Tag: Abhishek Bachchan

  • ಐಶ್ವರ್ಯ ರೈಗೆ 21 ಕೋಟಿಯ ಮನೆ ಗಿಫ್ಟ್ ನೀಡಿದ ಅಭಿಷೇಕ್-ಫೋಟೋಗಳಲ್ಲಿ ನೋಡಿ

    ಐಶ್ವರ್ಯ ರೈಗೆ 21 ಕೋಟಿಯ ಮನೆ ಗಿಫ್ಟ್ ನೀಡಿದ ಅಭಿಷೇಕ್-ಫೋಟೋಗಳಲ್ಲಿ ನೋಡಿ

    ಮುಂಬೈ: ನಟ ಅಭಿಷೇಕ್ ಬಚ್ಚನ್ ತಮ್ಮ ಸುಂದರ ಪತ್ನಿ ಐಶ್ವರ್ಯ ರೈಗೆ 21 ಕೋಟಿ ರೂ. ಬೆಲೆ ಬಾಳುವ ಹೊಸ ಅಪಾರ್ಟ್ ಮೆಂಟ್ ಗಿಫ್ಟ್ ನೀಡಿದ್ದಾರೆ. ಸದ್ಯ ಈ ಹೊಸ ಅಪಾರ್ಟ್ ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

    ಅಭಿಷೇಕ್ ಮತ್ತು ಐಶ್ವರ್ಯ ಸದ್ಯ ಬಚ್ಚನ್ ಕುಟುಂಬದೊಂದಿಗೆ ಮುಂಬೈನ ‘ಜಲ್ಸಾ’ ನಿವಾಸದಲ್ಲಿ ವಾಸವಾಗಿದ್ದಾರೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಹತ್ತಿರದ ‘ಹೈ ಎಂಡ್ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್, ಸಿಂಗಾನಿಯಾ ಐಸೆಲ್‍ನಲ್ಲಿ ಹೊಸ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ.

    ಅಭಿಷೇಕ್ ಖರೀದಿಸಿರುವ ಅಪಾರ್ಟ್ ಮೆಂಟ್ 55 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದೇ ಬಿಲ್ಡಿಂಗ್ ನಲ್ಲಿ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ 2015ರಲ್ಲಿ 7 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಫ್ಲ್ಯಾಟ್ ನ್ನು 35 ಕೋಟಿ ರೂ.ನೀಡಿ ಖರೀದಿಸಿದ್ದರು. ಇದೇ ಅಪಾರ್ಟ್ ಮೆಂಟ್ ನಲ್ಲಿ ಪ್ರಿಯಾಂಕಾ ಚೋಪ್ರಾ, ಕಂಗನಾ ರಣಾವತ್, ಅನುಷ್ಕಾ ಶರ್ಮಾ ಅವರು ಫ್ಲ್ಯಾಟ್ ಹೊಂದಿದ್ದಾರೆ.

    ಅಭಿಷೇಕ್ ಯಾವಾಗ ತಮ್ಮ ಕುಟುಂಬದೊಂದಿಗೆ ಹೊಸ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬುದನ್ನು ತಿಳಿಸಿಲ್ಲ. ಅಮಿತಾಬ್ ಬಚ್ಚನ್ ಕೂಡ ನಗರದ ವರ್ಲಿಯಲ್ಲಿರುವ ಸ್ಕೈಲಾರ್ಕ್ ಟವರ್ ನಲ್ಲಿ 37ನೇ ಅಂತಸ್ತಿನಲ್ಲಿ ಒಂದು ಫ್ಲ್ಯಾಟ್ ಹೊಂದಿದ್ದಾರೆ. ಐಶ್ವರ್ಯ ರೈ ಫೆನ್ನಿ ಖಾನ್ ಚಿತ್ರದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ.

    ಕೆಲ ದಿನಗಳ ಹಿಂದೆ ಮುಂಬೈಯ ವರ್ಲಿಯಲ್ಲಿ ವಿರಾಟ್ ಮದುವೆಯ ನಂತರ ವಾಸಿಸಲು ಸುಮಾರು 34 ಕೋಟಿ ಬೆಲೆ ಬಾಳುವ ಅಪಾರ್ಟ್ ಮೆಂಟ್ ಖರೀದಿಸಿದ್ದರು.

