Tag: Abhinav Shukla

  • ಮೊದಲ ಮಗುವಿಗೆ ತಾಯಿ ಆಗುತ್ತಿದ್ದಾರೆ ಬಿಗ್ ಬಾಸ್ ಸ್ಪರ್ಧಿ ರುಬಿನಾ

    ಮೊದಲ ಮಗುವಿಗೆ ತಾಯಿ ಆಗುತ್ತಿದ್ದಾರೆ ಬಿಗ್ ಬಾಸ್ ಸ್ಪರ್ಧಿ ರುಬಿನಾ

    ರುಬಿನಾ ದಿಲಾಯಕ್ (Rubina Dilayak) ತಾಯಿ ಆಗುತ್ತಿದ್ದಾರೆ. ಈ ಸಂತಸದ ಸುದ್ದಿಯನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಇವರು, ಮಾಡೆಲಿಂಗ್ ಮತ್ತು ಕಿರುತೆರೆ ಜಗತ್ತಿನಲ್ಲಿ ಹೆಸರು ಮಾಡಿದವರು. ಅಲ್ಲದೇ, ಬಿಗ್ ಬಾಸ್ ವಿನ್ನರ್ ಆಗಿಯೂ ಹೊರ ಹೊಮ್ಮಿದವರು. ಹೊರ ದೇಶದಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿರುವ ರುಬಿಯಾ, ಅಲ್ಲಿಂದಲೇ ಸಂತಸದ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

    ಅಭಿನವ್ ಶುಕ್ಲಾ (Abhinav Shukla) ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಈ ಹಿಂದೆಯೇ ಅವರು ಹೇಳಿಕೊಂಡಿದ್ದರು. ಇವರ ಸ್ನೇಹ ಡೇಟಿಂಗ್ ಗೆ ಮಾತ್ರ ಸೀಮಿತವಾಗಿರಲಿದೆ ಎಂದು ಹಲವರು  ಅಂದುಕೊಂಡಿದ್ದರು. ಆದರೆ, 2018ರಲ್ಲಿ ಅಭಿನವ್ ಜೊತೆ ಮದುವೆ ಆಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಐದು ವರ್ಷಗಳ ನಂತರ ತಾಯಿ ಆಗುತ್ತಿದ್ದಾರೆ. ಇದನ್ನೂ ಓದಿ:ತೆಲುಗಿಗೆ ರಕ್ಷಿತ್‌ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ- ರಿಲೀಸ್‌ ಡೇಟ್‌ ಫಿಕ್ಸ್

    ಅಭಿನವ್ ಮತ್ತು ರುಬಿಯಾ ಮೊದ ಮೊದಲ ಸ್ನೇಹಿತರು. ಆ ನಂತರ ಪ್ರೇಮಿಗಳಾದರು. ಇಬ್ಬರೂ ಕುಟುಂಬದ ಒಪ್ಪಿಗೆ ಪಡೆದುಕೊಂಡು ಶಿಮ್ಲಾದಲ್ಲಿ ಮದುವೆಯಾದರು. ಮೊದಲು ಪ್ರಪೋಸ್ ಮಾಡಿದ್ದು ಅಭಿನವ್ ಎಂದು ಬಿಗ್ ಬಾಸ್ ಮನೆಯಲ್ಲಿ ತಮ್ಮ ಲವ್ ಸ್ಟೋರಿಯನ್ನು ಹಂಚಿಕೊಂಡಿದ್ದರು ರುಬಿಯಾ.

     

    ‘ನಾವಿಬ್ಬರೂ ಒಬ್ಬರಿಗೊಬ್ಬರು ಇಷ್ಟಪಟ್ಟೆವು. ಕಾಮನ್ ಸ್ನೇಹಿತರ ಮನೆಯಲ್ಲಿ ಮೊದಲು ಭೇಟಿಯಾಗಿದ್ದು. ನಾವಿಬ್ಬರೂ  ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡೆ, ಹೊಸ ಜೀವನಕ್ಕೆ ಕಾಲಿಡಲು ಹೊರಟೆವು. ಇದೀಗ ನಾವು ಅದ್ಭುತವಾಗಿ ಜೀವನವನ್ನು ಸಾಗಿಸುತ್ತಿದ್ದೇವೆ’ ಎನ್ನುವ ವಿಚಾರವನ್ನು ಹಲವು ಬಾರಿ ಅವರು ಮಾತನಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಸ್ತೆ ಅಪಘಾತ: ನಟಿ ರುಬೀನಾ ದಿಲೈಕ್ ಆಸ್ಪತ್ರೆ ದಾಖಲು

    ರಸ್ತೆ ಅಪಘಾತ: ನಟಿ ರುಬೀನಾ ದಿಲೈಕ್ ಆಸ್ಪತ್ರೆ ದಾಖಲು

    ಕಿರುತೆರೆಯ ಖ್ಯಾತ ನಟಿ, ಹಿಂದಿಯ ಬಿಗ್ ಬಾಸ್ ವಿನ್ನರ್ ರುಬೀನಾ ದಿಲೈಕ್ ಪ್ರಯಾಣಿಸುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ರುಬೀನಾಗೆ ತೀವ್ರ ಗಾಯಗಳಾಗಿವೆ. ಬೆನ್ನಿಗೆ ಮತ್ತು ತಲೆಗೆ ಪೆಟ್ಟು ಬಿದ್ದು ಕಾರಣದಿಂದಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

    ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದ ರುಬೀನಾ ಕಾರಿಗೆ, ಹಿಂದಿನಿಂದ ಬಂದ ಟಾಟಾ ಯೋಧ ಟ್ರಕ್ ಗುದ್ದಿದೆ. ಪರಿಣಾಮ ರುಬೀನಾ ಅವರ ಬೆನ್ನು ಮತ್ತು ತೆಲೆಗೆ ಪೆಟ್ಟುಬಿದ್ದಿದೆ. ಫೋನ್ ನಲ್ಲಿ ಮಾತನಾಡುತ್ತಾ ಟ್ರಕ್ ಓಡಿಸುತ್ತಿದ್ದ ವ್ಯಕ್ತಿಯಿಂದಾಗಿ ಇದೀಗ ರುಬೀನಾ ಆಸ್ಪತ್ರೆ ಸೇರಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ ರುಬೀನಾ ಪತಿ, ನಟ ಅಭಿನವ್ ಶುಕ್ಲಾ. ಇದನ್ನೂ ಓದಿ:ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು

    ಈ ಕುರಿತು ರುಬೀನಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಆದ ಘಟನೆಯನ್ನು ಹಂಚಿಕೊಂಡಿದ್ದಾರೆ. ಅಪಘಾತವಾದಾಗ ನಾನಾ ಆಘಾತಕ್ಕೊಳಗಾಗಿದ್ದೆ. ವೈದ್ಯಕೀಯ ಪರೀಕ್ಷೆಗಳ ನಂತರ ನಿರಾಳಳಾಗಿದ್ದೇನೆ. ಜಾಗರೂಕತೆಯನ್ನು ವಾಹನ ಚಲಾಯಿಸಿ. ರಸ್ತೆ ನಿಯಮಗಳನ್ನು ದಯವಿಟ್ಟು ಪಾಲಿಸಿ’ ಎಂದು  ಅವರು ಮನವಿ ಮಾಡಿದ್ದಾರೆ.

     

    ಮುಂಬೈ ಪೊಲೀಸರು ಅಭಿನವ್ ಶುಕ್ಲಾ ಹಾಕಿರುವ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದು, ಪೊಲೀಸ್ ಠಾಣೆಗೆ ಬಂದು ಘಟನೆಯ ಬಗ್ಗೆ ದೂರು ಕೊಡಿ, ಅಗತ್ಯ ಕ್ರಮಗಳನ್ನು ತಗೆದುಕೊಳ್ಳುತ್ತೇವೆ ಎಂದಿದ್ದಾರೆ. ಅತ್ತ ರುಬೀನಾ ಅಭಿಮಾನಿಗಳು ‘ನೆಚ್ಚಿನ ನಟಿ ಬೇಗ ಚೇತರಿಸಿಕೊಳ್ಳಲಿ’ ಎಂದು ಹಾರೈಸಿದ್ದಾರೆ.

  • ಬಿಗ್‍ಬಾಸ್ ಸ್ಪರ್ಧಿ ಬಳಿ ಸ್ಪರ್ಮ್ ದಾನ ಕೇಳಿದ ರಾಖಿ ಸಾವಂತ್

    ಬಿಗ್‍ಬಾಸ್ ಸ್ಪರ್ಧಿ ಬಳಿ ಸ್ಪರ್ಮ್ ದಾನ ಕೇಳಿದ ರಾಖಿ ಸಾವಂತ್

    ಮುಂಬೈ: ನನಗೆ ಅಭಿನವ್ ಶುಕ್ಲಾ ಸ್ಪರ್ಮ್ ದಾನ ಕೊಡಲಿ. ಬಿಗ್‍ಬಾಸ್ ಮನೆಯಿಂದ ಹೊರ ಹೋದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಹೇಳಿದ್ದಾರೆ.

    ಈ ಬಾರಿ ಬಿಗ್‍ಬಾಸ್ ಮನೆಗೆ ರಾಖಿ ಸಾವಂತ್ ಎಂಟ್ರಿ ನೀಡಿದಾಗಿನಿಂದ ಶೋಗೆ ಹೊಸ ಲುಕ್ ಬಂದಿದೆ. ರಾಖಿಯ ಜಗಳ, ಫನ್ನಿ ಮಾತುಗಳು, ಡ್ಯಾನ್ಸ್ ನೋಡುಗರನ್ನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ವಾಹಿನಿ ಸಹ ರಾಖಿಯ ಮಾತುಗಳನ್ನ ಕೇಂದ್ರಿಕರಿಸಿ ಸಂಚಿಕೆಯ ಪ್ರೋಮೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತದೆ. ಇದೀಗ ಸಹ ಸ್ಪರ್ಧಿ ಸೋನಾಲಿ ಫೋಗಾಟ್ ಜೊತೆ ರಾಖಿ ಮಾತಾಡಿರುವ ಸಣ್ಣ ವೀಡಿಯೋ ಕ್ಲಿಪ್ ಹೊರ ಬಂದಿದ್ದು, ವೈರಲ್ ಆಗುತ್ತಿದೆ.

    ಕೆಲ ದಿನಗಳ ಹಿಂದೆ ಬಿಗ್‍ಬಾಸ್ ಜೊತೆ ಮಾತನಾಡುತ್ತಾ, ಅಭಿನವ್ ಶುಕ್ಲಾ ಸ್ಮಾರ್ಟ್ ಮತ್ತು ಹ್ಯಾಂಡ್‍ಸಮ್. ನನಗೆ ಅವರು ಅಂದ್ರೆ ತುಂಬಾ ಇಷ್ಟ. ನಾನು ಅವರನ್ನ ಪಟಾಯಿಸಿಕೊಳ್ಳಲೇ ಎಂದು ಕೇಳಿ ರಾಖಿ ಕಣ್ಣು ಹೊಡೆದಿದ್ದರು. ಆದ್ರೆ ಶುಕ್ಲಾ ಪತ್ನಿ ರುಬಿನಾ ಇದಕ್ಕೆ ಒಪ್ಪಲ್ಲ ಅಲ್ಲವಾ ಎಂದು ಬೇಸರ ಸಹ ವ್ಯಕ್ತಪಡಿಸಿದ್ದರು.

    ಸೋನಾಲಿ ಜೊತೆ ಮಾತನಾಡುತ್ತಾ, ಈಗಾಗಲೇ ನನ್ನ ಅಂಡಾಣುಗಳನ್ನ ಫ್ರೀಝರ್ ನಲ್ಲಿರಿಸಿದ್ದೇನೆ. ಅಭಿನವ್ ಶುಕ್ಲಾ ತಮ್ಮ ಸ್ಪರ್ಮ್ ನೀಡಿದ್ರೆ ಮುದ್ದಾದ ಮಗುವಿನ ತಾಯಿ ಆಗುತ್ತೇನೆ. ಇಲ್ಲಿಂದ ಹೊರ ಹೋದ ನಂತರ ಶುಕ್ಲಾ, ಪತ್ನಿ ರುಬಿನಾ ಹಾಗೂ ಅವರ ಕುಟುಂಬಸ್ಥರ ಜೊತೆ ಮಾತನಾಡುತ್ತೇನೆ. ಅಭಿನವ್ ನನ್ನನ್ನು ಡೇಟ್ ಗೆ ಕರೆದುಕೊಂಡು ಹೋಗಿ ಒಂದು ಕಾಫಿ ಕುಡಿಸಲಿ, ಸಿನಿಮಾಗೆ ಕರೆದುಕೊಂಡು ಹೋಗಲಿ ಎಂದು ತಮ್ಮ ಆಸೆಗಳನ್ನ ರಾಖಿ ಹೊರ ಹಾಕಿದ್ದಾರೆ.