ಕನ್ನಡ ಚಿತ್ರೋದ್ಯಮಕ್ಕೆ ಮತ್ತೊಂದು ಶುಕ್ರವಾರ ಬಂದಿದೆ. ವಾರ ವಾರ ಕನ್ನಡದ ಐದಾರು ಸಿನಿಮಾಗಳು ರಿಲೀಸ್ (Release) ಆಗುವ ಮೂಲಕ ಒಂದು ರೀತಿಯಲ್ಲಿ ಸಂಭ್ರಮ ಮತ್ತೊಂದು ರೀತಿಯಲ್ಲಿ ಆತಂಕ ಸೃಷ್ಟಿ ಮಾಡುತ್ತಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ವಾರಕ್ಕೆ 20ಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗುವುದರಿಂದ ಯಾವ ಸಿನಿಮಾವನ್ನು ನೋಡಬೇಕು ಎನ್ನುವ ಗೊಂದಲಕ್ಕೆ ಬಿದ್ದಿದ್ದಾನೆ ಪ್ರೇಕ್ಷಕ.
ಈ ವಾರವೂ ಕನ್ನಡದ ಐದು ಚಿತ್ರಗಳು ಬಿಡುಗಡೆ ಆಗುತ್ತಿವೆ. ಸೂರಿ ಮತ್ತು ಅಭಿಷೇಕ್ ಅಂಬರೀಶ್ (Abhishek Ambarish) ಕಾಂಬಿನೇಷನ್ ನ ‘ಬ್ಯಾಡ್ ಮ್ಯಾನರ್ಸ್’, ಡಾರ್ಲಿಂಗ್ ಕೃಷ್ಣ ನಟನೆಯ ಶುಗರ್ ಫ್ಯಾಕ್ಟರಿ, ರಾಜ್ ಬಿ ಶೆಟ್ಟಿ (Raj B Shetty) ನಿರ್ದೇಶಿಸಿ, ನಟಿಸಿರುವ ಹಾಗೂ ರಮ್ಯಾ (Ramya) ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಸೇರಿದಂತೆ ಈ ವಾರ ಐದು ಚಿತ್ರಗಳು ಬಿಡುಗಡೆ ಆಗುತ್ತಿವೆ.
ಈಗಾಗಲೇ ಬ್ಯಾಡ್ ಮ್ಯಾನರ್ಸ್ ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಕುತೂಹಲ ಮೂಡಿಸಿವೆ. ಬ್ಯಾಡ್ ಮ್ಯಾನರ್ಸ್ ಚಿತ್ರದ ಪ್ರಚಾರಕ್ಕಾಗಿ ಸ್ವತಃ ದರ್ಶನ್ ಅವರೇ ಅಖಾಡಕ್ಕೆ ಇಳಿದಿದ್ದಾರೆ. ನಾಳೆ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ನಾಳೆ ಯಾರಿಗೆ ಗೆಲುವು ಸಿಗುತ್ತೆ ಕಾದು ನೋಡಬೇಕು.
ಸ್ಯಾಂಡಲ್‌ವುಡ್‌ನ ಕಾಮಿಡಿ ಸ್ಟಾರ್ ಧರ್ಮಣ್ಣ ಕಡೂರು (Dharmanna Kaduru) ಅವರಿಗೀಗ ‘ರಾಜಯೋಗ’ (Rajayoga) ಶುರುವಾಗಿದೆ. ರಾಜಯೋಗ ಅರಂಭವಾದ ಮೇಲೆ ಕಾಮಿಡಿ ಸ್ಟಾರ್ ಆಗಿದ್ದ ಧರ್ಮಣ್ಣ ಇದೀಗ ಹೀರೋ ಆಗಿದ್ದಾರೆ. ಇದೆಲ್ಲ ನಿಜಕ್ಕೂ ರಾಜಯೋಗದ ಮಹಿಮೆನಾ ಅಂತ ಕೇಳಿದ್ರೆ ಹಂಡ್ರೆಡ್ ಪರ್ಸೆಂಟ್ ಹೌದು ಅಂತಾರೆ ಧರ್ಮಣ್ಣ. ಯಾಕೆಂದರೆ ಧರ್ಮಣ್ಣ ರಾಜಯೋಗ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜಯೋಗ ಪಕ್ಕಾ ಫ್ಯಾಮಿಲಿ ಎಂಟಟೈನರ್ ಸಿನಿಮಾ. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ರಾಜಯೋಗ ಚಿತ್ರದಿಂದ ಇದೀಗ ಮೊದಲ ಹಾಡು (Song) ಬಿಡುಗಡೆಯಾಗಿದೆ. ರೊಮ್ಯಾಂಟಿಕ್ ಹಾಡು ಇದಾಗಿದ್ದು ‘ಬಿ ಎ ಗಂಡು….’ ಎನ್ನುವ ಸಾಲಿನಿಂದ ಪ್ರಾರಂಭವಾಗುತ್ತದೆ.
ಧರ್ಮಣ್ಣ ಅಭಿನಯದ ಈ ಸಿನಿಮಾದ ಮೊದಲ ಹಾಡನ್ನು ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ (Abhishek Ambarish) ರಿಲೀಸ್ ಮಾಡಿದ್ದಾರೆ. ಹಾಡನ್ನು ನೋಡಿ ಇಷ್ಟಪಟ್ಟಿರುವ ಅಭಿಷೇಕ್ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಇನ್ನೂ ನವ ಜೋಡಿಗಳು ಈ ಹಾಡನ್ನ ನೋಡಲೆ ಬೇಕು ಎಂದು ಹೇಳಿದ್ದಾರೆ.
