Tag: abortion

  • ಮಂಡ್ಯ | ಅಕ್ರಮ ಗರ್ಭಪಾತದ ನಂತರ ಮಹಿಳೆ ಸಾವು

    ಮಂಡ್ಯ | ಅಕ್ರಮ ಗರ್ಭಪಾತದ ನಂತರ ಮಹಿಳೆ ಸಾವು

    ಮಂಡ್ಯ: ಪಾಂಡವಪುರ (Pandavapura) ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆತಂಕಕಾರಿ ವಿಚಾರ ಹೊರಬಿದ್ದಿದೆ. ರಹಸ್ಯ ಗರ್ಭಪಾತ ಮಾಡಿಸಿಕೊಂಡಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿ, ಮತ್ತೊಬ್ಬರು ಅಸ್ವಸ್ಥಗೊಂಡ ವಿಚಾರ ತಿಳಿದು ಬಂದಿದೆ.

    ಕೆಆರ್‌ನಗರ ಮೂಲದ ಇಬ್ಬರು ಮಹಿಳೆಯರು ಗರ್ಭಪಾತ (Illegal Abortion) ಬಳಿಕ ತೀವ್ರ ಅಸ್ವಸ್ಥಗೊಂಡಿದ್ದಾರೆ. ಬೇರೆ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯಲು ಭಯಪಟ್ಟು ಗರ್ಭಪಾತ ಮಾಡಿಸಿಕೊಂಡಿದ್ದ ಪಾಂಡವಪುರಕ್ಕೆ ಮಹಿಳೆಯರು ಬಂದಿದ್ದಾರೆ. ಗರ್ಭಪಾತ ಮಾಡಿದ್ದ ಶುಶ್ರೂಷಕಿ ಪಾಂಡವಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಮಹಿಳೆಯರು ತೀವ್ರ ಅಸ್ವಸ್ಥ ಕಾರಣ ಮೈಸೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಓರ್ವ ಮಹಿಳೆ ಸಾವನ್ನಪಿದ್ದು, ಮತ್ತೊಬ್ಬರು ಗುಣಮುಖರಾಗಿದ್ದಾರೆ. ಇದನ್ನೂ ಓದಿ: ವಾಲ್ಮಿಕಿ ನಿಗಮದ ಹಣ ಐಟಿ ಕಂಪನಿ ಖಾತೆಗೆ ಅಕ್ರಮ ವರ್ಗಾವಣೆ!

    ಗರ್ಭಪಾತ ಬಳಿಕ ಸರಿಯಾದ ಆರೈಕೆ ಇಲ್ಲದೆ ಮಹಿಳೆಯರು ಅನಾರೋಗ್ಯಕ್ಕೆ ಒಳಗಾಗಿದ್ದರು. ನಂತರ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಸಿಗದೆ ಮಹಿಳೆಯರು ತೀವ್ರ ಅಸ್ವಸ್ಥಗೊಂಡಿದ್ದರು. ಈಕಾರಣಕ್ಕೆ ಮಹಿಳೆ ಸಾವನ್ನಪ್ಪಿದ್ದಾರೆ ಎಂದು‌ ಹೇಳಲಾಗುತ್ತಿದೆ.

  • ಹೆಣ್ಣು ಮಗುವೆಂದು ಮಾತ್ರೆ ಸೇವಿಸಿ ಗರ್ಭಪಾತ-ಸ್ಕ್ಯಾನಿಂಗ್ ಸೆಂಟರ್ ಸೀಜ್

    ಹೆಣ್ಣು ಮಗುವೆಂದು ಮಾತ್ರೆ ಸೇವಿಸಿ ಗರ್ಭಪಾತ-ಸ್ಕ್ಯಾನಿಂಗ್ ಸೆಂಟರ್ ಸೀಜ್

    ಕೋಲಾರ: ಹೆಣ್ಣು ಮಗುವೆಂದು ಭಾವಿಸಿ, ಮಾತ್ರೆ ಸೇವಿಸಿ ಗಂಡು ಮಗುವಿನ ಗರ್ಭಪಾತವಾದ ಘಟನೆ ಕೋಲಾರ (Kolar) ಜಿಲ್ಲೆಯ ಮಾಲೂರು ನಗರದಲ್ಲಿ ನಡೆದಿದೆ.

    ಕೆಜಿಎಫ್ ತಾಲೂಕಿನ ಆಡಂಪಲ್ಲಿ ನಿವಾಸಿ ಮುರುಗೇಶ್ ಹಾಗೂ ಅನಿತಾ ದಂಪತಿಯ 3 ತಿಂಗಳ ಮಗು ಮೃತಪಟ್ಟಿದೆ.

    ನಡೆದಿದ್ದೇನು..?: ಕಳೆದ ಸೋಮವಾರ ದಂಪತಿ ಮಾಲೂರು ನಗರದ ಸಂಜನಾ ಖಾಸಗಿ ಆಸ್ಪತ್ರೆಗೆ ಸ್ಕ್ಯಾನಿಂಗ್ ಗೆಂದು ತೆರಳಿದ್ದರು. ಈ ಹಿಂದಿನ 2 ಮಕ್ಕಳು ಹೆಣ್ಣಾಗಿದ್ದು, ಮೂರನೇಯದ್ದು ಗಂಡು ಮಗುವಾಗಲಿ ಎಂದು ದಂಪತಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಹೊಟ್ಟೆಯಲ್ಲಿರುವ ಹೆಣ್ಣು ಮಗುವನ್ನು ಗಂಡಾಗಿ ಪರಿವರ್ತನೆ ಮಾಡಿಸುವುದಾಗಿ ಹೇಳಿ ವೈದ್ಯರು ಮಾತ್ರೆಗಳನ್ನು ಕೊಟ್ಟಿದ್ದಾರೆ ಎಂದು ಇದೀಗ ಪೋಷಕರು ಆರೋಪ ಮಾಡುತ್ತಿದ್ದಾರೆ.

    ಹೆಣ್ಣು ಮಗುವೆಂದು ಸುಳ್ಳು ಹೇಳಿ 25 ಸಾವಿರ ಹಣ ಪಡೆದು ವಂಚಿಸಿದ್ದಾರೆಂದು ತಂದೆ ಮುರುಗೇಶ್ ಆರೋಪ ಮಾಡಿದ್ದಾರೆ. ಇತ್ತ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು, ನಾವು ಗರ್ಭಪಾತಕ್ಕೆ ಮಾತ್ರೆ ಕೊಟ್ಟೆ ಇಲ್ಲ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಕೆಎಎಸ್ ಅಧಿಕಾರಿಯ ಪತ್ನಿ, ಹೈಕೋರ್ಟ್ ವಕೀಲೆ ಆತ್ಮಹತ್ಯೆ – ಕಾರಣ ನಿಗೂಢ!

