Tag: abhishek bacchan

  • ಡಿವೋರ್ಸ್ ವದಂತಿಗೆ ಬ್ರೇಕ್- ಜೊತೆಯಾಗಿ ಹೋಳಿ ಆಚರಿಸಿದ ಐಶ್ವರ್ಯ, ಅಭಿಷೇಕ್ ಬಚ್ಚನ್

    ಡಿವೋರ್ಸ್ ವದಂತಿಗೆ ಬ್ರೇಕ್- ಜೊತೆಯಾಗಿ ಹೋಳಿ ಆಚರಿಸಿದ ಐಶ್ವರ್ಯ, ಅಭಿಷೇಕ್ ಬಚ್ಚನ್

    ಬಾಲಿವುಡ್‌ನ ಸ್ಟಾರ್ ಕಪಲ್ ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಜೋಡಿ ಅನೇಕರಿಗೆ ಮಾದರಿ. ಹೀಗಿರುವಾಗ ಇತ್ತೀಚೆಗೆ ಇಬ್ಬರೂ ಡಿವೋರ್ಸ್ ಪಡೆಯುತ್ತಾರೆ ಎಂಬ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇದೀಗ ಹೋಳಿ ಹಬ್ಬವನ್ನು ಇಬ್ಬರೂ ಜೊತೆಯಾಗಿ ಆಚರಿಸುವ ಮೂಲಕ ಗಾಸಿಪ್ ಮಂದಿಯ ಬಾಯಿ ಮುಚ್ಚಿಸಿದ್ದಾರೆ. ಇದನ್ನೂ ಓದಿ:ಶ್ರದ್ಧಾ ಕಪೂರ್ ಕೊರಳಲ್ಲಿ R ಪೆಂಡೆಂಟ್- ಬಾಯ್‌ಫ್ರೆಂಡ್ ಬಗ್ಗೆ ಗುಟ್ಟು ರಟ್ಟು

    ಅಭಿಷೇಕ್ ಬಚ್ಚನ್- ಐಶ್ವರ್ಯ ರೈ ಸಂಬಂಧ ಸರಿಯಲ್ಲ. ಹೀಗಂತ ಕೋಟಿ ಜನ ಕುಟುಕಿದ್ದರು. ಆದರೆ ಆ ಸುದ್ದಿಗೆ ಎಳ್ಳು ನೀರು ಬಿಟ್ಟಿದೆ ಬಾಲಿವುಡ್ ಫಸ್ಟ್ ಫ್ಯಾಮಿಲಿ ಜೋಡಿ. ಕೆಲವು ತಿಂಗಳಿಂದ ಬೇರೆ ಬೇರೆ ಮನೆಯಲ್ಲಿ ವಾಸ ಇದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಹೀಗಾಗಿ ಡಿವೋರ್ಸ್ ಜೋರಾಗಿ ಕೇಳಿ ಬಂದಿತ್ತು. ಮತ್ತೆ ಈ ಜೋಡಿ ಒಂದಾಗಿದ್ದು ಹೇಗೆ? ಜಂಟಿಯಾಗಿ ಕಾಣಿಸಿದ್ದೆಲ್ಲಿ? ಇಲ್ಲಿದೆ ಅಸಲಿ ವಿಚಾರ. ಇದನ್ನೂ ಓದಿ:ಶ್ರದ್ಧಾ ಕಪೂರ್ ಕೊರಳಲ್ಲಿ R ಪೆಂಡೆಂಟ್- ಬಾಯ್‌ಫ್ರೆಂಡ್ ಬಗ್ಗೆ ಗುಟ್ಟು ರಟ್ಟು

