Tag: abhishek manu singhvi

  • ನಾನು 3 ನಿಮಿಷ ಮಾತ್ರ ಸ್ಥಳದಲ್ಲಿ ಕುಳಿತಿದ್ದೆ, 30 ನಿಮಿಷ ಕ್ಯಾಂಟೀನ್‌ನಲ್ಲಿ ಇದ್ದೆ: ಮನುಸಿಂಘ್ವಿ

    ನಾನು 3 ನಿಮಿಷ ಮಾತ್ರ ಸ್ಥಳದಲ್ಲಿ ಕುಳಿತಿದ್ದೆ, 30 ನಿಮಿಷ ಕ್ಯಾಂಟೀನ್‌ನಲ್ಲಿ ಇದ್ದೆ: ಮನುಸಿಂಘ್ವಿ

    – ನಾನು ಕುಳಿತಿದ್ದ ಸ್ಥಳದಲ್ಲಿ ಹಣ ಸಿಕ್ಕಿದೆ ಎಂದಾಗ ಆಶ್ಚರ್ಯವಾಯಿತು ಎಂದ ಸಂಸದ

    ನವದೆಹಲಿ: ಕಾಂಗ್ರೆಸ್ ಸಂಸದ ಅಭಿಷೇಕ್ ಮನುಸಿಂಘ್ವಿ (Abhishek Singhvi) ಸೀಟ್ ನಂಬರ್ 222 ರಲ್ಲಿ 500 ರೂ. ಹಣದ ನೋಟುಗಳು ಸಿಕ್ಕಿವೆ. ಸದನ ಮುಕ್ತಾಯದ ಬಳಿಕ ರೊಟೀನ್ ಚೆಕಪ್ ವೇಳೆ ಹಣ ಕಂಡುಬಂದಿದ್ದು, ರಾಜ್ಯಸಭೆ ಸಭಾಧ್ಯಕ್ಷರು ಇಂದು ಸದನದಲ್ಲಿ ಮಾಹಿತಿ ನೀಡಿದ್ದಾರೆ. ಈ ವೇಳೆ ಸದನದಲ್ಲಿ ಕೋಲಾಹಲ ಎದ್ದಿತು. ಘಟನೆ ಕುರಿತು ಮನುಸಿಂಘ್ವಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ವೀಡಿಯೋವೊಂದರಲ್ಲಿ ಮಾತನಾಡಿರುವ ಅವರು, ಈ ಬಗ್ಗೆ ಕೇಳಿ ನನಗೆ ಆಶ್ಚರ್ಯವಾಗಿದೆ. ನಿನ್ನೆ ಮಧ್ಯಾಹ್ನ 12.57ಕ್ಕೆ ಸದನದ ಒಳಗೆ ತಲುಪಿದ್ದೆ. ಮಧ್ಯಾಹ್ನ 1 ಗಂಟೆಗೆ ಸದನ ಏರಿತು. ಮಧ್ಯಾಹ್ನ 1 ರಿಂದ 1.30ರ ವರೆಗೆ ನಾನು ಅಯೋಧ್ಯೆ ಸಂಸದ ಅವದೇಶ್ ಪ್ರಸಾದ್ ಅವರೊಂದಿಗೆ ಕ್ಯಾಂಟೀನ್‌ನಲ್ಲಿ ಕುಳಿತು ಊಟ ಮಾಡಿದೆ. ನಾನು ಮಧ್ಯಾಹ್ನ 1.30ಕ್ಕೆ ಸಂಸತ್ತನ್ನು ಬಿಟ್ಟೆ. ಹೀಗಾಗಿ ನಿನ್ನೆ ಸದನದಲ್ಲಿ ಒಟ್ಟು 3 ನಿಮಿಷ, ಕ್ಯಾಂಟೀನ್‌ನಲ್ಲಿ 30 ನಿಮಿಷ ಇದ್ದೆ. ಇಂತಹ ವಿಚಾರಗಳಲ್ಲೂ ರಾಜಕೀಯ ಮಾಡುತ್ತಿರುವುದು ನನಗೆ ವಿಚಿತ್ರವೆನಿಸುತ್ತದೆ. ಸಹಜವಾಗಿ ಜನರು ಎಲ್ಲಿಯಾದರೂ ಮತ್ತು ಯಾವುದೇ ಆಸನದಲ್ಲಿ ಏನನ್ನು ಇರಿಸಬಹುದು ಎಂಬುದರ ಕುರಿತು ತನಿಖೆ ನಡೆಯಬೇಕು ಎಂದಿದ್ದಾರೆ. ಇದನ್ನೂ ಓದಿ: MSPಗೆ ಆಗ್ರಹಿಸಿ ದೆಹಲಿಗೆ ನುಗ್ಗಲು ಯತ್ನಿಸಿದ ರೈತರ ಮೇಲೆ ಅಶ್ರುವಾಯು ಪ್ರಯೋಗ

