Tag: Abhishek Bachchan

  • ನನ್ನಪ್ಪ ನನಗಾಗಿ ಒಂದು ಸಿನಿಮಾ ಮಾಡಿಲ್ಲ – ನೆಪೊಟಿಸಂ ಬಗ್ಗೆ ಅಭಿಷೇಕ್ ಬಚ್ಚನ್ ಮಾತು

    ನನ್ನಪ್ಪ ನನಗಾಗಿ ಒಂದು ಸಿನಿಮಾ ಮಾಡಿಲ್ಲ – ನೆಪೊಟಿಸಂ ಬಗ್ಗೆ ಅಭಿಷೇಕ್ ಬಚ್ಚನ್ ಮಾತು

    – ಕಾಲ್ ಮಾಡಿ ಮಗನಿಗೆ ಅವಕಾಶ ಕೊಡಿಯೆಂದು ಯಾರನ್ನೂ ಕೇಳಿಲ್ಲ

    ಮುಂಬೈ: ನನ್ನಪ್ಪ ನನಗಾಗಿ ಒಂದು ಸಿನಿಮಾ ಮಾಡಿಲ್ಲ ಎಂದು ಹೇಳುವ ಮೂಲಕ ಬಾಲಿವುಡ್ ಬಿಗ್‍ಬಿ ಅಮಿತಾಭ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರು ನೆಪೊಟಿಸಂ ಬಗ್ಗೆ ಮಾತನಾಡಿದ್ದಾರೆ.

    ಇತ್ತೀಚೆಗೆ ಬಾಲಿವುಡ್‍ನಲ್ಲಿ ನೆಪೊಟಿಸಂ (ಸ್ವಜನಪಕ್ಷಪಾತ) ಬಹಳ ಸದ್ದು ಮಾಡುತ್ತಿದೆ. ಅದರಲ್ಲೂ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ, ಬಾಲಿವುಡ್‍ನ ಹಲವಾರು ಮಂದಿ ಮೂವಿ ಮಾಫಿಯಾ ಮತ್ತು ಬಾಲಿವುಡ್ ನೆಪೊಟಿಸಂ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೆಪೊಟಿಸಂ ಹೆಸರು ಬಾಲಿವುಡ್‍ನಲ್ಲಿ ಕೇಳಿ ಬಂದಾಗ ಹಲವಾರು ಮಂದಿ ನಟ ಅಭಿಷೇಕ್ ಬಚ್ಚನ್ ಕಡೆ ಬೊಟ್ಟು ಮಾಡುತ್ತಾರೆ.

    ಈಗ ನೆಪೋಟಿಸಂ ಬಗ್ಗೆ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಭಿಷೇಕ್ ಬಚ್ಚನ್ ಅವರು, ಕೆಲವರು ನೆಪೋಟಿಸಂ ಪದ ಕೇಳಿದ ತಕ್ಷಣ ನನ್ನ ಕಡೆ ಬೊಟ್ಟು ಮಾಡುತ್ತಾರೆ. ಆದರೆ ಇದುವರೆಗೂ ನನ್ನ ಅಪ್ಪ ಯಾವ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಫೋನ್ ಮಾಡಿ ನನ್ನ ಮಗನಿಗೆ ಚಾನ್ಸ್ ಕೊಡಿ ಎಂದು ಕೇಳಿಲ್ಲ. ಜೊತೆಗೆ ಅವರೆಂದು ನನಗಾಗಿ ಒಂದು ಸಿನಿಮಾವನ್ನು ಮಾಡಿಲ್ಲ. ಹೀಗಿದ್ದರೂ ಜನ ನನ್ನ ಕಡೆ ಯಾಕೆ ಬೊಟ್ಟು ಮಾಡುತ್ತಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಜೊತೆಗೆ ನಮ್ಮದೇ ಸಿನಿಮಾ ನಿರ್ಮಾಣದ ಸಂಸ್ಥೆ ಇದ್ದರೂ ಅದರಲ್ಲಿ ನನ್ನ ಸಿನಿಮಾಗಳನ್ನು ನನ್ನ ತಂದೆ ನಿರ್ಮಾಣ ಮಾಡಿಲ್ಲ. ಆದರೆ ನಾನು ನನ್ನ ಚಿತ್ರ ನಿರ್ಮಾಣ ಸಂಸ್ಥೆಯಿಂದ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದೇನೆ. ನಮ್ಮ ತಂದೆಯ ಹೆಸರಿನಿಂದ ಬಾಲಿವುಡ್‍ಗೆ ಬರಲು ಸುಲಭ ಆಯ್ತು. ನಿಜ ಆದರೆ ಇಲ್ಲಿ ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ಸಿನಿಮಾಗಾಗಿ ಕಷ್ಟಪಟ್ಟಿದ್ದೇನೆ. ಹೀಗಿರುವಾಗ ಇಲ್ಲಿ ನೆಪೊಟಿಸಂ ಹೇಗೆ ಬರುತ್ತದೆ ಎಂದು ಅಭಿಷೇಪ್ ಪ್ರಶ್ನೆ ಮಾಡಿದ್ದಾರೆ.

