಡ್ ಮತ್ತು ಕೃನಾಲ್ ಪಾಂಡ್ಯ ಸೇರಿ ಮುಂಬೈ ತಂಡವನ್ನು 190ರ ಗಡಿ ದಾಟಿಸಿದರು.

  • 2 ಸ್ಟಂಪ್, 2 ಕ್ಯಾಚ್ ಕೀಪಿಂಗ್‍ನಲ್ಲೂ ಚೆನ್ನೈ ಕಾಡಿದ ಸ್ಯಾಮ್ಸನ್ – ಸಿಎಸ್‍ಕೆಗೆ ಮೊದಲ ಸೋಲು

    2 ಸ್ಟಂಪ್, 2 ಕ್ಯಾಚ್ ಕೀಪಿಂಗ್‍ನಲ್ಲೂ ಚೆನ್ನೈ ಕಾಡಿದ ಸ್ಯಾಮ್ಸನ್ – ಸಿಎಸ್‍ಕೆಗೆ ಮೊದಲ ಸೋಲು

    – ಕ್ರೀಸ್‍ನಲ್ಲಿದ್ದೂ ಮೋಡಿ ಮಾಡದ ಧೋನಿ, ಡು ಪ್ಲೆಸಿಸ್ ಅಬ್ಬರ ವ್ಯರ್ಥ

    ಅಬುಧಾಬಿ: ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಉತ್ತಮ ಬೌಲಿಂಗ್ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಐಪಿಎಲ್-2020ಯಲ್ಲಿ ಶುಭಾರಂಭ ಮಾಡಿದೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್ ಮತ್ತು ಸ್ಟೀವ್ ಸ್ಮಿತ್ ಅವರ ಉತ್ತಮ ಬ್ಯಾಟಿಂಗ್ ಹಾಗೂ ಕೊನೆಯಲ್ಲಿ ಜೋಫ್ರಾ ಆರ್ಚರ್ ಅವರ ಮಿಂಚಿನಂತ ಹೊಡೆತಗಳ ಸಲುವಾಗಿ ಭರ್ಜರಿ 217 ರನ್‍ಗಳ ಟಾರ್ಗೆಟ್ ನೀಡಿತ್ತು. ಆದರೆ ಇದನ್ನು ಬೆನ್ನಟ್ಟಿದ ಚೆನ್ನೈ ತಂಡ ರಾಯಲ್ಸ್ ತಂಡದ ಬಿಗಿ ಬೌಲಿಂಗ್ ದಾಳಿಗೆ ನಲುಗಿ ನಿಗದಿತ 20 ಓವರಿನಲ್ಲಿ ಕೇವಲ 199 ರನ್ ಗಳಿಸಿ 16 ರನ್‍ಗಳಿಂದ ಸೋಲುಂಡಿತು.

    ಬ್ಯಾಟಿಂಗ್ ಮೂಲಕ ಚೆನ್ನೈ ತಂಡವನ್ನು ಕಾಡಿದ್ದ ಸಂಜು ಸ್ಯಾಮ್ಸನ್, ಕೀಪಿಂಗ್‍ನಲ್ಲೂ ಮೋಡಿ ಮಾಡಿದರು. ಇಂದಿನ ಪಂದ್ಯದಲ್ಲಿ ಎರಡು ಸ್ಟಂಪ್ ಮತ್ತು ಎರಡು ಕ್ಯಾಚ್ ಹಿಡಿದು ಸಿಎಸ್‍ಕೆ ತಂಡವನ್ನು ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಫಾಫ್ ಡು ಪ್ಲೆಸಿಸ್ ಮತ್ತು ಕೇದಾರ್ ಜಾಧವ್ ಅವರನ್ನು ಕ್ಯಾಚ್ ಹಿಡಿದು ಔಟ್ ಮಾಡಿದರೆ, ಸ್ಯಾಮ್ ಕರ್ರನ್ ಮತ್ತು ರುತುರಾಜ್ ಗಾಯಕವಾಡ್ ಅವರನ್ನು ಸ್ಟಂಪ್ ಮಾಡಿ ಪೆವಿಲಿಯನ್‍ಗೆ ಅಟ್ಟಿದರು.