    ಆಸ್ಪತ್ರೆಯಲ್ಲಿ ಭ್ರೂಣ ಲಿಂಗದ ಸ್ಕ್ಯಾನಿಂಗ್ ಮಾಡಿಸಿ ಸಾವಿರಾರು ಹಣ ಪೀಕುತ್ತಿರುವ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾಲೂರು ತಾಲೂಕು ವೈದ್ಯಾದಿಕಾರಿಗೆ ಮುರುಗೇಶ್ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾಗಿದೆ. ಡಿಹೆಚ್‍ಓ ಜಗದೀಶ್ ನೇತೃತ್ವದಲ್ಲಿ ಮಾಲೂರು ಪಟ್ಟಣದ ಸಂಜನಾ ಆಸ್ಪತ್ರೆ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾಗಿದೆ.

    ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾತಾ ಅಲ್ಲದೇ ಚಾಮುಂಡೇಶ್ವರಿ ಆಸ್ಪತ್ರೆಯಲ್ಲೂ ನಡೀತಿತ್ತು ಭ್ರೂಣ ದಂಧೆ- ಹೆಡ್‌ನರ್ಸ್ ಉಷಾರಾಣಿ ಬಂಧನ

    ಮಾತಾ ಅಲ್ಲದೇ ಚಾಮುಂಡೇಶ್ವರಿ ಆಸ್ಪತ್ರೆಯಲ್ಲೂ ನಡೀತಿತ್ತು ಭ್ರೂಣ ದಂಧೆ- ಹೆಡ್‌ನರ್ಸ್ ಉಷಾರಾಣಿ ಬಂಧನ

    ಬೆಂಗಳೂರು: ಮೈಸೂರಿನಲ್ಲಿ (Mysuru) ನಡೆಯುತ್ತಿದ್ದ ಭ್ರೂಣ ದಂಧೆ (Foeticide) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಕೇವಲ ಮಾತಾ ಆಸ್ಪತ್ರೆಯಲ್ಲಿ (Matha Hospital) ಮಾತ್ರ ಭ್ರೂಣ ಹತ್ಯೆ ನಡೆಯುತ್ತಿರಲಿಲ್ಲ. ಇದರ ಜೊತೆಗೆ ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲೂ ಭ್ರೂಣ ಹತ್ಯೆ ದಂಧೆ ನಡೆಯುತ್ತಿತ್ತು ಎಂಬ ಸ್ಫೋಟಕ ಮಾಹಿತಿ ಲಭಿಸಿದೆ.

    ಮೈಸೂರಿನ ಚಾಮುಂಡೇಶ್ವರಿ ಆಸ್ಪತ್ರೆಯಲ್ಲೂ (Chamundeshwari Hospital) ಕೂಡಾ ಭ್ರೂಣ ಹತ್ಯೆ ದಂಧೆ ನಡೆಯುತ್ತಿದ್ದು, ಇಲ್ಲಿನ ಹೆಡ್‌ನರ್ಸ್ (Head Nurse) ಆಗಿದ್ದ ಉಷಾರಾಣಿ ಎಂಬಾಕೆಯನ್ನು ಬಂಧಿಸಲಾಗಿದೆ. ಬ್ರೋಕರ್ ಪುಟ್ಟರಾಜು ಅಣತಿಯಂತೆ ಮಹಿಳೆಯರಿಗೆ ಅಬಾರ್ಷನ್ ಮಾಡಲಾಗುತ್ತಿತ್ತು. ಪುಟ್ಟರಾಜು ಮಾತಾ ಆಸ್ಪತ್ರೆ ಹಾಗೂ ಚಾಮುಂಡೇಶ್ವರಿ ಆಸ್ಪತ್ರೆಗೆ ಗರ್ಭಿಣಿಯರನ್ನು ಕರೆದುಕೊಂಡು ಹೋಗುತ್ತಿದ್ದ. ಬಳಿಕ ಉಷಾರಾಣಿ ಗರ್ಭಿಣಿಯರಿಗೆ ಅಬಾರ್ಷನ್ (Abortion) ಮಾಡುತ್ತಿದ್ದಳು. ಈ ಹಿನ್ನೆಲೆ ಪೊಲೀಸರು ಉಷಾರಾಣಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಟ್ರಯಲ್ ರೂಮ್‍ನಲ್ಲಿ ಯುವತಿ ಅಶ್ಲೀಲ ಫೋಟೋ ತೆಗೆದು ಬ್ಲ್ಯಾಕ್‍ಮೇಲ್ – ಆರೋಪಿ ಅರೆಸ್ಟ್

    ಇನ್ನು ಚಾಮುಂಡೇಶ್ವರಿ ಆಸ್ಪತ್ರೆಯ ಮಾಲೀಕ ಜಗದೀಶ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಜಗದೀಶ್‌ಗೆ ನೋಟಿಸ್ ನೀಡಿದ್ದಾರೆ. ಅಲ್ಲದೇ ಚಾಮುಂಡೇಶ್ವರಿ ಆಸ್ಪತ್ರೆಯ ದಾಖಲಾತಿಗಳನ್ನು ಪೊಲೀಸರಿಗೆ ನೀಡುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಯುವತಿಯ ಹತ್ಯೆಗೈದು ಆಕೆಯ ವಾಟ್ಸಪ್ ಸ್ಟೇಟಸ್‍ಗೆ ಮೃತದೇಹದ ಫೋಟೋ ಹಾಕಿದ ಪಾಗಲ್ ಪ್ರೇಮಿ

  • ಭ್ರೂಣ ಹತ್ಯೆಯಿಂದ 5 ಕೋಟಿ ಹಣ ಸಂಪಾದನೆ- ಆಲೆಮನೆಯಲ್ಲಿ ನಡೀತಿತ್ತು ಅಬಾರ್ಷನ್!

    ಭ್ರೂಣ ಹತ್ಯೆಯಿಂದ 5 ಕೋಟಿ ಹಣ ಸಂಪಾದನೆ- ಆಲೆಮನೆಯಲ್ಲಿ ನಡೀತಿತ್ತು ಅಬಾರ್ಷನ್!

    ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣ ಸಂಬಂಧ ಬೈಯಪ್ಪನಹಳ್ಳಿ ಪೊಲೀಸರ ತನಿಖೆಯಲ್ಲಿ ಬಗೆದಷ್ಟು ಬಯಲಾಗುತ್ತಿದೆ.

    ಕಳೆದ ಎರಡು ವರ್ಷದಲ್ಲಿ ಆರೋಪಿಗಳು ಭ್ರೂಣ ಹತ್ಯೆ (Abortion) ನಡೆಸಿ 5 ಕೋಟಿ ಹಣ ಸಂಪಾದನೆ ಮಾಡಿದ್ದಾರಂತೆ. ಭ್ರೂಣ ಯಾವುದು ಅಂತಾ ಪತ್ತೆ ಮಾಡೋಕೆ 20 ರಿಂದ 25 ಸಾವಿರ ಚಾರ್ಜ್ ಮಾಡುತ್ತಿದ್ದರು. ಭ್ರೂಣ ಹೊರ ತೆಗೆಯೋಕೆ 20 ರಿಂದ 25 ಸಾವಿರ ಚಾರ್ಜ್ ಮಾಡುತ್ತಿದ್ದರು. 100% ನಿಖರ ರಿಸಲ್ಟ್ ಕೊಡ್ತಾರೆ ಅಂತಾ ಇವರಿಗೆ ಕಸ್ಟಮರ್ಸ್ ಕೂಡ ಹೆಚ್ಚಾಗುತ್ತಿದ್ದರಂತೆ.

    ಕಳೆದ ಎರಡು ವರ್ಷಗಳಲ್ಲಿ 5 ಕೋಟಿಗೂ ಹೆಚ್ಚು ವಹಿವಾಟು ನಡೆಸಿದ್ದಾರಂತೆ. ಈ ಬಗ್ಗೆ ಸುಳಿವು ಪಡೆದ ಪೊಲೀಸರು, ನಾನಾ ಸರ್ಕಸ್ ಮಾಡಿ ಹಂತಕರನ್ನು ಬಂಧಿಸಿದ್ದಾರೆ. ಗರ್ಭಿಣಿಯ ಜೊತೆ ಹೋಗಿ ಸ್ಟಿಂಗ್ ಆಪರೇಷನ್ (Sting Operation) ಮಾಡಿದ್ದ ಪೊಲೀಸರು, ಭ್ರೂಣ ಪತ್ತೆ ಮಾಡುತ್ತಿದ್ದ ಜಾಗ ಪತ್ತೆ ಮಾಡಲು ಜಿಪಿಎಸ್ ಸಹ ಬಳಸಿದ್ರು. ಗರ್ಭಿಣಿಯರಿದ್ದ ಕಾರಿಗೆ ಜಿಪಿಎಸ್ ಅಳವಡಿಸಿ ಎಕ್ಸ್ಯಾಕ್ಟ್ ಲೊಕೇಶನ್ ಪತ್ತೆ ಮಾಡಿದರು. ಇದನ್ನೂ ಓದಿ: ನಿರಂತರ ಭ್ರೂಣ ಹತ್ಯೆ – ಐವರು ವೈದ್ಯರು ಸೇರಿ 9 ಮಂದಿ ಅರೆಸ್ಟ್

    ಆರೋಪಿ ನವೀನ್ ಪ್ರತೀ ಬಾರಿ ಆಲೆ ಮನೆಗಳು, ತೋಟದ ಮನೆಗಳ ಲೊಕೇಶನ್ ಚೇಂಜ್ ಮಾಡುತ್ತಿದ್ದ. ಹೀಗಾಗಿ ಗರ್ಭಿಣಿಯರಿದ್ದ ಕಾರಿಗೆ ಜಿಪಿಎಸ್ ಅಳವಡಿಸಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. ಮಗು ಯಾವುದು ಅಂತಾ ಪತ್ತೆ ಮಾಡಿ ಮೈಸೂರಿನ ಮಾತಾ ಆಸ್ಪತ್ರೆಗೆ ಈ ಗ್ಯಾಂಗ್ ಕಳುಹಿಸುತ್ತಿತ್ತು. ಶಿವನಂಜೇಗೌಡ, ವೀರೇಶ್, ನವೀನ್, ನಯನ್ ಬಂಧನದ ಬಳಿಕ ಮೈಸೂರು ಆಸ್ಪತ್ರೆ ವಿಚಾರ ಬಯಲಿಗೆ ಬಂದಿದೆ. ಸದ್ಯ ಪ್ರಕರಣದ ತನಿಖೆಯನ್ನ ಮೆಡಿಕಲ್ ವಿಭಾಗಕ್ಕೆ ವರ್ಗಾವಣೆ ಮಾಡೋ ಸಾಧ್ಯತೆಯಿದೆ.

  • 15ರ ರೇಪ್ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಬಾಂಬೆ ಹೈಕೋರ್ಟ್

    ಮುಂಬೈ: 15 ವರ್ಷದ ಅಪ್ರಾಪ್ತ ಅತ್ಯಾಚಾರ (Rape) ಸಂತ್ರಸ್ತೆಯ 28 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಲು ಬಾಂಬೆ ಹೈಕೋರ್ಟ್ (Bombay Highcourt) ಔರಂಗಬಾದ್ ಪೀಠ ನಿರಾಕರಿಸಿದೆ.

    28 ವಾರಗಳ ಹಂತದಲ್ಲಿ ಬಲವಂತವಾಗಿ ಹೆರಿಗೆ ಮಾಡಿಸಿದರೆ ಮಗು ಜೀವಂತವಾಗಿ ಜನಿಸುತ್ತದೆ. ನವಜಾತ ಶಿಶುವಿಗೆ ಆರೈಕೆಯ ಅಗತ್ಯವಿರುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಗರ್ಭಪಾತಕ್ಕೆ (Abortion) ಅನುಮತಿ ನೀಡಲು ನ್ಯಾಯಾಲಯ ನಿರಾಕರಿಸಿದೆ. ನ್ಯಾಯಾಧೀಶರಾದ ಆರ್‌ವಿ ಘುಗೆ (R.V.Ghuge) ಮತ್ತು ವೈಜಿ ಖೋಬ್ರಗಡೆ (Y.G.Khobragade) ಅವರ ಪೀಠವು ಜೂನ್ 20ರಂದು ಈ ಆದೇಶವನ್ನು ನೀಡಿದೆ. ಇದನ್ನೂ ಓದಿ: 16ನೇ ವಯಸ್ಸಿನವ್ರಿಗೆ ಲೈಂಗಿಕ ವಿಚಾರದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿದೆ: ಮೇಘಾಲಯ ಹೈಕೋರ್ಟ್

