Tag: Abishek Porel

  • ರಾಹುಲ್‌, ಪೋರೆಲ್‌ ಅಮೋಘ ಫಿಫ್ಟಿ – ಡೆಲ್ಲಿ ಕ್ಯಾಪಿಟಲ್ಸ್‌ಗೆ 8 ವಿಕೆಟ್‌ಗಳ ಭರ್ಜರಿ ಗೆಲುವು

    ರಾಹುಲ್‌, ಪೋರೆಲ್‌ ಅಮೋಘ ಫಿಫ್ಟಿ – ಡೆಲ್ಲಿ ಕ್ಯಾಪಿಟಲ್ಸ್‌ಗೆ 8 ವಿಕೆಟ್‌ಗಳ ಭರ್ಜರಿ ಗೆಲುವು

    – ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದ ಲಕ್ನೋ ಸೂಪರ್‌ ಜೈಂಟ್ಸ್‌

    ನವದೆಹಲಿ: ಅಭಿಷೇಕ್‌ ಪೊರೆಲ್‌ (Abishek Porel) ಹಾಗೂ ಕೆಎಲ್‌ ರಾಹುಲ್‌ (KL Rahul) ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೆಂಟ್ಸ್‌ (Lucknow Super Giants) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) 8 ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಭದ್ರಪಡಿಸಿಕೊಂಡಿದ್ದರೆ, ಲಕ್ನೋ ತಂಡ 5ನೇ ಸ್ಥಾನಕ್ಕೆ ಕುಸಿದಿದೆ.

    ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್‌ ಜೆಂಟ್ಸ್‌, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಲಕ್ನೋ ನೀಡಿದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ 17.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 161 ರನ್‌ ಗಳಿಸಿ ಗೆಲುವು ಸಾಧಿಸಿದೆ.ಇದನ್ನೂ ಓದಿ: ಜಾತಿ‌ ಜನಗಣತಿ ವರದಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲಿ: ಸಿ.ಟಿ ರವಿ ಆಗ್ರಹ

    ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ ತಂಡದ ಪರ ಕರುಣ್‌ ನಾಯರ್‌ 9 ಎಸೆತಗಳಲ್ಲಿ 15, ಅಭಿಷೇಕ್‌ ಪೊರೆಲ್‌ 36 ಎಸೆತಗಳಲ್ಲಿ 51, ಕೆಎಲ್‌ ರಾಹುಲ್‌ ಔಟಾಗದೇ 42 ಎಸೆತಗಳಲ್ಲಿ 57 ರನ್‌, ಅಕ್ಷರ್‌ ಪಟೇಲ್‌ ಔಟಾಗದೇ 20 ಎಸೆತಗಳಲ್ಲಿ 34 ರನ್‌ಗಳಿಸಿತು. ಲಕ್ನೋ ಪರ ಏಡನ್‌ ಮಾರ್ಕ್ರಮ್‌ 2 ವಿಕೆಟ್‌ ಕಬಳಿಸಿದರು.

    ಲಕ್ನೋ ಸೂಪರ್‌ ಜೆಂಟ್ಸ್‌ ಪರ ಏಡನ್‌ ಮಾರ್ಕ್ರಮ್‌ 33 ಎಸೆತಗಳಲ್ಲಿ 52, ಮಿಚೆಲ್‌ ಮಾರ್ಷ್‌ 36 ಎಸೆತಗಳಲ್ಲಿ 45, ಆಯುಷ್‌ ಬಡೋನಿ 21 ಎಸೆತಗಳಲ್ಲಿ 36 ಹಾಗೂ ಡೇವಿಡ್‌ ಮಿಲ್ಲರ್‌ ಔಟಾಗದೇ 15 ಎಸೆತಗಳಲ್ಲಿ 14 ರನ್‌ಗಳಿಸಿ, 160 ರನ್‌ಗಳ ಗೆಲುವಿನ ಗುರಿ ನೀಡುವಲ್ಲಿ ನೆರವಾದರು.