    ಚೆನ್ನೈ ಉತ್ತಮ ಆರಂಭ ನೀಡಿದ ಮುರಳಿ ವಿಜಯ್ ಮತ್ತು ಶೇನ್ ವ್ಯಾಟ್ಸನ್, ಪವರ್ ಪ್ಲೇ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ಕಳೆದು ಕೊಳ್ಳದೇ 53 ರನ್ ಸೇರಿದರು. ಆದರೆ ಆರನೇ ಓವರಿನಲ್ಲಿ ಲೆಗ್ ಸೈಡ್ ಕಡೆ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಶೇನ್ ವ್ಯಾಟ್ಸನ್ (21 ಎಸೆತ, 33 ರನ್) ರಾಹುಲ್ ತೇವಟಿಯಾ ಅವರಿಗೆ ಬೌಲ್ಡ್ ಆದರು. ನಂತರ ಶ್ರೇಯಾಸ್ ಗೋಪಾಲ್ ಅವರ ಓವರಿನಲ್ಲಿ 21 ರನ್ ಗಳಿಸಿ ಆಡುತ್ತಿದ್ದ ಮುರುಳಿ ವಿಜಯ್ ಕೂಡ ಓಟ್ ಆದರು.

    ಮುರುಳಿ ವಿಜಯ್ ನಂತರ ಬಂದ ಸ್ಯಾಮ್ ಕರ್ರನ್ ಅವರು ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಅಬ್ಬರಿಸುವ ಮುನ್ಸೂಚನೆ ನೀಡಿದರು. ಆದರೆ ಮುಂದೆ ಬಂದು ಹೊಡೆಯುವ ಪ್ರಯತ್ನದಲ್ಲಿ ತೇವಟಿಯಾ ಬೌಲಿಂಗ್‍ನಲ್ಲಿ ಸ್ಟಂಪಿಂಗ್ ಬಲೆಗೆ ಬಿದ್ದರು. ಇದಾದ ನಂತರ ಬಂದ ರುತುರಾಜ್ ಗಾಯಕವಾಡ್ ಅವರು ಸೊನ್ನೆ ಸುತ್ತಿ ಬಂದ ದಾರಿ ಸುಂಕವಿಲ್ಲ ಎಂಬಂತೆ ವಾಪಸ್ ಹೋದರು.

    ಈ ವಿಕೆಟ್ ನಂತರ ಜೊತೆಯಾದ ಫಾಫ್ ಡು ಪ್ಲೆಸಿಸ್ ಮತ್ತು ಕೇದಾರ್ ಜಾಧವ್ ಅವರು ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ಆದರೆ 16 ಬಾಲಿನಲ್ಲಿ 22 ರನ್ ಹೊಡೆದು ಆಡುತ್ತಿದ್ದ ಕೇದಾರ್ ಜಾಧವ್ ಅವರು ಟಾಮ್ ಕುರ್ರನ್ ಅವರ ಬೌಲಿಂಗ್‍ನಲ್ಲಿ ಸಂಜು ಸ್ಯಾಮ್ಸನ್ ಅವರು ಹಿಡಿದ ಸೂಪರ್ ಕ್ಯಾಚ್‍ಗೆ ಬಲಿಯಾದರು. ನಂತರ ಪ್ಲೆಸಿಸ್ (37 ಎಸೆತ, 72 ರನ್) ಅವರು ಓಟ್ ಆದರು. ಆದರೆ ಕೊನೆಯ ಬಾಲ್‍ವರೆಗೂ ಕ್ರೀಸಿನಲ್ಲಿದ್ದ ಧೋನಿ ಯಾವುದೇ ಮೋಡಿ ಮಾಡಲಿಲ್ಲ.

  • ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ, 2 ಬಾಲ್ ಆಡಿದ ನಂತ್ರ ವಿಶ್ವಾಸ ಹೆಚ್ಚಾಯ್ತು: ಪಡಿಕಲ್

    ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ, 2 ಬಾಲ್ ಆಡಿದ ನಂತ್ರ ವಿಶ್ವಾಸ ಹೆಚ್ಚಾಯ್ತು: ಪಡಿಕಲ್

    ಅಬುಧಾಬಿ: ಪಂದ್ಯಕ್ಕೂ ಮುನ್ನ ಒತ್ತಡದಲ್ಲಿ ಇದ್ದೆ. ಆದರೆ ಎರಡು ಬಾಲ್ ಆಡಿದ ನಂತರ ವಿಶ್ವಾಸ ಜಾಸ್ತಿ ಆಯ್ತು ಎಂದು ಆರ್‍ಸಿಬಿ ತಂಡ ಉದಯೋನ್ಮುಖ ಆಟಗಾರ ದೇವದತ್ ಪಡಿಕಲ್ ಹೇಳಿದ್ದಾರೆ.