    ಬಾಲಿವುಡ್‍ನಲ್ಲಿ ಸದ್ಯ ಹಳೆ ಹೀರೋ, ವಿಲನ್, ನಿರ್ಮಾಪಕ ಮತ್ತು ನಿರ್ದೇಶಕರ ಮಕ್ಕಳೇ ಹೆಚ್ಚು ನಟ-ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ನೆಪೋಟಿಸಂ ಜಾಸ್ತಿ ಹೊರಗಿನಿಂದ ಬರುವ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುವುದಿಲ್ಲ ಎಂದು ಕೆಲವರು ದೂರುತ್ತಾರೆ.

  • ಕೊರೊನಾ ನೆಗೆಟಿವ್- ಮನೆಗೆ ಹೋಗ್ತಿದ್ದೀನಿ ಎಂದ ಅಭಿಷೇಕ್ ಬಚ್ಚನ್

    ಕೊರೊನಾ ನೆಗೆಟಿವ್- ಮನೆಗೆ ಹೋಗ್ತಿದ್ದೀನಿ ಎಂದ ಅಭಿಷೇಕ್ ಬಚ್ಚನ್

    ಮುಂಬೈ: ಕೊರೊನಾ ವರದಿ ನೆಗೆಟಿವ್ ಬಂದಿದ್ದು, ನಾನು ಮನೆಗೆ ಹೋಗುವ ಖುಷಿಯಲ್ಲಿದ್ದೇನೆ ಎಂದು ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ

    ಇಂದು ಮಧ್ಯಾಹ್ನ ಬಂದ ನನ್ನ ಕೊರೊನಾ ವರದಿ ನೆಗೆಟಿವ್ ಬಂದಿದೆ. ನನ್ನ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ ಕುಟುಂಬ ಮತ್ತು ಎಲ್ಲ ಅಭಿಮಾನಿಗಳಿಗೆ ಧನ್ಯವಾದ. ಕೊನೆಗೂ ಕೊರೊನಾ ಜೊತೆಗಿನ ಹೋರಾಟದಲ್ಲಿ ಗೆದ್ದಿದ್ದೇನೆ. ನಾನಾವತಿ ಆಸ್ಪತ್ರೆಯ ಎಲ್ಲ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಗೆ ಅಭಿಷೇಕ್ ಬಚ್ಚನ್ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಆಸ್ಪತ್ರೆಯಲ್ಲಿ ತಮ್ಮ ಕೇರಿಂಗ್ ಬೋರ್ಡ್ ಫೋಟೋ ಸಹ ಹಂಚಿಕೊಂಡಿದ್ದಾರೆ.

    ಕೊರೊನಾ ತಗುಲಿರೋದು ದೃಢವಾಗ್ತಿದ್ದಂತೆ ಜುಲೈ 11ರಂದು ತಂದೆ ಅಮಿತಾಬ್ ಬಚ್ಚನ್ ಜೊತೆ ಅಭಿಷೇಕ್ ಬಚ್ಚನ್ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನನ ಜುಲೈ 12ರಂದು ಪತ್ನಿ ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಗೂ ಸೋಂಕು ತಗುಲಿರೋದು ಖಚಿತವಾಗಿತ್ತು. ಜುಲೈ 27ರಂದು ಐಶ್ವರ್ಯಾ ಮತ್ತು ಆರಾಧ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆಗಸ್ಟ್ 2ರಂದು ಅಮಿತಾಬ್ ಬಚ್ಚನ್ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದರು.

