Tag: Abu Bakr Al Baghdadi

  • ನರಹಂತಕನನ್ನು ಹಿಡಿದ ಶ್ವಾನದ ಫೋಟೋ ಟ್ವೀಟ್ ಮಾಡಿದ ಟ್ರಂಪ್

    ನರಹಂತಕನನ್ನು ಹಿಡಿದ ಶ್ವಾನದ ಫೋಟೋ ಟ್ವೀಟ್ ಮಾಡಿದ ಟ್ರಂಪ್

    ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಅಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿಯನ್ನು ಹಿಡಿಯಲು ಸಹಾಯ ಮಾಡಿದ ಅಮೆರಿಕ ಸೇನಾ ಶ್ವಾನದ ಫೋಟೋವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

    ಐಸಿಸ್ ನಾಯಕ ಅಬು ಬಕರ್ ಅಲ್ ಬಾಗ್ದಾದಿಯನ್ನು ಹಿಡಿಯಲು ಕಾದು ಕುಳಿತಿದ್ದ ಅಮೆರಿಕ ಸೇನೆ, ಆತ ವಾಯುವ್ಯ ಸಿರಿಯಾ ಪ್ರದೇಶದಲ್ಲಿರುವುದು ತಿಳಿದು ಹೆಲಿಕಾಪ್ಟರ್ ಮೂಲಕ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಬಾಗ್ದಾದಿಯ ಉಗ್ರರೆಲ್ಲ ಹತನಾದರು. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗುತ್ತಿದ್ದ ಬಾಗ್ದಾದಿ ಬಂಧನದ ಭೀತಿಯಲ್ಲಿ ತನ್ನ ಮೂವರು ಮಕ್ಕಳೊಂದಿಗೆ ಆತ್ಮಾಹುತಿ ಬಾಂಬ್ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಾಗ್ದಾದಿ ಕಾರ್ಯಾಚರಣೆ ವೇಳೆ ಅಮೆರಿಕದ ಸೇನೆಗೆ ಸಹಾಯ ಮಾಡಿದ ಶ್ವಾನದ ಫೋಟೋವನ್ನು ಟ್ರಂಪ್ ಅವರು ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಐಸಿಸ್‍ನ ನಾಯಕ ಅಬು ಬಕರ್ ಅಲ್ ಬಾಗ್ದಾದಿಯನ್ನು ಸೆರೆಹಿಡಿದು ಕೊಲ್ಲುವಲ್ಲಿ ಮಹತ್ತರವಾದ ಕೆಲಸ ಮಾಡಿದ ಅದ್ಭುತ ಶ್ವಾನದ ಚಿತ್ರವನ್ನು ನಾವು ನಿಮಗೆ ನೀಡುತ್ತಿದ್ದೇವೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.

    ತನ್ನ ಅಡಗು ತಾಣದಲ್ಲಿ ಅವಿತು ಕುಳಿತಿದ್ದ ಬಾಗ್ದಾದಿಯನ್ನು ಕಂಡು ಹಿಡಿದ ಅಮೆರಿಕ ಸೇನಾ ಹೆಲಿಕಾಪ್ಟರ್ ದಾಳಿ ಮಾಡಿತು. ಈ ವೇಳೆ ಹೆದರಿದ ಬಾಗ್ದಾದಿ ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ತನ್ನ ಮೂವರು ಮಕ್ಕಳೊಂದಿಗೆ ಸುರಂಗದ ಒಳಗೆ ಓಡಿಹೋಗುತ್ತಿದ್ದನು. ಆದರೆ ಅವನ್ನು ಬೆನ್ನಟ್ಟಿದ ಶ್ವಾನ ದಳ ಸುರಂಗ ಕೊನೆಯಾಗುವವರೆಗೂ ಅಟ್ಟಿಸಿಕೊಂಡು ಹೋದವು. ಕೊನೆಗೆ ಸುರಂಗ ಕೊನೆಯಾಯಿತು. ಅಮೆರಿಕ ಸೇನೆ ಬಂಧಿಸುತ್ತದೆ ಎಂಬ ಭಯಕ್ಕೆ ಬಾಗ್ದಾದಿ ಆತ್ಮಾಹುತಿ ಬಾಂಬ್ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ಅಮೆರಿಕ ಸೇನೆ ಹೇಳಿದೆ. ಇದನ್ನು ಓದಿ: ಬಾಗ್ದಾದಿ ಹತ್ಯೆ ಬೆನ್ನಲ್ಲೇ ಐಸಿಸ್‍ಗೆ ಹೊಸ ನಾಯಕ ನೇಮಕ

