Tag: Abhaya Rama

  • ಮಂತ್ರಾಲಯದಲ್ಲಿ ಅದ್ಧೂರಿ ರಾಮೋತ್ಸವ – ಅಭಯರಾಮನ ಅನಾವರಣ

    ಮಂತ್ರಾಲಯದಲ್ಲಿ ಅದ್ಧೂರಿ ರಾಮೋತ್ಸವ – ಅಭಯರಾಮನ ಅನಾವರಣ

    -ಶೋಭಾಯಾತ್ರೆಯಲ್ಲಿ ಮುಸ್ಲಿಂ ಭಕ್ತರು ಭಾಗಿ

    ರಾಯಚೂರು: ಅಯೋಧ್ಯೆಯಲ್ಲಿ (Ayodhya) ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಶುಭಘಳಿಗೆ ಹಿನ್ನೆಲೆ ರಾಯರ ಸನ್ನಿಧಿ ಮಂತ್ರಾಲಯದಲ್ಲೂ (Mantralaya) ಮರ್ಯಾದಾ ಪುರುಷೋತ್ತಮನ ಭವ್ಯಮೂರ್ತಿ ಅನಾವರಣಗೊಂಡಿದೆ.

    36 ಅಡಿ ಎತ್ತರದ ಏಕಶಿಲಾ ಅಭಯರಾಮನ ಮೂರ್ತಿಯನ್ನು ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಪ್ರತಿಷ್ಠಾಪನೆ ಮಾಡಿದ್ದಾರೆ. ಶ್ರೀರಾಮನ ಮೂಲಾರ್ಚಕರಾದ ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ ಭವ್ಯ ರಾಮಮೂರ್ತಿ ಅನಾವರಣಗೊಂಡಿದೆ. ಮಂತ್ರಾಲಯದಲ್ಲಿ ರಾಯರಿಗೂ ಮೊದಲು ನಿತ್ಯ ಶ್ರೀರಾಮನಿಗೆ ಪೂಜೆ ನಡೆಯುತ್ತದೆ. ಈ ಹಿನ್ನೆಲೆ ಮಂತ್ರಾಲಯ ಮಠ ಅಭಯ ಶ್ರೀರಾಮನ ಮೂರ್ತಿ ಸ್ಥಾಪನೆಗೆ ಮುಂದಾಗಿದೆ. ಇದನ್ನೂ ಓದಿ: ಕೊನೆಗೂ ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಉದಯವಾಗಿದೆ: ನರೇಂದ್ರ ಮೋದಿ

    ದೇಶದ ಮೂಲೆ ಮೂಲೆಯಿಂದ ಬಂದ ಸಹಸ್ರಾರು ಭಕ್ತರು ಇಂದು ರಾಯರ ಮಠದಲ್ಲಿ ರಾಮನ ದರ್ಶನ ಪಡೆಯುತ್ತಿದ್ದಾರೆ. ಮಂತ್ರಾಲಯ ರಾಯರ ಮಠ ಹಾಗೂ ಅಭಯರಾಮ (Abhayarama) ಸೇವಾ ಸಮಿತಿಯಿಂದ ಏಕಶಿಲಾ ರಾಮನ ಮೂರ್ತಿ ತಲೆಎತ್ತಿದ್ದು ಮುಂದಿನ ಒಂದು ವರ್ಷದಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ. ಗ್ರೇ ಗ್ರಾನೈಟ್ ಏಕಶಿಲೆಯಲ್ಲಿ ಕೆತ್ತನೆಯಾದ 36 ಅಡಿ ಎತ್ತರದ ಅಭಯರಾಮನ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಇದನ್ನೂ ಓದಿ: ಶಿವಮೊಗ್ಗ: ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠೆ ಸಂಭ್ರಮದ ವೇಳೆ ಅಲ್ಲಾಹು ಅಕ್ಬರ್ ಎಂದು ಕೂಗಿದ ಮುಸ್ಲಿಂ ಮಹಿಳೆ