    https://www.instagram.com/p/CDn1fvEJZXo/

  • ಬಿಗ್ ಬಿಗೆ ಕೊರೊನಾ ನೆಗೆಟಿವ್- ಆಸ್ಪತ್ರೆಯಿಂದ ಡಿಸ್ಚಾರ್ಜ್

    ಬಿಗ್ ಬಿಗೆ ಕೊರೊನಾ ನೆಗೆಟಿವ್- ಆಸ್ಪತ್ರೆಯಿಂದ ಡಿಸ್ಚಾರ್ಜ್

    ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‍ಗೆ ಕೊರೊನೊ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಈ ಕುರಿತು ಅಮಿತಾಬ್ ಬಚ್ಚನ ಮಗ, ನಟ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದು, ಇತ್ತೀಚಿನ ಕೊರೊನಾ ಪರೀಕ್ಷೆಯ ವರದಿಯಲ್ಲಿ ನಮ್ಮ ತಂದೆಗೆ ಕೊರೊನಾ ನೆಗೆಟಿವ್ ಬಂದಿದೆ. ಆಸ್ಪತ್ರೆಯಿಂದ ಅವರು ಡಿಸ್ಚಾರ್ಜ್ ಆಗಿದ್ದಾರೆ. ಇದೀಗ ಅವರು ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ನಿಮ್ಮೆಲ್ಲ ಪ್ರಾರ್ಥನೆ ಹಾಗೂ ಹಾರೈಕೆಗಳಿಗೆ ಧನ್ಯವಾದಗಳು ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಬಿಗ್ ಬಿಗೆ ಜುಲೈ 11ರಂದು ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ನಂತರ ಅವರು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ.

  • ಸೊಸೆ, ಮೊಮ್ಮಗಳು ಡಿಸ್ಚಾರ್ಜ್ ಖುಷಿಯಿಂದ ಕಣ್ಣೀರಿಟ್ಟ ಬಿಗ್ ಬಿ

    ಸೊಸೆ, ಮೊಮ್ಮಗಳು ಡಿಸ್ಚಾರ್ಜ್ ಖುಷಿಯಿಂದ ಕಣ್ಣೀರಿಟ್ಟ ಬಿಗ್ ಬಿ

    ಮುಂಬೈ: ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳು ಆರಾಧ್ಯ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸಂತಸದ ವಿಷಯ ಕೇಳಿ ಬಿಗ್ ಬಿ ಅಮಿತಾಬ್ ಬಚ್ಚನ್ ಕಣ್ಣೀರಿಟ್ಟಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, ಮೊಮ್ಮಗಳು ಮತ್ತು ಸೊಸೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸುದ್ದಿ ಕೇಳಿದ ಕೂಡಲೇ ಕಣ್ಣಂಚಲಿ ನೀರು ಬಂತು. ಓ ದೇವರೆ ನಿನ್ನ ಕೃಪೆ ಹೀಗೆ ಇರಲಿ ಎಂದು ಭಾವನಾತ್ಮಕವಾಗಿ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಸೋಮವಾರ ಸಂಜೆ ಪುತ್ರಿ ಮತ್ತು ಪತ್ನಿ ಮುಂಬೈನ ನಾನಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವ ವಿಷಯವನ್ನು ಅಭಿಷೇಕ್ ಬಚ್ಚನ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. “ನಿಮ್ಮ ನಿರಂತರ ಪ್ರಾರ್ಥನೆ ಮತ್ತು ಶುಭಾಶಯಗಳಿಗೆ ಧನ್ಯವಾದಗಳು. ಐಶ್ವರ್ಯ ಮತ್ತು ಆರಾಧ್ಯ ಇಬ್ಬರಿಗೂ ಕೋವಿಡ್ ನೆಗೆಟಿವ್ ಬಂದಿದೆ. ಅವರು ಆಸ್ಪತ್ರೆಯಿಂದ ಡಿಸ್ಚಾಜ್ ಆಗಿದ್ದು, ಈಗ ಮನೆಯಲ್ಲಿದ್ದಾರೆ. ನಾನು ಮತ್ತು ನನ್ನ ತಂದೆ ವೈದ್ಯಕೀಯ ಸಿಬ್ಬಂದಿಯ ಆರೈಕೆಯಲ್ಲಿ ಆಸ್ಪತ್ರೆಯಲ್ಲಿದ್ದೇನೆ” ಎಂದು ಟ್ವೀಟ್ ಮಾಡುವ ಮೂಲಕ ಅಭಿಷೇಕ್ ಬಚ್ಚನ್ ತಿಳಿಸಿದ್ರು.