    ಡೆಲ್ಲಿ ಪರ ಮುಖೇಶ್‌ ಕುಮಾರ್‌ 4, ಮಿಚೆಲ್‌ ಸ್ಟಾರ್ಕ್‌ ಹಾಗೂ ದುಷ್ಮಂತ ಚಮೀರ ತಲಾ 1 ವಿಕೆಟ್‌ ಕಬಳಿಸಿದರು.ಇದನ್ನೂ ಓದಿ: ಕಾಂಗ್ರೆಸ್ಸಿಗರಿಂದ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ, ಇದು ಜಾಹೀರಾತಿನ ಸರ್ಕಾರ: ಬಿವೈವಿ

  • ಲಕ್ನೋ ವಿರುದ್ಧ ಡೆಲ್ಲಿಗೆ 19 ರನ್‌ಗಳ ಜಯ – ರಾಹುಲ್‌ ಪಡೆಗೆ ಪ್ಲೇ-ಆಫ್‌ ಹಾದಿ ಕಠಿಣ

    ಲಕ್ನೋ ವಿರುದ್ಧ ಡೆಲ್ಲಿಗೆ 19 ರನ್‌ಗಳ ಜಯ – ರಾಹುಲ್‌ ಪಡೆಗೆ ಪ್ಲೇ-ಆಫ್‌ ಹಾದಿ ಕಠಿಣ

    – ಪೊರೆಲ್‌ ಹಾಗೂ ಟ್ರಿಸ್ಟನ್ ಫಿಫ್ಟಿಗೆ ಒಲಿದ ಜಯ
    – 3 ವಿಕೆಟ್‌ ಕಿತ್ತು ಮಿಂಚಿದ ಇಶಾಂತ್‌ ಶರ್ಮಾ
    – ನಿಕೋಲಸ್ ಪೂರನ್ ಮತ್ತು ಅರ್ಷದ್‌ ಖಾನ್‌ ಫಿಫ್ಟಿ ಆಟ ವ್ಯರ್ಥ

    ನವದೆಹಲಿ: ಅಭಿಷೇಕ್‌ ಪೊರೆಲ್‌ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ ಆಕರ್ಷಕ ಫಿಫ್ಟಿ ಹಾಗೂ ಇಶಾಂತ್‌ ಶರ್ಮಾ ಅಬ್ಬರದ ಬೌಲಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 19 ರನ್‌ಗಳ ಜಯ ಸಾಧಿಸಿತು. ಪ್ಲೇ-ಆಫ್‌ ಕನಸು ಕಂಡಿದ್ದ ರಾಹುಲ್‌ ಪಡೆಗೆ ಸೋಲಿನ ಹಾದಿ ಮತ್ತಷ್ಟು ಕಠಿಣವಾಗಿದೆ.

    ಇಲ್ಲಿ ನಡೆದ ಐಪಿಎಲ್‌ ಟಿ-20 ಕ್ರಿಕೆಟ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 20 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 208 ರನ್‌ ಗಳಿಸಿತು. 209 ರನ್‌ ಗುರಿ ಬೆನ್ನತ್ತಿದ ಲಕ್ನೋ 20 ಓವರ್‌ಗೆ 9 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಡೆಲ್ಲಿಗೆ ಆರಂಭಿಕ ಆಘಾತ ಎದುರಾಯಿತು. ಸ್ಫೋಟಕ ಬ್ಯಾಟರ್‌ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್‌ ಡಕೌಟ್‌ ಆಗಿ ಪೆವಿಲಿಯನ್‌ ಸೇರಿದರು. ಆದರೂ ವಿಚಲಿತರಾಗದ ಡೆಲ್ಲಿ ಬ್ಯಾಟರ್‌ಗಳು ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

    ಮತ್ತೊಬ್ಬ ಓಪನರ್‌ ಅಭಿಷೇಕ್‌ ಪೊರೆಲ್‌ ಅರ್ಧಶತಕ (58 ರನ್‌, 33 ಎಸೆತ, 5 ಬೌಂಡರಿ, 4 ಸಿಕ್ಸರ್‌) ಸಿಡಿಸಿ ಮಿಂಚಿದರು. ಶಾಯ್‌ ಹೋಪ್‌ 38 ಹಾಗೂ ನಾಯಕ ರಿಷಭ್‌ ಪಂತ್‌ 33 ರನ್‌ ಗಳಿಸಿ ಸವಾಲಿನ ಮೊತ್ತ ಪೇರಿಸಲು ಸಹಕಾರಿಯಾದರು. ಕೊನೆಯ ಓವರ್‌ಗಳಲ್ಲಿ ಅಬ್ಬರಿಸಿದ ಟ್ರಿಸ್ಟನ್‌ ಸ್ಟಬ್ಸ್‌ 57 ರನ್‌ ಬಾರಿಸಿ (25 ಬಾಲ್‌, 3 ಫೋರ್‌, 4 ಸಿಕ್ಸರ್‌) ಉತ್ತಮ ಮೊತ್ತಕ್ಕೆ ನೆರವಾದರು.

