Tag: abu dhabi

  • ಫೆ.14 ಕ್ಕೆ ಬಿಎಪಿಎಸ್‌ ಹಿಂದೂ ದೇವಾಲಯ ಉದ್ಘಾಟನೆ; ಎಲ್ಲಿ? ದೇವಸ್ಥಾನದ ವೈಶಿಷ್ಟ್ಯವೇನು?

    ಫೆ.14 ಕ್ಕೆ ಬಿಎಪಿಎಸ್‌ ಹಿಂದೂ ದೇವಾಲಯ ಉದ್ಘಾಟನೆ; ಎಲ್ಲಿ? ದೇವಸ್ಥಾನದ ವೈಶಿಷ್ಟ್ಯವೇನು?

    2024 ರ ವರ್ಷ ಹಿಂದೂಗಳಿಗೆ ಹರ್ಷ ತಂದಿದೆ. ಹೊಸ ವರ್ಷದ ಮೊದಲ ತಿಂಗಳಲ್ಲೇ ಅಯೋಧ್ಯೆ ರಾಮಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠಾಪನೆಯ ಸಂತಸ ಒಂದುಕಡೆಯಾದರೆ, 2ನೇ ತಿಂಗಳಲ್ಲಿ ಮುಸ್ಲಿಮರ ನೆಲದಲ್ಲಿ ಮೊಟ್ಟ ಮೊದಲ ಐತಿಹಾಸಿಕ ಹಿಂದೂ ದೇವಾಲಯ ಲೋಕಾರ್ಪಣೆ ಕಣ್ತುಂಬಿಕೊಳ್ಳುವ ಸೌಭಾಗ್ಯ ಹಿಂದೂಗಳಿಗೆ ಒಲಿದು ಬಂದಿದೆ.

    ಹೌದು, ಅಯೋಧ್ಯೆಯಲ್ಲಿ ರಾಮಮಂದಿರ ಶಂಕುಸ್ಥಾಪನೆ ನಡೆದ ವಾರಗಳ ನಂತರ, ಫೆಬ್ರವರಿ 14 ರಂದು ಹೊರದೇಶದಲ್ಲಿ ಮತ್ತೊಂದು ಮಹತ್ವದ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಮುಸ್ಲಿಮರ ನೆಲದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಮೊದಲ ಬಿಎಪಿಎಸ್ ಹಿಂದೂ ದೇವಾಲಯ (BAPS Hindu Temple) ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ದೇವಾಲಯವು ಭಾರತದ ಹೊರಗಿನ ಅತ್ಯಂತ ದೊಡ್ಡ ಮತ್ತು ಅತ್ಯಂತ ಸುಂದರವಾದ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಪಶ್ಚಿಮ ಏಷ್ಯಾದ ಅತಿದೊಡ್ಡ ಹಿಂದೂ ದೇವಾಲಯವೂ ಹೌದು. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆ ವೇಳೆ ಕನ್ನಡದ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡು ಪ್ರಸಾರ

    ಅಷ್ಟಕ್ಕೂ ಅದು ಯಾವ ದೇವಾಲಯ? ಉದ್ಘಾಟನೆಗೊಳ್ಳುತ್ತಿರುವುದು ಎಲ್ಲಿ? ದೇವಾಲಯದ ವೈಶಿಷ್ಟ್ಯವೇನು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.

    ಅಬುಧಾಬಿಯಲ್ಲಿ ಹಿಂದೂ ದೇವಾಲಯ
    ಅರಬ್ ಸಂಯುಕ್ತ ಒಕ್ಕೂಟದ (UAE) ಅಬುಧಾಬಿಯಲ್ಲಿ ಇತಿಹಾಸದಲ್ಲೇ ಮೊದಲ ದೇವಾಲಯ ಉದ್ಘಾಟನೆಯಾಗುತ್ತಿದೆ. ಬಿಎಪಿಎಸ್ ಹಿಂದೂ ದೇವಾಲಯವು ಅಬು ಮುರೇಖಾ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಹಿಂದೂ ದೇವಾಲಯ ಇದೇ ಫೆಬ್ರವರಿ 14 ರಂದು ಲೋಕಾರ್ಪಣೆಗೊಳ್ಳಲಿದೆ. ಇದನ್ನೂ ಓದಿ: Ayodhya Ram Mandir: ರಾಮಮಂದಿರಕ್ಕೆ ಹರಿದುಬಂದ ದೇಣಿಗೆ ಎಷ್ಟು? ಅತಿ ಹೆಚ್ಚು ದೇಣಿಗೆ ಕೊಟ್ಟವರ‍್ಯಾರು ಗೊತ್ತಾ?

    ಇಂದಿರಾ ಗಾಂಧಿ ಬಳಿಕ ಯುಎಇಗೆ ಭೇಟಿ ನೀಡಿದ ಮೊದಲ ಪ್ರಧಾನಿ
    2015 ರಲ್ಲಿ ಪ್ರಧಾನಿ ಮೋದಿಯವರು ಯುಎಇಗೆ ಮೊದಲ ಭೇಟಿ ನೀಡಿದ ಸಂದರ್ಭದಲ್ಲಿ, ಯುಎಇ ಅಬುಧಾಬಿಯಲ್ಲಿ (Abu Dhabi) ದೇವಾಲಯವನ್ನು ನಿರ್ಮಿಸಲು ಜಾಗ ಮಂಜೂರು ಮಾಡಲು ನಿರ್ಧರಿಸಲಾಯಿತು. ಪ್ರಧಾನಮಂತ್ರಿಯವರ ಭೇಟಿಯು ರಾಜತಾಂತ್ರಿಕವಾಗಿ ನಿರ್ಣಾಯಕವಾಗಿತ್ತು. ಏಕೆಂದರೆ ಅವರು ಇಂದಿರಾ ಗಾಂಧಿಯವರ ನಂತರ 34 ವರ್ಷಗಳಲ್ಲಿ ಈ ಕೊಲ್ಲಿ ರಾಷ್ಟ್ರಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ.

    700 ಕೋಟಿ ರೂ. ವೆಚ್ಚ
    ಫೆಬ್ರವರಿ 2018 ರಲ್ಲಿ ಪ್ರಧಾನ ಮೋದಿ ಅವರು ದೇವಾಲಯದ ಯೋಜನೆ ಉದ್ಘಾಟಿಸಿದ್ದರು. ಡಿಸೆಂಬರ್ 2019 ರಲ್ಲಿ ನಿರ್ಮಾಣ ಪ್ರಾರಂಭವಾಯಿತು. ದೇವಾಲಯವನ್ನು 5.4 ಹೆಕ್ಟೇರ್ ಭೂಮಿ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. 700 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಿಸಲಾಗಿದೆ.

    ದೇವಸ್ಥಾನದ ವೈಶಿಷ್ಟ್ಯ ಏನು?
    ವಿಶಾಲವಾದ ಸಂಕೀರ್ಣದಲ್ಲಿ ದೇವಾಲಯ ಅಷ್ಟೇ ಅಲ್ಲ, ದೊಡ್ಡ ಆಂಫಿಥಿಯೇಟರ್, ಗ್ಯಾಲರಿ, ಗ್ರಂಥಾಲಯ, ಫುಡ್ ಕೋರ್ಟ್, ಮಜ್ಲಿಸ್ ಮತ್ತು 5,000 ಜನರಿಗೆ ಸ್ಥಳಾವಕಾಶವಿರುವ ಎರಡು ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಉದ್ಯಾನಗಳು ಮತ್ತು ಮಕ್ಕಳಿಗಾಗಿ ಆಟದ ಮೈದಾನ ಕೂಡ ಮಾಡಲಾಗಿದೆ. ಇದು ಸಂಕೀರ್ಣವಾಗಿ ವಿನ್ಯಾಸಗೊಳಿಸಲಾದ ಗುಲಾಬಿ ಮರಳುಗಲ್ಲು ಮತ್ತು ಅಮೃತಶಿಲೆಯ ಮುಂಭಾಗವನ್ನು ಏಳು ಗೋಪುರಗಳೊಂದಿಗೆ ಸಂಯೋಜಿಸುತ್ತದೆ. ಅದು ದೇಶದ ಪ್ರತಿಯೊಂದು ಎಮಿರೇಟ್ಸ್ ಅನ್ನು ಪ್ರತಿನಿಧಿಸುತ್ತದೆ. ದೇವಾಲಯವನ್ನು 40,000 ಕ್ಯೂಬಿಕ್ ಮೀಟರ್ ಅಮೃತಶಿಲೆ, 1,80,000 ಘನ ಮೀಟರ್ ಮರಳುಗಲ್ಲು ಮತ್ತು 18 ಲಕ್ಷ ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ. ಇದನ್ನೂ ಓದಿ: ಸರಯೂ ನದಿ ತಟದಲ್ಲಿ 1008 ಯಜ್ಞ ಮಂಟಪ ನಿರ್ಮಾಣ – 21 ಸಾವಿರ ಯತಿಗಳಿಂದ ರಾಮನಾಮ ಮಹಾ ಯಜ್ಞ

    ದೇವಾಲಯದ ವಿನ್ಯಾಸವು ವೈದಿಕ ವಾಸ್ತುಶಿಲ್ಪ ಮತ್ತು ಶಿಲ್ಪಗಳಿಂದ ಸ್ಫೂರ್ತಿ ಪಡೆದಿದೆ. ಅನೇಕ ಪ್ರತಿಮೆಗಳು ಮತ್ತು ಕೆತ್ತನೆಗಳನ್ನು ಭಾರತದ ಕುಶಲಕರ್ಮಿಗಳು ಮಾಡಿದ್ದಾರೆ. ಅವುಗಳನ್ನು ಅಬುಧಾಬಿಗೆ ರವಾನಿಸಲಾಗಿದೆ. 2024 ರ ಫೆಬ್ರುವರಿ 14 ರಂದು ಪವಿತ್ರವಾದ ವಸಂತ ಪಂಚಮಿಯಂದು ದೇವಾಲಯದ ಪವಿತ್ರೀಕರಣವನ್ನು ನಿಗದಿಪಡಿಸಲಾಗಿದೆ.

    ಬಿಎಪಿಎಸ್ ಎಂದರೇನು?
    ಬಿಎಪಿಎಸ್ ಎಂದರೆ ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್). 1700 ರ ದಶಕದ ಉತ್ತರಾರ್ಧದಲ್ಲಿ ವಾಸಿಸುತ್ತಿದ್ದ ಧಾರ್ಮಿಕ ಮುಖಂಡ ಭಗವಾನ್ ಸ್ವಾಮಿನಾರಾಯಣ ಅವರ ಹೆಸರನ್ನು ಈ ಸಂಸ್ಥೆಗೆ ಇಡಲಾಗಿದೆ. ಇದು ವೇದಗಳಲ್ಲಿ ಬೇರುಗಳನ್ನು ಹೊಂದಿರುವ ಸಾಮಾಜಿಕ-ಆಧ್ಯಾತ್ಮಿಕ ಹಿಂದೂ ನಂಬಿಕೆಯಾಗಿದೆ. ಇದನ್ನು 18 ನೇ ಶತಮಾನದ ಕೊನೆಯಲ್ಲಿ ಭಗವಾನ್ ಸ್ವಾಮಿನಾರಾಯಣ (1781-1830) ಪ್ರವರ್ತಿಸಿದರು. 1907 ರಲ್ಲಿ ಶಾಸ್ತ್ರೀಜಿ ಮಹಾರಾಜ್ (1865-1951) ಸ್ಥಾಪಿಸಿದರು.

    ಬಿಎಪಿಎಸ್ ಪ್ರಪಂಚದಾದ್ಯಂತ 3,850 ಕೇಂದ್ರಗಳನ್ನು ಹೊಂದಿದೆ. ಆ ಮೂಲಕ 1,100 ದೇವಾಲಯಗಳನ್ನು ನಡೆಸುತ್ತಿದೆ. ಈ ಸಂಸ್ಥೆಯು ನ್ಯೂಜೆರ್ಸಿಯ ರಾಬಿನ್ಸ್ವಿಲ್ಲೆಯಲ್ಲಿರುವ ಅಕ್ಷರಧಾಮದ ಹಿಂದೆಯೂ ಇತ್ತು. ಇದು ಭಾರತದ ಹೊರಗೆ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಇದನ್ನೂ ಓದಿ: ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ

    ನ್ಯೂಯಾರ್ಕ್ ನಗರದ ದಕ್ಷಿಣಕ್ಕೆ 99 ಕಿಲೋಮೀಟರ್ ದೂರದಲ್ಲಿರುವ ಅಕ್ಷರಧಾಮ ಮಹಾಮಂದಿರವು ನ್ಯೂಜೆರ್ಸಿಯಲ್ಲಿ 185 ಎಕರೆ ಪ್ರದೇಶದಲ್ಲಿದೆ. ಅಲ್ಲದೇ 191 ಅಡಿ ಎತ್ತರವಿದೆ. ಬಲ್ಗೇರಿಯಾ, ಇಟಲಿ, ಗ್ರೀಸ್, ಟರ್ಕಿ ಮತ್ತು ಭಾರತ ಸೇರಿದಂತೆ ಪ್ರಪಂಚದಾದ್ಯಂತ 29 ಕ್ಕೂ ಹೆಚ್ಚು ವಿವಿಧ ಸ್ಥಳಗಳಿಂದ 1.9 ಮಿಲಿಯನ್ ಘನ ಅಡಿ ಕಲ್ಲುಗಳನ್ನು ತಂದು ದೇವಾಲಯ ನಿರ್ಮಿಸಲಾಯಿತು. ದೆಹಲಿ ಮತ್ತು ಗುಜರಾತ್‌ನಲ್ಲಿರುವ ಅಕ್ಷರಧಾಮ ದೇವಾಲಯಗಳನ್ನು ಸಹ ಬಿಎಪಿಎಸ್ ಸಂಸ್ಥೆ ನಡೆಸುತ್ತಿದೆ.

  • ಐಸಿಸ್ ಸೇರಲು ಕೇರಳ ತೊರೆದಿದ್ದ ವ್ಯಕ್ತಿ ಪಾಕ್ ಜೈಲಿನಲ್ಲಿ ಸಾವು

    ಐಸಿಸ್ ಸೇರಲು ಕೇರಳ ತೊರೆದಿದ್ದ ವ್ಯಕ್ತಿ ಪಾಕ್ ಜೈಲಿನಲ್ಲಿ ಸಾವು

    ತಿರುವನಂತಪುರಂ: ಐಸಿಸ್ (ISIS) ಸೇರಲು ಭಾರತ ತೊರೆದಿದ್ದ ಕೇರಳದ (Kerala) ವ್ಯಕ್ತಿಯೊಬ್ಬ ಪಾಕ್ ಜೈಲಿನಲ್ಲಿ ಮೃತಪಟ್ಟಿದ್ದಾನೆ. ಆತನ ಮೃತ ದೇಹವನ್ನು ಅಟ್ಟಾರಿ ಗಡಿಯಲ್ಲಿ ಹಸ್ತಾಂತರಿಸಲಾಗುವುದು ಎಂದು ಪಾಕಿಸ್ತಾನ (Pakistan) ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ (Union Home Ministry) ತಿಳಿಸಿದೆ.