    ಇದರರ್ಥ ನಮಗೆ ಇರುವ ಆಸನವನ್ನು ಲಾಕ್ ಮಾಡಬಹುದು, ಲಾಕ್‌ ಮಾಡಿ ಸಂಸದರೇ ತಮ್ಮೊಂದಿಗೆ ಕೀಲಿ ತೆಗೆದುಕೊಂಡು ಹೋಗಬಹುದು. ಏಕೆಂದರೆ ಎಲ್ಲರೂ ಅಸನದ ಮೇಲೆ ಕುಳಿತು ಏನು ಬೇಕಾದರೂ ಮಾಡಬಹುದು, ಇದರಿಂದ ಆರೋಪಗಳನ್ನು ಮಾಡಬಹುದು. ಆದ್ರೆ ಮಾಡುವಂತರ ಆರೋಪಗಳು ಗಂಭೀರವಾಗಿಲ್ಲದಿದ್ದಾಗ ನಗೆಪಾಟಲಿಗೀಡಾಗುತ್ತದೆ. ಘಟನೆ ಕುರಿತು ನಾನು ಭದ್ರತಾ ಏಜೆನ್ಸಿಗಳಿಗೆ ಮನವಿ ಮಾಡುತ್ತೇನೆ. ಏನಾದ್ರೂ ಲೋಪವಿದ್ದರೆ ಅದನ್ನು ಸಹ ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

    ಏನಿದು ಘಟನೆ?
    ಕಾಂಗ್ರೆಸ್ ಸಂಸದ ಅಭಿಷೇಕ್ ಮನುಸಿಂಘ್ವಿ ಸೀಟಿನಲ್ಲಿ ಹಣದ ನೋಟುಗಳು ಪತ್ತೆಯಾಗಿತ್ತು. ರಾಜ್ಯಸಭೆಯ ಸೀಟ್ ನಂಬರ್ 222 ರಲ್ಲಿ ನೋಟುಗಳು ಪತ್ತೆಯಾಗಿತ್ತು. ಗುರುವಾರ (ಡಿ.5) ಸದನ ಮುಕ್ತಾಯದ ಬಳಿಕ ರೊಟೀನ್ ಚೆಕಪ್ ವೇಳೆ ಹಣ ಕಂಡುಬಂದಿತ್ತು. ಹಣ ಪತ್ತೆಯಾಗಿರುವ ಬಗ್ಗೆ ರಾಜ್ಯಸಭೆ ಸಭಾಧ್ಯಕ್ಷರು ಇಂದು ಸದನದಲ್ಲಿ ಮಾಹಿತಿ ನೀಡಿದ್ದರು. ಇದನ್ನೂ ಓದಿ: ರಾಜ್ಯಸಭೆಯ ಸದಸ್ಯರ ಸೀಟಿನಲ್ಲಿ ಹಣ ಪತ್ತೆ – ಕಾಂಗ್ರೆಸ್‌ ಸಂಸದ ಮನುಸಿಂಘ್ವಿ ಸೀಟ್‌ನಲ್ಲಿತ್ತು 50 ಸಾವಿರ ಹಣ

    ಅಭಿಷೇಕ್ ಮನುಸಿಂಘ್ವಿ ಹೆಸರು ಉಲ್ಲೇಖಿಸಿ ಜಗದೀಪ್ ಧನ್ಕರ್ ಮಾತನಾಡಿದರು. ಅಭಿಷೇಕ್ ಮನುಸಿಂಘ್ವಿ ಹೆಸರು ಉಲ್ಲೇಖಿಸಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ತನಿಖೆಗೂ ಮೊದಲೇ ಸದಸ್ಯರ ಹೆಸರು ಉಲ್ಲೇಖಿಸಿದ್ದನ್ನು ಖಂಡಿಸಿದ್ದರು. ಆದರೆ, ಈ ಆರೋಪಗಳನ್ನು ಮನುಸಿಂಘ್ವಿ ಅವರು ಅಲ್ಲಗಳೆದಿದ್ದಾರೆ. ನಾನು ರಾಜ್ಯಸಭೆಗೆ ಹೋಗುವಾಗ 500 ರೂ. ನೋಟು ಮಾತ್ರ ನನ್ನ ಬಳಿ ಇತ್ತು. ಕಲಾಪದ ಬಳಿಕ 1:30ಕ್ಕೆ ಕಲಾಪಕ್ಕೆ ಬಂದಿದ್ದೇನೆ. ಬಳಿಕ ಸಂಸತ್‌ನಿಂದ ನಿರ್ಗಮಿಸಿದ್ದೇನೆ. ಆರೋಪಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ಅಮೇರಿಕ ರಾಯಭಾರ ಕಚೇರಿ| 20ನೇ ನೆಕ್ಸಸ್ ಬ್ಯುಸಿನೆಸ್ ಇನ್‌ಕ್ಯುಬೇಟರ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

  • ರಾಜ್ಯಸಭೆಯ ಸದಸ್ಯರ ಸೀಟಿನಲ್ಲಿ ಹಣ ಪತ್ತೆ – ಕಾಂಗ್ರೆಸ್‌ ಸಂಸದ ಮನುಸಿಂಘ್ವಿ ಸೀಟ್‌ನಲ್ಲಿತ್ತು 50 ಸಾವಿರ ಹಣ

    ರಾಜ್ಯಸಭೆಯ ಸದಸ್ಯರ ಸೀಟಿನಲ್ಲಿ ಹಣ ಪತ್ತೆ – ಕಾಂಗ್ರೆಸ್‌ ಸಂಸದ ಮನುಸಿಂಘ್ವಿ ಸೀಟ್‌ನಲ್ಲಿತ್ತು 50 ಸಾವಿರ ಹಣ

    ನವದೆಹಲಿ: ರಾಜ್ಯಸಭೆಯ ಸದಸ್ಯರ ಸೀಟಿನಲ್ಲಿ ಹಣ ಪತ್ತೆಯಾಗಿದೆ. ಕಾಂಗ್ರೆಸ್‌ ಸಂಸದ ಅಭಿಷೇಕ್‌ ಮನುಸಿಂಘ್ವಿ  (Abhishek Manu Singhvi) ಸೀಟಿನಲ್ಲಿ ಹಣದ ನೋಟುಗಳು ಸಿಕ್ಕಿವೆ.

    ರಾಜ್ಯಸಭೆಯ (Rajya Sabha) ಸೀಟ್ ನಂಬರ್ 222 ರಲ್ಲಿ ನೋಟುಗಳು ಪತ್ತೆಯಾಗಿವೆ. ನಿನ್ನೆ ಸದನ ಮುಕ್ತಾಯದ ಬಳಿಕ ರೊಟೀನ್ ಚೆಕಪ್ ವೇಳೆ‌ ಹಣ ಕಂಡುಬಂದಿದೆ. ಹಣ ಪತ್ತೆಯಾಗಿರುವ ಬಗ್ಗೆ ರಾಜ್ಯಸಭೆ ಸಭಾಧ್ಯಕ್ಷರು ಇಂದು ಸದನದಲ್ಲಿ ಮಾಹಿತಿ ನೀಡಿದರು. ಇದನ್ನೂ ಓದಿ: ಜಿಲ್ಲಾ-ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ?

    ಅಭಿಷೇಕ್ ಮನುಸಿಂಘ್ವಿ ಹೆಸರು ಉಲ್ಲೇಖಿಸಿ ಜಗದೀಪ್ ಧನ್ಕರ್ (Jagdeep Dhankar) ಮಾತನಾಡಿದರು. ಅಭಿಷೇಕ್ ಮನುಸಿಂಘ್ವಿ ಹೆಸರು ಉಲ್ಲೇಖಿಸಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. ತನಿಖೆಗೂ ಮೊದಲೇ ಸದಸ್ಯರ ಹೆಸರು ಉಲ್ಲೇಖಿಸಿದ್ದನ್ನು ಖಂಡಿಸಿದರು.

    ಆದರೆ, ಈ ಆರೋಪಗಳನ್ನು ಮನುಸಿಂಘ್ವಿ ಅವರು ಅಲ್ಲಗಳೆದಿದ್ದಾರೆ. ನಾನು ರಾಜ್ಯಸಭೆಗೆ ಹೋಗುವಾಗ 500 ರೂ. ನೋಟು ಮಾತ್ರ ನನ್ನ ಬಳಿ ಇತ್ತು. ಕಲಾಪದ ಬಳಿಕ 1:30ಕ್ಕೆ‌ ಕಲಾಪಕ್ಕೆ ಬಂದಿದ್ದೇನೆ. ಬಳಿಕ ಸಂಸತ್‌ನಿಂದ ನಿರ್ಗಮಿಸಿದ್ದೇನೆ. ಆರೋಪಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಮೂವರು ಸಾವು, 20ಕ್ಕೂ ಅಧಿಕ ಜನ ಅಸ್ವಸ್ಥ

  • ಕೇಜ್ರಿವಾಲ್ ಬಂಧನದ ಅಡಿಪಾಯವೇ ದೋಷ ಪೂರಿತ, ಕೂಡಲೇ ಬಿಡುಗಡೆ ಮಾಡಿ – ಹೈಕೋರ್ಟ್ ಮುಂದೆ ಸಿಂಘ್ವಿ ವಾದ

    ಕೇಜ್ರಿವಾಲ್ ಬಂಧನದ ಅಡಿಪಾಯವೇ ದೋಷ ಪೂರಿತ, ಕೂಡಲೇ ಬಿಡುಗಡೆ ಮಾಡಿ – ಹೈಕೋರ್ಟ್ ಮುಂದೆ ಸಿಂಘ್ವಿ ವಾದ

    ನವದೆಹಲಿ: ಚುನಾವಣೆ ಹೊತ್ತಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಬಂಧಿಸಲಾಗಿದೆ. ಬಂಧನದ ಈ ಸಮಯ ನ್ಯಾಯ ಸಮ್ಮತ ಚುನಾವಣೆಯನ್ನು ಸೃಷ್ಟಿಸುವುದಿಲ್ಲ. ಈ ಬಂಧನದ ಅಡಿಪಾಯವೇ ದೋಷ ಪೂರಿತ ಎಂದು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ (Abhishek Singhvi) ವಾದಿಸಿದ್ದಾರೆ.

    ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ ಸಿಂಘ್ವಿ, ನನ್ನ ಕಕ್ಷಿದಾರರ ಬಂಧನದ ಬುನಾದಿ ದೋಷಪೂರಿತವಾಗಿರುವ ಕಾರಣ ಅವರನ್ನು ಬಿಡುಗಡೆ ಮಾಡಬೇಕು. ಇದು ನನ್ನ ಪ್ರಾರ್ಥನೆ. ಇದು ಕ್ರಿಮಿನಲ್ ವಿಷಯವಾಗಿದ್ದರೂ ಕಾನೂನು ಮತ್ತು ಮೂಲಭೂತ ರಚನೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ವಾದಿಸಿದರು. ಇದನ್ನೂ ಓದಿ: ಮುನಿಯಪ್ಪ ಅಳಿಯನಿಗೆ ಕೋಲಾರ ಟಿಕೆಟ್ ಕೊಟ್ಟರೆ ರಾಜೀನಾಮೆ – ‘ಕೈ’ ಎಂಎಲ್‌ಸಿ, ಶಾಸಕರಿಂದ ಬೆದರಿಕೆ

    ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಒಬ್ಬ ಹಾಲಿ ಮುಖ್ಯಮಂತ್ರಿಯನ್ನು ಬಂಧಿಸಲಾಗಿದೆ. ವಿಚಾರಣೆಯಲ್ಲಿ ಯಾವುದೇ ವಸ್ತು ವಿಷಯವಿಲ್ಲ. ಬಂಧನದ ಉದ್ದೇಶವು ನಾನ್-ಲೆವೆಲ್ ಪ್ಲೇಯಿಂಗ್ ಫೀಲ್ಡ್ ಅನ್ನು ರಚಿಸುವುದಾಗಿದೆ. ಈ ಮೂಲಕ ಸಂವಿಧಾನದ ಮೂಲಭೂತ ರಚನೆಯನ್ನು ಹೊಡೆಯುತ್ತಿದ್ದಾರೆ. ಸೆಕ್ಷನ್ 19ರ ಅಡಿಯಲ್ಲಿ ಬಂಧನದ ಮಿತಿಯನ್ನು ಇರಿಸಲಾಗಿದೆ. ಇದಕ್ಕೆ ಕಾರಣ ಸೆಕ್ಷನ್ 45ರ ಅಡಿಯಲ್ಲಿ ಜಾಮೀನು ಪಡೆಯುವುದು ತುಂಬಾ ಕಷ್ಟಕರವಾಗಿದೆ ಎಂದು ಸಿಂಘ್ವಿ ಹೇಳಿದರು. ಇದನ್ನೂ ಓದಿ: ಕೋರ್ಟ್ ಆವರಣದಲ್ಲಿ ಪ್ರತಿಭಟನೆ ಗಂಡಾಂತರ ಆಹ್ವಾನಿಸಿದಂತೆ: ಆಪ್‌ಗೆ ದೆಹಲಿ ಹೈಕೋರ್ಟ್ ಎಚ್ಚರಿಕೆ

    ಕೇಜ್ರಿವಾಲ್ ಪರ ವಾದ ಮಂಡಿಸಿದ ಮತ್ತೊರ್ವ ಹಿರಿಯ ವಕೀಲ ಅಮಿತ್ ದೇಸಾಯಿ, ಪ್ರಕರಣದಲ್ಲಿ ಸೆಕ್ಷನ್ 19 ಅನ್ನು ಸರಿಯಾಗಿ ಪಾಲಿಸಿಲ್ಲ. ಇದು ಪ್ರಾಥಮಿಕ ಅಂಶವಾಗಿದೆ. ಬಂಧನದ ಸಮಯದಲ್ಲಿ ಅರ್ಜಿದಾರರು ಸೆಕ್ಷನ್ 3ರ ಅಡಿಯಲ್ಲಿ ಸೂಚಿಸಲಾದ ಚಟುವಟಿಕೆಗಳನ್ನು ಮಾಡುವಲ್ಲಿ ತಪ್ಪಿತಸ್ಥರು ಎಂದು ಸ್ಥಾಪಿಸಲು ಡಿಒಇ (Department Of Expenditure) ವಿಫಲವಾಗಿದೆ. ಯಾವುದೇ ವಿಚಾರಣೆಯಿಲ್ಲದೆ ಅರ್ಜಿದಾರರನ್ನು ಬಂಧಿಸಲಾಗಿದೆ. ಇದು ರಾಜಕೀಯ ಸೇಡನ್ನು ಪ್ರತಿಬಿಂಬಿಸುತ್ತದೆ ಎಂದು ವಾದಿಸಿದರು. ಇದನ್ನೂ ಓದಿ: ಜೆಪಿ ನಡ್ಡಾ ಭೇಟಿ ಮಾಡಿ ಚರ್ಚಿಸಿದ ನಟಿ ಕಂಗನಾ

    ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಸಲ್ಲಿಸಲು ಕಾಲಾವಕಾಶ ನೀಡುವಂತೆ ಇ.ಡಿ ಹೈಕೋರ್ಟ್‌ಗೆ ಮನವಿ ಮಾಡಿತು. ಏಜೆನ್ಸಿ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಅರ್ಜಿ ಮಂಗಳವಾರವಷ್ಟೇ ಲಭ್ಯವಾಗಿದೆ. ಇ.ಡಿ ನಿಲುವನ್ನು ದಾಖಲಿಸಲು ಮೂರು ವಾರಗಳ ಕಾಲಾವಕಾಶ ನೀಡಬೇಕು ಎಂದು ಹೇಳಿದರು. ಮಧ್ಯಂತರ ಪರಿಹಾರಕ್ಕೂ ಸ್ಪಂದಿಸಲು ಸೂಕ್ತ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ:  ಅಬಕಾರಿ ನೀತಿ ಹಗರಣದ ಹಣ ಎಲ್ಲಿದೆ? – ಕೇಜ್ರಿವಾಲ್ ಬಹಿರಂಗಪಡಿಸ್ತಾರೆ – ಸುನೀತಾ ಕೇಜ್ರಿವಾಲ್

  • ಮಾಜಿ ಸಚಿವ ಸತ್ಯೇಂದ್ರ ಜೈನ್ ಜೈಲಲ್ಲಿ ಸ್ವಿಮ್ಮಿಂಗ್ ಪೂಲ್ ಕೇಳ್ತಿದ್ದಾರೆ – ಸುಪ್ರೀಂ ಕೋರ್ಟ್‌ಗೆ ED ಮಾಹಿತಿ

    ಮಾಜಿ ಸಚಿವ ಸತ್ಯೇಂದ್ರ ಜೈನ್ ಜೈಲಲ್ಲಿ ಸ್ವಿಮ್ಮಿಂಗ್ ಪೂಲ್ ಕೇಳ್ತಿದ್ದಾರೆ – ಸುಪ್ರೀಂ ಕೋರ್ಟ್‌ಗೆ ED ಮಾಹಿತಿ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಎಪಿ ಮಾಜಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ (Satyendar Jain) ಅವರಿಗೆ ಕೋರಲಾದ ಮಧ್ಯಂತರ ವೈದ್ಯಕೀಯ ಜಾಮೀನು (Medical Bail) ವಿಸ್ತರಣೆಯನ್ನು ಜಾರಿ ನಿರ್ದೇಶನಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ ಸತ್ಯೇಂದರ್ ಜೈನ್ ಅವರು ಜೈಲಿನ ಆವರಣದಲ್ಲಿ ಸ್ವಿಮ್ಮಿಂಗ್ ಪೂಲ್ ಬೇಕೆಂದು ಕೇಳುತ್ತಿದ್ದಾರೆ ಎಂಬುದಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ.

    ಜೈನ್ ಅವರ ವೈದ್ಯಕೀಯ ಸಲಹೆಯನ್ನ ಉಲ್ಲೇಖಿಸಿ ಅವರ ಮಧ್ಯಂತರ ಜಾಮೀನು ವಿಸ್ತರಣೆ ಮಾಡುವಂತೆ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ಸತ್ಯೇಂದರ್ ಜೈನ್ ಅವರು ಮಹತ್ವದ ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಕೆಲವು ಬಹುಮುಖ್ಯ ಚಿಕಿತ್ಸೆಗಳಿಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಅವರಿಗೆ ನೀಡಿರುವ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಬೇಕು ಎಂದು ಸಿಂಘ್ವಿ ಕೋರಿದ್ದರು.

    ಜೈನ್ ಅವರಿಗೆ ಮಧ್ಯಂತರ ಜಾಮೀನು ವಿಸ್ತರಣೆ ಮಾಡಲು ವೈದ್ಯರ ಸಲಹೆ ಸಾಲುವುದಿಲ್ಲ ಎಂದು ಪ್ರತಿಪಾದಿಸಿದ ಜಾರಿ ನಿರ್ದೇಶನಾಲಯ, ಜಾಮೀನು ವಿಸ್ತರಣೆ ನೀಡುವ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಅವರು ಜೈಲಿನಲ್ಲಿ ಈಜುಕೊಳ ಬೇಕೆಂದು ಕೇಳುತ್ತಿದ್ದಾರೆ. ಎಲ್ಲರಿಗೂ ಇದು ಸಾಧ್ಯವಾಗಲ್ಲ ಎಂದು ಇಡಿ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ತಿಳಿಸಿದ್ದಾರೆ. ಇದನ್ನೂ ಓದಿ: ಹನಿಟ್ರ್ಯಾಪ್ ಭೀತಿ – ಯೂನಿಫಾರಂ ಧರಿಸಿ ಫೋಟೊ, ವೀಡಿಯೋ ಅಪ್ಲೋಡ್ ಮಾಡದಂತೆ ಅರೆಸೇನಾ ಪಡೆಗಳಿಗೆ ಸೂಚನೆ

    ಜೈನ್ ಅವರನ್ನು ಏಮ್ಸ್ ವೈದ್ಯರ ತಂಡ ಸ್ವತಂತ್ರವಾಗಿ ತಪಾಸಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ ರಾಜು, ಅಗತ್ಯಬಿದ್ದರೆ, ಜೈನ್ ಅವರಿಗೆ ಫಿಸಿಯೋ ಥೆರಪಿ ನೀಡಲು ಅವರು ಈಜುಕೊಳಕ್ಕೆ ಕರೆದೊಯ್ಯಬಹುದು ಎಂದು ಹೇಳಿದರು. ಈ ವೇಳೆ ಕೋರ್ಟ್, ಆದ್ರೆ ಏನ್ ಮಾಡೋದು ಅವರು ಫಿಸಿಯೋಥೆರಪಿಗೆ ಒಳಗಾದ್ರೆ ನೀವು ಫೋಟೋ ತೆಗೆದು ಅವುಗಳನ್ನೂ ಪ್ರಕಟಿಸಿಬಿಡ್ತೀರಿ ಎಂದು ಹೇಳಿತು. ಬಳಿಕ ಜೈನ್ ಅವರ ಮಧ್ಯಂತರ ವೈದ್ಯಕೀಯ ಜಾಮೀನು ಅವಧಿಯನ್ನ ಸೆಪ್ಟೆಂಬರ್ 1ರವರೆಗೂ ವಿಸ್ತರಿಸಲು ಕೋರ್ಟ್ ಒಪ್ಪಿಗೆ ಸೂಚಿಸಿತು.

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 2022ರಿಂದಲೂ ಜೈಲಿನಲ್ಲಿರುವ ಜೈನ್ ಅವರಿಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ಏಪ್ರಿಲ್ 6ರಂದು ನಿರಾಕರಿಸಿತ್ತು. ಜಾಮೀನು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಕಾನೂನುಬಾಹಿರ ಅಂಶ ಕಂಡುಬಂದಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಇದನ್ನು ಜೈನ್ ಅವರು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ ವಿರೋಧಿ ಸ್ನೇಹಿತರು ಟ್ರುಡೊರನ್ನು ರಕ್ಷಿಸಬಹುದು: ಇದು ಕರ್ಮ ಎಂದ ಸಿಂಘ್ವಿ

    ಭಾರತ ವಿರೋಧಿ ಸ್ನೇಹಿತರು ಟ್ರುಡೊರನ್ನು ರಕ್ಷಿಸಬಹುದು: ಇದು ಕರ್ಮ ಎಂದ ಸಿಂಘ್ವಿ

    ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರನ್ನು ‘ಭಾರತ ವಿರೋಧಿ ಸ್ನೇಹಿತರು’ ರಕ್ಷಿಸಬಹುದು ಎಂದು ನಾನು ಭಾವಿಸಿದ್ದೇನೆ. ಕೆನಡಾ ಪ್ರಧಾನಿ ಈಗ ತಮ್ಮ ದೇಶದಲ್ಲೇ ರಕ್ಷಣೆಗಾಗಿ ರಹಸ್ಯ ಸ್ಥಳಕ್ಕೆ ಸ್ಥಳಾಂತರವಾಗಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ (Abhishek Manu Singhvi) ಟ್ವೀಟ್ ಮಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

    ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಕಾಂಗ್ರೆಸ್ ಜೊತೆಗೆ ಕೆನಡಾ ಪ್ರಧಾನಿ ಕೂಡ ಬೆಂಬಲ ಸೂಚಿಸಿದ್ದರು. ಆ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ಮಾತನಾಡಿದ್ದರು. ಆದರೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರೇ ಈಗ ಕೆನಡಾ ಪ್ರಧಾನಿ ಹೇಳಿಕೆ ಉಲ್ಲೇಖಿಸಿ ಟೀಕಿಸಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಹಾಗಾದರೆ ಸಿಂಘ್ವಿ ಅವರ ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆ ವ್ಯಕ್ತವಾಗಿದೆ. ಇದನ್ನೂ ಓದಿ: ಫೆಬ್ರವರಿಯಲ್ಲಿ 12 ದಿನ ಬ್ಯಾಂಕುಗಳಿಗೆ ರಜೆ

    ಕೆನಡಾದಲ್ಲಿ ಕೋವಿಡ್ ವ್ಯಾಕ್ಸಿನ್ ವಿರೋಧಿ ಪ್ರತಿಭಟನೆಯು ತೀವ್ರಗೊಂಡಿದ್ದು, ರಕ್ಷಣೆಗಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ರಹಸ್ಯ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದಾರೆ. ಇದನ್ನು ಭಾರತದ ರೈತರ ಪ್ರತಿಭಟನೆಗೆ ತಳಕು ಹಾಕಿ ನೋಡಿರುವ ಕಾಂಗ್ರೆಸ್‌ನ ಅಭಿಷೇಕ್ ಸಿಂಘ್ವಿ, ‘ಭಾರತ ವಿರೋಧಿ ಸ್ನೇಹಿತರು’ ಟ್ರುಡೊರನ್ನು ರಕ್ಷಿಸಬಹುದು ಎಂದು ನಾನು ಭಾವಿಸಿದ್ದೇನೆ. ಭಾರತದ ಆಂತರಿಕ ವಿಷಯಗಳಿಗೆ ಮೂಗು ತೂರಿಸುವ ಮೊದಲು ತಮ್ಮ ದೇಶದಲ್ಲಿನ ಕಠಿಣ ಪರಿಸ್ಥಿತಿಗಳ ಬಗ್ಗೆ ಅರಿಯಬೇಕು ಎಂದು ಟ್ವೀಟ್ ಮಾಡಿ ಕುಟುಕಿದ್ದಾರೆ.

    ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ೨೦೨೦ರಿಂದ ಸತತ ಒಂದು ವರ್ಷಗಳ ಕಾಲ ರೈತರು ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿಶ್ವದ ಅನೇಕ ರಾಜಕೀಯ ಪಕ್ಷಗಳು ಹಾಗೂ ನಾಯಕರು ಬೆಂಬಲ ಸೂಚಿಸಿದ್ದರು. ಈ ವೇಳೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ಭಾರತದ ರೈತರ ಪರವಾಗಿ ಮಾತನಾಡಿದ್ದರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಲಾಬಿ ಆರಂಭಿಸಿದ ವಲಸಿಗ ಶಾಸಕರು

    ಕಾಂಗ್ರೆಸ್‌ನಲ್ಲಿ ಸೂಕ್ತ ಗೌರವ ಸಿಗದ ಕಾರಣ ಅಭಿಷೇಕ್ ಮನು ಸಿಂಘ್ವಿ ಅವರು ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ನಾನು ಪಕ್ಷ ತೊರೆಯುವ ಮಾತು ಸುಳ್ಳು ಎಂದು ಸಿಂಘ್ವಿ ಅಲ್ಲಗಳೆದಿದ್ದರು.