    ಸೋಮವಾರ ರಾತ್ರಿ ನಡೆದ ಐಪಿಎಲ್ ಮೂರನೇ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಸೂಪರ್ ಆಗಿ ಬ್ಯಾಟ್ ಬೀಸಿದ ಕನ್ನಡಿಗ ದೇವದತ್ ಪಡಿಕಲ್ ಒಂದು ಮ್ಯಾಚಿನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಆದರೆ ಅವರು ಪಂದ್ಯಕ್ಕೂ ಮುನ್ನ ಬಹಳ ನರ್ವಸ್ ಆಗಿದ್ದೆ ಎಂದು ಚಹಲ್ ಜೊತೆಗಿನ ಮಾತುಕತೆಯಲ್ಲಿ ಹೇಳಿದ್ದಾರೆ.

    ಪಂದ್ಯ ಮುಗಿದ ಬಳಿಕ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ಜೊತೆ ಪಡಿಕಲ್ ಮಾತನಾಡಿದ್ದಾರೆ. ಈ ವೇಳೆ ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ. ಸಂಜೆ ಊಟದ ನಂತರ ರೂಮಿನಲ್ಲೂ ಕೂಡ ತುಂಬ ಗೊಂದಲದಲ್ಲಿ ಓಡಾಡುತ್ತಿದ್ದೆ. ಆದರೆ ಬ್ಯಾಟಿಂಗ್ ಮಾಡಲು ಬಂದಾಗ ಎರಡು ಬಾಲ್ ಆಡಿದ ನಂತರ ವಿಶ್ವಾಸ ಹೆಚ್ಚಾಯ್ತು. ಇದಾದ ನಂತರ ಚೆನ್ನಾಗಿ ಆಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನು ಓದಿ: ಆರ್‌ಸಿಬಿ ಡೆಬ್ಯು ಗೆಲುವಿನೊಂದಿಗೆ ಎಲೈಟ್ ಪಟ್ಟಿಗೆ ಕೊಹ್ಲಿ ಸೇರ್ಪಡೆ

    ಇದೇ ವೇಳೆ ವಿರಾಟ್, ಫಿಂಚ್ ಮತ್ತು ಎಬಿಡಿ ಜೊತೆ ಆಟವಾಡುತ್ತಿರುವ ಅನುಭವ ಹಂಚಿಕೊಂಡಿರುವ ಪಡಿಕಲ್, ಕಳೆದ ಒಂದು ತಿಂಗಳಿನಿಂದ ನಾವು ಅಭ್ಯಾಸ ಮಾಡುತ್ತಿದ್ದೇವೆ. ಈ ವೇಳೆ ವಿರಾಟ್ ಬಹಳ ಚೆನ್ನಾಗಿ ಬ್ಯಾಟ್ ಮಾಡುತ್ತಿದ್ದರು. ಅಲ್ಲಿ ನಮಗೆ ಕಲಿಯುವುದಕ್ಕೆ ಬಹಳ ಇತ್ತು. ಕೊಹ್ಲಿ ಅವರನ್ನು ನಾನು ಪ್ರಶ್ನೆ ಮಾಡುತ್ತಲೇ ಇರುತ್ತಿದ್ದೆ. ಈ ಪಂದ್ಯದಲ್ಲಿ ನಾನು ಫಿಂಚ್ ಅವರ ಜೊತೆ ಆಟವಾಡಿದೆ. ಈ ವೇಳೆ ಅವರು ನನಗೆ ಸ್ಟ್ರೈಕ್ ನೀಡುತ್ತಿದ್ದರು. ಇದರಿಂದ ನನಗೆ ಬಹಳ ಖುಷಿ ಆಯ್ತು ಎಂದು ಪಡಿಕಲ್ ತಿಳಿಸಿದ್ದಾರೆ.