    ಮೃತನನ್ನು ಪಾಲಕ್ಕಾಡ್ (Palakkad) ಜಿಲ್ಲೆಯ ಕಪೂರ್‌ನ ಜುಲ್ಫಿಕರ್ (48) ಎಂದು ಗುರುತಿಸಲಾಗಿದೆ. ಜುಲ್ಫಿಕರ್ 2018ರಲ್ಲಿ ಕೇರಳ ತೊರೆದಿದ್ದ. ನಂತರ ಐಸಿಸ್ ಸೇರಲು ಅಬುಧಾಬಿ (Abu Dhabi) ತೊರೆದಿದ್ದನ್ನು ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿದ್ದವು. ಅಲ್ಲಿಂದ ಇರಾನ್‍ಗೆ (Iran) ತೆರಳಿದ್ದ ನಂತರ ಪಾಕಿಸ್ತಾನಕ್ಕೆ ತಲುಪಿದ್ದ ಮಾಹಿತಿ ಸಿಕ್ಕಿತ್ತು. ಇದನ್ನೂ ಓದಿ: ಶೀಘ್ರವೇ ಮುಂಬೈ ಬ್ಲಾಸ್ಟ್ ಮಾಡ್ತೀನಿ – ಬೆದರಿಕೆ ಹಾಕಿದಾತ ಅರೆಸ್ಟ್

    ಆತ ಅಬುಧಾಬಿಯಿಂದ ನಾಪತ್ತೆಯಾಗಿದ್ದಾಗಿನಿಂದ ಗುಪ್ತಚರ ಸಂಸ್ಥೆಗಳು ಆತನ ಮೇಲೆ ನಿಗಾ ಇರಿಸಿದ್ದವು. ಈಗ ಪಾಕ್‍ನಲ್ಲಿ ಮೃತಪಟ್ಟಿರುವುದು ದೃಢಪಟ್ಟಿದೆ. ಪ್ರಕರಣದಲ್ಲಿ ನಿಗೂಢತೆ ಇದೆ, ಹೆಚ್ಚಿನ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಮಧ್ಯಮಗಳು ತಿಳಿಸಿವೆ.

    ಪಾಕಿಸ್ತಾನ ಪೊಲೀಸರಿಂದ ಜುಲ್ಫಿಕರ್ ಸಾವಿನ ಬಗ್ಗೆ ಭಾರತಕ್ಕೆ ಮಾಹಿತಿ ಲಭಿಸಿದೆ. ಮೃತದೇಹವನ್ನು ಅಮೃತಸರದ (Amritsar) ಎಫ್‌ಆರ್‌ಒ ಮೂಲಕ ಭಾರತ ಸರ್ಕಾರಕ್ಕೆ ಅಟ್ಟಾರಿ ಗಡಿಯಲ್ಲಿ ಹಸ್ತಾಂತರಿಸುವುದಾಗಿ ತಿಳಿಸಿದೆ. ಬಳಿಕ ಪಾಲಕ್ಕಾಡ್‍ಗೆ ಕೊಂಡೊಯ್ಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈಗ ಜುಲ್ಫಿಕರ್ ಐಸಿಸ್ ಸೇರಲು ದೇಶ ತೊರೆದಿದ್ದ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಕುಟುಂಬಸ್ಥರು ಮೃತದೇಹ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಇದನ್ನೂ ಓದಿ: ಟ್ರಕ್‍ಗೆ ಬಸ್ ಡಿಕ್ಕಿ – ಏಳು ಸಾವು, 13 ಮಂದಿಗೆ ಗಾಯ

  • ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಮೊದಲ ಹಿಂದೂ ದೇವಾಲಯ – ಜೈಶಂಕರ್‌ ಭೇಟಿ

    ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಮೊದಲ ಹಿಂದೂ ದೇವಾಲಯ – ಜೈಶಂಕರ್‌ ಭೇಟಿ

    ಅಬುಧಾಬಿ: ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯ ಸ್ಥಳಕ್ಕೆ ಭೇಟಿ ನೀಡಿದರು. ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಹಿಂದೂ ದೇವಾಲಯ ಇದಾಗಿದೆ.

    ಗಲ್ಫ್‌ ರಾಷ್ಟ್ರಕ್ಕೆ ಮೂರು ದಿನಗಳ ಭೇಟಿಗೆ ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ)ಕ್ಕೆ ಆಗಿಸಿರುವ ಎಸ್.ಜೈಶಂಕರ್‌ ಅವರು ದೇವಾಲಯ ನಿರ್ಮಾಣದಲ್ಲಿ ಭಾರತೀಯರ ಶ್ರಮವನ್ನು ಶ್ಲಾಘಿಸಿದರು. ʼಶಾಂತಿ, ಸಹಿಷ್ಣುತೆ ಮತ್ತು ಸಾಮರಸ್ಯದ ಸಂಕೇತ ಇದುʼ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ದಾವೂದ್ ಇಬ್ರಾಹಿಂನ ತಲೆಗೆ 25 ಲಕ್ಷ ನಗದನ್ನು ಘೋಷಿಸಿದ ಎನ್‍ಐಎ

    ಈ ಕುರಿತು ಟ್ವೀಟ್‌ ಮಾಡಿರುವ ಜೈಶಂಕರ್‌, ಗಣೇಶ ಚತುರ್ಥಿಯಂದು ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದೆ. ತ್ವರಿತ ಪ್ರಗತಿಯನ್ನು ನೋಡಲು ಸಂತೋಷವಾಗಿದೆ. ದೇವಾಲಯ ನಿರ್ಮಾಣ ಜವಾಬ್ದಾರಿ ಹೊತ್ತಿರುವ BAPS ತಂಡ, ಭಕ್ತರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಸಂತೋಷವಾಯಿತು ಎಂದು ಟ್ವೀಟ್ ಮಾಡಿದ್ದಾರೆ.

    ಸಚಿವ ಶೇಖ್ ನಹ್ಯಾನ್ ಬಿನ್ ಮಬಾರಕ್ ಅಲ್ ನಹ್ಯಾನ್ ಅವರನ್ನು ಜೈಶಂಕರ್ ಭೇಟಿ ಮಾಡಿದರು. ಅಲ್ಲಿರುವ ಭಾರತೀಯ ಸಮುದಾಯದ ಯೋಗ ಚಟುವಟಿಕೆಗಳು, ಕ್ರಿಕೆಟ್ ಮತ್ತು ಸಾಂಸ್ಕೃತಿಕ ಸಹಕಾರಕ್ಕಾಗಿ ಅಪಾರ ಬೆಂಬಲ ನೀಡುತ್ತಿರುವುದನ್ನು ಶ್ಲಾಘಿಸಿದರು. ಇದನ್ನೂ ಓದಿ: ಜನಮನ ಸೆಳೆಯುತ್ತಿದೆ 60 ಸಾವಿರ ಗೋಲಿಗಳಿಂದ ಮಾಡಿದ ಗಣೇಶ ಮೂರ್ತಿ!

    55,000 ಚದರ ಮೀಟರ್ ಜಾಗದಲ್ಲಿ ದೇವಾಲಯ ನಿರ್ಮಾಣವಾಗಲಿದೆ. ಈ ರಚನೆಯನ್ನು ಭಾರತೀಯ ದೇವಾಲಯದ ಕುಶಲಕರ್ಮಿಗಳ ಕೈಯಿಂದ ಕೆತ್ತನೆಯಾಗುತ್ತಿದೆ. ಇದು ಮಧ್ಯಪ್ರಾಚ್ಯದಲ್ಲಿ ಮೊದಲ ಸಾಂಪ್ರದಾಯಿಕ ಹಿಂದೂ ಕಲ್ಲಿನ ದೇವಾಲಯವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಅಬುಧಾಬಿಯಲ್ಲಿ 44.75 ಕೋಟಿ ರೂ. ಲಾಟರಿ ಗೆದ್ದ ಭಾರತೀಯ ಮಹಿಳೆ!

    ಅಬುಧಾಬಿಯಲ್ಲಿ 44.75 ಕೋಟಿ ರೂ. ಲಾಟರಿ ಗೆದ್ದ ಭಾರತೀಯ ಮಹಿಳೆ!

    ಅಬುಧಾಬಿ: ಭಾರತ ಮೂಲದ ಮಹಿಳೆಯೊಬ್ಬರು ಅಬುಧಾಬಿಯಲ್ಲಿ 44.75 ಕೋಟಿ ರೂ. ಲಾಟರಿಯನ್ನು ಗೆದ್ದಿದ್ದಾರೆ.

    ವರದಿಗಳ ಪ್ರಕಾರ ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯ ವಲಸಿಗ ಮಹಿಳೆಯೊಬ್ಬರು ಬಿಗ್ ಟಿಕೆಟ್ ಲಾಟರಿ ಡ್ರಾದಲ್ಲಿ 44.75 ಕೋಟಿ ರೂ. ಗೆದ್ದಿದ್ದಾರೆ. ಈ ಮಹಿಳೆ ಕೇರಳ ಮೂಲದ ಲೀನಾ ಜಲಾಲ್. ಇವರು ಬಿಗ್ ಟಿಕೆಟ್ ಅಬುಧಾಬಿ ವೀಕ್ಲಿ ಡ್ರಾದಲ್ಲಿ 22 ಮಿಲಿಯನ್ ದಿರ್ಹಂ(44.75 ಕೋಟಿ ರೂ) ಗೆದ್ದಿದ್ದಾರೆ.

    Indian man in UAE hits jackpot, wins Dh 12 mn lottery - The Economic Times

    ಫೆಬ್ರವರಿ 3 ರಂದು ನಡೆದ ಲಕ್ಕಿ ಡ್ರಾದಲ್ಲಿ, ಜಲಾಲ್ ಅವರ ಟಿಕೆಟ್ ಸಂಖ್ಯೆ 144387 ಹೊಂದಿದ್ದು, ಈ ಸಂಖ್ಯೆಯನ್ನು ಟೆರಿಫಿಕ್ 22 ಮಿಲಿಯನ್ ಸರಣಿ 236ನಲ್ಲಿ ಆಯ್ಕೆ ಮಾಡಲಾಗಿದೆ. ವರದಿಯ ಪ್ರಕಾರ, ಜಲಾಲ್ ಅಬುಧಾಬಿಯಲ್ಲಿ ಹ್ಯೂಮನ್ ರಿಸೋರ್ಸಸ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ‘ಬ್ಲಾಕ್‍ಚೈನ್’ ಮೂಲಕ ಮದುವೆಯಾದ ಭಾರತದ ಮೊದಲ ದಂಪತಿ!

    ತಮಗೆ ಬಂದ ಅದೃಷ್ಟದ ಬಗ್ಗೆ ಮಾತನಾಡಿದ ಅವರು, ಈ ಲಕ್ಕಿ ಡ್ರಾದಲ್ಲಿ ಬಂದ ಹಣವನ್ನು 10 ಜನರಿಗಾದರೂ ಸಹಾಯ ಮಾಡುತ್ತೇನೆ. ಸಮಾಜದ ಒಳ್ಳೆಯದಕ್ಕೆ ಬಳಸುತ್ತೇನೆ ಎಂದು ತಿಳಿಸಿದ್ದಾರೆ. ಲಕ್ಕಿ ಡ್ರಾ ಮೂಲಕ ಅದೃಷ್ಟವನ್ನು ಪಡೆದ ಏಕೈಕ ಭಾರತೀಯ ಇವರೊಬ್ಬರೆ ಅಲ್ಲ. ಕೇರಳದ ಮತ್ತೊಬ್ಬ ವಲಸಿಗರಾದ ಸುರೈಫ್ ಸುರು ಅವರು ಸಹ 1 ಮಿಲಿಯನ್ ದಿರ್ಹಂ(2,03,21,929) ಗೆದ್ದಿದ್ದಾರೆ.

    ಕೇರಳದ ಮಲ್ಲಪುರಂ ಜಿಲ್ಲೆಗೆ ಸೇರಿದ ಸುರು ಅವರು ಮಾಧ್ಯಮಗಳೊಂದಿಗೆ ಮಾತನಾಡಿದು, ಬಹುಮಾನದ ಹಣವನ್ನು ಇತರ 29 ಜನರೊಂದಿಗೆ ಹಂಚಿಕೊಳ್ಳುತ್ತೇನೆ. ಲಾಟರಿಯಲ್ಲಿ ಬಂದ ಸ್ವಲ್ಪ ಹಣವನ್ನು ನನ್ನ ಸ್ನೇಹಿತರಿಗೆ ಸಹಾಯ ಮಾಡುತ್ತೇನೆ. ನನ್ನನ್ನು ಹೆತ್ತವರಿಗೆ ಸ್ವಲ್ಪ ಹಣವನ್ನು ನೀಡುತ್ತೇನೆ. ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ನನ್ನ ಹೆಂಡತಿ ಮತ್ತು ಮಗಳಿಗೆ ಹಣವನ್ನು ಉಳಿಸಲು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಏನ್ಷಿಯೆಂಟ್ ಸೀಕ್ರೆಟ್ಸ್ ಟು ರಿವರ್ಸ್ ಡಯಾಬಿಟೀಸ್’ ಕೃತಿ ಬಿಡುಗಡೆ ಮಾಡಿದ ಸಿಎಂ

  • ಅಬುಧಾಬಿ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ – ಇಬ್ಬರು ಭಾರತೀಯರು ಸಾವು

    ಅಬುಧಾಬಿ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ – ಇಬ್ಬರು ಭಾರತೀಯರು ಸಾವು

    ದುಬೈ: ಅಬುಧಾಬಿ ವಿಮಾನ ನಿಲ್ದಾಣದಲ್ಲಿರುವ ಸೌದಿ ಅರಾಮ್ಕೋ ತೈಲ ಸಂಗ್ರಹಾರದದ ಮೇಲೆ ಡ್ರೋನ್ ದಾಳಿ ನಡೆದಿದ್ದು ಮೂವರು ಸಾವನ್ನಪ್ಪಿ, 6 ಮಂದಿ ಗಂಭೀರ ಗಾಯಗೊಂಡಿದ್ದಾರೆ.

    ಈ ದಾಳಿಯಲ್ಲಿ ಇಬ್ಬರು ಭಾರತಿಯರು ಹಾಗೂ ಒಬ್ಬ ಪಾಕಿಸ್ತಾನಿ ಪ್ರಜೆ ಸಾವನ್ನಪ್ಪಿದ್ದು, 6 ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಬುಧಾಬಿಯ ರಾಷ್ಟ್ರೀಯ ತೈಲ ಸಂಸ್ಥೆಯ ಶೇಖರಣಾ ಸೌಲಭ್ಯಗಳ ಸಮೀಪವಿರುವ ಕೈಗಾರಿಕಾ ಮುಸಾಫಾ ಪ್ರದೇಶದಲ್ಲಿ ಮೂರು ಇಂಧನ ಟ್ಯಾಂಕರ್ ಟ್ರಕ್‍ಗಳು ಸ್ಫೋಟಗೊಂಡಿವೆ ಹಾಗೂ ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪ್ರಾಥಮಿಕ ತನಿಖೆಗಳ ಪ್ರಕಾರ ಸ್ಫೋಟ ಹಾಗೂ ಬೆಂಕಿ ಕಾಣಿಸಿಕೊಂಡ ಎರಡೂ ಸ್ಥಳಗಳಲ್ಲಿ ಡ್ರೋನ್‍ನ ಭಾಗಗಳು ಕಂಡುಬಂದಿವೆ. ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದರು. ಇದನ್ನೂ ಓದಿ: ಜನವರಿ 31ರ ವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

    ಇರಾನ್ 2019ರಲ್ಲಿ ಯೆಮೆನ್‍ನಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಾಗಿ ಕಡಿಮೆಗೊಳಿಸಿತ್ತು. ಆದರೆ ಅದು ಸಶಸ್ತ್ರ ಮತ್ತು ತರಬೇತಿ ಪಡೆದ ಯೆಮೆನ್ ಪಡೆಗಳನ್ನು ತನ್ನ ಹಿಡಿತದಲ್ಲೇ ಇಟ್ಟುಕೊಂಡಿದೆ. ಇದರಿಂದಾಗಿ ಇರಾನ್ ಬೆಂಬಲಿತ ಯೆಮೆನ್‍ನ ಹೌತಿ ಪಡೆಗಳು ಸೌದಿ ಅರಾಮ್ಕೊದ ಘಟಕದ ಮೇಲೆ ದಾಳಿ ನಡೆಸಿದೆ. ಇದನ್ನೂ ಓದಿ: ವಸತಿ ಶಾಲೆಗಳಿಂದ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ ಪೋಷಕರು

    ವಿಶ್ವದ ಅತಿ ದೊಡ್ಡ ತೈಲ ಕಂಪನಿ ಸೌದಿ ಅರಾಮ್ಕೋ ಮೇಲೆ ಡ್ರೋನ್ ದಾಳಿ ನಡೆಯುತ್ತಿರುವುದು ಇದು ಮೊದಲೆನಲ್ಲ. ಈ ಹಿಂದೆ ಸೌದಿ ರೇಬಿಯಾದ ಅಬ್ಕೈಕ್ ಮತ್ತು ಖುರೈಸ್‍ನಲ್ಲಿದ್ದ ಸೌದಿ ಅರಾಮ್ಕೋದ ತೈಲ ಘಟಕದ ಮೇಲೆ ಮೇಲೆ ದಾಳಿ ನಡೆಸಲಾಗಿತ್ತು. ಈಗ ಮತ್ತೊಮ್ಮೆ ಹೌತಿ ಪಡೆಗಳು ದಾಳಿ ನಡೆಸಿತ್ತು.

  • ಪಂದ್ಯಕ್ಕೂ ಮೊದಲು ಅಬುಧಾಬಿ ಪಿಚ್‌ ಕ್ಯೂರೇಟರ್‌ ನಿಗೂಢ ಸಾವು

    ಪಂದ್ಯಕ್ಕೂ ಮೊದಲು ಅಬುಧಾಬಿ ಪಿಚ್‌ ಕ್ಯೂರೇಟರ್‌ ನಿಗೂಢ ಸಾವು

    ಅಬುಧಾಬಿ: ಟಿ20 ಕ್ರಿಕೆಟ್‌ ಪಂದ್ಯ ನಡೆಯುತ್ತಿರುವ ಅಬುಧಾಬಿಯ ಶೇಖ್‌ ಜಾಯೇದ್‌ ಕ್ರಿಕೆಟ್‌ ಸ್ಟೇಡಿಯಂ ಮುಖ್ಯ ಪಿಚ್‌ ಕ್ಯೂರೇಟರ್‌ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

    ಭಾರತದ ಉತ್ತರಾಖಂಡ್‌ ಮೂಲದ ಮೋಹನ್ ಸಿಂಗ್ ಅವರು ಭಾನುವಾರ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್‌ ಪಂದ್ಯ ನಡೆಯವ ಕೆಲ ಗಂಟೆಗಳು ಮೊದಲು ತಮ್ಮ ಕೊಠಡಿಯ ಫ್ತಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಬೆಳಗ್ಗೆ ಪಿಚ್‌ ನಿರ್ವಹಣೆ ಮಾಡಿದ್ದ ಅವರು ಕೊಠಡಿಗೆ ತೆರಳಿದ್ದರು. ಪಂದ್ಯ ನಡೆಯುತ್ತಿರುವಾಗ ಅವರು ಮೈದಾನಕ್ಕೆ ಬಂದಿರಲಿಲ್ಲ. ಹೀಗಾಗಿ ಅವರ ಕೊಠಡಿಗೆ ತೆರಳಿ ಪರಿಶೀಲಿಸಿದಾಗ ಸಾವನ್ನಪ್ಪಿದ ವಿಚಾರ ಬೆಳಕಿಗೆ ಬಂದಿದೆ.

    ಮೋಹನ್ ಸಿಂಗ್ ಅವರ ನಿಧನಕ್ಕೆ ಕಾರಣ ಏನೆಂಬುದು ಗೊತ್ತಾಗಿಲ್ಲ. ಹೆಚ್ಚಿನ ಮಾಹಿತಿ ಇನ್ನೂ ಮಾಧ್ಯಮಗಳಿಗೆ ಸಿಕ್ಕಿಲ್ಲ. ಟಿ20 ವಿಶ್ವಕಪ್‌ ವೇಳೆ ಅಬುಧಾಬಿ ಪಿಚ್‌ ಗುಣಮಟ್ಟದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕ್ಯೂರೇಟರ್‌ ನಿಗೂಢವಾಗಿ ಸಾವನ್ನಪ್ಪಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ವಿಕ್ಕಿ, ಕತ್ರಿನಾ ಮದುವೆ ಸಿದ್ಧತೆ ಶುರು

    ಮೋಹನ್ ಸಿಂಗ್ ಇವತ್ತು ನಿಧನರಾಗಿರುವುದು ನಿಜ. ಅವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾದ ಬಳಿಕ ಪೂರ್ಣ ವಿವರ ನೀಡಲಾಗುತ್ತದೆ. ಅವರು ಸಾವನ್ನಪ್ಪಿರುವುದು ಬಹಳ ದುರದೃಷ್ಟಕರ ಎಂದು ಯುಎಇ ಕ್ರಿಕೆಟ್ ಸಂಸ್ಥೆಯ ಮೂಲವೊಂದು ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.

    ಮೋಹನ್ ಸಿಂಗ್ ಅವರಿಗೆ ಸುಮಾರು 45 ವರ್ಷ ವಯಸ್ಸಾಗಿತ್ತು. ಅವರ ಸಾವಿಗೆ ಸಂತಾಪ ಸೂಚಿಸಿ ಅಬುಧಾಬಿ ಕ್ರಿಕೆಟ್ ಸಂಸ್ಥೆ ಸರಣಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬುಮ್ರಾ

    ಬಿಸಿಸಿಐನ ಮಾಜಿ ಚೀಫ್ ಕ್ಯೂರೇಟರ್ ದಲಜಿತ್ ಸಿಂಗ್ ಅವರು ಮೋಹನ್ ಸಿಂಗ್ ಸಾವಿಗೆ ಆಘಾತ ವ್ಯಕ್ತಪಡಿಸಿದ್ಧಾರೆ. ಭಾರತೀಯ ಕ್ರಿಕೆಟ್​ನಲ್ಲಿ 22 ವರ್ಷಗಳ ಕಾಲ ಕ್ಯೂರೇಟರ್ ಆಗಿ ಕೆಲಸ ಮಾಡಿರುವ ದಲಜಿತ್ ಸಿಂಗ್ ಅವರ ಜೊತೆ ಮೋಹನ್ ಸಿಂಗ್ ಹಲವು ವರ್ಷಗಳ ಹಿಂದೆ ಕೆಲಸ ಮಾಡಿದ್ದರು. ಮೊಹಾಲಿಯಲ್ಲಿ ದಲಜೀತ್ ಸಿಂಗ್ ಜೊತೆ ಬಹಳ ನಿಕಟವಾಗಿ ಪಿಚ್ ಕ್ಯೂರೇಟರ್ ಆಗಿ ಕೆಲಸ ಮಾಡಿದ್ದ ಇವರು 2000ದ ದಶಕದ ಆರಂಭದಲ್ಲಿ ಮೋಹನ್ ಸಿಂಗ್ ಯುಎಇಗೆ ವಲಸೆ ಹೋಗಿದ್ದರು.

  • ಪೊಲಾರ್ಡ್, ಹಾರ್ದಿಕ್ ಅಬ್ಬರಕ್ಕೆ ಪಂಜಾಬ್ ಪಂಚರ್ – ಮುಂಬೈಗೆ 6 ವಿಕೆಟ್ ಜಯ

    ಪೊಲಾರ್ಡ್, ಹಾರ್ದಿಕ್ ಅಬ್ಬರಕ್ಕೆ ಪಂಜಾಬ್ ಪಂಚರ್ – ಮುಂಬೈಗೆ 6 ವಿಕೆಟ್ ಜಯ

    ಅಬುಧಾಬಿ: ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಯುಎಇನಲ್ಲಿ ಗೆಲುವಿನ ಖಾತೆ ತೆರೆದಿದೆ.

    ಪಂಜಾಬ್ ನೀಡಿದ್ದ 136 ರನ್‍ಗಳ ಗುರಿಯನ್ನು ಬೆನ್ನತ್ತಿದ ಮುಂಬೈ, ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್‍ನಿಂದಾಗಿ 19 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ. ಇದನ್ನೂ ಓದಿ: ಡೆಲ್ಲಿ ಮಣಿಸಿದ ಕೋಲ್ಕತ್ತಾ – 3 ವಿಕೆಟ್‍ಗಳ ಜಯ

    ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್, ಮುಂಬೈ ದಾಳಿಯ ವಿರುದ್ಧ ರನ್‍ಗಳಿಸಲು ತಿಣುಕಾಡಿತು. ಆರಂಭಿಕರಾದ ನಾಯಕ ಕೆಎಲ್ ರಾಹುಲ್ ಹಾಗೂ ಮಂದೀಪ್ ಸಿಂಗ್ ಉತ್ತಮ ಮೊತ್ತ ಪೇರಿಸುವ ಲಕ್ಷಣ ತೋರಿಸಿದರು. ಮೊದಲ ವಿಕೆಟ್‍ಗೆ ಈ ಜೋಡಿ 5.2 ಓವರ್‍ಗಳಿಗೆ 36 ರನ್ ಕಲೆ ಹಾಕಿತು. ದೊಡ್ಡ ಇನ್ನಿಂಗ್ಸ್ ಮುನ್ಸೂಚನೆ ನೀಡಿದ್ದ ರಾಹುಲ್, ಪೊರ್ಲಾಡ್‍ಗೆ ವಿಕೆಟ್ ನೀಡಿ ಹೊರ ನಡೆದರು. ಇದರ ಬೆನ್ನಲ್ಲೇ ಗೇಲ್ ಹಾಗೂ ಮಂದೀಪ್ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೆಡ್ ನಡೆಸಿದರು.

    ಪಂಜಾಬ್ ಪರ ರಾಹುಲ್ 21 ರನ್ (22 ಎಸೆತ 2 ಬೌಂಡರಿ) ಗಳಿಸಿದರು. ಮಂದೀಪ್ ಸಿಂಗ್ 15ರನ್ (14 ಎಸೆತ 2 ಬೌಂಡರಿ) ಗಳಿಸಿದರೆ, ಮಾಕ್ರ್ರಮ್ 42 ರನ್ (29 ಎಸೆತ 6 ಬೌಂಡರಿ) ಸಿಡಿಸಿದರು. ಉಳಿದಂತೆ ದೀಪಕ್ ಹೂಡ 28ರನ್ (26 ಎಸೆತ 1 ಬೌಂಡರಿ 1 ಸಿಕ್ಸರ್) ಹೊಡೆದರು. ನಿಗದಿತ 20 ಓವರ್‍ನಲ್ಲಿ ಪಂಜಾಬ್ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಮುಂಬೈ ಪರ ಪೊರ್ಲಾಡ್ ಹಾಗೂ ಬುಮ್ರಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: ಜೇಸನ್ ರಾಯ್ ಅಬ್ಬರಕ್ಕೆ ಮಕಾಡೆ ಮಲಗಿದ ರಾಜಸ್ಥಾನ್ ರಾಯಲ್ಸ್: ಹೈದರಾಬಾದ್‍ಗೆ ಜಯ

    136 ರನ್‍ಗಳ ಗುರಿ ಬೆನ್ನತ್ತಿದ ಮುಂಬೈಗೆ ಆರಂಭಿಕ ಆಘಾತ ಎದುರಾಯಿತು. ನಾಯಕ ರೋಹಿತ್ ಶರ್ಮಾ 8, ಸೂರ್ಯ ಕುಮಾರ್ ಯಾದವ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ವಿಕೆಟ್ ಕೀಪರ್ ಡಿ ಕಾಕ್ 38 ರನ್ (32 ಎಸೆತ 3 ಬೌಂಡರಿ) ಗಳಿಸಿ ತಂಡಕ್ಕೆ ರನ್ ಗಳಿಸಲು ಕೊಂಚ ನೆರವಾದರು. ಮಿಡಲ್ ಆರ್ಡರ್ ಆಡಲು ಬಂದ ಸೌರಭ್ ತಿವಾರಿ 45 ರನ್ ( 37 ಎಸೆತ 3 ಬೌಂಡರಿ 2 ಸಿಕ್ಸರ್) ಚಚ್ಚುವ ಮೂಲಕ ಮುಂಬೈ ತಂಡಕ್ಕೆ ಆಸರೆಯಾದರು. ಸೌರಭ್ ತಿವಾರಿ ವಿಕೆಟ್ ಪತನದ ಬಳಿಕ ಕ್ರಿಸ್‍ಗಿಳಿದ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ, ಪಂಜಾಬ್ ಬೌಲರ್‍ಗಳನ್ನು ಚಂಡಾಡಿ, ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಮುಂಬೈ ಟೂರ್ನಿಯಲ್ಲಿ ಐದನೇ ಹಾಗೂ ಯುಎಇಯಲ್ಲಿ ಮೊದಲ ಜಯ ದಾಖಲಿಸಿತು.

     

  • ಐಪಿಎಲ್ ಇಂದು ಮುಂಬೈ- ಕೋಲ್ಕತ್ತಾ ಮುಖಾಮುಖಿ

    ಐಪಿಎಲ್ ಇಂದು ಮುಂಬೈ- ಕೋಲ್ಕತ್ತಾ ಮುಖಾಮುಖಿ

    ಅಬುಧಾಬಿ: ಐಪಿಎಲ್‍ನ ಐದನೇ ಪಂದ್ಯ ಇಂದು ಅಬುಧಾಬಿಯಲ್ಲಿ ನಡೆಯಲಿದೆ. ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಪರಸ್ಪರ ಮುಖಾಮುಖಿಯಾಗಲಿವೆ.

    ಟೂರ್ನಿಯಲ್ಲಿ ಎರಡು ತಂಡಗಳು ಹೇಳಿಕೊಳ್ಳುವಂತ ಪ್ರದರ್ಶವನ್ನು ನೀಡಿಲ್ಲ. ಒಟ್ಟು 8 ಪಂದ್ಯಗಳನ್ನಾಡಿರುವ ಮುಂಬೈ 4 ಪಂದ್ಯಗಳನ್ನು ಗೆದ್ದು, ನಾಲ್ಕು ಪಂದ್ಯಗಳನ್ನು ಸೋತಿದೆ. 8 ಪಂದ್ಯಗಳನ್ನಾಡಿರುವ ಕೆಕೆಆರ್, ಕೇವಲ ಮೂರು ಪಂದ್ಯಗಳನ್ನು ಗೆದ್ದು 5 ಪಂದ್ಯಗಳನ್ನು ಸೋತಿದೆ. ಅಂಕಪಟ್ಟಿಯಲ್ಲಿ ಮುಂಬೈ 4ನೇ ಸ್ಥಾನದಲ್ಲಿದ್ದರೆ ಕೆಕೆಆರ್ 6ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಹೈದರಾಬಾದ್ ವಿರುದ್ಧ ಡೆಲ್ಲಿಗೆ 8 ವಿಕೆಟ್‍ಗಳ ಭರ್ಜರಿ ಜಯ

    ಪ್ರತಿ ಸೀಸನ್‍ನಲ್ಲಿಯೂ ಮೊದಲಾರ್ಧ ಪಂದ್ಯಗಳನ್ನು ಸೋತು ನಂತರ ಪುಟಿದೇಳುವ ಮುಂಬೈ, ಈ ಪಂದ್ಯವನ್ನು ಗೆಲ್ಲುವ ಮೂಲಕ ಅಬುದುಬೈನಲ್ಲಿ ಶುಭಾರಂಭ ಮಾಡಲು ರೆಡಿಯಾಗಿದೆ. ಕಳೆದ ಸೀಸನ್ ನಿಂದಲೂ ಕೊಲ್ಕತ್ತಾ ತಂಡ ಐಪಿಎಲ್‍ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. ಕೆಕೆಆರ್ ತಂಡದಲ್ಲಿ ಸ್ಟಾರ್ ಆಟಗಾರರ ಬಳಗವೇ ಇದೆ. ಬ್ಯಾಟಿಂಗ್ ವಿಭಾಗದಲ್ಲಿ ಶುಭಮನ್ ಗಿಲ್, ರಾಹುಲ್ ತ್ರಿಪಾಟಿ, ಇಯನ್ ಮೊರ್ಗನ್, ನೀತಿಶ್ ರಾಣ, ಅಂಡ್ರೆ ರಸೆಲ್ ರಂತ ಹೊಡಿಬಡಿ ಆಟಗಾರರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸುನೀಲ್ ನರೈನ್, ವರುಣ್ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣ ಆಟಗಾರರು ಎದುರಾಳಿ ತಂಡವನ್ನು ಕಟ್ಟಿಹಾಕಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಬ್ಯಾಟ್ಸ್‌ಮ್ಯಾನ್‌ ಬದಲಾಗಿ ‘ಬ್ಯಾಟರ್’ ಪದ ಬಳಕೆ

    ಮುಂಬೈ ಇಂಡಿಯನ್ಸ್ ಬಲಾಬಲವನ್ನು ನೊಡುವುದಾದರೇ ಡಿ ಕಾಕ್, ಸೂರ್ಯ ಕುಮಾರ್ ಯಾದವ್, ಇಶನ್ ಕಿಶಾನ್, ಪೊಲಾರ್ಡ್ ರಂತ ಅಬ್ಬರಿಸುವ ಬ್ಯಾಟ್ಸ್‍ಮನ್‍ಗಳಿದ್ದಾರೆ. ಮೊದಲ ಪಂದ್ಯದಿಂದ ಹೊರಗುಳಿದಿದ್ದ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದ್ದು, ಮುಂಬೈ ಬ್ಯಾಟಿಂಗ್ ಬಲ ಮತ್ತಷ್ಟು ಹೆಚ್ಚಲಿದೆ. ಬೌಲಿಂಗ್ ವಿಭಾಗದಲ್ಲಿ ಮುಂಬೈ ಅತ್ಯಂತ ಬಲಿಷ್ಟವಾಗಿದೆ. ರಾಹುಲ್ ಚಹಾರ್, ಟ್ರೆಂಟ್ ಬೋಲ್ಟ್, ಅಡಮ್ ಮಿಲ್ನೆ, ಬೂಮ್ರರಂತ ಬೌಲರ್‍ಗಳನ್ನು ಕೆಕೆಆರ್ ತಂಡ ಎದುರಿಸಬೇಕಿದೆ.

    ಮುಂಬೈ ನಾಯಕ ರೋಹಿತ್ ಶರ್ಮಾ, ಕೆಕೆಆರ್ ವಿರುದ್ಧ ಪ್ರತಿ ಬಾರಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ 18 ರನ್ ಗಳಿಸಿದರೆ ಐಪಿಎಲ್ ತಂಡಯೊಂದರ ವಿರುದ್ಧ 1000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯಗಳಲ್ಲಿ ಒಟ್ಟು 4 ಬಾರಿ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ.

    ಕೆಕೆಆರ್ ತಂಡಕ್ಕಿಂತಲೂ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಮುಂಬೈ ಬಲಿಷ್ಟವಾಗಿದೆ. ಎರಡು ತಂಡಗಳಲ್ಲಿನ ಸ್ಟಾರ್ ಆಟಗಾರರ ಮೇಲೆ ಭಾರೀ ನಿರೀಕ್ಷೆಯಿದೆ. ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದ್ದು ಗೆಲುವಿಗಾಗಿ ಉಭಯ ತಂಡಗಳು ಕಾದಾಟ ನಡೆಸಲಿವೆ.

  • ಅಬುಧಾಬಿ ಹಿಂದೂ ದೇವಾಲಯದ ಫೌಂಡೇಶನ್‍ಗೆ ಭಾರತದ ಕಲ್ಲು ಬಳಕೆ

    ಅಬುಧಾಬಿ ಹಿಂದೂ ದೇವಾಲಯದ ಫೌಂಡೇಶನ್‍ಗೆ ಭಾರತದ ಕಲ್ಲು ಬಳಕೆ

    ಅಬುಧಾಬಿ: ಮೊದಲ ಬಾರಿಗೆ ಅಬುಧಾಬಿಯಲ್ಲಿ ಹಿಂದೂ ದೇಗುಲ ನಿರ್ಮಾಣವಾಗುತ್ತಿದ್ದು, ಹಿಂದೂ ದೇಗುಲಕ್ಕೆ ಬೃಹತ್ ಅಡಿಪಾಯ ಹಾಕಲಾಗಿದೆ. ಈ ಅಡಿಪಾಯಕ್ಕೆ ಭಾರತದಿಂದ ಕಲ್ಲುಗಳನ್ನು ತರಿಸಿಕೊಳ್ಳಲಾಗಿದೆ.

    ಬೋಚಾಸನವಾಸಿ ಶ್ರೀ ಅಕ್ಷರ್ ಪುರುಷೋತ್ತಂ ಸ್ವಾಮಿನಾರಾಯಣ್ ಸಂಸ್ಥೆ(ಬಿಎಪಿಎಸ್) 450 ಕೋಟಿ ರೂ. ವೆಚ್ಚದಲ್ಲಿ ದೇವಾಲಯವನ್ನು ನಿರ್ಮಾಣ ಮಾಡುತ್ತಿದೆ. ಏಪ್ರಿಲ್ ತಿಂಗಳ ಅಂತ್ಯಕ್ಕೆ ಫೌಂಡೇಷನ್ ಕಾರ್ಯ ಮುಕ್ತಾಯವಾಗುವ ಸಾಧ್ಯತೆಯಿದೆ.

    ಅಬು ಮರೇಖಾ ಪ್ರದೇಶದಲ್ಲಿ 27 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ದೇವಸ್ಥಾನ ಬೃಹತ್ ಅಡಿಪಾಯ ಹಾಕಲಾಗುತ್ತಿದೆ. ನೆಲ ಮಟ್ಟದಿಂದ 4.5 ಮೀಟರ್ ಅಡಿಪಾಯದ ಹಾಕಲಾಗಿದೆ. ಜನವರಿ ತಿಂಗಳಿನಿಂದ ಕೆಲಸ ನಡೆಯುತ್ತಿದೆ. ಸುಮಾರು 4,500 ಕ್ಯೂಬಿಕ್ ಕಾಂಕ್ರೀಟ್ ಹಾಕಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಮತ್ತೆ ಅರ್ಚಕರಿಗಾಗಿ ಕೆಳಗಡೆ ಎರಡು ಸುರಂಗ ನಿರ್ಮಾಣ ಮಾಡಲಾಗುತ್ತದೆ.

    ದೇವಸ್ಥಾನ ನಿರ್ಮಾಣಕ್ಕೆ ಭಾರತದಿಂದ ಕಲ್ಲುಗಳನ್ನು ತರಿಸಿಕೊಳ್ಳಲಾಗಿದೆ. ಸ್ತಂಭಗಳನ್ನು ರಾಜಸ್ಥಾನ ಮತ್ತು ಗುಜರಾತ್‍ನ ಕುಶಲಕರ್ಮಿಗಳು ಕೆತ್ತನೆ ಮಾಡಲಿದ್ದಾರೆ. ಏಪ್ರಿಲ್ ಅಂತ್ಯದ ಒಳಗಾಗಿ ಫೌಂಡೇಷನ್ ಕೆಲಸ ಮುಗಿಯುತ್ತದೆ. ಮೇ ತಿಂಗಳಿನಲ್ಲಿ ಕಲ್ಲಿನ ಕೆಲಸವನ್ನು ಆರಂಭಿಸುತ್ತೇವೆ ಎಂದು ಪ್ರಾಜೆಕ್ಟ್ ಎಂಜಿನಿಯರ್ ಅಶೋಕ್ ಕೊಂಡೆಟೆ ಹೇಳಿದ್ದಾರೆ.

  • ವೀಡಿಯೋ: ಆಸ್ಟ್ರಿಚ್ ಹಕ್ಕಿಗಳ ಓಟದ ವೇಗಕ್ಕೆ ಸೈಕಲ್ ಸವಾರಿ ಮಾಡಿದ ಯುವರಾಜ!

    ವೀಡಿಯೋ: ಆಸ್ಟ್ರಿಚ್ ಹಕ್ಕಿಗಳ ಓಟದ ವೇಗಕ್ಕೆ ಸೈಕಲ್ ಸವಾರಿ ಮಾಡಿದ ಯುವರಾಜ!

    ಅಬುಧಾಬಿ: ಆಸ್ಟ್ರಿಚ್ ಓಟದೊಂದಿಗೆ ದುಬೈ ಯುವರಾಜ ಸೈಕಲ್ ರೇಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ದುಬೈ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತಾಮ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ ಕೆಲವೊಮದು ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಶೇರ್ ಮಾಡಿರುವ ವೀಡಿಯೋ ಎಲ್ಲರ ಗಮನವನ್ನು ಸೆಳೆಯುತ್ತಿದೆ. 2 ಆಸ್ಟ್ರೀಚ್‍ಗಳ ಓಟದ ಮಧ್ಯದಲ್ಲಿ ಯುವರಾಜನ ಸೈಕಲ್ ಸವಾರಿ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ವೈರಲ್ ವಿಡಿಯೋದಲ್ಲಿ ಏನಿದೆ?
    ಯುವರಾಜ ಸೈಕಲ್ ರೇಸ್‍ನಲ್ಲಿದ್ದರು. ಈ ವೇಳೆ ಮಾರ್ಗ ಮಧ್ಯದಲ್ಲಿ ವೇಗವಾಗಿ ಸಾಗುತ್ತಿರುವಾಗ ಒಂದು ಆಸ್ಟ್ರಿಚ್ ಓಡುತ್ತಾ ಇರುವುದನ್ನು ರಾಜಕುಮಾರ ಗಮನಿಸುತ್ತಾರೆ. ಆಸ್ಟ್ರಿಚ್ ಓಟದ ವೇಗಕ್ಕೆ ಸರಿಯಾಗಿ ತಾವು ಕೂಡ ಸೈಕಲ್ ಸವಾರಿ ಮಾಡುತ್ತಾರೆ. ಯುವರಾಜನನ್ನು ದಾಟಿ ಸಾಗುವ ಆಸ್ಟ್ರಿಚ್ ಜೊತೆಗಿನ ಸ್ಪರ್ಧೆ ತುಂಬಾ ಸಮಯದವರೆಗೆ ನಡೆಯುತ್ತದೆ. ಅಷ್ಟರಲ್ಲಿ ಇನ್ನೊಂದು ಆಸ್ಟ್ರಿಚ್ ಕೂಡ ಎಂಟ್ರಿ ಕೊಡುತ್ತದೆ. ಈ ಜೋಡಿ ಆಸ್ಟ್ರಿಚ್‍ಗಳ ಜೊತೆಗೆ ಅವುಗಳ ವೇಗಕ್ಕೆ ಸರಿಯಾಗಿ ಯುವರಾಜ ತಾನೂ ಕೂಡ ಸೈಕಲ್ ಓಡಿಸುತ್ತಾ ಖುಷಿಪಟ್ಟಿದ್ದಾರೆ.

    ಈ ವೀಡಿಯೋವನ್ನು ದುಬೈನ ಯುವರಾಜ ಶೇರ್ ಮಾಡಿಕೊಂಡಿದ್ದಾರೆ. ಆಸ್ಟ್ರಿಚ್‍ಗಳೊಂದಿಗೆ ನಡೆದಿರುವ ಸೈಕಲ್ ರೇಸ್ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

     

    View this post on Instagram

     

    A post shared by Fazza (@faz3)