    ಈ ವೇಳೆ ಬಾಂಬ್ ಸಿಡಿದು ಬಾಗ್ದಾದಿಯನ್ನು ಅಟ್ಟಿಸಿಕೊಂಡು ಹೋದ ಶ್ವಾನಕ್ಕೂ ಗಂಭೀರವಾಗಿ ಗಾಯವಾಗಿತ್ತು. ಅದನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಈಗ ಚಿಕತ್ಸೆ ಕೊಡಿಸಿದ್ದೇವೆ, ಈಗ ಶ್ವಾನ ಆರೋಗ್ಯವಾಗಿದೆ ಎಂದು ಅಮೆರಿಕ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

    ಈ ವಿಚಾರವಾಗಿ ಶ್ವೇತಭವನದಲ್ಲಿ ಮಾತನಾಡಿದ್ದ ಟ್ರಂಪ್, ಬಾಗ್ದಾದಿ ಮತ್ತೆ ಯಾವುದೇ ಮಹಿಳೆ, ಮಕ್ಕಳನ್ನು ಕೊಲ್ಲಲು ಆಗುವುದಿಲ್ಲ. ಅವನು ನಾಯಿಯಂತೆ ಸತ್ತನು. ಹೇಡಿಯಂತೆ ಸಾವನ್ನಪ್ಪಿದ್ದಾನೆ. ಈಗ ಪ್ರಪಂಚ ಇನ್ನೂ ಸುರಕ್ಷಿತವಾಗಿದೆ ಎಂದು ಹೇಳಿದ್ದರು. ಅವನು ಅಳುತ್ತಾ ಕಿರುಚುತ್ತಾ ಸುರಂಗದಲ್ಲಿ ಓಡಿ ಹೋಗಿ ಬಂಧನದ ಭೀತಿಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡು ಸಾವನ್ನಪ್ಪಿದ ಎಂದು ಟ್ರಂಪ್ ಹೇಳಿದ್ದರು.

    48 ವರ್ಷದ ಅಬು ಬಕರ್ ಅಲ್ ಬಾಗ್ದಾದಿ ಇರಾಕ್ ನಿವಾಸಿಯಾಗಿದ್ದು, ತನ್ನದೆಯಾದ ಉಗ್ರ ಸಂಘಟನೆಯನ್ನು ಕಟ್ಟಿಕೊಂಡು ಹಿಂಸಾತ್ಮಕ ಭಯೋತ್ಪಾದನೆಯನ್ನು ಆರಂಭ ಮಾಡಿದ್ದನು. ಈತ 2014 ರಲ್ಲಿ ಸಿರಿಯಾ ಮತ್ತು ಇರಾಕ್‍ನಲ್ಲಿ ಒಂದು ಪ್ರದೇಶವನ್ನು ಆಕ್ರಮಣ ಮಾಡಿಕೊಂಡು ಅಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಆರಂಭಿಸಿ ಸಾವಿರಾರು ಜನರ ಸಾವಿಗೆ ಕಾರಣನಾಗಿದ್ದ. ಇದರ ಜೊತೆಗೆ ಹಲವರ ಶಿರಚ್ಛೇದನ ಮಾಡಿದ್ದನು.