    ಜುಲೈ 11ರಂದು ಅಭಿಷೇಕ್ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ಇಬ್ಬರಿಗೂ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ಮರುದಿನ ಅಂದ್ರೆ ಐಶ್ವರ್ಯಾ ಮತ್ತು ಆರಾಧ್ಯಗೂ ಸೋಂಕು ಖಚಿತವಾಗಿತ್ತು. ಹಾಗಾಗಿ ಎಲ್ಲರೂ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು.

  • ಐಶ್ವರ್ಯಾ ರೈ, ಪುತ್ರಿಗೆ ಕೊರೊನಾ ನೆಗೆಟಿವ್- ಆಸ್ಪತ್ರೆಯಿಂದ ಡಿಸ್ಚಾರ್ಜ್

    ಐಶ್ವರ್ಯಾ ರೈ, ಪುತ್ರಿಗೆ ಕೊರೊನಾ ನೆಗೆಟಿವ್- ಆಸ್ಪತ್ರೆಯಿಂದ ಡಿಸ್ಚಾರ್ಜ್

    ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಪುತ್ರಿ ಆರಾಧ್ಯ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಇತ್ತೀಚೆಗಷ್ಟೆ ನಟಿ ಐಶ್ವರ್ಯಾ ರೈ ಮತ್ತು ಆರಾಧ್ಯ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಅವರು ಕೋವಿಡ್ ಡೆಸ್ಟ್ ಮಾಡಿಸಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ. ಅಲ್ಲದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಿದ್ದಾರೆ. ಈ ಬಗ್ಗೆ ಅಭಿಷೇಕ್ ಬಚ್ಚನ್ ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.

    “ನಿಮ್ಮ ನಿರಂತರ ಪ್ರಾರ್ಥನೆ ಮತ್ತು ಶುಭಾಶಯಗಳಿಗೆ ಧನ್ಯವಾದಗಳು. ಐಶ್ವರ್ಯ ಮತ್ತು ಆರಾಧ್ಯ ಇಬ್ಬರಿಗೂ ಕೋವಿಡ್ ನೆಗೆಟಿವ್ ಬಂದಿದೆ. ಅವರು ಆಸ್ಪತ್ರೆಯಿಂದ ಡಿಸ್ಚಾಜ್ ಆಗಿದ್ದು, ಈಗ ಮನೆಯಲ್ಲಿದ್ದಾರೆ. ನಾನು ಮತ್ತು ನನ್ನ ತಂದೆ ವೈದ್ಯಕೀಯ ಸಿಬ್ಬಂದಿಯ ಆರೈಕೆಯಲ್ಲಿ ಆಸ್ಪತ್ರೆಯಲ್ಲಿದ್ದೇನೆ” ಎಂದು ಟ್ವೀಟ್ ಮಾಡುವ ಮೂಲಕ ಅಭಿಷೇಕ್ ಬಚ್ಚನ್ ತಿಳಿಸಿದ್ದಾರೆ.

    ಜು. 11 ರಂದು ಹಿರಿಯ ನಟ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್‍ಗೆ ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದಾದ ನಂತರ ನಟಿ ಐಶ್ವರ್ಯಾ ರೈ ಅವರಿಗೂ ಮತ್ತು ಪುತ್ರಿ ಆರಾಧ್ಯ ಬಚ್ಚನ್ ಅವರಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಎಲ್ಲರೂ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

  • ‘ಯಾರೂ ಭಯಪಡುವ ಅಗತ್ಯವಿಲ್ಲ’ – ಅಭಿಷೇಕ್‌ ಬಚ್ಚನ್‌‌ಗೂ ಕೊರೊನಾ

    ‘ಯಾರೂ ಭಯಪಡುವ ಅಗತ್ಯವಿಲ್ಲ’ – ಅಭಿಷೇಕ್‌ ಬಚ್ಚನ್‌‌ಗೂ ಕೊರೊನಾ

    ಮುಂಬೈ: ಅಭಿಷೇಕ್ ಬಚ್ಚನ್ ಅವರಿಗೂ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ.

