Tag: Abhinandan Singh

  • ಖ್ಯಾತ ನಟಿ ವೈಶಾಲಿ ಆತ್ಮಹತ್ಯೆಗೆ ಕಾರಣನಾದವ ಎಸ್ಕೇಪ್: ಬಲೆ ಬೀಸಿದ ಪೊಲೀಸ್

    ಖ್ಯಾತ ನಟಿ ವೈಶಾಲಿ ಆತ್ಮಹತ್ಯೆಗೆ ಕಾರಣನಾದವ ಎಸ್ಕೇಪ್: ಬಲೆ ಬೀಸಿದ ಪೊಲೀಸ್

    ಹಿಂದಿ ಕಿರುತೆರೆಯ ಖ್ಯಾತ ನಟಿ ವೈಶಾಲಿ ಠಕ್ಕರ್ (Vaishali Thakkar) ಮೂರು ದಿನಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದರು. ತನ್ನ ಮೋಹಕ ನೋಟದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಈ ನಟಿ, ಯಶಸ್ಸಿನ ತುತ್ತತುದಿಯಲ್ಲಿ ಇರುವಾಗ ಆತ್ಮಹತ್ಯೆ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ಮೂಡಿಸಿದ್ದಾರೆ. ತಾವು ವಾಸವಿದ್ದ ಇಂಡೋರ್ ಅಪಾರ್ಟ್ ಮೆಂಟ್ ವೊಂದರಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

    ವೈಶಾಲಿ ಸೂಸೈಡ್ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಅಪಾರ್ಟ್ಮೆಂಟ್ ಗೆ ಧಾವಿಸಿದ್ದ ತೇಜಾಜಿ ನಗರ ಪೊಲೀಸ್ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಂಡಿದ್ದರು. ಆ ನಟಿಯ ಬಳಿ ಇದ್ದ ಡೆತ್ ನೋಟ್ ವಶಪಡಿಸಿಕೊಂಡಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ ಪ್ರೇಮ ವೈಫಲ್ಯವೇ ಸಾವಿಗೆ ಕಾರಣ ಎಂದು ಹೇಳಲಾಗಿತ್ತು. ಅದೀಗ ಕನ್ಫರ್ಮ್ ಕೂಡ ಆಗಿದೆ. ಈ ಹುಡುಗಿಗೆ ಟಾರ್ಚರ್ ಕೊಟ್ಟ ವ್ಯಕ್ತಿ ಯಾರು ಎನ್ನುವುದನ್ನು ಆಕೆಯೇ ಡತ್ ನೋಟ್ ನಲ್ಲಿ ಉಲ್ಲೇಖಸಿದ್ದಾಳೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ವೈಶಾಲಿ ಆತ್ಮಹತ್ಯೆಗೆ ಖಿನ್ನತೆ ಕಾರಣ ಎಂದು ಹೇಳಲಾಗಿತ್ತು. ಕಳೆದ ಕೆಲವು ತಿಂಗಳ ಹಿಂದೆ ತಮಗೆ ನಿಶ್ಚಾತಾರ್ಥ ಆಗಿರುವ ವಿಚಾರವನ್ನು ಇನ್ಸ್ಟಾದಲ್ಲಿ ಅವರು ಬಹಿರಂಗ ಪಡಿಸಿದ್ದರು. ಕೀನ್ಯಾದ ಡೆಂಟಲ್ ಸರ್ಜನ್ ಅಭಿನಂದನ್ ಸಿಂಗ್ (Abhinandan Singh) ಜೊತೆ ತಾವು ಮದುವೆ ಆಗುತ್ತಿರುವುದಾಗಿಯೂ ತಿಳಿಸಿದ್ದರು. ಇದಾದ ಕೆಲವು ದಿನಗಳ ನಂತರ ಫೋಟೋ ಡಿಲಿಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಆ ನಿಶ್ಚಿತಾರ್ಥ ಕೂಡ ಮುರಿದು ಬಿದ್ದಿದೆ ಎಂದು ಹೇಳಲಾಗಿದೆ. ಸಾವಿಗೆ ಅದೇ ಕಾರಣ ಅಂತ ಹೇಳಲಾಗಿತ್ತು.

    ಆದರೆ, ವೈಶಾಲಿಗೆ ತುಂಬಾ ದಿನಗಳಿಂದಲೂ ನೆರೆ ಮನೆಯ ವ್ಯಕ್ತಿಯೊಬ್ಬ ಬಹಳ ಕಿರುಕುಳ (Harassment) ನೀಡುತ್ತಿದ್ದನಂತೆ. ಆತ ದಿನವೂ ಕೊಡುತ್ತಿದ್ದ ಕಿರುಕುಳವೇ ತನ್ನನ್ನು ಸಾಯುವಂತೆ ಪ್ರೇರೇಪಿಸಿತು ಎಂದು ಅವರು ಡೆತ್ ನೋಟ್ ನಲ್ಲಿ ಬರೆದಿದ್ದಾರಂತೆ. ತನ್ನ ಸಾವಿಗೆ ಕಾರಣ, ಅದೇ ನೆರೆಮನೆಯ ವ್ಯಕ್ತಿ ರಾಹುಲ್ ನವ್ಲಾನಿ (Rahul Navlani) ಎಂದು ಉಲ್ಲೇಖಿಸಿದ್ದಾರೆ. ಡೆತ್ ನೋಟ್ ಸಿಗುತ್ತಿದ್ದಂತೆ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಮನೆಗೆ ಬೀಗ ಹಾಕಿಕೊಂಡು ರಾಹುಲ್ ಎಸ್ಕೇಪ್ ಆಗಿದ್ದಾನೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]