Tag: Abhishek Bachchan

  • ಮಂಗಳೂರಿಗೆ ಆಗಮಿಸಿದ ಐಶ್ವರ್ಯಾ ರೈ ದಂಪತಿ!

    ಮಂಗಳೂರಿಗೆ ಆಗಮಿಸಿದ ಐಶ್ವರ್ಯಾ ರೈ ದಂಪತಿ!

    ಮಂಗಳೂರು: ಪುತ್ರಿ ಆರಾಧ್ಯ ಜೊತೆಗೂಡಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಇಂದು ಮಂಗಳೂರಿಗೆ ಆಗಮಿಸಿದ್ದಾರೆ.

    ಮುಂಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ದಂಪತಿ ಐಶ್ವರ್ಯ ಸಂಬಂಧಿ ಮನೆಗೆ ತೆರಳಿದರು. ಮೂಲತ: ಮಂಗಳೂರಿನ ಬೆಡಗಿಯಾಗಿರುವ ಐಶ್ವರ್ಯ ರೈ ಆಗಾಗ ತಮ್ಮ ಮಂಗಳೂರಿನ ನಿವಾಸಕ್ಕೆ ಬರುತ್ತಿರುತ್ತಾರೆ. ಈ ಬಾರಿ ಅವರ ಚಿಕ್ಕಪ್ಪನ ಶ್ರಾದ್ಧ ಕಾರ್ಯಕ್ರಮಕ್ಕೆಂದು ಮಂಗಳೂರಿಗೆ ಬಂದಿದ್ದಾರೆ.

    ಬಹುದಿನಗಳ ಮೇಲೆ ಮಂಗಳೂರಿಗೆ ಆಗಮಿಸಿರುವ ಐಶ್ವರ್ಯ ದಂಪತಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರು ಸ್ವಾಗತಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಪೆಷಲ್ ಕಂದನ ಫೋಟೋ ಹಾಕಿ ಪತಿಗೆ ಐಶ್ ಬರ್ತ್ ಡೇ ವಿಶ್

    ಸ್ಪೆಷಲ್ ಕಂದನ ಫೋಟೋ ಹಾಕಿ ಪತಿಗೆ ಐಶ್ ಬರ್ತ್ ಡೇ ವಿಶ್

    – ಗುಲಾಬ್ ಜಾಮೂನ್ ಕ್ಯಾನ್ಸಲ್ – ಅಭಿಮಾನಿಗಳ ಮೊಗದಲ್ಲಿ ನಿರಾಸೆ

    ಮುಂಬೈ: ಇಂದು ಬಾಲಿವುಡ್ ಬಿಗ್ ಮನೆಯ ಕುಡಿ ಅಭಿಷೇಕ್ ಬಚ್ಚನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ಪೆಷಲ್ ಮಗುವಿನ ಫೋಟೋವನ್ನು ಅಪ್ಲೋಡ್ ಮಾಡಿಕೊಂಡಿರುವ ಐಶ್ವರ್ಯ ಪತಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಅಭಿಷೇಕ್ ಇಂದು ತಮ್ಮ 43ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು ಕುಟುಂಬ ಸದಸ್ಯರು ಒಳಗೊಂಡಂತೆ ಅಭಿಮಾನಿಗಳು ತಮ್ಮನೆಚ್ಚಿನ ನಟನಿಗೆ ಶುಭಾಶಯ ತಿಳಿಸುತ್ತಿದ್ದಾರೆ.

    ಪತ್ನಿ ಐಶ್ವರ್ಯ ರೈ ಬಚ್ಚನ್, ಪತಿಯ ಬಾಲ್ಯದ ಫೋಟೋ ಅಪ್ಲೋಡ್ ಮಾಡಿಕೊಂಡು, ನನ್ನ ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗಿರುವ ಬೇಬಿ. ಹ್ಯಾಪಿ ಹ್ಯಾಪಿ ಬರ್ತ್ ಡೇ ಬೇಬಿ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ. ಬಾಲ್ಯದ ಫೋಟೋ ಜೊತೆಗೆ ಪತಿಯೊಂದಿಗಿರುವ ತಮ್ಮ ಫೋಟೋ ಸಹ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಗುಲಾಬ್ ಜಾಮೂನ್ ಕ್ಯಾನ್ಸಲ್:
    20 ಏಪ್ರಿಲ್ 2007ರಂದು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದರು. 2018ರಲ್ಲಿ ಬಿಡುಗಡೆಯಾಗಿದ್ದ ಫೆನ್ನೆ ಖಾನ್ ಚಿತ್ರದಲ್ಲಿ ಐಶ್ವರ್ಯ ನಟಿಸಿದ್ದರು. ಅನಿಲ್ ಕಪೂರ್ ಮತ್ತು ರಾಜಕುಮಾರ್ ರಾವ್ ಫೆನ್ನೆ ಖಾನ್ ನಲ್ಲಿ ಕಾಣಿಸಿಕೊಂಡಿದ್ದರು. ಅಭಿಷೇಕ್ ಬಚ್ಚನ್ ನಟನೆಯ ‘ಮನ್‍ಮರ್ಜಿಯಾ’ ಕಳೆದ ವರ್ಷ ಬಿಡುಗಡೆಗೊಂಡಿತ್ತು. ಗುರು, ಉಮರಾವ್ ಜಾನ್, ಧೂಮ್-2, ರಾವಣ್, ಕುಚ್ ನಾ ಕಹೋ ಚಿತ್ರಗಳಲ್ಲಿ ಐಶ್ವರ್ಯ ಮತ್ತು ಅಭಿಷೇಕ್ ಜೊತೆಯಾಗಿ ನಟಿಸಿದ್ದಾರೆ. 2018ರಲ್ಲಿ ಅನುರಾಗ್ ಕಶ್ಯಪ್ ತಮ್ಮ ‘ಗುಲಾಬ್ ಜಾಮೂನ್’ ಚಿತ್ರದಲ್ಲಿ ಐಶ್ ಮತ್ತು ಅಭಿಯನ್ನು ತೆರೆಯ ಮೇಲೆ ತರಲಿದ್ದಾರೆ ಎನ್ನಲಾಗುತ್ತಿತ್ತು. ಸದ್ಯ ಚಿತ್ರದ ನಿರ್ಮಾಪಕರು ಗುಲಾಬ್ ಜಾಮೂನ್ ಸಿನಿಮಾದಿಂದ ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಹು ದಿನಗಳ ಬಳಿಕ ತೆರೆಯ ಮೇಲೆ ಜೋಡಿಯನ್ನು ನೋಡಲು ಕಾತುರರಾಗಿದ್ದ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ.

    https://www.instagram.com/p/BteKmL2HhFW/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಇಶಾ ಅಂಬಾನಿ ಮದುವೆ ಸಂಭ್ರಮದಲ್ಲಿ ದೀಪ್‍ವೀರ್ ಡ್ಯಾನ್ಸ್ – ವಿಡಿಯೋ ನೋಡಿ

    ಇಶಾ ಅಂಬಾನಿ ಮದುವೆ ಸಂಭ್ರಮದಲ್ಲಿ ದೀಪ್‍ವೀರ್ ಡ್ಯಾನ್ಸ್ – ವಿಡಿಯೋ ನೋಡಿ

    ಉದಯ್‍ಪುರ: ಬಾಲಿವುಡ್ ಕ್ಯೂಟ್ ಕಪಲ್ಸ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಭಾರತದ ನಂಬರ್ 1 ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಮಗಳ ಮದುವೆ ಪೂರ್ವ ಸಮಾರಂಭದಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ.