    ಈ ಸಂಬಂಧ ಶನಿವಾರ ರಾತ್ರಿ 11.57ಕ್ಕೆ ಟ್ವೀಟ್‌ ಮಾಡಿರುವ ಅವರು, ಇವತ್ತು ನನಗೆ ಮತ್ತು ತಂದೆಯವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇಬ್ಬರಲ್ಲೂ ಸಣ್ಣ ಮಟ್ಟದಲ್ಲಿ ಸೋಂಕಿನ ಲಕ್ಷಣ ಕಾಣಿಸಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದೇವೆ. ಈ ವಿಚಾರವನ್ನು ನಾವು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇವೆ. ನಮ್ಮ ಕುಟುಂಬ, ಸಿಬ್ಬಂದಿಯ ಪರೀಕ್ಷೆ ನಡೆದಿದೆ. ಯಾರೂ ಭಯಪಡುವ ಅಗತ್ಯವಿಲ್ಲ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ಈ ಮೊದಲು ಬಿಗ್‌ ಬಿ ಅಮಿತಾಬ್ ಬಚ್ಚನ್‌ ಟ್ವೀಟ್‌ ಮಾಡಿ ಕೊರೊನಾ ಬಂದಿರುವುದನ್ನು ಖಚಿತಡಿಸಿದ್ದರು. ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದೇನೆ. ನಮ್ಮ ಕುಟುಂಬದವರು ಹಾಗೂ ಸಿಬ್ಬಂದಿಯನ್ನು ಸಹ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಗಾಗಿ ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

    ಕಳೆದ 10 ದಿನಗಳಿಂದ ನನ್ನ ಜೊತೆ ಯಾರ್ಯಾರು ಸಂಪರ್ಕದಲ್ಲಿದಿರೋ ಅವರೆಲ್ಲರೂ ದಯವಿಟ್ಟು ಸ್ವಯಂ ಪ್ರೇರಿತವಾಗಿ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸುತ್ತೇನೆ ಎಂದು ಬರೆದಿದ್ದಾರೆ. ಬಿಗ್ ಬಿಗೆ ಹೇಗೆ ಕೊರೊನಾ ತಗುಲಿತು ಎಂಬುದೇ ಆಶ್ಚರ್ಯವಾಗಿದ್ದು ಇಬ್ಬರು ಮುಂಬೈಯಲ್ಲಿರುವ ಬಿಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಮಿತಾಬ್ ಅವರ ಅಭಿನಯದ ಗುಲಾಬೋ ಸಿತಾಬೋ ಸಿನಿಮಾ ಇತ್ತೀಚೆಗಷ್ಟೇ ಓಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಬಿಡುಗಡೆಯಾಗಿತ್ತು. ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಆನ್‍ಲೈನ್ ವೇದಿಕೆಯಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  • ಮನೆ ಕೆಲಸದವನ ಮೃತದೇಹ ಎತ್ತಿಕೊಂಡು ಹೋದ ಬಿಗ್-ಬಿ: ಫೋಟೋ ವೈರಲ್

    ಮನೆ ಕೆಲಸದವನ ಮೃತದೇಹ ಎತ್ತಿಕೊಂಡು ಹೋದ ಬಿಗ್-ಬಿ: ಫೋಟೋ ವೈರಲ್

    ಮುಂಬೈ: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದವನ ಮೃತದೇಹವನ್ನು ಎತ್ತಿಕೊಂಡು ಹೋಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಮಿತಾಬ್ ಜೊತೆ ಅಭಿಷೇಕ್ ಕೂಡ ಮೃತದೇಹವನ್ನು ಎತ್ತಿಕೊಂಡಿದ್ದಾರೆ.

    ಇತ್ತೀಚೆಗೆ ಅಮಿತಾಬ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅವರು ಮೃತಪಟ್ಟಿದ್ದಕ್ಕೆ ಬಚ್ಚನ್ ಅವರ ಇಡೀ ಕುಟುಂಬ ಅಂತಿಮ ದರ್ಶನ ಪಡೆದು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿತ್ತು. ಈ ವೇಳೆ ಅಮಿತಾಬ್ ಹಾಗೂ ಅಭಿಷೇಕ್ ಮೃತದೇಹವನ್ನು ಹಿಡಿದುಕೊಂಡು ಹೋಗುತ್ತಿರುವ ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ಬೆಂಬಲಿಗನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಸ್ಮೃತಿ ಇರಾನಿ  – ವಿಡಿಯೋ ನೋಡಿ