ರಾಜಯೋಗ ಚಿತ್ರಕ್ಕೆ ಲಿಂಗರಾಜ ಉಚ್ಚಂಗಿ ದುರ್ಗ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಅಕ್ಷಯ್ ಎಸ್ ರಿಷಬ್ ಸಂಗೀತ ನೀಡಿದ್ದಾರೆ. ಸದ್ಯ ರಿಲೀಸ್ ಆಗಿರುವ ‘ಬಿ ಎಂ ಗಂಡು…’ ಹಾಡಿಗೆ ಲಿಂಗರಾಜು ಅವರೇ ಸಾಹಿತ್ಯ ರಚಿಸಿದ್ದು ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮತ್ತು ಗಾಯಕಿ ಅನನ್ಯಾ ಭಟ್ ಧ್ವನಿ ನೀಡಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಗಮನ ಸೆಳೆದಿರುವ ರಾಜಯೋಗ ಇದೀಗ ಹಾಡಿನ ಮೂಲಕವು ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ.
ಅಂದಹಾಗೆ ನಿರ್ದೇಶಕ ಲಿಂಗರಾಜು ಅವರಿಗೆ ಇದು ಮೊದಲ ಸಿನಿಮಾ. ಈ ಮೊದಲು ಕಿರುತೆರೆಯಲ್ಲಿ ಕೆಲಸ ಮಾಡಿದ್ದ ಲಿಂಗರಾಜು ಅವರು ರಾಜಯೋಗ ಸಿನಿಮಾ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಸ್ಯಾಂಡವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಧರ್ಮಣ್ಣ ಬಿಟ್ಟರೆ ಉಳಿದವರೆಲ್ಲ ಹೊಸಬರು. ಧರ್ಮಣ್ಣ ಅವರಿಗೆ ನಾಯಕಿಯಾಗಿ ನಿರೀಕ್ಷಾ ರಾವ್ ಕಾಣಿಸಿಕೊಂಡಿದ್ದಾರೆ. ನಿರೀಕ್ಷಾ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದು ಧರ್ಮಣ್ಣ ಪತ್ನಿಯಾಗಿ ಮಿಂಚಿದ್ದಾರೆ.
ಈ ಸಿನಿಮಾ ಶ್ರೀರಾಮ ರಕ್ಷಾ ಪ್ರೊಡಕ್ಷನ್ ಮೂಲಕ ಕುಮಾರ ಕಂಠೀರವ ಅವರು ಬಂಡವಾಳ ಹೂಡಿದ್ದಾರೆ. ವಿಶೇಷ ಎಂದರೆ ಧರ್ಮಣ್ಣ ನಟನೆ ಜೊತೆಗೆ ಸಹ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಇನ್ನೂ ಉಳಿದಂತೆ ದೀಕ್ಷಿತ್ ಕೃಷ್ಣ, ಪ್ರಭು, ಲಿಂಗರಾಜು, ನೀರಜ್ ಗೌಡ ಕೂಡ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಸದ್ಯ ಟ್ರೈಲರ್ ಮತ್ತು ಹಾಡಿನ ಮೂಲಕ ಸದ್ದು ಮಾಡುತ್ತಿರುವ ರಾಜಯೋಗ ಸಿನಿಮಾ ಮುಂದಿನ ತಿಂಗಳು ಮೊದಲ ವಾರದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಧರ್ಮಣ್ಣ ಅವರ ರಾಜಯೋಗ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.
ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟಿ ರಚಿತಾ ರಾಮ್ (Rachita Ram) ‘ಐ ಯ್ಯಾಮ್ ಇನ್ ಲವ್’ (I am In Love) ಅಂತಿದ್ದಾರೆ. ಅರೇ.. ಇದೇನಿದು ಹೊಸ ಸುದ್ದಿ ಅನಬೇಡಿ. ಅವರು ಹೇಳಿದ್ದು ಹಾಡಿನ ಮೂಲಕ. ಅದು ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಎನ್ನುವುದು ವಿಶೇಷ. ಇಂದು ರಚಿತಾ ರಾಮ್ ಮತ್ತು ಅಭಿಷೇಕ್ ಅಂಬರೀಶ್ ಅವರ ಹುಟ್ಟು ಹಬ್ಬ. ಇವರ ಹುಟ್ಟು ಹಬ್ಬಕ್ಕಾಗಿಯೇ ಬ್ಯಾಡ್ ಮ್ಯಾನರ್ಸ್ ಚಿತ್ರತಂಡ ‘ಐ ಯ್ಯಾಮ್ ಇನ್ ಲವ್’ ಹಾಡನ್ನು ರಿಲೀಸ್ ಮಾಡಿದೆ.
ಮಾಸ್ ಹಾಡು ಬರೆದ ಜಯಂತ್ ಕಾಯ್ಕಿಣಿ
ಭಾವ ತುಂಬಿದ ಹಾಡುಗಳ ಮೂಲಕ ಫೇಮಸ್ ಆಗಿದ್ದ ಜಯಂತ್ ಕಾಯ್ಕಿಣಿ, ಇದೀಗ ಅಭಿಷೇಕ್ ಅಂಬರೀಶ್ (Abhishek Ambarish) ನಟನೆಯ ‘ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾಗಾಗಿ ಮಾಸ್ ಗೀತೆಯೊಂದನ್ನು ಬರೆದಿದ್ದಾರೆ. ‘ಓಗ.. ಓಗ..’ ಎಂದು ಶುರುವಾಗುವ ಗೀತೆಯಲ್ಲಿ ಕೇಳದೇ ಇರುವಂಥ ಹಲವು ಪದಗಳನ್ನು ಬಳಸಲಾಗಿದೆ. ಅವೆಲ್ಲವೂ ಗ್ರಿಬಿಶ್ ಪದಗಳಾಗಿವೆಯಂತೆ. ಹೀಗಾಗಿ ಹಾಡು ಹೊಸ ರೀತಿಯಲ್ಲೇ ಕೇಳಿಸುತ್ತದೆ.
ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡಿಗೆ ಜಯಂತ್ ಕಾಯ್ಕಿಣಿ (Jayant Kaykini) ಸಾಹಿತ್ಯ ಬರೆದಿದ್ದರೆ, ಕಪಿಲ್ ಕಪಿಲನ್ ಹಾಡಿದ್ದಾರೆ. ಅಭಿಷೇಕ್ ಅಂಬರೀಶ್ ಸಖತ್ತಾಗಿಯೇ ಗೀತೆಗೆ ಸ್ಟೆಪ್ ಹಾಕಿದ್ದಾರೆ. ಸೂರಿ (Suri) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಇದೇ ಮೊದಲ ಬಾರಿಗೆ ಅಭಿಷೇಕ್ ಮತ್ತು ಸೂರಿ ಈ ಸಿನಿಮಾದ ಮೂಲಕ ಒಂದಾಗಿದ್ದಾರೆ.
ಈ ಹಿಂದೆ ಯುಗಾದಿ ದಿನದಂದು ಪೆಪ್ಪಿ ಸಾಂಗ್‌ಗೆ ರಿಲೀಸ್ ಆಗಿತ್ತು. ಆ ಹಾಡಿಗೆ ಧನಂಜಯ್ ರಾಜನ್ ಬೊಂಬಾಟ್ ಲಿರಿಕ್ಸ್ ಬರೆದಿದ್ದರು. ಬಾಲಿವುಡ್ ಖ್ಯಾತ ಗಾಯಕಿ ಉಷಾ ಉತ್ತುಪ್ ಹಾಗೂ ಆಕಾಶ್ ಜಾಕೋಬ್ ವಾಯ್ಸ್‌ನಲ್ಲಿ ಸಾಂಗ್ ಸಖತ್ ಮಜವಾಗಿತ್ತು. ಚಿತ್ರದಲ್ಲಿ ಅಭಿ ಪಾತ್ರ ಪರಿಚಯಿಸುವ ಸಾಂಗ್ ಇದಾಗಿದೆ.
ಅಭಿಷೇಕ್- ರುದ್ರ ಎರಡನ್ನು ಸೇರಿಸಿ ಹಾಡಿನಲ್ಲಿ ರುದ್ರಾಭಿಷೇಕ ನಡೆಸಲಾಗಿದೆ. ಕೊಂಚ ಹಿಂದಿ, ಇಂಗ್ಲೀಷ್ ಪದಗಳನ್ನು ಹೆಚ್ಚೇ ಸೇರಿಸಿ ಸಾಲುಗಳನ್ನು ಪೋಣಿಸಲಾಗಿದೆ. `ಬ್ಯಾಡ್ ಮ್ಯಾನರ್ಸ್’ (Bad Manners) ಟೈಟಲ್ ಸಾಂಗ್‌ಗೆ ಧನಂಜಯ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಅಭಿಷೇಕ್ ಸಿಕ್ಕಾಪಟ್ಟೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಿದ್ದಾರೆ.
ಸ್ಯಾಂಡಲ್ ವುಡ್ ನಟ ಅಭಿಷೇಕ್ ಅಂಬರೀಶ್ (Abhishek Ambarish) ಕಾವೇರಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ರೈತರೊಂದಿಗೆ ಹೋರಾಡುವುದಕ್ಕಾಗಿಯೇ ಅವರು ಮಂಡ್ಯಗೆ (Mandya) ಬಂದಿದ್ದು, ಹೋರಾಟವನ್ನು (Protest) ಇನ್ನಷ್ಟು ತೀವ್ರಗೊಳಿಸುವ ಕುರಿತು ಮಾತನಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಷೇಕ್, ಯಾವುದೇ ರಾಜಕೀಯ ದೃಷ್ಟಿಯಿಂದ ತಾವು ಇಲ್ಲಿಗೆ ಬಂದಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
‘ನಾನು ಯುವಕನಾಗಿದ್ದೀನಿ. ಯಾವುದೇ ರಾಜಕೀಯ ದೃಷ್ಟಿಯಿಂದ ಇಲ್ಲಿ ಬಂದಿಲ್ಲ. ನಾನು ಚಿಕ್ಕದ್ದಿನಿಂದಲೂ ಕಾವೇರಿ ಹೋರಾಟ (Cauvery dispute) ನೋಡಿ ಬೆಳೆದವನು. ಅಪ್ಪಾಜಿ, ಅಮ್ಮ ಎಲ್ಲರೂ ಕಾವೇರಿ ಪರ ಹೋರಾಟ ಮಾಡಿದ್ದಾರೆ. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಮಾಡುವ ಕೆಲಸವನ್ನ ಅಮ್ಮ ಮಾಡ್ತಾರೆ. ನಮ್ಮ ನೀರು ಬಿಟ್ರೆ ಮುಂದೆ ಕುಡಿಯುವ ನೀರಿಗೂ ತೊಂದರೆ ಆಗುತ್ತೆ. ನಮ್ಮ ನೀರು, ಜನಕ್ಕೆ ನ್ಯಾಯ ಸಿಗಬೇಕು ಎಂದರು.
ಮುಂದುವರೆದು ಮಾತನಾಡಿದ ಅವರು, ‘ಕನ್ನಡ ಚಿತ್ರರಂಗ ಈ ವಿಚಾರದಲ್ಲಿ ಯಾವಾಗಲೂ ಇದ್ದೇ ಇರುತ್ತೆ. ಶೀಘ್ರದಲ್ಲೇ ಅದಕ್ಕೆ ಒಂದು ವೇದಿಕೆ ಸಿದ್ದವಾಗಲಿದೆ. ನಮ್ಮ ಬಳಿ ನೀರು ಇದ್ರೆ ತಮಿಳುನಾಡಿನವ್ರು ನೀರು ಕೇಳಲಿ. ನಮ್ಮ ಬಳಿಯೇ ನೀರು ಇಲ್ಲದಿದ್ದಾಗ ಅವರಿಗೆ ನೀರು ಕೋಡೊದು ಹೇಗೆ.? ಎರಡೂ ರಾಜ್ಯ ಸರ್ಕಾರಗಳು ಕೂತು ಮಾತನಾಡಬೇಕು. ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಸಿಗಬೇಕು ಎಂದು ಪ್ರತಿಭಟನೆಯಲ್ಲಿ ಅಭಿಷೇಕ್ ಅಂಬರೀಶ್ ಹೇಳಿದರು.
ಸ್ಯಾಂಡಲ್ ವುಡ್ ನಟ ನಟಿಯರು ಸೋಷಿಯಲ್ ಮೀಡಿಯಾ ಮೂಲಕ ಮಂಡ್ಯ (Mandya) ಭಾಗದ ರೈತರ ಪರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರೆ, ನಟ ಅಭಿಷೇಕ್ ಅಂಬರೀಶ್ (Abhishek Ambarish) ಇಂದು ನೇರವಾಗಿ ರೈತರ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಇಂದು ಪಾಲ್ಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಕಾವೇರಿ (Cauvery) ಹೋರಾಟಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅಂಬರೀಶ್ ಅವರು ತಮ್ಮ ಕೇಂದ್ರ ಮಂತ್ರಿ ಸ್ಥಾನವನ್ನೇ ತ್ಯಜಿಸಿದ್ದರು. ನಂತರ ಮಂಡ್ಯದ ಎಂಪಿ ಆಗಿರುವ ನಟಿ ಸುಮಲತಾ ಅಂಬರೀಶ್ ಕೂಡ ಹಲವು ದಿನಗಳಿಂದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದೀಗ ಅವರ ಪುತ್ರ ಅಭಿಷೇಕ್ ಕೂಡ ನೇರವಾಗಿ ಹೋರಾಟಕ್ಕೆ ಇಳಿಸಿದ್ದಾರೆ.
ನಟ, ಯುವರಾಜಕಾರಣಿ ನಟ ನಿಖಿಲ್ ಕುಮಾರ್, ಕಾವೇರಿ ನೀರು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿರೋ ನಿಖಿಲ್, ‘ಕಾವೇರಿ ಕನ್ನಡಿಗರ ಹಕ್ಕು. ಕಾವೇರಿ ಕನ್ನಡಿಗರ ಜೀವನಾಡಿ, ಈ ವಿಷಯದಲ್ಲಿ ಅನ್ಯಾಯ ಸಹಿಸುವುದಿಲ್ಲ ಹಾಗೂ ರಾಜಿ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಆಡುತ್ತಿರುವ ಕಪಟ ನಾಟಕ ಸಾಕು. ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ಕೃತ್ಯವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ರಾಜ್ಯದಲ್ಲಿ ನೀರಿನ ಕೊರತೆ ಇದೆ ಮಳೆ ಕೈಕೊಟ್ಟಿದೆ. ಜಲಾಶಯಗಳು ಬರಿದಾಗಿವೆ. ಆದರೂ ತಮಿಳುನಾಡಿಗೆ ರಾಜ್ಯ ಸರಕಾರ ಏಕಪಕ್ಷೀಯವಾಗಿ ನೀರು ಹರಿಸಿದ್ದು ಅಕ್ಷಮ್ಯ. ಬ್ರಿಟೀಷರ ಕಾಲದಲ್ಲಿಯೇ ಶುರುವಾದ ಅನ್ಯಾಯದ ಪರಂಪರೆಯನ್ನು ನಮ್ಮ ರಾಜ್ಯ ಸರಕಾರವೇ ಮುಂದುವರಿಸಿದೆ ಎಂದು ಬರೆದುಕೊಂಡಿದ್ದಾರೆ.
ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿರುವ ನಿಖಿಲ್, ‘ಕಾಂಗ್ರೆಸ್ ಪಕ್ಷಕ್ಕೆ ಕಾವೇರಿ ಎನ್ನುವುದು ರಾಜಕೀಯ ಲಾಭದ ವಸ್ತುವಂತೆ ಆಗಿರುವುದು ನೋವಿನ ಸಂಗತಿ. ಕಾವೇರಿ ವಿಷಯದಲ್ಲಿ ಕನ್ನಡಿಗರ ನಿಲುವೇ ನನ್ನ ನಿಲುವು. ಆರೂವರೆ ಕೋಟಿ ಕನ್ನಡಿಗರ ಧ್ವನಿಯೇ ನನ್ನ ಧ್ವನಿ. ತಾಯಿ ಕಾವೇರಿಗಾಗಿ ಯಾವುದೇ ಹೋರಾಟಕ್ಕೆ ನಾನು ಸಿದ್ಧನಿದ್ದೇನೆ ಎಂದು ನಿಖಿಲ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಭಾವ ತುಂಬಿದ ಹಾಡುಗಳ ಮೂಲಕ ಫೇಮಸ್ ಆಗಿದ್ದ ಜಯಂತ್ ಕಾಯ್ಕಿಣಿ, ಇದೀಗ ಅಭಿಷೇಕ್ ಅಂಬರೀಶ್ (Abhishek Ambarish) ನಟನೆಯ ‘ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾಗಾಗಿ ಮಾಸ್ ಗೀತೆಯೊಂದನ್ನು ಬರೆದಿದ್ದಾರೆ. ‘ಓಗ.. ಓಗ..’ ಎಂದು ಶುರುವಾಗುವ ಗೀತೆಯಲ್ಲಿ ಕೇಳದೇ ಇರುವಂಥ ಹಲವು ಪದಗಳನ್ನು ಬಳಸಲಾಗಿದೆ. ಅವೆಲ್ಲವೂ ಗ್ರಿಬಿಶ್ ಪದಗಳಾಗಿವೆಯಂತೆ. ಹೀಗಾಗಿ ಹಾಡು ಹೊಸ ರೀತಿಯಲ್ಲೇ ಕೇಳಿಸುತ್ತದೆ.
ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡಿಗೆ ಜಯಂತ್ ಕಾಯ್ಕಿಣಿ (Jayant Kaykini) ಸಾಹಿತ್ಯ ಬರೆದಿದ್ದರೆ, ಕಪಿಲ್ ಕಪಿಲನ್ ಹಾಡಿದ್ದಾರೆ. ಅಭಿಷೇಕ್ ಅಂಬರೀಶ್ ಸಖತ್ತಾಗಿಯೇ ಗೀತೆಗೆ ಸ್ಟೆಪ್ ಹಾಕಿದ್ದಾರೆ. ಸೂರಿ (Suri) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಇದೇ ಮೊದಲ ಬಾರಿಗೆ ಅಭಿಷೇಕ್ ಮತ್ತು ಸೂರಿ ಈ ಸಿನಿಮಾದ ಮೂಲಕ ಒಂದಾಗಿದ್ದಾರೆ. ಇದನ್ನೂ ಓದಿ:Gowri: ಇಂದ್ರಜಿತ್ ಲಂಕೇಶ್ ಸಿನಿಮಾದಲ್ಲಿ ಚಂದು ಗೌಡ ವಿಲನ್
ಈ ಹಿಂದೆ ಯುಗಾದಿ ದಿನದಂದು ಪೆಪ್ಪಿ ಸಾಂಗ್‌ಗೆ ರಿಲೀಸ್ ಆಗಿತ್ತು. ಆ ಹಾಡಿಗೆ ಧನಂಜಯ್ ರಾಜನ್ ಬೊಂಬಾಟ್ ಲಿರಿಕ್ಸ್ ಬರೆದಿದ್ದರು. ಬಾಲಿವುಡ್ ಖ್ಯಾತ ಗಾಯಕಿ ಉಷಾ ಉತ್ತುಪ್ ಹಾಗೂ ಆಕಾಶ್ ಜಾಕೋಬ್ ವಾಯ್ಸ್‌ನಲ್ಲಿ ಸಾಂಗ್ ಸಖತ್ ಮಜವಾಗಿತ್ತು. ಚಿತ್ರದಲ್ಲಿ ಅಭಿ ಪಾತ್ರ ಪರಿಚಯಿಸುವ ಸಾಂಗ್ ಇದಾಗಿದೆ.
ಅಭಿಷೇಕ್- ರುದ್ರ ಎರಡನ್ನು ಸೇರಿಸಿ ಹಾಡಿನಲ್ಲಿ ರುದ್ರಾಭಿಷೇಕ ನಡೆಸಲಾಗಿದೆ. ಕೊಂಚ ಹಿಂದಿ, ಇಂಗ್ಲೀಷ್ ಪದಗಳನ್ನು ಹೆಚ್ಚೇ ಸೇರಿಸಿ ಸಾಲುಗಳನ್ನು ಪೋಣಿಸಲಾಗಿದೆ. `ಬ್ಯಾಡ್ ಮ್ಯಾನರ್ಸ್’ (Bad Manners) ಟೈಟಲ್ ಸಾಂಗ್‌ಗೆ ಧನಂಜಯ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಅಭಿಷೇಕ್ ಸಿಕ್ಕಾಪಟ್ಟೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಿದ್ದಾರೆ.
ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ (Dhanveer) ನಟನೆಯ ಬಹುನಿರೀಕ್ಷಿತ ‘ವಾಮನ’ (Vamana) ಸಿನಿಮಾದ ಎರಡನೇ ಹಾಡು (Song) ಬಿಡುಗಡೆಯಾಗಿದೆ. ಇತ್ತೀಚೆಗೆಷ್ಟೇ ರಿಲೀಸ್ ಆಗಿದ್ದ ‘ವಾ..ವಾ..ವಾ..ವಾಮನ’ ಮಾಸ್ ನಂಬರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ವಾಮನ ಅಂಗಳದಿಂದ ಮುದ್ದು ರಾಕ್ಷಸಿ ಎಂಬ ರೋಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಹಾಡಿಗೆ ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದು, ವಿಜಯ್ ಪ್ರಕಾಶ್ ಹಾಗೂ ಹರ್ಷಿಕಾ ದೇವನಾಥ್ ಹಾಡಿದ್ದಾರೆ. ಮುದ್ದು ರಾಕ್ಷಸಿ ಹಾಡಿಗೆ ಧನ್ವೀರ್ ಹಾಗೂ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ.
ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ ಅದ್ಧೂರಿಯಾಗಿ ನಿರ್ಮಿಸಿರುವ ವಾಮನ ಸಿನಿಮಾವನ್ನು ಯುವ ನಿರ್ದೇಶಕ ಶಂಕರ್ ರಾಮನ್ ರಚಿಸಿ ನಿರ್ದೇಶಿಸಿದ್ದಾರೆ. ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಮುದ್ದು ರಾಕ್ಷಸಿ ಮೆಲೋಡಿ ಹಾಡನ್ನು ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ 9Abhishek Ambarish) ರಿಲೀಸ್ ಮಾಡಿ ಗೆಳೆಯನ ಚಿತ್ರಕ್ಕೆ ಸಾಥ್ ಕೊಟ್ಟರು. ಇದನ್ನೂ ಓದಿ:ಕೆರಿಯರ್‌ನಲ್ಲಿ ಪ್ರಚಾರ ಬೇಕು ಅಂದ್ರೆ ಇದನ್ನೆಲ್ಲಾ ಮಾಡಬೇಕು- ತಮನ್ನಾ ಭಾಟಿಯಾ
ಅಭಿಷೇಕ್ ಅಂಬರೀಷ್, ನಾನು ಈಗಷ್ಟೇ ಮುದ್ದು ರಾಕ್ಷಸಿ ಹಾಡು ನೋಡಿದೆ. ಒಂದು ಸಾಂಗ್ ಹಿಟ್ ಆಗಬೇಕು ಅಂದರೆ ಅದರ ಕ್ರೆಡಿಟ್ ಹೀರೋಗೂ ಅಲ್ಲ ಹೀರೋಯಿನ್ ಗೂ ಅಲ್ಲ. ಮ್ಯೂಸಿಕ್ ಡೈರೆಕ್ಟರ್, ಲಿರಿಕ್ಸಿಸ್ಟ್ ಗೆ ಸೇರಬೇಕು. ಅವರ ಎಫರ್ಟ್ ಜಾಸ್ತಿ ಇರುತ್ತದೆ. ನಮ್ಮ ಗೆಳೆಯ ಧನ್ವೀರ್ ಇಷ್ಟು ಚೆನ್ನಾಗಿ ರೋಮ್ಯಾನ್ಸ್ ಮಾಡ್ತಾನೆ ಅಂತ ಗೊತ್ತಿರಲಿಲ್ಲ. ಬೈ ಟು ಲವ್ ಸಿನಿಮಾದಲ್ಲಿ ಸ್ವಲ್ಪ ನೋಡಿದ್ದೆ. ಈಗ ವಾಮನ ಮುಖಾಂತರ ಕಂಪ್ಲೀಟ್ ಕಮರ್ಷಿಯಲ್ ಪ್ಯಾಕೇಜ್, ಕ್ಯೂಟ್ ಲವರ್ ಬಾಯ್ ರೀತಿ ಕಾಣಿಸುತ್ತಿದ್ದಾನೆ ಎಂದರು.
ಧ್ವನೀರ್ ಗೌಡ ಮಾತನಾಡಿ, ಒಂದೇ ಒಂದು ಫೋನ್ ಕಾಲ್ ಗೆ ಬಂದು ಮುದ್ದು ರಾಕ್ಷಸಿ ಹಾಡನ್ನು ಅಭಿಷೇಕ್ ಅಂಬರೀಶ್ ಅವರು ಲಾಂಚ್ ಮಾಡಿಕೊಟ್ಟಿದ್ದಾರೆ. ಭೂಷಣ್ ಮಾಸ್ಟರ್ ಕೊರಿಯೋಗ್ರಫಿಗೆ ಹೆಜ್ಜೆ ಹಾಕಿದ್ದೇನೆ ಎಂದರು. ವಾಮನ ನಿರ್ಮಾಪಕ ಚೇತನ್ ಗೌಡ ಮಾತನಾಡಿ, ಎಲ್ಲರಿಗೂ ಧನ್ಯವಾದ..ಈ ಸಮಾರಂಭವನ್ನು ಇಷ್ಟು ಯಶಸ್ವಿಯಾಗಿ ನಡೆಸಿಕೊಟ್ಟಿದ್ದೀರಾ. ನಾನು ಮೊದಲ ಸಾಂಗ್ ಬಿಡುಗಡೆ ಟೈಮ್ ನಲ್ಲಿ ಸಿನಿಮಾ ಬಗ್ಗೆ ಎಲ್ಲವನ್ನೂ ಹೇಳಿದ್ದೇನೆ. ಈ ಹಾಡನ್ನು ನೋಡಿ ಸಪೋರ್ಟ್ ಮಾಡಿ. ಕನ್ನಡ ಸಿನಿಮಾಗಳನ್ನು ನೋಡಿ ಕನ್ನಡ ಚಿತ್ರರಂಗ ಬೆಳೆಸಿ ಎಂದರು.
ನಿರ್ದೇಶಕ ಶಂಕರ್ ರಾಮನ್ ಮಾತನಾಡಿ, ಮೊದಲ ಹಾಡಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಈ ಸಾಂಗ್ ನಿಮಗೆ ಡೆಡಿಕೇಟ್ ಗೆ ಮಾಡುತ್ತಿದ್ದೇವೆ. ಅಜನೀಶ್ ಲೋಕನಾಥ್ ಸಂಗೀತ, ವಿ ನಾಗೇಂದ್ರ ಪ್ರಸಾದ್ ಮುದ್ದಾದ ಸಾಹಿತ್ಯ, ವಿಜಯ್ ಪ್ರಕಾಶ್ ಹಾಗೂ ಹರ್ಷಿಕಾ ದೇವನಾಥ್ ಧ್ವನಿ ಕೂಡಿಸಿದ್ದು, ಭೂಷಣ್ ಮಾಸ್ಟರ್ ಕೊರಿಯೋಗ್ರಫ್ ಮಾಡಿದ್ದಾರೆ. ಮನೆಗೆ ಹೋಗ್ತಾ ನೀವು ಮುದ್ದು ಮುದ್ದು ರಾಕ್ಷಸಿ ಹಾಡುತ್ತಾ ಹೋಗಿ ಎಂದರು.
ವಾಮನ ಸಿನಿಮಾದಲ್ಲಿ ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ (Reeshma Nanaiah) ಅಭಿನಯಿಸಿದ್ದು, ತಾರಾ, ಸಂಪತ್, ಆದಿತ್ಯ ಮೆನನ್, ಶಿವರಾಜ್ ಕೆಆರ್ ಪೇಟೆ, ಅವಿನಾಶ್, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ, ಭೂಷಣ್ ಮುಂತಾದವು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ.
ಅಭಿಷೇಕ್ (Abhishek Ambarish) ಮತ್ತು ಅವಿವಾ ವಿವಾಹಕ್ಕೆ (Marriage) ದೇವೇಗೌಡರ ಕುಟುಂಬದ ಯಾವ ಸದಸ್ಯರೂ ಬಂದಿರಲಿಲ್ಲ. ಅಭಿಷೇಕ್ ಗೆಳೆಯ ನಿಖಿಲ್ ಕುಮಾರಸ್ವಾಮಿ ಮತ್ತು ಅಂಬರೀಶ್ ಕುಟುಂಬದ ಜೊತೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಮದುವೆಗೆ ಬಂದಿರಲಿಲ್ಲ. ರಾಜಕಾರಣದಲ್ಲಿ ಯಾರೂ ಮಿತ್ರರೂ ಅಲ್ಲ, ಶತ್ರುಗಳೂ ಇಲ್ಲ ಎನ್ನುವ ಮಾತಿದ್ದರೂ, ದೇವೇಗೌಡರ ಕುಟುಂಬ ಗೈರು ನಾನಾ ರೀತಿಯ ಚರ್ಚೆಗೆ ನಾಂದಿ ಹಾಡಿತ್ತು. ಇದೀಗ ದೇವೇಗೌಡ ಅವರ ಎಲ್ಲ ಮಾತಿಗೆ ಪೂರ್ಣವಿರಾಮ ಇಡುವ ಕೆಲಸ ಮಾಡಿದ್ದಾರೆ.
ಅಭಿಷೇಕ್ ಮತ್ತು ಅವಿವಾ (Aviva) ಮದುವೆ ಕಾರ್ಯಕ್ರಮಕ್ಕೆ ಶುಭಕೋರಿ ದೇವೇಗೌಡರು (H.D. Devegowda) ಪತ್ರವೊಂದನ್ನು ಬರೆದಿದ್ದು, ‘ಶ್ರೀಮತಿ ಸುಮಲತಾ (Sumalatha) ಅವರೇ, ನೀವು ಪ್ರೀತಿ ಪೂರ್ವಕ ಕಳುಹಿಸಿದ ನಿಮ್ಮ ಪುತ್ರನ ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆ ನನಗೆ ತಲುಪಿದೆ. ನಿಮ್ಮ ಅಭಿಮಾನಕ್ಕಾಗಿ ಧನ್ಯವಾದಗಳು. ಈ ಶುಭ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಅಭಿಷೇಕ್ ಹಾಗೂ ಅವಿವ ನವ ಮಧುಮಕ್ಕಳಿಗೆ ಶುಭಾಶೀರ್ವಾದಗಳನ್ನು ಕೋರುತ್ತೇನೆ. ಮಧು ಮಕ್ಕಳ ಭವಿಷ್ಯ ಬದುಕು ಸುಖವಾಗಿರಲಿ, ನೆಮ್ಮದಿಯಾಗಿರಲಿ, ಸಂತೋಷವಾಗಿರಲೆಂದು ಹಾರೈಸುತ್ತೇನೆ’ ಎಂದು ಶುಭಾಶಯದ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:ನಟಿ ತಮನ್ನಾ ಹಾಟ್ ಫೋಟೋಗೆ ಸ್ವೀಟ್ 16 ಎಂದ ನೆಟ್ಟಿಗರು
ಈ ಹಿಂದೆ ಪ್ರಧಾನಿ ನರೇಂದ್ರ ಮೋಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಅಭಿ ಮದುವೆಗೆ ಶುಭ ಕೋರಿ ಪತ್ರಗಳನ್ನು ಕಳುಹಿಸಿದ್ದರು. ಇಳಿ ವಯಸ್ಸಿನ ಕಾರಣದಿಂದಾಗಿ ದೇವೇಗೌಡ ಅವರು ಮದುವೆಗೆ ಬಾರದೇ ಇದ್ದರೂ ಶುಭಾಶಯ ಪತ್ರವನ್ನು ಕಳುಹಿಸುವ ಮೂಲಕ ಅಭಿನಂದನೆಗೆ ಕಾರಣರಾಗಿದ್ದಾರೆ.
ದೇವೇಗೌಡ ಅವರ ಪತ್ರ ಹಾಗೂ ಅವರಿಗೆ ಆಹ್ವಾನಿಸಲು ಹೋಗಿದ್ದ ಫೋಟೋವನ್ನು ಸುಮಲತಾ ಅಂಬರೀಶ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಅವರ ಮದುವೆಗೆ ಮತ್ತು ಆರತಕ್ಷತೆ ಸಮಾರಂಭಕ್ಕೆ ಶುಭ ಕೋರಿದ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ಅವರಿಗೆ ಶ್ರೀ ಅಂಬರೀಶ್ ಅವರ ಕುಟುಂಬದಿಂದ ಧನ್ಯವಾದಗಳು. ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗೆ ನಿಮ್ಮ ಹಾರೈಕೆ, ಆಶೀರ್ವಾದ ಸದಾ ಹೀಗೆಯೇ ಇರಲಿ’ ಎಂದು ಬರೆದುಕೊಂಡಿದ್ದಾರೆ.
ನಟಿ, ಸಂಸದೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ (Abhishek Ambarish) ಅವರ ಮದುವೆಗೆ ಶುಭಾಶಯ ಕೋರಿದ್ದಾರೆ ಪ್ರಧಾನಿ ನರೇಂದ್ರ ಮೋದಿ (Narendra Modi). ಶುಭಾಶಯ ಕೋರಿ ಕಳುಹಿಸಿದ ಪತ್ರವನ್ನು ಸುಮಲತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಮದುವೆಗೆ (Marriage) ನರೇಂದ್ರ ಮೋದಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಆಹ್ವಾನ ನೀಡಿದ್ದರು ಸುಮಲತಾ ಮತ್ತು ಪುತ್ರ ಅಭಿಷೇಕ್.
ಶುಭಾಶಯ (Greetings) ಕೋರಿ ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಸುಮಲತಾ (Sumalatha), ‘ಅಭಿಷೇಕ ಅಂಬರೀಶ್–ಅವಿವಾ ಬಿಡಪ್ಪ (Aviva) ಅವರ ಮದುವೆಗೆ ಶುಭಾಶಯಗಳನ್ನು ತಿಳಿಸಿ, ನವ ಜೋಡಿಯ ಹೊಸ ಜೀವನ ಸುಖಕರವಾಗಿರಲಿ ಎಂದು ಹಾರೈಸಿದ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನಿಮ್ಮ ಹಾರೈಕೆ, ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ ಎಂದು ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುವೆ’ ಎಂದು ಬರೆದುಕೊಂಡಿದ್ದಾರೆ.
ಮದುವೆ, ಆರತಕ್ಷತೆ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಮುಗಿಸಿಕೊಂಡಿರುವ ನಟ ಅಭಿಷೇಕ್, ಮಾಡೆಲ್ ಅವಿವಾ ಜೂನ್ 16 ರಂದು ಮಂಡ್ಯದ ಜನತೆಗೆ ಬೀಗರೂಟ ಮಾಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮದುವೆ ಮತ್ತು ಆರತಕ್ಷತೆ ಬೆಂಗಳೂರಿನಲ್ಲಿ ನಡೆದಿರುವ ಕಾರಣದಿಂದಾಗಿ ಬೀಗರೂಟವನ್ನು ಮಂಡ್ಯದಲ್ಲಿ ಏರ್ಪಡಿಸಲಾಗಿದೆ. ಇದನ್ನೂ ಓದಿ:ಚಿಟ್ಟೆಯಂತೆ ಮಿಂಚಿದ ಸಂತೂರ್ ಮಮ್ಮಿ ಪ್ರಣಿತಾ ಸುಭಾಷ್
ಈ ಹಿಂದೆ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಾಗ, ಯಾವ ಜಾಗದಲ್ಲಿ ಅವರಿಗೆ ಕಾರ್ಯಕ್ರಮ ಮಾಡಲು ತಯಾರಿ ಮಾಡಿಕೊಳ್ಳಲಾಗಿತ್ತೋ, ಅದೇ ಜಾಗದಲ್ಲೇ ಬೀಗರೂಟವನ್ನು ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿ ಬಳಿ 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಲಾಗುತ್ತಿದೆ. ಅಲ್ಲಿಯೇ ಬೀಗರೂಟ ನಡೆಯಲಿದೆ.
ಬೀಗರೂಟಕ್ಕೆ ಕನಿಷ್ಠ 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಟೆಂಟ್ ಹಾಕುವಂತಹ ಕಾರ್ಯ ನಡೆದಿದ್ದು, ಸುಮಲತಾ ಅಂಬರೀಶ್ ಇಂದು ಅದರ ಪರಿಶೀಲನೆ ಕೂಡ ಮಾಡಿದ್ದಾರೆ. ಬೀಗರೂಟಕ್ಕೆ ಭರ್ಜರಿ ಬಾಡೂಟವೇ ಇರಲಿದ್ದು, ಪಕ್ಕಾ ಮಂಡ್ಯ ಶೈಲಿಯಲ್ಲಿ ಆಹಾರವನ್ನು ಸಿದ್ಧ ಪಡಿಸಲಾಗುತ್ತದೆಯಂತೆ. ಮುದ್ದೆಯೊಂದಿಗೆ ಭರ್ಜರಿ ಮಾಂಸದೂಟ ಕೂಡ ಜೊತೆಯಾಗಲಿದೆ.
ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿಡಪ್ಪ ಮದುವೆ ನಂತರ ಅವರ ಆಪ್ತರಿಗಾಗಿ ಪಾರ್ಟಿಯೊಂದನ್ನು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಹಲವು ತಾರೆಯರು ಆಗಮಿಸಿದ್ದರು. ಅಂಬರೀಶ್ ಅವರ ಜನಪ್ರಿಯ ಹಾಡಿಗೆ ನೃತ್ಯ ಕೂಡ ಮಾಡಿದರು.
ಅದರಲ್ಲೂ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಫೇಮಸ್ ಸಾಂಗ್ ‘ಹೇ ಜಲೀಲಾ..’ ಹಾಡಿಗೆ ಸುಮಲತಾ (Sumalatha) ಅಂಬರೀಶ್ ಜೊತೆ ಯಶ್ (Yash) ಡಾನ್ಸ್ ಮಾಡಿದರು. ನಂತರ ಇವರಿಗೆ ಅಭಿಷೇಕ್ ಮತ್ತು ಅವಿವಾ ಕೂಡ ಸಾಥ್ ನೀಡಿದ್ದು ವಿಶೇಷವಾಗಿತ್ತು. ಕಬ್ಲ್ ಅವಿವಾ ಹೆಸರಿನಲ್ಲಿ ಆಯೋಜನೆಯಾಗಿದ್ದ ಪಾರ್ಟಿಯಲ್ಲಿ (Aviva, Party) ರಮ್ಯಾಕೃಷ್ಣ, ಮಾಲಾಶ್ರೀ ಸೇರಿದಂತೆ ಹಲವು ನಾಯಕಿಯರು ಕೂಡ ಹಾಜರಿದ್ದರು.
ಅಭಿಷೇಕ್ ಅಂಬರೀಶ್ (Abhishek Ambarish) ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅವಿವಾ ಬಿಡಪ್ಪ (Aviva Bidappa) ಮೊನ್ನೆಯಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೌಡರ ಸಂಪ್ರದಾಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಿವಾಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ದೀರ್ಘಕಾಲದ ಗೆಳತಿಯೊಂದಿಗೆ ಹಸೆಮಣೆ ಏರಿದ್ದಾರೆ. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ‘ಅಣ್ಣ- ತಂಗಿ’ ಸೀರಿಯಲ್ ನಟಿ ಅಖಿಲಾ ಪ್ರಕಾಶ್
ಈ ಮದುವೆಗೆ (Marriage) ಅನೇಕ ಗಣ್ಯರು ಸಾಕ್ಷಿಯಾಗಿದ್ದರು ನಟ ರಜನಿಕಾಂತ್, ತೆಲುಗು ನಟ ಚಿರಂಜೀವಿ, ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಆಗಮಿಸಿದ್ದರು.
ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವಾರಗಳಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿತ್ತು. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿತ್ತು. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿತ್ತು.