    ಬಿಟೌನ್ ತಾರೆಯರೆಲ್ಲ ಇಶಾ ಅಂಬಾನಿಯವರ ಮದುವೆ ಪೂರ್ವ ಪಾರ್ಟಿಯನ್ನು ಸಖತ್ ಆಗಿ ಎಂಜಾಯ್ ಮಾಡುವ ಮೂಲಕ ಸಂಭ್ರಮಕ್ಕೆ ಇನ್ನಷ್ಟು ಮೆರಗು ತಂದರು. ಉದಯ್‍ಪುರದಲ್ಲಿ ನಡೆಯುತ್ತಿರುವ ಈ ಅದ್ದೂರಿ ಮದುವೆ ಸಂಭ್ರಮದಲ್ಲಿ ಸಿನಿ ತಾರೆಯರು ಹೆಜ್ಜೆ ಹಾಕಿ ಮಿಂಚಿದ್ದಾರೆ. ಅದರಲ್ಲೂ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಅವರ ಕಪಲ್ ಡ್ಯಾನ್ಸ್ ನೋಡಿ ಸಂತೋಷಪಟ್ಟರು.

    https://www.instagram.com/p/BrLzh7gHGfF/?utm_source=ig_embed&utm_campaign=embed_video_watch_again

    ಇಶಾ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ದೀಪ್‍ವೀರ್ ಬಾಲಿವುಡ್‍ನ ಹಿಟ್ ಹಾಡುಗಳಿಗೆ ಜೊತೆಯಾಗಿ ಹೆಜ್ಜೆ ಹಾಕಿದರು. ಅಷ್ಟೇ ಅಲ್ಲದೆ `ದಿಲ್ ಧಡಕನೆ ದೋ’ ಚಿತ್ರದ ಗಾಲಾ ಗುಡಿಯಾ ಹಾಡಿಗೆ ಕ್ಯೂಟ್ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮನ ಗೆದ್ದಿದೆ.

    https://www.instagram.com/p/BrL_oYmnr7r/?utm_source=ig_embed&utm_campaign=embed_video_watch_again

    ಒಂದೆಡೆ ದೀಪಿಕಾ ಹಾಗೂ ರಣ್‍ವೀರ್ ಇನ್ನೊದೆಡೆ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಕೂಲ್ ಆಗಿ ಹೆಜ್ಜೆ ಹಾಕಿದ್ದಾರೆ. ನಾವ್ಯಾರಿಗೂ ಕಮ್ಮಿ ಇಲ್ಲ ಅನ್ನೋ ರೀತಿ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಬಹಳ ವರ್ಷಗಳ ನಂತರ ಜೋಡಿಯಾಗಿ `ಗುರು’ ಸಿನಿಮಾದ `ತೇರೆ ಬಿನಾ’ ಹಾಡಿಗೆ ಹೆಜ್ಜೆಹಾಕಿ ಎಲ್ಲರ ಗಮನ ಸೆಳೆದರು.

    https://www.instagram.com/p/BrM7cY7gRs0/?utm_source=ig_embed&utm_campaign=embed_video_watch_again

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನನ್ನ ತಂದೆ ರಾಜ್ ಕುಮಾರ್ ದೊಡ್ಡ ಫ್ಯಾನ್: ಅಭಿಷೇಕ್ ಬಚ್ಚನ್ ಮನದ ಮಾತು

    ನನ್ನ ತಂದೆ ರಾಜ್ ಕುಮಾರ್ ದೊಡ್ಡ ಫ್ಯಾನ್: ಅಭಿಷೇಕ್ ಬಚ್ಚನ್ ಮನದ ಮಾತು

    ಬೆಂಗಳೂರು: ಬಾಲಿವುಡ್ ಫೇಮಸ್ ನಟ ಬಿಗ್ ಬಿ ಅವರ ಪುತ್ರ ಅಭಿಷೇಕ್ ಬಚ್ಚನ್ ‘ನನ್ನ ತಂದೆ ಕರುನಾಡ ಚಕ್ರವರ್ತಿ ಡಾ. ರಾಜ್‍ಕುಮಾರ್ ಅವರ ದೊಡ್ಡ ಫ್ಯಾನ್’ ಎಂದು ಅಣ್ಣಾವ್ರ ಬಗೆಗಿನ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

    ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅಣ್ಣಾವ್ರನನ್ನು ನೆನೆದು ತಂದೆ ಮತ್ತು ಅವರ ನಡುವೆ ಇದ್ದ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

    ಅಭಿಷೇಕ್ ಬಚ್ಚನ್ ಅವರು ‘ಮನ್ ಮರ್ಜಿಯಾ’ ಹೊಸ ಸಿನಿಮಾ ಮಾಡಿದ್ದು, ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಸೌತ್ ಸಿನಿಮಾ ನಟರ ಬಗ್ಗೆ ಮಾತಾನಾಡುತ್ತಾ ಅಣ್ಣಾವ್ರ ಬಗ್ಗೆ ಮಾತಾನಾಡಿದ್ದಾರೆ. ನನ್ನ ತಂದೆ ರಾಜ್ ಕುಮಾರ್ ಅವರ ದೊಡ್ಡ ಫ್ಯಾನ್ ಆಗಿದ್ದು, ಅವರನ್ನು ಕಂಡರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.