    ಸೋಮವಾರ ದುಬೈ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 20 ವರ್ಷದ ಯುವ ಆರ್‍ಸಿಬಿ ಆಟಗಾರ ಪಡಿಕ್ಕಲ್ 36 ಎಸೆತದಲ್ಲಿ ಅರ್ಧಶತಕ ಚಚ್ಚಿ ಅಂತಿಮವಾಗಿ 56 ರನ್ ಹೊಡೆದು ಔಟಾಗಿದ್ದರು. 42 ಎಸೆತ ಎದುರಿಸಿದ ಇನ್ನಿಂಗ್ಸ್‍ನಲ್ಲಿ 8 ಬೌಂಡರಿ ಸಿಡಿಸಿದ್ದರು. ಈ ಮೂಲಕ ತಾನು ಆಡಿದ ಪ್ರಥಮ ದರ್ಜೆ, ಲಿಸ್ಟ್ ಎ, ಟಿ 20, ಐಪಿಎಲ್‍ನ ಎಲ್ಲ ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದ ಅಪರೂಪದ ಆಟಗಾರನೆಂಬ ಹೆಗ್ಗಳಿಕೆಗೆ ದೇವದತ್ ಪಡಿಕಲ್ ಪಾತ್ರವಾಗಿದ್ದಾರೆ.

  • ಕನ್ನಡದಲ್ಲಿ ಅಸಭ್ಯ ಪದ ಬಳಸಿದ ಕೆಎಲ್ ರಾಹುಲ್- ವಿಡಿಯೋ ವೈರಲ್

    ಕನ್ನಡದಲ್ಲಿ ಅಸಭ್ಯ ಪದ ಬಳಸಿದ ಕೆಎಲ್ ರಾಹುಲ್- ವಿಡಿಯೋ ವೈರಲ್

    ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ತಂಡದ ನಾಯಕತ್ವ ವಹಿಸಿ ಮೊದಲ ಬಾರಿಗೆ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದಾರೆ. ಅಂಪೈರಿಂಗ್ ದೋಷಗಳು ಹಾಗೂ ಪಂದ್ಯದಲ್ಲಿ ಲಭಿಸಿದ ಹಲವು ಟ್ವಿಸ್ಟ್ ಗಳ ನಡುವೆ ಸೂಪರ್ ಓವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಪಡೆದಿದೆ. ಇದರ ನಡುವೆಯೇ ಫೀಲ್ಡಿಂಗ್ ವೇಳೆ ಕೆಎಲ್ ರಾಹುಲ್ ಆಡಿದ ಮಾತಿನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರಾಹುಲ್ ಫೀಲ್ಡಿಂಗ್ ಮಾಡುತ್ತಿದ್ದಾಗ ತಂಡದ ಆಟಗಾರರನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡುತ್ತಾ, ‘ಮುಂದೆ ಬರೋ…’ ಎಂದು ಅಸಭ್ಯ ಪದವನ್ನು ಬಳಸಿರುವುದು ಸ್ಟಂಪ್ ಮೈಕ್‍ನಲ್ಲಿ ಸೆರೆಯಾಗಿದೆ. ಆದರೆ ರಾಹುಲ್ ಯಾರನ್ನು ಉದ್ದೇಶಿಸಿ ಈ ಪದ ಬಳಕೆ ಮಾಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕರ್ನಾಟಕದ ಆಟಗಾರರಾದ ಕರುಣ್ ನಾಯರ್, ಮಯಾಂಕ್ ಅಗರ್ವಾಲ್ ಮತ್ತು ಕೃಷ್ಣಪ್ಪ ಗೌತಮ್ ನಿನ್ನೆ ನಡೆದ ಪಂದ್ಯದಲ್ಲಿ ಆಡಿದ್ದರು. ಆದ್ದರಿಂದ ಈ ಆಟಗಾರರಲ್ಲಿ ಒಬ್ಬರನ್ನು ಉದ್ದೇಶಿಸಿ ರಾಹುಲ್ ನಿಂದಿಸಿರಬಹುದು ಎನ್ನಲಾಗಿದೆ. ಇದನ್ನೂ ಓದಿ: ಅಂಪೈರ್‌ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೊಡಿ: ಸೆಹ್ವಾಗ್