    ಐಶ್ವರ್ಯ ರೈ ಬಚ್ಚನ್ ಕೆಲವು ತಿಂಗಳಿಂದ ಅಮ್ಮನ ಮನೆಯಲ್ಲಿದ್ದಾರೆ. ಜೊತೆಗೆ ಮಗಳು ಆರಾಧ್ಯರನ್ನೂ ಕರೆದುಕೊಂಡಿದ್ದಾರೆ. ಅಲ್ಲಿಂದ ತಮಟೆ ಸೌಂಡ್ ಹೆಚ್ಚಾಯಿತು. ಶಿವ ಶಿವಾ ಅಷ್ಟು ಚೆನ್ನಾಗಿದ್ದ ಜೋಡಿಗೆ ಯಾರ ಕಣ್ಣು ಬಿತ್ತೋ? ಎಂದು ಫ್ಯಾನ್ಸ್ ಹಿಡಿಶಾಪ ಹಾಕುತ್ತಿರುವಾಗಲೇ ಬಂದಿತಲ್ಲ ಹೋಳಿ ಹಬ್ಬ. ಅಭಿಷೇಕ್ ಮತ್ತು ಐಶ್ವರ್ಯ ಒಬ್ಬರಿಗೊಬ್ಬರು ಕೆಂಪು ಬಣ್ಣ ಬಳಿದುಕೊಂಡಿದ್ದಾರೆ.

    ಹೋಳಿ ಹಬ್ಬದ ದಿನ ಅಭಿಷೇಕ್ ದಂಪತಿ ಜೊತೆಯಾಗಿ ಆಚರಿಸಿದ್ದಾರೆ. ಹೋಳಿ ಹಬ್ಬವನ್ನು ಕುಟುಂಬದ ಜೊತೆ ಸಂಭ್ರಮದಿಂದ ಸೆಲೆಬ್ರೇಟ್ ಮಾಡಿದ್ದಾರೆ. ಈ ಮೂಲಕ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿ, ನಮ್ಮ ಸಂಸಾರ ಚೆನ್ನಾಗಿದೆ ಎಂದು ತೋರಿಸಿ ಕೊಟ್ಟಿದ್ದಾರೆ.

  • ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ ಐಶ್ವರ್ಯಾ ರೈ ತದ್ರೂಪಿ

    ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ ಐಶ್ವರ್ಯಾ ರೈ ತದ್ರೂಪಿ

    ಸೋಷಿಯಲ್ ಮೀಡಿಯಾ ಇದೀಗ ಇಂದು ಪ್ರಭಾವಶಾಲಿಯಾಗಿದೆ. ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಕಾಯುವವರ ಸಂಖ್ಯೆ ಕಮ್ಮಿಯಾಗಿದೆ. ಇದೀಗ ಸಾಮಾಜಿಕ ಜಾಲತಾಣವನ್ನ ಸದುಪಯೋಗ ಪಡಿಸಿಕೊಂಡು ರಾತ್ರೋ ರಾತ್ರಿ ಸ್ಟಾರ್ ಆಗಿ ಮಿಂಚಿದವರಿದ್ದಾರೆ. ಅದರಲ್ಲೂ ಸ್ಟಾರ್ ನಟ-ನಟಿಯರಂತೆ ಕಾಣಿಸಿಕೊಂಡು ಸಿಕ್ಕಾಪಟ್ಟೆ ನೇಮ್ ಫೇಮ್ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಐಶ್ವರ್ಯ ರೈ ಅವರಂತೆಯೇ ಕಾಣಿಸಿಕೊಂಡು ಐಶ್ ತದ್ರೂಪಿ ನೋಡುಗರಿಗೆ ಅಚ್ಚರಿ ಮೂಡಿಸಿದ್ದಾರೆ.

     

    View this post on Instagram

     

    A post shared by Aashita Singh (@aashitarathore)

    ಕರಾವಳಿ ಬ್ಯೂಟಿ ಕ್ವೀನ್ ಐಶ್ವರ್ಯಾ ರೈ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದವರು. ಸ್ಟಾರ್ ನಟಿಯಾಗಿ ಮಿಂಚಿದವರು. ಅಭಿಷೇಕ್ ಬಚ್ಚನ್ ಅವರ ವೈವಾಹಿಕ ಬದುಕಿಗೆ ಕಾಲಿಟ್ಟ ಮೇಲೂ ಇಂದಿಗೂ ತಮ್ಮ ಛಾರ್ಮ್ ಉಳಿಸಿಕೊಂಡು ಬಂದಿದ್ದಾರೆ. ಇದೀಗ ಐಶ್ ತದ್ರೂಪಿ ಆಶಿತಾ ಸಿಂಗ್ ಐಶ್ವರ್ಯ ರೈ ಅವರ ರೀತಿಯಲ್ಲೇ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಎಂಟ್ರಿ ಕೊಟ್ಟ `ಮಾಸ್ಟರ್ ಪೀಸ್’ ನಟಿ ಶಾನ್ವಿ ಶ್ರೀವಾಸ್ತವ್