    ಸ್ವತಃ ತಂದೆಯೇ ನಾನು ರಾಜ್‍ಕುಮಾರ್ ಅವರ ದೊಡ್ಡ ಫ್ಯಾನ್ ಎಂದು ಹೇಳಿಕೊಂಡಿದ್ದರು. ನನ್ನನ್ನು ಒಂದೆರೆಡು ಬಾರಿ ರಾಜ್ ಕುಮಾರ್ ಸರ್ ಅವರನ್ನು ಭೇಟಿ ಮಾಡಿಸಿದರು. ಆಗ ನಾನಿನ್ನು ಚಿಕ್ಕವನು. ಅವರ ನಟನೆ ಎಂದರೆ ತಂದೆಗೆ ತುಂಬಾ ಇಷ್ಟ. ಅವರ ಮಕ್ಕಳು ಒಳ್ಳೆಯ ಸಿನಿಮಾಗಳನ್ನು ಮಾಡಿದ್ದಾರೆ. ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ತಂದೆ ಹೇಳಿದ್ದರು. ನಾನು ಸೌತ್ ಸಿನಿಮಾಗಳನ್ನು ನೋಡಿದ್ದೇನೆ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂದು ತಮ್ಮ ಮೆಚ್ಚುಗೆಯನ್ನು ಸೂಚಿಸಿದರು.

    ಈ ಹಿಂದೆ ಅಮಿತಾಬ್ ಬಚ್ಚನ್, ಹಿಂದಿ ಚಿತ್ರರಂಗಕ್ಕೆ ರಾಜ್‍ಕುಮಾರ್ ಬಾರದೇ ಇದ್ದದ್ದು ಒಳ್ಳೆಯದಾಯಿತು. ಅವರು ಬಂದಿದ್ದರೆ ನಮಗೆ ಸಿನಿಮಾಗಳೇ ಸಿಗುತ್ತಿರಲಿಲ್ಲ ಎಂದು ಅಣ್ಣಾವ್ರ ಬಗ್ಗೆ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದರು. ಈಗಲೂ ಕೂಡ ಬಿಗ್ ಬಿ ರಾಜ್‍ಕುಮಾರ್ ಅವರ ಕುಟುಂಬದೊಂದಿಗೆ ಒಳ್ಳೆಯ ಸಂಪರ್ಕವನ್ನು ಹೊಂದಿದ್ದು ಒಂದು ಜಾಹೀರಾತಿನಲ್ಲಿ ಬಿಗ್ ಬಿ ಹಾಗೂ ಶಿವಣ್ಣ ಒಟ್ಟಿಗೆ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 8 ವರ್ಷಗಳ ಬಳಿಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಐಶ್-ಅಭಿಷೇಕ್

    8 ವರ್ಷಗಳ ಬಳಿಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಐಶ್-ಅಭಿಷೇಕ್

    ಮುಂಬೈ: ಬಾಲಿವುಡ್‍ನ ಬೆಸ್ಟ್ ಪೇರ್ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ 8 ವರ್ಷಗಳ ಬಳಿಕ ಮತ್ತೆ ತೆರೆಯ ಮೇಲೆ ಒಂದಾಗುತ್ತಿದ್ದಾರೆ.

    ಬಾಲಿವುಡ್ ಪವರ್ ಫುಲ್ ದಂಪತಿ ತೆರೆಯ ಮೇಲೆ ಮೋಡಿ ಮಾಡಲಿದ್ದಾರೆ. ಮದುವೆಯ ಬಳಿಕವೂ ಸೂಪರ್ ಹಿಟ್ ಸಿನಿಮಾಗಳಲ್ಲಿ ಐಶ್ವರ್ಯ ನಟಿಸಿದ್ದಾರೆ. ಮದುವೆ ಮುನ್ನ ಪತಿ ಅಭಿಷೇಕ್ ಬಚ್ಚನ್ ಜೊತೆ ನಟಿಸಿದ್ದ ‘ಗುರು’ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಇದಾದ ಬಳಿಕ ಸರ್ಕಾರ್ ರಾಜ್ ಮತ್ತು ರಾವಣ್ ಸಿನಿಮಾ ಬಿಡುಗಡೆಗೊಂಡಿದ್ದರೂ ನಿರೀಕ್ಷಿತ ಗೆಲುವನ್ನು ಪಡೆಯುವಲ್ಲಿ ವಿಫಲವಾಗಿದ್ದವು.

    ಐಶ್ವರ್ಯ ಮತ್ತು ಅಭಿಷೇಕ್ 2010ರಲ್ಲಿ ತೆರೆಕಂಡಿದ್ದ ಮಣಿರತ್ನಂ ನಿರ್ದೇಶನ ರಾವಣ್ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು. ಇದಾದ ಬಳಿಕ ಐಶ್ವರ್ಯ ಈ ವರ್ಷ ಪತಿಯೊಂದಿಗೆ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದ್ರೆ ನಿರ್ದೇಶಕರು ಯಾರು? ಯಾವ ಸಿನಿಮಾ? ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಫವರ್ ಫುಲ್ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿದ ಅಭಿಮಾನಿಗಳು ಮಾತ್ರ ಫುಲ್ ಖುಷಿಯಲ್ಲಿದ್ದಾರೆ.

    ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಹೊರ ಬರಬೇಕಿದೆ. ಕುಟುಂಬದೊಂದಿಗೆ ಲಂಡನ್ ಪ್ರವಾಸದಲ್ಲಿದ್ದ ಐಶ್ವರ್ಯ ಇಂದು ಮುಂಬೈಗೆ ಮರಳಿದ್ದಾರೆ. ಸದ್ಯ ಫೆನ್ನೆ ಖಾನ್ ಚಿತ್ರದ ಟ್ರೇಲರ್, ಹಾಡುಗಳು ಸದ್ದು ಮಾಡುತ್ತಿವೆ. ಇತ್ತ ಅಭಿಷೇಕ್ ಅಭಿನಯದ ‘ಮನ್‍ಮರ್ಜಿಯಾಂ’ ಚಿತ್ರ ಸೆಪ್ಟೆಂಬರ್ 21ರಂದು ತೆರೆಕಾಣಲಿದೆ.

  • ಪತ್ನಿ ಐಶ್ವರ್ಯ ವಿರುದ್ಧ ಅಭಿಷೇಕ್ ಬಚ್ಚನ್ ದೂರು!

    ಪತ್ನಿ ಐಶ್ವರ್ಯ ವಿರುದ್ಧ ಅಭಿಷೇಕ್ ಬಚ್ಚನ್ ದೂರು!

    ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ತನ್ನ ಪತ್ನಿ, ನಟಿ ಐಶ್ವರ್ಯ ರೈ ವಿರುದ್ಧ ಅಭಿಮಾನಿಗಳಿಗೆ ಟ್ವಿಟ್ಟರಿನಲ್ಲಿ ದೂರು ನೀಡಿದ್ದಾರೆ.