    ಈ ಬಾರಿ ಐಪಿಎಲ್ ಟೂರ್ನಿ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪ್ರೇಕ್ಷಕರಿಲ್ಲದ ಕಾರಣ ಹೆಚ್ಚಿನ ಶಬ್ದವಿರುವುದಿಲ್ಲ. ಹೀಗಾಗಿ ರಾಹುಲ್ ಸ್ಟಂಪ್ಸ್ ನಿಂದ ದೂರ ನಿಂತಿದ್ದರು. ಅವರು ಆಡಿದ ಮಾತುಗಳು ಸ್ಟಂಪ್ ಮೈಕ್‍ನಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಆಟಗಾರರೊಂದಿಗೆ ಕೆಎಲ್ ರಾಹುಲ್ ಕನ್ನಡದಲ್ಲಿ ಮಾತನಾಡುತ್ತಿರುವುದ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ರಾಹುಲ್ ವಿದೇಶಿ ಆಟಗಾರರನ್ನು ಕನ್ನಡಲ್ಲೇ ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ಮಯಾಂಕ್ ಅಗರ್ವಾಲ್ ಕಿಚ್ಚಿನ ಆಟಕ್ಕೆ ಕಿಚ್ಚನ ಮೆಚ್ಚುಗೆ

    ಉಳಿದಂತೆ ನಿನ್ನೆಯ ಪಂದ್ಯದಲ್ಲಿ ಕೆಎಲ್ ರಾಹುಲ್ ವಿಶಿಷ್ಠ ಹೆಗ್ಗಳಿಕೆ ಪಡೆದಿದ್ದು, ತಂಡದ ನಾಯಕ, ವಿಕೆಟ್ ಕೀಪರ್ ಮತ್ತು ಆರಂಭಿಕನಾಗಿ ಆಡಿದ ಹೆಗ್ಗಳಿಕೆ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಗ್ರಿಲ್‍ಕ್ರಿಸ್ಟ್ (74 ಪಂದ್ಯ), ಬ್ರೆಂಡನ್ ಮೆಕಲಮ್ (4 ಪಂದ್ಯ), ಕುಮಾರ ಸಂಗಕ್ಕಾರ (2 ಪಂದ್ಯ) ಮತ್ತು ಪಾರ್ಥಿವ್ ಪಟೇಲ್ (1 ಪಂದ್ಯ) ಸ್ಥಾನ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಪಂಜಾಬ್ ತಂಡವನ್ನು ರಾಹುಲ್ ಮುನ್ನಡೆಸುತ್ತಿರುವುದರಿಂದ ಮೆಕಲಮ್ ಸಾಧನೆಯನ್ನು ಹಿಂದಿಕ್ಕಲಿದ್ದಾರೆ. ಇದನ್ನೂ ಓದಿ: ಕೊಹ್ಲಿ Vs ವಾರ್ನರ್, ಬೇರ್ಸ್ಟೋವ್ Vs ಎಬಿಡಿ- ಆರ್‌ಸಿಬಿ, ಹೈದರಾಬಾದ್ ತಂಡಗಳ ಬಲಾಬಲ

  • 6 ರನ್‌ಗೆ 2 ವಿಕೆಟ್ ಪತನವಾದ್ರೂ ಚೆನ್ನೈ ಸೂಪರ್ ಚೇಸಿಂಗ್

    6 ರನ್‌ಗೆ 2 ವಿಕೆಟ್ ಪತನವಾದ್ರೂ ಚೆನ್ನೈ ಸೂಪರ್ ಚೇಸಿಂಗ್

    – 5 ವಿಕೆಟ್ ಗಳಿಂದ ಗೆದ್ದ ಚೆನ್ನೈ
    – ರಾಯುಡು, ಡುಪ್ಲೆಸಿಸ್ ಅರ್ಧಶತಕ

    ಅಬುಧಾಬಿ: ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಅಂಬಾಟಿ ರಾಯುಡು ಮತ್ತು ಡುಪ್ಲೆಸಿಸ್ ಶತಕದ ಜೊತೆಯಾಟದಿಂದ ಚೆನ್ನೈ ತಂಡ ಮುಂಬೈ ವಿರುದ್ದ 5 ವಿಕೆಟ್ ಗಳಿಂದ ಜಯಗಳಿಸಿದೆ. ಈ ಮೂಲಕ ಕಳೆದ ಬಾರಿಯ ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿದೆ.