     

    View this post on Instagram

     

    A post shared by Aashita Singh (@aashitarathore)

    ಥೇಟ್ ಐಶ್ವರ್ಯಾ ರೈ ಅವರಂತೆಯೇ ಕಾಣುವ ಆಶಿತಾ ಸಿಂಗ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿದ್ದಾರೆ. ಆಶಿತಾ ಅವರಲ್ಲಿ ತಮ್ಮ ನೆಚ್ಚಿನ ನಟಿಯಾಗಿರುವ ಐಶ್ವರ್ಯ ರೈ ಅವರನ್ನ ಕಾಣುತ್ತಿದ್ದಾರೆ. ಆಶಿತಾ ಅವರ ಹೊಸ ಫೋಟೋಸ್, ವೀಡಿಯೋಸ್ ನೋಡಿ. ನೀವು ಐಶ್ವರ್ಯ ರೈ ಅವರ ಪ್ರೋ ಮ್ಯಾಕ್ಸ್ ಎಂದು ಕಾಮೆಂಟ್ ಮಾಡ್ತಿದ್ದಾರೆ.

     

    View this post on Instagram

     

    A post shared by Aashita Singh (@aashitarathore)

    ಸದ್ಯ ಆಶಿತಾ ಸಿಂಗ್ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಜ್ಯೂನಿಯರ್ ಐಶ್ವರ್ಯ ರೈ ಆಗಿ ಸದ್ದು ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೆ ಗರ್ಭಿಣಿನಾ?

    ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೆ ಗರ್ಭಿಣಿನಾ?

    ಬಾಲಿವುಡ್ ಸುಂದರಿ ಐಶ್ವರ್ಯ ರೈ `ಪೊನ್ನಿಯನ್ ಸೆಲ್ವನ್’ ಚಿತ್ರದ ಮೂಲಕ ಸೌಂಡ್ ಮಾಡುತ್ತಿರುವ ಬೆನ್ನಲ್ಲೇ ಈಗ ತಮ್ಮ ಖಾಸಗಿ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಮಾಜಿ ಭುವನ ಸುಂದರಿ ಐಶ್ವರ್ಯ ರೈ ಮತ್ತೆ ಗರ್ಭಿಣಿನಾ ಅಂತಾ ನೆಟ್ಟಿಗರು ಪ್ರಶ್ನೆಸುತ್ತಿದ್ದಾರೆ. ಗರ್ಭಿಣಿ ಎನ್ನುವಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಕರಾವಳಿ ಬ್ಯೂಟಿ ಐಶ್ವರ್ಯ ರೈ ಮತ್ತೆ ಗರ್ಭಿಣಿನಾ, ಬಚ್ಚನ್ ಕುಟುಂಬಕ್ಕೆ ಮತ್ತೊಬ್ಬ ಕುಡಿಯ ಎಂಟ್ರಿ ಆಗುತ್ತಿದ್ಯಾ ಅಂತಾ ಸಾಮಾಜಿಕ ಜಾಲತಾಣಲದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಇದಕ್ಕೆಲ್ಲಾ ಕಾರಣ ವಿಮಾನ ನಿಲ್ದಾಣದಲ್ಲಿ ಐಶ್ವರ್ಯ ರೈ ಎಂಟ್ರಿ. ಮಗಳ ಜತೆ ಏರ್‌ಪೋರ್ಟ್ನಲ್ಲಿ ಇತ್ತೀಚೆಗಷ್ಟೇ ಕಾಣಿಸಿಕೊಂಡಿದ್ದರು. ಆಗ ಪಾಪರಾಜಿಗಳು ಫೋಟೋ ತೆಗೆಯುವಾಗ ಹೊಟ್ಟೆಯತ್ತ ಕೈ ಹಿಡಿದುಕೊಂಡು ನಟಿ ಹೊರನಡೆದಿದ್ದಾರೆ. ಈ ನಡೆಯಿಂದ ಐಶ್ವರ್ಯ ಮತ್ತೆ ಗರ್ಭಿಣಿನಾ ಅಂತಾ ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ವದಂತಿ ನಿಜಾನಾ ಅಂತಾ ಮುಂದಿನ ದಿನಗಳವೆರೆಗೆ ಕಾದುನೋಡಬೇಕಿದೆ. ಇದನ್ನೂ ಓದಿ:`ಮಾರ್ಟಿನ್’ ಆ್ಯಕ್ಷನ್ ಸೀನ್‌ಗಾಗಿ ಧ್ರುವಾ ಸರ್ಜಾ- ಎ.ಪಿ ಅರ್ಜುನ್ ಭರ್ಜರಿ ತಯಾರಿ