    ಅಭಿಷೇಕ್ ಬಚ್ಚನ್ ಇತ್ತೀಚಿಗೆ ಟ್ವಿಟ್ಟರಿನಲ್ಲಿ ಕೋಸುಗಡ್ಡೆ(broccoli) ಬಗ್ಗೆ ಟ್ವೀಟ್ ಮಾಡಿದ್ದರು. “ಯಾಕೆ? ಯಾಕೆ ಯಾರಾದರೂ ಈ ರೀತಿ ಮಾಡುತ್ತಾರೆ? ಯಾಕೆ? ನನ್ನ ಮಾತಿನ ಅರ್ಥ ಯಾರೂ ಕೋಸುಗಡ್ಡೆ ಇಷ್ಟಪಡುತ್ತಾರೆಂದು ಇದನ್ನು ಮಾಡುತ್ತಾರೆ” ಎಂದು ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ಮಾಡಿದ ಮರುದಿನವೇ ಐಶ್ವರ್ಯ ತನ್ನ ಪತಿ ಅಭಿಷೇಕ್ ಬಚ್ಚನ್‍ಗಾಗಿ ಕ್ಯೂನೋ ಸಲಾಡ್ ಮಾಡಿಕೊಟ್ಟರು. ಕ್ಯೂನೋ ಸಲಾಡ್‍ನಲ್ಲಿ ಟೋಮ್ಯಾಟೋ ಹಾಗೂ ಕೋಸುಗಡ್ಡೆ ಕೂಡ ಇತ್ತು. ತಕ್ಷಣ ಅಭಿಷೇಕ್ ಬಚ್ಚನ್ ಆ ಸಲಾಡ್ ಫೋಟೋವನ್ನು ತೆಗೆದು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡರು.

    ಅಭಿಷೇಕ್ ಸಲಾಡ್ ಫೋಟೋ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ “ಬಹುಶಃ ನನ್ನ ಪತ್ನಿ ನನ್ನ ಹಳೆಯ ಟ್ವೀಟ್ ಓದಿರಬಹುದು” ಎಂದು ಹೇಳಿ ಟ್ವೀಟ್ ಮಾಡುವ ಮೂಲಕ ಐಶ್ವರ್ಯ ವಿರುದ್ಧ ಅಭಿಮಾನಿಗಳಿಗೆ ದೂರು ನೀಡಿದ್ದಾರೆ.

    ಐಶ್ವರ್ಯ ರೈ ಟ್ವಿಟ್ಟರ್ ಬಳಸದಿದ್ದರೂ ತನ್ನ ಪತಿಯ ಟ್ವಿಟ್ಟರ್ ಹಾಗೂ ಟ್ವೀಟ್ ಮೇಲೆ ಯಾವಾಗಲೂ ಗಮನವಿಡುತ್ತಾರೆ. ಸದ್ಯ ಅಭಿಷೇಕ್ ಅವರ ಈ ಟ್ವೀಟ್‍ಗೆ ಸಾಕಷ್ಟು ಮಂದಿ ಹಾಸ್ಯವಾಗಿ ತೆಗೆದುಕೊಂಡು ರೀ-ಟ್ವೀಟ್ ಮಾಡಿದ್ದಾರೆ.

    ಸದ್ಯ ಅಭಿಷೇಕ್ ಬಚ್ಚನ್ ಈಗ ಅನುರಾಗ್ ಕಶ್ಯಪ್ ನಿರ್ದೇಶನದ ‘ಮನ್ ಮರ್ಜಿಯಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಭಿಷೇಕ್‍ಗೆ ನಾಯಕಿಯಾಗಿ ತಾಪ್ಸಿ ಪೊನ್ನು ಕಾಣಿಸುಕೊಳ್ಳುತ್ತಿದ್ದಾರೆ. 2 ವರ್ಷಗಳ ನಂತರ ಅಭಿಚೇಕ್ ಮನ್ ಮರ್ಜಿಯಾ ಚಿತ್ರದ ಮೂಲಕ ಹಿಂತಿರುಗುತ್ತಿದ್ದಾರೆ.

  • ಟ್ರೋಲ್ ಮಾಡಿದವರಿಗೆ ಬೆವರಿಳಿಸಿದ ಅಭಿಷೇಕ್ ಬಚ್ಚನ್!

    ಟ್ರೋಲ್ ಮಾಡಿದವರಿಗೆ ಬೆವರಿಳಿಸಿದ ಅಭಿಷೇಕ್ ಬಚ್ಚನ್!

    ಮುಂಬೈ: ತಂದೆ-ತಾಯಿ ಜೊತೆ ಈಗಲೂ ವಾಸಿಸುತ್ತಾನೆ ನೋಡಿ ಎಂದು ಟ್ರೋಲ್ ಮಾಡಿದ ಅಭಿಮಾನಿಯನ್ನು ಅಭಿಷೇಕ್ ಬಚ್ಚನ್ ಬೆವರಿಳಿಸಿದ್ದಾರೆ. ಅಭಿಷೇಕ್ ಅವರ ಪ್ರತಿಕ್ರಿಯೆ ನೋಡಿ ಜನರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    “ನಿಮ್ಮ ಜೀವನದ ಬಗ್ಗೆ ಬೇಸರ ಮಾಡಿಕೊಳ್ಳಬೇಡಿ. ಅಭಿಷೇಕ್ ಬಚ್ಚನ್ ಈಗಲೂ ತಮ್ಮ ತಂದೆ-ತಾಯಿ ಜೊತೆ ವಾಸಿಸುತ್ತಾರೆ. ಎಲ್ಲರೂ ಹೀಗೆ ಕಲಿಯಿರಿ” ಎಂದು ವೈಬಿಎನ್ ಎಂಬ ಅಭಿಮಾನಿ ಟ್ವಿಟ್ಟರಿನಲ್ಲಿ ಟ್ರೋಲ್ ಮಾಡಿದ್ದನು.

    https://twitter.com/stillyoungest/status/986300070709604352

    ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್, “ನನ್ನ ತಂದೆ-ತಾಯಿ ಜೊತೆಯಿರುವುದು ನನಗೆ ಹೆಮ್ಮೆಯ ವಿಷಯ. ಅವರಿಗೂ ನನ್ನ ಜೊತೆ ಇರುವುದ್ದಕ್ಕೆ ಹೆಮ್ಮೆ ಪಡುತ್ತಾರೆ. ನೀವು ಇದೇ ರೀತಿಯಾಗಿ ಪೋಷಕರ ಜೊತೆ ಇರಿ. ನಿಮಗೂ ತೃಪ್ತಿ ಆಗುತ್ತದೆ” ಎಂದು ಟ್ವೀಟ್ ಮಾಡಿ ಜೂ. ಬಚ್ಚನ್ ಆ ಅಭಿಮಾನಿಯ ಬೆವರಿಳಿಸಿದ್ದಾರೆ.