    ಅಭಿಮಾನಿಯೊಬ್ಬರು ತಂದೆ-ಮಗನ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ಅಮಿತಾಬ್ ಹಾಗೂ ಅಭಿಷೇಕ್ ಬಚ್ಚನ್ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೃತದೇಹವನ್ನು ಎತ್ತಿಕೊಂಡು ಹೋಗುತ್ತಿದ್ದಾರೆ. ದಶಕಗಳಿಂದ ತಮ್ಮ ಬಳಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಬಚ್ಚನ್ ಕುಟುಂಬ ಗೌರವ ನೀಡಿದೆ” ಎಂದು ಟ್ವೀಟ್ ಮಾಡಿದ್ದಾರೆ.

    ಅಮಿತಾಬ್ ಹಾಗೂ ಅಭಿಷೇಕ್ ಅವರ ಈ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮಿತಾಬ್ ರೈತರ ಸಾಲಮನ್ನಾ ಮಾಡಿದ ಬಳಿಕ ಮನೆ ಕೆಲಸದವನ ಮೃತದೇಹ ಎತ್ತಿಕೊಂಡು ಹೋಗುತ್ತಿರುವ ಫೋಟೋ ನೋಡಿ ಬಿಗ್-ಬಿ ರೀಲ್ ಹಾಗೂ ರಿಯಲ್ ಲೈಫ್ ಹೀರೋ ಎಂದು ಹೊಗಳುತ್ತಿದ್ದಾರೆ.

  • ಹನಿ ಮೂನ್ ಫೋಟೋ ಹಂಚಿಕೊಂಡ ನಟ ಅಭಿಷೇಕ್

    ಹನಿ ಮೂನ್ ಫೋಟೋ ಹಂಚಿಕೊಂಡ ನಟ ಅಭಿಷೇಕ್

    ಮುಂಬೈ: ಬಾಲಿವುಡ್ ಸ್ಟಾರ್ ಕಪಲ್ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ತಮ್ಮ 12ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ತಮ್ಮ ಮಗಳು ಆರಾಧ್ಯ ಜೊತೆ ಮಾಲ್ಡೀವ್ಸ್‍ಗೆ ಹೋಗಿದ್ದಾರೆ. ಈ ವೇಳೆ ಅಭಿಷೇಕ್ ಪತ್ನಿ ಐಶ್ವರ್ಯ ಅವರ ಫೋಟೋ ಹಂಚಿಕೊಂಡು ‘ಹನಿ ಹಾಗೂ ಮೂನ್’ ಎಂದು ಬರೆದುಕೊಂಡಿದ್ದಾರೆ.

    ಅಭಿಷೇಕ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಐಶ್ವರ್ಯ ರೈ ಅವರ ಫೋಟೋ ಹಾಕಿ ಅದಕ್ಕೆ, “ಹನಿ ಹಾಗೂ ಮೂನ್” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅಭಿಷೇಕ್ ತಮ್ಮ ಪತ್ನಿ ಐಶ್ವರ್ಯ ಅವರನ್ನು ಹನಿಗೆ ಹೋಲಿಸಿದ್ದಾರೆ. ಪತ್ನಿ ಫೋಟೋ ಜೊತೆಗೆ ಚಂದ್ರನ ಫೋಟೋ ಕೂಡ ಕ್ಲಿಕ್ಕಿಸಿ ಹನಿ ಹಾಗೂ ಮೂನ್ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    Honey and the moon. ???? . . . @niyamamaldives #niyamamaldives #edge

    A post shared by Abhishek Bachchan (@bachchan) on

    ಐಶ್ವರ್ಯ ರೈ ತಮ್ಮ ವಿವಾಹ ವಾರ್ಷಿಕೋತ್ಸವ ದಿನ ತನ್ನ ಪತಿ ಅಭಿಷೇಕ್ ಜೊತೆ ಇರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಐಶ್ವರ್ಯ “ನಾವಿಬ್ಬರು ಒಟ್ಟಿಗೆ ಇರುವುದನ್ನು ನಮ್ಮ ಮಗಳು ಸೆರೆ ಹಿಡಿದಿದ್ದಾಳೆ. ಲವ್ ಯೂ ಆರಾಧ್ಯ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    ❤️Our Togetherness????captured by The Divine Light of Our Lives ????LOVE YOU AARADHYA????????

    A post shared by AishwaryaRaiBachchan (@aishwaryaraibachchan_arb) on

    ಅಭಿಷೇಕ್ ಹಾಗೂ ಐಶ್ವರ್ಯ 2007ರಲ್ಲಿ ಏಪ್ರಿಲ್ 20ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2011ರಲ್ಲಿ ಅಭಿಷೇಕ್ ಹಾಗೂ ಐಶ್ವರ್ಯ ಹೆಣ್ಣು ಮಗುವಿಗೆ ತಂದೆ-ತಾಯಿ ಆಗಿದ್ದಾರೆ. ಸದ್ಯ ಈ ಜೋಡಿ ಈಗ ಮಾಲ್ಡೀವ್ಸ್‍ನಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.

  • ಮತ್ತೆ ಐಶ್ವರ್ಯ ರೈ ಗರ್ಭಿಣಿ?

    ಮತ್ತೆ ಐಶ್ವರ್ಯ ರೈ ಗರ್ಭಿಣಿ?

    ಮುಂಬೈ: ಮಾಜಿ ವಿಶ್ವ ಸುಂದರಿ, ನಟಿ ಐಶ್ವರ್ಯ ರೈ ಬಚ್ಚನ್ ಮತ್ತೊಮ್ಮೆ ಗರ್ಭಿಣಿ ಆಗಿದ್ದಾರೆ ಎನ್ನುವ ವಿಚಾರದ ಬಗ್ಗೆ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

    ಇತ್ತೀಚೆಗೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಒಟ್ಟಿಗೆ ಸಮಯ ಕಳೆಯಲು ಗೋವಾ ಬೀಚ್‍ಗೆ ಹೋಗಿದ್ದರು. ಈ ವೇಳೆ ಅವರು ಇಬ್ಬರು ನಡೆದುಕೊಂಡು ಹೋಗುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಐಶ್ವರ್ಯ ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾರೆ ಎಂದು ಮಾತನಾಡುತ್ತಿದ್ದಾರೆ.

    ಬೀಚ್‍ನಲ್ಲಿ ಅಭಿಷೇಕ್ ಬಿಳಿ ಬಣ್ಣದ ಶರ್ಟ್ ಹಾಕಿ ಅದಕ್ಕೆ ಶಾರ್ಟ್ಸ್ ಧರಿಸಿದ್ದರು. ಆದರೆ ಐಶ್ವರ್ಯ ಧರಿಸಿದ ಉಡುಪಿನಲ್ಲಿ ಅವರು ಗರ್ಭಿಣಿಯಂತೆ ಕಾಣಿಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರು ಮತ್ತೆ ಗರ್ಭಿಣಿ ಆಗಿದ್ದಾರೆ ಎಂದುಕೊಂಡಿದ್ದರು.

    ಈ ಫೋಟೋ ನೋಡಿ ಅಭಿಮಾನಿಯೊಬ್ಬ ಐಶ್ವರ್ಯ ಮತ್ತೆ ಪ್ರೆಗ್ನೆಂಟ್ ಆಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಮತ್ತೊಬ್ಬರು ಇಲ್ಲ ಅವರು ಗರ್ಭಿಣಿ ಆಗಿಲ್ಲ ಎಂದರು. ಇದೇ ವೇಳೆ ಮತ್ತೊಬ್ಬರು ಐಶ್ವರ್ಯ ಮತ್ತೊಂದು ಮಗುವಿಗೆ ಜನ್ಮ ನೀಡಲು ನಾನು ಕಾಯುತ್ತಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ.

    ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2011ರಲ್ಲಿ ಐಶ್ವರ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗಳಿಗೆ ಆರಾಧ್ಯ ಎಂದು ಹೆಸರನ್ನಿಟ್ಟಿದ್ದಾರೆ.