  • ಸುರಂಗದೊಳಗೆ ಅಳುತ್ತಾ ಓಡಿ ಸತ್ತ ಬಾಗ್ದಾದಿ: ನರಹಂತಕನ ಸಾವಿನ ರಹಸ್ಯ

    ಸುರಂಗದೊಳಗೆ ಅಳುತ್ತಾ ಓಡಿ ಸತ್ತ ಬಾಗ್ದಾದಿ: ನರಹಂತಕನ ಸಾವಿನ ರಹಸ್ಯ

    ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಅಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ತನ್ನ ಪ್ರಾಣ ಉಳಿಸಿಕೊಳ್ಳಲು ಸುರಂಗದೊಳಗೆ ಅಳುತ್ತಾ ತನ್ನ ಮೂರು ಮಕ್ಕಳೊಂದಿಗೆ ಓಡಿ ಹೋಗಿ ಸಾವನ್ನಪ್ಪಿದ್ದಾನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

    ಅಮೆರಿಕ ಸೇನಾ ದಾಳಿಗೆ ಹೆದರಿ ಅಲ್ ಬಾಗ್ದಾದಿ ಅತ್ಮಾಹುತಿ ಬಾಂಬ್ ದಾಳಿ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಭಾನುವಾರ ಸುದ್ದಿಯಾಗಿತ್ತು. ಆದರೆ ಅಮೆರಿಕಾ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿದ ಕಾರಣ ಸುದ್ದಿ ಖಚಿತವಾಗಿರಲಿಲ್ಲ. ಆದರೆ ಟ್ರಂಪ್ ತುಂಬಾ ದೊಡ್ಡದಾದ ಒಂದು ಕೆಲಸ ಈಗ ತಾನೇ ಆಗಿದೆ ಎಂದು ಟ್ವೀಟ್ ಮಾಡಿ ಕುತೂಹಲ ಹೆಚ್ಚಿಸಿದ್ದರು.

    ಈಗ ಈ ವಿಚಾರದ ಬಗ್ಗೆ ಶ್ವೇತಭವನದಲ್ಲಿ ಮಾತನಾಡಿರುವ ಟ್ರಂಪ್, ಪ್ರಪಂಚವನ್ನು ಬೆಚ್ಚಿ ಬೀಳಿಸಿದ್ದ ಉಗ್ರ ನಾಯಕ ಅಬು ಬಕರ್ ಅಲ್ ಬಾಗ್ದಾದಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಿರುವ ಟ್ರಂಪ್, ಅಲ್ ಬಾಗ್ದಾದಿ ಮತ್ತೆ ಯಾವುದೇ ಮಹಿಳೆ, ಮಕ್ಕಳನ್ನು ಕೊಲ್ಲಲು ಆಗುವುದಿಲ್ಲ. ಅವನು ನಾಯಿಯಂತೆ ಸತ್ತನು. ಹೇಡಿಯಂತೆ ಸಾವನ್ನಪ್ಪಿದ್ದಾನೆ. ಈಗ ಪ್ರಪಂಚ ಇನ್ನೂ ಸುರಕ್ಷಿತವಾಗಿದೆ ಎಂದು ಹೇಳಿದರು.

    ಬಾಗ್ದಾದಿಯನ್ನು ಕೊಲ್ಲಲು ವರ್ಷಗಳಿಂದ ಕಾದು ಕುಳಿತಿದ್ದ ಅಮೆರಿಕ ವಿಶೇಷ ಸೇನಾ ಪಡೆ, ಆತ ವಾಯುವ್ಯ ಸಿರಿಯಾ ಪ್ರದೇಶದಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಹೆಲಿಕಾಪ್ಟರ್ ಮೂಲಕ ದಾಳಿ ಮಾಡಿವೆ. ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಡೆದ ಹೆಲಿಕಾಪ್ಟರ್ ದಾಳಿಯಲ್ಲಿ ಬಾಗ್ದಾದಿಯ ಉಗ್ರರು ಸಾವನ್ನಪ್ಪಿದ್ದಾರೆ. ಇದರಿಂದ ಹೆದರಿದ ಬಾಗ್ದಾದಿ ಸುರಂಗದ ಮೂಲಕ ಓಡಲು ಶುರು ಮಾಡಿದ್ದಾನೆ.

    ಅಮೆರಿಕ ಸೇನೆಯ ದಾಳಿಗೆ ಹೆದರಿದ ಅಲ್ ಬಾಗ್ದಾದಿ ತಪ್ಪಿಸಿಕೊಳ್ಳಲು ಸುರಂಗದಲ್ಲಿ ಅಳುತ್ತಾ ಕಿರುಚುತ್ತಾ ತನ್ನ ಮೂರು ಮಕ್ಕಳೊಂದಿಗೆ ಹೋಗುತ್ತಿದ್ದನು. ನಮ್ಮ ಶ್ವಾನ ದಳ ಅವನನ್ನು ಬೆನ್ನಟ್ಟಿದವು. ಕೊನೆಗೆ ಸುರಂಗ ಕೊನೆಯಾಗಿತು. ಇದರಿಂದ ಬಂಧನ ಭೀತಿಯಲ್ಲಿ ಅಲ್ ಬಾಗ್ದಾದಿ ತನ್ನ ಮೂರು ಜನ ಮಕ್ಕಳೊಂದಿಗೆ ಆತ್ಮಾಹುತಿ ಬಾಂಬ್ ಸಿಡಿಸಿಕೊಂಡು ಹೇಡಿಯಂತೆ ಸಾವನ್ನಪ್ಪಿದ್ದಾನೆ ಎಂದು ಟ್ರಂಪ್ ಶ್ವೇತ ಭವನದಲ್ಲಿ ಹೇಳಿದ್ದಾರೆ.

    ಬಾಂಬ್ ಸಿಡಿದ ವೇಗಕ್ಕೆ ಅವನ ಮೂರು ಮಕ್ಕಳು ಸೇರಿ ಆತನ ದೇಹವು ಛಿಧ್ರವಾದ ಕಾರಣ ಅವನ ಮೃತದೇಹವು ನಮಗೆ ಸಿಗಲಿಲ್ಲ. ಆದರೆ ನಾವು ಸತ್ತಿರುವುದು ಬಾಗ್ದಾದಿ ಎಂದು ತಿಳಿದುಕೊಳ್ಳಲು ಅವನ ದೇಹದ ಭಾಗವನ್ನು ಡಿಎನ್‍ಎ ಪರೀಕ್ಷೆ ಮಾಡಿಸಿದ್ದೇವೆ. ಅದರಲ್ಲಿ ಈ ದೇಹ ಬಾಗ್ದಾದಿದೆ ಎಂದು ಖಚಿತವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

    48 ವರ್ಷದ ಅಬು ಬಕರ್ ಅಲ್ ಬಾಗ್ದಾದಿ ಇರಾಕ್ ನಿವಾಸಿಯಾಗಿದ್ದು, ತನ್ನದೆಯಾದ ಉಗ್ರ ಸಂಘಟನೆಯನ್ನು ಕಟ್ಟಿಕೊಂಡು ಹಿಂಸಾತ್ಮಕ ಭಯೋತ್ಪಾದನೆಯನ್ನು ಆರಂಭ ಮಾಡಿದ್ದ. ಈತ 2014 ರಲ್ಲಿ ಸಿರಿಯಾ ಮತ್ತು ಇರಾಕ್‍ನಲ್ಲಿ ಒಂದು ಪ್ರದೇಶವನ್ನು ಆಕ್ರಮಣ ಮಾಡಿಕೊಂಡು ಅಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಆರಂಭಿಸಿ ಸಾವಿರಾರು ಜನರ ಸಾವಿಗೆ ಕಾರಣನಾಗಿದ್ದ. ಇದರ ಜೊತೆಗೆ ಹಲವರ ಶಿರಚ್ಛೇದನ ಮಾಡಿದ್ದನು.

  • ಐಸಿಸ್ ನಾಯಕ ಬಾಗ್ದಾದಿನನ್ನ ನಾಯಿಯಂತೆ ಕೊಂದಿದ್ದೇವೆ: ಟ್ರಂಪ್

    ಐಸಿಸ್ ನಾಯಕ ಬಾಗ್ದಾದಿನನ್ನ ನಾಯಿಯಂತೆ ಕೊಂದಿದ್ದೇವೆ: ಟ್ರಂಪ್

    ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಅಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ದಾದಿ ಹತ್ಯೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ.

    ಶ್ವೇತಭನವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಟ್ರಂಪ್, ಐಸಿಸ್ ನಾಯಕ ಅಬುಬಕರ್ ಅಲ್ ಬಾಗ್ದಾದಿ ಇನ್ನು ಮುಂದೆ ಯಾವೊಬ್ಬ ಮಗು, ಮಹಿಳೆ ಹಾಗೂ ವ್ಯಕ್ತಿಗೆ ಕಾಟಕೊಡಲು ಸಾಧ್ಯವಿಲ್ಲ. ಆತ ನಾಯಿಯಂತೆ ಸತ್ತಿದ್ದಾನೆ. ಬಾಗ್ದಾದಿನನ್ನು ಅಮೆರಿಕ ಸೇನೆ ಕೊಂದು ಹಾಕಿದೆ. ನಾನು ಈ ಆಪರೇಷನ್‍ನ ಬಹುತೇಕ ಭಾಗವನ್ನು ವೀಕ್ಷಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಸೇನಾ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಉಗ್ರ ನಾಯಕ ಬಾಗ್ದಾದಿ

    ಉಗ್ರ ಸಂಘಟನೆಗಳ ಪಾಲಿಗೆ ಇದೊಂದು ದೊಡ್ಡ ಸೋಲು. ಪ್ರಪಂಚ ಈಗ ಸುರಕ್ಷಿತವಾಯಿತು. ಈ ಕಾರ್ಯಾಚರಣೆಗೆ ಸಹಕಾರ ನೀಡಿದ ರಷ್ಯಾ, ಟರ್ಕಿ, ಸಿರಿಯಾ ಹಾಗೂ ಇರಾಕ್ ದೇಶಗಳಿಗೆ ಧನ್ಯವಾದ. ವಿಶ್ವದ ಅತ್ಯಂತ ಮೋಸ್ಟ್ ವಾಂಟೆಡ್ ಉಗ್ರ ಇಲ್ಲವಾದ ಅನ್ನೋದನ್ನ ಘೋಷಿಸುತ್ತಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

    ಐಸಿಸ್ ಮುಖ್ಯಸ್ಥ ಬಾಗ್ದಾದಿ ತಲೆಗೆ 25 ದಶಲಕ್ಷ ಡಾಲರ್ ಮೊತ್ತದ ಬಹುಮಾನವನ್ನು ಅಮೆರಿಕ ಘೋಷಿಸಿತ್ತು. ಡೊನಾಲ್ಡ್ ಟ್ರಂಪ್ ಶನಿವಾರ ಟ್ವೀಟ್ ಮಾಡಿ, ಅತ್ಯಂತ ದೊಡ್ಡ ಘಟನೆಯೊಂದು ನಡೆಯಲಿದೆ ಎಂದು ಬರೆದುಕೊಂಡಿದ್ದರು.

  • ಅಮೆರಿಕ ಸೇನಾ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಉಗ್ರ ನಾಯಕ ಬಾಗ್ದಾದಿ

    ಅಮೆರಿಕ ಸೇನಾ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಉಗ್ರ ನಾಯಕ ಬಾಗ್ದಾದಿ

    ವಾಷಿಂಗ್ಟನ್: ಅಮೆರಿಕ ಸೇನಾ ದಾಳಿಗೆ ಹೆದರಿ ಇಸ್ಲಾಮಿಕ್ ಸ್ಟೇಟ್ ಅಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಮೆರಿಕಾ ಮಾಧ್ಯಮಗಳು ವರದಿ ಮಾಡಿವೆ.

    ಈ ಹಿಂದೆಯಿಂದಲ್ಲೂ ಐಸಿಸ್ ಉಗ್ರ ಸಂಘಟನೆಯ ವಿರುದ್ಧ ಸಮರ ಸಾರಿದ್ದ ಅಮೆರಿಕಾ 2011 ಮೇ 2ರಂದು ಮೋಸ್ಟ್ ವಾಟೆಂಡ್ ಉಗ್ರ ಒಸಾಮಾ ಬಿನ್ ಲಾಡೆಮ್ ಅನ್ನು ಹೊಡೆದು ಹಾಕಿತ್ತು. ನಂತರ ಅಲ್ ಬಾಗ್ದಾದಿಯ ಹಿಂದೆ ಬಿದ್ದಿದ್ದ ಅಮೆರಿಕಾ ಇಂದು ಅವನು ಅಡಗಿ ಕುಳಿತ್ತಿದ ಜಾಗಕ್ಕೆ ಹೋಗಿದೆ. ಇದನ್ನು ಗಮನಿಸಿದ ಅಲ್ ಬಾಗ್ದಾದಿ ಆತ್ಮಾಹುತಿ ಬಾಂಬ್‍ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

    ಈ ಹಿಂದೆಯೂ ಹಲವು ಬಾರಿ ಅಲ್ ಬಾಗ್ದಾದಿ ಸಾವನ್ನಪ್ಪಿದ್ದಾನೆ ಎಂದು ಸುದ್ದಿಯಾಗಿತ್ತು. ಆದರೆ ಆಗ ಆತ ಸಾವನ್ನಪ್ಪಿರಲಿಲ್ಲ. ಆದರೆ ಇಂದು ಖಚಿತವಾಗಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಚಾರದ ಬಗ್ಗೆ ಅಮೆರಿಕಾ ಸೇನೆ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. ಆದರೆ ಸಿರಿಯಾದ ಇಡ್ಲಿಬ್ ಎಂಬ ಪ್ರದೇಶದ ಮೇಲೆ ದಾಳಿ ಮಾಡಿದ ಅಮೆರಿಕಾ ಸೇನೆಗೆ ಹೆದರಿ ಅಲ್ ಬಾಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

    ಇದಕ್ಕೆ ಪುಷ್ಠಿಕೊಡುವಂತೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಂದು ಟ್ವೀಟ್ ಮಾಡಿದ್ದಾರೆ. ತುಂಬಾ ದೊಡ್ಡದಾದ ಒಂದು ಕೆಲಸ ಈಗ ತಾನೇ ಆಗಿದೆ ಎಂದು ಟ್ರಂಪ್ ಬರೆದುಕೊಂಡಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಆಲ್ ಬಾಗ್ದಾದಿ ಹತನಾದ ನಂತರವೇ ಟ್ರಂಪ್ ಹೀಗೆ ಬರೆದುಕೊಂಡಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಸದ್ಯ ಟ್ರಂಪ್ ಅವರು ಇಂದು ಸಂಜೆ ಅಮೆರಿಕಾದ ಶ್ವೇತಭವನದಲ್ಲಿ ಮಾತನಾಡಲಿದ್ದು, ಈ ವಿಚಾರದ ಬಗ್ಗೆಯೇ ಮಾತನಾಡಬಹುದು ಎಂಬ ಕುತೂಹಲ ಹೆಚ್ಚಾಗಿದೆ.

    48 ವರ್ಷದ ಅಬು ಬಕರ್ ಅಲ್ ಬಾಗ್ದಾದಿ ಇರಾಕ್ ನಿವಾಸಿಯಾಗಿದ್ದು, ತನ್ನದೇಯಾದ ಉಗ್ರ ಸಂಘಟನೆಯನ್ನು ಕಟ್ಟಿಕೊಂಡು ಹಿಂಸಾತ್ಮಕ ಭಯೋತ್ಪಾದನೆಯನ್ನು ಆರಂಭ ಮಾಡಿದ್ದ. ಈತ 2014 ರಲ್ಲಿ ಸಿರಿಯಾ ಮತ್ತು ಇರಾಕ್‍ನಲ್ಲಿ ಒಂದು ಪ್ರದೇಶವನ್ನು ಆಕ್ರಮಣ ಮಾಡಿಕೊಂಡು ಅಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಆರಂಭಿಸಿ ಸಾವಿರಾರು ಜನರ ಸಾವಿಗೆ ಕಾರಣನಾಗಿದ್ದ. ಇದರ ಜೊತೆಗೆ ಹಲವರ ಶಿರಚ್ಛೇದನ ಮಾಡಿದ್ದ.