    ನಂತರ ಮತ್ತೊಬ್ಬ ಅಭಿಮಾನಿ ನೀವು ಏಕೆ ಎಲ್ಲ ಟ್ರೋಲ್‍ಗಳಿಗೆ ಪ್ರತಿಕ್ರಿಯಿಸುತ್ತಿರಿ ಎಂದು ಕೇಳಿದ್ದಕ್ಕೆ, ಕೆಲವು ಬಾರಿ ಜನರಿಗೆ ಅವರ ನಿಜವಾದ ಜಾಗ ತೋರಿಸಬೇಕಾಗುತ್ತದೆ ಎಂದು ಅಭಿಷೇಕ್ ಬಚ್ಚನ್ ಉತ್ತರಿಸಿದ್ದಾರೆ.

    ಟ್ರೋಲ್ ಮಾಡಿದವರಿಗೆ ಅಭಿಷೇಕ್ ಕೊಟ್ಟ ಪ್ರತಿಕ್ರಿಯೆಗೆ ಹಲವು ಮಂದಿ, “ನೀವು ಬೇರೆ ಮನೆ ಮಾಡದೇ ತಂದೆ-ತಾಯಿ ಜೊತೆ ವಾಸಿಸುತ್ತಿರುವುದರ ಬಗ್ಗೆ ನೀವು ಯಾರಿಗೂ ಏನೂ ಹೇಳಬೇಕಿಲ್ಲ. ವಯಸ್ಸಾದ ತಂದೆ-ತಾಯಿಯ ಜೊತೆ ಇದ್ದು, ಅವರನ್ನು ನೋಡಿಕೊಳ್ಳಬೇಕು” ಎಂದು ಟ್ವೀಟ್ ಮಾಡಿ ಅಭಿಷೇಕ್ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

    ಈ ಹಿಂದೆ ಅಮೆರಿಕದ ಖಾಸಗಿ ವಾಹಿನಿಯಲ್ಲಿ ನಡೆದ ಕಾರ್ಯಕ್ರಮದ ಸಂದರ್ಶನದಲ್ಲಿ ನಿರೂಪಕಿ ಅಭಿಷೇಕ್ ಹಾಗೂ ಐಶ್ವರ್ಯರನ್ನು ನೀವು ಈಗಲೂ ತಂದೆ ತಾಯಿ ಜೊತೆ ವಾಸಿಸುತ್ತೀರ ಎಂದು ಪ್ರಶ್ನಿಸಿದ್ದರು. ಅದಕ್ಕೆ ಹೌದು ಎಂದು ಅಭಿಷೇಕ್ ಉತ್ತರಿಸಿದಾಗ ಅದು ನಿಮ್ಮಿಂದ ಹೇಗೆ ಸಾಧ್ಯ ಎಂದು ನಿರೂಪಕಿ ಮರು ಪ್ರಶ್ನೆ ಕೇಳಿದ್ದರು. ಆಗ ಅಭಿಷೇಕ್, ನೀವು ನಿಮ್ಮ ತಂದೆ ತಾಯಿ ಜೊತೆ ವಾಸಿಸುತ್ತೀರ ಎಂದು ನಿರೂಪಕಿಯನ್ನೇ ಪ್ರಶ್ನಿಸಿದ್ದರು. ಆಗ ಇಲ್ಲ ಎಂದು ಹೇಳಿದ ನಿರೂಪಕಿಗೆ, ಅದು ನಿಮ್ಮಿಂದ ಹೇಗೆ ಸಾಧ್ಯ ಎಂದು ಮರು ಪ್ರಶ್ನಿಸುವ ಮೂಲಕ ಖಡಕ್ ಉತ್ತರ ನೀಡಿದ್ದರು.

  • ಮಗನ ಬಗ್ಗೆ ಟ್ವೀಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಬಿಗ್-ಬಿ!

    ಮಗನ ಬಗ್ಗೆ ಟ್ವೀಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಬಿಗ್-ಬಿ!

    ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಭಾರತದ ಧ್ವಜ ಹಿಡಿದಿರುವ ಫೋಟೋವನ್ನು ಬಿಗ್-ಬಿ ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವಾಗ ಎಡವಟ್ಟು ಮಾಡಿ ನಂತರ ಅದನ್ನು ಸರಿ ಮಾಡಿದ್ದಾರೆ.

    ಶನಿವಾರ ನಟ ಅಭಿಷೇಕ್ ಬಚ್ಚನ್ ಪಂಜಾಬ್‍ನ ಅಟರಿ ಗ್ರಾಮದಲ್ಲಿರುವ ಭಾರತದ ಹಾಗೂ ಪಾಕ್ ಬಾರ್ಡರ್ ನಲ್ಲಿ ನಡೆದ ಕಾರ್ಯಕ್ರಮವನ್ನು ವೀಕ್ಷಿಸಲು ಹೋಗಿದ್ದರು. ಆಗ ಅಭಿಷೇಕ್ ಬಚ್ಚನ್ ರಾಷ್ಟ್ರ ಧ್ವಜ ಹಿಡಿದಿದ್ದರು. ಅಭಿಷೇಕ್ ರಾಷ್ಟ್ರ ಧ್ವಜ ಹಿಡಿದಿರುವ ಫೋಟೋವನ್ನು ಬಿಗ್-ಬಿ ತಮ್ಮ ಟ್ವಿಟ್ಟರಿನಲ್ಲಿ ಹಾಕಿದ್ದರು. ಅದರಲ್ಲಿ ಅಟರಿ ಬಾರ್ಡರ್ ಬದಲು ವಾಘಾ ಬಾರ್ಡರ್ ಎಂದು ಬರೆದಿದ್ದರು. ಕೆಲ ಸಮಯದ ನಂತರ ಅವರು ಈ ತಪ್ಪನ್ನು ಅರಿತು ಸರಿಪಡಿಸಿದ್ದರು.

    ಬಿಗ್-ಬಿ ಟ್ವಿಟ್ಟರಿನಲ್ಲಿ ಮೊದಲು ಅಭಿಚೇಕ್ ಬಚ್ಚನ್ ಫೋಟೋ ಹಾಕಿ ಅದ್ದಕ್ಕೆ ಅಭಿಷೇಕ್ ಬಚ್ಚನ್ ವಾಘಾ ಬಾರ್ಡರ್ ನಲ್ಲಿದ್ದಾರೆ. ಜೈ ಹಿಂದ್! ಭಾರತ್ ಮಾತಾ ಕೀ ಜೈ! ಅದು ಒಂದು ಅದ್ಭುತ ಅನುಭವವಾಗಿತ್ತು ಎಂದು ಅವರು ನನಗೆ ಹೇಳಿದರು. ದೇಶಭಕ್ತಿಯ ಭಾವನೆ ನೋಡಲು ನನಗೆ ಅವಕಾಶ ಸಿಕ್ಕಿತ್ತು ಹಾಗೂ ರೋಮಾಂಚನವಾಯಿತು ಎಂದು ತಿಳಿಸಿದರು. ಆ ಗಾರ್ಡ್ ಸೆರಮನಿಯಲ್ಲಿ ನಾನು ವಾಯ್ಸ್ ಓವರ್ ನೀಡಿದ್ದೆ ಎಂದು ಮೊದಲು ಟ್ವೀಟ್ ಮಾಡಿದ್ದರು.