    ಅತ್ಯಾಚಾರಕ್ಕೆ ಒಳಗಾದ ಬಾಲಕಿಯ 28 ವಾರಗಳ ಗರ್ಭಪಾತಕ್ಕೆ ಅನುಮತಿ ಕೋರಿ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. 2023ರ ಫೆಬ್ರವರಿಯಲ್ಲಿ ತನ್ನ ಮಗಳು ನಾಪತ್ತೆಯಾಗಿದ್ದು, 3 ತಿಂಗಳ ಬಳಿಕ ರಾಜಸ್ಥಾನದಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಪತ್ತೆಯಾಗಿದ್ದಾಳೆ ಎಂದು ಮಹಿಳೆ ಮನವಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸೌಜನ್ಯ ರೇಪ್‌, ಮರ್ಡರ್‌ ಕೇಸ್‌- ಆರೋಪಿ ಸಂತೋಷ್‌ ರಾವ್‌ ಖುಲಾಸೆ

    ಘಟನೆಯ ಕುರಿತು ವ್ಯಕ್ತಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿದ ಬಳಿಕ ಮಗು ಜೀವಂತವಾಗಿ ಜನಿಸುತ್ತದೆ ಮತ್ತು ನವಜಾತ ಶಿಶುವನ್ನು ಆರೈಕೆ ಮಾಡಬೇಕಾಗುತ್ತದೆ. ಅಲ್ಲದೇ ಸಂತ್ರಸ್ತೆಗೆ ಅಪಾಯವಾಗುವ ಸಾಧ್ಯತೆಗಳಿವೆ ಎಂದು ವೈದ್ಯರು ಕೋರ್ಟ್ ಗಮನಕ್ಕೆ ತಂದಿದ್ದರು. ಇದನ್ನೂ ಓದಿ: ಬ್ರಿಜ್ ಭೂಷಣ್ ವಿರುದ್ಧ 1,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ – ಪೋಕ್ಸೊ ಕೇಸ್‌ ರದ್ದಿಗೆ ದೆಹಲಿ ಪೊಲೀಸರ ಶಿಫಾರಸ್ಸು

    ಈ ಕುರಿತು ಹೈಕೋರ್ಟ್ ಬಲತ್ಕಾರವಾಗಿ ಹೆರಿಗೆಯಾದರೆ ಮಗುವಿನ ಆರೋಗ್ಯದಲ್ಲಿ ಅಥವಾ ಬೆಳವಣಿಗೆಯಲ್ಲಿ ಸಮಸ್ಯೆ ಕಾಣಿಸುವ ಸಾಧ್ಯತೆಯಿದೆ. ಒಂದು ವೇಳೆ ಸಾಮಾನ್ಯ ಹೆರಿಗೆಗೆ 12 ವಾರಗಳ ಮುನ್ನ ಮಗುವಿನ ಜನನವಾದರೆ ಅದರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಪರಿಗಣಿಸುವ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ದೆಹಲಿಯಲ್ಲಿ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಸುಪ್ರೀಂ ತಡೆ

    ಮಗು ಜೀವಂತವಾಗಿ ಜನಿಸುವ ಕಾರಣ 12 ವಾರಗಳ ನಂತರ ವೈದ್ಯರ ಸಲಹೆಯ ಮೇರೆಗೆ ಮಗು ಹುಟ್ಟಲು ಅವಕಾಶ ಮಾಡಿಕೊಡಬಹುದು. ಮಗುವಿನ ಜನನವಾದ ಬಳಿಕ ಸಂತ್ರಸ್ತೆ ಆ ಶಿಶುವನ್ನು ಅನಾಥಾಶ್ರಮಕ್ಕೆ (Orphanage) ಕೊಡಲು ಬಯಸುವುದಾದರೆ ಸಂತ್ರಸ್ತೆಗೆ ಈ ಕುರಿತು ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ಬಲವಂತದ ಹೆರಿಗೆಗೆ ಅನುಮತಿ ನೀಡುವುದರಿಂದ ಅವಧಿ ಪೂರ್ವ ಹಂತದಲ್ಲಿ ಮಗುವನ್ನು ಈ ಜಗತ್ತಿಗೆ ತರಬೇಕಾಗುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: 14ರ ಹಿಂದೂ ಬಾಲಕಿ ಕಿಡ್ನ್ಯಾಪ್‌ ಮಾಡಿ ಇಸ್ಲಾಂಗೆ ಮತಾಂತರ – ಪೋಷಕರ ಜೊತೆ ಕಳುಹಿಸಲು ಪಾಕ್‌ ಕೋರ್ಟ್‌ ನಿರಾಕರಣೆ

    ಮಗು ಸಂಪೂರ್ಣ ಬೆಳವಣಿಗೆಯಾಗಿ ಸ್ವಾಭಾವಿಕ ಹೆರಿಗೆಯಾದರೆ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ದತ್ತು ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಕೋರ್ಟ್ ತಿಳಿಸಿದೆ. ಬಳಿಕ ಸಂತ್ರಸ್ತೆಯ ತಾಯಿ ಬಾಲಕಿ ಮಗುವಿಗೆ ಜನ್ಮ ನೀಡುವವರೆಗೂ ಯಾವುದಾದರೂ ಎನ್‌ಜಿಒ ಅಥವಾ ಆಸ್ಪತ್ರೆಯಲ್ಲಿ ಆಕೆಯನ್ನು ಇರಿಸಿಕೊಳ್ಳಲು ಅನುಮತಿ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ಈ ಮನವಿಯನ್ನು ಆಲಿಸಿದ ಬಳಿಕ ಸಂತ್ರಸ್ತೆಯನ್ನು ನಾಸಿಕ್‌ನಲ್ಲಿರುವ (Nashik) ಗರ್ಭಿಣಿಯರನ್ನು ಆರೈಕೆ ಮಾಡುವ ಆಶ್ರಯ ಮನೆ ಅಥವಾ ಔರಂಗಬಾದ್‌ನಲ್ಲಿ ಮಹಿಳೆಯರಿಗಾಗಿ ಇರುವ ಸರ್ಕಾರಿ ಆಶ್ರಯ ಮನೆಗಳಲ್ಲಿ ಇರಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಇದನ್ನೂ ಓದಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ- ಯುವಕನಿಗೆ 20 ವರ್ಷ ಜೈಲು, 1 ಲಕ್ಷದ 10 ಸಾವಿರ ರೂ. ದಂಡ