    ಲಕ್ನೋ ಪರ ನವೀನ್-ಉಲ್-ಹಕ್ 2 ವಿಕೆಟ್‌ ಕಿತ್ತರು. ಅರ್ಷದ್ ಖಾನ್ ಹಾಗೂ ರವಿ ಬಿಷ್ಣೋಯ್ ತಲಾ ಒಂದು ವಿಕೆಟ್‌ ಪಡೆದರು.

    ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ 209 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಲಕ್ನೋ ಬ್ಯಾಟಿಂಗ್‌ ವೈಫಲ್ಯ ಎದುರಿಸಿತು. ತಂಡದ ಮೊತ್ತ ಕೇವಲ 7 ರನ್‌ ಇದ್ದಾಗಲೇ ಲಕ್ನೋ ತಂಡದ ನಾಯಕ ಕೆ.ಎಲ್‌.ರಾಹುಲ್‌ ಕ್ಯಾಚ್‌ ನೀಡಿ ಪೆವಿಲಿಯನ್‌ಗೆ ಮರಳಿದರು. ಮೊದಲ ಪವರ್‌ ಪ್ಲೇ ಮುಕ್ತಾಯಕ್ಕೆ 59 ರನ್‌ ಗಳಿಸಿದ್ದ ಲಕ್ನೋ ಪ್ರಮುಖ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

    ನಿಕೋಲಸ್ ಪೂರನ್ ಮತ್ತು ಅರ್ಷದ್‌ ಖಾನ್‌ ಫಿಫ್ಟಿ ಆಟ ವ್ಯರ್ಥವಾಯಿತು. ಪೂರನ್‌ 27 ಬಾಲ್‌ಗೆ 61 ರನ್‌ (6 ಫೋರ್‌, 4 ಸಿಕ್ಸರ್‌) ಹಾಗೂ ಖಾನ್‌ ಔಟಾಗದೇ 58 ರನ್‌ (33 ಬಾಲ್‌, 3 ಫೋರ್‌, 5 ಸಿಕ್ಸರ್‌) ಸಿಡಿಸಿ ಮಿಂಚಿದರೂ ಪ್ರಯೋಜನವಾಗಲಿಲ್ಲ. ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದ ಕಾರಣ ತಂಡದ ಸೋಲನುಭವಿಸಿತು.

    ಕೃನಾಲ್ ಪಾಂಡ್ಯ 18, ಯುದ್ಧವೀರ್ ಸಿಂಗ್ 14 ಗಳಿಸಿದರು. ಡೆಲ್ಲಿ ಪರ 3 ವಿಕೆಟ್‌ ಕಬಳಿಸಿ ಇಶಾಂತ್ ಶರ್ಮಾ ಮಿಂಚಿದರು. ಖಲೀಲ್ ಅಹಮದ್, ಅಕ್ಷರ್ ಪಟೇಲ್, ಮುಖೇಶ್ ಕುಮಾರ್, ಕುಲದೀಪ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್ ತಲಾ 1 ವಿಕೆಟ್‌ ಕಿತ್ತರು.

  • ಫಲಿಸದ ಪಂತ್‌ ಮ್ಯಾಜಿಕ್‌; ಕರ್ರನ್‌ ಅಮೋಘ ಅರ್ಧಶತಕ – ಪಂಜಾಬ್‌ ಕಿಂಗ್ಸ್‌ಗೆ 4 ವಿಕೆಟ್‌ ಜಯ

    ಫಲಿಸದ ಪಂತ್‌ ಮ್ಯಾಜಿಕ್‌; ಕರ್ರನ್‌ ಅಮೋಘ ಅರ್ಧಶತಕ – ಪಂಜಾಬ್‌ ಕಿಂಗ್ಸ್‌ಗೆ 4 ವಿಕೆಟ್‌ ಜಯ

    – ಲಿಯಾಮ್‌ ಲಿವಿಂಗ್‌ಸ್ಟೋನ್‌ ಬ್ಯಾಟಿಂಗ್‌ ಬಲ

    ಚಂಡೀಗಢ: ಸ್ಯಾಮ್‌ ಕರ್ರನ್‌ (Sam Curran) ಅಮೋಘ ಅರ್ಧಶತಕದ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದ ಪಂಜಾಬ್‌ ಕಿಂಗ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿದೆ.

    ಪಂಜಾಬ್‌ ಗೆಲುವಿಗೆ ಕೊನೇ ಓವರ್‌ನಲ್ಲಿ 6 ರನ್‌ಗಳ ಅಗತ್ಯವಿತ್ತು. ಆದ್ರೆ ಬೌಲಿಂಗ್‌ನಲ್ಲಿದ್ದ ಸುಮಿತ್ ಕುಮಾರ್ ಆರಂಭದಲ್ಲೇ 2 ವೈಡ್‌ ಎಸೆದರು. ಮೊದಲ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲವಾದರೂ ಕ್ರೀಸ್‌ನಲ್ಲಿದ್ದ ಲಿಯಾಮ್‌ ಲಿವಿಂಗ್‌ಸ್ಟೋನ್‌ (Liam Livingstone) 2ನೇ ಎಸೆತದಲ್ಲಿ ಸಿಕ್ಸರ್‌ ಬಾರಿಸಿ ಗೆಲುವು ತಂದುಕೊಟ್ಟರು.

    ಪಂಜಾಬ್‌ನ ಮುಲ್ಲನ್ಪುರ್‌ನಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಪಂಜಾಬ್‌ ಕಿಂಗ್ಸ್‌ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಟ್ಟುಕೊಟ್ಟಿತು.

    ಮೊದಲು ಬ್ಯಾಟಿಂಗ್‌ ಮಾಡಿದ ರಿಷಭ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿತ್ತು. 175 ರನ್‌ ಗಳ ಗುರಿ ಬೆನ್ನತ್ತಿದ್ದ ಪಂಜಾಬ್‌ ಕಿಂಗ್ಸ್‌ (Punjab Kings) 19.2 ಓವರ್‌ಗಳಲ್ಲೇ 6 ವಿಕೆಟ್‌ಗೆ 177 ರನ್‌ ಗಳಿಸಿ ಗೆಲುವು ಸಾಧಿಸಿತು.

    ಚೇಸಿಂಗ್‌ ಆರಂಭಿಸಿದ ಕಿಂಗ್ಸ್‌ ಪಂಜಾಬ್‌ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಪವರ್‌ಪ್ಲೇನಲ್ಲೇ ಎರಡು ಪ್ರಮುಖ ವಿಕೆಟ್‌ ಕಳೆದುಕೊಂಡಿತು. ಆದ್ರೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಸ್ಯಾಮ್‌ ಕರ್ರನ್‌ 63 ರನ್‌ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಕರ್ರನ್‌ ಜೊತೆಗೂಡಿದ ಲಿವಿಂಗ್‌ಸ್ಟೋನ್‌ ಸಹ ಇದಕ್ಕೆ ಸಾಥ್‌ ನೀಡಿದರು.

    ಕಿಂಗ್ಸ್‌ ಪಂಜಾಬ್‌ ಪರ ಸ್ಯಾಮ್‌ ಕರ್ರನ್‌ 63 ರನ್‌ (47 ಎಸೆತ, 6 ಬೌಂಡರಿ, 1 ಸಿಕ್ಸರ್‌), ಲಿವಿಂಗ್‌ಸ್ಟೋನ್‌ 38 ರನ್‌, ಶಿಖರ್‌ ಧವನ್‌ 22 ರನ್‌, ಜಾನಿ ಬೈರ್‌ಸ್ಟೋವ್‌ 9 ರನ್‌, ಪ್ರಭ್‌ಸಿಮ್ರನ್‌ ಸಿಂಗ್‌ 26 ರನ್‌, ಜಿತೇಶ್‌ ಶರ್ಮಾ 9 ರನ್‌, ಹರ್ಪ್ರೀರ್‌ ಬ್ರಾರ್‌ 2 ರನ್‌ ಗಳಿಸಿದರು.

    ಡೆಲ್ಲಿ ಪರ ಖಲೀಲ್‌ ಅಹ್ಮದ್‌, ಕುಲ್ದೀಪ್‌ ಯಾದವ್‌ 2 ವಿಕೆಟ್‌ ಕಿತ್ತರೆ, ಇಶಾಂತ್‌ ಶರ್ಮಾ ಒಂದು ವಿಕೆಟ್‌ ಕಿತ್ತರು.

    ಕೊನೇ ಓವರ್‌ನಲ್ಲಿ 25 ರನ್‌ ಚಚ್ಚಿದ ಅಭಿಷೇಕ್‌:
    ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಸ್ಫೋಟಕ ಆರಂಭದ ಹೊರತಾಗಿಯೂ ಅಗ್ರಕ ಕ್ರಮಾಂಕದ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 19 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 149 ರನ್‌ ಗಳಿಸಿತ್ತು. ಡೆಲ್ಲಿ ತಂಡ 160 ರನ್‌ ತಲುಪುವುದೂ ಕಷ್ಟವಾಗಿತ್ತು. ಆದ್ರೆ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿದ ಪಶ್ಚಿಮ ಬಂಗಾಳದ ಅಭಿಷೇಕ್‌ ಪೋರೆಲ್‌ ಒಂದೇ ಓವರ್‌ನಲ್ಲಿ 25 ರನ್‌ ಚಚ್ಚಿದರು. ಇದರಿಂದ ತಂಡದ ಮೊತ್ತ 170 ರನ್‌ಗಳ ಗಡಿ ದಾಟಿತು.

    ಪಂತ್‌ ಕಂಬ್ಯಾಕ್‌ – ಅಭಿಮಾನಿಗಳಿಂದ ವೆಲ್‌ಕಮ್‌:
    ಕಾರು ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್‌ ಪಂತ್‌ 14 ತಿಂಗಳ ಬಳಿಕ ಮತ್ತೆ ಕ್ರೀಸ್‌ಗಿಳಿದು ಬ್ಯಾಟಿಂಗ್‌ ಮಾಡಿದರು. ರಿಷಭ್‌ ಕ್ರೀಸ್‌ಗೆ ಬರುತ್ತಿದ್ದಂತೆ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆಯೊಂದಿಗೆ ಸ್ವಾಗತಿಸಿದರು.

    ಡೆಲ್ಲಿ ಪರ ಡೇವಿಡ್‌ ವಾರ್ನರ್‌ 29 ರನ್‌, ಮಿಚೆಲ್‌ ಮಾರ್ಷ್‌ 20 ರನ್‌, ಶಾಯಿ ಹೋಪ್‌ 33 ರನ್‌, ರಿಷಭ್‌ ಪಂತ್‌ 18 ರನ್‌, ರಿಕಿ ಭುಯಿ 3 ರನ್‌, ಟ್ರಿಸ್ಟಾನ್ ಸ್ಟಬ್ಸ್ 5 ರನ್‌, ಅಕ್ಷರ್‌ ಪಟೇಲ್‌ 21 ರನ್‌, ಸುಮಿತ್‌ ಕುಮಾರ್‌ 2 ರನ್‌, ಕುಲ್ದೀಪ್‌ 1 ರನ್‌ ಗಳಿಸಿದ್ರೆ, ಅಭಿಷೇಕ್‌ 10 ಎಸೆತಗಳಲ್ಲಿ 32 ರನ್‌ ಬಾರಿಸಿ ಕ್ರೀಸ್‌ನಲ್ಲಿ ಉಳಿದರು.

    ಪಂಜಾಬ್‌ ಪರ ಅರ್ಷ್‌ದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌ ತಲಾ 2 ವಿಕೆಟ್‌ ಕಿತ್ತರೆ, ಕಗಿಸೋ ರಬಾಡ, ಹರ್ಪ್ರೀತ್‌ ಬ್ರಾರ್‌, ರಾಹುಲ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • IPL 2023: ಖಾತೆ ತೆರೆದ ಮುಂಬೈ – ಡೆಲ್ಲಿ ಕ್ಯಾಪಿಟಲ್ಸ್‌ಗೆ ಸತತ 4ನೇ ಸೋಲು

    IPL 2023: ಖಾತೆ ತೆರೆದ ಮುಂಬೈ – ಡೆಲ್ಲಿ ಕ್ಯಾಪಿಟಲ್ಸ್‌ಗೆ ಸತತ 4ನೇ ಸೋಲು

    ಮಂಬೈ: ನಾಯಕ ರೋಹಿತ್‌ ಶರ್ಮಾ (Rohit Sharma) ಭರ್ಜರಿ ಅರ್ಧ ಶತಕ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ 2023 ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ಆದರೆ ಡೆಲ್ಲಿ ಸತತ 4ನೇ ಸೋಲಿನೊಂದಿಗೆ ಮುಖಭಂಗ ಅನುಭವಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 19.4 ಓವರ್‌ಗಳಲ್ಲಿ 172 ರನ್‌ ಗಳಿಸಿ ಸರ್ವಪತನ ಕಂಡಿತು. 173 ರನ್‌ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 173 ರನ್‌ ಗಳಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: IPL 2023: ಸೋಲಿನ ಬೆನ್ನಲ್ಲೇ RCBಗೆ ಶಾಕ್‌ – ನಾಯಕ ಡುಪ್ಲೆಸಿಸ್‌ಗೆ 12 ಲಕ್ಷ ದಂಡ

    ಮುಂಬೈ ಇಂಡಿಯನ್ಸ್‌ ಪರ ರೋಹಿತ್‌ ಶರ್ಮಾ 45 ಎಸೆತಗಳಲ್ಲಿ 65 ರನ್‌ (6 ಬೌಂಡರಿ, 4 ಸಿಕ್ಸರ್‌), ಇಶಾನ್‌ ಕಿಶನ್‌ 31 ರನ್‌ ಹಾಗೂ ತಿಲಕ್‌ ವರ್ಮಾ 29 ಎಸೆತಗಳಲ್ಲಿ 4 ಸಿಕ್ಸರ್‌, 1 ಬೌಂಡರಿ ನೆರವಿನೊಂದಿಗೆ 41 ರನ್‌ ಗಳಿಸುವ ಮೂಲಕ ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳಿಂದಲೇ 50 ರನ್‌ – ಇಬ್ಬರು ವಿಶೇಷ ವ್ಯಕ್ತಿಗಳಿಗೆ ಅರ್ಧಶತಕ ಅರ್ಪಿಸಿದ ಪೂರನ್‌

    ಇನ್ನೂ ಡೆಲ್ಲಿ ಕ್ಯಾಪಿಟಲ್ಸ್‌ ಪರ ಡೇವಿಡ್‌ ವಾರ್ನರ್‌ (David Warner) ಮಂದಗತಿಯ ಬ್ಯಾಟಿಂಗ್‌ ನಡೆಸಿ 47 ಎಸೆತಗಳಲ್ಲಿ 51 ರನ್‌ ಗಳಿಸಿದರೆ, ಕೊನೆಯಲ್ಲಿ ಅಕ್ಷರ್‌ ಪಟೇಲ್‌ (Axar Patel) 25 ಎಸೆತಗಳಲ್ಲಿ ಸ್ಫೋಟಕ 54 ರನ್‌ (5 ಸಿಕ್ಸರ್‌, 4 ಬೌಂಡರಿ) ಚಚ್ಚಿ ತಂಡದ ಮೊತ್ತ 170ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ಮುಂಬೈ ಇಂಡಿಯನ್ಸ್‌ ಪರ ಪಿಯೂಷ್‌ ಚಾವ್ಲಾ, ಜೇಸನ್ ಬೆಹ್ರೆನ್ಡಾರ್ಫ್ ತಲಾ ಮೂರು ವಿಕೆಟ್‌ ಕಿತ್ತರೆ, ರಿಲೆ ಮೆರೆಡಿತ್ 2 ವಿಕೆಟ್‌, ಹೃತಿಕ್ ಶೋಕೀನ್ ಒಂದು ವಿಕೆಟ್‌ ಕಿತ್ತರು. ಇನ್ನೂ ಡೆಲ್ಲಿ ಪರ ಮುಕೇಶ್‌ ಕುಮಾರ್‌ 2 ವಿಕೆಟ್‌ ಕಿತ್ತರೆ ಮುಸ್ತಫರ್‌ ರೆಹ್ಮಾನ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.