    ಟ್ವೀಟ್ ಮಾಡಿ ಎರಡು ಗಂಟೆಗಳ ನಂತರ ಬಿಗ್-ಬಿ ಮೊದಲ ಟ್ವೀಟ್‍ನ ಕ್ಯಾಪ್ಷನ್ ಹಾಕಿ ಅದರಲ್ಲಿ ಕೊಂಚ ಬದಲಾವಣೆ ಮಾಡಿದ್ದರು. ಅಭಿಷೇಕ್ ರಾಷ್ಟ್ರಧ್ವಜ ಹಿಡಿದು ನಿಂತಿರೋದು ವಾಘಾ ಬಾರ್ಡರ್ ನಲ್ಲಿ ಅಲ್ಲ ಅಟಾರಿ ಬಾರ್ಡರ್ ನಲ್ಲಿ. ವಾಘಾ ಬಾರ್ಡರ್ ಪಾಕಿಸ್ತಾನದ ಹತ್ತಿರ ಇದೆ ಎಂದು ಪುನಃ ಟ್ವೀಟ್ ಮಾಡಿದರು.

    ಅಭಿಷೇಕ್ ಬಚ್ಚನ್ ಕಾರ್ಯಕ್ರಮದ ಕೆಲವು ವಿಡಿಯೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಿ ಅದ್ದಕ್ಕೆ ‘ಜೈ ಹಿಂದ್’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಆ ಕಾರ್ಯಕ್ರಮದಲ್ಲಿ ನೆರದಿದ್ದ ಜನರ ವಿಡಿಯೋವನ್ನು ತೆಗೆದು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಅಭಿಷೇಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಅಲ್ಲಿ ‘ಹ್ಯಾಪಿ ನ್ಯೂ ಇಯರ್’ ಚಿತ್ರದ ಹಾಡೊಂದನ್ನು ಹಾಕಿದ್ದರು.

    Had the most amazing time yesterday. Thanks to the BSF ( Border Security Force) who invited me to witness the closing of the border ceremony at the Attari border out post. An event I’ve read so much about and seen much footage of but never had the pleasure to witness in person. It’s almost indescribable what one feels during this robust event. Patriotism, pride, admiration, humility, appreciation, regret and many, many more emotions. The pageantry, flair and aggression that is displayed is so overwhelming. Have nothing but love and respect for our armed forces. Truly! It also feels great when they play one of your songs and the crowds love it ???????? @iamsrk @farahkhankunder @boman_irani @sonu_sood @deepikapadukone

    A post shared by Abhishek Bachchan (@bachchan) on

    ಅಭಿಷೇಕ್ ಆ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದ್ದಕ್ಕೆ, “ನಾನು ನಿನ್ನೆ ಒಳೆಯ ಸಮಯವನ್ನು ಕಳದೆ. ಬಾರ್ಡರ್ ಸೆಕ್ಯೂರಿಟಿ ಫೋರ್ಸ್(ಬಿಎಸ್‍ಎಫ್) ನನ್ನನ್ನು ಅಟರಿ ಬಾರ್ಡರ್ ನಲ್ಲಿ ನಡೆಯುವ ಸೆರಮನಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ನನಗೆ ಆಹ್ವಾನಿಸಿದ್ದಕ್ಕೆ ತುಂಬ ಧನ್ಯವಾದಗಳು. ಈ ಕಾರ್ಯಕ್ರಮದ ಬಗ್ಗೆ ನಾನು ತುಂಬಾ ಕೇಳಿದ್ದೆ, ಓದಿದ್ದೆ ಹಾಗೂ ವಿಡಿಯೋಗಳಲ್ಲಿ ನೋಡಿದ್ದೆ. ಆದರೆ ಕಣ್ಣಾರೆ ನೋಡುವ ಅವಕಾಶ ದೊರೆಯಲಿಲ್ಲ. ನನಗಾದ ಅನುಭವವನ್ನು ಶಬ್ಧಗಳಲ್ಲಿ ಹೇಳಲು ಸಾಧ್ಯವಿಲ್ಲ. ಅಲ್ಲಿ ಹೋದ ಮೇಲೆ ನನ್ನ ದೇಶಭಕ್ತಿ, ಗೌರವ, ವಿನಯ, ದುಃಖ ಎಲ್ಲ ಭಾವನೆಗಳು ಎಲ್ಲ ಒಟ್ಟಿಗೆ ಹೊರಬಂತು. ನನ್ನ ಮನಸ್ಸಿನಲ್ಲಿ ಸೈನಿಕರಿಗೆ ಗೌರವವಿದೆ. ಇನ್ನೊಂದು ವಿಷಯ ನನಗೆ ತುಂಬಾ ಇಷ್ಟವಾಯಿತ್ತು. ಅಲ್ಲಿ ನನ್ನ ಚಿತ್ರದ ಹಾಡು ಹಾಕಿದ್ದರು. ಜನರಿಗೆ ಅದು ತುಂಬಾ ಇಷ್ಟವಾಯಿತ್ತು” ಎಂದು ಅಭಿಷೇಕ್ ಬಚ್ಚನ್ ಪೋಸ್ಟ್ ಮಾಡಿದ್ದಾರೆ.

  • ಅಭಿಷೇಕ್ ಸಿನಿ ಕೆರಿಯರ್ ಬಗ್ಗೆ ಇದ್ದ ಚಿಂತೆಯಿಂದ ಮುಕ್ತರಾದ್ರು ಐಶ್ವರ್ಯ ರೈ ಬಚ್ಚನ್!

    ಅಭಿಷೇಕ್ ಸಿನಿ ಕೆರಿಯರ್ ಬಗ್ಗೆ ಇದ್ದ ಚಿಂತೆಯಿಂದ ಮುಕ್ತರಾದ್ರು ಐಶ್ವರ್ಯ ರೈ ಬಚ್ಚನ್!