    ಅಷ್ಟು ಮಾತ್ರವಲ್ಲದೇ ಹೆರಿಗೆಯ ಬಳಿಕ ಮಗುವನ್ನು ಇಟ್ಟುಕೊಳ್ಳುವ ಅಥವಾ ದತ್ತು ನೀಡುವ ನಿರ್ಧಾರವನ್ನು ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ಸಂತ್ರಸ್ತೆಗೆ ಇದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಇದನ್ನೂ ಓದಿ: ಲಿಂಗಾಯತ ಅವಹೇಳನ ಕೇಸಲ್ಲಿ ಸಿದ್ದರಾಮಯ್ಯಗೆ ರಿಲೀಫ್

  • ಗರ್ಭಪಾತಕ್ಕೆ ಯತ್ನ – 19ರ ಯುವತಿ ಸಾವು

    ಗರ್ಭಪಾತಕ್ಕೆ ಯತ್ನ – 19ರ ಯುವತಿ ಸಾವು

    ಚಂಡೀಗಢ: ಅಕ್ರಮ ಗರ್ಭಪಾತಕ್ಕೆ (Abortion) ಯತ್ನಿಸಿದ ಹಿನ್ನೆಲೆಯಲ್ಲಿ 19 ವರ್ಷದ ಯವತಿಯು (Woman) ಸಾವನ್ನಪ್ಪಿದ ಘಟನೆ ಹರಿಯಾಣದ (Haryana) ಹಿಸಾರ್ ಜಿಲ್ಲೆಯಲ್ಲಿ ನಡೆದಿದೆ.

    ಹಿಸಾರ್ ಜಿಲ್ಲೆಯ ಆಗ್ರೋಹಾದಲ್ಲಿ ಈ ಘಟನೆ ನಡೆದಿದೆ. ಯುವತಿ ಅವಿವಾಹಿತೆಯಾಗಿದ್ದು, 4 ತಿಂಗಳ ಗರ್ಭಿಣಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ಸಂಬಂಧಿಕರು ಆಕೆಯನ್ನು ಗರ್ಭಪಾತಕ್ಕಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಆಕೆಗೆ ಗರ್ಭಪಾತಕ್ಕೆ ಪ್ರಯತ್ನಿಸಲಾಗಿದೆ. ಆದರೆ ಇದರಿಂದಾಗಿ ಯುವತಿಯ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

    ಅದಾದ ಬಳಿಕ ಆಕೆಯ ಸ್ಥಿತಿ ಹದಗೆಟ್ಟಿರುವುದನ್ನು ಕಂಡು, ಪೋಷಕರು ಆಕೆಯನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ಆದರೆ ಅಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಯುವತಿಯ ಕರುಳುಗಳು ಹೊರಬಂದಿದ್ದು, ಗರ್ಭಾಶಯದಲ್ಲಿ ಗಾಯಗಳಾಗಿವೆ. ಅಷ್ಟೇ ಅಲ್ಲದೇ ಮೂತ್ರಪಿಂಡಗಳು ಸಹ ವಿಫಲವಾಗಿತ್ತು. ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ಜನರಿಗೆ ಶಾಕ್ – ಹೂವು, ಹಣ್ಣಿನ ಬೆಲೆ ದುಪ್ಪಟ್ಟು

    ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಯುವತಿ ಬಹುಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: 18 ವರ್ಷಕ್ಕೂ ಮೊದಲೇ ತಾಯಿಯಂದಿರಾದ 15 ಸಾವಿರ ಹೆಣ್ಮಕ್ಕಳು – ಕಾರಣ ಕೇಳಿದ್ರೆ ಶಾಕ್‌!

  • 5 ಬಾರಿ ಗರ್ಭಪಾತ, ಮೂರನೇ ಪತ್ನಿಯಾಗಿರುವಂತೆ ಒತ್ತಡ- ಸಿಪಿಐ ವಿರುದ್ಧ ರೇಪ್ ಕೇಸ್!

    5 ಬಾರಿ ಗರ್ಭಪಾತ, ಮೂರನೇ ಪತ್ನಿಯಾಗಿರುವಂತೆ ಒತ್ತಡ- ಸಿಪಿಐ ವಿರುದ್ಧ ರೇಪ್ ಕೇಸ್!

    ಚಿತ್ರದುರ್ಗ: ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ಜಿ.ಬಿ ಉಮೇಶ್ ವಿರುದ್ಧ ರೇಪ್ ಕೇಸ್ ದಾಖಲು ಮಾಡಲಾಗಿದೆ.

    ಶಿವಮೊಗ್ಗದಲ್ಲಿ ಯುವತಿ ಬಿಇಡಿ ಓದುತ್ತಿದ್ದಳು. ಇದೀಗ ಈಕೆ ಸೋದರ ಮಾವನ ಮಗನಾಗಿರುವ ಉಮೇಶ್ ವಿರುದ್ಧ ಚಿತ್ರದುರ್ಗ ನಗರದ ಮಹಿಳಾ ಠಾಣೆ (Chitradurga women Police Station) ಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

    5 ವರ್ಷದ ಹಿಂದೆ ದಾವಣಗೆರೆಯಲ್ಲಿ ಉಮೇಶ್ (Umesh) ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ದಾವಣಗೆರೆ (Davanagere) ಯಲ್ಲಿ ನಿವೇಶನದ ಸಮಸ್ಯೆ ಹಿನ್ನೆಲೆ ಸಹಾಯ ಕೇಳಿದ್ದೆವು. ಆಗ ದಾವಣಗೆರೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸಲಾಗಿದೆ.

    ಆತ ಕರೆದಾಗ ಹೋಗದಿದ್ದಕ್ಕೆ ಶಿವಮೊಗ್ಗ (Shivamogga)ಕ್ಕೆ ಬಂದು ಬಲತ್ಕಾರ ಮಾಡಿದ್ದಾರೆ. ಐದು ಸಲ ಯುವತಿಗೆ ಗರ್ಭಪಾತ ಮಾಡಿಸಿರುವ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ನರ್ಸ್‍ನ್ನು ಕಟ್ಟಿ ಹಾಕಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ

    ಸಿಪಿಐ ಉಮೇಶ್‍ಗೆ ಈಗಾಗಲೇ ಇಬ್ಬರು ಹೆಂಡತಿಯರಿದ್ದಾರೆ. 3ನೇ ಪತ್ನಿಯಾಗಿ ಇರುವಂತೆ ಸಿಪಿಐ ಉಮೇಶ್ ಒತ್ತಡ ಹೇರಿದ್ದಾನೆ. ದಾವಣಗೆರೆಯ ನಿವೇಶನ ನಿನಗೆ ಸಿಗದಂತೆ ಮಾಡುತ್ತೇನೆ. ನಿಮ್ಮ ತಂದೆ-ತಾಯಿಯ ಬದುಕು ಬೀದಿಗೆ ತರುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುವುದಾಗಿ ಯುವತಿ ಆರೋಪಿಸಿದ್ದಾಳೆ.