  • ನಾನು ಐಶ್ವರ್ಯ ರೈ ಮಗ ಅಂತಾ 27 ವರ್ಷದ ಯುವಕ ಪ್ರತ್ಯಕ್ಷ

    ನಾನು ಐಶ್ವರ್ಯ ರೈ ಮಗ ಅಂತಾ 27 ವರ್ಷದ ಯುವಕ ಪ್ರತ್ಯಕ್ಷ

    ಮಂಗಳೂರು: 27 ವರ್ಷದ ಯುವಕನೊಬ್ಬ ತಾನು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಮಗನೆಂದು ಹೇಳಿಕೊಂಡು ಮಂಗಳೂರಿನಲ್ಲಿ ಪ್ರತ್ಯಕ್ಷನಾಗಿದ್ದಾನೆ.

    ಆಂಧ್ರಪ್ರದೇಶ ಮೂಲದ 27 ವರ್ಷದ ಸಂಗೀತ್ ಕುಮಾರ್ ಪ್ರತ್ಯಕ್ಷಗೊಂಡಿರುವ ಐಶ್ವರ್ಯ ರೈ ಮಗ. ತನ್ನ ತಂದೆ ವಿಶಾಖಪಟ್ಟಣ ಮೂಲದ ಮವುಲು ಆದಿರೆಡ್ಡಿಯಾಗಿದ್ದು ಐಶ್ವರ್ಯಾ ರೈ ನೆರವಿನಿಂದ ಟೆಸ್ಟ್ ಟ್ಯೂಬ್ ಮೂಲಕ ಮಗು ಪಡೆದಿದ್ದರು. ಆರಂಭದ ಎರಡು ವರ್ಷ ಲಂಡನ್ ನಲ್ಲಿ ಐಶ್ವರ್ಯಾ ಕುಟುಂಬದ ಜೊತೆಗೆ ವಾಸಿಸುತ್ತಿದ್ದೆ. ಅನಂತರ ನನ್ನ ತಂದೆ ತನ್ನನ್ನು ಆಂಧ್ರಪ್ರದೇಶಕ್ಕೆ ತಂದು ಸಾಕಿದ್ದಾರೆ ಅಂತ ಹೇಳಿಕೊಂಡಿದ್ದಾನೆ.

    ಸಂಗೀತ್ ಕುಮಾರ್ ಬಳಿ ತಾನೂ ಐಶ್ವರ್ಯ ಪುತ್ರನೆಂದು ಹೇಳಿಕೊಳ್ಳಲು ಯಾವುದೇ ದಾಖಲೆಗಳಿಲ್ಲ. ಐಶ್ವರ್ಯಾ ಕುಟುಂಬಸ್ಥರು ನನ್ನನ್ನು ನೋಡಿದರೆ ಒಪ್ಪಿಕೊಳ್ಳುತ್ತಾರೆ. ತಾನು ಐಶ್ವರ್ಯಾ ಬಳಿ ಹೋಗಬೇಕು. ತುಳು ಚಿತ್ರವೊಂದರ ಶೂಟಿಂಗ್ ಕಾರ್ಯಕ್ಕೆಂದು ಮಂಗಳೂರಿಗೆ ಬಂದಿದ್ದೇನೆ. ಚೆನ್ನೈ ಯಲ್ಲಿ ಸೌಂಡ್ ಇಂಜಿನಿಯರ್ ಆಗಿದ್ದೇನೆ ಅಂತಾ ಸಂಗೀತ್ ಕುಮಾರ್ ಹೇಳಿಕೊಂಡಿದ್ದಾನೆ.

    https://www.youtube.com/watch?v=PqFvl8XkaUs

  • ಮಗಳನ್ನು ಟ್ರೋಲ್ ಮಾಡಿದ್ದಕ್ಕೆ ಖಡಕ್ ಉತ್ತರ ನೀಡಿದ ಅಭಿಷೇಕ್ ಬಚ್ಚನ್!

    ಮಗಳನ್ನು ಟ್ರೋಲ್ ಮಾಡಿದ್ದಕ್ಕೆ ಖಡಕ್ ಉತ್ತರ ನೀಡಿದ ಅಭಿಷೇಕ್ ಬಚ್ಚನ್!

    ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಐಶ್ವರ್ಯ ರೈಗೆ ಒಳ್ಳೆಯ ಗಂಡ ಹಾಗೂ ಆರಾಧ್ಯಗೆ ಒಳ್ಳೆಯ ತಂದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚಿಗೆ ಟ್ವಿಟ್ಟರ್ ನಲ್ಲಿ ಆರಾಧ್ಯನನ್ನು ಟ್ರೋಲ್ ಮಾಡಿದ್ದಕ್ಕೆ ಅಭಿಷೇಕ್ ಬಚ್ಚನ್ ಖಡಕ್ ಉತ್ತರ ನೀಡಿದ್ದಾರೆ.