    ಅಯೋಧ್ಯ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಮಂತ್ರಾಲಯದ ರಾಜಬೀದಿಗಳಲ್ಲಿ ಶ್ರೀರಾಮನ ಶೋಭಾ ಯಾತ್ರೆ ಅದ್ದೂರಿಯಾಗಿ ನಡೆಯಿತು. ಬೃಹತ್ ಶೋಭಾ ಯಾತ್ರೆ ವೇಳೆ ಮಂತ್ರಾಲಯದ ರಾಯರ ಮಠ ಸಂಪೂರ್ಣವಾಗಿ ಕೇಸರಿ ಮಯವಾಗಿತ್ತು. ಕೇಸರಿ ಧ್ವಜಗಳನ್ನ ಹಿಡಿದು ಬೀದಿಗಳಲ್ಲಿ ರಾಯರ ಭಕ್ತರು ಹೆಜ್ಜೆಹಾಕಿದರು. ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಶೋಭಾ ಯಾತ್ರೆ ನಡೆಯಿತು. ರಾಯರ ಮಠದಲ್ಲಿ ಶೋಭಾಯಾತ್ರೆ ಚಾಲನೆ ವೇಳೆ ಮುಸ್ಲಿಂ ಭಕ್ತರು ಸಹ ಭಾಗವಹಿಸಿದ್ದಾರೆ. ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಿದರು. ಇದನ್ನೂ ಓದಿ: ಮಂದಸ್ಮಿತ, ಮುಗ್ಧಮುಖದ ಬಾಲರಾಮನ ಕಣ್ತುಂಬಿಕೊಂಡು ಪುನೀತರಾದ ರಾಮಭಕ್ತರು

  • ಮಂತ್ರಾಲಯದಲ್ಲಿ ಕಮಲ ಪೀಠದ ಮೇಲೆ 36 ಅಡಿ ಅಭಯರಾಮನ ಪ್ರತಿಷ್ಠಾಪನೆ

    ಮಂತ್ರಾಲಯದಲ್ಲಿ ಕಮಲ ಪೀಠದ ಮೇಲೆ 36 ಅಡಿ ಅಭಯರಾಮನ ಪ್ರತಿಷ್ಠಾಪನೆ

    ರಾಯಚೂರು: ಜನವರಿ 22 ರಂದು ಗುರುರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯದಲ್ಲಿ 36 ಅಡಿ ಎತ್ತರದ ಏಕಶಿಲಾ ಅಭಯರಾಮನ (Abhaya Rama) ಮೂರ್ತಿ ಅನಾವರಣ ಹಿನ್ನೆಲೆ ಇಂದು ರಾಮಮೂರ್ತಿಯನ್ನು ಕಮಲ ಪೀಠದ ಮೇಲೆ ಅನುಷ್ಠಾನ ಮಾಡಲಾಯಿತು.

     

    ಮಂತ್ರಾಲಯ (Mantralaya) ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಕಮಲಪೀಠದಲ್ಲಿ ನವಧಾನ್ಯಗಳನ್ನು ಇರಿಸಿ ಪೂಜೆ ಮಾಡಿ ಅಭಯರಾಮ ಮೂರ್ತಿಯ ಪೂರ್ವಪ್ರತಿಷ್ಠಾಪನೆ ನೆರವೇರಿಸಿದರು. 9 ಅಡಿ ಕಮಲ ಪೀಠದ ಮೇಲೆ 36 ಅಡಿ ಎತ್ತರದ ಗ್ರೇ ಗ್ರಾನೈಟ್ ಶಿಲೆಯ ಅಭಯರಾಮ ರಾಮಮೂರ್ತಿಯನ್ನು ಇರಿಸಲಾಗಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ವಿರೋಧ ಪಕ್ಷ ಬೇಕು, ದೇಶದ್ರೋಹಿಗಳ ವಿರೋಧ ಪಕ್ಷವಲ್ಲ: ಅನಂತ್ ಕುಮಾರ್ ಹೆಗಡೆ

    ಜನವರಿ 22ರಂದು ಅಯೋಧ್ಯ (Ayodhya) ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆ ದಿನವೇ ಶ್ರೀಗಳು ವಿಶೇಷ ಪೂಜೆಯೊಂದಿಗೆ ಅಭಯರಾಮನ ಅನಾವರಣ ಮಾಡಲಿದ್ದಾರೆ. ಅಭಯರಾಮ ಸೇವಾ ಸಮಿತಿ ಅಡಿ ರಾಯರ ಭಕ್ತರು ಅಭಯರಾಮನ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಮನೆ ಮನೆಗೆ ಶ್ರೀರಾಮ ಮಂದಿರ ಮಂತ್ರಾಕ್ಷತೆ ಹಂಚುವ ವೇಳೆ ಹಲ್ಲೆ; ಆರೋಪ