    ಗೆಲ್ಲಲು 163 ರನ್ ಗಳ ಗುರಿಯನ್ನು ಪಡೆದ ಚೆನ್ನೈ 19.2 ಓವರ್ ಗಳಲ್ಲಿ 166 ರನ್ ಹೊಡೆಯುವ ಮೂಲಕ ಐಪಿಎಲ್ ನಲ್ಲಿ ಶುಭಾರಂಭ ಮಾಡಿದೆ.

    ಆರಂಭದಲ್ಲಿ 6 ರನ್ ಗಳಿಗೆ 2ವಿಕೆಟ್ ಕಳೆದುಕೊಂಡರೂ ರಾಯಡು ಮತ್ತು ಡು ಪ್ಲೆಸಿಸ್ ಮೂರನೇ ವಿಕೆಟಿಗೆ 115 ರನ್ ಗಳ ಜೊತೆಯಾಟ ಗೆಲುವಿಗೆ ಭದ್ರ ಅಡಿಪಾಯ ಹಾಕಿತು.

    ರಾಯುಡು 71 ರನ್ (48 ಎಸೆತ, 6 ಬೌಂಡರಿ, 3 ಸಿಕ್ಸರ್ ) ಹೊಡೆದರೆ ಡುಪ್ಲೆಸಿಸ್ ಔಟಾಗದೇ 58ರನ್ (44 ಎಸೆತ, 6 ಬೌಂಡರಿ), ಜಡೇಜಾ 10 ರನ್, ಸ್ಫೋಟಕ ಬ್ಯಾಟಿಂಗ್ ಮಾಡಿದ ಸ್ಯಾಮ್ ಕರ್ರನ್ 28 ರನ್ (6 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದರು. ಧೋನಿ 2 ಎಸೆತ ಎದುರಿಸಿದದರೂ ಯಾವುದೇ ರನ್ ಹೊಡೆಯಲಿಲ್ಲ.

    ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟ್ ಮಾಡಿದ ಮುಂಬೈ 9 ವಿಕೆಟ್ ನಷ್ಟಕ್ಕೆ 162 ರನ್ ಹೊಡೆಯಿತು.

    ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಹಾಗೂ ದಿ ಕಾಕ್ ಫೀಲ್ಡಿಗಿಳಿದರು. ರೋಹಿತ್ ಶರ್ಮಾ ಕೇವಲ 10 ಬಾಲ್‍ಗೆ 12 ರನ್ ಗಳಿಸುವ ಮೂಲಕ ಕ್ಯಾಚ್ ನೀಡಿ ಪಿಯೂಶ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು. ನಂತರ ಡಿ ಕಾಕ್ 20 ಬಾಲ್‍ಗೆ 33 ರನ್ ಗಳಿಸಿ ಔಟಾದರು.

    ಆರಂಭದಲ್ಲಿ ಅಬ್ಬರಿಸಿದ್ದ ಮುಂಬೈ ಇಂಡಿಯನ್ಸ್ ತಂಡ ನಂತರ ಅಷ್ಟೇ ವೇಗದಲ್ಲಿ ವಿಕೆಟ್ ಕಳೆದುಕೊಂಡಿತು. ಕುಕ್ ಬಳಿಕ ಬಂದ ಸೂರ್ಯ ಕುಮಾರ್ ಯಾದವ್ 16 ಬಾಲ್‍ಗೆ 17 ರನ್ ಗಳಿಸಿ ಕ್ಯಾಚ್ ನೀಡಿದರು. ತಿವಾರಿ 31 ಬಾಲ್‍ಗೆ 42ರನ್ ಗಳಿಸಿದರೂ ಅರ್ಧ ಶತಕ ಬಾರಿಸಲು ಸಾಧ್ಯವಾಗಲಿಲ್ಲ. ಹಾರ್ದಿಕ್ ಪಾಂಡ್ಯಾ 10 ಬಾಲ್‍ಗೆ 14ರನ್ ಗಳಿಸಿ ಔಟಾದರೆ, ಪೊಲಾರ್ಡ್ 14 ಬಾಲ್‍ಗೆ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

    ಬೌಲರ್ ಗಳ ಪೈಕಿ ಲುಂಗಿ ಎನ್‍ಗಿಡಿ 3, ದೀಪಕ್ ಚಹರ್ ಹಾಗೂ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಪಿಯೂಶ್ ಚಾವ್ಲಾ, ಕರಣ್ ತಲಾ ಒಂದು ವಿಕೆಟ್ ಕಿತ್ತರು.