    ಇತ್ತೀಚಿಗೆ ನಟಿ ಐಶ್ವರ್ಯ ಪಾಲ್ಗೊಂಡ ಎಲ್ಲಾ ಕಾರ್ಯಕ್ರಮದಲ್ಲಿ ಆರಾಧ್ಯ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಆ ಕಾರ್ಯಕ್ರಮದ ಫೋಟೋಗಳನ್ನು ಐಶ್ವರ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಇದನ್ನು ನೋಡಿ ಶೆರಿನ್ ಬ್ಯಾಟ್ಡಿ ಎಂಬಾಕೆ, ಅಭಿಷೇಕ್ ನಿಮ್ಮ ಮಗಳು ಶಾಲೆಗೆ ಹೋಗುತ್ತಿದ್ದಾಳಾ ಎಂದು ಪ್ರಶ್ನಿಸಿ ಎಂದು ಟ್ವೀಟ್ ಮಾಡಿದ್ದಾರೆ.

    ಅಭಿಷೇಕ್ ನಿಮ್ಮ ಮಗಳು ಸ್ಕೂಲ್ ಗೆ ಹೋಗ್ತಿಲ್ವ? ತಾಯಿಯ ಜೊತೆ ಟ್ರೀಪ್ ಗೆ ಹೋಗಲು ಶಾಲೆ ಅವರು ಹೇಗೆ ಅನುಮತಿ ನೀಡುತ್ತಾರೆ ಎಂದು ನನಗೆ ಆಶ್ಚರ್ಯವಾಗುತ್ತಿದೆ, ಯಾವಾಗ ನೊಡಿದ್ದರು ತನ್ನ ಅಹಂಕಾರದ ತಾಯಿ ಜೊತೆ ಕೈ-ಕೈ ಹಿಡಿದು ತಿರುಗುತ್ತಿರುತ್ತಾಳೆ. ಆಕೆಯ ಬಾಲ್ಯ ಸಾಮಾನ್ಯವಾಗಿಲ್ಲ ಎಂದು ಶೆರಿನ್ ಬ್ಯಾಟ್ಡಿ ಟ್ವೀಟ್ ಮಾಡಿದ್ದರು.

    ಶೆರಿನ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್ “ಮೇಡಂ, ನನಗೆ ತಿಳಿದ ಹಾಗೆ ವಾರಾಂತ್ಯದಲ್ಲಿ ಹಲವು ಶಾಲೆಗಳು ಮುಚ್ಚಿರುತ್ತದೆ. ಅವಳು ವಾರದ ದಿನಗಳಲ್ಲಿ ಮಾತ್ರ ಶಾಲೆಗೆ ಹೋಗುತ್ತಾಳೆ. ಬಹುಶಃ ನಿಮ್ಮ ಟ್ವೀಟ್ ನಲ್ಲಿ ನೀವು ನಿಮ್ಮ ಕಾಗುಣಿತವನ್ನು ಪರಿಗಣಿಸಬೇಕು” ಎಂದು ಟ್ವೀಟ್ ಮಾಡಿ ಉತ್ತರ ನೀಡಿದ್ದಾರೆ.

    ಅಭಿಷೇಕ್ ಆ ಟ್ವೀಟ್ ಗೆ ಪ್ರತಿಕ್ರಿಯೆ ನೀಡುತ್ತಿದ್ದಂತೆ ಶೆರಿನ್ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.

  • ದೀಪಿಕಾ ನೆಕ್ಸ್ಟ್ ಫಿಲ್ಮ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸಂಜಯ್ ಲೀಲಾ ಬನ್ಸಾಲಿ!

    ದೀಪಿಕಾ ನೆಕ್ಸ್ಟ್ ಫಿಲ್ಮ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸಂಜಯ್ ಲೀಲಾ ಬನ್ಸಾಲಿ!

    ಮುಂಬೈ: ಬಾಲಿವುಡ್ ಬಹು ನಿರೀಕ್ಷಿತ ‘ಪದ್ಮಾವತಿ’ ಚಿತ್ರ ಡಿಸೆಂಬರ್ 1 ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ. ಈಗ ದೀಪಿಕಾ ತಮ್ಮ ಮುಂದಿನ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲೇ ನಟಿಸಲಿದ್ದಾರೆ.

    ಹೌದು. ದೀಪಿಕಾ ತಮ್ಮ ಮುಂದಿನ ಚಿತ್ರವನ್ನು ಬನ್ಸಾಲಿ ಅವರ ನಿರ್ದೇಶನದಲ್ಲಿ ನಟಿಸುತ್ತಿದ್ದು, ಅಭಿಷೇಕ್ ಬಚ್ಚನ್ ಚಿತ್ರದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. “ದೀಪಿಕಾ ಮತ್ತು ಅಭಿಷೇಕ್ ಸಂಜಯ್ ಲೀಲಾ ಬನ್ಸಾಲಿ ಅವರ ಮುಂದಿನ ಚಿತ್ರವನ್ನು ಒಪ್ಪಿಕೊಂಡು ಸಹಿ ಮಾಡಿದ್ದಾರೆ. ಈ ಚಿತ್ರ ಕವಿ ಹಾಗೂ ಸಾಹಿತಿ ಸಾಹೀರ್ ಲೂದಿಯನ್ವಿ ಅವರ ಜೀವನಚರಿತ್ರೆಯ ಕಥೆ ಈ ಚಿತ್ರದ್ದು” ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿದ್ದಾರೆ.

    ಸಾಹೀರ್ ಲೂದಿಯನ್ವಿ ಹಿರಿಯ ಕವಿ ಹಾಗೂ ಬಾಲಿವುಡ್ ಚಿತ್ರಗಳಿಗೆ ಹಾಡು ಬರೆಯುತ್ತಿದ್ದರು. ಇವರು ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಹಿಂದಿ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಮೊದಲು ಶಾರೂಖ್ ಖಾನ್ ಹಾಗೂ ಪ್ರಿಯಾಂಕಾ ಚೋಪ್ರಾ ನಟಿಸಬೇಕಿತ್ತು ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತಿತ್ತು. ಆದರೆ ಈಗ ಈ ಚಿತ್ರದಲ್ಲಿ ದೀಪಿಕಾ ಮತ್ತು ಅಭಿಷೇಕ್ ನಟಿಸುವುದು ಫೈನಲ್ ಆಗಿದೆ.

    ಈ ಚಿತ್ರದ ಬಗ್ಗೆ ಸಂಜಯ್ ಲೀಲಾ ಬನ್ಸಾಲಿ, ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್ ಹಾಗೂ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಂದು ವೇಳೆ ದೀಪಿಕಾ ಈ ಸಿನಿಮಾದಲ್ಲಿ ನಟಿಸಿದರೆ ಬನ್ಸಾಲಿ ಅವರ ನಾಲ್ಕನೇಯ ಚಿತ್ರ ಇದಾಗಲಿದೆ.

  • ಐಶ್ವರ್ಯ ರೈ ತಾಯಿ ಮನೆಯಲ್ಲಿ ಬೆಂಕಿ ಅವಘಡ

    ಐಶ್ವರ್ಯ ರೈ ತಾಯಿ ಮನೆಯಲ್ಲಿ ಬೆಂಕಿ ಅವಘಡ

    ಮುಂಬೈ: ನಗರದ ಬಾಂದ್ರಾದಲ್ಲಿರುವ ಐಶ್ವರ್ಯ ರೈ ತಾಯಿ ವಾಸವಾಗಿರುವ ಲಾ ಮರ್ ಬಿಲ್ಡಂಗ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮೂಲಗಳ ಪ್ರಕಾರ ಮಧ್ಯರಾತ್ರಿ ಸುಮಾರು 1 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಅವಘಡದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

     

     

    ವಿಷಯ ತಿಳಿದ ಕೂಡಲೇ ಅಭಿಷೇಕ್ ಜೊತೆ ಐಶ್ವರ್ಯ ರೈ ತನ್ನ ತಾಯಿ ವೃಂದಾ ರೈ ಮನೆಗೆ ಭೇಟಿ ನೀಡಿ, ತಾಯಿಯ ಯೋಗಕ್ಷೇಮ ವಿಚಾರಿಸಿದ್ದಾರೆ. ನೆರೆಹೊರೆಯವರು ಮತ್ತು ಹಿತೈಷಿಗಳು ತೋರಿಸಿದ ಕಾಳಜಿಗೆ ತುಂಬಾ ಧನ್ಯವಾದಗಳು ಎಂದು ಐಶ್ವರ್ಯ ಅವರ ಪರವಾಗಿ ಮ್ಯಾನೇಜರ್ ತಿಳಿಸಿದ್ದಾರೆ.

    ಇದೇ ಕಟ್ಟಡದಲ್ಲಿ ಸಚಿನ್ ತೆಂಡಲ್ಕೂರ್ ಅವರ ಅತ್ತೆ-ಮಾವ ಕೂಡ ವಾಸವಾಗಿದ್ದಾರೆ.