    ಸದ್ಯ ಮಣಿರತ್ನಂ ನಿರ್ದೇಶನದ `ಪೊನ್ನಿಯನ್ ಸೆಲ್ವನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಬಹುಭಾಷೆಯಲ್ಲಿ ತೆರೆಗೆ ಬರಲಿರುವ ಈ ಚಿತ್ರದಲ್ಲಿ ಐಶ್ವರ್ಯ ರೈ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಂದು ನಟಿ ಐಶ್ವರ್ಯಾ ರೈಗೆ 44ರ ಸಂಭ್ರಮ- ಅಪ್ಪ, ಮಗಳಿಂದ ಸರ್ಪ್ರೈಸ್ ಪ್ಲಾನ್

    ಇಂದು ನಟಿ ಐಶ್ವರ್ಯಾ ರೈಗೆ 44ರ ಸಂಭ್ರಮ- ಅಪ್ಪ, ಮಗಳಿಂದ ಸರ್ಪ್ರೈಸ್ ಪ್ಲಾನ್

    ಮುಂಬೈ: ಮಾಜಿ ವಿಶ್ವಸುಂದರಿ, ಬಾಲಿವುಡ್ ತಾರೆಹಾಗೂ ನೀಲಿಕಣ್ಣಿನ ಚೆಲುವೆ ಐಶ್ವರ್ಯಾ ರೈಗೆ ಇಂದು 44ನೇ ಹುಟ್ಟು ಹಬ್ಬದ ಸಂಭ್ರಮ. ಆದ್ರೆ ಈ ಬಾರಿ ರೈಯವರು ತಮ್ಮ ಹುಟ್ಟುಹಬ್ಬವನ್ನು ಅಷ್ಟೊಂದು ಅದ್ಧೂರಿಯಾಗಿ ಆಚರಿಸುತ್ತಿಲ್ಲ.

    ಕಳೆದ ಮಾರ್ಚ್‍ನಲ್ಲಿ ಐಶ್ವರ್ಯಾ ರೈ ಅವರ ತಂದೆ ಕೃಷ್ಣ ರಾಜ್ ರೈ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಐಶ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ. ಮೂಲಗಳ ಪ್ರಕಾರ ಐಶ್ವರ್ಯಾ ರೈ ಇಂದು ತಮ್ಮ ಇಡೀ ದಿನವನ್ನು ಕುಟುಂಬದೊಂದಿಗೆ ಕಳೆಯಲಿದ್ದಾರೆ. ಬೆಳಗ್ಗೆ ಮಗಳು ಆರಾಧ್ಯಳನ್ನು ಶಾಲೆಗೆ ಡ್ರಾಪ್ ಮಾಡಿ ಅಲ್ಲಿಂದ ನೇರವಾಗಿ ಮುಂಬೈನಲ್ಲಿರೋ ಬಾಂದ್ರಾ ಅಪಾರ್ಟ್‍ನಲ್ಲಿ ನೆಲೆಸಿರೋ ತನ್ನ ತಾಯಿಯ ಜೊತೆ ಅಮೂಲ್ಯ ಸಮಯ ಕಳೆಯಲಿದ್ದಾರೆ. ನಂತ್ರ ನಗರದಲ್ಲಿರೋ ಸಿದ್ದಿವಿನಾಯಕ ದೇವಸ್ಥಾನಕ್ಕೆ ತೆರಳಲಿದ್ದಾರೆ ಅಂತ ಐಶ್ವರ್ಯಾ ಆಪ್ತ ಮೂಲಗಳು ತಿಳಿಸಿವೆ.