    ಮುಂಬೈ: ಬಾಲಿವುಡ್ ಸುಂದರಿ ಐಶ್ವರ್ಯ ಪತಿಯ ಸಿನಿಮಾ ವೃತ್ತಿ ಜೀವನದ ಬಗೆಗೆ ಹೊಂದಿದ್ದ ಚಿಂತೆಯಿಂದ ನಿರಾಳವಾಗಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಪತಿ ಅಭಿಷೇಕ್ ಬಚ್ಚನ್ ಕೈಯಲ್ಲಿ ಯಾವುದೇ ಸಿನಿಮಾಗಳಿರಲಿಲ್ಲ. ಇದರಿಂದ ಎಲ್ಲಿ ಪತಿಯ ಸಿನಿ ಕೆರಿಯರ್ ಕೊನೆಯಾಗುತ್ತೊ ಎಂಬ ಚಿಂತೆ ಐಶ್ವರ್ಯರನ್ನು ಕಾಡುತ್ತಿತ್ತು. ಆದ್ರೆ ಈಗ ಐಶ್ವರ್ಯ ಚಿಂತೆ ದೂರವಾಗಿದ್ದು, ಅಭಿಷೇಕ್ ಬಚ್ಚನ್ ನಿರ್ಮಾಪಕ ಪ್ರಿಯದರ್ಶನ್ ನಿರ್ಮಾಣದ ‘ಬಚ್ಚನ್ ಸಿಂಹ’ ಸಿನಿಮಾಗೆ ಸಹಿ ಹಾಕಿದ್ದಾರೆ. ಬಿಗ್ ಬಜೆಟ್ ಹೊಂದಿರುವ ಸಿನಿಮಾ ಇದಾಗಿದ್ದು, 11 ವರ್ಷದ ಬಳಿಕ ಅಭಿಷೇಕ್ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಬಚ್ಚನ್ ಸಿಂಹ ಚಿತ್ರದ ಚಿತ್ರೀಕರಣ ಜೂನ್ 5ರಿಂದ ಆರಂಭಗೊಳ್ಳಲಿದೆ.

    ಸಿನಿಮಾದ ಸ್ಕ್ರಿಪ್ಟ್ ತಯಾರಾಗಿದ್ದು, ಇದೂವರೆಗೂ ಫೈನಲ್ ಆಗಿಲ್ಲ ಅಂತಾ ಚಿತ್ರತಂಡ ತಿಳಿಸಿದೆ. ಸಿನಿಮಾದಲ್ಲಿ ಅಭಿಷೇಕ್ ಜೊತೆಯಾಗಿ ನಟಿಸುವ ನಟಿ ಹೆಸರನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ನಿರ್ಮಾಪಕ ಪ್ರಿಯದರ್ಶನ್ ಅವರ 36 ವರ್ಷಗಳ ಸಿನಿ ಕೆರಿಯರ್‍ನ 93ನೇ ಸಿನಿಮಾ ಇದಾಗಿದ್ದು, ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ.

    ನಿರ್ಮಾಪಕ ರಾಜೇಶ್ ಆರ್. ಸಿಂಹ ತಮ್ಮ ಮುಂದಿನ ಚಿತ್ರದಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಇಬ್ಬರಿಗೂ ಜೊತೆಯಾಗಿ ನಟಿಸುವ ಆಫರ್ ನೀಡಿದ್ದಾರೆ. ಆದ್ರೆ ಐಶ್ವರ್ಯ ಪತಿಯೊಂದಿಗೆ ನಟಿಸಲು ಹಿಂದೇಟು ಹಾಕ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಐಶ್ ಮತ್ತು ಅಭಿಷೇಕ್ ಸಿನಿಮಾ ಒಪ್ಪಿಕೊಂಡರೆ 8 ವರ್ಷಗಳ ಬಳಿಕ ತೆರೆಯ ಮೇಲೆ ಒಂದಾಗಲಿದ್ದಾರೆ. 2010ರಲ್ಲಿ ಈ ಜೋಡಿ ‘ರಾವಣ್’ ಸಿನಿಮಾದಲ್ಲಿ ಕೊನೆಯ ಬಾರಿ ಜೊತೆಯಾಗಿ ನಟಿಸಿದ್ದರು.

    ಐಶ್ವರ್ಯ ಪತಿಯನ್ನು ಸಿನಿಮಾಗೆ ಕಮ್ ಬ್ಯಾಕ್ ಮಾಡಿಸಲು ಪ್ರತಿಯೊಂದು ಆಫರ್ ಬಂದಾಗಲೂ ತಾವೇ ಖುದ್ದು ಸ್ಕ್ರಿಪ್ಟ್ ಚೆಕ್ ಮಾಡಿ ಅಂತಿಮಗೊಳಿಸುತ್ತಿದ್ದಾರೆ. ಈ ಹಿಂದೆ ಐಶ್ವರ್ಯ ಪತಿಗೆ ಸಿನಿಮಾದ ಅವಕಾಶ ಕೋರಿ ಸಲ್ಮಾನ್ ಖಾನ್ ಮಾಜಿ ಮ್ಯಾನೇಜರ್ ರೇಶ್ಮಾ ಶೆಟ್ಟಿ ಮತ್ತು ಹಲವು ನಿರ್ದೇಶಕರ ಜೊತೆ ಮಾತನಾಡಿದ್ದರು ಎಂದು ಪತ್ರಿಕೆಗಳು ಪ್ರಕಟ ಮಾಡಿದ್ದವು.

    ಸದ್ಯ ಐಶ್ವರ್ಯ ರೈ `ಫೆನ್ನಿ ಖಾನ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರ ಈಗಾಗಲೇ ಸಾಕಷ್ಟು ಕೂತುಹಲವನ್ನು ಹುಟ್ಟುಹಾಕಿದೆ. ಫೆನ್ನಿ ಖಾನ್ ಚಿತ್ರದಲ್ಲಿ ಅನಿಲ್ ಕಪೂರ್, ರಾಜ್‍ಕುಮಾರ್ ರಾವ್, ದಿವ್ಯಾ ದತ್ತ ಸೇರಿದಂತೆ ಹಲವು ಸ್ಟಾರ್ ಗಳು ಬಣ್ಣ ಹಚ್ಚಿದ್ದಾರೆ. ಅತುಲ್ ಮಂಜ್ರೆಕರ್ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದ್ದು, ಅರ್ಜುನ್ ಕಪೂರ್, ಪ್ರೇರಣಾ ಅರೋರಾ, ಭೂಷಣ್ ಕುಮಾರ್ ಮತ್ತು ರಾಕೇಶ್ ಮೆಹ್ರಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಫೆನ್ನಿ ಖಾನ್ ಇದೇ ವರ್ಷ ಜೂನ್ 15ರಂದು ತೆರೆಕಾಣುವ ಸಾಧ್ಯತೆಗಳಿವೆ. ಐಶ್ವರ್ಯ ಮಾವ ಅಮಿತಾಬ್ ಬಚ್ಚನ್ ಕೂಡ ಟಾಲಿವುಡ್‍ನ ಸೈರಾ ನರಸಿಂಹ ರೆಡ್ಡಿ, ಬಾಲಿವುಡ್ ನ ‘ಥಗ್ಸ್ ಆಫ್ ಹಿಂದೊಸ್ಥಾನ’ ಸೇರಿದಂತೆ ಕಲಾತ್ಮಕ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  • ಪತಿಯ ಈ ವಿಷಯಕ್ಕೆ ಸಂಬಂಧಿಸಿದಂತೆ ಚಿಂತೆಯಲ್ಲಿದ್ದಾರೆ ಐಶ್ವರ್ಯ ರೈ ಬಚ್ಚನ್

    ಪತಿಯ ಈ ವಿಷಯಕ್ಕೆ ಸಂಬಂಧಿಸಿದಂತೆ ಚಿಂತೆಯಲ್ಲಿದ್ದಾರೆ ಐಶ್ವರ್ಯ ರೈ ಬಚ್ಚನ್

    ಮುಂಬೈ: ಮಾಜಿ ವಿಶ್ವ ಸುಂದರಿ, ಬಿಗ್ ಮನೆಯ ಮುದ್ದಿನ ಸೊಸೆ ಐಶ್ವರ್ಯ ರೈ ಪತಿ ಅಭಿಷೇಕ್ ಬಚ್ಚನ್ ಸಿನಿಮಾ ಕೆರಿಯರ್ ನ ಚಿಂತೆಯಲ್ಲಿದ್ದಾರೆ.

    ಐಶ್ವರ್ಯ ಆರು ವರ್ಷದ ಮಗುವಿನ ತಾಯಿಯಾದರೂ ಬಾಲಿವುಡ್‍ನಲ್ಲಿ ಬೇಡಿಕೆ ನಟಿಯರ ಸ್ಥಾನದಲ್ಲಿದ್ದಾರೆ. ಇತ್ತ ಮಾವ ಅಮಿತಾಬ್ ಬಚ್ಚನ್ ಕೂಡ ಟಾಲಿವುಡ್ ಸೇರಿದಂತೆ ಕಲಾತ್ಮಕ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಪತಿ ಅಭಿಷೇಕ್ ಬಚ್ಚನ್ ಕೈಯಲ್ಲಿ ಮಾತ್ರ ಯಾವುದೇ ಸಿನಿಮಾಗಳಿಲ್ಲ. ಎಲ್ಲಿ ಪತಿಯ ಸಿನಿ ಕೆರಿಯರ್ ಕೊನೆಯಾಗುತ್ತಾ ಎನ್ನುವ ಚಿಂತೆಯಲ್ಲಿ ಐಶ್ವರ್ಯ ಮುಳುಗಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    2016ರಲ್ಲಿ ತೆರೆಕಂಡ ‘ಹೌಸ್ ಫುಲ್-3’ ಅಭಿಷೇಕ್ ನಟನೆ ಕೊನೆಯ ಸಿನಿಮಾ. ಹೌಸ್ ಫುಲ್ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವದರ ಮೂಲಕ ನೋಡುಗರಿಂದ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಆದ್ರೆ ಯಶಸ್ವಿ ಸಿನಿಮಾದ ಬಳಿಕ 2017ರಲ್ಲಿ ಅಭಿಷೇಕ್ ನಟಿಸಿರುವ ಒಂದು ಚಿತ್ರವೂ ಬಿಡುಗಡೆಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಐಶ್ವರ್ಯ ರೈ ಪತಿಯನ್ನು ಬಾಲಿವುಡ್‍ನಲ್ಲಿ ಕಮ್‍ಬ್ಯಾಕ್ ಮಾಡಿಸಲು ಅಭಿಷೇಕ್ ಬಳಿ ಬರುವ ಪ್ರತಿಯೊಂದು ಆಫರ್ ನ್ನು ತಾವೇ ಖುದ್ದು ಪರಿಶೀಲಿಸುತ್ತಿದ್ದಾರೆ. ನಿರ್ದೇಶಕರು ನೀಡುವ ಸ್ಕ್ರಿಪ್ಟ್ ಖುದ್ದು ಐಶ್ವರ್ಯ ಅವರೇ ಚೆಕ್ ಮಾಡಿ ಅಂತಿಮಗೊಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಸಂಬಂಧ ಸಲ್ಮಾನ್ ಖಾನ್‍ರ ಮಾಜಿ ಮ್ಯಾನೇಜರ್ ರೇಶ್ಮಾ ಶೆಟ್ಟಿ ಜೊತೆಯೂ ಅಭಿಷೇಕ್ ಸಿನಿ ಕೆರಿಯರ್ ಬಗ್ಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಹಲವು ನಿರ್ದೇಶಕರು ಮತ್ತು ನಿರ್ಮಾಪಕರ ಬಳಿ ಪತಿಯ ಸಿನಿಮಾ ಕೆರಿಯರ್ ಬಗ್ಗೆ ಮಾತನಾಡಿದ್ದಾರೆ ಪತ್ರಿಕೆಗಳು ಪ್ರಕಟಿಸಿವೆ.

    ಸದ್ಯ ಐಶ್ವರ್ಯ ರೈ ‘ಫೆನ್ನಿ ಖಾನ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರ ಈಗಾಗಲೇ ಸಾಕಷ್ಟು ಕೂತುಹಲವನ್ನು ಹುಟ್ಟುಹಾಕಿದೆ. ಫೆನ್ನಿ ಖಾನ್ ಚಿತ್ರದಲ್ಲಿ ಅನಿಲ್ ಕಪೂರ್, ರಾಜ್‍ಕುಮಾರ್ ರಾವ್, ದಿವ್ಯಾ ದತ್ತ ಸೇರಿದಂತೆ ಹಲವು ಸ್ಟಾರ್ ಗಳು ಬಣ್ಣ ಹಚ್ಚಿದ್ದಾರೆ. ಅತುಲ್ ಮಂಜ್ರೆಕರ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಅರ್ಜುನ್ ಕಪೂರ್, ಪ್ರೇರಣಾ ಅರೋರಾ, ಭೂಷಣ್ ಕುಮಾರ್ ಮತ್ತು ರಾಕೇಶ್ ಮೆಹ್ರಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಫೆನ್ನೆ ಖಾನ್ ಇದೇ ವರ್ಷ ಜೂನ್ 15ರಂದು ತೆರೆಕಾಣುವ ಸಾಧ್ಯತೆಗಳಿವೆ.