    ಕಲಂ 376 ಕ್ಲಾಸ್ (2)(ಞ)(ಟಿ), 323 (ಗಾಯಗೊಳಿಸುವುದು), 504 (ಉದ್ದೇಶಪೂರ್ವಕ ಅವಮಾನ), 506 (ಅಪರಾಧ ಬೆದರಿಕೆ) ಐಪಿಸಿ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಾದ ಬಳಿಕ ಸಿಪಿಐ ಜಿ.ಬಿ.ಉಮೇಶ್ ನಾಪತ್ತೆಯಾಗಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಎಲ್ಲಾ ಮಹಿಳೆಯರು ಸುರಕ್ಷಿತ ವೈದ್ಯಕೀಯ ಗರ್ಭಪಾತಕ್ಕೆ ಅರ್ಹರು: ಸುಪ್ರೀಂಕೋರ್ಟ್

    ಎಲ್ಲಾ ಮಹಿಳೆಯರು ಸುರಕ್ಷಿತ ವೈದ್ಯಕೀಯ ಗರ್ಭಪಾತಕ್ಕೆ ಅರ್ಹರು: ಸುಪ್ರೀಂಕೋರ್ಟ್

    ನವದೆಹಲಿ: ದೇಶದಲ್ಲಿ ಮಹಿಳೆಯರ ಗರ್ಭಪಾತದ (Abortion) ಕುರಿತಾಗಿ ಸುಪ್ರೀಂಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದ್ದು, ವಿವಾಹಿತರು ಅಥವಾ ಅವಿವಾಹಿತ ಎಲ್ಲಾ ವರ್ಗದ ಮಹಿಳೆಯರೂ ಸುರಕ್ಷಿತವಾದ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ತೀರ್ಪು ನೀಡಿದೆ.

    ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಗರ್ಭದಾರಣೆ ಕುರಿತಾಗಿ ಸಲ್ಲಿಸಿದ್ದ ಅರ್ಜಿ ಒಂದರ ವಿಚಾರಣೆ ವೇಳೆ ಈ ಮಹತ್ವದ ತೀರ್ಪನ್ನು ನೀಡಿದೆ. ಮದುವೆಯಾಗದ ಮಹಿಳೆಯರು ಸುರಕ್ಷಿತ ಮತ್ತು ವೈದ್ಯಕೀಯವಾಗಿ ಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ಳಲು ಕಾನೂನಿನಡಿಯಲ್ಲಿ ಹಕ್ಕು ಹೊಂದಿದ್ದಾರೆ. ಮದುವೆ ಆದವರು, ಮತ್ತು ಆಗದವರು ಎಂಬ ಬೇಧವನ್ನು ಗರ್ಭಪಾತ ಕಾನೂನಿನಲ್ಲಿ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಇದನ್ನೂ ಓದಿ: ಗರ್ಭಪಾತದ ಹಕ್ಕನ್ನು ರದ್ದುಗೊಳಿಸಿದ ಅಮೆರಿಕ – ಭುಗಿಲೆದ್ದ ಪ್ರತಿಭಟನೆ

    ಬಲವಂತದ ಗರ್ಭಧಾರಣೆಯನ್ನು ವೈವಾಹಿಕ ಅತ್ಯಾಚಾರ ಎಂದು ಪರಿಗಣಿಸಬೇಕು. ಸಂತ್ರಸ್ಥೆ ಗರ್ಭಪಾತಕ್ಕೆ ಇಚ್ಚಿಸಿದರೆ ಅದನ್ನು ವೈವಾಹಿಕ ಅತ್ಯಾಚಾರ ಎಂದು ಪರಿಗಣಿಸಿ ಅವಕಾಶ ನೀಡಬೇಕು. ಪ್ರಸ್ತುತ ದಿನಗಳಲ್ಲಿ ಮದುವೆಯ ಕಟ್ಟುಪಾಡುಗಳು ಪೂರ್ವ ನಿರ್ಧರಿತ ಎಂದು ಕಾನೂನಿನಲ್ಲಿ ಅಭಿಪ್ರಾಯ ಹೊಂದಲು ಸಾಧ್ಯವಿಲ್ಲ. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಬೇಕಿದೆ. ಸಮಾಜದಲ್ಲಿ ಇಂದಿನ ನೈಜತೆಯನ್ನು ಪರಿಗಣಿಸಬೇಕು ಮತ್ತು ಹಳೆಯ ಕಟ್ಟುಪಾಡುಗಳನ್ನು ಮುಂದುವರಿಸಬಾರದು. ಸಾಮಾಜಿಕ ಬದಲಾವಣೆಗಳು ಮತ್ತು ಪರಿಸ್ಥಿತಿಗೆ ತಕ್ಕಂತೆ ಕಾನೂನಿನ ಜಾರಿ ಮತ್ತು ನಿರ್ಧಾರ ಬದಲಾಗಬೇಕು. ಕಾನೂನು ನಿಂತ ನೀರಾಗಬಾರದು ಹಾಗಾಗಿ ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ನೀಡುತ್ತಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಇಂದು ಸ್ಯಾನಿಟರಿ ಪ್ಯಾಡ್, ನಾಳೆ ಕಾಂಡೋಮ್ ಕೇಳ್ತೀರಿ- ಮಹಿಳಾ ಐಎಎಸ್ ಅಧಿಕಾರಿ ವೀಡಿಯೋ ವೈರಲ್

    ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ವೈದ್ಯಕೀಯ ಗರ್ಭಪಾತ ಮತ್ತು ಮಸೂದೆ ಮತ್ತು ನಿಯಮದ ಅಡಿಯಲ್ಲಿ ಗರ್ಭಪಾತ ಮಾಡಿಸಬಹುದಾದ ಹಕ್ಕನ್ನು 24 ವಾರದವರೆಗೂ ಹೊಂದಿರುತ್ತಾರೆ ಎಂದು ಕೋರ್ಟ್ ತಿಳಿಸಿದೆ. ಇದನ್ನೂ ಓದಿ: ಪತಿಯ ಅನುಮತಿಯಿಲ್ಲದೇ ಪತ್ನಿ ಗರ್ಭಪಾತ ಮಾಡಿಸಿಕೊಳ್ಳಬಹುದು – ಕೇರಳ ಹೈಕೋರ್ಟ್

    ಅಮೆರಿಕದಲ್ಲಿ ಏನಾಗಿತ್ತು:
    ಕೆಲದಿನಗಳ ಹಿಂದೆ ಅಮೆರಿಕದ (America) ಸುಪ್ರೀಂಕೋರ್ಟ್ ಇತ್ತೀಚೆಗೆ ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಿತ್ತು. ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಮೆರಿಕದ ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಈ ಆದೇಶದಿಂದ ಕೆಲವು ಪ್ರಮುಖ ನಗರಗಳಲ್ಲಿ ಮಹಿಳೆಯರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಆ ಬಳಿಕ ಗರ್ಭಪಾತದ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿತ್ತು. ಅಮೆರಿಕದಲ್ಲಿ ಸುಪ್ರೀಂಕೋರ್ಟ್ ಗರ್ಭಪಾತಕ್ಕೆ ಕೆಲವು ಕಾನೂನು ನಿಬಂಧನೆಗಳನ್ನು ವಿಧಿಸಿದೆ. ಈ ಹಿಂದೆ ಗರ್ಭಪಾತದ ಸಂಪೂರ್ಣ ಹಕ್ಕು ಮಹಿಳೆಯರಿಗಿತ್ತು. ಆ ಬಳಿಕ ಸುಪ್ರೀಂಕೋರ್ಟ್ ಈ ಬಗ್ಗೆ ಕೆಲ ಬದಲಾವಣೆ ಮಾಡಿರುವುದರಿಂದ ಮಹಿಳೆಯರು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪತಿಯ ಅನುಮತಿಯಿಲ್ಲದೇ ಪತ್ನಿ ಗರ್ಭಪಾತ ಮಾಡಿಸಿಕೊಳ್ಳಬಹುದು – ಕೇರಳ ಹೈಕೋರ್ಟ್

    ಪತಿಯ ಅನುಮತಿಯಿಲ್ಲದೇ ಪತ್ನಿ ಗರ್ಭಪಾತ ಮಾಡಿಸಿಕೊಳ್ಳಬಹುದು – ಕೇರಳ ಹೈಕೋರ್ಟ್

    ತಿರುವನಂತಪುರಂ: ವಿವಾಹಿತ ಮಹಿಳೆ ಗರ್ಭಪಾತ ಮಾಡಿಸಲು ಪತಿಯ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ಸೋಮವಾರ ತಿಳಿಸಿದೆ.

    ಕೇರಳ ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿ ವಿಜಿ ಅರುಣ್ ಅವರಿದ್ದ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿತು. 21 ವರ್ಷ ವಯಸ್ಸಿನ ಗರ್ಭಿಣಿಯೊಬ್ಬರು (Pregnancy) 21 ವಾರಗಳ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ (Medical Termination of Pregnancy Act) ಮುಕ್ತಾಯಗೊಳಿಸಲು ಅನುಮತಿ ಕೋರಿ ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಈ ವೇಳೆ ಗರ್ಭಿಣಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿರುವುದಿಲ್ಲ ಅಥವಾ ವಿಧವೆಯಾಗಿರುವುದಿಲ್ಲ.

    ಗರ್ಭಾವಸ್ಥೆಯ ಮತ್ತು ಹೆರಿಗೆಯ ಸಮಯದಲ್ಲಿ ಒತ್ತಡ ಮತ್ತು ನೋವು ಅನುಭವಿಸುವುದು ಮಹಿಳೆಯರು ಎಂಬ ಕಾರಣವನ್ನು ಉಲ್ಲೇಖಿಸಿ, ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಮಹಿಳೆ ತನ್ನ ಪತಿಯ ಅನುಮತಿಯನ್ನು ಪಡೆಯುವ ಯಾವುದೇ ಅಗತ್ಯವಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಎಕ್ಸಾಂ ನಡೆಯುತ್ತಿದ್ದ ಸ್ಕೂಲ್‍ಗೆ ನುಗ್ಗಿದ ಹಿಂದೂ ಮುನ್ನನ್ನಿ ಸದಸ್ಯರು – ಶಾಲೆ ಮುಚ್ಚುವಂತೆ ಒತ್ತಾಯ

    court order law

    ಮಹಿಳೆ ತಾನು ಪ್ರೀತಿ ಮಾಡುತ್ತಿದ್ದ ವ್ಯಕ್ತಿ ಜೊತೆಗೆ ಕೆಲವು ತಿಂಗಳ ಹಿಂದೆಯಷ್ಟೇ ಓಡಿ ಹೋಗಿ ಮದುವೆಯಾಗಿದ್ದಳು. ಆದರೆ ಮದುವೆಯ ನಂತರ ಆತ ಮತ್ತು ಆತನ ತಾಯಿ ಇಬ್ಬರು ಆಕೆಯನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ಅಲ್ಲದೇ ಮಹಿಳೆ ಗರ್ಭಿಣಿಯಾದ ವೇಳೆ ಆಕೆಯನ್ನು ಅನುಮಾನದಿಂದ ಕಾಣಲು ಆರಂಭಿಸಿದ. ಆಕೆಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಆಕೆಯ ಭಾವನೆಗಳಿಗೆ ಸ್ಪಂದಿಸುತ್ತಿರಲಿಲ್ಲ. ದಿನೇ ದಿನೆ ಆಕೆಯ ಪತಿ ಮತ್ತು ಅತ್ತೆ ಚಿತ್ರಹಿಂಸೆ ನೀಡಲಾರಂಭಿಸಿದರು. ಕೊನೆಗೆ ಗಂಡನ ಮನೆ ಬಿಟ್ಟು ಮಹಿಳೆ ತವರು ಸೇರಬೇಕಾಯಿತು.

    ನಂತರ ಮಹಿಳೆ ತನ್ನ ಗರ್ಭಾವಸ್ಥೆಯನ್ನು ಮುಕ್ತಾಯಗೊಳಿಸಲು ನಿರ್ಧರಿಸಿ, ಕ್ಲಿನಿಕ್ ಅನ್ನು ಸಂಪರ್ಕಿಸಿದರು. ಆದರೆ ಕ್ಲಿನಿಕ್‍ನವರು ನೀವು ಪತಿಯಿಂದ ಬೇರ್ಪಟ್ಟಿರುವುದು ಸಾಬೀತಾಗಿದೆ ಎನ್ನಲು ಯಾವುದಾದರೂ ದಾಖಲೆ ನೀಡುವಂತೆ ತಿಳಿಸಿತು. ಈ ವೇಳೆ ಯಾವುದೇ ಕಾನೂನು ದಾಖಲೆ ಇಲ್ಲದ ಕಾರಣ ಮಹಿಳೆ ಈ ಕುರಿತಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಇದನ್ನೂ ಓದಿ: ಕಟೀಲ್ ಒಬ್ಬ ವಿದೂಷಕ, ಪಾಪ ಇನ್ನೂ ಮೆಚ್ಯೂರಿಟಿ ಇಲ್ಲ: ಸಿದ್ದರಾಮಯ್ಯ

    ಮಹಿಳೆ ತನ್ನ ಪತಿಯ ಮೇಲೆ ಕ್ರಿಮಿನಲ್ ದೂರು ದಾಖಲಿಸಿದ್ದು, ಪತಿ ತನ್ನೊಂದಿಗೆ ಜೀವನ ನಡೆಸಲು ಇಚ್ಛಿಸುತ್ತಿಲ್ಲ ಎಂಬ ಅಂಶವನ್ನು ಕೋರ್ಟ್ ವಿಚಾರಣೆ ವೇಳೆ ಗಮನಿಸಿದೆ. ಆಕೆಯ ವೈವಾಹಿಕ ಜೀವನದಲ್ಲಿ ತೀವ್ರ ಬದಲಾವಣೆಯಾಗಿರುವುದನ್ನು ನ್ಯಾಯಾಲಯ ಗಮನದಲ್ಲಿಟ್ಟುಕೊಂಡು, ಅರ್ಜಿದಾರರಿಗೆ ಕೊಟ್ಟಾಯಂನ ವೈದ್ಯಕೀಯ ಕಾಲೇಜು ಅಥವಾ ಇತರ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ಗರ್ಭಧಾರಣೆಯನ್ನು ಮುಕ್ತಾಯಗೊಳಿಸಲು ಅನುಮತಿ ನೀಡಿ ಆದೇಶವನ್ನು ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಆಸ್ಪತ್ರೆಯಲ್ಲಿ ರಾಕಿ ಸಾವಂತ್: ಆಗಿದ್ದು ಆಬಾರ್ಷನ್ನಾ ಅಥವಾ ಆಪರೇಷನ್ನಾ ಎಂದ ನೆಟ್ಟಿಗರು

    ಆಸ್ಪತ್ರೆಯಲ್ಲಿ ರಾಕಿ ಸಾವಂತ್: ಆಗಿದ್ದು ಆಬಾರ್ಷನ್ನಾ ಅಥವಾ ಆಪರೇಷನ್ನಾ ಎಂದ ನೆಟ್ಟಿಗರು

    ಬಾಲಿವುಡ್ ನಟಿ ರಾಕಿ ಸಾವಂತ್ ಆಸ್ಪತ್ರೆಗೆ ದಾಖಲಾಗಿದ್ದು, ಸತತ ನಾಲ್ಕು ಗಂಟೆಗಳ ಕಾಲ ಅವರು ಆಪರೇಷನ್ ಗೆ ಒಳಗಾಗಿದ್ದಾರಂತೆ. ಆಪರೇಷನ್ ನಂತರ ಬಾಯ್ ಫ್ರೆಂಡ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಲ್ಲದೇ ರಾಕಿ ಸಾವಂತ್ ಗೆ ಆಗಿದ್ದು ಆಬಾರ್ಷನ್ನಾ? ಅಥವಾ ಆಪರೇಷನ್ನಾ? ಎನ್ನುವ ಕಾಮೆಂಟ್ ಗಳು ಹರಿದು ಬಂದಿವೆ.

    ಆಪರೇಷನ್ ಗೆ ಹೋಗುವ ಮುನ್ನ ಬಾಯ್ ಫ್ರೆಂಡ್ ಆದಿಲ್ ಜೊತೆ ಆಸ್ಪತ್ರೆಯಲ್ಲೇ ರಾಕಿ ಡಾನ್ಸ್ ಮಾಡಿದ್ದು, ಆ ವಿಡಿಯೋ ಹಂಚಿಕೊಂಡಿದ್ದಾರೆ. ಎಂತಹ ಸಂದರ್ಭದಲ್ಲಿ ನನ್ನೊಂದಿಗೆ ನಿಲ್ಲಬಲ್ಲ ಹುಡುಗ ಎಂದು ಆದಿಲ್ ನನ್ನು ಹಾಡಿ ಹೊಗಳಿದ್ದಾರೆ. ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ, ಆದಿಲ್ ನನ್ನ ಜೊತೆ ಇರುತ್ತಾನೆ ಎನ್ನುವುದಕ್ಕೆ ಅವನು ಆಸ್ಪತ್ರೆಗೆ ಬಂದಿರುವುದೇ ಸಾಕ್ಷಿ ಎಂದೂ ರಾಕಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

    ರಾಕಿ ಸಾವಂತ್ ಗೆ ಹೊಟ್ಟೆಯಲ್ಲಿ ಗಂಟು ಪತ್ತೆಯಾಗಿದ್ದು, ಅದಕ್ಕಾಗಿ ಆಪರೇಷನ್ ಮಾಡಿಸಿಕೊಳ್ಳಲೇಬೇಕು ಎಂದು ವೈದ್ಯರು ಸಲಹೆ ನೀಡಿದ್ದರಂತೆ. ಹಾಗಾಗಿ ನಾಲ್ಕು ಗಂಟೆಗಳ ಕಾಲ ಹೊಟ್ಟೆ ಆಪರೇಷನ್ ಗೆ ಒಳಗಾಗಿದ್ದಾರೆ ರಾಕಿ. ಆಪರೇಷನ್ ನಂತರ ಅವರು ತಮ್ಮ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಕೊಡದೇ ಇದ್ದರೂ, ಅಭಿಮಾನಿಗಳು ಮಾತ್ರ, ಇದು ಆಪರೇಷನ್ ಅಲ್ಲ ಗರ್ಭಪಾತ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]