    ಇತ್ತ ಪತಿ ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ ಸೇರಿ ಐಶ್ವರ್ಯಾ ರೈ ನೆಚ್ಚಿನ ಕೇಕ್ ಆರ್ಡರ್ ಮಾಡಿದ್ದಾರೆ. ಇಂದು ಸಂಜೆ ಕುಟುಂಬದೊಂದಿಗೆ ಇದ್ದು ಐಶ್ವರ್ಯಾ ಈ ಕೇಕ್ ಕತ್ತರಿಸಿ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

    ಪ್ರತಿ ವರ್ಷ ಐಶ್ವರ್ಯಾ ರೈ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಕಳೆದ ವರ್ಷ ತಮ್ಮ ಬರ್ತ್ ಡೇ ದಿನದಂದು ಸುಮಾರು 100 ಸೀಳು ತುಟಿಯ ಮಕ್ಕಳ ಸರ್ಜರಿಗೆ ಧನಸಹಾಯ ಮಾಡಿದ್ದರು. ಈ ಬಾರಿ ಅನಾಥ ಮಕ್ಕಳಿಗೆ ಅನ್ನದಾನ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಕರ್ನಾಟಕದ ಮಂಗಳೂರಿನಲ್ಲಿ ತಂದೆ ಕೃಷ್ಣರಾಜ್ ರೈ ಮತ್ತು ತಾಯಿ ಬೃಂದಾ ರೈ ಮಗಳಾಗಿ 1973ರ ನವೆಂಬರ್ 1 ರಂದು ಐಶ್ವರ್ಯಾ ರೈ ಜನಿಸಿದ್ದಾರೆ. ಮುಂಬಯಿ ನಗರದಲ್ಲಿ ಡಿ ಜಿ ರೂಪಾರೆಲ್ ಕಾಲೇಜ್ ಮತ್ತು ಆರ್ಯ ವಿದ್ಯಾ ಕಾಲೇಜಿನಲ್ಲಿ ಓದಿದ ಐಶ್ವರ್ಯಾ ಒಂಬತ್ತನೆಯ ತರಗತಿಯಲ್ಲಿ ಇದ್ದ ಸಂದರ್ಭದಲ್ಲಿಯೇ ಕ್ಯಾಮೆಲಿನ್ ಸಂಸ್ಥೆಗೆ ಮಾಡೆಲ್ ಆಗಿ ಕೆಲಸ ಮಾಡಿದ್ದರು. ನಂತರ ಅನೇಕ ಜಾಹೀರಾತುಗಳಲ್ಲಿ ನಟಿಸಿದ ಐಶ್ವರ್ಯಾ ಪ್ರಪಂಚಸುಂದರಿ ಪ್ರಶಸ್ತಿಯನ್ನು ಗೆದ್ದ ಮೇಲೆ ಪ್ರಸಿದ್ಧರಾದರು. ಇದರ ನಂತರ ಅನೇಕ ಚಿತ್ರಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ನಟಿಸಿದ್ದಾರೆ.

    2007ರಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹದ ನಟಿ ಐಶ್ವರ್ಯಾ ರೈ 2011ರ ನವೆಂಬರ್ 16ರಂದು ಆರಾಧ್ಯಳಿಗೆ ಜನ್ಮ ನೀಡಿದ್ದರು.

    https://www.instagram.com/p/Ba79sh6AJKA/?taken-by=manishmalhotra05

    https://www.instagram.com/p/Ba7E0mgAz0x/?taken-by=karanjohar