  • ಕ್ಯಾಮೆರಾಗೆ ಪೋಸ್ ಕೊಟ್ಟು ‘ಸಾಕು ಮಾಡಿ’ ಎಂದ ಆರಾಧ್ಯ: ವಿಡಿಯೋ ವೈರಲ್

    ಕ್ಯಾಮೆರಾಗೆ ಪೋಸ್ ಕೊಟ್ಟು ‘ಸಾಕು ಮಾಡಿ’ ಎಂದ ಆರಾಧ್ಯ: ವಿಡಿಯೋ ವೈರಲ್

    ಮುಂಬೈ: ಆರಾಧ್ಯ ಬಚ್ಚನ್ ತನ್ನ ತಂದೆ ಅಭಿಷೇಕ್ ಬಚ್ಚನ್ ಹಾಗೂ ತಾಯಿ ಐಶ್ವರ್ಯ ರೈ ಬಚ್ಚನ್ ಜೊತೆ ಭಾನುವಾರ ಉದ್ಯಮಿ ಮುಕೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಆರಾಧ್ಯ ಕ್ಯಾಮೆರಾಗೆ ಪೋಸ್ ಕೊಟ್ಟು ಸಾಕು ಮಾಡಿ ಎಂದು ಹೇಳಿದ ವಿಡಿಯೋ ವೈರಲ್ ಆಗಿದೆ.

    ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಮದುವೆಗೆ ಕಾರ್ಯಕ್ರಮಕ್ಕೆ ಹಲವಾರು ಬಾಲಿವುಡ್ ಕಲಾವಿದರು ಆಗಮಿಸಿದ್ದರು. ಆರಾಧ್ಯ ಕೂಡ ತನ್ನ ತಂದೆ – ತಾಯಿ ಜೊತೆ ಆಗಮಿಸಿದ್ದಾಗ ಕ್ಯಾಮೆರಾಗಳಿಗೆ ಪೋಸ್ ನೀಡಲು ಅಲ್ಲಿದ ಛಾಯಾಗ್ರಾಹಕರು ಹೇಳಿದ್ದಾರೆ.

    ಆರಾಧ್ಯ ತನ್ನ ತಂದೆ-ತಾಯಿ ಜೊತೆ ಫೋಟೋಗೆ ಪೋಸ್ ಕೊಡುವಾಗ ತನ್ನ ಕಣ್ಣನ್ನು ತಿರುಗಿಸುತ್ತಿದ್ದಳು. ಅಲ್ಲದೇ ಕ್ಯಾಮೆರಾಮೆನ್‍ಗಳು ತನ್ನತ್ತ ನೋಡಲು ಆಕೆಗೆ ಹೇಳಿದ್ದಾಗ ಆರಾಧ್ಯ ಒಂದೇ ಸಮ್ಮನೇ ಎಡಗಡೆ ಹಾಗೂ ಬಲಗಡೆ ತಿರುಗುತ್ತಾ ತುಂಟಾಟ ಮಾಡುತ್ತಾ ಫೋಟೋಗೆ ಪೋಸ್ ನೀಡಿದ್ದಾಳೆ.

    ಫೋಟೋ ಪೋಸ್ ನೀಡಿದ ಬಳಿಕ ಆರಾಧ್ಯ ಅಭಿಷೇಕ್ ಹಾಗೂ ಐಶ್ವರ್ಯ ರೈ ಬಚ್ಚನ್ ಜೊತೆ ಹೋಗುವಾಗ ಸಾಕು ಮಾಡಿ ಎಂದು ಜೋರಾಗಿ ಕ್ಯಾಮೆರಾಮೆನ್‍ಗಳಿಗೆ ಹೇಳಿದ್ದಾಳೆ. ಈ ವೇಳೆ ಅಭಿಷೇಕ್, ಐಶ್ವರ್ಯ ಹಾಗೂ ಅಲ್ಲಿದ್ದ ಛಾಯಾಗ್ರಾಹಕರು ಜೋರಾಗಿ ನಕ್ಕಿದ್ದಾರೆ. ಆರಾಧ್ಯ ಸಾಕು ಮಾಡಿ ಎಂದು ಹೇಳಿದ ವಿಡಿಯೋ ಈಗ ವೈರಲ್ ಆಗಿದೆ.

    ಆಕಾಶ್ ಅಂಬಾನಿ ಹಾಗೂ ಶ್ಲೋಕ ಮೆಹ್ತಾ ಭಾನುವಾರ ಮುಂಬೈನ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಗೆ ಬಾಲಿವುಡ್ ಕಲಾವಿದರು ಸೇರಿದಂತೆ ಉದ್ಯಮಿಗಳು, ರಾಜಕೀಯ ವ್ಯಕ್ತಿಗಳು ಹಾಗೂ ಕ್ರೀಡಾ ಆಟಗಾರರು ಆಗಮಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv