Tag: abhinandan vardhaman

  • ಸೇನಾ ಮುಖ್ಯಸ್ಥರ ಕಾಲು ನಡುಗುತ್ತಿತ್ತು- ಅಭಿನಂದನ್ ಬಿಡುಗಡೆಯ ಕಾರಣ ಬಿಚ್ಚಿಟ್ಟ ಪಾಕ್ ಸಂಸದ

    ಸೇನಾ ಮುಖ್ಯಸ್ಥರ ಕಾಲು ನಡುಗುತ್ತಿತ್ತು- ಅಭಿನಂದನ್ ಬಿಡುಗಡೆಯ ಕಾರಣ ಬಿಚ್ಚಿಟ್ಟ ಪಾಕ್ ಸಂಸದ

    – ಕೂಡಲೇ ಬಿಡುಗಡೆ ಮಾಡಿ ಎಂದಿದ್ದ ಪಾಕ್ ವಿದೇಶಾಂಗ ಸಚಿವ

    ಇಸ್ಲಾಮಬಾದ್: ಭಾರತದ ಪಾಕಿಸ್ತಾನ ಮೇಲೆ ದಾಳಿ ಮಾಡುವ ಭಯದಿಂದ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಭಾರತ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡಿತ್ತು ಎಂದು ಪಾಕ್ ಸಂಸದ ಅಯಾಜ್ ಸಾದಿಕ್ ಹೇಳಿದ್ದಾರೆ.

    ಬುಧವಾರ ಸಂಸತ್ತಿನಲ್ಲಿ ಮಾತನಾಡಿರುವ ಪಾಕಿಸ್ತಾನ ಮುಸ್ಲಿಂ ಲೀಗ್ ಎನ್ ಪಕ್ಷದ ಮುಖ್ಯಸ್ಥ, ಸಂಸದ ಅಯಾಜ್ ಸಾದಿಕ್, ಪಾಕಿಸ್ತಾನ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದರೆ ಆ ರಾತ್ರಿ 9 ಗಂಟೆ ವೇಳೆಗೆ ಭಾರತ ಪಾಕಿಸ್ತಾನ ಮೇಲೆ ದಾಳಿ ಮಾಡುತ್ತದೆ ಎಂದು ವಿದೇಶಾಂಗ ಸಚಿವ ಖುರೇಷಿ ಒಂದು ಪ್ರಮುಖ ಬೇಡಿಕೊಂಡಿದ್ದರು ಎಂದು ಸಂಸತ್ತಿನಲ್ಲಿ ಮಾತನಾಡಿರುವ ಬಗ್ಗೆ ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

    ಪ್ರಮುಖ ಸಭೆಯಲ್ಲಿದ್ದ ಸೇನಾ ಮುಖ್ಯಸ್ಥ ಜನಲರ್ ಬಾಜ್ವಾ, ವಿರೋಧಿ ಪಕ್ಷ ನಾಯಕರು, ಸಂಸತ್ ಸದಸ್ಯರು ಸೇರಿದಂತೆ ಎಲ್ಲರೂ ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ಹೇಳಿದ್ದರು. ಸಭೆಯಲ್ಲಿ ಭಾಗಿಯಾಗಲು ಇಮ್ರಾನ್ ಖಾನ್ ನಿರಾಕರಿಸಿದ್ದರು. ಈ ವೇಳೆ ಸೇನಾ ಮುಖ್ಯಸ್ಥ ಜನಲರ್ ಬಾಜ್ವಾ ಕೋಣೆಗೆ ಬಂದರು. ಅವರ ಕಾಲುಗಳು ನಡುಗುತ್ತಿದ್ದವು, ಅವರು ಬೆವರುತ್ತಿದ್ದರು. ವಿದೇಶಾಂಗ ಸಚಿವರು ದೇವರ ಸಲುವಾಗಿ ಅವರನ್ನು ಬಿಡಲಿ, ಭಾರತ ರಾತ್ರಿ 9 ಗಂಟೆಗೆ ದಾಳಿ ಮಾಡಲಿದೆ ಎಂದಿದ್ದರು ಎಂದು ಸಾದಿಕ್ ಅಂದಿನ ಘಟನೆಯ ಬಗ್ಗೆ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಮೊದಲು ಅಭಿನಂದನ್ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಸರ್ಕಾರದ ಬೆಂಬಲಕ್ಕೆ ನಿಲ್ಲುತ್ತೇವೆ ಎಂದಿದ್ದ ಪ್ರತಿಪಕ್ಷಗಳು ಮತ್ತೆ ಅವರ ಬೆಂಬಲಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

    2019ರ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕ್ ವಾಯುಸೇನೆಯ ನಡುವಿನ ನಡೆದ ಹೋರಾಟದ ಸಂದರ್ಭದಲ್ಲಿ ಭಾರತದ ವಾಯುಪ್ರದೇಶವನ್ನು ಅತಿಕ್ರಮಣ ಮಾಡಿದ್ದ ಪಾಕಿಸ್ತಾನದ ಎಫ್-19 ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿತ್ತು. ಈ ವೇಳೆ ವಿಂಗ್ ಕಂಮಾಡರ್ ಆಗಿದ್ದ ವರ್ಧಮಾನ್ ಅವರು ಪಾಕ್ ನೆಲದಲ್ಲಿ ಇಳಿದಿದ್ದರು. ಮಾರ್ಚ್ 1 ರಂದು ಅಭಿನಂದನ್ ಅವರನ್ನು ಪಾಕ್ ಸರ್ಕಾರ ಭಾರತಕ್ಕೆ ಮರಳಿ ಕಳುಹಿಸಿತ್ತು.

  • ಕೇಕ್‍ನಲ್ಲಿ ಅರಳಿದ ವಿಂಗ್ ಕಮಾಂಡರ್ ಅಭಿನಂದನ್

    ಕೇಕ್‍ನಲ್ಲಿ ಅರಳಿದ ವಿಂಗ್ ಕಮಾಂಡರ್ ಅಭಿನಂದನ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಕ್ರಿಸ್ಮಸ್ ಸೆಲೆಬ್ರೆಷನ್ ಶುರುವಾಗಿದೆ. ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್‍ನಲ್ಲಿ ಕೇಕ್‍ಗಳ ಲೋಕ ಧರೆಗಿಳಿದಿದೆ. ವಿಶೇಷ ಎಂದರೆ ಕೇಕ್‍ನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪ್ರತಿರೂಪದ ಮೂಡಿದೆ.

    ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್‍ನಲ್ಲಿ 45ನೇ ವರ್ಷದ ಕೇಕ್ ಶೋ ಆಯೋಜಿಸಿದ್ದು, ತನ್ನ ವಿಶಿಷ್ಟತೆಯ ಮೂಲವೇ ಗಮನ ಸೆಳೆಯುತ್ತಿದೆ. ಜೊತೆಗೆ ರಾಷ್ಟ್ರಭಕ್ತಿಯನ್ನು ಮೆರೆಯುತ್ತಿದೆ.

    ಈ ಶೋನಲ್ಲಿ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಮಾಡಿಕೊಂಡ ರಫೇಲ್ ಯುದ್ಧ ವಿಮಾನ, ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಪ್ರತಿರೂಪದ ಮೂಡಿದ್ದು, ಎಲ್ಲರ ಗಮನ ತನತ್ತ ಸೆಳೆಯುತ್ತಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಧರೆಗಿಳಿದ ಕೇಕ್‍ಗಳ ಲೋಕ

    ವಿಂಗ್ ಕಮಾಂಡರ್ ಅಭಿನಂದನ್ ಪ್ರತಿರೂಪವನ್ನು 3.5 ಅಡಿ ಎತ್ತರ, 2 ಫೀಟ್ ಅಗಲ ಹಾಗೂ 2 ಫೀಟ್ ಉದ್ದದಲ್ಲಿ 225 ಕೆಜಿ ಕೇಕ್‍ನಲ್ಲಿ ತಯಾರಿಸಲಾಗಿದೆ. ಹಾಗೆಯೇ ರಫೇಲ್ ಯುದ್ಧ ವಿಮಾನ 4 ಅಡಿ ಉದ್ದ, 3 ಅಡಿ ಅಗಲ, 1.5 ಫೀಟ್ ಎತ್ತರ ಹಾಗೂ 125 ಕೆ.ಜಿ ಕೇಕ್ ನಲ್ಲಿ ತಯಾರಾಗಿದೆ.

    ಜನರು ರಫೇಲ್ ಯುದ್ಧ ವಿಮಾನ ಹಾಗೂ ವಿಂಗ್ ಕಮಾಂಡರ್ ಅಭಿನಂದನ್ ಪ್ರತಿರೂಪದ ಕೇಕ್ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

  • ಮಿಗ್ 21 ಯುದ್ಧ ವಿಮಾನದಲ್ಲಿ ಮಿಂಚಿದ ಅಭಿನಂದನ್

    ಮಿಗ್ 21 ಯುದ್ಧ ವಿಮಾನದಲ್ಲಿ ಮಿಂಚಿದ ಅಭಿನಂದನ್

    ಲಕ್ನೋ: ಇಂದು ಭಾತರತೀಯ ವಾಯು ಪಡೆ(ಐಎಎಫ್) 87ನೇ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಾಜಿಯಾಬಾದ್‍ನ ಹಿಂಡನ್ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಕಲರವ ಜೋರಾಗಿದ್ದು, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಮಿಗ್-21 ಬೈಸನ್ ಯುದ್ಧ ವಿಮಾನ ಹಾರಾಟ ನಡೆಸಿ ಎಲ್ಲರ ಗಮನ ಸೆಳೆದರು.

    87ನೇ ಐಎಎಫ್ ದಿನಾಚರಣೆ ಅಂಗವಾಗಿ ಹಿಂಡನ್ ಏರ್‌ಬೇಸ್‌ನಲ್ಲಿ ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್ ಗಳ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮದಲ್ಲಿ ವಾಯುಸೇನೆ ಮುಖ್ಯಸ್ಥ ಆರ್. ಕೆ ಎಸ್ ಬದೌರಿಯಾ, ಭೂಸೇನೆ ಮುಖ್ಯಸ್ಥ ಬಿಪಿನ್ ರಾವತ್, ನೌಕಾಪಡೆ ಮುಖ್ಯಸ್ಥ ಕರಂಬಬೀರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವವನ್ನು ವೀಕ್ಷಿಸಲು ಸಾವಿರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದು, ಕಾರ್ಯಕ್ರಮದಲ್ಲಿ ಅಭಿನಂದನ್ ಅವರ ಉಪಸ್ಥತಿ ಜನರ ಉತ್ಸಾಹ ಹೆಚ್ಚಿಸಿತು. ಇದನ್ನೂ ಓದಿ:87ನೇ ವಾಯಪಡೆಯ ದಿನಾಚರಣೆಯಲ್ಲಿ ಭಾಗವಹಿಸಿದ ಕ್ಯಾಪ್ಟನ್ ಸಚಿನ್ ತೆಂಡೂಲ್ಕರ್

    ಏರ್ ಶೋಗೆ ಅಭಿನಂದನ್ ಪ್ರವೇಶಿಸುತ್ತಿದ್ದಂತೆ ಏರ್‌ಬೇಸ್‌ನಲ್ಲಿ ಸಾರ್ವಜನಿಕರು ಚಪ್ಪಾಳೆಗಳ ಸುರಿಮಳೆಗೈದರು. ಈ ಮಧ್ಯೆ ಅಭಿನಂದನ್ ಅವರು ಮಿಗ್-21 ಯುದ್ಧ ವಿಮಾನ ಹಾರಾಟ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು. ಅಲ್ಲದೆ ಇದೇ ಮೊದಲ ಬಾರಿಗೆ ವಿಶ್ವದ ಅತ್ಯಂತ ಅಪಾಯಕಾರಿ ಯುದ್ಧ ಹೆಲಿಕಾಪ್ಟರ್ ಅಪಾಚೆ ತನ್ನ ಶಕ್ತಿ ಪ್ರದರ್ಶನ ತೋರಿದ್ದು ವಿಶೇಷವಾಗಿತ್ತು. ಚಿನೂಕ್ ಹೆಲಿಕಾಪ್ಟರ್‌ಗಳು ಕೂಡ ಆಗಸದಲ್ಲಿ ಶಕ್ತಿ ಪ್ರದರ್ಶಿಸಿದವು. ಜೊತೆಗೆ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದ ಆರ್ಭಟವನ್ನು ಕಾರ್ಯಕ್ರಮದಲ್ಲಿ ನೆರೆದವರು ಕಣ್ತುಂಬಿಕೊಂಡರು. ಇದನ್ನೂ ಓದಿ:ಐಎಎಫ್‍ನ ಮೊದಲ ‘ರಫೇಲ್’ಗೆ ರಾಜನಾಥ್ ಸಿಂಗ್ ಆಯುಧ ಪೂಜೆ

    ಫೆ. 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರಿದ್ದ ಬಸ್ಸಿನ ಮೇಲೆ ಜೈಷ್ ಉಗ್ರನೊಬ್ಬ ಆತ್ಮಾಹುತಿ ದಾಳಿ ನಡೆಸಿ 40ಕ್ಕೂ ಹೆಚ್ಚು ಮಂದಿ ಯೋಧರನ್ನು ಬಲಿಪಡೆದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ವಾಯು ಪಡೆ ಪಾಕಿಸ್ತಾನದ ಬಾಲಕೋಟ್‍ನಲ್ಲಿ ಜೈಷ್ ಉಗ್ರರ ನೆಲೆಗಳ ಮೇಲೆ ಏರ್ ಸ್ಟ್ರೈಕ್ ನಡೆಸಿ ಉಗ್ರರನ್ನು ಸದೆಬಡೆದಿತ್ತು.

    ಫೆ. 27ರಂದು ಪಾಕಿಸ್ತಾನ ಎಫ್-16 ಯುದ್ಧ ವಿಮಾನವನ್ನು ತನ್ನ ಮಿಗ್-21 ಯುದ್ಧ ವಿಮಾನದ ಮೂಲಕ ಹೊಡೆದುರುಳಿಸಿದ ನಂತರ ಅಭಿನಂದನ್ ಅವರು ನ್ಯಾಷನಲ್ ಹೀರೋ ಆಗಿ ಹೊರಹೊಮ್ಮಿದ್ದರು. ಬಾಲಾಕೋಟ್ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ತನ್ನ ಎಫ್-16 ಯುದ್ಧ ವಿಮಾನದ ಮೂಲಕ ಭಾರತವನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿದ ಸಂದರ್ಭದಲ್ಲಿ ಅಭಿನಂದನ್ ಮಿಗ್-21 ವಿಮಾನದ ಮೂಲಕ ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅಭಿನಂದನ್ ಅವರ ಮಿಗ್-21 ವಿಮಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತನಗೊಂಡಿತ್ತು. ಆಗ ಸುಮಾರು 58 ಗಂಟೆಗಳ ಕಾಲ ಅಭಿನಂದನ್ ಪಾಕಿಸ್ತಾನದ ಕಸ್ಟಡಿಯಲ್ಲೇ ಇದ್ದರು. ನಂತರ ಕೇಂದ್ರ ಸರ್ಕಾರ ಪಾಕ್ ಮೇಲೆ ಒತ್ತಡ ಹೇರಿ ಅಭಿನಂದನ್ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿತ್ತು.

  • ಬೆಂಗ್ಳೂರಿಗೆ ವಿಂಗ್ ಕಮಾಂಡರ್ ಅಭಿನಂದನ್ ಎಂಟ್ರಿ!

    ಬೆಂಗ್ಳೂರಿಗೆ ವಿಂಗ್ ಕಮಾಂಡರ್ ಅಭಿನಂದನ್ ಎಂಟ್ರಿ!

    ಬೆಂಗಳೂರು: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸದ್ಯದಲ್ಲಿಯೇ ಬೆಂಗಳೂರಿಗೆ ಎಂಟ್ರಿ ಕೊಡಲಿದ್ದಾರೆ. ಅಲ್ಲದೆ ಫೈಟರ್ ಜೆಟ್ ಕೂಡ ಏರಲಿದ್ದಾರೆ.

    ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕ್‍ನ ಎಫ್16 ಹೊಡೆದುರುಳಿಸಿದ ಭಾರತ ಮಾತೆಯ ಹೆಮ್ಮೆಯ ಪುತ್ರ. ಆದರೆ ಈ ವೇಳೆ ಗಾಯಗೊಂಡಿದ್ದ ಅಭಿನಂದನ್, ಫೈಟರ್ ಜೆಟ್ ಏರುವುದು ಅನುಮಾನ ಎನ್ನಲಾಗಿತ್ತು. ಅಲ್ಲದೆ ಮಾರ್ಚ್ ನಲ್ಲಿ ಅವರನ್ನು ರಜೆ ಮೇಲೆ ಕಳುಹಿಸಲಾಗಿತ್ತು. ಬಳಿಕ ಬೆಂಗಳೂರಿನಲ್ಲಿ ದೈಹಿಕ ಪರೀಕ್ಷೆ ನಡೆಸಿದ್ದ ವೈದ್ಯರು, ಅಭಿನಂದನ್ ಫಿಟ್ ಆಗಿದ್ದಾರೆ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇದನ್ನೂ ಓದಿ: ವಿಂಗ್‍ಕಮಾಂಡರ್ ಅಭಿನಂದನ್ ಹೆಸರು ‘ವೀರ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು

    ಈಗ ಪುನಃ ಈ ತಿಂಗಳಾಂತ್ಯದಲ್ಲಿ ಬೆಂಗಳೂರಿನ ಹೆಚ್‍ಎಎಲ್‍ನಲ್ಲಿರುವ ಇನ್‍ಸ್ಟಿಟ್ಯೂಟ್ ಆಫ್ ಏರೋಸ್ಪೇಸ್‍ಗೆ ಅಭಿನಂದನ್ ಆಗಮಿಸಲಿದ್ದಾರೆ. ಸಾಮಾನ್ಯವಾಗಿ ಫೈಟರ್ ಜೆಟ್‍ನಿಂದ ಎಜೆಕ್ಟ್ ಆದವರನ್ನು 12 ವಾರಗಳ ಕಾಲ ತಪಾಸಣೆ ನಡೆಸಿ, ನಂತರವೇ ಅಧಿಕಾರಿಗಳು ಅಂತಿಮ ನಿರ್ಧಾರ ಕೈಗೊಳ್ತಾರೆ. ಈಗಾಗಲೇ ಅಭಿನಂದನ್ ಆರೋಗ್ಯ ಫೈಟರ್ ಜೆಟ್ ಏರಲು ಫಿಟ್ ಆಗಿದೆ ಎಂದು ವೈದ್ಯರು ಹೇಳಿದ್ದು, ಬೆಂಗಳೂರಿಗೆ ಬಂದು ಪ್ರಮಾಣ ಪತ್ರ ಪಡೆಯಲಿದ್ದಾರೆ.

    ಮೇ ತಿಂಗಳ ಅಂತ್ಯದಲ್ಲಿ ಅಭಿನಂದರ್ ಫೈಟರ್ ಜೆಟ್ ಏರಲಿದ್ದು, ಮತ್ತೆ ಭಾರತ ಮಾತೆಯ ಸೇವೆಗೆ ಮರಳಲಿದ್ದಾರೆ. ಭದ್ರತೆ ದೃಷ್ಟಿಯಿಂದ ಅಭಿನಂದನ್‍ರನ್ನು ಬೇರೆ ಕಡೆ ಸೇವೆಗೆ ನಿಯೋಜಿಸಲು ವಾಯುಸೇನೆ ಪ್ಲಾನ್ ಮಾಡಿದೆ. ಅಲ್ಲದೆ ಶೌರ್ಯ ಪ್ರಶಸ್ತಿ ನೀಡುವಂತೆಯೂ ಅಧಿಕಾರಿಗಳು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

    https://www.youtube.com/watch?v=ArvRnqPs81s

  • ವೀರಪುತ್ರ ಅಭಿನಂದನ್ ಬಿಡುಗಡೆ ವಿಳಂಬವಾಗಿದ್ದೇಕೆ..?

    ವೀರಪುತ್ರ ಅಭಿನಂದನ್ ಬಿಡುಗಡೆ ವಿಳಂಬವಾಗಿದ್ದೇಕೆ..?

    ನವದೆಹಲಿ: ಭಾರತೀಯ ಹೆಮ್ಮೆಯ ಯೋಧ, ಪೈಲಟ್ ಅಭಿನಂದನ್ ವರ್ಧಮಾನ್ ಅವರ ಬಿಡುಗಡೆ ವಿಚಾರದಲ್ಲಿ ಕೊನೆಯವರೆಗೂ ಪಾಕಿಸ್ತಾನ ಆಟವಾಡಿದ್ದು, ಭಾರತೀಯ ಆಕ್ರೋಶಕ್ಕೆ ಕಾರಣವಾಗಿತ್ತು.

    ಶುಕ್ರವಾರ ಮಧ್ಯಾಹ್ನದ ವೇಳೆಗೆ ಭಾರತದ ಪೈಲಟ್ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸುತ್ತೇವೆ ಎಂದು ಹೇಳಿದ್ದ ಪಾಕಿಸ್ತಾನ ಕೊನೆ ಕ್ಷಣದವರೆಗೂ ಕಿರಿಕ್ ತೆಗೆದಿದೆ. ಭಾರತಕ್ಕೆ ಹಸ್ತಾಂತರ ಮಾಡುವುದಕ್ಕೂ ಮೊದಲು ಪಾಕ್ ನಿಂದ ಅಭಿನಂದನ್ ಕೈಯಲ್ಲಿ ವಿಡಿಯೋ ರೆಕಾರ್ಡ್ ಮಾಡಿಸಲಾಗಿತ್ತು.

    ವಿಡಿಯೋ ರೆಕಾರ್ಡ್ ಮಾಡಿಯೇ ಹಸ್ತಾಂತರ ಮಾಡುವುದೆಂದು ಪಾಕ್ ಹಟಕ್ಕೆ ಬಿದ್ದಿತ್ತು. ನಾಲ್ಕೈದು ಗಂಟೆ ಲಾಹೋರ್ ನಲ್ಲಿ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು ಕಿರಿಕ್ ತೆಗೆದಿದ್ದರು. ಹೀಗಾಗಿ ಸಂಜೆ 4 ಗಂಟೆಗೆ ಲಾಹೋರ್‍ಗೆ ಬಂದರೂ ಭಾರತ ಪ್ರವೇಶಿಸುವ ವೇಳೆ ರಾತ್ರಿ 9 ಗಂಟೆ ಆಗಿದೆ ಎಂಬುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಪಾಕಿಸ್ತಾನದ ವಾಯುದಾಳಿಯನ್ನು ಹಿಮ್ಮೆಟ್ಟುವ ವೇಳೆ ಗಡಿ ದಾಟಿ ಪಾಕ್ ಸೈನ್ಯದ ವಶದಲ್ಲಿದ್ದ ಅಭಿನಂದನ್ ಅವರನ್ನು ನೋಡಲು ನಿನ್ನೆ ಮುಂಜಾನೆಯಿಂದಲೇ ವಾಘಾ ಗಡಿಯಲ್ಲಿ ಕಾದು ಕುಳಿತಿದ್ದರು. ಭಾರತೀಯ ಅಭಿಮಾನಿಗಳ ಈ ಛಲ ರಾತ್ರಿಯಾದ್ರೂ ಕಡಿಮೆ ಆಗಲಿಲ್ಲ. ಸಂಜೆ ವೇಳೆಗೆ ಮಳೆ ಬಂದಿದ್ದರೂ ಕೂಡ ಲೆಕ್ಕಿಸದ ಭಾರತೀಯರು ಅಲ್ಲೇ ನಿಂತಿದ್ದರು. ಇವೆಲ್ಲದರ ನಡುವೆಯೇ ರಾತ್ರಿ 9.15 ಗಂಟೆ ವೇಳೆಗೆ ಅಭಿನಂದನ್ ಭಾರತದ ನೆಲವನ್ನು ಪ್ರವೇಶಿಸಿದ್ದರು.

    ಅಭಿನಂದನ್ ಅವರನ್ನು ಸ್ವಾಗತ ಮಾಡಲು ವಾಯುಸೇನಾ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಥಾಮಸ್ ಕುರಿಯನ್ ಹಾಗೂ ಭಾರತ ಸರ್ಕಾರದ ಅಧಿಕಾರಿಗಳು ವಾಘಾ ಗಡಿಗೆ ಆಗಮಿಸಿದ್ದರು. ಅಲ್ಲದೇ ಅಭಿನಂದನ್ ಪೋಷಕರು ಕೂಡ ಸ್ಥಳದಲ್ಲಿ ಹಾಜರಿದ್ದರು. ವಾಘಾ ಗಡಿಯಿಂದ ನೇರ ಅವರನ್ನು ಅಮೃತಸರಕ್ಕೆ ಕರೆದ್ಯೊಯಲಾಯಿತು. ಆ ಬಳಿಕ ಅಲ್ಲಿಂದ ಸೇನಾಧಿಕಾರಿಗಳೊಂದಿಗೆ ದೆಹಲಿಗೆ ವಿಮಾನದಲ್ಲಿ ಕರೆತಂದಿದ್ದಾರೆ. ದೆಹಲಿಯಲ್ಲಿಂದು ಅವರ ಆರೋಗ್ಯ ತಪಾಸಣೆ ಹಾಗೂ ಸೇನಾ ವಿಚಾರಣೆ ನಡೆಯಲಿದೆ.

    https://www.youtube.com/watch?v=ArvRnqPs81s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಪಟ, ನೌಟಂಕಿ ಆಟ ಇದೇ ಮೊದ್ಲಲ್ಲ- ಈ ಹಿಂದೆಯೂ ಭಾರತೀಯ ಯೋಧರನ್ನು ಕಾಡಿತ್ತು ಪಾಕ್..!

    ಕಪಟ, ನೌಟಂಕಿ ಆಟ ಇದೇ ಮೊದ್ಲಲ್ಲ- ಈ ಹಿಂದೆಯೂ ಭಾರತೀಯ ಯೋಧರನ್ನು ಕಾಡಿತ್ತು ಪಾಕ್..!

    ಬೆಂಗಳೂರು: ಭಾರತದ ಹೆಮ್ಮೆಯ ಪುತ್ರ, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶುಕ್ರವಾರ ಮಧ್ಯಾಹ್ನದ ವೇಳೆ ಬಿಡುಗಡೆ ಮಾಡುವುದಾಗಿ ಹೇಳಿದ್ದ ಪಾಕಿಸ್ತಾನ, ರಾತ್ರಿ 9.15ರ ಸುಮಾರಿಗೆ ಹಸ್ತಾಂತರಿಸಿತ್ತು. ಪಾಕಿಸ್ತಾನದ ಈ ನೌಟಂಕಿ ಆಟ ಇವತ್ತಿನದ್ದೇನಲ್ಲ. ಈ ಹಿಂದೆ ಸೆರೆ ಹಿಡಿದಿದ್ದ ಭಾರತೀಯ ಹಲವು ಯೋಧರ ವಿಚಾರದಲ್ಲೂ ಇದೇ ರೀತಿ ನಾಟಕವಾಡಿದೆ.

    ಅಭಿನಂದನ್ ವರ್ತಮಾನ್ ಅವರ ಬಿಡುಗಡೆ ಪಾಕಿಸ್ತಾನ ಅನುಸರಿಸಿದ ವಿಳಂಬ ಧೋರಣೆ ಹಿಂದಿನ ಹಲವು ಘಟನೆಗಳನ್ನು ನೆನಪಿಗೆ ತಂದಿವೆ. ಅದರಲ್ಲಿ ಮೊದಲಿಗೆ 1955ರಲ್ಲಿ ಕೆಸಿ ಕಾರ್ಯಪ್ಪ ಅವರು ಸ್ಕ್ವಾಡ್ರನ್ ಲೀಡರ್ ಆಗಿದ್ದ ವೇಳೆ ಗಡಿಯಲ್ಲಿ ವಿಮಾನ ಹಾರಿಸುತ್ತಿದ್ದರು. ಈ ವೇಳೆ, ಪಾಕಿಸ್ತಾನಿಗಳು ಗುಂಡಿಕ್ಕಿ ಕೆಳಗೆಬಿದ್ದ ಕಾರ್ಯಪ್ಪ ಅವರನ್ನು ಸೆರೆ ಹಿಡಿದಿದ್ದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ರನಾಗಿದ್ದ ಅವರು ಐದು ತಿಂಗಳು ಪಾಕ್ ಜೈಲಿನಲ್ಲಿದ್ದರು.


    ಫ್ಲೈಟ್ ಲೆಫ್ಟಿನೆಂಟ್ ದಿಲೀಪ್ ಫಾರೂಕ್ ಪ್ಲೇನ್ ಅನ್ನು ಸಹ ಇದೇ ರೀತಿಯಾಗಿ 1971ರ ಇಂಡೋ-ಪಾಕ್ ಯುದ್ಧದ ವೇಳೆ ಪಾಕ್ ಹೊಡೆದಿತ್ತು. ನಂತರ ಜೈಲಿನಲ್ಲಿ ಬಂಧಿಸಿಟ್ಟಿತ್ತು. ಫಾರೂಕ್ ಜೊತೆ ಮತ್ತಿಬ್ಬರು ಭಾರತೀಯ ಯೋಧರು, ಪಾಕ್ ಜೈಲಿನಿಂದ ಎಸ್ಕೇಪ್ ಆಗಲು ಯತ್ನಿಸಿದ್ದರು. ಅವರು ಸಫಲರಾದರೂ ಮತ್ತೊಮ್ಮೆ ಸೆರೆಹಿಡಿಯಲಾಯ್ತು. ಅಂತಿಮವಾಗಿ ಡಿಸೆಂಬರ್ 1972ರಲ್ಲಿ ರಿಲೀಸ್ ಆದರು.

    ಗ್ರೂಪ್ ಕ್ಯಾಪ್ಟನ್ ನಚಿಕೇತ್ ಅವರನ್ನು ಮೇ 1990ರ ಕಾರ್ಗಿಲ್ ಯುದ್ಧದ ವೇಳೆ ಪಾಕ್ ಸೇನೆ ಸೆರೆ ಹಿಡಿದಿತ್ತು. ತಾಂತ್ರಿಕ ದೋಷದಿಂದಾಗಿ ಮಿಗ್ ವಿಮಾನದಿಂದ ಇಜೆಕ್ಟ್ ಆಗಬೇಕಾಗಿತ್ತು. ಇವರು 8 ದಿನ ಪಾಕಿಸ್ತಾನದ ವಶದಲ್ಲಿದ್ದರು. ಈ ವೇಳೆ, ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಲಾಗಿತ್ತು. ಅಮೆರಿಕ ಮತ್ತು ವಿಶ್ವರಾಷ್ಟ್ರಗಳ ಒತ್ತಡದಿಂದಾಗಿ ನಚಿಕೇತರನ್ನು ಪಾಕಿಸ್ತಾನ ಬಿಡುಗಡೆ ಮಾಡಿತ್ತು.

    ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ ಅವರನ್ನು ಸಹ ನಚಿಕೇತ ಮಾದರಿಯಲ್ಲೇ ಪಾಕಿಸ್ತಾನ ಗುಂಡಿಕ್ಕಿತ್ತು. ಗಡಿಯಲ್ಲಿ ಅಹುಜಾ ಪ್ಲೇನ್ ಹೊಡೆದುರುಳಿಸಿ ಒತ್ತೆಯಿಟ್ಟುಕೊಂಡಿತ್ತು. ಕೊನೆಗೆ, ತಲೆ, ಎದೆ ಭಾಗಕ್ಕೆ ಗುಂಡಿಟ್ಟು ಕೊಂದು ವಿಕೃತಿ ಮೆರೆದಿತ್ತು.

    1999ರ ಮೇ 14ರಲ್ಲಿ ಕ್ಯಾಪ್ಟನ್ ಕಾಲಿಯಾ ಸೇರಿ 6 ಮಂದಿ ಯೋಧರನ್ನು ಪಾಕ್ ಸೆರೆ ಹಿಡಿದಿತ್ತು. ನಮ್ಮ ಯೋಧರನ್ನು ಅಂಗಹೀನಗೊಳಿಸಿ ನಂತರ ಭಾರತಕ್ಕೆ ಹಸ್ತಾಂತರಿಸಿತು. ಇದು ಜಿನೀವಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿತ್ತು. ಅಂದಿನ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡೀಸ್ ಅವರು ಜೀನೇವಾ ಒಪ್ಪಂದವನ್ನು ಪಾಕಿಸ್ತಾನ ಸ್ಪಷ್ಟವಾಗಿ ಉಲ್ಲಂಘಿಸಿದೆ ಅಂದಿದ್ದರು. ಆದರೆ, ಕಾಲಿಯಾ ಮತ್ತಿತರೆ ಯೋಧರನ್ನು ನಾವು ಸೆರೆಹಿಡಿದಿರಲಿಲ್ಲ ಅಂತ ಅಂದಿನ ಪಾಕ್ ಸೇನಾಮುಖ್ಯಸ್ಥ ಮುಷರಫ್ ಬೊಗಳೆ ಬಿಟ್ಟಿದ್ದರು. ಕಾಲಿಯಾ ಮತ್ತು ಐವರು ಯೋಧರ ದೇಹಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv